Tag: ಅಸ್ಪತ್ರೆ

  • ಸಮಸ್ತ್ರದಲ್ಲೇ ಮಲ ವಿಸರ್ಜನೆ ಮಾಡಿದ್ದಕ್ಕೆ ಬಾಲಕನ ಮೇಲೆ ಬಿಸಿನೀರು ಸುರಿದ ಶಿಕ್ಷಕ

    ಸಮಸ್ತ್ರದಲ್ಲೇ ಮಲ ವಿಸರ್ಜನೆ ಮಾಡಿದ್ದಕ್ಕೆ ಬಾಲಕನ ಮೇಲೆ ಬಿಸಿನೀರು ಸುರಿದ ಶಿಕ್ಷಕ

    ರಾಯಚೂರು: ಶಾಲಾ ಸಮವಸ್ತ್ರದಲ್ಲೇ ಬಾಲಕ ಮಲ ವಿಸರ್ಜನೆ ಮಾಡಿಕೊಂಡಿದ್ದಕ್ಕೆ ಸಿಟ್ಟಾದ ಶಿಕ್ಷಕ 8 ವರ್ಷದ ಬಾಲಕನ ಮೇಲೆ ಬಿಸಿನೀರು (Hot Water) ಸುರಿದು ವಿಕೃತಿ ಮೆರೆದಿರುವ ಘಟನೆ ರಾಯಚೂರಿನ ಮಸ್ಕಿ ತಾಲೂಕಿನಲ್ಲಿ ನಡೆದಿದೆ.

    ಮಸ್ಕಿಯ ಸಂತೆಕೆಲ್ಲೂರು ಗ್ರಾಮದಲ್ಲಿ 2ನೇ ತರಗತಿಯ ವಿದ್ಯಾರ್ಥಿ ಅಖಿತ್ (8)ಗೆ ಗಂಭೀರ ಗಾಯಗಳಾಗಿದ್ದು, ಶಿಕ್ಷಕನ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮತ್ತೊಂದು ಇತಿಹಾಸ – ಡೈಮಂಡ್‌ ಟ್ರೋಫಿ ಗೆದ್ದ ನೀರಜ್‌ ಚೋಪ್ರಾ

    ಮಿಟ್ಟಿಕೆಲ್ಲೂರು ಮೂಲದ ಗ್ರಾಮದ ವಿದ್ಯಾರ್ಥಿ ಶಾಲೆಗೆ (School) ಹೋದಾಗ ಶಾಲಾ ಸಮವಸ್ತ್ರದಲ್ಲೇ ವಿದ್ಯಾರ್ಥಿ ಮಲ ವಿಸರ್ಜನೆ ಮಾಡಿಕೊಂಡಿದ್ದಾನೆ. ಇದರಿಂದ ಗರಂ ಆದ ಶಿಕ್ಷಕ ವಿದ್ಯಾರ್ಥಿ ಮೇಲೆ ಬಿಸಿ ನೀರು ಎರಚಿದ್ದು, ಮಗುವಿನ ದೇಹದ ಶೇ.40ರಷ್ಟು ಭಾಗ ಬೆಂದು ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: 12 ವರ್ಷಗಳ ಬಳಿಕ ಕೋಡಿ ಬಿದ್ದ ಬೃಹತ್ ಕೆರೆ – ರೈತರ ಮೊಗದಲ್ಲಿ ಮಂದಹಾಸ

    ಮಗುವನ್ನು ಲಿಂಗಸುಗೂರು ತಾಲೂಕು ಅಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಸೆಪ್ಟಂಬರ್‌ 2ರಂದು ಘಟನೆ ನಡೆದಿದೆ. ಘಟನೆ ನಡೆದು ಒಂದು ತಿಂಗಳಾದರೂ ದೂರು ದಾಖಲಿಸಿಕೊಳ್ಳಲು ಮಸ್ಕಿ ಪೊಲೀಸರು (Police) ಹಿಂದೇಟು ಹಾಕಿದ್ದಾರೆ. ಅಲ್ಲದೇ ಮಗುವಿಗೆ ಅನ್ಯಾಯ ನಡೆದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ. ಕೂಡಲೇ ಶಿಕ್ಷಕನ ವಿರುದ್ದ ಕಠಿಣ ಕ್ರಮಕ್ಕೆ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಸದ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಲಿಂಡರ್ ಲೀಕೇಜ್‍ಗೊಂಡು ಸ್ಫೋಟ- 7 ಮಂದಿ ದಾರುಣ ಸಾವು

