Tag: ಅಶ್ವನಿ ಕುಮಾರ್

  • ಅಶ್ವನಿ ವೇಗಕ್ಕೆ ಕೊನೆಯ ಸ್ಥಾನಕ್ಕೆ ಜಾರಿದ ಕೋಲ್ಕತ್ತಾ – ಮುಂಬೈಗೆ ಭರ್ಜರಿ ಜಯ

    ಅಶ್ವನಿ ವೇಗಕ್ಕೆ ಕೊನೆಯ ಸ್ಥಾನಕ್ಕೆ ಜಾರಿದ ಕೋಲ್ಕತ್ತಾ – ಮುಂಬೈಗೆ ಭರ್ಜರಿ ಜಯ

    ಮುಂಬೈ: ಚೊಚ್ಚಲ ಪಂದ್ಯವಾಡಿದ ಅಶ್ವನಿ ಕುಮಾರ್‌ (Ashwani Kumar) ಅವರ ಮಾರಕ ಬೌಲಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ (Mumbai Indians) ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕೋಲ್ಕತ್ತಾ (Kolkata Knight Riders) 16.2 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಮುಂಬೈ 12.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 121 ರನ್‌ ಹೊಡೆದು ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿತು. ಇದನ್ನೂ ಓದಿ: ಮುಂಬೈ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ರೋಹಿತ್‌ಗೆ ಇಲ್ಲ ಸ್ಥಾನ

    ಈ ಸೋಲಿನೊಂದಿಗೆ 6ನೇ ಸ್ಥಾನದಲ್ಲಿದ್ದ ಕೋಲ್ಕತ್ತಾ 10ನೇ ಸ್ಥಾನಕ್ಕೆ ಜಾರಿದರೆ, ಕೊನೆಯ ಸ್ಥಾನದಲ್ಲಿದ್ದ ಮುಂಬೈ ಉತ್ತಮ ನೆಟ್‌ ರನ್‌ ರೇಟ್‌ನಿಂದ 6ನೇ ಸ್ಥಾನಕ್ಕೆ ಜಿಗಿದಿದೆ.

    ಸುಲಭ ಸವಾಲನ್ನು ಬೆನ್ನಟ್ಟಿದ ಮುಂಬೈ 13 ರನ್‌ ಗಳಿಸಿದ ರೋಹಿತ್‌ ವಿಕೆಟ್‌ ಆರಂಭದಲ್ಲೇ ಕಳೆದುಕೊಂಡರೂ ರಯಾನ್ ರಿಕಲ್ಟನ್ ಔಟಾಗದೇ 62 ರನ್‌(41 ಎಸೆತ, 4 ಬೌಂಡರಿ, 5 ಸಿಕ್ಸ್‌), ವಿಲ್‌ ಜಾಕ್ಸ್‌ 16 ರನ್‌, ಕೊನೆಯಲ್ಲಿ ಸೂರ್ಯಕುಮಾರ್‌ ಯಾದವ್‌ 27 ರನ್‌(9 ಎಸೆತ, 3 ಬೌಂಡರಿ, 2 ಸಿಕ್ಸ್‌) ನೆರವಿನಿಂದ ಜಯಗಳಿಸಿತು. ಇದನ್ನೂ ಓದಿ: ಐಪಿಎಲ್‌ನಿಂದ ಬ್ಯಾನ್‌ ಮಾಡಿ – ರಿಯಾನ್‌ ಪರಾಗ್‌ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್‌


    ಕೋಲ್ಕತ್ತಾ ಆರಂಭದಲ್ಲೇ 2 ವಿಕೆಟ್‌ ಕಳೆದುಕೊಂಡಿತ್ತು. 74 ರನ್‌ಗಳಿಸುವಷ್ಟರಲ್ಲೇ 6 ಪ್ರಮುಖ ವಿಕೆಟ್‌ ಕಳೆದುಕೊಂಡಿತ್ತು. ಇಂಪ್ಯಾಕ್ಟ್‌ ಪ್ಲೇಯರ್‌ ರಘುವಂಶಿ 26 ರನ್‌, ರಮನ್‌ದೀಪ್‌ ಸಿಂಗ್‌ 22 ರನ್‌ ಹೊಡೆದು ಔಟಾದರು.

    ಐಪಿಎಲ್‌ ಪಾದಾರ್ಪಣೆ ಮಾಡಿದ ಅಶ್ವನಿ ಕುಮಾರ್‌ 3 ಓವರ್‌ ಎಸೆದು 4 ವಿಕೆಟ್‌ ಕಿತ್ತು ಕೋಲ್ಕತ್ತಕ್ಕೆ ದೊಡ್ಡ ಹೊಡೆತ ನೀಡಿದರು. ದೀಪಕ್‌ ಚಹರ್‌ 2 ವಿಕೆಟ್‌ ಕಿತ್ತರೆ ಬೌಲ್ಟ್‌, ದೀಪಕ್‌ ಚಹರ್‌, ಪಾಂಡ್ಯ, ವಿಘ್ನೇಶ್‌ ಪುತೂರ್‌, ಸ್ಯಾಂಟ್ನರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ಕಾಂಗ್ರೆಸ್ ತೊರೆದ ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್

    ಕಾಂಗ್ರೆಸ್ ತೊರೆದ ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್

    ನವದೆಹಲಿ: 46 ವರ್ಷಗಳ ಸುದೀರ್ಘ ಒಡನಾಟದ ನಂತರ ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್ ಮಂಗಳವಾರ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದಾರೆ.

