Tag: ಅಸ್ಸಾಂ ಮಹಿಳೆ

  • 9ನೇ ತರಗತಿಯ ಪುತ್ರಿ ಜೊತೆ ಸೇರಿಕೊಂಡು ಪತಿ ಕೊಂದ ಮಹಿಳೆ ಅರೆಸ್ಟ್‌

    9ನೇ ತರಗತಿಯ ಪುತ್ರಿ ಜೊತೆ ಸೇರಿಕೊಂಡು ಪತಿ ಕೊಂದ ಮಹಿಳೆ ಅರೆಸ್ಟ್‌

    ದಿಸ್ಪುರ: ಅಸ್ಸಾಂ ಮಹಿಳೆಯೊಬ್ಬರು ತನ್ನ ಪುತ್ರಿ ಮತ್ತು ಆಕೆಯ ಸ್ನೇಹಿತರ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

    ಉತ್ತಮ್‌ ಗೊಗೊಯ್‌ ಕೊಲೆಯಾದ ವ್ಯಕ್ತಿ. ಆತನ ಪತ್ನಿ ಸೋನೋವಾಲ್‌ ಗೊಗೊಯ್‌ ಹತ್ಯೆ ಮಾಡಿದ ಪತ್ನಿ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮಹಿಳೆಯ 9ನೇ ತರಗತಿ ಓದುತ್ತಿರುವ ಪುತ್ರಿ ಮತ್ತು ಆಕೆಯ ಸ್ನೇಹಿತರು ಕೂಡ ಆರೋಪಿಗಳಾಗಿದ್ದಾರೆ.

    ಜು.25 ರಂದು ದಿಬ್ರುಗಢದ ಲಹೋನ್ ಗಾಂವ್‌ನಲ್ಲಿರುವ ಬೊರ್ಬರುವಾ ಪ್ರದೇಶದ ನಿವಾಸದಲ್ಲಿ ಉತ್ತಮ್ ಗೊಗೊಯ್ ಶವವಾಗಿ ಪತ್ತೆಯಾಗಿದ್ದರು. ತನ್ನ ಗಂಡ ಪಾರ್ಶ್ವವಾಯುವಿನಿಂದ ಮೃತಪಟ್ಟಿದ್ದಾರೆಂದು ಸೋನೋವಾಲ್‌ ನಂಬಿಸಲು ಯತ್ನಿಸಿದ್ದಳು. ಆದರೆ, ವಿಚಾರಣೆ ವೇಳೆ ಈಕೆಯ ನಿಜಬಣ್ಣ ಬಯಲಾಗಿದೆ.

    ಉತ್ತಮ್‌ ಅವರ ಸಹೋದರ ಪ್ರತಿಕ್ರಿಯಿಸಿ, ನನ್ನ ಅಣ್ಣ ಪಾರ್ಶ್ವವಾಯುವಿನಿಂದ ಮೃತಪಟ್ಟಿದ್ದಾನೆಂದು ಆತನ ಪತ್ನಿ ಹಾಗೂ ಪುತ್ರಿ ನನಗೆ ಕರೆ ಮಾಡಿ ತಿಳಿಸಿದರು. ನಾನು ತಕ್ಷಣ ಮನೆಗೆ ದೌಡಾಯಿಸಿದೆ. ಆಗ ಮನೆಯಲ್ಲಿ ದರೋಡೆಯಾಗಿದೆ. ನಿಮ್ಮ ಅಣ್ಣನಿಗೆ ಪಾರ್ಶ್ವವಾಯು ಆಯಿತು ಎಂದು ಹೇಳಿದರು. ಆದರೆ, ಅಣ್ಣನ ಕಿವಿ ಕತ್ತರಿಸಿರುವುದು ಕಂಡುಬಂತು. ನನಗೆ ಅನುಮಾನ ಬಂದು ಪೊಲೀಸ್‌ ಠಾಣೆಗೆ ದೂರು ನೀಡಿದೆ ಎಂದು ತಿಳಿಸಿದ್ದಾರೆ.

