Tag: ಅಶ್ವಥ್ ನಾರಾಯಣ್

  • ಬಿಜೆಪಿ ಶಾಸಕ ಮುನಿರತ್ನ ಬಂಧನಕ್ಕೆ ಕೇಸರಿ ಕಲಿಗಳು ಕೆಂಡ – ಸರ್ಕಾರದ ವಿರುದ್ಧ ಅಶ್ವಥ್‌ ನಾರಾಯಣ್‌ ತೀವ್ರ ವಾಗ್ದಾಳಿ

    ಬಿಜೆಪಿ ಶಾಸಕ ಮುನಿರತ್ನ ಬಂಧನಕ್ಕೆ ಕೇಸರಿ ಕಲಿಗಳು ಕೆಂಡ – ಸರ್ಕಾರದ ವಿರುದ್ಧ ಅಶ್ವಥ್‌ ನಾರಾಯಣ್‌ ತೀವ್ರ ವಾಗ್ದಾಳಿ

    – ನಾಗಮಂಗಲ ಗಲಭೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲು ಆಗ್ರಹ

    ಬೆಂಗಳೂರು: ಶಾಸಕ ಮುನಿರತ್ನ (Munirathna) ಬಂಧನವನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಸಂವಿಧಾನ ಪಾಲನೆ ಆಗಿಲ್ಲ ಅಂತಾ ಕಿಡಿಕಾರಿದ್ದಾರೆ ಅಶ್ವಥ್‌ ನಾರಾಯಣ್‌ (Ashwath Narayan), ರವಿಕುಮಾರ್, ಸಿ.ಟಿ ರವಿ ಸೇರಿದಂತೆ ಹಲವು ನಾಯಕರು ಖಂಡಿಸಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿಂದು (Bengaluru) ಮಾತನಾಡಿದ ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್, ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಯಾರೇ ತಪ್ಪು ಮಾಡಿದ್ರು ಕ್ರಮ ಆಗಬೇಕು. ಆದರೆ ಈ ಸರ್ಕಾರದಲ್ಲಿ ಏನು ಕಾನೂನು ಪಾಲನೆ ಆಗಿದೆ? ಇವರು ಕಾನೂನಿಗೆ ಬೆಲೆ ಕೊಡ್ತಿದ್ದಾರಾ? ಅಂತಾ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: Democracy Day | ಅತೀ ಉದ್ದದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಸಿಎಂ ಚಾಲನೆ 

    ಕಲಬುರಗಿಯಲ್ಲಿ ಪಿಎಸ್‌ಐ ಪರಶುರಾಮ (PSI Parashuram) ಆತ್ಮಹತ್ಯೆ ಮಾಡಿಕೊಂಡರು. ಅಲ್ಲಿನ ಶಾಸಕ, ಶಾಸಕನ ಮಗನ ಬಂಧನ ಆಗಿದೆಯಾ? ವಿಜಯಪುರದಲ್ಲೂ ಕೃಷಿ ಸಚಿವರ ಮೇಲೆ ಆಪಾದನೆ ಮಾಡಿ ಆತ್ಮಹತ್ಯೆ ಆಗಿದೆ ಇದರ ಕ್ರಮ ಆಗಿದೆಯಾ? ಶಿವಮೊಗ್ಗದಲ್ಲಿ ಆತ್ಮಹತ್ಯೆ ಹತ್ಯೆ ಆಗಿದೆ, ಕ್ರಮ ಆಗಿದೆಯಾ? ಸರಣಿ ಪ್ರಶ್ನೆಗಳನ್ನ ಸರ್ಕಾರದ ಮುಂದಿಟ್ಟರು. ಇದನ್ನೂ ಓದಿ: ಶಾಸಕ ಮುನಿರತ್ನ ಬಂಧನ ಪ್ರಕರಣ – ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ: ಡಿಕೆ ಸುರೇಶ್‌

    ಇನ್ನೂ ಎಂಎಲ್‌ಸಿ ರವಿಕುಮಾರ್ (Ravikumar) ಮಾತನಾಡಿ, ಮುನಿರತ್ನ ಬಂಧನ ಪ್ರಕರಣದಲ್ಲಿ ಪಕ್ಷದ ಅಧ್ಯಕ್ಷರು, ವಿಪಕ್ಷ ನಾಯಕರು ಚರ್ಚೆ ಮಾಡುತ್ತಾರೆ. ನೋಟಿಸ್‌ ಅಂತೂ ಬಿಜೆಪಿ ಜಾರಿ ಮಾಡಿದೆ. ಆಡಿಯೋ ಅವರದ್ದೇನಾ? ಕಟ್ ಅಂಡ್ ಪೇಸ್ಟ್ ಆಗಿದ್ಯಾ? ಅಥವಾ ಕಾಂಗ್ರೆಸ್‌ನವರೇ ಸೃಷ್ಟಿ ಮಾಡಿದ್ರಾ? ಅಂತಾ ಗೊತ್ತಾಗಬೇಕು. ಬಿಜೆಪಿ ಶಾಸಕರನ್ನು ಅರೆಸ್ಟ್ ಮಾಡ್ತೀರಿ, ಕಾಂಗ್ರೆಸ್ ಶಾಸಕರನ್ನು ಮೆರೆಯಲು ಬಿಡುತ್ತೀರಾ? ಎಂದು ಪ್ರಶ್ನಿಸಿದ ಅವರು, ನಾಗಮಂಗಲ ಗಲಭೆ ಪ್ರಕರಣ, ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ‌, ಮುನಿರತ್ನ ಬಂಧನ ವಿಚಾರಗಳಲ್ಲಿ ವಿಪಕ್ಷವನ್ನು ಸರ್ಕಾರ ಮಾತುಕತೆಗೆ ಕರೆಯಬೇಕು ಎಂದು ಒತ್ತಾಯಿಸಿದರು.

    ನಾಗಮಂಗಲ ಗಲಭೆ ಕೇಸ್‌ ತನಿಖೆಯನ್ನು ಎನ್‌ಐಎಗೆ ವಹಿಸಿ:
    ಇದೇ ವೇಳೆ ನಾಗಮಂಗಲ ಗಲಭೆ ಪ್ರಕರಣದ ತನಿಖೆಯನ್ನ ಎನ್‌ಐಎಗೆ ವಹಿಸಬೇಕು ಅಂತ ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ ಅವರು ಆಗ್ರಹಿಸಿದರು. ಇದನ್ನೂ ಓದಿ: ಪರಪ್ಪನ ಅಗ್ರಹಾರಕ್ಕೆ ಏಕಾಏಕಿ ಸಿಸಿಬಿ ದಾಳಿ: 18 ಮೊಬೈಲ್, ಮಾದಕ ವಸ್ತು, ಹಣ ಸೀಜ್

    ರಾಜ್ಯ ಸರ್ಕಾರದ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಕಾಂಗ್ರೆಸ್ ಕಾನೂನು ನಿರ್ವಹಣೆ ಮಾಡೋದ್ರಲ್ಲಿ ವಿಫಲವಾಗಿದೆ. ನಾಗಮಂಗಲ ವಿಚಾರವಾಗಿ ನನ್ನ ನೇತೃತ್ವದಲ್ಲಿ ಸತ್ಯ ಸಂಶೋಧನೆಗಾಗಿ ಒಂದು ಕಮಿಟಿ ಮಾಡಲಾಗಿದೆ. ಸತ್ಯ ಶೋಧನೆ ಮಾಡಲು ಅಲ್ಲಿಗೆ ಭೇಟಿ ನೀಡಿ ಜನರಿಂದ ಮಾಹಿತಿ ಪಡೆಯುತ್ತೇವೆ. ಆದ್ರೆ ಆಡಳಿತದಲ್ಲಿ ಸ್ಪಷ್ಟತೆ ಇಲ್ಲದ ಕಾರಣ ರಾಜ್ಯದಲ್ಲಿ ಭಯದ ವಾತಾವರಣ ಉಂಟಾಗಿದೆ. ಗಣೇಶ ಹಬ್ಬ ಆಚರಣೆ ಮಾಡೋದು ನಮ್ಮ ಸಂಸ್ಕೃತಿ. ಇದಕ್ಕೆ ಎಲ್ಲರೂ ಸಪೋರ್ಟ್ ಮಾಡಬೇಕು. ಈದ್ ಮಿಲಾದ್ ಇದೆ ಎಂದು ಗಣೇಶ ಇಡಲು ಕೆಲವು ಕಡೆ ಬಿಟ್ಟಿಲ್ಲ ಅಂತಾ ಆರೋಪಿಸಿದರು.

