ಮಂಡ್ಯ: ಪೊಲೀಸರು ಹಿಂದೂಗಳ ಮೇಲೆ ಲಾಠಿಚಾರ್ಜ್ ಮಾಡುತ್ತಿದ್ದಾರೆ. ಅದರ ಬದಲು ಕಲ್ಲೆಸೆದವರ ಮೇಲೆ ಪೊಲೀಸರು ತಮ್ಮ ಪೌರುಷ ತೋರಿಸಲಿ ಎಂದು ಶಾಸಕ ಡಾ.ಸಿ.ಎನ್ ಅಶ್ವಥ್ ನಾರಾಯಣ (Ashwath Narayana) ಆಗ್ರಹಿಸಿದರು.
ಮದ್ದೂರು (Maddur) ಕಲ್ಲು ತೂರಾಟ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾಯಕ್ಕಾಗಿ ಪ್ರತಿಭಟಿಸಿದ ಹಿಂದೂಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಾರೆ. ಅದರ ಬದಲು ಕಲ್ಲೆಸೆದವರ ಮೇಲೆ ಪೊಲೀಸರು ತಮ್ಮ ಪೌರುಷ ತೋರಿಸಲಿ. ಪೊಲೀಸ್ ಇಲಾಖೆ ಸರ್ಕಾರದ ಓಲೈಕೆಗಷ್ಟೇ ಸೀಮಿತವಾಗಿದೆ. ಪೋಸ್ಟಿಂಗ್ ಸಲುವಾಗಿ ಪೊಲೀಸ್ ಇಲಾಖೆ ಓಲೈಕೆಗಿಳಿದಿದೆ. ಹೀಗಾಗಿ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಈ ವ್ಯವಸ್ಥೆ ಮೇಲೆ ಜನರು ವಿಶ್ವಾಸ ಕಳ್ಕೊಂಡಿದ್ದಾರೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸತ್ತು ಹೋಗಿದೆ, ಅಮಾಯಕರು ಬಲಿಯಾಗ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಸರ್ಕಾರದ ಓಲೈಕೆ ರಾಜಕಾರಣವೇ ಮದ್ದೂರು ಗಲಭೆಗೆ ಕಾರಣ: ಬಸವರಾಜ ಬೊಮ್ಮಾಯಿ ಕಿಡಿ
ಇನ್ನೂ ಅನ್ಯಧರ್ಮದ ವ್ಯಕ್ತಿಗಳು ಮತ್ತು ಸಮುದಾಯದವರು ಗಣೇಶೋತ್ಸವದ ಮೆರವಣಿಗೆ, ಹಿಂದೂ ಸಂಸ್ಕೃತಿ ಅರ್ಥ ಮಾಡಿಕೊಳ್ಳಬೇಕು. ಇತರ ಧರ್ಮದ ಆಚರಣೆಗೆ ಗೌರವ ಕೊಡಬೇಕು, ಒಪ್ಕೋಬೇಕು. ನಾವು ಇರಾನ್, ಪಾಕಿಸ್ತಾನ, ಸೌದಿಯಲ್ಲಿಲ್ಲ. ಭಾರತದಲ್ಲಿದ್ದೇವೆ. ಭಾರತದ ಸಂಸ್ಕೃತಿ, ಆಚರಣೆಗೆ ಅವಕಾಶವೇ ಇಲ್ಲದಂತಾಗಿದೆ. ಇದು ಪದೇ ಪದೇ ಅತಿರೇಕಕ್ಕೆ ಹೋಗ್ತಿದೆ. ಮೊನ್ನೆ ಇದೇ ಸ್ಥಳದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆದಿತ್ತು. ಆಗ ಹಿಂದೂಗಳು ಕಲ್ಲೆಸೆದಿದ್ರಾ ಎಂದು ಆಕ್ರೋಶ ಹೊರಹಾಕಿದರು.
