Tag: ಅಸಾವುದ್ದೀನ್ ಓವೈಸಿ

  • ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ, ನಮ್ಮ ಮುಸ್ಲಿಂ ಹೆಣ್ಣು ಮಕ್ಕಳು ಹಿಜಬ್ ಧರಿಸುತ್ತಾರೆ: ಓವೈಸಿ

    ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ, ನಮ್ಮ ಮುಸ್ಲಿಂ ಹೆಣ್ಣು ಮಕ್ಕಳು ಹಿಜಬ್ ಧರಿಸುತ್ತಾರೆ: ಓವೈಸಿ

    ನವದೆಹಲಿ: ನೀವು ಬಿಕಿನಿ (Bikini) ಬೇಕಾದರೆ ಹಾಕಿಕೊಳ್ಳಿ, ಆದರೆ ನಮ್ಮ ಮುಸ್ಲಿಂ (Muslim) ಹೆಣ್ಣುಮಕ್ಕಳು ಹಿಜಬ್ (Hijab) ಧರಿಸುತ್ತಾರೆ. ಬಿಜೆಪಿ (BJP) ಹಿಜಬ್ ಧರಿಸುವುದನ್ನು ತಡೆಯಲು ಪ್ರಯತ್ನಿಸುತ್ತಿದೆ. ಭವಿಷ್ಯದಲ್ಲಿ ಹಿಜಬ್ ಧರಿಸಿದ ಮುಸ್ಲಿಂ ಮಹಿಳೆ ದೇಶದ ಪ್ರಧಾನಿ (Prime Minister) ಆಗಬಹುದು ಎಂದು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಭವಿಷ್ಯ ನುಡಿದಿದ್ದಾರೆ.

    ಹಿಜಬ್ ಕುರಿತಾಗಿ ಸುಪ್ರೀಂಕೋರ್ಟ್ (Supreme Court) ನೀಡಿರುವ ತೀರ್ಪಿನ ಕುರಿತಾಗಿ ಮಾತನಾಡಿದ ಅವರು, ಹಿಜಬ್ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿದೆ. ಮುಸ್ಲಿಂ ಹೆಣ್ಣುಮಕ್ಕಳು ಧರಿಸುವ ಹಿಜಬ್ ತೆಗೆಯಲು ಬಿಜೆಪಿ ಯತ್ನಿಸುತ್ತಿದೆ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಬ್ ಧರಿಸಲು ಆಸಕ್ತಿ ವಹಿಸಿದ್ದಾರೆ. ಹಿಜಬ್ ಧರಿಸುವಂತೆ ಯಾರೂ ಅವರನ್ನು ಬಲವಂತಪಡಿಸಿಲ್ಲ. ಅವರ ಸ್ವಇಚ್ಚೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹಿಜಬ್‌ ಆಯ್ಕೆಯ ವಿಷಯ: ನ್ಯಾ.ಹೇಮಂತ್ ಗುಪ್ತಾ, ನ್ಯಾ. ಧುಲಿಯಾ ಆದೇಶದಲ್ಲಿ ಏನಿದೆ?