  • ಇಡಿ ಚಾರ್ಜ್ ಶೀಟ್‌ನಲ್ಲಿ ನಾಗೇಂದ್ರ ಹೆಸರು ಇರುವುದಕ್ಕೆ ಸಿಎಂ ಹೊಣೆ ಹೊರಬೇಕು: ಅಶ್ವಥ್ ನಾರಾಯಣ್

    ಇಡಿ ಚಾರ್ಜ್ ಶೀಟ್‌ನಲ್ಲಿ ನಾಗೇಂದ್ರ ಹೆಸರು ಇರುವುದಕ್ಕೆ ಸಿಎಂ ಹೊಣೆ ಹೊರಬೇಕು: ಅಶ್ವಥ್ ನಾರಾಯಣ್

     ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಪ್ರಮುಖ ಪಾತ್ರದ ಬಗ್ಗೆ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಆಗಿರುವುದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಹೊಣೆ ಹೊರಬೇಕು ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (Ashwath Narayan) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಂದೇಹವೇ ಬೇಡ. ಈ ಬಗ್ಗೆ ನಾವು ಮೊದಲಿನಿಂದ ಹೇಳಿದ್ದೇವೆ. ಇದಕ್ಕೆ ಸಿದ್ದರಾಮಯ್ಯ ಅವರು ಹೊಣೆ ಹೊರಬೇಕು. ಆರ್ಥಿಕ ಇಲಾಖೆ ಅವರ ಕೈಯಲ್ಲಿದೆ. ಚುನಾವಣೆಗೆ ಹಣ ಬಳಕೆ ಆಗಿದೆ ಎಂದರೆ ಇದರ ಹಿಂದೆ ಕಾಂಗ್ರೆಸ್ (Congress) ಹೈಕಮಾಂಡ್ ಇದೆ ಎಂದು ಆರೋಪಿಸಿದರು. ಇದನ್ನೂ ಓದಿ: ಸಿಎಂ ರಾಜೀನಾಮೆ ನಿಶ್ಚಿತ, ಖಾಲಿಯಾಗುವ ಸ್ಥಾನಕ್ಕೆ ಹಗ್ಗಜಗ್ಗಾಟ: ವಿಜಯೇಂದ್ರ ಟಾಂಗ್

    ಚಂದ್ರಶೇಖರ್ ಆತ್ಮಹತ್ಯೆ ಪತ್ರದಲ್ಲಿ ಸ್ಪಷ್ಟವಾಗಿ ಇತ್ತು. ನಾಗೇಂದ್ರ ನಿರ್ದೇಶನದಂತೆಯೇ ಆಗಿದೆ. ಚುನಾವಣೆ ಬಳಿಕ ಈ ಬಗ್ಗೆ ಸ್ಪಷ್ಟವಾಗಿ ಕಂಡಿದೆ. ಇಡಿ ಚಾರ್ಜ್ ಶೀಟ್ ಬಹಳ ಸ್ಪಷ್ಟವಾಗಿ ಹೇಳಿದೆ.ಹೆಚ್ಚಿನ ತನಿಖೆ ಆದಾಗ ಪ್ರಮುಖ ವ್ಯಕ್ತಿಗಳು ಹೊರ ಬರುತ್ತಾರೆ. ನೇರವಾಗಿ ಖಜಾನೆಯಿಂದಲೇ ಹಣ ಹೋಗಿರೋದು ಇದೇ ಮೊದಲು ಅನಿಸುತ್ತದೆ. ಹಣಕಾಸು ಇಲಾಖೆ ಗೊತ್ತಿಲ್ಲದೇ ಇದು ನಡೆದಿಲ್ಲ ಎಂಬುದು ಗೊತ್ತಾಗುತ್ತಿದೆ. ಹಿಂದೆ ಕೆವಲ ಆರೋಪ ಆಗಿತ್ತು. ಈಗ ಸ್ಪಷ್ಟವಾಗುತ್ತಿದೆ. ಚಂದ್ರಶೇಖರ್ ಆತ್ಮಹತ್ಯೆ ಡೆತ್ ನೋಟಲ್ಲಿ ಹಣವನ್ನ ಟ್ರಾನ್ಸ್ಫರ್ ಮಾಡಿರುವುದು ಎಲೆಕ್ಷನ್‌ಗೆ ಬಳಕೆ ಆಗಿರೋದು ಬಹಳ ಸ್ಪಷ್ಟವಾಗಿದೆ ಎಂದರು. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ ಅನುದಾನವನ್ನು ಕೇಂದ್ರ ತಕ್ಷಣವೇ ಬಿಡುಗಡೆಗೊಳಿಸಲಿ : ಎಚ್.ಕೆ ಪಾಟೀಲ್

    ರಾಜ್ಯ ಸರ್ಕಾರ ವಿಫಲವಾಗಿದೆ. ಎಸ್‌ಐಟಿ ಮೂಲಕ ಎಫ್‌ಐಆರ್ ಕೂಡ ದಾಖಲಿಸಿರಲಿಲ್ಲ. ಇನ್ನೂ ಮತ್ತಷ್ಟು ವ್ಯಕ್ತಿಗಳ ಹೆಸರು ಹೊರಗೆ ಬರುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದ ಮೇಲೆ ಆಪಾದನೆ ಇದೆ. ಅಂದು, ಇಂದು, ಮುಂದೆ ಕೂಡ ಹಣ ಬಳಕೆ ಬಗ್ಗೆ ಆಪಾದನೆ ಮಾಡುತ್ತೇವೆ. 100% ಪೇಮೆಂಟ್ ಆಗಿದೆ. ಖಜಾನೆ ಮೂಲಕ ಅಕೌಂಟಿಗೆ ಹೋಗಿದ್ರೆ, ಇದೇ ಇತಿಹಾಸದಲ್ಲಿ ಮೊದಲು. ಹಣಕಾಸು ಇಲಾಖೆ ಸಹಕಾರ ಇಲ್ಲದೆ ಇದು ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವೃಷಭಾವತಿ ಏತ ನೀರಾವರಿ ಯೋಜನೆ ಕಾಮಗಾರಿ ಚುರುಕುಗೊಳಿಸಲು ಸಚಿವ ಎನ್.ಎಸ್ ಬೋಸರಾಜು ಸೂಚನೆ

    ಎನ್‌ಐಎ ಚಾರ್ಜ್ ಶೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಭಯೋತ್ಪಾದಕ ತಂಡಗಳು ಇಡೀ ದೇಶದ ಶಾಂತಿಯನ್ನ ಕದಡಬೇಕು ಎಂದು ದೇಶದ ಅಖಂಡತೆ, ಏಕತೆಗೆ ದುಡಿಯುತ್ತಿರುವ ಪಕ್ಷವನ್ನ ಟಾರ್ಗೆಟ್ ಮಾಡಿದೆ. ಘಟನೆ ನಡೆದಾಗ ವ್ಯವಹಾರದಲ್ಲಿ ದ್ವೇಷ ಇರಬೇಕು ಎಂದು ಕಾಂಗ್ರೆಸ್‌ನವರು ಹೇಳಿದರು. ಅವರ ಮೇಲೆ ಮೃದು ಧೋರಣೆ, ತುಷ್ಟೀಕರಣ ಮಾಡುವ ಕೆಲಸ ಆಗುತ್ತಿದೆ. ದೇಶದ ಭದ್ರತೆಗೆ ಇದು ಮಾರಕ ಆಗಲಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮುಂದಿನ ಕಾನೂನು ಹೋರಾಟದ ಬಗ್ಗೆ ಪತ್ನಿ ಜೊತೆ ಚರ್ಚೆ – ಬುಧವಾರ ಜೈಲಿಗೆ ಬರುವಂತೆ ಹೇಳಿದ ದರ್ಶನ್‌

  • ಬೆಲೆ ಏರಿಕೆ ಕೊಡುಗೆ, ಹಣದುಬ್ಬರ ಏರಿಕೆ – ಇದು ಕಾಂಗ್ರೆಸ್ ಗ್ಯಾರಂಟಿ ಎಂದ ಅಶ್ವಥ್ ನಾರಾಯಣ್

    ಬೆಲೆ ಏರಿಕೆ ಕೊಡುಗೆ, ಹಣದುಬ್ಬರ ಏರಿಕೆ – ಇದು ಕಾಂಗ್ರೆಸ್ ಗ್ಯಾರಂಟಿ ಎಂದ ಅಶ್ವಥ್ ನಾರಾಯಣ್

    ಬೆಂಗಳೂರು: ರಾಜ್ಯದ ಕಾಂಗ್ರೆಸ್ (Congress) ಪಕ್ಷ, ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಬೆಲೆ ಏರಿಕೆಯ (Price Hike) ಕೊಡುಗೆಯನ್ನು ವರ್ಷದುದ್ದಕ್ಕೂ ಜನರಿಗೆ ನೀಡಿದೆ ಎಂದು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ (CN Ashwath Narayan) ಕಿಡಿಕಾರಿದ್ದಾರೆ.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜನರ ರಕ್ತ ಹೀರುವುದು, ಬೆಲೆ ಏರಿಕೆಯ ಬರೆ ಎಳೆಯುವುದೇ ಈ ಸರ್ಕಾರದ ಸಾಧನೆ ಎಂದು ಟೀಕಿಸಿದರು. ಬೆಲೆ ಏರಿಕೆ ಮತ್ತು ಹಣದುಬ್ಬರದ ಗ್ಯಾರಂಟಿಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಸಿಎಂ ಭೇಟಿಯಾಗಿ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿಸುವಂತೆ ಪೋಷಕರು ಮನವಿ

