Tag: ಅಶ್ವಥ್‍ನಾರಾಯಣ

  • ಅಶ್ವಥ್ ನಾರಾಯಣನ ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ: ಡಿಕೆಶಿ

    ಅಶ್ವಥ್ ನಾರಾಯಣನ ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ: ಡಿಕೆಶಿ

    ಬೆಳಗಾವಿ: ರಾಮನಗರದಲ್ಲಿ ರಾಮ ಮಂದಿರ, ಸೀತೆ ಮಂದಿರ, ಶಿವ ಮಂದಿರವಾದರೂ ಕಟ್ಟಲಿ, ಅಷ್ಟೇ ಯಾಕೆ ಅಶ್ವಥ್ ನಾರಾಯಣನ (Ashawth Narayan) ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ತಿರುಗೇಟು ಕೊಟ್ಟರು.

    ರಾಮನಗರದಲ್ಲಿ (Ramanagara) ರಾಮದೇವರಬೆಟ್ಟದಲ್ಲಿ ರಾಮ ಮಂದಿರ (Ram Mandir) ನಿರ್ಮಾಣ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಮನಗರದಲ್ಲಿ ರಾಮ ಮಂದಿರವನ್ನು ಕಟ್ಟಲು ಬೇಡ ಅಂತಾ ಯಾರು ತಡೆದುಕೊಂಡಿದ್ದಾರೆ. ಅವರು ಜಿಲ್ಲಾ ಮಂತ್ರಿ ಇದ್ದಾರೆ? ಅವರನ್ನ ನಾವು ತಡೀತಿವಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

    ಬಾರ್, ರೆಸ್ಟೊರೆಂಟ್‍ಗಳಿಗೆ ಸ್ಪೆಷಲ್ ಮಾಸ್ಕ್ ಬಂದಿದೆ ಎಂಬ ಸಚಿವ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಮಾತನಾಡಿ, ಪೈಪ್ ಹಾಕೊಂಡು ಬಿಡ್ರಿ ಎಲ್ಲ. ಆರ್.ಅಶೋಕ್ ಹಾಗೂ ಅವರ ಫ್ರೆಂಡ್ಸ್ ಎಲ್ಲ ಬಾರ್, ರೆಸ್ಟೊರೆಂಟ್‍ಗಳಲ್ಲಿ ಪೈಪ್ ಹಾಕೊಂಡು ಸೇವನೆ ಮಾಡಲಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ಲಾನ್: ಅಶ್ವಥ್ ನಾರಾಯಣ್ ಘೋಷಣೆ

    ಬಿಜೆಪಿ ಅವರು ಸುಮ್ಮನೆ ಕೋವಿಡ್‍ನಲ್ಲಿ ಮಾಡಿದ್ದು ಸಾಕಾಗಿದೆ. ಪಾಪ ಅವರ ಮಂತ್ರಿ ಸುರೇಶ್ ಅಂಗಡಿ ಹೆಣನ ಇಲ್ಲಿ ಜನಕ್ಕೆ, ಕುಟುಂಬಕ್ಕೆ ತಂದು ಕೊಡಲಿಲ್ಲ. ಸುರೇಶ್ ಅಂಗಡಿ ಶವಸಂಸ್ಕಾರ ಮಾಡಲಿಕ್ಕಾಗಲಿಲ್ಲ. ಒಂದು ಸ್ಪೆಷಲ್ ಮಿಲಿಟರಿ ಫ್ಲೈಟ್‍ನಲ್ಲಿ ಹೆಣ ತಂದು ಕೊಡಲು ಆಗುತ್ತಿರಲಿಲ್ವಾ? ಈ ದೇಶಕ್ಕೆ ನಾಚಿಕೆಗೇಡು, ಒಂದು ಸಂಸ್ಕಾರ ಮಾಡಲಿಕ್ಕೆ ಬಿಡಲಿಲ್ಲ. ಇವರು ಸಂಸ್ಕೃತಿ, ಧರ್ಮ, ವಿಚಾರ ಬಗ್ಗೆ ಮಾತನಾಡುತ್ತಾರೆ, ಬಿಜೆಪಿ ಅವರು, ಅವರ ಲೀಡರ್‌ಗಳಿಗೆ ಮಾತನಾಡುವಷ್ಟು ಶಕ್ತಿ ಇಲ್ಲ ಎಂದು ಕಡಿಕಾರಿದರು.

