Tag: ಅಶ್ವಿನಿ ವೈಶ್ಣವ್

  • ವಂದೇ ಭಾರತ್ ರೈಲಿಗೆ ಹೊಸ ಬಣ್ಣ – ಫೋಟೋ ಹಂಚಿಕೊಂಡ ಅಶ್ವಿನಿ ವೈಷ್ಣವ್

    ವಂದೇ ಭಾರತ್ ರೈಲಿಗೆ ಹೊಸ ಬಣ್ಣ – ಫೋಟೋ ಹಂಚಿಕೊಂಡ ಅಶ್ವಿನಿ ವೈಷ್ಣವ್

    ಚೆನ್ನೈ: ದೇಶೀಯ ನಿರ್ಮಿತ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನ (Vande Bharat Express Train) 28ನೇ ರೈಲು ಕೇಸರಿ ಬಣ್ಣದ್ದಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹೊಸ ಬಣ್ಣದೊಂದಿಗೆ ಕಂಗೊಳಿಸುತ್ತಿರೋ ರೈಲಿನ ಫೋಟೋವನ್ನು ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಒಟ್ಟು 25 ರೈಲುಗಳು ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 2 ರೇಕ್‌ಗಳನ್ನು ಸದ್ಯ ಕಾಯ್ದಿರಿಸಲಾಗಿದೆ. ಇದೀಗ 28ನೇ ರೈಲಿನ ಬಣ್ಣವನ್ನು ಪ್ರಾಯೊಗಿಕವಾಗಿ ಬದಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

    ಹೊಸ ಬಣ್ಣದ ವಂದೇ ಭಾರತ್ ರೈಲು ಪ್ರಸ್ತುತ ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿದೆ. ವಂದೇ ಭಾರತ್ ರೈಲುಗಳನ್ನು ತಯಾರಿಸುವ ಕೇಂದ್ರ ಇದಾಗಿದೆ. ಅಶ್ವಿನಿ ವೈಷ್ಣವ್ ಶನಿವಾರ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಭೇಟಿ ನೀಡಿ, ಸುರಕ್ಷತಾ ಕ್ರಮ, ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿನ ಸುಧಾರಣೆಗಳನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಹಂಪಿಯಲ್ಲಿ ಇಂದಿನಿಂದ ಜಿ-20 ಶೃಂಗಸಭೆ

    ಪರಿಶೀಲನೆ ಬಳಿಕ ಅಶ್ವಿನಿ ವೈಷ್ಣವ್, ವಂದೇ ಭಾರತ್ 28ನೇ ರೇಕ್‌ನ ಹೊಸ ಬಣ್ಣ ಭಾರತೀಯ ತ್ರಿವರ್ಣ ಧ್ವಜದಿಂದ ಪ್ರೇರಿತವಾಗಿದೆ ಮಾತ್ರವಲ್ಲದೇ ವಂದೇ ಭಾರತ್ ರೈಲುಗಳಲ್ಲಿ 25 ಸುಧಾರಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಇದು ಮೇಕ್ ಇನ್ ಇಂಡಿಯಾದ ಪರಿಕಲ್ಪನೆಯಾಗಿದೆ, ಎಂದರೆ ನಮ್ಮದೇ ಎಂಜಿನಿಯರ್‌ಗಳು ಇದನ್ನು ಭಾರತದಲ್ಲಿ ವಿನ್ಯಾಸಗೊಳಿಸಿದ್ದಾರೆ. ರೈಲುಗಳ ಕಾರ್ಯಾಚರಣೆಯ ಸಮಯದಲ್ಲಿ ಎಸಿ, ಶೌಚಾಲಯ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕ್ಷೇತ್ರ ಘಟಕಗಳಿಂದ ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸುತ್ತಿದ್ದೇವೆ. ಆ ಎಲ್ಲಾ ಸುಧಾರಣೆಗಳನ್ನು ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಲು ಬಳಸಲಾಗುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇದನ್ನೂ ಓದಿ: ಗುಡ್‌ನ್ಯೂಸ್‌ – 24 ಗಂಟೆಗಳಲ್ಲಿ KRSನಲ್ಲಿ 2.50 ಅಡಿ ನೀರು ಭರ್ತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾಮಾಜಿಕ ಮಾಧ್ಯಮವನ್ನು ಜವಾಬ್ದಾರಿಯುತವಾಗಿಸಲು ಕಾನೂನು ಬದಲಾವಣೆಗೆ ಕೇಂದ್ರ ಯೋಜನೆ