    ಹೈನುಗಾರರಿಗೆ ಹಾಲಿನ ಸಬ್ಸಿಡಿ ನೀಡಿಲ್ಲ. ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡಬೇಕಾದ ಹಣ ನೀಡುತ್ತಿಲ್ಲ. ಬರ ನಿರ್ವಹಣೆಯಲ್ಲಿ ಸರ್ಕಾರ ತನ್ನ ಪಾಲಿನ ಹಣವನ್ನೂ ನೀಡಿಲ್ಲ. ರೈತರ ಮೇಲೆ ಬಿತ್ತನೆ ಬೀಜದ ದರದಿಂದ ಆರಂಭಿಸಿ ವಿದ್ಯುತ್ತಿನವರೆಗೆ, ನೀರಿನ ದರವನ್ನೂ ಹೆಚ್ಚಿಸಿಕೊಂಡು ಬರುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಕುಮಾರಸ್ವಾಮಿಗೂ ಮೊದಲು ಚನ್ನಪಟ್ಟಣ ನೋಡಿದವನು ನಾನು: ಡಿಕೆಶಿ

    ಅರ್ಧ ಲೀಟರ್ ಹಾಲಿಗೂ 2 ರೂ., ಒಂದು ಲೀಟರ್ ಹಾಲಿಗೂ 2 ರೂ. ದರ ಏರಿಸಿದೆ. ಇದು ಬಡವರಿಗೆ ದೊಡ್ಡ ಹೊಡೆತ ಕೊಟ್ಟಂತಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುವ ಕೆಲಸವನ್ನು ಬಹಳ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರ್ಕಾರ ಜನವಿರೋಧಿ, ಇದು ಅಭಿವೃದ್ಧಿ ಶೂನ್ಯ ಸರ್ಕಾರ. ಬಿಜೆಪಿ ಈ ಬೆಲೆ ಹೆಚ್ಚಳವನ್ನು ತೀವ್ರವಾಗಿ ಖಂಡಿಸುತ್ತದೆ. ಕೆಎಂಎಫ್, ಸರ್ಕಾರದ ಭ್ರಷ್ಟಾಚಾರವನ್ನು ನಿಯಂತ್ರಿಸಬೇಕು. ಜನರು ನಿಮಗೆ ಆಶೀರ್ವಾದ ಮಾಡಿದ್ದಾರೆ. ಜನರಿಗೆ ಕಿರುಕುಳ, ಹಿಂಸೆ ಕೊಡುವುದು ಸಲ್ಲದು. ತೆರಿಗೆಯ ಬರೆ ಎಳೆಯಬೇಡಿ. ಅಧಿಕಾರವನ್ನು ಪ್ರಾಮಾಣಿಕವಾಗಿ, ಜನಪರ ಆಡಳಿತ ಕೊಡಬೇಕು ಎಂದು ಆಗ್ರಹಿಸಿದರು. ಅದರ ಬದಲು, ವಾಲ್ಮೀಕಿ ನಿಗಮ ಸೇರಿ, ಎಲ್ಲ ಇಲಾಖೆಗಳಲ್ಲಿ ಲೂಟಿ ನಡೆದಿದೆ ಎಂದು ಹೇಳಿದರು. ಇದನ್ನೂ ಓದಿ: ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ: ಚಲುವರಾಯಸ್ವಾಮಿ

  • ಕುಕ್ಕರ್, ತವಾ ಏನೇ ಹಂಚಿದ್ರೂ ವಿಸಿಲ್ ಕೂಗೋದು ಮಾತ್ರ ಮೋದಿ: ಅಶ್ವಥ್ ನಾರಾಯಣ್

    ಕುಕ್ಕರ್, ತವಾ ಏನೇ ಹಂಚಿದ್ರೂ ವಿಸಿಲ್ ಕೂಗೋದು ಮಾತ್ರ ಮೋದಿ: ಅಶ್ವಥ್ ನಾರಾಯಣ್

    ಬೆಂಗಳೂರು: ಯಾರು ಕುಕ್ಕರ್, ತವಾ ಏನೇ ಹಂಚಿದ್ರೂ, ವಿಸಿಲ್ ಕೂಗೋದು ಮಾತ್ರ ಮೋದಿ. ಡಿಕೆ ಸುರೇಶ್ ಗೆ ಯಾಕೆ ಮತ ಹಾಕ್ತಾರೆ ಜನ?. ಅವರು ಏನು ಕೆಲಸ ಮಾಡಿದ್ದಾರೆ ಎಂದು ಶಾಸಕ ಅಶ್ವಥ್ ನಾರಾಯಣ್ (Ashwath Narayan) ಪ್ರಶ್ನಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ಯಾರಾ ಮಿಲಿಟರಿ (Para Military) ನಿಯೋಜನೆ ಆಗಬೇಕು. ಭಯದ ವಾತಾವರಣ ಇರಬಾರದು, ಭಯ ಇಲ್ಲದೇ ಜನ ಮತ ಹಾಗಬೇಕು. ಶಾಂತಿಯುತ ಮತದಾನ ಆಗಬೇಕು. ಈ ಕಾರಣಕ್ಕೆ ನಾವು ಪ್ಯಾರಾ ಮಿಲಿಟರಿ ದಳ ನಿಯೋಜನೆಗೆ ಕೇಳಿದ್ದೇವೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ (Congress) ಭಯದ ವಾತಾವರಣ ಸೃಷ್ಟಿಸ್ತಿದೆ. ಭಯದ ವಾತಾವರಣ ಇದ್ರೇನೇ ಅವರಿಗೆ ಶಕ್ತಿ. ಜನರನ್ನ ಹತ್ತಿಕ್ಕುವುದು, ಗಲಾಟೆ ಸೃಷ್ಟಿಸೋದು ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ದೇಶದಲ್ಲಿ ಈಗ ಲೋಕಸಭೆ ರೂಪದಲ್ಲಿ ಧರ್ಮ ಅಧರ್ಮದ ಯುದ್ಧ ನಡೀತಿದೆ. ದೇಶದ ಜನರ ವಿಶ್ವಾಸ ಗಳಿಸಿರುವ ಮೋದಿಯವರು (Narendra Modi) ಮತ್ತೊಮ್ಮೆ ಪ್ರಧಾನಿ ಆಗಲೆಂದು ಜನ ಬಯಸಿದ್ದಾರೆ. ಮೋದಿಯವರ ಕೈ ಬಲಪಡಿಸಲು ಎಲ್ಲ 28 ಲೋಕಸಭೆ ಕ್ಷೇತ್ರ ಗೆಲ್ತೇವೆ. ಈ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ (BJP- JDS) ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಬಾರಿ ಕಾಂಗ್ರೆಸ್ (Congress) ಒಂದೇ ಕ್ಷೇತ್ರದಲ್ಲಿ ಗೆದ್ದಿತ್ತು. ಅವರ ವೈಯಕ್ತಿಕ ಪ್ರತಿಷ್ಠೆ ಜನಕ್ಕೆ ಗೊತ್ತಿದೆ ಎಂದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಇಂಡಿಯಾ ಒಕ್ಕೂಟದ ನಡುವೆ ಸೀಟು ಹಂಚಿಕೆ ಫೈನಲ್

    ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಅವರು ನಮ್ಮ ಅಭ್ಯರ್ಥಿ ಆಗ್ತಾರೆ ಅಂತ ಯಾರೂ ನಿರೀಕ್ಷೆ ಮಾಡಿರ್ಲಿಲ್ಲ. ಅವರು ನಮ್ಮ ಅಭ್ಯರ್ಥಿ ಆಗಿದ್ದು ಪ್ರಕೃತಿ ನಿಯಮ ಅನ್ನಬಹುದು. ಯೋಗ್ಯ, ಜನಪ್ರಿಯ, ಜನರ ಧ್ವನಿಯಾಗಿ ಇರುವ ಮಂಜುನಾಥ್ ಅವರ ಮೇಲೆ ಪ್ರಕೃತಿಯ ಆಶೀರ್ವಾದ ಇದೆ. ಡಾ.ಮಂಜುನಾಥ್ ಅಂಥ ಯೋಗ್ಯ ಅಭ್ಯರ್ಥಿ ಎಂದು ಅಶ್ವಥ್ ನಾರಾಯಣ್ ಹೇಳಿದರು.