ಇದೇ ವೇಳೆ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಏನು ಕುಮ್ಮಕ್ಕು ಕೊಟ್ಟಿದ್ದೀವಿ? ನಿಮಗೆ ಬುದ್ಧಿ ಕೆಟ್ಟಿದೆಯಾ? ನೀವು ಹೇಗೆ ಈ ಥರ ಮಾತಾಡ್ತೀರಿ? ಗಣೇಶ ಹಬ್ಬಕ್ಕೆ ನಮ್ಮ ಕುಮ್ಮಕ್ಕೇನಿರುತ್ತೆ? ಚಲುವರಾಯಸ್ವಾಮಿ ದುರಹಂಕಾರದ ಮಾತುಗಳನ್ನು ಬಿಡಲಿ. ಮೂಲೆಗೆ ಸೇರಿದ್ರು ಈಗ ಮತ್ತೆ ಮೂಲೆಗೆ ಸೇರುತ್ತೀರಾ? ಈ ರೀತಿ ಅಹಂಕಾರದ ಮಾತು ಬಿಟ್ಟು ಜವಾಬ್ದಾರಿ ನಿಭಾಯಿಸಿ ಎಂದರು.ಇದನ್ನೂ ಓದಿ: ನಾಳೆ ಮದ್ದೂರು ಸ್ವಯಂ ಪ್ರೇರಿತ ಬಂದ್‌ಗೆ ಕರೆ – ಹಿಂದೂ ಮುಖಂಡರ ತೀರ್ಮಾನ
ಬೆಂಗಳೂರು: ಅಧಿಕಾರಿ ದುರ್ಬಳಕೆ ಮೂಲಕ ಚುನಾವಣೆ ಗೆಲ್ಲುವ ಹುನ್ನಾರವಿದು ಎಂದು ಬಿಜೆಪಿ (BJP) ಶಾಸಕ ಅಶ್ವಥ್ ನಾರಾಯಣ (Ashwath Narayana) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸರ್ಕಾರದ ಬ್ಯಾಲೆಟ್ ಪೇಪರ್ ಚುನಾವಣಾ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು (Congress) ಎಲ್ಲದರಲ್ಲೂ ಹಸ್ತಕ್ಷೇಪ ಮಾಡುವ ದುರುದ್ದೇಶ ಇಟ್ಟುಕೊಂಡಿದ್ದಾರೆ. ಜನರ ಕೋಪ ಮುಗಿಲಿಗೇರಿದೆ. ಈ ಆಕ್ರೋಶವನ್ನು ಚುನಾವಣೆಯಲ್ಲಿ ತೋರಿಸುತ್ತಾರೆ ಎಂಬ ಭಯ ಇದೆ. ಹಾಗಾಗಿ ಬ್ಯಾಲೆಟ್ ಪೇಪರ್‌ಗೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಕರ್ನಾಟಕದಲ್ಲಿ ಬ್ಯಾಲೆಟ್ ಪೇಪರ್ ಎಲೆಕ್ಷನ್: ಕಾನೂನು ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ
ತಂತ್ರಜ್ಞಾನದ ಜಗತ್ತಿನಲ್ಲಿ ಯಾರಾದರೂ ಮತ್ತೆ ಹಿಂದಕ್ಕೆ ಹೋಗ್ತಾರಾ? ಇವರು ಮಾಡುವಂತಹ ಕ್ರಮ ರಾಜ್ಯವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವಂತದ್ದು. ಬ್ಯಾಲೆಟ್ ಪೇಪರ್ (Ballot Paper) ಮೂಲಕ ಚುನಾವಣೆ ಸಾಧ್ಯವಿಲ್ಲ ಎಂದು ಈ ಹಿಂದೆ ಕಾಂಗ್ರೆಸ್ ಅರ್ಥ ಮಾಡಿಕೊಂಡಿತ್ತು. ಅಧಿಕಾರ ಹಾಗೂ ಗೂಂಡಾಗಿರಿ ಮಾಡಬೇಕು. ಅಧಿಕಾರಗಳ ವ್ಯವಸ್ಥೆ ದುರ್ಬಳಕೆ ಮೂಲಕ ಚುನಾವಣೆ ಗೆಲ್ಲಬೇಕೆಂದು ಈ ನಿಯಮ ತರುತ್ತಿದ್ದಾರೆ. ಇದು ಪ್ರಗತಿಪರವಾದ ನಿರ್ಣಯವಲ್ಲ ಎಂದು ಕಿಡಿಕಾರಿದ್ದಾರೆ.
