Tag: ಅಸಿಸ್ಟೆಂಟ್ ಪ್ರೊಫೆಸರ್

  • ‌ಆಕ್ಸಿಡೆಂಟ್ ಕೇಸ್‌ – ಅಸಿಸ್ಟೆಂಟ್ ಪ್ರೊಫೆಸರ್ ಬಂಧನ, ಬಿಡುಗಡೆ

    ‌ಆಕ್ಸಿಡೆಂಟ್ ಕೇಸ್‌ – ಅಸಿಸ್ಟೆಂಟ್ ಪ್ರೊಫೆಸರ್ ಬಂಧನ, ಬಿಡುಗಡೆ

    ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿ ಇತ್ತೀಚೆಗೆ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತವಾದ (Accident) ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತಕ್ಕೆ ಕಾರಣವಾದ ಅಸಿಸ್ಟೆಂಟ್ ಪ್ರೊಫೆಸರ್ (Assistant Professor) ತ್ರಿನಿಧಿಯನ್ನು ಬಂಧಿಸಿ, ಸ್ಟೇಷನ್‌ ಬೇಲ್‌ ಮೇಲೆ ಬಿಡುಗಡೆ ಮಾಡಲಾಗಿದೆ.

    ನ.6ರಂದು ಆಳಂದ ತಾಲೂಕಿನ ತಡಕಲ್ ಗ್ರಾಮದ ನಿವಾಸಿ ರಂಜಾನ್ ಎಂಬ ವ್ಯಕ್ತಿಯ ಬೈಕ್ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ತ್ರಿನಿಧಿ ಕಾರಿನ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದನು. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸರಣಿ ಸಾವು – ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

    ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕನಿಂಧ ಆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನರೋಣಾ ಪೋಲಿಸ್ ಠಾಣೆ ಪೋಲಿಸರು ಬಂಧಿಸಿ ಕರೆದೊಯ್ದಿದ್ದಾರೆ. ಪಘಾತಕ್ಕೆ ಕಾರಣವಾದ ತ್ರಿನಿಧಿಯನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದಲೇ ಪೋಲಿಸರು ಬಂಧಿಸಿ ಕರೆದುಕೊಂಡು ಹೋಗಿದ್ದು, ಇದೀಗ ಸ್ಟೇಷನ್ ಬೇಲ್‌ ಮೇಲೆ ಬಿಡುಗಡೆ ಮಾಡಲಾಗಿದೆ.

    ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನರೋಣಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಇದನ್ನೂ ಓದಿ: Mysuru | ಬೈಕ್ ಓಡಿಸುತ್ತಿರುವಾಗಲೇ ಹೃದಯಾಘಾತ – ತಡೆಗೋಡೆಗೆ ಗುದ್ದಿ ವ್ಯಕ್ತಿ ಸಾವು!

  • ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ- ಪ್ರೊ. ನಾಗರಾಜು ಸಸ್ಪೆಂಡ್ ಮಾಡಿ ಮೈಸೂರು ವಿವಿ ಆದೇಶ

    ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ- ಪ್ರೊ. ನಾಗರಾಜು ಸಸ್ಪೆಂಡ್ ಮಾಡಿ ಮೈಸೂರು ವಿವಿ ಆದೇಶ

    ಬೆಂಗಳೂರು: ಅಸಿಸ್ಟೆಂಟ್ ಪ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣದ ಆರೋಪಿ, ಪ್ರಾಧ್ಯಾಪಕ ಪ್ರೊ.ನಾಗರಾಜು ಅವರನ್ನು ಅಮಾನತುಗೊಳಿಸಿ ಮೈಸೂರು ವಿವಿ ಆದೇಶ ಹೊರಡಿಸಿದೆ.