    ಎನ್‍ಡಿಎಯಿಂದ ಮಾತ್ರ ದೇಶಕ್ಕೆ ಸುಭದ್ರ ಸರ್ಕಾರ. ಸುಭದ್ರ ಸರ್ಕಾರ ಕೊಡಲು ಯುಪಿಎಯಿಂದ ಆಗಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ಗ್ಯಾರಂಟಿಗಳನ್ನು ಮುಂದಿಟ್ಕೊಂಡು, ಸುಳ್ಳು ಹೇಳಿಕೊಂಡು ಕಾಂಗ್ರೆಸ್ ಮತ ಕೇಳ್ತಿದೆ. ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ ಬ್ರದರ್ಸ್ ಕೊಡುಗೆ ಏನು?. ಯಾವುದೇ ಕ್ಷೇತ್ರದಲ್ಲೂ ಅವರು ಕೆಲಸ ಮಾಡಿಲ್ಲ. ಕನಕಪುರ ಅತ್ಯಂತ ಹಿಂದುಳಿದ ತಾಲೂಕು ಆಗಿದೆ ಎಂದರು.

  • ಕಾಂಗ್ರೆಸ್ ಹುಳುಕುಗಳು ಶ್ವೇತಪತ್ರದಲ್ಲಿ ಬಯಲು; ಯುಪಿಎ ಅವಧಿ ಕಿಕ್‌ಬ್ಯಾಕ್, ಹಗರಣಗಳ ಕಾಲ: ಅಶ್ವಥ್ ನಾರಾಯಣ್

    ಕಾಂಗ್ರೆಸ್ ಹುಳುಕುಗಳು ಶ್ವೇತಪತ್ರದಲ್ಲಿ ಬಯಲು; ಯುಪಿಎ ಅವಧಿ ಕಿಕ್‌ಬ್ಯಾಕ್, ಹಗರಣಗಳ ಕಾಲ: ಅಶ್ವಥ್ ನಾರಾಯಣ್

    ಬೆಂಗಳೂರು: ಕೇಂದ್ರದ ಬಿಜೆಪಿ (BJP) ಸರ್ಕಾರವು ತಮ್ಮ ಸಾಧನೆಯನ್ನು ಅಂಕಿಅಂಶಗಳ ಶ್ವೇತಪತ್ರದ ಮೂಲಕ ತಿಳಿಸಿದೆ. ಯುಪಿಎ (UPA) ಬಿಟ್ಟು ಹೋದ ಆರ್ಥಿಕ ಗೊಂದಲ, ದಿಕ್ಕುದೆಸೆ ಇಲ್ಲದ ಆಡಳಿತ, ಅವ್ಯವಸ್ಥೆಯನ್ನು ಸರಿಪಡಿಸಿ ಕಷ್ಟದ ಕಾಲದಿಂದ ಒಳ್ಳೆಯ ಕಾಲಕ್ಕೆ ದೇಶವನ್ನು ಒಯ್ದವರು ನರೇಂದ್ರ ಮೋದಿಜೀ (Narendra Modi) ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ (CN Ashwath Narayan) ಹೇಳಿದ್ದಾರೆ.

    ಮಲ್ಲೇಶ್ವರದ (Malleshwaram) ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೇಂದ್ರದ ಎನ್‌ಡಿಎ (NDA) ಸರ್ಕಾರದ ಸಾಧನೆ ಮತ್ತು ಯುಪಿಎ ಸರ್ಕಾರದ ವೈಫಲ್ಯಗಳ ಕುರಿತು ವಿವರಿಸಿದರು. ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ಸಿಗರು ಮಾತನಾಡುತ್ತಾರೆ. ವಾಜಪೇಯಿ ಅವರ ಆಡಳಿತ ಇದ್ದಾಗ ಹಣದುಬ್ಬರ- ಬೆಲೆ ಏರಿಕೆ ಶೇ 3.9ರಷ್ಟಿತ್ತು. ಕಾಂಗ್ರೆಸ್‌ನ 10 ವರ್ಷಗಳ ಅವಧಿಯಲ್ಲಿ ಅದು ಸರಾಸರಿ ಶೇ. 8.2 ಆಗಿತ್ತು. ಕೋವಿಡ್ ಇದ್ದರೂ, ಜಾಗತಿಕ ಹಣಕಾಸಿನ ಬಿಕ್ಕಟ್ಟು, ಯುದ್ಧಗಳಿದ್ದರೂ ಮೋದಿಜೀ ಅವರ ಆಡಳಿತದಲ್ಲಿ ಬೆಲೆ ಏರಿಕೆ ಸರಾಸರಿ ಶೇ. 5ರಷ್ಟಿದೆ. ವಿಶ್ವದ ಎಲ್ಲೆಡೆ ಬೆಲೆ ಏರಿಕೆ ಇದೆ. ವಾಸ್ತವವಾಗಿ ಯುಪಿಎ ಅವಧಿಯಲ್ಲಿ ಬೆಲೆ ಏರಿಕೆ ಇದ್ದದ್ದು ಎದ್ದು ಕಾಣುವಂತಿತ್ತು ಎಂದು ವಿವರಿಸಿದರು.‌ ಇದನ್ನೂ ಓದಿ: ಮುಂದಿನ 25 ವರ್ಷಗಳಲ್ಲಿ ‘ವಿಕಸಿತ ಭಾರತ’ ಕನಸು ನನಸಾಗುತ್ತೆ: ಮೋದಿ ಭರವಸೆ

    ವಾಜಪೇಯಿ ಅವರ ಕಾಲದಲ್ಲಿ ಶೇ. 8ರಷ್ಟು ಜಿಡಿಪಿ ಮೂಲಕ ಅಭಿವೃದ್ಧಿ ಇತ್ತು. ಆದರೆ, ಯುಪಿಎ ಕಾಲದಲ್ಲಿ ಬೆಲೆ ಏರಿಕೆ ಇದ್ದರೂ ಬೆಳವಣಿಗೆ ಕಡಿಮೆ ಇತ್ತು. ಕಾಂಗ್ರೆಸ್ ಅವಧಿಯದ್ದು ಶೇ. 5ಷ್ಟು ಅಭಿವೃದ್ಧಿ ಎಂದು ಆರೋಪಿಸಿದರು. ಮೋದಿಯವರ ಅವಧಿಯಲ್ಲಿ ಶೇ. 8ರಿಂದ 9ರಷ್ಟು ಬೆಳವಣಿಗೆಯನ್ನು ನಾವು ಕಾಣುತ್ತಿದ್ದೇವೆ. ಯುಪಿಎ ಅವಧಿಯಲ್ಲಿ ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಂದ ಅತಿ ಹೆಚ್ಚು ಸಾಲ ಕೊಡಿಸಿದ್ದರು. ವಾಜಪೇಯಿಯವರ ಕಾಲದಲ್ಲಿ ಲೋನ್ ಎಕ್ಸ್ಪೋಜರ್ 6 ಲಕ್ಷ 60 ಸಾವಿರ ಕೋಟಿ ಇದ್ದರೆ ಯುಪಿಎ ಕಾಲದಲ್ಲಿ ಅದು 39 ಲಕ್ಷ ಕೋಟಿಗೆ ಏರಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್ ತಯಾರಿಸಲು ಐಸಿಎಂಆರ್ ಒಪ್ಪಿಗೆ ಸೂಚಿಸಿದೆ: ದಿನೇಶ್ ಗುಂಡೂರಾವ್

    ದೇಶದ ಸಾಲ ಮರುಪಾವತಿಗೂ ಸಮಸ್ಯೆ ಇತ್ತು. ಯುಪಿಎ ಸರ್ಕಾರ ನಿರಾಳವಾಗಿ ನಿದ್ರಾಲೋಕದಲ್ಲಿತ್ತು. ಬ್ಯಾಂಕ್ ಎನ್‌ಪಿಎ ಶೇ. 7 ಇತ್ತು. ಈಗ ಅದು ಶೇ. 3.2ರಷ್ಟಿದೆ. ಬ್ಯಾಂಕ್‌ಗಳು ಹಿಂದೆ ಮುಚ್ಚುವಂಥ ಸ್ಥಿತಿಯಲ್ಲಿದ್ದವು. ಈಗ ಮೋದಿಜೀ ಅವರ ಆಡಳಿತದಲ್ಲಿ ಅವು ಬೆಳವಣಿಗೆ ಕಂಡಿವೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮದ ಕವಚದ ಒಳಗೆ ಪಾಪ, ಅನ್ಯಾಯದ ಕೆಲಸ ಬಿಜೆಪಿ ಮಾಡುತ್ತಿದೆ: ದಿನೇಶ್ ಗುಂಡೂರಾವ್