    ದೇಶದ ಅಭಿವೃದ್ಧಿಯಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಕೊಡುಗೆಯೂ ಅಪಾರವಾಗಿದೆ. ಹೈದರಾಬಾದ್‍ನಲ್ಲಿ ಹಲವು ಮಹಿಳೆಯರು ಡ್ರೈವರ್‌ಗಳಾಗಿ ವಾಹನ ಚಲಾಯಿಸುತ್ತಿದ್ದಾರೆ. ಅವರಿಗೆ ಯಾರೂ ಹಿಜಬ್ ಧರಿಸುವಂತೆ ಒತ್ತಾಯಿಸುತ್ತಿಲ್ಲ. ಅವರು ತಮ್ಮ ಇಚ್ಚೆಯ ಪ್ರಕಾರ ಧರಿಸುತ್ತಿದ್ದಾರೆ. ಹಿಂದೂ, ಸಿಖ್, ಕ್ರಿಶ್ಚಿಯನ್ ಮಕ್ಕಳು ತಮ್ಮ ಧರ್ಮದ ಉಡುಪು ಧರಿಸಿ ಶಾಲೆಗೆ ತೆರಳಲು ಅನುಮತಿ ಇದೆ. ಆದರೆ ಮುಸ್ಲಿಂ ಹೆಣ್ಣುಮಕ್ಕಳು ಧರಿಸುವ ಹಿಜಬ್‍ಗೆ ಅವಕಾಶ ಕೊಡುತ್ತಿಲ್ಲ. ಈ ತಾರತಮ್ಯ ಯಾಕೆ? ಒಂದು ದಿನ ಹಿಜಬ್ ಧರಿಸಿದ ಮುಸ್ಲಿಂ ಮಹಿಳೆ ಭಾರತದ ಪ್ರಧಾನಿಯಾಗುತ್ತಾರೆ. ಇದು ನನ್ನ ಕನಸು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ರೂಪದ ಆಕೃತಿ ಪತ್ತೆ – ವೈಜ್ಞಾನಿಕ ಪರೀಕ್ಷೆ ಸಾಧ್ಯವಿಲ್ಲ ಎಂದು ಕೋರ್ಟ್‌

    ವಿಶ್ವಾದ್ಯಂತ ಸುದ್ದಿಯಾಗಿದ್ದ ಕರ್ನಾಟಕದ ಹಿಜಬ್‌ ನಿಷೇಧ (Karnataka Hijab Ban) ಪ್ರಕರಣ ಇನ್ನಷ್ಟು ದಿನಗಳ ಕಾಲ ನಡೆಯಲಿದೆ. ನಿನ್ನೆ ಸುಪ್ರೀಂಕೋರ್ಟ್‌ನಿಂದ (Supreme Court) ಭಿನ್ನ ತೀರ್ಪು ಪ್ರಕಟವಾಗಿದ್ದು, ಪ್ರಕರಣದ ವಿಚಾರಣೆ ಮುಖ್ಯ ನ್ಯಾಯಾಧೀಶರು ಇರುವ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೋಳಿ ಕೇಳಿ ಮಸಾಲೆ ಅರೆಯಲ್ಲ – ಜನಸಂಖ್ಯಾ ನೀತಿ ವಿರೋಧಿಸಿದ ಅಸಾವುದ್ದೀನ್ ಓವೈಸಿಗೆ ಸಿ.ಟಿ.ರವಿ ತಿರುಗೇಟು

    ಕೋಳಿ ಕೇಳಿ ಮಸಾಲೆ ಅರೆಯಲ್ಲ – ಜನಸಂಖ್ಯಾ ನೀತಿ ವಿರೋಧಿಸಿದ ಅಸಾವುದ್ದೀನ್ ಓವೈಸಿಗೆ ಸಿ.ಟಿ.ರವಿ ತಿರುಗೇಟು

    ಬೆಂಗಳೂರು: ಕೋಳಿ ಕೇಳಿ ಮಸಾಲೆ ಅರೆಯಲ್ಲ ಅಂತಾ ಜನಸಂಖ್ಯಾ ನೀತಿ ವಿರೋಧಿಸಿರುವ ಅಸಾವುದ್ದೀನ್ ಓವೈಸಿಗೆ (Asaduddin Owaisi) ಸಿ.ಟಿ.ರವಿ (C.T.Ravi) ತಿರುಗೇಟು ನೀಡಿದ್ದಾರೆ.

