Tag: ಅಸ್ಸಾಂ ಸಿಎಂ

  • ಬಿಜೆಪಿ ಅಧಿಕಾರಕ್ಕೆ ಬಂದ ಅರ್ಧ ಗಂಟೆಯಲ್ಲಿ ಹೈದರಾಬಾದನ್ನು ಭಾಗ್ಯನಗರ್ ಅಂತ ಮರುನಾಮಕರಣ: ಅಸ್ಸಾಂ ಸಿಎಂ

    ಬಿಜೆಪಿ ಅಧಿಕಾರಕ್ಕೆ ಬಂದ ಅರ್ಧ ಗಂಟೆಯಲ್ಲಿ ಹೈದರಾಬಾದನ್ನು ಭಾಗ್ಯನಗರ್ ಅಂತ ಮರುನಾಮಕರಣ: ಅಸ್ಸಾಂ ಸಿಎಂ

    ಹೈದರಾಬಾದ್: ತೆಲಂಗಾಣದಲ್ಲಿ (Telangana) ಬಿಜೆಪಿ ಅಧಿಕಾರಕ್ಕೆ ಬಂದ ಕೇವಲ 30 ನಿಮಿಷದಲ್ಲಿ ಹೈದರಾಬಾದ್ ಅನ್ನು ‘ಭಾಗ್ಯನಗರ್’ (Bhagya Nagar) ಎಂದು ಮರುನಾಮಕರಣ ಮಾಡಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಹೇಳಿಕೆಯೊಂದನ್ನು ನೀಡಿದ್ದಾರೆ.

    ಹೈದರಾಬಾದ್‍ನಲ್ಲಿ ಚುನಾವಣಾ ಪ್ರಚಾರದಲ್ಲಿನ (Election Rally) ತಮ್ಮ ಭಾಷಣದ ವೇಳೆ ಈ ಮಾತನ್ನು ಹೇಳಿದ್ದಾರೆ. ಹೈದರಾಬಾದ್ ಹೆಸರನ್ನು ಭಾಗ್ಯನಗರ್ ಎಂಬುದಾಗಿ ಮರುನಾಮಕರಣ ಮಾಡಬೇಕು ಎಂಬುದಾಗಿ ನಾನು ಅಂದುಕೊಂಡಿದ್ದೇನೆ. ಅದರಂತೆ ಬಿಜೆಪಿ (BJP) ಅಧಿಕಾರಕ್ಕೆ ಬಂದ ಅರ್ಧ ಗಂಟೆಯಲ್ಲಿ ಮರುನಾಮಕರಣ ಮಾಡುತ್ತೇನೆ. ಇದನ್ನು ಯಾರೂ ಕೂಡ ವಿರೋಧಿಸುವ ಧೈರ್ಯ ಮಾಡಲ್ಲ ಎಂದರು.

    ಕೆಲವು ವಿಷಯಗಳು ಅಸಾಧ್ಯವೆಂದು ತೋರುತ್ತದೆ. ಓಲ್ಡ್ ಸಿಟಿಗೆ ಮೆಟ್ರೋ ರೈಲು ವ್ಯವಸ್ಥೆ ಕಲ್ಪಿಸಬಹುದೇ? ಕೆಲವು ಜನರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗುತ್ತದೆಯೇ?, ಇನ್ನೂ ಕೆಲವರು ಬಹಿರಂಗವಾಗಿ ಪೊಲೀಸರಿಗೆ ಬೆದರಿಕೆ ಹಾಕಿದಾಗ ನಾವು ಅದನ್ನು ತಡೆಯಬಹುದೇ? ಎಂದು ಇತ್ತೀಚೆಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಕ್ಬರುದ್ದೀನ್ ಓವೈಸಿ ಅವರನ್ನು ಒಳಗೊಂಡ ಘಟನೆಯನ್ನು ಉಲ್ಲೇಖಿಸಿ ಹಳಿದರು. ಇದನ್ನೂ ಓದಿ: 4 ತಿಂಗಳ ಪುಟ್ಟ ಕಂದಮ್ಮನಿಗೆ ಹಾಲುಣಿಸಿ ಸಂತೈಸಿದ ಮಹಿಳಾ ಪೊಲೀಸ್: ಭಾರೀ ಮೆಚ್ಚುಗೆ