    ಸಿಲಿಂಡರ್ ಲೀಕೇಜ್‍ಗೊಂಡು ಸ್ಫೋಟ- 7 ಮಂದಿ ದಾರುಣ ಸಾವು

    ಗಾಂಧಿನಗರ: ಫ್ಯಾಕ್ಟರಿಯ ಕೋಣೆಯಲ್ಲಿ  ಸಿಲಿಂಡರ್ ಸ್ಫೋಟವಾಗಿ ಏಳು ಮಂದಿ ಮೃತಪಟ್ಟಿರುವ ಘಟನೆ ಗುಜರಾತ್ ಅಹ್ಮದಾಬಾದ್‍ನಲ್ಲಿ ನಡೆದಿದೆ.

     

    ಮಂಗಳವಾರ ರಾತ್ರಿ ಸಂಭವಿಸಿದ ಘಟನೆ ಈಗ ಬೆಳಕಿಗೆ ಬಂದಿದೆ. ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕಳೆದ ಎರಡು ದಿನಗಳಲ್ಲಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ. ಗ್ಯಾಸ್ ಸ್ಫೋಟದಲ್ಲಿ ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆಂದು ಅಸ್ಲಾಲಿ ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಎಸ್.ಎಸ್.ಗಮೇಟಿ ನಿನ್ನೆ ತಿಳಿಸಿದ್ದಾರೆ.  ಇದನ್ನೂ ಓದಿ:  ವೈರಲ್ ವೀಡಿಯೋ: ಮದುವೆ ಮಂಟಪದಲ್ಲಿ ಲ್ಯಾಪ್‍ಟಾಪ್ ಹಿಡಿದು ಕೆಲಸ ಮಾಡಿದ ವರ

     

    ಫ್ಯಾಕ್ಟರಿಯಲ್ಲಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರ ಕುಟುಂಬದ ಸದಸ್ಯರು ಒಂದು ಸಣ್ಣ ಕೋಣೆಯಲ್ಲಿ ಮಲಗಿದ್ದರು. ಆ ಕೋಣೆಯಲ್ಲಿದ್ದ  ಗ್ಯಾಸ್ ಲೀಕೇಜ್ ಆಗಲು ಶುರುವಾಗಿತ್ತು. ವಾಸನೆ ಬಂದ ಕೂಡಲೇ ನೆರೆಮನೆಯವರು ಈ ಕೋಣೆಯ ಬಾಗಿಲು ತಟ್ಟಿ, ಮಲಗಿದ್ದವರನ್ನು ಎಬ್ಬಿಸಿದ್ದಾರೆ. ಆದರೂ ಕಾಲ ಮಿಂಚಿ ಹೋಗಿತ್ತು. ಸ್ಫೋಟವಾಗಿದೆ. ಒಟ್ಟು 10 ಜನರು ಇಲ್ಲಿದ್ದರು. ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಗಂಭೀರವಾಗಿಯೇ ಇದೆ. ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.  ಇದನ್ನೂ ಓದಿ: ಆಮೆ, ಲ್ಯಾಬ್ರಡಾರ್ ಶ್ವಾನ- ವರದಕ್ಷಿಣೆ ಕೇಳಿದ ವರ

  • ದಿ ಗ್ರೇಟ್ ಖಲಿಗೆ ಮಾತೃ ವಿಯೋಗ

    ದಿ ಗ್ರೇಟ್ ಖಲಿಗೆ ಮಾತೃ ವಿಯೋಗ

    ಶಿಮ್ಲಾ: WWE ಚಾಂಪಿಯನ್‍ಶಿಪ್‍ನ ಖ್ಯಾತ ಕುಸ್ತಿ ಪಟು ದಿ ಗ್ರೇಟ್ ಖಲಿ ಅವರ ತಾಯಿ ತಾಂಡಿ ದೇವಿ ಬಹು ಅಂಗಾಂಗ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆ.