    ಯುಪಿಎ ಅವಧಿಯಲ್ಲಿ ಡಾಲರ್ ಬೆಲೆ ಏರಿಕೆಯೂ ಗರಿಷ್ಠ ಪ್ರಮಾಣದಲ್ಲಿತ್ತು. ಕೇವಲ 4 ತಿಂಗಳ ಆಮದಿಗೆ ಸಾಕಾಗುವಷ್ಟು ಮಾತ್ರ ಫಾರಿನ್ ರಿಸರ್ವ್ (290 ಬಿಲಿಯನ್ ಡಾಲರ್) ನಮ್ಮ ದೇಶದಲ್ಲಿತ್ತು. ಈಗ 596 ಬಿಲಿಯನ್ ಡಾಲರ್ ಇದೆ. ಈಗ ಅಭಿವೃದ್ಧಿಯು ಭರವಸೆದಾಯಕವಾಗಿ ನಿರ್ವಹಣೆ ಆಗುತ್ತಿದೆ ಎಂದು ವಿವರ ನೀಡಿದರು. ಹಣಕಾಸು ಕೊರತೆ ಗರಿಷ್ಠ ಇತ್ತು. ತೋರಿಸುತ್ತಿದ್ದುದೇ ಒಂದು; ವಾಸ್ತವವಾಗಿ ಇನ್ನೊಂದು ಎಂಬ ಸ್ಥಿತಿ ಇತ್ತು. 1.90 ಲಕ್ಷ ಕೋಟಿ ಆಯಿಲ್ ಬಾಂಡ್ ಬಿಡುಗಡೆ ಮಾಡಿದರು. ಇದನ್ನೆಲ್ಲ ತೋರಿಸಿರಲಿಲ್ಲ. ಇಂಥ ಸಾಲಗಳನ್ನು ಮರುಪಾವತಿ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ದೇಶಕ್ಕೆ ಒಂದೇ ಸಂವಿಧಾನ ಬೇಕೆಂಬ ಕನಸು ಸಾಕಾರಗೊಂಡಿದೆ – ಮೋದಿ ಬಣ್ಣನೆ

    ಅವರ ಕಾಲದಲ್ಲಿ ಆರ್ಥಿಕ ಸುಸ್ಥಿರತೆ ಇಲ್ಲದೆ ಎಲ್ಲವೂ ಭರವಸೆದಾಯಕವಾಗಿರಲಿಲ್ಲ. ಇವತ್ತು ಎಲ್ಲವೂ ಸುಸ್ಥಿರತೆಯಿಂದ ಸಾಗಿದೆ. ಮೂಲಭೂತ ಸೌಕರ್ಯ, ಆಸ್ತಿ ನಿರ್ಮಿಸುವ ನಿಟ್ಟಿನಲ್ಲಿ ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಮೊತ್ತವು ವಾಜಪೇಯಿ ಅವರ ಕಾಲದಲ್ಲಿ ಶೇ. 31ರಷ್ಟಿತ್ತು. ಕಾಂಗ್ರೆಸ್ ಕಾಲದಲ್ಲಿ ಅದು ಕೇವಲ ಶೇ. 16ಕ್ಕೆ ಇಳಿಯಿತು. ಮೋದಿಜೀ ಅವರ ಕಾಲದಲ್ಲಿ ಮತ್ತೆ ಶೇ. 28ಕ್ಕೆ ಏರಿಕೆ ಕಂಡಿತು ಎಂದು ಮಾಹಿತಿ ನೀಡಿದರು. ಕಾಂಗ್ರೆಸ್ ಅವಧಿಯಲ್ಲಿ ಮೂಲಭೂತ ಸೌಕರ್ಯಕ್ಕೆ ಕಡಿವಾಣ ಹಾಕಿರುವುದು ಎದ್ದು ಕಾಣುವಂತಿದೆ ಎಂದರು. ಈ ಎಲ್ಲ ವಿಚಾರಗಳಿಗೆ ಕಾಂಗ್ರೆಸ್ಸಿನವರಲ್ಲಿ ಉತ್ತರ ಇಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ರಾಮಮಂದಿರ ಮುಂದಿನ ತಲೆಮಾರಿಗೆ ಹೆಮ್ಮೆಯ ಸಂಕೇತ: ಮೋದಿ

    ಸಾಮಾಜಿಕ ಕ್ಷೇತ್ರದಲ್ಲಿ 96 ಸಾವಿರ ಕೋಟಿ ಮೊತ್ತ ಖರ್ಚಾಗದೆ ಉಳಿದಿತ್ತು. ಇದು ಅಸಮರ್ಥ ಆಡಳಿತಕ್ಕೆ ಕೈಗನ್ನಡಿ ಎಂದು ದೂರಿದರು. 60-65 ವರ್ಷಗಳ ಕಾಂಗ್ರೆಸ್- ಯುಪಿಎ ಅವಧಿಯಲ್ಲಿ 14.5 ಕೋಟಿ ಎಲ್‌ಪಿಜಿ ಸಿಲಿಂಡರ್ ಸಂಪರ್ಕ ಇದ್ದದ್ದು ಈಗ 31 ಕೋಟಿಗೂ ಹೆಚ್ಚಾಗಿದೆ. ವಿದ್ಯುದೀಕರಣ ಅವರ ಕಾಲದಲ್ಲಿ ಶೇ. 85 ಇದ್ದದ್ದನ್ನು ಈಗ ಶೇ. 100ಕ್ಕೆ ತರಲಾಗಿದೆ. ಅವರ ಕಾಲದಲ್ಲಿ 12 ಗಂಟೆ ಸರಾಸರಿ ವಿದ್ಯುತ್ ಲಭ್ಯವಿದ್ದರೆ, ಈಗ 20 ಗಂಟೆಗೂ ಹೆಚ್ಚು ಕಾಲ ಲಭ್ಯತೆ ಇದೆ ಎಂದು ಅಂಕಿ ಅಂಶಗಳನ್ನು ನೀಡಿದರು. ಇದನ್ನೂ ಓದಿ: ರಾಮನಿಲ್ಲದೆ ಭಾರತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ: ಅಮಿತ್ ಶಾ

  • ಸಿದ್ದರಾಮಯ್ಯ ರಾಜಕೀಯ ಮಾಡೋದು ಬಿಟ್ಟು ಜನರ ಭಾವನೆಗಳಿಗೆ ಬೆಲೆ ಕೊಡಲಿ: ಅಶ್ವಥ್ ನಾರಾಯಣ್

    ಸಿದ್ದರಾಮಯ್ಯ ರಾಜಕೀಯ ಮಾಡೋದು ಬಿಟ್ಟು ಜನರ ಭಾವನೆಗಳಿಗೆ ಬೆಲೆ ಕೊಡಲಿ: ಅಶ್ವಥ್ ನಾರಾಯಣ್

    ಬೆಂಗಳೂರು: ಸರ್ಕಾರ ಜನರ ಭಾವನೆಗಳಿಗೆ ಬೆಲೆ ಕೊಟ್ಟು ಕೆರಗೋಡಿನಲ್ಲಿ (Keragodu) ಭಗವಾನ್ ಧ್ವಜ ಹಾರಿಸಲು ಅವಕಾಶ ಕೊಡಬೇಕು ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (CN Ashwath Narayan) ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆರಗೋಡಿನ ಗ್ರಾಮಸ್ಥರು ಸ್ವಂತ ಹಣದಲ್ಲಿ ಧ್ವಜಸ್ತಂಭ ನಿಲ್ಲಿಸಿದ್ದಾರೆ. ಪಂಚಾಯತ್‌ನಿಂದ ನಿರ್ಣಯ ಮಾಡಿದ್ದಾರೆ. ರಾಷ್ಟ್ರಧ್ವಜ, ನಾಡಧ್ವಜ, ಭಗವಾನ್ ಧ್ವಜ ಹಾರಿಸಲು ಅನುಮತಿ ಪಡೆದಿದ್ದಾರೆ. ದೇಶದಲ್ಲಿ, ರಾಜ್ಯದಲ್ಲಿ ಯಾವ ಕಡೆಯೂ ಭಗವಾನ್ ಧ್ವಜ ಹಾಕಿಲ್ಲ. ಈ ಸರ್ಕಾರಕ್ಕೆ ಇದೊಂದೆ ಧ್ವಜಸ್ತಂಭ ಕಂಡಿದ್ದಾ? ಭಗವಾನ್ ಧ್ವಜ ಹಾರಿಸಿದ್ದು ಕಾನೂನಿನಲ್ಲಿ ತಪ್ಪು ಇದ್ದರೆ ನೋಟಿಸ್ ಕೊಡಬಹುದಿತ್ತು. ಆದರೆ ಇವರು ಏಕಾಏಕಿ ಬಂದು ಭಗವಾನ್ ಧ್ವಜ ಇಳಿಸಿದರು ಎಂದು ಕಿಡಿಕಾರಿದರು. ಇದನ್ನೂ ಓದಿ:‌ ಸಿದ್ದರಾಮಯ್ಯ ಶಿಷ್ಟಾಚಾರಗೆಟ್ಟ ಮುಖ್ಯಮಂತ್ರಿ: ಹೆಚ್‌ಡಿಕೆ ವಾಗ್ದಾಳಿ