    ಬಿಜೆಪಿ ಸರ್ಕಾರ ರಚನೆಯಾದ ನಂತರ 30 ನಿಮಿಷಗಳಲ್ಲಿ ಈ ಕೆಲಸಗಳನ್ನು ಮಾಡಲಾಗುವುದು ಎಂದರು. ಶರ್ಮಾ ಅವರು ಕೋಮುವಾದದ ಧ್ವನಿಯೊಂದಿಗೆ ಹಲವಾರು ಕಾಮೆಂಟ್‍ಗಳನ್ನು ಮಾಡಿದ್ದಾರೆ. ಈ ದೇಶದಲ್ಲಿ ಬಹುಪತ್ನಿತ್ವದ ಜೊತೆಗೆ ತುಷ್ಟೀಕರಣ ರಾಜಕಾರಣವೂ ಕೊನೆಗೊಳ್ಳಬೇಕು ಎಂದರು. ತ್ರಿವಳಿ ತಲಾಖ್ ನಿಷೇಧ, ಆರ್ಟಿಕಲ್ 370 ರದ್ದತಿ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆಯೂ ಅವರು ಮನವಿ ಮಾಡಿದರು. ಇದನ್ನೂ ಓದಿ: ಭಾರತ ವಿಶ್ವಕಪ್ ಸೋಲಲು ಇಂದಿರಾ ಗಾಂಧಿ ಕಾರಣವೆಂದ ಅಸ್ಸಾಂ ಸಿಎಂ!

  • ಭಾರತ ವಿಶ್ವಕಪ್ ಸೋಲಲು ಇಂದಿರಾ ಗಾಂಧಿ ಕಾರಣವೆಂದ ಅಸ್ಸಾಂ ಸಿಎಂ!

    ಭಾರತ ವಿಶ್ವಕಪ್ ಸೋಲಲು ಇಂದಿರಾ ಗಾಂಧಿ ಕಾರಣವೆಂದ ಅಸ್ಸಾಂ ಸಿಎಂ!

    ಡಿಸ್ಪುರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು (Mamta Banerjee) ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದೀಗ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಅವರು ಭಾರತ ಸೋಲಿಗೆ ಇಂದಿರಾ ಗಾಂಧಿಯೇ ಕಾರಣ ಎಂದು ತಿಳಿಸಿದ್ದಾರೆ.

    ನವೆಂಬರ್ 19ರಂದು ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ (IND Vs AUS) ನಡುವೆ ಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತು. ಈ ಸೋಲಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೇ ಕಾರಣ ಎಂದು ಶರ್ಮಾ ಹೇಳಿದ್ದಾರೆ. ಯಾಕೆಂದರೆ ಅಂದು ಇಂದಿರಾ ಗಾಂಧಿಯವರ (Indira Gandhi) ಜನ್ಮ ದಿನವಾಗಿದೆ. ಹೀಗಾಗಿ ಅಂದೇ ಪಂದ್ಯ ನಡೆದಿದ್ದರಿಂದ ಭಾರತ ಸೋಲನುಭವಿಸಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಪಾಪಿಗಳು ಹಾಜರಾದ ಫೈನಲ್ ಹೊರತುಪಡಿಸಿ ಎಲ್ಲಾ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ: ಮಮತಾ ಕಿಡಿ

    ಪ್ರತಿ ಪಂದ್ಯವನ್ನೂ ಗೆಲ್ಲುತ್ತಿದ್ದೆವು. ಆದರೆ ಫೈನಲ್‍ನಲ್ಲಿ ಮಾತ್ರ ಸೋತೆವು. ಆ ದಿನ ಏನಾಗಿತ್ತು? ನಾವೇಕೆ ಸೋತಿದ್ದೇವೆ? ಎಂದು ಪಂದ್ಯ ಮುಗಿದ ಮೇಲೆ ಬಂದು ನೋಡಿದೆ. ಈ ವೇಳೆ ಅಂದೇ ಇಂದಿರಾ ಗಾಂಧಿಯವರ ಜನ್ಮ ದಿನ ಇರುವುದು ಗೊತ್ತಾಯಿತು. ಆಗ ಸೋಲಿಗೆ ಕಾರಣ ಬಯಲಾಯಿತು ಎಂದು ತಮ್ಮದೇ ಶೈಲಿಯಲ್ಲಿ ನುಡಿದರು. ಇದನ್ನೂ ಓದಿ: ಆಸ್ಟ್ರೇಲಿಯಾಗೆ ಬಂದಿಳಿದ ಚಾಂಪಿಯನ್ ಪ್ಯಾಟ್ ಕಮ್ಮಿನ್ಸ್- ಸ್ವಾಗತಿಸಲು ಜನವೇ ಇಲ್ಲ

    ಇದೇ ವೇಳೆ ಮೋದಿಯವರನ್ನು ವಿರೋಧಿಸುವ ಪಕ್ಷಗಳೊಂದಿಗೆ ವಿರೋಧ ಪಕ್ಷಗಳು ಕೈಜೋಡಿಸಿವೆ ಎಂದು ಆರೋಪಿಸಿದ ಶರ್ಮಾ, ಮುಂದಿನ ದಿನಗಳಲ್ಲಿ ನೆಹರೂ-ಗಾಂಧಿ ಕುಟುಂಬದ ಸದಸ್ಯರ ಜನ್ಮದಿನದಂದು ಫೈನಲ್ ಪಂದ್ಯವನ್ನು ಆಯೋಜನೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಬಿಸಿಸಿಐಗೆ ಹೇಳಲು ಬಯಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಲಕ್ನೋದಲ್ಲಿ ಫೈನಲ್‌ ನಡೆಯುತ್ತಿದ್ದರೆ ಭಾರತ ಗೆಲ್ಲುತ್ತಿತ್ತು: ಮೋದಿ ಪಿಚ್‌ ಬಗ್ಗೆ ಅಖಿಲೇಶ್‌ ಟೀಕೆ