    ಖಲಿ ಅವರ ತಾಯಿ ತಾಂಡಿ ದೇವಿ ಅವರಿಗೆ 75 ವರ್ಷ ವಯಸ್ಸಾಗಿತ್ತು. ಕಳೆದ ಎರಡು ವರ್ಷಗಳಿಂದ ಉಸಿರಾಟ ತೊಂದರೆ ಮತ್ತು ಹಲವು ಖಾಯಿಲೆಗಳಿಂದ ಬಳಲುತ್ತಿದ್ದರು. ಬಳಿಕ ಕಳೆದ ವಾರ ತೀವ್ರ ಅನಾರೋಗ್ಯಕ್ಕೀಡಾಗಿ ಲುಧಿಯಾನಾದ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಬಹು ಅಂಗಾಂಗದಿಂದಾಗಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ವಿವಾಹ ಸಮಾರಂಭದಲ್ಲಿ ಖಲಿ ನೋಡಲು ಸಾವಿರಾರು ಮಂದಿ- ಕೊರೊನಾ ರೂಲ್ಸ್ ಬ್ರೇಕ್

    ಮೂಲತಃ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ, ಧಿರೈನಾ ಗ್ರಾಮದವರಾದ ಖಲಿ ಅವರ ತಾಯಿ ತಾಂಡಿ ದೇವಿಯ ಅಂತ್ಯ ಸಂಸ್ಕಾರ ಧಿರೈನಾ ಗ್ರಾಮದಲ್ಲೇ ಇಂದು ನಡೆಯಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದ ‘ದಿ ಗ್ರೇಟ್’ ಖಲಿ

    ದಾಲಿಪ್ ಸಿಂಗ್ ರಾಣಾ ಅಲಿಯಾಸ್ ಖಲಿ, 2000 ಇಸವಿಯಲ್ಲಿ ವೃತ್ತಿಪರ ಕುಸ್ತಿಗೆ ಪ್ರವೇಶ ಮಾಡಿದ್ದರು. ಈ ಮೊದಲು ಪಂಜಾಬ್ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇದಾದ ಬಳಿಕ WWEನಲ್ಲಿ 2007ರಲ್ಲಿ ಜಾನ್ ಸಿನ ಅವರೊಂದಿಗೆ ಸೆಣಸಾಡಿ ಚಾಂಪಿಯನ್ ಎನಿಸಿಕೊಂಡಿದ್ದರು. ಇದರೊಂದಿಗೆ ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲೂ ಕೂಡ ಖಲಿ ಕಾಣಿಸಿಕೊಂಡಿದ್ದಾರೆ. ಹಾಲಿವುಡ್‍ನ 4 ಸಿನಿಮಾ ಮತ್ತು ಬಾಲಿವುಡ್‍ನ 2 ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಖಲಿ, 2021ರ WWE ವಾಲ್ ಆಫ್ ಫೇಮ್‍ಗೆ ಆಯ್ಕೆಯಾಗಿದ್ದಾರೆ.

  • ಬಾತ್‍ರೂಮಿನಲ್ಲಿ ಕುಸಿದು ಬಿದ್ದು ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿ ಸಾವು

    ಬಾತ್‍ರೂಮಿನಲ್ಲಿ ಕುಸಿದು ಬಿದ್ದು ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿ ಸಾವು

    – ಸಾವಿಗೂ ಒಂದು ದಿನ ಮುನ್ನ ಪೋಷಕರಿಗೆ ಫೋನ್

    ಹೈದರಾಬಾದ್: ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡುತ್ತಿದ್ದ ತೆಲಂಗಾಣದ ವಿಕರಾಬಾದ್ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಸೋಮವಾರ ರಾತ್ರಿ ಅನುಮಾನಾಸ್ಪದವಾಗಿ ಬಾತ್‍ರೂಮಿನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

    ಮೃತ ವಿದ್ಯಾರ್ಥಿಯನ್ನು ಧಾರೂರು ಮಂಡಲದ ಹರಿದಾಸ್ಪಲ್ಲಿ ಗ್ರಾಮದ ನಿವಾಸಿ ಹರಿ ಶಿವಶಂಕರ್ ರೆಡ್ಡಿ (22) ಎಂದು ಗುರುತಿಸಲಾಗಿದೆ. ಹರಿ ಬಾತ್‍ರೂಮಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಅದನ್ನು ನೋಡಿದ ಆತನ ಸಹಪಾಠಿಗಳು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಹರಿ ಮೃತಪಟ್ಟಿದ್ದನು.