    ರಾಷ್ಟ್ರಧ್ವಜ ಹಾರಾಟ ಮಾಡಲು ಅಧಿಕಾರಿಗಳು ಕಾನೂನು ಪಾಲನೆ ಮಾಡಿಲ್ಲ. ಎಸಿ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಗ್ರಾಮಸ್ಥರು ಎಸಿ ವಿರುದ್ಧ ದೂರು ಕೊಟ್ಟಿದ್ದಾರೆ. ತಕ್ಷಣ ಅವರ ಮೇಲೆ ಕ್ರಮ ಆಗಬೇಕು. ಎಫ್‌ಐಆರ್ ಹಾಕಬೇಕು. ಎಸಿ ವಿರುದ್ಧ ಕ್ರಮ ಆಗಬೇಕು. ಭಗವಾನ್ ಧ್ವಜ ಹಾರಿಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: I am a Hindu, ಆದ್ರೆ ಬಿಜೆಪಿಯವರು ಚುನಾವಣೆಗೋಸ್ಕರ ಪ್ರಚೋದನೆ ಕೊಡ್ತಿದ್ದಾರೆ: ಸಿಎಂ ಸಿಡಿಮಿಡಿ

    ಭಗವಾನ್ ಧ್ವಜ ಹಾರಾಟ ಬಿಜೆಪಿ ಅವರ ರಾಜಕೀಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕನ್ಫ್ಯೂಸ್ ಆಗಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಮಾಡೋದ್ರಲ್ಲಿ ನಿಸ್ಸೀಮರು. ಮಂಡ್ಯದ ಶಾಸಕರು ಯಾರು ಕಾಂಗ್ರೆಸ್ ಶಾಸಕರೇ ಅಲ್ಲವಾ? ಅಲ್ಲಿನ ಜನರೇ ಹಣ ಸಂಗ್ರಹ ಮಾಡಿ ಧ್ವಜ ಸ್ಥಾಪನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಜೀವನದಲ್ಲಿ ಎರಡು ರೂಪಾಯಿ ಖರ್ಚು ಮಾಡಿಲ್ಲ. ಜನರೇ ದುಡ್ಡು ಹಾಕಿ ಮಾಡಿದ್ದಾರೆ. ಈಗ ಅದಕ್ಕೂ ಇವರು ವಿರೋಧ ಮಾಡುತ್ತಿದ್ದಾರೆ. ಸರ್ಕಾರ ಭಾವನೆಗಳನ್ನು ಗೌರವಿಸಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: ಸಿದ್ದರಾಮಯ್ಯನವರೇ ಮಹಿಳಾ ರಾಷ್ಟ್ರಪತಿಗೆ ಕೊಡೋ ಗೌರವ ಇದೇನಾ – ಪ್ರಹ್ಲಾದ್‌ ಜೋಶಿ ಪ್ರಶ್ನೆ

    ಸಿದ್ದರಾಮಯ್ಯಗೆ ಜನ ಆಡಳಿತ ಮಾಡಲು ಅಧಿಕಾರ ಕೊಟ್ಟಿದ್ದಾರೆ. ಆದರೆ ಅವರು ಆಡಳಿತ ಬಿಟ್ಟು ಬೇರೆ ಎಲ್ಲಾ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿ ರಾಜಕೀಯ ಮಾಡೋದು ಬೇಡ. ಸಿದ್ದರಾಮಯ್ಯ ಅವರು ರಾಜಕೀಯ ಬಿಟ್ಟು ಜನರ ಭಾವನೆಗೆ ಬೆಲೆ ಕೊಡಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ಭುಗಿಲೆದ್ದ ಆಕ್ರೋಶ – ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾರೀ ಹೈಡ್ರಾಮಾ

  • ಪ್ರತೀ ಮಂಡಲ, ಜಿಲ್ಲೆಗಳಲ್ಲಿನ ರಾಮಭಕ್ತರನ್ನು ಅಯೋಧ್ಯೆಗೆ ಕಳುಹಿಸಲು ನಿರ್ಧಾರ: ಅಶ್ವಥ್‌ ನಾರಾಯಣ್‌

    ಪ್ರತೀ ಮಂಡಲ, ಜಿಲ್ಲೆಗಳಲ್ಲಿನ ರಾಮಭಕ್ತರನ್ನು ಅಯೋಧ್ಯೆಗೆ ಕಳುಹಿಸಲು ನಿರ್ಧಾರ: ಅಶ್ವಥ್‌ ನಾರಾಯಣ್‌

    ಬೆಂಗಳೂರು: ಪ್ರತೀ ಮಂಡಲ, ಜಿಲ್ಲೆಗಳಲ್ಲಿರುವ ರಾಮಭಕ್ತರನ್ನು ಅಯೋಧ್ಯೆಗೆ ಕಳುಹಿಸಿಕೊಡಲು ನಿಶ್ಚಯಿಸಲಾಗಿದೆ ಎಂದು ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ ತಿಳಿಸಿದ್ದಾರೆ.

    ಬಿಜೆಪಿ ಕಾರ್ಯಕಾರಿಣಿ ಸಭೆ ಬಳಿಕ ಮಾತನಾಡಿದ ಅವರು, ಅಯೋಧ್ಯೆಗೆ ರಾಮಭಕ್ತರನ್ನು ಕಳಿಸಿಕೊಡಲು ಈಗಾಗಲೇ ನಿಶ್ಚಯಿಸಲಾಗಿದೆ. ಪ್ರತೀ ಮಂಡಲ, ಜಿಲ್ಲೆಗಳಲ್ಲಿ ರಾಮಭಕ್ತರನ್ನು ಅಯೋಧ್ಯೆಗೆ ಕಳಿಸಿಕೊಡಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

    ಫೆ.3, 4, 5 ರಂದು ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆ ಮಾಡಲು ನಿಶ್ಚಯಿಸಲಾಗಿದೆ. ಕೇಂದ್ರ ಸರ್ಕಾರದಿಂದ ಬಂದಿರುವ, ಕೇಂದ್ರದ ಯೋಜನೆಗಳ ಫಲಾನುಭವಿಗಳಾಗಿರುವ ಮಹಿಳಾ ಸಂಘಗಳು, ಸ್ವಸಹಾಯ ಸಂಘಗಳ ನಾರಿ ವಂದನ ಹೆಸರಲ್ಲಿ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ಮತ್ತೊಮ್ಮೆ ಮೋದಿ ಎಂದು ಬೂತ್‌ಗಳಲ್ಲಿ ಗೋಡೆ ಬರಹ ಬರೆಯಲು ನಿರ್ಧರಿಸಲಾಗಿದೆ. ಜ.30 ರಂದು ಜಿಲ್ಲಾ, ಮಂಡಲ, ಬೂತ್ ಪದಾಧಿಕಾರಿಗಳು ಆಂದೋಲನದ ಮಾದರಿಯಲ್ಲಿ ಪ್ರತೀ ಬೂತ್‌ಗಳಲ್ಲೂ ಗೋಡೆ ಬರಹ ಆಂದೋಲನ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಗ್ರಾಮ್ ಚಲೋ‌ ಕಾರ್ಯಕ್ರಮವೂ ನಿಶ್ಚಯ ಆಗಿದೆ. ಎಲ್ಲ ಗ್ರಾಮಗಳಿಗೆ ತೆರಳಿ ಕಾಂಗ್ರೆಸ್ ವೈಫಲ್ಯಗಳು, ಕೇಂದ್ರದ ಸಾಧನೆಗಳ ಪ್ರಚಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರೇ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಇದಲ್ಲದೇ ಬೂತ್ ಕಮಿಟಿ ಸಭೆ, ಪೇಜ್ ಪ್ರಮುಖ್ ಸಭೆಗಳನ್ನು ನಡೆಸುತ್ತೇವೆ. ಬೂತ್‌ಗಳ ಬಲವರ್ಧನೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

    ಲೋಕಸಭೆ ಕ್ಷೇತ್ರವಾರು ಹಂಚಿಕೆ ಮಾಡಿರುವ 8 ಕ್ಲಸ್ಟರ್‌ಗಳಿಗೆ ಅಮಿತ್ ಶಾ, ಜೆ.ಪಿ.ನಡ್ಡಾ, ರಾಜನಾಥ್ ಸಿಂಗ್ ಭೇಟಿ ಕೊಡಲಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಈ ಮೂವರು ಹೈಕಮಾಂಡ್ ನಾಯಕರು ಲೋಕಸಭೆ ಕ್ಷೇತ್ರಗಳ ಕ್ಲಸ್ಟರ್‌ಗಳಿಗೆ ಭೇಟಿ ಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.

  • ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ: ಅಶ್ವಥ್ ನಾರಾಯಣ್

    ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ: ಅಶ್ವಥ್ ನಾರಾಯಣ್

    ಬೆಂಗಳೂರು: ಡಿ.ಕೆ ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿ ಆಗಲಿ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (Ashwath Narayan) ಶುಭ ಹಾರೈಸಿದ್ದಾರೆ.