    ನಾವು ಪೊಲೀಸರನ್ನು ಸಂಪರ್ಕಿಸಿದೆವು. ಇಂದು ಅವರ ಪತ್ನಿ, ಮಗಳು ಮತ್ತು ಇತರ ಇಬ್ಬರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ನಮಗೆ ತಿಳಿದುಬಂದಿದೆ. ಈ ಇಬ್ಬರು ಹುಡುಗರು ನನ್ನ ಅತ್ತಿಗೆ ಮತ್ತು ಅವರ ಮಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆಂದು ವರದಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

  • ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಮಹಿಳೆ ಅರೆಸ್ಟ್

    ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಮಹಿಳೆ ಅರೆಸ್ಟ್

    ಡಿಸ್ಪೂರ್: ಬಾಂಗ್ಲಾ ಮೂಲದ ಉಗ್ರ ಸಂಘಟನೆ ‘ಅನ್ಸಾರುಲ್ ಇಸ್ಲಾಂ’ ಜೊತೆ ಸಂಪರ್ಕ ಹೊಂದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಜಹೂರಾ ಖಾತುನ್ ಅವರ ಪತಿ ಅಬು ತಲ್ಲಾಹ್ ನನ್ನು ಕೂಡ ನೇರಲಾಗ ಭಾಗ ಗ್ರಾಮದಿಂದ ಬಂಧಿಸಿಲಾಗಿದೆ. ಆರೋಪಿಗಳು ಅನ್ಸಾರುಲ್ ಇಸ್ಲಾಂನೊಂದಿಗೆ ಸಂಬಂಧ ಹೊಂದಿರುವವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಲಾಸಿಪಾರಾ ಉಪವಿಭಾಗದ ಪೊಲೀಸ್ ಅಧಿಕಾರಿ ಬಿರಿಂಚಿ ಬೋರಾ ತಿಳಿಸಿದ್ದಾರೆ. ಇದನ್ನೂ ಓದಿ: ಜೆಡಿಯು, ಬಿಜೆಪಿಯಲ್ಲಿ ಭಿನ್ನಮತ – ಮೈತ್ರಿ ಸರ್ಕಾರ ಉರುಳುವ ಸಾಧ್ಯತೆ

    ಮಹಿಳೆ ಬಳಿಯಿದ್ದ ಎರಡು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಒಂದನ್ನು ಸುಟ್ಟುಹಾಕಲಾಗಿದೆ. ನಾವು ಸುಟ್ಟ ಫೋನ್‍ನಿಂದ ಡೇಟಾವನ್ನು ಹಿಂಪಡೆಯಲು ಪ್ರಯತ್ನಿಸುತ್ತಿದ್ದೇವೆ. ಸದ್ಯಕ್ಕೆ ನಾವು ಆಕೆಯ ವಿಚಾರಣೆ ನಡೆಸುತ್ತಿದ್ದೇವೆ ಮತ್ತು ಆಕೆ ಫೋನ್ ಮೂಲಕ ಉಗ್ರ ಸಂಘಟನೆ ‘ಅನ್ಸಾರುಲ್ ಇಸ್ಲಾಂ’ ಜೊತೆ ಸಂಪರ್ಕ ಹೊಂದಿದ್ದಳು ಎಂಬುವುದಕ್ಕೆ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ್ದೇವೆ ಎಂದಿದ್ದಾರೆ.

    ಜಹೂರಾ ಖಾತುನ್ ಅನ್ನು ಭಾನುವಾರ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೇವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರಾಮಕ್ಕೆ ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸಿ – ಡಿಸಿಗೆ ಮನವಿ ಮಾಡಿದ ಪುಟ್ಟ ಬಾಲಕಿ

    ಕಳೆದ ಐದು ತಿಂಗಳಲ್ಲಿ ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಐದು ಘಟಕಗಳನ್ನು ಭೇದಿಸಿದ ನಂತರ ಅಸ್ಸಾಂ ಜಿಹಾದಿ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇತ್ತೀಚೆಗೆ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]