    ಹರಿ ಲಿಸ್ಮೋರ್‌ನ ದಕ್ಷಿಣದ ಕ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದನು. ನಾಗೇಂದ್ರಮ್ಮ ಮತ್ತು ಸಾಯಿ ರೆಡ್ಡಿಯ ಪುತ್ರನಾಗಿದ್ದು, ಒಬ್ಬನೇ ಮಗ ಎಂದು ತಿಳಿದುಬಂದಿದೆ.

    ಹರಿ ಸ್ನೇಹಿತರು ಸೋಮವಾರ ರಾತ್ರಿ 10.45ಕ್ಕೆ ಫೋನ್ ಮಾಡಿದ್ದರು. ಆಗ ಹರಿ ಬಾತ್‍ರೂಮಿನಲ್ಲಿ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಅಂತ ಹೇಳಿದ್ದರು. ಆದರೆ ಸ್ವಲ್ಪ ಸಮಯದ ನಂತರ ಆಸ್ಪತ್ರೆಯ ಅಧಿಕಾರಿಗಳು ಫೋನ್ ಮಾಡಿ ಹರಿ ಮೃತಪಟ್ಟಿದ್ದಾನೆ ಅಂತ ಹೇಳಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.

    ನಮ್ಮ ಮಗನ ಸ್ನೇಹಿತರು ಫೋನ್ ಮಾಡಿ ಸಾವಿನ ಬಗ್ಗೆ ನಮಗೆ ಮಾಹಿತಿ ನೀಡಿದರು. ಬೆಳಗ್ಗೆಯಿಂದ ಹರಿ ತಲೆನೋವಿನಿಂದ ಬಳಲುತ್ತಿದ್ದನು. ಆದರೆ ಸ್ನಾನ ಮಾಡಲು ಹೋದಾಗ ಕುಸಿದು ಬಿದ್ದಿದ್ದಾನೆ ಎಂದು ಹೇಳಿದರು. ನಂತರ ಅವರು ಅಂಬುಲೆನ್ಸ್‌ಗೆ ಫೋನ್ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಎಂದು ಹರಿ ತಂದೆ ಸಾಯಿ ರೆಡ್ಡಿ ತಿಳಿಸಿದರು.

    ಹರಿ ಸಾವಿಗೂ ಒಂದು ದಿನ ಮುಂಚಿತವಾಗಿ ನಮಗೆ ಫೋನ್ ಮಾಡಿ ಮಾತನಾಡಿದ್ದನು. ಈ ವೇಳೆ ನಮ್ಮ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದನು. ಆದರೆ ತನ್ನ ಆರೋಗ್ಯದ ಬಗ್ಗೆ ಏನನ್ನೂ ಹೇಳಿಕೊಂಡಿಲ್ಲ ಎಂದು ತಾಯಿ ನಾಗೇಂದ್ರಮ್ಮ ಹೇಳಿದರು. ಸದ್ಯಕ್ಕೆ ಹರಿ ಮೃತದೇಹವನ್ನು ತಮ್ಮ ನಿವಾಸಕ್ಕೆ ತರಲು ಸಹಾಯ ಮಾಡಬೇಕೆಂದು ಕುಟುಂಬದವರು ತೆಲಂಗಾಣ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.

  • ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ ಭಾರತೀಯ – ತುರ್ತು ಭೂಸ್ಪರ್ಶ ಮಾಡಿದ ವಿಮಾನ

    ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ ಭಾರತೀಯ – ತುರ್ತು ಭೂಸ್ಪರ್ಶ ಮಾಡಿದ ವಿಮಾನ

    ಅಬುಧಾಬಿ: ಮಾರ್ಗ ಮಧ್ಯದಲ್ಲೇ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಕ್ಕೆ ನವದೆಹಲಿಯಿಂದ ಮಿಲನ್‍ಗೆ ಹೊರಟಿದ್ದ ವಿಮಾನ ಯುನೈಟೆಡ್ ಆರಬ್ ಎಮಿರೇಟ್ಸ್ (UAE) ನಲ್ಲಿ ಲ್ಯಾಂಡ್ ಆಗಿದೆ.