    ನಾಗರಾಜು ಅವರು ಜಿಯಾಗ್ರಫಿ ಪ್ರೊಫೆಸರ್ ಆಗಿದ್ದು, ಪ್ರಶ್ನೆ ಪತ್ರಿಕೆ ಲೀಕ್ ಸಂಬಂಧ ಮಲ್ಲೇಶ್ವರಂ ಪೊಲೀಸರಿಂದ ಬಂಧಿತರಾಗಿದ್ದರು. ಇದನ್ನೂ ಓದಿ: ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್‍ನಲ್ಲೂ ಗೋಲ್ಮಾಲ್- ಕಾಸು ಕೊಟ್ರೆ ಸರ್ಕಾರಿ ಹುದ್ದೆ..?

    ಧಾರವಾಡ ಕರ್ನಾಟಕ ಯೂನಿವರ್ಸಿಟಿಯ ಮೌಲ್ಯಮಾಪನ ರಿಜಿಸ್ಟ್ರಾರ್ ಆಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಪ್ರಶ್ನೆಪತ್ರಿಕೆ ಲೀಕ್ ನಲ್ಲಿ ಭಾಗಿ ಹಿನ್ನೆಲೆ ನಾಗರಾಜ್ ತಂಗಿ ಮಗಳು ಕುಸುಮಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದರು.

    ಭೂಗೋಳ ಶಾಸ್ತ್ರ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ತಂಡದಲ್ಲಿದ್ದ ನಾಗರಾಜ್ ಮನೆಗೆ ಆಗಾಗ ಹೋಗುತ್ತಿದ್ದಾಗಿ ಆರೋಪಿ ಸೌಮ್ಯ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಳು. ನಾಗರಾಜ್ ಬಳಿ ಇದ್ದ ಬುಕ್ಸ್ ಗಳನ್ನ ಓದುವುದು ಮಾಡ್ತಿದ್ದೆ. ಅವರು ಪ್ರಶ್ನೆ ಪೇಪರ್ ತಯಾರು ಮಾಡುವ ಕಮಿಟಿಯಲ್ಲಿರೋದು ಗೊತ್ತಿತ್ತು ಎಂದಿದ್ದಳು.

    ನಾಗರಾಜ್ ಟೇಬಲ್ ಮೇಲೆ ಕ್ವೆಶ್ಚೆನ್ ಪೇಪರ್ ನ ಎನ್ವಲಪ್ ಇತ್ತು. ನಾನು ಯಾರಿಗೂ ಗೊತ್ತಾಗದ ಹಾಗೆ ಫೋಟೋ ತೆಗೆದುಕೊಂಡು ಬಂದಿದ್ದೆ. ಮರುದಿನ ಕಾಲೇಜಿನ ಬಳಿ ಪ್ರೊಫೆಸರ್ ತಂಗಿ ಮಗಳು ಕುಸುಮಾಗೆ ಪ್ರಶ್ನೆ ಪತ್ರಿಕೆ ಫೋಟೋ ಕಾಪಿ ಕಳಿಸುವಂತೆ ಹೇಳಿದ್ದೆ. ಆಕೆ ಕೂಡ ಕೆಲವೊಂದು ಪ್ರಶ್ನೆಗಳ ಫೋಟೋ ಕಳುಹಿಸಿದ್ದಳು. ಹೀಗೆ ಕ್ವೆಶ್ಚೆನ್ ಪೇಪರ್ ಲೀಕ್ ಹಿಂದಿನ ಇಂಚಿಂಚು ಮಾಹಿತಿಯನ್ನ ಎಳೆ ಎಳೆಯಾಗಿ ಪೊಲೀಸರ ಮುಂದೆ ಸೌಮ್ಯ ಬಿಚ್ಚಿಟ್ಟಿದ್ದಳು.

