Tag: ಅಶ್ವೀನ್‌

  • ಸ್ನೇಹಿತನ ಹುಟ್ಟುಹಬ್ಬಕ್ಕೆ 52 ಲಕ್ಷ ಮೌಲ್ಯದ ದುಬಾರಿ ಕಾರು ಗಿಫ್ಟ್‌ ನೀಡಿದ ‘ಮಾರ್ಟಿನ್‌’ ಹೀರೋ ಧ್ರುವ ಸರ್ಜಾ

    ಸ್ನೇಹಿತನ ಹುಟ್ಟುಹಬ್ಬಕ್ಕೆ 52 ಲಕ್ಷ ಮೌಲ್ಯದ ದುಬಾರಿ ಕಾರು ಗಿಫ್ಟ್‌ ನೀಡಿದ ‘ಮಾರ್ಟಿನ್‌’ ಹೀರೋ ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ (Sandalwood) ನಟ ಧ್ರುವ ಸರ್ಜಾ ಅವರು ಆಪ್ತ ಸ್ನೇಹಿತನಿಗೆ ದುಬಾರಿ ಗಿಫ್ಟ್‌ವೊಂದನ್ನ ಕೊಟ್ಟಿದ್ದಾರೆ. ಧ್ರುವ ಸರ್ಜಾ (Dhruva Sarja)  ನಡೆಗೆ ಸ್ನೇಹಿತ್ ಅಚ್ಚರಿ ಪಟ್ಟಿದ್ದಾರೆ. ಅದಷ್ಟೇ ಅಲ್ಲ, ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಯಶ್ ಸಿನಿಮಾಗಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟ ಡೈರೆಕ್ಟರ್- ಇಲ್ಲಿದೆ ಗುಡ್ ನ್ಯೂಸ್

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ‘ಮಾರ್ಟಿನ್’, ‘ಕೆಡಿ’ (Kd Film) ಸಿನಿಮಾದ ಶೂಟಿಂಗ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಬಿಟ್ಟು ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸ್ನೇಹಿತ ಅಶ್ವಿನ್, ಧ್ರುವ ಸರ್ಜಾ (Dhruva Sarja)  ಸಿನಿಮಾಗಳಿಗೆ ಸಂಬಂಧಿಸಿದ ಕೆಲಸಗಳನ್ನು ನೋಡಿಕೊಳ್ಳುತ್ತಾರೆ. ಇತ್ತೀಚೆಗೆ ಅಶ್ವಿನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ದಿನದಂದು ಧ್ರುವ ಸರ್ಜಾ ದಿಢೀರನೇ ಕೊಟ್ಟ ಸರ್ಪ್ರೈಸ್ ಗಿಫ್ಟ್‌ಗೆ (Gift)  ಅವರ ಕಣ್ಣುಗಳು ಒದ್ದೆಯಾಗಿವೆ.

    ಸ್ಯಾಂಡಲ್‌ವುಡ್‌ನ ಸಕ್ಸಸ್‌ಫುಲ್ ನಟ ಧ್ರುವ ಸರ್ಜಾ, ನಟಿಸಿದ ಸಿನಿಮಾಗಳೆಲ್ಲವೂ ಯಶಸ್ಸು ಕಂಡಿವೆ. ಶೀಘ್ರದಲ್ಲೇ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಕೂಡ ಆಗುತ್ತೆ. ಹೀಗೆ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ನಟ ತನ್ನ ಆತ್ಮೀಯರ ಸುಖ-ಸಂತೋಷದಲ್ಲೂ ಭಾಗಿಯಾಗಿದ್ದಾರೆ. ತನ್ನ ಆತ್ಮೀಯ ಗೆಳೆಯ ಅಶ್ವಿನ್‌ಗೆ ದುಬಾರಿ ಮೊತ್ತ ಕಾರನ್ನು ಗಿಫ್ಟ್ ಮಾಡಿದ್ದಾರೆ. ಅಶ್ವಿನ್ ಹುಟ್ಟುಹಬ್ಬದಂದು, 52 ಲಕ್ಷ ರೂ. ದುಬಾರಿ ಬೆಲೆ ಬಾಳುವ ಕಾರನ್ನು ಧ್ರುವ ಸರ್ಜಾ ಉಡುಗೊರೆಯಾಗಿ ನೀಡಿದ್ದಾರೆ. ದುಬಾರಿ ಟೊಯೊಟಾ ಫಾರ್ಚುನರ್ (Toyota Fortuner) ಕಾರನ್ನು ನೀಡಿದ್ದಷ್ಟೇ ಅಲ್ಲ, ಬಾಲ್ಯದಲ್ಲೇ ನಿಧನರಾಗಿರೋ ಅಶ್ವಿನ್ ತಂದೆ-ತಾಯಿಯ ಫೋಟೋವನ್ನೂ ಹುಡುಕಿ ಕಾರಿನಲ್ಲಿಟ್ಟು ಗಿಫ್ಟ್ ಮಾಡಿದ್ದಾರೆ.