ಇದು ಕಳಪೆ, ಕೀಳುಮಟ್ಟದ ಯೋಚನೆ. ಈ ಕ್ರಮ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ. ಇದನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಇದರ ವಿರುದ್ಧ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡುತ್ತೇವೆ. ಅವರ ಉದ್ದೇಶ ದುರ್ಬಲ ಅಷ್ಟೇ, ಸುದುದ್ದೇಶ ಅಲ್ಲ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಧರ್ಮಸ್ಥಳ ಕೇಸ್ NIAಗೆ ಇಲ್ಲ – ಸಿಎಂ ಪರೋಕ್ಷ ಹೇಳಿಕೆ
– ಶಾಸಕರ ಮನೆಗೆ ಬೆಂಕಿ ಇಟ್ಟದ್ದನ್ನು ಕಾಂಗ್ರೆಸ್ ಸಮರ್ಥಿಸಿತ್ತು – ಒಂದು ಪೋಸ್ಟ್ ಹಾಕಿದ್ದಕ್ಕೆ ಠಾಣೆಗೆ ಬೆಂಕಿ ಹಾಕಿದ್ರು
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ನಿಜಕ್ಕೂ ಮಂಜುನಾಥೇಶ್ವರ ದೇವರನ್ನು ನಂಬಿದ್ದರೆ, ಶ್ರೀಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಹಿನ್ನೆಲೆಯಲ್ಲಿರುವ ವ್ಯಕ್ತಿಗಳ ತನಿಖೆ ಮಾಡಿ ಬಯಲಿಗೆಳೆಯಬೇಕು ಎಂದು ಶಾಸಕ ಡಾ. ಸಿ.ಎನ್. ಅಶ್ವಥ್‌ನಾರಾಯಣ (Ashwath Narayan) ಅವರು ಒತ್ತಾಯಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ವಿಷಯದಲ್ಲಿ ಜನರ ತಾಳ್ಮೆ, ಸಹನೆಯನ್ನು ಪರೀಕ್ಷೆ ಮಾಡುತ್ತಿದ್ದೀರಾ? ಸರಕಾರ ಬದುಕಿದೆಯೇ ಇಲ್ಲವೇ ಎಂದು ಗೊತ್ತಾಗಬೇಕಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರಕಾರ ಬದುಕಿದ್ದರೆ ತೋರಿಸಲಿ. ಯಾರಾದರೂ ತನಿಖೆಗೆ ಅಡಚಣೆ ಮಾಡಿದ್ದಾರಾ? ತನಿಖೆಯನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಅನಾಮಿಕ ವ್ಯಕ್ತಿಯ ಕುರಿತಂತೆಯೂ ತನಿಖೆ ಆಗಬೇಕು ಎಂದು ಕೋರಿದರು. ಇದನ್ನೂಓದಿ: 13 ವರ್ಷದ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದ ನನ್ನ ತಂಗಿ ವಾಪಸ್ ಬರಲೇ ಇಲ್ಲ – ಎಸ್‌ಐಟಿಗೆ ದೂರು ನೀಡಿದ ಸಹೋದರ
ಕೆಜಿ ಹಳ್ಳಿ, ಡಿಜೆ ಹಳ್ಳಿ ಘಟನೆ ಸಂದರ್ಭದಲ್ಲಿ ನೀವು ಅದನ್ನು ಸಮರ್ಥನೆ ಮಾಡಿದ್ದೀರಿ. ಪೊಲೀಸ್ ಠಾಣೆಗೆ ಬೆಂಕಿ, ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ಜೀಪಿಗೆ ಬೆಂಕಿ, ಶಾಸಕರ ಮನೆಗೆ ಬೆಂಕಿ ಇಟ್ಟದ್ದನ್ನು ಸಮರ್ಥಿಸಿದ್ದೀರಿ ತಾನೇ ಎಂದು ಅವರು ಪ್ರಶ್ನಿಸಿದರು. ಧರ್ಮಸ್ಥಳದಲ್ಲಿ ಇಂಥ ಘಟನೆ ನಡೆದಿದೆಯೇ? ಯೂ ಟ್ಯೂಬರ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಸಾಮಾಜಿಕ ಜಾಲತಾಣದಲ್ಲಿ ಇವರೇ ತನಿಖೆ ನಡೆಸಿ ಇವರೇ ತೀರ್ಪು ಕೊಡುತ್ತಾರೆ. ಇದರಿಂದ ಹಿಂದೂ ಸಮಾಜ- ಶ್ರೀ ಮಂಜುನಾಥೇಶ್ವರನನ್ನು ನಂಬುವ ಭಕ್ತರಿಗೆ ಬಹಳಷ್ಟು ನೋವಾಗಿದೆ ಎಂದು ಅಶ್ವಥ್‌ನಾರಾಯಣ ತಿಳಿಸಿದರು.
ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಯಾರೋ ಒಬ್ಬ ವ್ಯಕ್ತಿ ಒಂದು ಪೋಸ್ಟ್ ಹಾಕಿದ್ದಕ್ಕೆ ಪೊಲೀಸ್ ಠಾಣೆಗೇ ಬೆಂಕಿ ಹಾಕಿದ್ದರು. ಶಾಸಕನ ಮನೆಯನ್ನೇ ಸುಟ್ಟು ಹಾಕಿದ್ದರು. ಪೊಲೀಸರ ವಾಹನ ಸುಟ್ಟು, ಪೊಲೀಸರ ಮೇಲೆ ಹಲ್ಲೆ ಮಾಡಲಾಗಿತ್ತು. ಆಗ ಇದೇ ಕಾಂಗ್ರೆಸ್ ಪಕ್ಷ ಅದನ್ನು ಸಮರ್ಥಿಸಿಕೊಂಡಿತ್ತು ಎಂದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದರೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುತ್ತಾರೆ. ಧರ್ಮಸ್ಥಳ, ಧರ್ಮಾಧಿಕಾರಿಗಳ ವಿಷಯದಲ್ಲಿ ಬೇರೆ ಬೇರೆ ಪೋಸ್ಟ್ ಹಾಕಿದಾಗ ಇದೇ ಗೃಹ ಇಲಾಖೆ ಯಾಕೆ ಕಾನೂನು ಕ್ರಮ, ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಬೆಂಗಳೂರು: ರಾಮನಗರವನ್ನು (Ramanagara) ಬೆಂಗಳೂರು ದಕ್ಷಿಣ ಜಿಲ್ಲೆ (Bengaluru South District) ಎಂದು ಹೇಗೆ ಬದಲಾಯಿಸಬೇಕು ಎನ್ನುವುದು ನನಗೆ ಗೊತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಹೇಗೆ ಮಾಡ್ಬೇಕು ನಮಗೆ ಗೊತ್ತು, ರಾಮನಗರ ಹೆಸರು ಬರಬಾರದು ಎಂದು ಯಾರನ್ನು ಭೇಟಿ ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಸಂವಿಧಾನದಲ್ಲಿ ಯಾರನ್ನ ಕೇಳ್ಬೇಕು ಅಂತೇನಿಲ್ಲ. ರಾಮನಗರ ಜಿಲ್ಲೆಯ ಹೆಸರನ್ನು ನಾವು ಬದಲಾವಣೆ ಮಾಡುತ್ತೇವೆ ಎಂದರು.