  • ಕರಿದ ಅನುಪಯುಕ್ತ ಎಣ್ಣೆಯಿಂದ ಡೀಸೆಲ್ ತಯಾರಿ – ನೈಕುಳಿ, ಹೊನ್ನೆಯಲ್ಲಿ ಸಿಗುತ್ತೆ ಡೀಸೆಲ್

    ಕರಿದ ಅನುಪಯುಕ್ತ ಎಣ್ಣೆಯಿಂದ ಡೀಸೆಲ್ ತಯಾರಿ – ನೈಕುಳಿ, ಹೊನ್ನೆಯಲ್ಲಿ ಸಿಗುತ್ತೆ ಡೀಸೆಲ್

    – ಉಡುಪಿಯ ಡಾ. ಸಂತೋಷ್ ಪೂಜಾರಿ ನಮ್ಮ ಪಬ್ಲಿಕ್ ಹೀರೋ

    ಉಡುಪಿ: ಇಂದಲ್ಲ ನಾಳೆ ಪೆಟ್ರೋಲ್ ನಿಕ್ಷೇಪಗಳು ಬರಿದಾಗೋದ್ರಲ್ಲಿ ಡೌಟೇ ಇಲ್ಲ. ಕಚ್ಚಾತೈಲ, ಅನಿಲಗಳ ಬೆಲೆ ದಿನೇ ದಿನೇ ಗಗನಕ್ಕೆ ಚಿಮ್ಮುತ್ತಿದೆ. ನಮ್ಮ ದಾರಿಯನ್ನು ನಾವು ನೋಡಿಕೊಳ್ಳದಿದ್ದರೆ ಕಾಲ ಕಷ್ಟ ಇದೆ. ಈ ನಡುವೆ ಉಡುಪಿಯ ಯುವ ವಿಜ್ಞಾನಿ ಕರಿದ ಎಣ್ಣೆಯಲ್ಲಿ, ಕಾಡಿನಲ್ಲಿ ಸಿಗೋ ಬೀಜಗಳಲ್ಲಿ ಡೀಸೆಲ್ ತಯಾರು ಮಾಡಿದ್ದಾರೆ. ಜೈವಿಕ ಇಂಧನ ಕಂಡು ಹುಡುಕುವ ಮೂಲಕ ದೇಶಕ್ಕೆ ಆಶಾಕಿರಣರಾಗಿದ್ದಾರೆ.

    ಡಾ. ಸಂತೋಷ್ ಪೂಜಾರಿ ಜಿಲ್ಲೆಯ ಕಾರ್ಕಳ ತಾಲೂಕಿನ ನೆಲ್ಲಿಕಟ್ಟೆಯವರಾಗಿದ್ದು, ಹೋಟೆಲ್ ರೆಸ್ಟೋರೆಂಟ್‍ಗಳಲ್ಲಿ ಕರಿದ ಅನುಪಯುಕ್ತ ಎಣ್ಣೆಯನ್ನು ಸಂಗ್ರಹ ಮಾಡಿ ಅದರಿಂದ ಡೀಸೆಲ್ ತಯಾರು ಮಾಡಿದ್ದಾರೆ. ಅಲ್ಲದೆ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯಾಲಜಿಯ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಐದು ವರ್ಷದಿಂದ ಜೈವಿಕ ಇಂಧನಗಳ ಕುರಿತಂತೆ ಸಂಶೋಧನೆ ಮಾಡುತ್ತಿರುವ ಡಾ. ಸಂತೋಷ್ ಪೂಜಾರಿ ಕರಿದ ಎಣ್ಣೆ, ನೈಕುಳಿ ಬೀಜ, ಹೊನ್ನೆ ಬೀಜ ಮತ್ತು ರಬ್ಬರ್ ಬೀಜಗಳ ಎಣ್ಣೆ ಹಿಂಡಿ ತೆಗೆದು ಡೀಸೆಲ್ ಕಂಡು ಹಿಡಿದಿದ್ದಾರೆ.