    ಹಿಂದೆ ಇದ್ದ ರಜಾಕರ ಮುಂದುವರೆದ ಭಾಗವೇ ಈ ಎಂಐಎಂ. ಹೊಸದಾಗಿ ನಿರೀಕ್ಷೆ ಮಾಡಿದರೆ ಹೇಳಬಹುದು. ನಾನು ಹಳ್ಳಿಯಿಂದ ಬಂದವನು, ಕೋಳಿ ಕೇಳಿ ಖಾರ ಮಸಾಲ ಅರೆಯಲ್ಲ ಅಂತ ಹೇಳಿದ್ದಾರೆ. ಜೊತೆಗೆ ಜನಸಂಖ್ಯಾ ನೀತಿ ಜಾರಿ ಬಗ್ಗೆ ಆರ್‌ಎಸ್‍ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರ ಹೇಳಿಕೆಯನ್ನ ಬಿಜೆಪಿ ಸ್ವಾಗತಿಸಿದೆ. ಜನಸಂಖ್ಯಾ ನೀತಿ ಅಗತ್ಯತೆಯ ಬಗ್ಗೆ ಚರ್ಚೆ ಅಗತ್ಯ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: PFI Ban – ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಧಿಕರಣ ರಚಿಸಿದ ಕೇಂದ್ರ

    ಜನಸಂಖ್ಯೆ ನಿಯಂತ್ರಣ ಸಂಬಂಧ ಓವೈಸಿ ವಿರೋಧ ಮಾಡಿದ್ದಾರೆ, ಮೊದಲಿನಿಂದಲು ಎಂಐಎಂ ಅದನ್ನೇ ಹೇಳುತ್ತಿದೆ. ಅದರ ಪೂರ್ವಾಶ್ರಮ ಗೊತ್ತಿರುವವರು ಯಾರೂ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇನ್ನು ಮೋಹನ್ ಭಾಗವತ್ ಅವರು ದೇಶದ ಹಿತದೃಷ್ಟಿಯಿಂದ ಒಂದು ಸಲಹೆ ನೀಡಿದ್ದಾರೆ. ಸಂಸತ್‍ನಲ್ಲಿ, ವಿಧಾನಸಭೆಯಲ್ಲಿ, ಎಲ್ಲಾ ಕಡೆ ಚರ್ಚೆಯಾಗಲಿ, ಆ ನಂತರ ಜಾರಿಗೆ ಬರಲಿ. ನಮ್ಮಲ್ಲಿ ಬಲವಂತವಾಗಿ ಹಿಂದೆ ಕರೆದುಕೊಂಡು ಹೋಗಿ ಕಟ್ ಮಾಡಿದ ರೀತಿ ಮಾಡಲ್ಲ ಎಂದು ಸಂಜಯ್ ಗಾಂಧಿ ಉದಾಹರಣೆ ನೀಡಿ ಅಂತಾ ಟಕ್ಕರ್ ಕೊಟ್ಟರು. ಇದನ್ನೂ ಓದಿ: ಅಮೆರಿಕದಲ್ಲಿ ರೂಮ್‍ಮೇಟ್‍ನಿಂದ ಭಾರತೀಯ ವಿದ್ಯಾರ್ಥಿ ಮರ್ಡರ್