    ಇಂದು ಶೇಷಾದ್ರಿಪುರಂ ಗುಂಡೂರಾವ್ ಕ್ರೀಡಾಂಗಣದಲ್ಲಿ ಪಶ್ಚಿಮ ವಲಯದ ಮಲ್ಲೇಶ್ವರಂ, ಗಾಂಧಿನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನ ಒಟ್ಟುಗೂಡಿಸಿಕೊಂಡು ಜನಸ್ಪಂದನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಶ್ವಥ್ ನಾರಾಯಣ್ ಅವರು ವೇದಿಕೆ ಮೇಲೆಯೇ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಅಂತಾ ಆಶಿಸಿದರು.

    ಜನರನ್ನ ನೇರವಾಗಿ ತಲುಪುವ ಕೆಲಸವನ್ನು ಡಿಕೆ ಶಿವಕುಮಾರ್ ಅವರು ಮಾಡುತ್ತಿದ್ದಾರೆ. ಅವರಿಗೆ ಈಗ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ. ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅಂತಾ ಆಶಿಸುತ್ತಾ ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆ ಹೋಗಿ ಮುಖ್ಯಮಂತ್ರಿ ಕೂಡ ಆಗಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: ಮಂದಿರ ಕೆಡವಿ ಕಟ್ಟಿದ ಮಸೀದಿಯಲ್ಲಿ ನಮಾಜ್ ಮಾಡಿದ್ರೆ ಹರಾಮ್ ಆಗುತ್ತೆ ಅಂತಾ ಮುಸ್ಲಿಮರಿಗೂ ಅನಿಸಬಹುದು: ಸಿ.ಟಿ.ರವಿ

    ಕರ್ನಾಟಕ ಸರ್ಕಾರ ಉತ್ತಮವಾದ ಕಾರ್ಯಕ್ರಮ ರೂಪಿಸಿದೆ. ನಮ್ಮ ಪಶ್ಚಿಮ ವಲಯದಲ್ಲಿ ನಡೆಯುತ್ತಿದೆ. ಡಿಕೆ ಶಿವಕುಮಾರ್ ಅವರ ನಾಯಕತ್ವದಲ್ಲಿ ಕಾರ್ಯಕ್ರಮ ರೂಪಿಸಿದ್ದಾರೆ. ಜನರ ಕುಂದುಕೊರತೆಗಳನ್ನ ಆಲಿಸುತ್ತಾ ಇದ್ದಾರೆ ಅವರಿಗೆ ಹೃತ್ಪೂರ್ವಕವಾದ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

    ಬೆಂಗಳೂರು ನಗರ ಭರವಸೆ ನಗರ. ಬದುಕು ಕಟ್ಟಿಕೊಳ್ಳೋಕೆ ಈ ಕನಸಿನ ನಗರದಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದಾರೆ. ಬಹುದೊಡ್ಡ ಕೀರ್ತಿ ಈ ನಗರಕ್ಕೆ ಇದೆ. ಅದೇ ರೀತಿ ಕೊರತೆ ಕೂಡ ಇದೆ. ಬೆಂಗಳೂರು ನಗರದಲ್ಲಿ ಶ್ರಮಿಕರು ತುಂಬಾ ಜನ ಇದ್ದಾರೆ, ಬಡವರೂ ಇದ್ದಾರೆ, ಅವರ ಕೈ ಹಿಡಿಯುವಂತಹ ಕೆಲಸ ಡಿಕೆ ಶಿವಕುಮಾರ್ ಮಾಡಲಿ. ವಸತಿ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಿ ಎಂದು ಮಾಜಿ ಡಿಸಿಎಂ ಆಗ್ರಹಿಸಿದರು.

    ಇದೇ ವೇಳೆ ಆಸ್ತಿ ತೆರಿಗೆ ಬಗ್ಗೆ ಪ್ರಸ್ತಾಪ ಮಾಡಿದ ಅಶ್ವಥ್ ನಾರಾಯಣ್, ಹಳೆಯ ಬಾಕಿ ಎಲ್ಲಾ ಸೇರಿ ಆಸ್ತಿ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ ಆಸ್ತಿ ತೆರಿಗೆ ಬಗ್ಗೆ ಗಮನ ಹರಿಸಿ. ಮೂರು ವರ್ಷ ಮುಂಚಿತವಾದ ಆಸ್ತಿ ತೆರಿಗೆ ಕಟ್ಟುವುದಕ್ಕೆ ವಿನಾಯಿತಿ ಕೊಡಿ. ಜನರಿಗೆ ಆಸ್ತಿ ತೆರಿಗೆ ನೋಟಿಸ್ ಕೊಡುತ್ತಿದ್ದಾರೆ. ಅಧಿಕಾರಿಗಳ ಜೊತೆ ಮಾತಾಡಿ ಆಸ್ತಿ ತೆರಿಗೆ ಕಡಿಮೆ ಮಾಡಲಿ ಎಂದರು.

    ಟ್ರಾಫಿಕ್ ಸಮಸ್ಯೆ (Traffic) ನಿವಾರಣೆಗೆ ಮಿನಿ ಬಸ್‍ಗಳಿಗೆ ಹೆಚ್ಚು ಆದ್ಯತೆ ಕೊಡಿ. ಫುಟ್ ಪಾತ್ ಗಳನ್ನ ಒತ್ತುವರಿ ಮಾಡುತ್ತಿದ್ದಾರೆ. ಫುಟ್ ಪಾತ್ ಗಳನ್ನ ತೆರವು ಮಾಡುವ ಕೆಲಸ ಮಾಡಿದ್ದೀರಿ. ವಯಸ್ಸಾದವರು ಯಾರೂ ಫುಟ್‍ಪಾತ್‍ನಲ್ಲಿ ಓಡಾಡೋಕೆ ಆಗ್ತಿಲ್ಲ. ನಾಗರೀಕರು ಫುಟ್ ಪಾತ್ ಮೇಲೆ ಓಡಾಡುವಂತೆ ಮಾಡಿ ಎಂದು ಹೇಳಿದರು.

    ನಮ್ಮ ಬೆಂಗಳೂರಿನಲ್ಲಿ ಇರುವ ಶಾಲೆಗಳಿಗೆ ಹೆಚ್ಚಿನ ವ್ಯವಸ್ಥೆ ಮಾಡಿಕೊಡಿ. ಇನ್ನಷ್ಟು ಶಾಲೆಗಳನ್ನ ಹೆಚ್ಚಿಸಿ. ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಲೇಜ್ ಇಲ್ಲ, ಪಾಲಿಟೆಕ್ನಿಕ್ ಗಳೂ ಇಲ್ಲ, ಅವುಗಳನ್ನು ಓಪನ್ ಮಾಡುವಂತ ಕೆಲಸ ಮಾಡಿ. ಪೌರ ಕಾರ್ಮಿಕರ ಕೊರತೆ ಬಗ್ಗೆ ಪ್ರಸ್ತಾಪಿಸಿ, ಪೌರಕಾರ್ಮಿಕರನ್ನ ನೇಮಕ ಮಾಡಿಕೊಳ್ಳಿ. ಪೌರ ಕಾರ್ಮಿಕರ ಸಮಸ್ಯೆ ನಿವಾರಿಸಿ ಎಂದರು.

  • ಕಾಂಗ್ರೆಸ್‌ನವರು ವೋಟಿಗಾಗಿ ಕಾಶ್ಮೀರ ಸಹ ಪಾಕಿಸ್ತಾನಕ್ಕೆ ಸೇರಿದ್ದು ಅಂತಾರೆ – ವಿಶ್ವನಾಥ್ ಕಿಡಿ

    ಕಾಂಗ್ರೆಸ್‌ನವರು ವೋಟಿಗಾಗಿ ಕಾಶ್ಮೀರ ಸಹ ಪಾಕಿಸ್ತಾನಕ್ಕೆ ಸೇರಿದ್ದು ಅಂತಾರೆ – ವಿಶ್ವನಾಥ್ ಕಿಡಿ

    – ಆರೂವರೆ ಕೋಟಿ ಕನ್ನಡಿಗರಿಗೆ ಲಕ್ಷ್ಮಿ ಹೆಬ್ಬಾಳ್ಕರ್‌ರಿಂದ ಅಪಮಾನ
    – ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು – ಬಿಜೆಪಿ ಶಾಸಕ
    – ಅನ್ನಭಾಗ್ಯ ಅಕ್ಕಿಯಿಂದಲೇ ಮಂತ್ರಾಕ್ಷತೆ – ಡಿಕೆಶಿ ಹೇಳಿಕೆಗೆ ಅಶ್ವಥ್‌ ನಾರಾಯಣ್‌ ಕೆಂಡ

    ಬೆಂಗಳೂರು: ಕಾಂಗ್ರೆಸ್‌ನವರ ಮನಸ್ಥಿತಿ ಹೇಗಿದೆ ಅಂದ್ರೆ, ವೋಟಿಗಾಗಿ ಕಾಶ್ಮೀರ ಸಹ ಪಾಕಿಸ್ತಾನಕ್ಕೆ (Pakistan) ಸೇರಿದ್ದು ಅಂತಾರೆ ಎಂದು ಬಿಜೆಪಿ ಶಾಸಕ ಎಸ್‌.ಆರ್ ವಿಶ್ವನಾಥ್ (Vishwanath) ಕಿಡಿ ಕಾರಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರಿಂದು, ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹರಾಷ್ಟ್ರಕ್ಕೆ ಸೇರಿತ್ತು ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿಕೆಗೆ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಮದುವೆ, ಪ್ರವಾಸಕ್ಕೆ ಸಿಗಲಿದೆ ಬಿಎಂಟಿಸಿ ಬಸ್ – ಯಾವ್ಯಾವ ಬಸ್‍ಗೆ ಎಷ್ಟು ರೇಟ್?