    ಕಡು ಬಡತನದಿಂದ ಬಂದಿರುವ ಸಂತೋಷ್‍ಗೆ ನಿಟ್ಟೆ ಎಜುಕೇಶನ್ ಟ್ರಸ್ಟ್ ಸಂಪೂರ್ಣ ಶಿಕ್ಷಣ ಕೊಟ್ಟಿದೆ. ಜೀವಶಾಸ್ತ್ರ ವಿಷಯದ ಮೇಲೆ ಅಧ್ಯಯನ ಮಾಡಿರುವ ಸಂತೋಷ್ ಪೂಜಾರಿ ಬಯೋಲಜಿ ಫಾರ್ ಎಂಜಿನಿಯರ್ಸ್ ಭೋದನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಜೈವಿಕ ಇಂಧನ ಅಭಿವೃದ್ಧಿ ಕೇಂದ್ರವನ್ನು ಮುನ್ನಡೆಸುತ್ತಿರುವ ಸಂತೋಷ್ ಈಗಾಗಲೇ 15 ಸಾವಿರ ಲೀಟರ್ ಜೈವಿಕ ಡೀಸೆಲ್ ತಯಾರು ಮಾಡಿದ್ದಾರೆ. ಕಾಲೇಜಿನ ವಾಹನಗಳು, ಬಸ್ಸುಗಳಿಗೆ ಬಳಸುತ್ತಿದ್ದಾರೆ. ಪಂಪ್‍ನಲ್ಲಿ ಸಿಗುವ ಡೀಸೆಲ್ ರೇಟ್‍ಗಿಂತ 10 ರೂ. ಕಡಿಮೆ ದರದಲ್ಲಿ ಜೈವಿಕ ಡೀಸೆಲ್ ಸೇಲ್ ಮಾಡುತ್ತಿದ್ದಾರೆ.

    ಕಂಪ್ರೆಷನ್ ಇಗ್ನೀಷಿಯನ್ ಇಂಜಿನ್ ಪರ್ಫಾಮೆನ್ಸ್ ಸ್ಟಡೀಸ್ ವಿದ್ ಡಿಫರೆಂಟ್ ಬ್ಲೆಂಡ್ಸ್ ಆಫ್ ಬಯೋ ಡೀಸೆಲ್ ಪ್ರೊಡ್ಯೂಸ್ಡ್ ಫ್ರಂ ನೋವೆಲ್ ಸೋರ್ಸಸ್ ವಿಷಯ ಮಂಡನೆಗೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಸಂತೋಷ್‍ಗೆ ಡಾಕ್ಟರೇಟ್ ಪದವಿ ನೀಡಿದೆ. ಅಮೆರಿಕದ ಜೈವಿಕ ಇಂಧನ ಮಂಡಳಿಯ ಕಾರ್ಯಾಗಾರದಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿ ಸಂತೋಷ್ ಪಾಲ್ಗೊಂಡಿದ್ದು ಮತ್ತೊಂದು ಹೆಮ್ಮೆ. ಅಮೆರಿಕ ನೆಕ್ಸ್ಟ್ ಜನರೇಶನ್ ಸೈಂಟಿಸ್ಟ್ ಫಾರ್ ಬಯೋ ಡೀಸೆಲ್ ಎಂಬ ಬಿರುದು ಇವರಿಗೆ ನೀಡಿದೆ.

    ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳಿಗೆ ಡಾ. ಸಂತೋಷ್ ಪೂಜಾರಿ ಪ್ರಾಜೆಕ್ಟ್ ಕೊಟ್ಟಿದ್ದಾರೆ. ವಿವಿಧ ಮರಗಳ ಸೊಪ್ಪು, ತೊಗಟೆ, ಬೇರುಗಳಿಂದ ಸೌಂದರ್ಯವರ್ಧಕ ಮತ್ತು ಔಷಧಿ ತಯಾರಿ ಸಂಶೋಧನೆ ನಡೆಸುತ್ತಿದ್ದಾರೆ. ದಿನಪೂರ್ತಿ ಇಂಜಿನಿಯರಿಂಗ್ ಟೀಚಿಂಗ್ ಮಾಡುವ ಸಂತೋಷ್ ಸಂಜೆ- ಬೆಳಗ್ಗೆ ಡೀಸೆಲ್ ಸಂಶೋಧನೆಯ ಬೇರೆ ಬೇರೆ ಮಾರ್ಗ ಹುಡುಕುತ್ತಿದ್ದಾರೆ.