    ಅಮಿತ್ ಶಾ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನ ಸೇರಿಸುವ ವಿಚಾರವಾಗಿ ಮಾತನಾಡಿ, ಒಂದು ಲಕ್ಷ ಆದರೂ ಸೇರಿಸಲಿ, ಒಂದು ಕೋಟಿ ಜನರನ್ನಾದರೂ ಸೇರಿಸಲಿ. ಕೋವಿಡ್‍ನಲ್ಲಾದರೂ ವ್ಯವಸ್ಥೆ ಮಾಡಲಿ, ಕೋವಿಡ್ ಇಲ್ಲದಾದ್ರೂ ಮಾಡಲಿ, ಏನ್ ಹೇಳಬೇಕೋ ಹೇಳಿಬಿಡಲಿ ತೀರ್ಮಾನ ಮಾಡೋರು ಜನ ಎಂದು ಹೇಳಿದರು. ಇದನ್ನೂ ಓದಿ: 2 ತಿಂಗಳು ಬೃಂದಾವನದಲ್ಲಿ ಪ್ರತ್ಯಕ್ಷವಾಗುತ್ತಿದ್ದ ಚಿರತೆ ಬೋನಿಗೆ

    Live Tv
    [brid partner=56869869 player=32851 video=960834 autoplay=true]

  • ಅಭಿವೃದ್ಧಿ ಆಗಬಾರದೆಂದು ನಾನು ಭಾವಿಸಿದ್ದರೆ ನೀವು ಮಲ್ಲೇಶ್ವರಂನಲ್ಲಿ ಶಾಸಕರೇ ಆಗುತ್ತಿರಲಿಲ್ಲ: ಹೆಚ್‍ಡಿಕೆ

    ಅಭಿವೃದ್ಧಿ ಆಗಬಾರದೆಂದು ನಾನು ಭಾವಿಸಿದ್ದರೆ ನೀವು ಮಲ್ಲೇಶ್ವರಂನಲ್ಲಿ ಶಾಸಕರೇ ಆಗುತ್ತಿರಲಿಲ್ಲ: ಹೆಚ್‍ಡಿಕೆ

    ಬೆಂಗಳೂರು: ಅಧಿಕಾರವೂ ತಪ್ಪಬಾರದು, ಅಭಿವೃದ್ಧಿಯೂ ಆಗಬಾರದು ಎಂದು ನಾನು ಭಾವಿಸಿದ್ದಿದ್ದರೆ ನೀವು ಮಲ್ಲೇಶ್ವರಂನಲ್ಲಿ ಶಾಸಕರೇ ಆಗುತ್ತಿರಲಿಲ್ಲ. ಆ ದಿನಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ ಎಂದು ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ (H.D.Kumaraswamy) ಸರಣಿ ಟ್ವೀಟ್‍ಗಳ ಮೂಲಕ ಸಚಿವ ಅಶ್ವಥ್‍ನಾರಾಯಣ (Dr. Ashwathnarayan) ವಿರುದ್ಧ ಕೆಂಡಕಾರಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಅಭಿವೃದ್ಧಿ ಕೆಲಸ ಎಂದರೇನು ಅಶ್ವಥ್‍ನಾರಾಯಣ ಅವರೇ? ವಾಮಮಾರ್ಗ ಎಂದರೆ ಯಾವುದು? ಇವೆರಡರಲ್ಲೂ ತಮಗೆ ಒಳ್ಳೇ ಅನುಭವವೇ ಇದೆ. ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ‘ಕಳ್ಳಮಾರ್ಗ’ದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಹೊರಟಿದ್ದು, ಕ್ಷೇತ್ರದ ಶಾಸಕರನ್ನೇ ಕತ್ತಲೆಯಲ್ಲಿ ಇಟ್ಟಿದ್ದನ್ನು ಏನೆಂದು ಕರೆಯಬೇಕು? ಇದೇನಾ ನೀವು ಹೇಳುವ ‘ರಾಜಮಾರ್ಗ’? ‘ಅಧಿಕಾರವೂ ತಪ್ಪಬಾರದು, ಅಭಿವೃದ್ಧಿಯೂ ಆಗಬಾರದು’ ಎಂದು ನಾನು ಭಾವಿಸಿದ್ದಿದ್ದರೆ ನೀವು ಮಲ್ಲೇಶ್ವರಂನಲ್ಲಿ ಶಾಸಕರೇ ಆಗುತ್ತಿರಲಿಲ್ಲ. ಆ ದಿನಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಇದನ್ನೂ ಓದಿ: ನಾನು ಬ್ಲ್ಯಾಕ್‌ ಇದ್ದೇನೆ, ಆದ್ರೆ ಬ್ಲ್ಯಾಕ್‌ ಮೇಲರ್ ಅಲ್ಲ: ಹೆಚ್‌ಡಿಕೆ ಪಂಚ್