    ಬೆಳಗಾವಿ (Belagavi) ವಿಶಾಲ ಕರ್ನಾಟಕಕ್ಕೆ ಸೇರಿ ಅನೇಕ ವರ್ಷಗಳಾಗಿವೆ, ಅದು ಮುಗಿದ ಕತೆ. ಆದ್ರೆ ವೋಟಿನ ರಾಜಕಾರಣಕ್ಕೆ ಸಚಿವೆ ನೀಡಿರುವ ಹೇಳಿಕೆ ವಿಷಾದಕರ. ಸದ್ಯ ಕಾಂಗ್ರೆಸ್‌ನವರ ಮನಸ್ಥಿತಿ ಹೇಗಿದೆ ಅಂದ್ರೆ, ಕಾಶ್ಮೀರ ಕೂಡ ಪಾಕಿಸ್ತಾನಕ್ಕೆ ಸೇರಿದ್ದು ಅಂತ ಹೇಳ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದ ಆರೂವರೆ ಕೋಟಿ ಕನ್ನಡಿಗರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಪಮಾನ ಮಾಡಿದ್ದಾರೆ. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು, ಹಾಗಾಗಿಯೇ ಬೆಳಗಾವಿಯಲ್ಲಿ ಅಧಿವೇಶನ ಮಾಡಲಾಗುತ್ತಿದೆ. ಅವರ ಹೇಳಿಕೆ ಬೇರೆಯವರನ್ನ ಕೆರಳಿಸಲಿದೆ, ಆದ್ದರಿಂದ ಸಿಎಂ ಸಿದ್ದರಾಮಯ್ಯ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನ ಸಚಿವ ಸಂಪುಟದಿಂದ ಹೊರಗಿಡಬೇಕು ಎಂದು ಒತ್ತಾಯಿಸಿದ್ದಾರೆ.

    ಮರಾಠಿಗರೂ ಇವರ ಹೇಳಿಕೆಯನ್ನ ಬೆಂಬಲಿಸಲ್ಲ: ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಇಂತಹ ಸಂದರ್ಭದಲ್ಲಿ ಈ ಹೇಳಿಕೆ ಅವಶ್ಯಕತೆ ಇರಲಿಲ್ಲ. ಬೆಳಗಾವಿ ಈಗ ಕರ್ನಾಟಕಕ್ಕೆ ಸೇರಿದೆ. ರಾಜಕೀಯ ಪ್ರೇರಿತ ಹೇಳಿಕೆ ನೀಡುವ ಕೆಲಸ ಆಗಬಾರದು. ಯಾವುದೇ ಕೆಲಸಗಳು ಜನರ ವಿಶ್ವಾಸ ಗಳಿಸುವಂತಿರಬೇಕು. ಕನ್ನಡಿಗರು ವಿವಿಧ ಸಂಸ್ಕೃತಿಯಲ್ಲಿ ಏಕತೆ ಕಾಣಬೇಕು. ಆದ್ರೆ ಸಚಿವರ ಹೇಳಿಕೆಯನ್ನು ಕನ್ನಡಿಗರು ಮಾತ್ರವಲ್ಲ, ಮರಾಠಿಗರೂ ಬೆಂಬಲಿಸಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐವರ ಅಸ್ಥಿಪಂಜರ ಪತ್ತೆ ಕೇಸ್‌ – ಮರಣೋತ್ತರ ಪರೀಕ್ಷಾ ವರದಿಯಲ್ಲೂ ಪತ್ತೆಯಾಗದ ಸತ್ಯಾಂಶ

    ಅಯೋಧ್ಯೆ ಮಂತ್ರಾಕ್ಷತೆ ವಿಚಾರದಲ್ಲಿ ಡಿಕೆಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಅನ್ನಭಾಗ್ಯ ಅಕ್ಕಿಯಿಂದಲೇ ಮಂತ್ರಾಕ್ಷತೆ ಮಾಡಲಾಗ್ತಿದೆ ಅನ್ನೋ ಡಿಕೆ ಶಿವಕುಮಾರ್ ಹೇಳಿಕೆ ಕೀಳುಮಟ್ಟದಿಂದ ಕೂಡಿದೆ. ಹಿಂದೂ ಧರ್ಮದ ವ್ಯಕ್ತಿ ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ. ಭಗವಂತನನ್ನ ಪೂಜಿಸೋರು, ಈ ರೀತಿಯ ಹೇಳಿಕೆ ನೀಡಬಾರದು, ಕೂಡಲೇ ಕ್ಷಮೆಯಾಚಿಸಿ, ಗೌರವದಿಂದ ನಡೆದುಕೊಳ್ಳಿ. ನಿಮ್ಮ ಗೌರವಕ್ಕೆ ಧಕ್ಕೆ ತಂದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.

  • ಕಾಂಗ್ರೆಸ್ ಪಕ್ಷದವರು ಕೋಮುವಾದಿಗಳು: ಅಶ್ವಥ್ ನಾರಾಯಣ್

    ಕಾಂಗ್ರೆಸ್ ಪಕ್ಷದವರು ಕೋಮುವಾದಿಗಳು: ಅಶ್ವಥ್ ನಾರಾಯಣ್

    ಬೆಳಗಾವಿ: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಒಂದೇ ಆಡಳಿತ ಕೊಡಬೇಕು. ಅವರು ಎಲ್ಲಾ ಸಮುದಾಯವನ್ನೂ ಸಮನಾಗಿ ನೋಡಿಕೊಳ್ಳಬೇಕು. ಆದರೆ ರಾಜಕೀಯ ಪ್ರೇರಿತವಾಗಿ ಮುಸ್ಲಿಂ ಸಮುದಾಯಕ್ಕೆ (Muslim  Community) ತುಷ್ಟೀಕರಣ ಮಾಡುತ್ತಾರೆ. ಕಾಂಗ್ರೆಸ್ (Congress) ಪಕ್ಷದವರು ಕೋಮುವಾದಿಗಳು ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ (CN Ashwath Narayan) ಹೇಳಿದ್ದಾರೆ.

    ಮುಸ್ಲಿಂ ಸಮುದಾಯಕ್ಕೆ 10,000 ಕೋಟಿ ರೂ. ಖರ್ಚು ಮಾಡಲು ಸಿದ್ಧ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, ಸಿಎಂ ಸಮಾನವಾಗಿ ಎಲ್ಲರನ್ನೂ ನೋಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಕೋಮುವಾದಿಗಳಿಂದ ರಾಜ್ಯದಲ್ಲಿ ಅಸ್ವಾಸ್ತ್ಯ ಇದೆ. ಬರಗಾಲ, ರೈತರ ಆತ್ಮಹತ್ಯೆಗೆ ಪರಿಹಾರ ಕೊಡಲು ಆಗುತ್ತಿಲ್ಲ. ಆದರೆ ಈ ರೀತಿಯಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲರಿಗೂ ಕಿವಿಗೆ ಹೂ ಇಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮುಸ್ಲಿಮರನ್ನಷ್ಟೇ ಓಲೈಕೆ ಮಾಡುವುದು ಸರಿಯಲ್ಲ: ಆರ್‌.ಅಶೋಕ್‌

    ಇನ್ನೂ ಆರ್ ಅಶೋಕ್‌ಗಿಂತ (R Ashok) ಬಸನಗೌಡ ಪಾಟೀಲ್‌ಗೆ (Basanagouda Patil Yatnal) ಶಾಸಕರು ಸಾಥ್ ವಿಚಾರವಾಗಿ ಮಾತನಾಡಿದ ಅವರು, ಸಮಸ್ಯೆ ಹೇಳಿಕೊಂಡರೆ ಏನು ತಪ್ಪು? ಅಶೋಕ್‌ಗಿಂತ ಬಸನಗೌಡ ಪಾಟೀಲ್‌ಗೆ ಶಾಸಕರ ಬೆಂಬಲ ಹೆಚ್ಚಿದೆ. ಆದರೆ ಯತ್ನಾಳ್ ಯತ್ನಾಳನೇ, ಆರ್ ಅಶೋಕ್ ಆರ್ ಅಶೋಕನೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡಿಗರಿಗೆ ಫ್ರಂಟ್ ಡೆಸ್ಕ್ ಉದ್ಯೋಗ ಕೊಡಿ: ಜಗ್ಗೇಶ್ ಒತ್ತಾಯ