Tag: ಅಶ್ವಥ್ ನಾರಾಯಣ

  • ಮೂರನೇ ದಿನದ ಡಿಕೆಶಿ ವಿಚಾರಣೆ ಅಂತ್ಯ

    ಮೂರನೇ ದಿನದ ಡಿಕೆಶಿ ವಿಚಾರಣೆ ಅಂತ್ಯ

    – ನಾಳೆ ಮತ್ತೆ ವಿಚಾರಣೆ

    ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮೂರನೇ ದಿನದ ಜಾರಿ ನಿರ್ದೇಶನಾಲಯದ ವಿಚಾರಣೆ ಅಂತ್ಯವಾಗಿದೆ.

    ಮೂರನೇ ದಿನದ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ಬಳಿಕ ಹೊರ ಬಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿ ನಾಯಕರು ಹಾಗೂ ಡಿಸಿಎಂ ಅಶ್ವಥ್ ನಾರಾಯಣ ವಿರುದ್ಧ ಕಿಡಿಕಾರಿದ್ದಾರೆ. ದೆಹಲಿಯ ಇಡಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದ ಉಪ ಮುಖ್ಯಮಂತ್ರಿಗಳು ಎಲ್ಲ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಅಶ್ವಥ್ ನಾರಾಯಣ ಬಹಳ ದೊಡ್ಡವರು. ನನಗೆ ಯಾವ ಅನುಕಂಪವೂ ಬೇಡ. ನನಗೆ ಜನ್ಮ ನೀಡಿದ ತಂದೆ ಕೆಂಪೇಗೌಡ ಅವರ ಸಿಗಲಿ ಅಂತ ವರ್ಷಕ್ಕೆ ಒಮ್ಮೆ ಪೂಜೆ ಮಾಡುತ್ತೇವೆ. ಅಂತಹ ಧರ್ಮದಲ್ಲಿ ನಾವು ಹುಟ್ಟಿದ್ದೇವೆ. ಆ ಧರ್ಮದ ಆಚರಣೆಗೆ ಅಶ್ವಥ್ ನಾರಾಯಣ ಪಟಾಲಂ ಅವಕಾಶ ಕೊಡಲಿಲ್ಲ ಎಂದು ಕಿಡಿಕಾರಿದರು.

    ಹೆದರಿಕೊಂಡು ಹೋಗುವ ರಣಹೇಡಿ ನಾನಲ್ಲ. ಈ ಹಿಂದೆ ಐಟಿ ದಾಳಿಗೂ ನಾನು ಹೆದರಲಿಲ್ಲ. ರಾಜಕಾರಣ ಮಾಡಲಿಕ್ಕೆ ಬೆಂಗಳೂರಿಗೆ ಬಂದವನು ನಾನು. ಅವರು ಏನೇ ಮಾಡಿದರೂ ನಾನು ಎದುರಿಸಲು ಸಿದ್ಧನಿದ್ದೇನೆ ಎಂದು ಅಶ್ವಥ್ ನಾರಾಯಣ ವಿರುದ್ಧ ಕಿಡಿಕಾರಿದರು.

    ವಿಚಾರಣೆಗೂ ಮುನ್ನ ಕಣ್ಣೀರು ಹಾಕಿರುವ ಕುರಿತು ಮಾಧ್ಯಮಗಳು ಕೇಳುತ್ತಿದ್ದಂತೆ ಗರಂ ಆದ ಮಾಜಿ ಸಚಿವರು, ರೀ… ನಾವೇನ್ ಮನುಷ್ಯರು ಅಲ್ವೇನ್ರಿ. ನಾವು ರೇಪ್ ಮಾಡಿದ್ದೇವಾ? ದರೋಡೆ ಮಾಡಿದ್ದೇವಾ? ಜಮೀನು ಒತ್ತೂವರಿ ಮಾಡಿದ್ದೇನಾ? ಇಲ್ಲಾ ಅಲ್ವಾ. ನಾನು ಎಲ್ಲ ದಾಖಲೆ ನೀಡುತ್ತೇನೆ. ಲಂಚ ಪಡೆದಿದ್ದರ ಬಗ್ಗೆ ಯಾರಾದರೂ ಎಂದು ಹೇಳಿದರು.

  • ಬೆಂಗಳೂರು ಗ್ರಾಮಾಂತರಕ್ಕೆ ಅಶ್ವಥ್ ನಾರಾಯಣ

    ಬೆಂಗಳೂರು ಗ್ರಾಮಾಂತರಕ್ಕೆ ಅಶ್ವಥ್ ನಾರಾಯಣ

    ಬೆಂಗಳೂರು: ಕೊನೆಗೂ ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಶ್ವಥ್ ನಾರಾಯಣ ಆಯ್ಕೆಯಾಗಿದ್ದಾರೆ.