    ಈ ಕುರಿತಂತೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಸುದೀರ್ಘ ಪತ್ರ ಬರೆದ ಅವರು, ನಾನು 46 ವರ್ಷಗಳ ಸುದೀರ್ಘ ಒಡನಾಟದ ನಂತರ ಪಕ್ಷವನ್ನು ತೊರೆಯುತ್ತಿದ್ದೇನೆ ಎಂದು ಭಾವುಕರಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಚಂದನವನದಲ್ಲಿ ಲವ್ಲಿ ವ್ಯಾಲೆಂಟೈನ್ಸ್ ಡೇ – ಅಭಿಮಾನಿಗಳೊಂದಿಗೆ ಹಂಚಿಕೊಂಡ್ರು ಸ್ಪೆಷಲ್ ಫೋಟೋ!

    ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಲ್ಪಿಸಿದ ಉದಾರ ಪ್ರಜಾಪ್ರಭುತ್ವದ ಭರವಸೆಯ ಆಧಾರದ ಮೇಲೆ ಪರಿವರ್ತಕ ನಾಯಕತ್ವದ ಕಲ್ಪನೆಯಿಂದ ಪ್ರೇರಿತವಾದ ಸಾರ್ವಜನಿಕ ಉದ್ದೇಶಗಳನ್ನು ಪೂರ್ವಭಾವಿಯಾಗಿ ಮುಂದುವರಿಸಲು ನಾನು ಆಶಿಸುತ್ತೇನೆ. ಹೀಗಾಗಿ ನೀವು ಕೂಡಾ ಅದನ್ನು ಅನುಸರಿಸಿ. ಮುಂಬರುವ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಸಹಾಯವಾಗುತ್ತದೆ ಎಂದು ಹೇಳಿದರು.

  • ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ನೇಣಿಗೆ ಶರಣು

    ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ನೇಣಿಗೆ ಶರಣು

    ಚಂಡೀಗಢ: ಸಿಬಿಐ ಮಾಜಿ ನಿರ್ದೇಶಕ, ನಾಗಲ್ಯಾಂಡ್ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಶಿಮ್ಲಾದ ಅವರ ನಿವಾಸದಲ್ಲಿ ಬುಧವಾರ ನೇಣು ಬಿಗಿದ ಸ್ಥಿತಿಯಲ್ಲಿ ಅಶ್ವನಿ ಅವರ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಜೀವನದಲ್ಲಿ ತುಂಬಾನೆ ಬೇಸರಗೊಂಡಿದ್ದೇನೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅಶ್ವನಿ ಬರೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಅಶ್ವನಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವಾಕಿಂಗ್ ಹೋಗಿದ್ದರು. ಮನೆಯಲ್ಲಿರುವ ದೇವರ ಕೋಣೆಯಲ್ಲಿ ಅಶ್ವನಿ ಶವ ಪತ್ತೆಯಾಗಿದೆ. ಅವರ ಪತ್ನಿ, ಮಗ ಹಾಗೂ ಮಗಳು ಮನೆಯ ಕೆಳ ಮಹಡಿಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‍ಪಿ ಶಿಮ್ಲಾ ಮೋಹಿತ್, ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವೇ ನಿಖರ ಕಾರಣ ತಿಳಿಯಬಹುದಾಗಿದೆ ಎಂದರು.

    ಅಶ್ವನಿ ಅವರು ಕೆಲ ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ಸಂಬಂಧ ಅವರ ಕುಟುಂಬಸ್ಥರು ಖಚಿತಪಡಿಸಿಲ್ಲ. ಆದರೂ ಘಟನೆ ಸಂಬಂಧ ಎಲ್ಲಾ ಆಯಾಮಗಳನ್ನು ತನಿಖೆ ನಡೆಸಲಾಗುವುದು. ಸಂಜೆ ವಾಕಿಂಗ್ ಹೋಗಿ ಬಂದಿದ್ದ ಅಶ್ವನಿ ಅವರು ಪ್ರಾರ್ಥನೆ ಸಲ್ಲಿಸಲೆಂದು ದೇವರ ಕೋಣೆಗೆ ಹೋಗಿದ್ದರು. ಹೀಗೆ ಹೋದವರು ಕೆಲ ಸಮಯವಾದರೂ ವಾಪಸ್ ಬರದೇ ಇದ್ದಾಗ ಆತಂಕಗೊಂಡ ಕುಟುಂಬಸ್ಥರು ದೇವರ ಕೋಣೆಗೆ ಹೋಗಿ ನೋಡಿದಾಗ ಅಶ್ವನಿ ಅವರ ಶವ ಪತ್ತೆಯಾಗಿದೆ ಎಂದು ಡಿಜಿಪಿ ವಿವರಿಸಿದ್ದಾರೆ.

    ಅಶ್ವನಿಯವರು ಆಗಸ್ಟ್ 2006ರಿಂದ ಜುಲೈ 2008ರವರೆಗೆ ಹಿಮಾಚಲಪ್ರದೇಶದಲ್ಲಿ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. 2013ರಿಂದ 2014ರವರೆಗೆ ನಾಗಲ್ಯಾಂಡ್ ರಾಜ್ಯಪಾಲರಾಗಿ ಅಶ್ವನಿ ಕಾರ್ಯನಿರ್ವಹಿಸಿದ್ದರು.