    ಅಭಿವೃದ್ಧಿ ಬಗ್ಗೆ ಉಪದೇಶ ಮಾಡಿದ್ದೀರಿ, ನಿಮ್ಮ ಮಾದರಿಯಲ್ಲಿ ಅಭಿವೃದ್ಧಿ ಮಾಡಿಕೊಳ್ಳುವುದು ನನಗೆ ಗೊತ್ತಿಲ್ಲ, ನನ್ನಿಂದ ಆಗುವುದೂ ಇಲ್ಲ. ಅಶ್ವಥ್‍ನಾರಾಯಣ ಅವರೇ, ಅಧಿಕಾರ ಬರುತ್ತದೆ, ಹೋಗುತ್ತದೆ ಎಂದು ವೇದಾಂತ ಹೇಳಿದ್ದೀರಿ. ಹೌದು, ಇಂಥ ಉದಾತ್ತ, ಆದರ್ಶ ಚಿಂತನೆಯ, ವಿಶಾಲ ಹೃದಯ ವೈಶಾಲ್ಯವುಳ್ಳ ನಿಮ್ಮಂಥ ಪ್ರಾಜ್ಞರೇ ಆಪರೇಶನ್ ಕಮಲ ಎಂಬ ಪಾಪ ಎಸಗಿದ್ದೇಕೆ? ನಮ್ಮ ಶಾಸಕರ ಮನೆಯಲ್ಲಿ ಹಣ ಇಟ್ಟು ಬಂದ್ದಿದ್ದು ಯಾಕೆ? ಅಧಿಕಾರ ಬೇಕಿದ್ದರೆ ನೀವು ಚುನಾವಣೆಯಲ್ಲಿ ಪೂರ್ಣ ಬಹುಮತ ಸಿಗುವವರೆಗೂ ಕಾಯಬಹುದಿತ್ತಲ್ಲವೇ? ಆದರೆ, ಹಪಾಹಪಿಯಿಂದ ‘ಅಡ್ಡಮಾರ್ಗ’ ಹಿಡಿದಿದ್ದು ಏಕೆ? ಅಕ್ಕಪಕ್ಕದ ಪಕ್ಷಗಳ ಶಾಸಕರನ್ನು ಅಪಹರಿಸಿ ಆಪರೇಷನ್ ಕಮಲದ ಸರ್ಕಾರ ಮಾಡಿದ್ದು ಯಾಕೆ? ಇದು ವಾಮಮಾರ್ಗವೋ? ಸನ್ಮಾರ್ಗವೋ? ಸ್ಪಲ್ಪ ಹೇಳಿ ಅಶ್ವಥ್‍ನಾರಾಯಣ ಅವರೇ. ಇದನ್ನೂ ಓದಿ: BMS ಟ್ರಸ್ಟ್ ಖಾಸಗಿಗೆ ವಹಿಸಿದ್ರಾ ಅಶ್ವಥ್‍ ನಾರಾಯಣ್?- ಹೆಚ್‍ಡಿಕೆ ದಾಖಲೆ ರಿಲೀಸ್

    ಬಿಜೆಪಿ (BJP) ಸರ್ಕಾರ ಬಂದ ಮೇಲೆ ರಾಮನಗರ ಜಿಲ್ಲೆಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ಬಹಿರಂಗ ಚರ್ಚೆ ಮಾಡೋಣ ಬನ್ನಿ. ಆಗ ಯಾರ ಆತ್ಮಸಾಕ್ಷಿ ಏನು ಎಂಬುದು ಜನರಿಗೂ ತಿಳಿಯುತ್ತದೆ. ‘ಎಂಎಲ್‍ಸಿ ಕೋರಿಕೆ ಮೇರೆಗೆ..’ ಎಂದು ಬಿಡುಗಡೆ ಮಾಡಿದ 50 ಕೋಟಿ ರೂ. ಒಳಗುಟ್ಟಿನ ಬಗ್ಗೆಯೂ ಚರ್ಚಿಸೋಣ ಬನ್ನಿ. ನಾನು ತಯಾರಿದ್ದೇನೆ ಎಂದು ಟ್ವೀಟ್ ಮೂಲಕ ಆಹ್ವಾನ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • PSI ಅಕ್ರಮದಲ್ಲಿ ಸಚಿವರು, ಶಾಸಕರ ಕೈವಾಡ ಬಯಲಾಗಿರುವುದನ್ನು ‘ಜನವೇದನ’ ಸಮಾವೇಶದಲ್ಲಿ ಹೇಳಿಕೊಳ್ಳುವಿರಾ: ಕಾಂಗ್ರೆಸ್ ಪ್ರಶ್ನೆ