    ಅಳೆದೂ ತೂಗಿ ಅಭ್ಯರ್ಥಿ ಹಾಕಿರುವ ಕೇಸರಿ ಪಾಳಯ ಮಗಳಿಗೆ ಟಿಕೆಟ್ ನೀಡುವಂತೆ ಕೇಳಿದ್ದ ಸಿ.ಪಿ ಯೋಗೇಶ್ವರ್ ಬೇಡಿಕೆಯನ್ನ ತಳ್ಳಿ ಹಾಕಿದೆ. ಅಷ್ಟೇ ಅಲ್ಲದೇ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ಅವರಿಗೂ ಟಿಕೆಟ್ ನಿರಾಕರಿಸಿದೆ.

    ಇಬ್ಬರ ನಡುವಿನ ಜಟಾಪಟಿಯಲ್ಲಿ ಮೂರನೇಯವನಿಗೆ ಲಾಭ ಎನ್ನುವಂತೆ ಅಶ್ವಥ್ ನಾರಾಯಣಗೆ ಬಿಜೆಪಿ ಮಣೆ ಹಾಕಿದೆ. ಇನ್ನೂ ಇಂದು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿರುವುದರಿಂದ ಮಧ್ಯಾಹ್ನ ಅಶ್ವಥ್ ನಾರಾಯಣ್ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.

    ಈ ಹಿಂದೆಯೇ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಅವರು ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಾವು ಸುತಾರಾಂ ಸಿದ್ಧವಿಲ್ಲ. ತಮಗೆ ರಾಷ್ಟ್ರ ರಾಜಕಾರಣಕ್ಕೆ ಹೋಗಲು ಇಷ್ಟವಿಲ್ಲ. ಕ್ಷೇತ್ರದ ಟಿಕೆಟ್ ನೀಡುವುದಾದರೆ ನನ್ನ ಮಗಳಿಗೆ ಕೊಡಿ. ಇಲ್ಲವಾದರೆ ಬೇರೆ ಯಾರಿಗಾದ್ರೂ ಕೊಡಿ ತಮ್ಮ ಅಭ್ಯಂತರ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.

  • ನಿನ್ನಂಥ ಕ್ಷುಲ್ಲಕ, ಯೋಗ್ಯವಲ್ಲದ ವ್ಯಕ್ತಿ ಪಕ್ಷಕ್ಕೆ ಬೇಡ: ಈಶ್ವರಪ್ಪ ವಿರುದ್ಧ ಏಕವಚನದಲ್ಲಿ ಅಶ್ವಥ್ ನಾರಾಯಣ ವಾಗ್ದಾಳಿ

    ನಿನ್ನಂಥ ಕ್ಷುಲ್ಲಕ, ಯೋಗ್ಯವಲ್ಲದ ವ್ಯಕ್ತಿ ಪಕ್ಷಕ್ಕೆ ಬೇಡ: ಈಶ್ವರಪ್ಪ ವಿರುದ್ಧ ಏಕವಚನದಲ್ಲಿ ಅಶ್ವಥ್ ನಾರಾಯಣ ವಾಗ್ದಾಳಿ

    ಬೆಂಗಳೂರು: ನೀನು ಪಕ್ಷದಲ್ಲಿ ಇಷ್ಟು ದೊಡ್ಡವನಾಗಿದ್ದು ಹೇಗೆ? ಬೆಳೆದು ಬಂದಿದ್ದು ಹೇಗೆ ಅಂತ ಯೋಚಿಸು ಎಂದು ಈಶ್ವರಪ್ಪ ವಿರುದ್ಧ ಶಾಸಕ ಅಶ್ವಥ್ ನಾರಾಯಣ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ತುಮಕೂರು ಜಿಲ್ಲೆಯ ಬಿಜೆಪಿ ಪಕ್ಷದ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿದ್ದ ‘ಸಂಘಟನೆ ಉಳಿಸಿ ಸಮಾವೇಶ’ದಲ್ಲಿ ಬಿಎಸ್ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಕ್ಕೆ ಮಲ್ಲೇಶ್ವರಂ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಎಸ್‍ವೈ ಬಣ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಶ್ವಥ್ ನಾರಾಯಣ, ಯಾರು ಪಕ್ಷದಲ್ಲಿ ಯಡಿಯೂರಪ್ಪ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೋ ಅವರು ಪಕ್ಷಕ್ಕೆ ಬೇಕಿಲ್ಲ. ನಿನ್ನಂಥ ಕ್ಷುಲ್ಲಕ, ಯೋಗ್ಯವಲ್ಲದ ವ್ಯಕ್ತಿ ಪಕ್ಷಕ್ಕೆ ಬೇಡ. ನೀನು ಪಕ್ಷದಲ್ಲಿ ಇಷ್ಟು ದೊಡ್ಡವನಾಗಿದ್ದು ಹೇಗೆ? ಬೆಳೆದು ಬಂದಿದ್ದು ಹೇಗೆ ಅಂತ ಯೋಚಿಸು ಎಂದು ಪ್ರಶ್ನಿಸಿ ಕಿಡಿಕಾರಿದರು.