  • ಹಿಮಂತ್ ಬಿಸ್ವಾ ಶರ್ಮಾ ಅಸ್ಸಾಂನ ಮುಂದಿನ ಸಿಎಂ

    ಹಿಮಂತ್ ಬಿಸ್ವಾ ಶರ್ಮಾ ಅಸ್ಸಾಂನ ಮುಂದಿನ ಸಿಎಂ

    ನವದೆಹಲಿ: ಅಸ್ಸಾಂ ಸಿಎಂ ಯಾರು ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಹಿಮಂತ್ ಬಿಸ್ವಾ ಶರ್ಮಾ ಮುಖ್ಯಮಂತ್ರಿಯಾಗಲಿದ್ದಾರೆ. ಚುನಾಯಿತ ಎಲ್ಲ ಕಮಲ ಶಾಸಕರ ಸಹಮತದ ಮೇರೆಗೆ ಹಿಮಂತ್ ಬಿಸ್ವಾ ಶರ್ಮಾ ಅವರನ್ನ ಬಿಜೆಪಿ ಆಯ್ಕೆ ಮಾಡಿದೆ. ಇಂದು ಸಂಜೆ ನಾಲ್ಕು ಗಂಟೆಗೆ ರಾಜ್ಯಪಾಲರನ್ನ ಭೇಟಿಯಾಗಲಿರುವ ಹಿಮಂತ್ ಬಿಸ್ವಾ, ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಸೋಮವಾರವೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.

    ಚುನಾವಣೆ ಮತದಾನ ಆರಂಭಕ್ಕೂ ಮುನ್ನವೇ ಹಿಮಂತ್ ಬಿಸ್ವಾ ಶರ್ಮಾ ಮುಂದಿನ ಸಿಎಂ ಅನ್ನೋ ಸುದ್ದಿಗಳು ಪ್ರಕಟವಾಗಿದ್ದವು. ಆದ್ರೆ ಹಾಲಿ ಸಿಎಂ ಆಗಿದ್ದ ಸರ್ಬಾನಂದ್ ಸೋನೋವಾಲಾ ವಿರುದ್ಧ ಹೇಳಿಕೆ ನೀಡಲು ಬಿಜೆಪಿ ನಾಯಕರು ಹಿಂದೇಟು ಹಾಕಿದ್ದರು. ಇದೀಗ ಪಕ್ಷದ ಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಹಿಮಂತ್ ಬಿಸ್ವಾ ಪರವಾಗಿ ಮತ ಚಲಾಯಿಸಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಸ್ಪರ್ಧೆ ಹಿನ್ನೆಲೆ ಬಹುಮತ ಪಡೆದಿದ್ರೂ ಬಿಜೆಪಿಗೆ ಸರ್ಕಾರ ರಚನೆಗೆ ಒಂದು ವಾರ ಸಮಯ ಪಡೆದುಕೊಂಡಿತ್ತು.

    ಶನಿವಾರ ಇಬ್ಬರು ನಾಯಕರನ್ನು ಬಿಜೆಪಿ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡು ವಿಶೇಷ ಸಭೆ ನಡೆಸಿತ್ತು. ಇನ್ನು ಸಿಎಂ ಸ್ಥಾನದಿಂದ ವಂಚಿತರಾಗಿರುವ ಸೋನೋವಾಲರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ವರದಿಯಾಗುತ್ತಿದೆ. ಸರ್ಬಾನಂದ್ ಸೋನೋವಾಲ 2014 ರಿಂದ 2019ರವರೆಗೆ ಮೋದಿ ಅವರ ಸಂಪುಟದಲ್ಲಿ ಕ್ರೀಡಾ ಸಚಿವರಾಗಿದ್ದರು.

    126 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 60ರಲ್ಲಿ ಕಮಲ ಧ್ವಜ ಹಾರಿಸುವ ಮೂಲಕ ಅಸ್ಸಾಂ ತನ್ನ ತೆಕ್ಕೆಯಲ್ಲಿ ಉಳಿಸಿಕೊಂಡಿತ್ತು. ಬಿಜೆಪಿ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಎಜಿಪಿ 9, ಯುಪಿಪಿಎಲ್ 6ರಲ್ಲಿ ಜಯ ಸಾಧಿಸಿವೆ.