ಬೆಂಗಳೂರು: ಕೈಯಲ್ಲಾಗದ ಹೇಡಿಗಳು ಮೈ ಪರಚಿಕೊಳ್ಳೋ ಹಾಗೆ ವಿವಿಗಳನ್ನು (Universities) ಮುಚ್ಚಿ ಯುವಕರನ್ನು ಶಿಕ್ಷಣದಿಂದ ವಂಚಿತರಾಗಿ ಮಾಡ್ತಿದ್ದಾರೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವಥ್ ನಾರಾಯಣ (Ashwath Narayan) ಆರೋಪಿಸಿದರು.
8 ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸರ್ಕಾರ ನಿರ್ಧಾರದಿಂದ ಪ್ರಗತಿಗೆ ಹಿನ್ನಡೆಯಾಗಲಿದೆ. ಕಾಂಗ್ರೆಸ್‌ನಿಂದ ಎಲ್ಲ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದೆ. ಈ ತೀರ್ಮಾನದಿಂದ ಯುವಜನರ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗಲಿದೆ. ಸಿಎಂ ಸಿದ್ದರಾಮಯ್ಯನವರು ಬಜೆಟ್ ಮಂಡಿಸುವಾಗ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯ, ವಚನಕಾರರ ಮಾತುಗಳನ್ನು ಹೇಳಿದ್ದರು. ಆದರೆ ಈಗ ವಿವಿಗಳನ್ನು ಮುಚ್ಚಲಾಗುತ್ತಿದೆ. ಯುವಜನರಿಗೆ ಸಮಾನ ಅವಕಾಶ ದೊರೆಯಲು ಗುಣಮಟ್ಟದ ಶಿಕ್ಷಣ ನೀಡಬೇಕು. ಜಿಲ್ಲೆಗಳು ರೂಪುಗೊಂಡು ಹಲವಾರು ವರ್ಷಗಳಾದರೂ ಅಲ್ಲಿ ಪ್ರತ್ಯೇಕ ವಿವಿಗಳಿಲ್ಲ. ಹಣ ಇಲ್ಲ ಎಂಬ ನೆಪವೊಡ್ಡಿ ವಿವಿಗಳನ್ನು ಮುಚ್ಚಲಾಗುತ್ತಿದೆ. ಬಿಜೆಪಿ ಸರ್ಕಾರದಲ್ಲಿ ವಿವಿಗಳನ್ನು ರೂಪಿಸುವಾಗ, ಹೊಸ ಹುದ್ದೆಗಳನ್ನು ಸೃಷ್ಟಿಸಿಲ್ಲ. ಇರುವ ಹುದ್ದೆಗಳನ್ನೇ ವರ್ಗಾಯಿಸಲಾಗಿದೆ ಎಂದು ವಿವರಿಸಿದರು.