    ಅತೃಪ್ತರ ಸಭೆ ನಡೆದಿದ್ದು ಖಂಡನೀಯವಾಗಿದ್ದು, ಪಕ್ಷದ ಸಂಘಟನೆಯಲ್ಲಿ ಇಂತಹ ಸಭೆಗಳು ಸರಿಯಲ್ಲ. ಪಕ್ಷ ಸಂಘಟನೆ ಬಗ್ಗೆ ನಾವೆಲ್ಲ ಶ್ರಮಿಸುತ್ತಿದ್ದೇವೆ. ಆದರೆ ಈ ಅತೃಪ್ತರು ಪಕ್ಷದ ಸಂಘಟನೆ ಹಾಳು ಮಾಡುತ್ತಿದ್ದಾರೆ. ಕೂಡಲೇ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರು ವಿರುದ್ಧ ಕ್ರಮ ಕೈಗೊಳ್ಳಬೇಕು. ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡವರಿಗೆ ವಿಪಕ್ಷ ನಾಯಕ ಸ್ಥಾನ ಕೊಟ್ಟಿದ್ದು ನಮಗೆ ಅಗೌರವ. ಯೋಗ್ಯತೆ ಗೊತ್ತಿದೆ, ಕೂಡಲೇ ಈಶ್ವರಪ್ಪ ಅವರನ್ನ ಪಕ್ಷದಿಂದ ಕಿತ್ತು ಹಾಕಲಿ ಎಂದು ಅಶ್ವಥನಾರಾಯಣ ಆಗ್ರಹಿಸಿದರು.

    ಸಂಸದ ಪಿ.ಸಿ.ಮೋಹನ್ ಮಾತನಾಡಿ ಈಶ್ವರಪ್ಪನವರು ನಾಲ್ಕು ಗೋಡೆಗಳ ಮಧ್ಯೆ ಸಮಸ್ಯೆ ಬಗೆಹರಿಸಿಕೊಳ್ಳಬೇಕಿತ್ತು. ಈಶ್ವರಪ್ಪ ಕರೆದಿದ್ದ ಸಭೆಗೆ ಸಾವಿರ ಜನ ಇರಲಿಲ್ಲ ಬಿಎಸ್‍ವೈ ಸಭೆ ಕರೆದ್ರೆ 2 ಲಕ್ಷ ಜನ ಬರುತ್ತಾರೆ. ಇದು ಪಕ್ಷ ವಿರೋಧಿ ಚಟುವಟಿಕೆ ಎಂದು ಟೀಕಿಸಿದರು.

    ಸುದ್ದಿಗೋಷ್ಠಿಯಲ್ಲಿ ಮುನಿರಾಜು, ನಾರಾಯಣಸ್ವಾಮಿ, ಪರಿಷತ್ ಸದಸ್ಯರಾದ ಪುಟ್ಟಸ್ವಾಮಿ, ಲೆಹರ್ ಸಿಂಗ್, ಮಾಜಿ ಶಾಸಕ ಕಟ್ಟಾ ಸುಬ್ರಮಣ್ಯನಾಯ್ಡು, ಬೆಂಗಳೂರು ನಗರಾಧ್ಯಕ್ಷ ಸದಾಶಿವ ಉಪಸ್ಥಿತರಿದ್ದರು.

    ಇದನ್ನೂ ಓದಿ: ಸಮಸ್ಯೆ ಪರಿಹಾರಕ್ಕೆ ಬಿಎಸ್‍ವೈಗೆ ಭಿನ್ನರಿಂದ ಡೆಡ್‍ಲೈನ್ ಫಿಕ್ಸ್

    https://www.youtube.com/watch?v=nFYZuu2deRU

    ಇದನ್ನೂ ಓದಿ: ನಾವು ತಂದೆ, ತಾಯಿಗೆ ಹುಟ್ಟಿದ ಜನ. ನಾವು ಪಕ್ಷ ಬಿಡಲ್ಲ, ಬೇರೆ ಪಕ್ಷ ಕಟ್ಟಲ್ಲ: ಬಿಎಸ್‍ವೈ ವಿರುದ್ಧ ಈಶ್ವರಪ್ಪ ಗುಡುಗು
    ಇದನ್ನೂ ಓದಿ: ಬಿಜೆಪಿ ಸಂಘಟನಾ ಸಮಾವೇಶದಲ್ಲಿ ಬಿಎಸ್‍ವೈ-ಈಶ್ವರಪ್ಪ ಬೆಂಬಲಿಗರ ಮಾರಾಮಾರಿ: ವಿಡಿಯೋ ನೋಡಿ

    https://www.youtube.com/watch?v=FnDvcFgKDoQ