    ಇದೇ ವೇಳೆ ದತ್ತಾತ್ರೇಯ ಹೊಸಬಾಳೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಅಸಮಾನತೆ, ನಿರುದ್ಯೋಗ ಎಲ್ಲವನ್ನೂ ಸ್ಪೀಕರಿಸುತ್ತೇವೆ. ಸದುದ್ದೇಶದಿಂದ ಏನೇ ಹೇಳಿದರೂ ಸ್ವೀಕರಿಸುತ್ತೇವೆ. ಅಸಮಾನತೆ, ಬಡತನ ಇವೆಲ್ಲಾ ವಿಶ್ವಗುರು ಆಗಲು ಇರುವ ಅಡೆತಡೆಗಳು. ಇವೆಲ್ಲಾ ತೊಡೆದು ಹೋದರೆ ವಿಶ್ವಗುರು ಆಗಬಹುದು. ಜಾತೀಯತೆ ಮೂಲಕ ಓಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ನೋಡುತ್ತಿದ್ದಾರೆ. ಹೀಗಿದ್ದಾಗಲೇ ಅಸ್ಪೃಶ್ಯತೆ ಹೆಚ್ಚಾಗಲು ಕಾರಣವಾಗುತ್ತದೆ. ಅದನ್ನು ಹೋಗಲಾಡಿಸಲು ಸರ್ಕಾರದ ಮಟ್ಟದಲ್ಲಿ ಹಾಗೂ ಬಿಜೆಪಿ ಪಕ್ಷದಿಂದ ನಿರ್ಣಯ ತೆಗೆದುಕೊಳ್ಳುತ್ತೇವೆ. ಆದರೆ 55 ವರ್ಷ ಆಳ್ವಿಕೆ ನಡೆಸಿದ ಪಕ್ಷಕ್ಕೆ ಅಸಮಾನತೆ ಬಗ್ಗೆ ಹೇಳುವ ನೈತಿಕತೆ ಇಲ್ಲ, ನೆಹರೂ, ಇಂದಿರಾ ಗಾಂಧಿ ಹೇಳಿದ್ದೇ ಬಡತನ ನಿರ್ಮೂಲನೆ, ಆದರೆ ಆಗಿದೆಯಾ? ಪ್ರಜಾಪ್ರಭುತ್ವ ವ್ಯವಸ್ಥೆ ಕಾಂಗ್ರೆಸ್‍ನಲ್ಲಿ ಇಲ್ಲ ಎಂದು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೇ 4ರಿಂದ ಜೆಡಿಎಸ್ ಪರ ಅಸಾವುದ್ದೀನ್ ಓವೈಸಿ ಪ್ರಚಾರ

    ಮೇ 4ರಿಂದ ಜೆಡಿಎಸ್ ಪರ ಅಸಾವುದ್ದೀನ್ ಓವೈಸಿ ಪ್ರಚಾರ

    ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಹೇಗಾದ್ರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಅಂತ ಅಖಾಡಕ್ಕಿಳಿದಿರುವ ಜೆಡಿಎಸ್ ಗೆ ಮತ್ತೊಂದು ಬೆಂಬಲದ ರಕ್ಷೆ ಸಿಕ್ಕಿದೆ. ಈಗಾಗಲೇ ಬಿಎಸ್‍ಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದೆ.

    ಈಗ ಬಿಎಸ್‍ಪಿ ಜೊತೆ ಎಂಐಎಂ ಪಕ್ಷದ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಬೆಂಬಲವು ಜೆಡಿಎಸ್ ಗೆ ಸಿಕ್ಕಿದ್ದು, ಮೇ 4ರಿಂದ ಓವೈಸಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಜೆಡಿಎಸ್ ಗೆ ಬೆಂಬಲ ನೀಡಲು ಒಪ್ಪಿರುವ ಓವೈಸಿ, ಜೆಡಿಎಸ್ ಪರವಾಗಿ ಮೇ 4 ರಿಂದ ಮುರ್ನಾಲ್ಕು ದಿನ ಮುಸ್ಲಿಂ ಮತಗಳಿರುವ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ.

    ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಸ್ಲಿಂಮರು ಹೆಚ್ವು ಇರುವ ಕಡೆ ಓವೈಸಿಯಿಂದ ಪ್ರಚಾರ ಮಾಡಿಸಲು ಜೆಡಿಎಸ್ ಸಿದ್ಧತೆ ಮಾಡಿದೆ. ಅಲ್ಲದೆ ರೆಬೆಲ್ ಶಾಸಕ ಜಮೀರ್ ಅಹಮದ್ ಕ್ಷೇತ್ರವಾದ ಚಾಮರಾಜಪೇಟೆ ಹೆಚ್ಚು ಪ್ರಚಾರ ಮಾಡಿಸಿ ಜಮೀರ್‍ಗೆ ಪಾಠ ಕಲಿಸಲು ದೊಡ್ಡ ಗೌಡ್ರು ಪ್ಲಾನ್ ಹಾಕಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಬಳ್ಳಾರಿ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲೂ ಓವೈಸಿ ಪ್ರಚಾರಕ್ಕೆ ಜೆಡಿಎಸ್ ಪ್ಲಾನ್ ಮಾಡಿಕೊಂಡಿದೆ ಎಂಬುದಾಗಿ ಪಕ್ಷದ ಮೂಲದಿಂದ ತಿಳಿದುಬಂದಿದೆ.