    PSI ಅಕ್ರಮದಲ್ಲಿ ಸಚಿವರು, ಶಾಸಕರ ಕೈವಾಡ ಬಯಲಾಗಿರುವುದನ್ನು ‘ಜನವೇದನ’ ಸಮಾವೇಶದಲ್ಲಿ ಹೇಳಿಕೊಳ್ಳುವಿರಾ: ಕಾಂಗ್ರೆಸ್ ಪ್ರಶ್ನೆ

    ಬೆಂಗಳೂರು: ಬಿಜೆಪಿ (BJP) ಆಡಳಿತದಲ್ಲಿ ಹೊರಬಂದ ಪಿಎಸ್‍ಐ (PSI) ಹಗರಣವೇ ನಿಮ್ಮ ಸಾಧನೆಯೇ ಬಿಜೆಪಿ? ಸಿಎಂ ಬೊಮ್ಮಾಯಿ (Basavarj Bommai) ಅವರೇ, ಪಿಎಸ್‍ಐ ಅಕ್ರಮದಲ್ಲಿ ನಿಮ್ಮ ಸಂಪುಟ ಸಚಿವರು, ಶಾಸಕರ ಕೈವಾಡ ಬಯಲಾದರೂ ಕಣ್ಮುಚ್ಚಿ ಕುಳಿತಿರುವುದನ್ನು, 54,000 ಯುವಕರಿಗೆ ಮೋಸ ಮಾಡಿದ್ದನ್ನು ಸಾಧನೆ ಎಂದು ‘ಜನವೇದನ’ ಸಮಾವೇಶದಲ್ಲಿ ಹೇಳಿಕೊಳ್ಳುವಿರಾ ಎಂದು ಕಾಂಗ್ರೆಸ್ (Congress) ಸರಣಿ ಟ್ವೀಟ್ ಮೂಲಕ ಬಿಜೆಪಿಗೆ ಚಾಟಿ ಬೀಸಿದೆ.

    ಟ್ವೀಟ್‍ನಲ್ಲಿ ಏನಿದೆ?:
    ಬಿಜೆಪಿ ಆಡಳಿತದಲ್ಲಿ ಹೊರಬಂದ ಪಿಎಸ್‍ಐ ಹಗರಣವೇ ನಿಮ್ಮ ಸಾಧನೆಯೇ ಬಿಜೆಪಿ? ಸಿಎಂ ಬೊಮ್ಮಾಯಿ ಅವರೇ, ಪಿಎಸ್‍ಐ ಅಕ್ರಮದಲ್ಲಿ ನಿಮ್ಮ ಸಂಪುಟ ಸಚಿವರು, ಶಾಸಕರ ಕೈವಾಡ ಬಯಲಾದರೂ ಕಣ್ಮುಚ್ಚಿ ಕುಳಿತಿರುವುದನ್ನು, 54,000 ಯುವಕರಿಗೆ ಮೋಸ ಮಾಡಿದ್ದನ್ನು ಸಾಧನೆ ಎಂದು ‘ಜನವೇದನ’ ಸಮಾವೇಶದಲ್ಲಿ ಹೇಳಿಕೊಳ್ಳುವಿರಾ? ಬಿಜೆಪಿ ಭ್ರಷ್ಟೋತ್ಸವ. ರಾಜ್ಯದ 54 ಸಾವಿರ ಪಿಎಸ್‍ಐ ಅಭ್ಯರ್ಥಿಗಳಿಗೆ ವಂಚಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರದ್ದು ಯಾವ ಸಾಧನೆ? ತಮ್ಮ ಕಛೇರಿಯೇ ಅಕ್ರಮದ ಅಡ್ಡೆಯಾಗಿದ್ದರೂ ಸದನದಲ್ಲಿ ಸುಳ್ಳು ಹೇಳಿ ನಾಡಿನ ದಿಕ್ಕು ತಪ್ಪಿಸಲು ಯತ್ನಿಸಿದ ಗೃಹಸಚಿವರದ್ದು ‘ಜನಸ್ಪಂದನೆ’ಯ ಸಾಧನೆಯೇ? ಈ ವಂಚನೆಯನ್ನು ಸಮಾವೇಶದಲ್ಲಿ ಹೇಳುವಿರಾ? ಇದನ್ನೂ ಓದಿ: ಹಿಮಾಂತ ಬಿಸ್ವಾ ಶರ್ಮಾ ರ‍್ಯಾಲಿಯಲ್ಲಿ ಮೈಕ್ ಕಿತ್ತುಕೊಂಡ ಅಪರಿಚಿತ ವ್ಯಕ್ತಿ – ವೀಡಿಯೋ ವೈರಲ್