    ಧ್ರುವ ಸರ್ಜಾ ಖುದ್ದಾಗಿ ಅಶ್ವಿನ್ ಜೊತೆ ಶೋ ರೂಮ್‌ಗೆ ಬಂದಿದ್ದರು. ದುಬಾರಿ ಕಾರನ್ನು ಸರ್ಪ್ರೈಸ್ ಗಿಫ್ಟ್ ಮಾಡಿದ್ದರು. ಆ ಸಂದರ್ಭದಲ್ಲಿ ಅಶ್ವಿನ್ ಕಣ್ಣುಗಳು ಖುಷಿಗೆ ಒದ್ದೆಯಾಗಿದ್ದವು. ಇದೇ ವೇಳೆ ಶೋ ರೂಮ್‌ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ. ಸಂಕಷ್ಟದಲ್ಲಿ ಅಶ್ವಿನ್‌ರನ್ನು ಕರೆತಂದು ತನ್ನ ಜೊತೆಯಲ್ಲೇ ಇಟ್ಟುಕೊಂಡಿದ್ದಾರೆ ಧ್ರುವ ಸರ್ಜಾ. ಅಲ್ಲದೆ ಅವರ ಜೀವನಕ್ಕೆ ದಾರಿಯನ್ನೂ ಮಾಡಿಕೊಟ್ಟಿದ್ದಾರೆ.

  • ಕೊಟ್ಟ ಮಾತಿನಂತೆ ಕಿರುತೆರೆ ನಟಿ ಸ್ವಪ್ನಾ ಪತಿಗೆ ಕೆಲಸ ಕೊಡಿಸಿದ ಗೋಲ್ಡನ್ ಸ್ಟಾರ್ ಗಣೇಶ್

    ಕೊಟ್ಟ ಮಾತಿನಂತೆ ಕಿರುತೆರೆ ನಟಿ ಸ್ವಪ್ನಾ ಪತಿಗೆ ಕೆಲಸ ಕೊಡಿಸಿದ ಗೋಲ್ಡನ್ ಸ್ಟಾರ್ ಗಣೇಶ್

    ಕಿರುತೆರೆ ಮತ್ತು ಹಿರಿತೆರೆಯಲ್ಲಿ ಛಾಪೂ ಮೂಡಿಸಿರುವ ನಟಿ ಸ್ವಪ್ನಾ ದೀಕ್ಷಿತ್ (Swapna Dheekshith) ಅವರ ಪತಿ ಅಶ್ವಿನ್‌ಗೆ ಕೊಟ್ಟ ಮಾತಿನಂತೆ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ನಡೆದುಕೊಂಡಿದ್ದಾರೆ. ಸ್ವಪ್ನಾ ಪತಿಗೆ ಕೆಲಸ ಕೊಡಿಸುವುದಾಗಿ ಗಣೇಶ್ ಭರವಸೆ ನೀಡಿದ್ದರು. ನುಡಿದ ಮಾತಿನಂತೆ ಗಣೇಶ್ ಇದೀಗ ನಡೆದುಕೊಂಡಿದ್ದಾರೆ.