    ಇಟಲಿಯಲ್ಲಿ ನೆಲೆಸಿದ್ದ ಭಾರತದ ರಾಜಸ್ಥಾನ ಮೂಲದ ಕೈಲಾಶ್ ಚಂದ್ರ ಸೈನಿ (52) ಮೃತಪಟ್ಟ ವ್ಯಕ್ತಿ. ಕೈಲಾಶ್ ತನ್ನ 26 ವರ್ಷದ ಮಗ ಹೀರಾ ಲಾಲ್ ಸೈನಿಯೊಂದಿಗೆ ನವದೆಹಲಿಯಿಂದ ಮಿಲನ್‍ಗೆ ಹೋಗುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಕೂಡಲೇ ಅಬುಧಾಬಿಯಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿ ಅವರನ್ನು ಅಲ್ಲಿಯ ಮಾಫ್ರಾಕ್ ಎಂಬ ಅಸ್ಪತ್ರೆಗೆ ಸೇರಿಸಲಾಗಿತ್ತು. ಕೈಲಾಶ್ ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ವೈದೈರು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಸಿರುವ ಯುಎಇಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಕೌನ್ಸಿಲರ್ ಎಂ. ರಾಜಮುರುಗನ್ ಅವರು, ಮಂಗಳವಾರ ಸೈನಿ ಅವರ ಮರಣೋತ್ತರ ಪರೀಕ್ಷೆ ನಡೆಸಿ ಮರಣ ಪ್ರಮಾಣ ಪತ್ರವನ್ನು ಯುಎಇ ಸರ್ಕಾರ ನೀಡಿದೆ. ಎತಿಹಾಡ್ ವಿಮಾನದ ಮೂಲಕ ಮೃತದೇಹ ಇಂದು ಭಾರತಕ್ಕೆ ಬರಲಿದೆ ಎಂದು ಹೇಳಿದ್ದಾರೆ.

  • ವಸತಿ ಶಾಲೆಯಲ್ಲಿ ತಿಂಡಿ ಸೇವಿಸಿದ 22 ಮಕ್ಕಳು ಅಸ್ವಸ್ಥ- ಇಬ್ಬರ ಸ್ಥಿತಿ ಗಂಭೀರ

    ವಸತಿ ಶಾಲೆಯಲ್ಲಿ ತಿಂಡಿ ಸೇವಿಸಿದ 22 ಮಕ್ಕಳು ಅಸ್ವಸ್ಥ- ಇಬ್ಬರ ಸ್ಥಿತಿ ಗಂಭೀರ

    ಚಿಕ್ಕಮಗಳೂರು: ವಸತಿ ಶಾಲೆಯೊಂದರಲ್ಲಿ ತಿಂಡಿ ಸೇವಿಸಿದ 22 ಮಕ್ಕಳು ಅಸ್ವಸ್ಥರಾಗಿರುವ ಘಟನೆ ತರೀಕೆರೆ ಹೊರವಲಯದ ತುಂಗಾಭದ್ರಾ ವಸತಿ ಶಾಲೆಯಲ್ಲಿ ನಡೆದಿದೆ.

    ಚಿತ್ರದುರ್ಗ ಸಂಸದ ಬಿಎನ್ ಚಂದ್ರಪ್ಪ ಅವರಿಗೆ ಸೇರಿರುವ ಈ ವಸತಿ ಶಾಲೆಯಲ್ಲಿ ಇಂದು ಬೆಳಗ್ಗೆ ತಿಂಡಿ ಸೇವಿಸಿದ 22 ಮಕ್ಕಳು ಅಸ್ವಸ್ಥರಾಗಿದ್ದಾರೆ. ತಕ್ಷಣ ಅಸ್ವಸ್ಥಗೊಂಡ ಎಲ್ಲ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ.

    ಹಾಸ್ಟೆಲ್‍ನಲ್ಲಿ ಬೆಳಗ್ಗೆ ವಿದ್ಯಾರ್ಥಿಗಳಿಗೆ ನೀಡಿದ ಆಹಾರದಿಂದ ಫುಡ್ ಪಾಯ್ಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮಾಹಿತಿ ಪಡೆದಿರುವ ಶಿಕ್ಷಣ ಇಲಾಖೆ ಬಿಇಒ ಶಿವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಕುರಿತು ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.