2021ರ ಅಂಕಿ ಅಂಶಗಳ ಪ್ರಕಾರ, ಕಾಲೇಜುಗಳ ಪ್ರವೇಶಾತಿ ಪ್ರಮಾಣ ಸರಾಸರಿ ಶೇ.33 ಇದೆ. ಚಾಮರಾಜನಗರದಲ್ಲಿ ಶೇ.10, ಮಂಡ್ಯದಲ್ಲಿ ಶೇ.15, ಬಾಗಲಕೋಟೆಯಲ್ಲಿ ಶೇ.16 ಇದೆ. ಇಂತಹ ಸ್ಥಿತಿಯಲ್ಲಿ ಯುವಜನರನ್ನು ಶಿಕ್ಷಣ ವಂಚಿತರನ್ನಾಗಿ ಮಾಡಲಾಗುತ್ತಿದೆ. ವಿವಿಗಳಿಂದ ಆದಾಯ ಬರಲು ಇದು ಅಂಗಡಿಗಳಲ್ಲ. ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಈ ಕ್ರಮ ಕೈಗೊಳ್ಳುವ ಮುನ್ನ ಸರ್ಕಾರ ಯಾವುದೇ ಪರಿಶೀಲನೆ ಮಾಡಿ ವರದಿ ರೂಪಿಸಿಲ್ಲ. ಬಿಜೆಪಿ ಅವಧಿಯಲ್ಲಿ ರೂಸಾ ಯೋಜನೆಯಡಿ ಅನುದಾನ ಪಡೆದು ಮಹಾರಾಣಿ ಕ್ಲಸ್ಟರ್, ಮಂಡ್ಯ ವಿವಿ ರೂಪಿಸಲಾಗಿದೆ. ಇದು ರಾಜಕೀಯ ಪ್ರೇರಿತ ಎಂದು ದೂರಿದರು. ಇದನ್ನೂ ಓದಿ: ಜಲಜೀವನ್ ಮಿಷನ್‌ಗೆ ರಾಜ್ಯಕ್ಕೆ ಘೋಷಿಸಿದ ಹಣ ಬಿಡುಗಡೆ ಮಾಡದೇ ಕೇಂದ್ರ ದ್ರೋಹ: ಸಿಎಂ
ಇದು ರಿಯಲ್ ಎಸ್ಟೇಟ್ ಸರ್ಕಾರ ಎಂದ ಛಲವಾದಿ:
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಮೊದಲು ಒತ್ತು ನೀಡಿದ್ದು ಶಿಕ್ಷಣಕ್ಕೆ. ಕಾಂಗ್ರೆಸ್ ಸರ್ಕಾರ ಅಕ್ಕಿ ನೀಡುವ ಮೊದಲು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. 4 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ಸರ್ಕಾರಕ್ಕೆ 350 ಕೋಟಿ ರೂ. ಅನುದಾನ ನೀಡಲು ಆಗಲ್ಲ. ಕೇಂದ್ರ ಸರ್ಕಾರ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಶಿಕ್ಷಣಕ್ಕಿಂತ ರಿಯಲ್ ಎಸ್ಟೇಟ್ ಮುಖ್ಯ ಎಂದರು. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಿ ಅಂತ ನಾನೇ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ: ಹೆಚ್‌ಡಿಡಿ
ಕೇಂದ್ರ ಸರ್ಕಾರ ಜನ ಔಷಧಿ ಕೇಂದ್ರಗಳನ್ನು ನೀಡಿದರೆ, ಅದನ್ನು ಕೂಡ ಸರ್ಕಾರ ಮುಚ್ಚುತ್ತಿದೆ. ಕೇಂದ್ರ ಸರ್ಕಾರದಿಂದ 40 ಸಾವಿರ ಕಿ.ಮೀ. ರೈಲ್ವೆ ಮಾರ್ಗ ಹೆಚ್ಚಾಗಿದೆ. ರೈಲುಗಳ ಸಂಖ್ಯೆ ಹೆಚ್ಚಿದೆ. ರಾಜ್ಯ ಬಿಜೆಪಿಯಿಂದ ಹತ್ತು ವಿವಿಗಳನ್ನು ರೂಪಿಸಿದಾಗ, ಇನ್ನಷ್ಟು ಹೆಚ್ಚು ವಿವಿಗಳನ್ನು ಮಾಡುತ್ತೇವೆಂದು ಕಾಂಗ್ರೆಸ್ ಹೇಳಬೇಕಿತ್ತು. ಅದನ್ನು ಬಿಟ್ಟು ಬಿಜೆಪಿ ಕಟ್ಟಿದ ಮನೆಯನ್ನು ಒಡೆದು ಹಾಕಲು ಕಾಂಗ್ರೆಸ್ ಮುಂದಾಗಿದೆ. ಶಿಕ್ಷಣ ಹಾಗೂ ಆರೋಗ್ಯ ವಲಯದಲ್ಲಿ ಆದಾಯವನ್ನು ನೋಡಬಾರದು ಎಂದರು.