  • ಮುಸ್ಲಿಮರು ಭಾರತದಲ್ಲಿ ಏತಕ್ಕೀರಬೇಕು ಅಂತಾ ಹೇಳಿಕೆ ನೀಡಿದ್ದ ಬಿಜೆಪಿ ಸಂಸದನಿಗೆ ಫಾರುಖ್ ಅಬ್ದುಲ್ಲಾ ತಿರುಗೇಟು

    ಮುಸ್ಲಿಮರು ಭಾರತದಲ್ಲಿ ಏತಕ್ಕೀರಬೇಕು ಅಂತಾ ಹೇಳಿಕೆ ನೀಡಿದ್ದ ಬಿಜೆಪಿ ಸಂಸದನಿಗೆ ಫಾರುಖ್ ಅಬ್ದುಲ್ಲಾ ತಿರುಗೇಟು

    ನವದೆಹಲಿ: ಬುಧವಾರ ಬಿಜೆಪಿ ಸಂಸದ ವಿನಯ್ ಕಟಿಯಾರ್ ಮುಸ್ಲಿಮರು ಭಾರತದಲ್ಲಿ ಏತ್ತಕ್ಕೀರಬೇಕು? ಬೇಕಾದರೆ ಪಾಕಿಸ್ತಾನ, ಬಾಂಗ್ಲಾದೇಶಗಳಿಗೆ ಹೋಗಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹಾಗೆಯೇ ವಂದೇ ಮಾತರಂ ಮತ್ತು ರಾಷ್ಟ್ರ ಗೀತೆಗೆ ಗೌರವ ನೀಡಲು ಇಚ್ಚಿಸದವರು ಪಾಕಿಸ್ತಾನಕ್ಕೆ ತೆರಳಬಹುದು ಅಂತಾ ಅಂದಿದ್ದರು.

    ಎಂಐಎಂ ಪಕ್ಷದ ಅಧ್ಯಕ್ಷ ಅಸಾವುದ್ದೀನ್ ಓವೈಸಿ, ಭಾರತೀಯ ಮುಸ್ಲಿಂರನ್ನು ಪಾಕಿಸ್ತಾನಿ ಎಂದು ಕರೆಯುವವರನ್ನು ಶಿಕ್ಷಿಸಿ ಹೇಳಿಕೆ ನೀಡಿದ್ದರು. ಓವೈಸಿ ಹೇಳಿಕೆಗೆ ಪ್ರತ್ಯುತ್ತರ ನೀಡುವ ವೇಳೆ ಮುಸ್ಲಿಮರು ಭಾರತದಲ್ಲಿ ಯಾಕಿರಬೇಕು? ಜನಸಂಖ್ಯೆ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡಿದ ಮೇಲೆಯೂ ಮುಸ್ಲಿಂರನ್ನು ಭಾರತದಲ್ಲಿರುವ ಅವಶ್ಯಕತೆ ಏನಿದೆ ಅಂತಾ ಕಟಿಯಾರ್ ಪ್ರಶ್ನೆ ಮಾಡಿದ್ದರು.

    ಭಾರತವೇನು ವಿನಯ್ ಕಟಿಯಾರ್ ತಂದೆಯ ಆಸ್ತಿಯೇ? ಇದು ನಮ್ಮೆಲ್ಲರ ದೇಶವಾಗಿದೆ. ಕೆಲವರು ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಇದು ಧಾರ್ಮಿಕ ಹಿಂಸೆ ಆಗಲಾರದು, ಎಲ್ಲ ಧರ್ಮಗಳು ಪ್ರೀತಿ ಮತ್ತು ಶಾಂತಿಯ ಸಂದೇಶಗಳನ್ನು ಹೇಳುತ್ತವೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ತಿರುಗೇಟು ನೀಡಿದ್ದಾರೆ.