     

    View this post on Instagram

     

    A post shared by ashu (raj) (@ashwinndeekshith)

    ಸಾಕಷ್ಟು ಧಾರಾವಾಹಿ ಮೂಲಕ ಮೋಡಿ ಮಾಡಿದ್ದ ನಟಿ ಸ್ವಪ್ನಾ ದೀಕ್ಷಿತ್ `ಇಸ್ಮಾರ್ಟ್ ಜೋಡಿ’ (Ismart Jodi) ವೇದಿಕೆಯಲ್ಲಿ ಈ ಬದುಕಿನ ಕಣ್ಣೀರಿನ ಕಥೆಯನ್ನ ನಟಿ ಹೇಳಿಕೊಂಡಿದ್ದರು. ನನ್ನ ಗಂಡ ಕೆಲಸ ಮಾಡುತ್ತಿಲ್ಲ. ಇಡೀ ಮನೆಯ ನಿರ್ವಣೆಯನ್ನ ಕಳೆದ 16 ವರ್ಷದಿಂದ ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದು ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ್ದರು. ಈ ವೇಳೆ ಸ್ವಪ್ನಾ ಪತಿಗೆ ಕೆಲಸ ಕೊಡಿಸುವುದಾಗಿ ಗಣೇಶ್ ಭರವಸೆ ನೀಡಿದ್ದರು. ಈಗ ಅಶ್ವೀನ್‌ಗೆ ಕೆಲಸ ಸಿಕ್ಕಿದೆ. ಇದನ್ನೂ ಓದಿ:ಬಂಧನದ ಭೀತಿಯಿಂದ ಕೇರಳಕ್ಕೆ ಎಸ್ಕೇಪ್ ಆದ್ರಾ ನಟಿ ಶ್ರೀಲೀಲಾ ತಾಯಿ?: ಮನೆಗೆ ಬೀಗ, ಮೊಬೈಲ್ ಆಫ್

     

    View this post on Instagram

     

    A post shared by ashu (raj) (@ashwinndeekshith)

    ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆಯ `ಇಸ್ಮಾರ್ಟ್ ಜೋಡಿ’ ಗ್ರ್ಯಾಂಡ್ ಫಿನಾಲೆಯಲ್ಲಿ ಅಶ್ವೀನ್‌ಗೆ ಕೆಲಸದ ಅಪಾಯಿಂಟ್‌ಮೆಂಟ್ ಲೆಟರ್ ಕೊಟ್ಟಿದ್ದಾರೆ. ಈ ಬಗ್ಗೆ ಸ್ವಪ್ನ ದೀಕ್ಷಿತ್ ಸೇರಿದಂತೆ ಎಲ್ಲರೂ ಖುಷಿಪಟ್ಟಿದ್ದಾರೆ.

    ನನ್ನ ಗಂಡ ಅಶ್ವೀನ್ ಕೆಲಸ ಮಾಡುತ್ತಿಲ್ಲ ಎಂದು ತಮ್ಮ ಸಂಕಷ್ಟದ ವಿಚಾರವನ್ನು ಸ್ವಪ್ನ ರಿಯಾಲಿಟಿ ಶೋನಲ್ಲಿ ನಟಿ ಹೇಳಿಕೊಂಡಿದ್ದರು. ಈ ವೇಳೆ ಗಣೇಶ್, ನಿಮಗೆ ಕೆಲಸ ಕೊಡಿಸಿದರೆ ಮಾಡುತ್ತೀರಾ ಅಂತಾ ಅಶ್ವೀನ್‌ಗೆ ಕೇಳಿದಾಗ ಖಂಡಿತಾ ಮಾಡುತ್ತೇನೆ ಎಂದಿದ್ದರು. ಹೇಳಿದ ಮಾತಿನಂತೆ ಗಣೇಶ್‌ ನಡೆದುಕೊಂಡಿದ್ದಾರೆ. ಈಗ ಅಶ್ವೀನ್‌ಗೆ ಕೆಲಸ ಸಿಕ್ಕಿರೋದಕ್ಕೆ ನಟಿ ಖುಷಿಯಾಗಿದ್ದಾರೆ. ಹೊಸ ಬದುಕಿಗೆ ಸಾಥ್ ಕೊಟ್ಟಿರುವ ನಟ ಗಣೇಶ್ ಅವರಿಗೆ ನಟಿ ಧನ್ಯವಾದ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]