    ಸಾಮಾಜಿಕ ಮಾಧ್ಯಮವನ್ನು ಜವಾಬ್ದಾರಿಯುತವಾಗಿಸಲು ಕಾನೂನು ಬದಲಾವಣೆಗೆ ಕೇಂದ್ರ ಯೋಜನೆ

    ನವದೆಹಲಿ: ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಜವಾಬ್ದಾರಿಯುತವಾಗಿಸಲು ಕಾನೂನು ಬದಲಾವಣೆಗಳನ್ನು ತರಲು ಯೋಜಿಸಲಾಗಿದೆ ಎಂದು ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚು ಜವಾಬ್ದಾರಿಯುತವಾಗಿಸಬೇಕು ಎಂದು ದೇಶದಲ್ಲಿ ಒಮ್ಮತವಿದೆ. ಮೊಬೈಲ್ ಫೋನ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಇಂಟರ್‌ನೆಟ್ ಪರಿವರ್ತಕ ಬದಲಾವಣೆಗಳನ್ನು ಮಾಡಿದೆ. ಆದರೆ ಅವರೂ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

    ಸಾಮಾಜಿಕ ಜಾಲತಾಣಗಳಿಗೆ ಕಾನೂನು ಬದಲಾವಣೆಗಳ ಅಗತ್ಯವಿದೆ, ಅದನ್ನು ನಾವು ಜಾರಿಗೊಳಿಸುತ್ತೇವೆ. ಮಾಧ್ಯಮ ಗುಂಪುಗಳಲ್ಲಿ ಸ್ವಯಂ ನಿಯಂತ್ರಣದ ಅಗತ್ಯವಿದೆ, ಸ್ವಯಂ ನಿಯಂತ್ರಣವನ್ನೂ ಮಾಡಿಸುತ್ತೇವೆ. ಅಗತ್ಯವಿರುವಲ್ಲೆಲ್ಲಾ ನಾವು ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಜವಾಬ್ದಾರಿಯುತವಾಗಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ವರ್ಕ್ ಔಟ್ ಆಯ್ತು ಮೋದಿಯ ಮನ್ ಕೀ ಬಾತ್ ಐಡಿಯಾ – ಎಂ.ಟೆಕ್ ಪದವೀಧರೆಯ ಬಾಳು ಬೆಳಗುತ್ತಿದೆ ಬಾಳೆ ದಿಂಡು

    ಬದಲಾವಣೆ ಏನು?
    ಕೇಂದ್ರ ಸರ್ಕಾರ ಈ ಹಿಂದಿನ ಸಾಮಾಜಿಕ ಮಾಧ್ಯಮದ ನಿಯಮಗಳನ್ನು ಅಂತಿಮಗೊಳಿಸುವಲ್ಲಿ ಕೆಲಸ ಮಾಡುತ್ತಿದೆ. ಹೊಸದಾಗಿ ಜಾರಿಗೆ ತರಲಿರುವ ನಿಯಮಗಳು ಅನಿಯಂತ್ರಿತ ಕಂಟೆಂಟ್ ಮಾಡರೇಶನ್, ನಿಷ್ಟ್ರಿಯತೆ ಅಥವಾ ಯಾವುದೇ ವಿವರಣೆಯಿಲ್ಲದ ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ನಂತಹ ದೊಡ್ಡ ಟೆಕ್ ಕಂಪನಿಗಳು ಮಾಡಿದ ಪೋಸ್ಟ್‌ಗಳನ್ನು ತೆಗೆದು ಹಾಕುವ ನಿರ್ಧಾರದ ವಿರುದ್ಧವಾಗಿದೆ ಹಾಗೂ ಬಳಕೆದಾರರು ಕುಂದುಕೊರತೆಗಳನ್ನು ಎತ್ತಿ ತೋರಿಸುವ ಅವಕಾಶವನ್ನು ಪಡೆಯುತ್ತಾರೆ ಎನ್ನಲಾಗಿದೆ.

    ಈ ತಿಂಗಳ ಆರಂಭದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಾಮಾಜಿಕ ಮಾಧ್ಯಮ ಬಳಕೆದಾರರು ಕಂಪನಿಗಳಿಗೆ ಮಾಡಿದ ದೂರುಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಪಡೆಯುವಂತಹ ಹೊಸ ಕರಡು ನಿಯಮವನ್ನು ಬಿಡುಗಡೆ ಮಾಡಿತು. ಇದರ ಪ್ರಕಾರ ಸಾಮಾಜಿಕ ಮಾಧ್ಯಮಗಳ ನಿರ್ಧಾರಗಳ ವಿರುದ್ಧ ಮೇಲ್ಮನವಿಗೆ ಸಲ್ಲಿಸಲು ಬಳಕೆದಾರರಿಗೆ ಅವಕಾಶ ಒದಗಿಸುತ್ತದೆ. ಪ್ರಸ್ತುತ ಯಾವುದೇ ದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಗಳು ಮೇಲ್ಮನವಿ ಕಾರ್ಯವಿಧಾನವನ್ನು ಹೊಂದಿಲ್ಲ. ಇದನ್ನೂ ಓದಿ: ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲ್ಲ: ಫಾರೂಕ್ ಅಬ್ದುಲ್ಲಾ

    ವರದಿಗಳ ಪ್ರಕಾರ ಈ ಹೊಸ ನಿಯಮ ಜುಲೈ ಕೊನೆಯಲ್ಲಿ ಅಂತಿಮಗೊಳಿಸಲು ಸರ್ಕಾರ ಯೋಜಿಸಿದೆ.