ನಿಮ್ಮ ಗ್ಯಾರಂಟಿಗಳನ್ನು ನಿಮ್ಮ ನಾಯಕರೇ ವಿರೋಧಿಸುತ್ತಿದ್ದಾರೆ. 5 ವರ್ಷದಲ್ಲಿ ಎಷ್ಟು ಲೂಟಿ ಮಾಡಬಹುದೆಂದು ಎಲ್ಲರೂ ನೋಡುತ್ತಿದ್ದಾರೆ. ಬೆಂಗಳೂರಿನಲ್ಲಿ ಹುಡುಕಿದರೂ ಜಾಗ ಸಿಗದಷ್ಟು ಅಗ್ರಿಮೆಂಟ್‌ಗಳನ್ನು ಮಾಡಲಾಗುತ್ತಿದೆ. ಇದು ಲ್ಯಾಂಡ್ ಗ್ರ್ಯಾಬಿಂಗ್, ಲೂಟಿಯ ಸರ್ಕಾರ ಎಂದರು. ಇದನ್ನೂ ಓದಿ: ಗೋದಾವರಿ-ಕೃಷ್ಣ-ಕಾವೇರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 TMC ನೀರು ಕೊಡಬೇಕು: ಹೆಚ್.ಡಿ.ದೇವೇಗೌಡ
ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಪ್ರಕರಣದಲ್ಲಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ (Ashwath Narayana) ಅವರನ್ನು ವಿಶೇಷ ತನಿಖಾ ತಂಡದ (SIT) ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ನಿಜವಾದ ಕಾನೂನು ಪಾಲಕರಾಗಿದ್ದರೆ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ (Ashwath Narayana) ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು (ಡಿ.02) ಪೊಲೀಸರು ಚಂದ್ರಶೇಖರ ಸ್ವಾಮೀಜಿಗಳ ಹೇಳಿಕೆ ಪಡೆಯುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ, ಡಿಸಿಎಂ, ಅವರ ಪಕ್ಷದ ಪದಾಧಿಕಾರಿಗಳಿಗೆ ಕಾನೂನು ಯಾವುದೋ ಒಂದು ಸಂದರ್ಭದಲ್ಲಿ ನೆನಪಾಗುತ್ತದೆ. ಅದಕ್ಕಾಗಿ ಮನಬಂದಂತೆ, ಇಷ್ಟ ಬಂದಂತೆ ಸಿಎಂ, ಡಿಸಿಎಂ ಮಾತನಾಡುತ್ತಾರೆ. ಇವರೇ ಈ ರೀತಿ ಮಾತನಾಡಿದರೆ ಇವರ ಕೆಳಗಿರುವವರು ಇನ್ನು ಹೇಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ಆನೇಕಲ್ | ಸಿಲಿಂಡರ್ ಸ್ಫೋಟಗೊಂಡು ಮೂವರು ಕಾರ್ಮಿಕರು ಗಂಭೀರ
ಇನ್ನೂ ಇವರಿಗೆ ವಕ್ಫ್ ವಿಚಾರದಲ್ಲಿ ಬಾಯಿ ಇಲ್ಲ. ಚಂದ್ರಶೇಖರ ಸ್ವಾಮೀಜಿಗಳು ಇಡೀ ಸಮುದಾಯಕ್ಕೆ ಆಗಿರುವ ಅನ್ಯಾಯ ಕುರಿತು ಹೇಳಿದರು. ನಿಮ್ಮ ಓಲೈಕೆ ರಾಜಕಾರಣ ಕಂಡು ಮಾತನಾಡಿದರು. ಮಾರನೇ ದಿನ ವಿಷಾದ ವ್ಯಕ್ತಪಡಿಸಿದ್ದರು. ಆದರೆ ನೀವು ಪಾಕಿಸ್ತಾನ ಜಿಂದಾಬಾದ್ ಹೇಳಿಕೆಗೆ ನಿಮ್ಮ ಸಂಸದರ ವಿರುದ್ಧ ಕ್ರಮ ತೆಗೆದುಕೊಂಡ್ರಾ? ಕಾನೂನು ಎಲ್ಲರಿಗೂ ಒಂದೇ ಎಂದು ಹೇಳುತ್ತೀರಾ? ನೀವು ನಿಜವಾದ ಕಾನೂನು ಪಾಲಕರೇ ಆಗಿದ್ದರೆ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ನಿಮ್ಮ ಹಾಗೆ ಸ್ವಾಮೀಜಿಗಳು ಭಂಡರಲ್ಲ ಕೇಸ್ ಹಾಕಿದೀರ, ಬನ್ನಿ ಹೇಳಿಕೆ ತಗೊಳ್ಳಿ ಎಂದಿದ್ದಾರೆ ಸರ್ಕಾರದ ನಡೆಯನ್ನು ಜನ ಒಪ್ಪುವುದಿಲ್ಲ. ಹೋಗಿ ಮಠದಲ್ಲೇ ಉತ್ತರ ಪಡೆದುಕೊಳ್ಳಿ. ಸರ್ಕಾರದ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಹಿಂದೆ ಒಕ್ಕಲಿಗ ಸಮಾವೇಶದಲ್ಲಿ ಪೆನ್ನು ಪೇಪರ್ ಕೊಡಿ ಎಂದು ಹೇಳಿದ್ದಿರಿ ಈಗ ಏನಾಯ್ತು? ನಿಮ್ಮ ಬೆದರಿಕೆಗೆ ಸಮಾಜ ಹೆದರಲ್ಲ, ಕಾನೂನು ಪಾಲನೆ ಏನು ಅಂತ ನಮಗೂ ಗೊತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಯತ್ನಾಳ್‌ಗೆ ಶೋಕಾಸ್ ನೋಟಿಸ್ ವಿಚಾರವಾಗಿ ಮಾತನಾಡಿ, ವರಿಷ್ಠರು ನೋಟಿಸ್ ಕೊಟ್ಟಿದ್ದಾರೆ. ಸಂಬಂಧಪಟ್ಟವರು ನೋಟಿಸ್‌ಗೆ ಉತ್ತರ ಕೊಡಲಿದ್ದಾರೆ. ಎಲ್ಲರೂ ಪಕ್ಷದ ಚೌಕಟ್ಟಿನಲ್ಲಿ ಇರಬೇಕಾಗುತ್ತದೆ. ಒಗ್ಗಟ್ಟು, ಶಿಸ್ತು ಕಾಪಾಡಿಕೊಳ್ಳುವುದು ಎಲ್ಲರಿಗೂ ಅನ್ವಯ ಆಗುತ್ತದೆ. ನೋಟಿಸ್‌ಗೆ ಸಂಬಂಧಪಟ್ಟವರು ಉತ್ತರಿಸುತ್ತಾರೆ ಎಂದು ತಿಳಿಸಿದರು.ಇದನ್ನೂ ಓದಿ: ಉಪೇಂದ್ರ ನಟನೆಯ ‘ಯುಐ’ ವಾರ್ನರ್ ರಿಲೀಸ್
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲೇ ಪಾಪ ಮುಖ್ಯಮಂತ್ರಿಗಳಿಗೆ ಇರುವುದನ್ನು ನೋಡಲು ಸಮಯ ಇಲ್ಲ. ಇದನ್ನೆಲ್ಲಾ ಯಾಕೆ ತೆಗೆದುಕೊಳ್ಳುತ್ತೀರಾ? ಶಿಕ್ಷಣದ ವಿರೋಧಿಗಳು ನೀವು, ನಿಮಗೆ ರಾಷ್ಟ್ರೀಯ ಶಿಕ್ಷಣ ನೀತಿ ಬೇಡ, ಬಡವರಿಗೆ ನ್ಯಾಯ ಕೊಡುವುದು ಬೇಡ. ಸಿದ್ದರಾಮಯ್ಯನವರೇ ನೀವು ಮತ್ತು ನಿಮ್ಮ ಸಂಪುಟ ಸಹೋದ್ಯೋಗಿಗಳು ನೀವು ಪಡೆದ ಶಿಕ್ಷಣದಿಂದ ಇಂದು ಎತ್ತರದ ಸ್ಥಾನದಲ್ಲಿದ್ದೀರಿ. ನೀವು ಕುಲಾಧಿಪತಿಗಳಾಗಿ ಮಾಡುವುದು ಏನೂ ಇಲ್ಲ. ಇಂತಹ ಪ್ರಯತ್ನ, ರಾಜಕೀಯ ಬಿಟ್ಟುಬಿಡಿ ಎಂದರು.
ಬೆಂಗಳೂರು: ನಾಗಮಂಗಲ ಗಲಭೆಗೆ (Nagamangala Violence) ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ. ಇದೊಂದು ಪ್ರೀ ಪ್ಲ್ಯಾನ್. ಪಿಎಫ್‌ಐ (PFI) ಸಂಘಟನೆ ನಾಗಮಂಗಲದಲ್ಲಿ ಚಟುವಟಿಕೆ ನಡೆಸುತ್ತಿದೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ (Ashwath Narayan) ಆರೋಪ ಮಾಡಿದ್ದಾರೆ.
ಅಶ್ವಥ್ ನಾರಾಯಣ ನೇತೃತ್ವದಲ್ಲಿ ರಚನೆ ಮಾಡಿದ್ದ ಸತ್ಯಶೋಧನಾ ಸಮಿತಿ ಇಂದು ರಾಜ್ಯಾಧ್ಯಕ್ಷ ವಿಜಯೇಂದ್ರಗೆ ವರದಿ ಸಲ್ಲಿಕೆ ಮಾಡಿತು. ವರದಿ ಸಲ್ಲಿಕೆ ಬಳಿಕ ಮಾತನಾಡಿದ ಅಶ್ವಥ್ ನಾರಾಯಣ, ರಾಜಕೀಯ ತುಷ್ಟೀಕರಣವೇ ಇಂತಹ ಘಟನೆಗೆ ಕಾರಣ. ವಿಭಜನೆ ರಾಜಕೀಯಕ್ಕಾಗಿ ಇಂತಹ ಘಟನೆ ನಡೆದಿದೆ. ಪೊಲೀಸರ ವೈಫಲ್ಯ ಇಲ್ಲಿ ಇದೆ. ಪೊಲೀಸರ ಕೈಯನ್ನು ಈ ಸರ್ಕಾರ ಕಟ್ಟಿ ಹಾಕಿದೆ ಅಂತ ಆರೋಪ ಮಾಡಿದರು.