    Live Tv

  • ಒಂದೇ ಹಳಿಯಲ್ಲಿ ಎರಡು ರೈಲು – ಅಪಾಯದಿಂದ ಪಾರಾಗುವ ಹೊಸ ತಂತ್ರಜ್ಞಾನ ಪರೀಕ್ಷೆ ಯಶಸ್ವಿ

    ಲಕ್ನೋ: ಭಾರತೀಯ ರೈಲ್ವೇ ಅಭಿವೃದ್ಧಿ ಪಡಿಸಿದ ಸ್ವಯಂ ಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆ(ಎಟಿಪಿ)ಯ ಹೊಸ ‘ಕವಚ’ ತಂತ್ರಜ್ಞಾನವನ್ನು ಶುಕ್ರವಾರ ಪರೀಕ್ಷಿಸಲಾಯಿತು. ಪರೀಕ್ಷೆಯನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಶ್ಣವ್ ಕೂಲಂಕುಶವಾಗಿ ವೀಕ್ಷಿಸಿ ತಂತ್ರಜ್ಞಾನವನ್ನು ಶ್ಲಾಘಿಸಿದ್ದಾರೆ.

    ಒಂದೇ ಹಳಿಯಲ್ಲಿ ಪರಸ್ಪರ ಮುಖಾಮುಖಿಯಾಗಿ ಚಲಿಸುತ್ತಿರುವ ರೈಲುಗಳನ್ನು ಹೇಗೆ ಸ್ವಯಂ ಚಾಲಿತವಾಗಿ ನಿಯಂತ್ರಣಕ್ಕೆ ತರಬಹುದು ಎಂಬುದನ್ನು ಅಶ್ವಿನಿ ವೈಶ್ಣವ್ ವೀಕ್ಷಿಸಿದ್ದು, ಅದರ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಇನ್ನಿಲ್ಲ

    ಶೂನ್ಯ ಅಪಘಾತಗಳ ಗುರಿಯೊಂದಿಗೆ ನಿರ್ಮಿಸಲಾದ ಕವಚ ತಂತ್ರಜ್ಞಾನವನ್ನು ಶುಕ್ರವಾರ ಸಿಕಂದರಾಬಾದ್‍ನಲ್ಲಿ ನೇರ ಪರೀಕ್ಷೆಗೆ ಒಳಪಡಿಸಲಾಯಿತು. ಅಶ್ವಿನಿ ವೈಷ್ಣವ್ ಅವರಿಗೆ ರೈಲಿನ ಚಾಲಕ ಹಾಗೂ ಸಿಬ್ಬಂದಿ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದರು.

    ಕೇಂದ್ರ ರೈಲ್ವೇ ಸಚಿವ ಇದ್ದ ರೈಲಿನ ಹಳಿಯ ವಿರುದ್ಧ ದಿಕ್ಕಿನಲ್ಲಿ ಇನ್ನೊಂದು ರೈಲು ಬರುತ್ತಿದ್ದು, ಈ ಸಂದರ್ಭದಲ್ಲಿ ರೈಲಿನ ಚಾಲಕ ರೈಲನ್ನು ನಿಲ್ಲಿಸಲು ಪ್ರಯತ್ನ ಪಟ್ಟಿಲ್ಲವೆಂದಾದರೂ ರೈಲು ತಾನಾಗೇ ನಿಲ್ಲುವುದನ್ನು ವೀಡಿಯೋದಲ್ಲಿ ಕಾಣಬಹುದು. ಇದನ್ನೂ ಓದಿ: ರಾಯರ ಪಟ್ಟಾಭಿಷೇಕ: ಮಂತ್ರಾಲಯಕ್ಕೆ ಭೇಟಿ ಕೊಟ್ಟ ಸುದೀಪ್

    ಅಶ್ವಿನಿ ವೈಶ್ಣವ್ ಟ್ವಿಟ್ಟರ್‍ನಲ್ಲಿ ಎಸ್‍ಪಿಎಡಿ ಪರೀಕ್ಷೆ, ರೈಲು ಕೆಂಪು ಸಿಗ್ನಲ್ ದಾಟಲು ಪ್ರಯತ್ನಿಸಿದೆ. ಆದರೆ ಕವಚ ರೈಲನ್ನು ತಡೆಯುತ್ತದೆ ಎಂದು ಬರೆದಿದ್ದಾರೆ.