ಮೆರವಣಿಗೆಯಲ್ಲಿ ಭಾಗಿಯಾದವರು 25-30 ಜನ ಮಾತ್ರ. ಕಳೆದ ವರ್ಷವೂ ಇದೇ ರೀತಿ ಘಟನೆ ಆಗಿದೆ. ಆದರೂ ಈ ವರ್ಷ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪ್ರೀ ಪ್ಲ್ಯಾನ್ ಮಾಡಿ ಬೆಂಕಿ ಹಾಕಿದ್ದಾರೆ, ಮಾಸ್ಕ್ ಹಾಕಿಕೊಂಡು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ನಾಗಮಂಗಲ ಪಿಎಫ್‌ಐ ಕಾರ್ಯಚಟುವಟಿಕೆಗೆ ನೆಲೆಯಾಗಿದೆ. ಕೇರಳ ಭಾಗದ ವ್ಯಕ್ತಿಗಳು ಭಾಗಿಯಾಗಿದ್ದಾರೆ ಅಂತ ಗೃಹಸಚಿವರು ಹೇಳಿದ್ದಾರೆ. ಬಾಂಗ್ಲಾದೇಶದವರು ನಾಗಮಂಗಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಪಿಎಫ್‌ಐ ನಿಷೇಧ ಆಗಿರುವ ಸಂಸ್ಥೆಯಾದರೂ ಇಲ್ಲಿ ಚಟುವಟಿಕೆಗಳನ್ನು ಹೇಗೆ ಮಾಡುತ್ತಿದ್ದಾರೆ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ರು; ಒಡಿಶಾ ಠಾಣೆಯಲ್ಲಿ ಅನುಭವಿಸಿದ ಯಾತನೆಯ ಕತೆ ಹೇಳಿದ ಸೇನಾಧಿಕಾರಿಯ ಭಾವಿ ಪತ್ನಿ
ಘಟನೆ ಸಂಬಂಧ UAPA ಕೇಸ್ ಯಾರ ಮೇಲೂ ಹಾಕಿಲ್ಲ. ಇಂಟಲಿಜೆನ್ಸ್ ಸಂಪೂರ್ಣ ಫೇಲ್ ಆಗಿದೆ. ನಮ್ಮ ಕಾಲದಲ್ಲಿ ಇಂತಹ ಘಟನೆ ಆಗಿರಲಿಲ್ಲ.ಈ ಸರ್ಕಾರದಲ್ಲಿ 8-10 ಕಡೆ ಇಂತಹ ಘಟನೆಗಳು ನಡೆದಿವೆ. ಈ ಸರ್ಕಾರದಲ್ಲಿ ಏನ್ ಆಗುತ್ತಿದೆ ಎಂದು ಪ್ರಶ್ನೆ ಮಾಡಿದರು. ಬಾಂಗ್ಲಾದೇಶದಲ್ಲಿ ಆದಂತೆ ನಾವು ನುಗ್ಗುತ್ತೇವೆ ಅಂತಾರೆ. ಅವರ ಮೇಲೆ ಕೇಸ್ ಹಾಕಲ್ಲ. ಇಲ್ಲಿ ದ್ವೇಷದ ರಾಜಕೀಯ ನಡೆಯುತ್ತಿದ್ದು ವಿಪಕ್ಷಗಳ ಮೇಲೆ ಕೇಸ್ ಹಾಕೋ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃತ್ಯ ಮಾಡಿದವರನ್ನು ಬಿಟ್ಟು ನಿರಾಪರಾಧಿಗಳ ಮೇಲೆ ಕೇಸ್ ಹಾಕಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆದರೂ ಅವರ ಮೇಲೆ ಕೇಸ್ ಆಗಿಲ್ಲ. ನಾಗಮಂಗಲ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದಿಂದ (NIA) ತನಿಖೆ ನಡೆಸಬೇಕು. ಹಿಂದೂ ಸಮಾಜದ ವಿರೋಧಿ ಶಕ್ತಿಗಳಿಗೆ ಕಡಿವಾಣ ಹಾಕುವ ಕೆಲಸ ಆಗಿಲ್ಲ. ಹಿಂದೂಗಳ ವಿರೋಧಿ, ಹಿಂದೂ ಸಂಸ್ಕೃತಿ ವಿರೋಧಿಗಳಿಗೆ ತುಷ್ಟೀಕರಣ ಮಾಡುವ ಕೆಲಸ ಮಾಡುತ್ತಿದೆ. ಸರ್ಕಾರ ಘಟನೆಯಲ್ಲಿ ಭಾಗಿಯಾಗಿರುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. 100% ನಷ್ಟ ಆದವರಿಗೆ ಪರಿಹಾರ ಸರ್ಕಾರ ಕೊಡಬೇಕು. ಮುಂದೆ ಸರ್ಕಾರದ ವಿರುದ್ದ ಹೇಗೆ ಪ್ರತಿಭಟನೆ ಮಾಡಬೇಕು ಅಂತ ಹಿರಿಯರು ಕೂತು ನಿರ್ಧಾರ ಮಾಡುತ್ತೇವೆ ಎಂದರು.