    ಒಂದೆಡೆ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ನಮ್ಮದು ಪಾರದರ್ಶಕ ತನಿಖೆ ಎನ್ನುತ್ತಾರೆ ಸಿಎಂ. ಇನ್ನೊಂದೆಡೆ ಪಿಎಸ್‍ಐ ಅಕ್ರಮದಲ್ಲಿ ಸಚಿವ ಅಶ್ವಥ್‍ನಾರಾಯಣ ತಮ್ಮ ಸಹೋದರರೊಂದಿಗೆ ಸೇರಿ ಅಕ್ರಮ ನಡೆಸಿದ ಸಂಗತಿ ಬೆಳಕಿಗೆ ಬಂದರೂ ಸಚಿವರ ತನಿಖೆ ಇಲ್ಲ. ಪ್ರಕರಣ ಮುಚ್ಚಿಹಾಕಲು ಯತ್ನಿಸುವುದೇ ನಿಮ್ಮ ಸಾಧನೆಯೇ? ರಾಜ್ಯದ ಇತಿಹಾಸದಲ್ಲೇ ಎಡಿಜಿಪಿಯೊಬ್ಬರು ಅಕ್ರಮದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿದ್ದು ಇದೇ ಮೊದಲು. ಉನ್ನತ ಮಟ್ಟದ ಅಧಿಕಾರಿಗಳು ಸರ್ಕಾರ ಹಾಗೂ ಮಂತ್ರಿಗಳು ಸಹಕಾರವಿಲ್ಲದೆ ಅಕ್ರಮವನ್ನು ನಡೆಸಲು ಸಾಧ್ಯವೇ ಇಲ್ಲ.

    ಮಂತ್ರಿಗಳ ವಿಚಾರಣೆ ನಡೆಸದೆ ಭ್ರಷ್ಟರನ್ನು ರಕ್ಷಿಸಿರುವುದೇ ಬಿಜೆಪಿ ಸರ್ಕಾರದ ಸಾಧನೆ. ಪಿಎಸ್‍ಐ ಹಗರಣದಲ್ಲೂ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಮುಂದುವರಿದಿದೆ. ಸ್ವತಃ ಬಿಜೆಪಿ ಶಾಸಕ ಯತ್ನಾಳ್ ಪರೋಕ್ಷವಾಗಿ ಈ ಸಂಗತಿಯನ್ನು ಬಹಿರಂಗಪಡಿಸಿದರೂ ತನಿಖೆಯಾಗುವುದಿಲ್ಲ. ಅವರಿಗೆ ತಮ್ಮ ತಂದೆಯ ಆಡಳಿತದಲ್ಲಿ ಸಿಕ್ಕ “ಸೂಪರ್ ಸಿಎಂ” ಹುದ್ದೆ ನಿಮ್ಮ ಅವಧಿಯಲ್ಲೂ ಮುಂದುವರಿದಿದೆಯೇ ಬೊಮ್ಮಾಯಿ ಅವರೇ? ರಾಜ್ಯದ ಜನತೆಗೆ ಯಾವ ಸಾಧನೆ, ಯೋಜನೆ, ಸ್ಪಂದನೆ ಮಾದಿದ್ದರೆಂದು ಸರ್ಕಾರ ಸಮಾವೇಶ ಮಾಡುತ್ತಿದೆ? ಸರ್ಕಾರ ಕರ್ನಾಟಕದ ಜನತೆಗೆ, ಕನ್ನಡ ನಾಡುನುಡಿಗೆ ಮಾಡಿದ್ದು ಬಿಟ್ಟರೆ ಬೇರೇನು ಮಾಡಿದೆ? ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ನಾಡಿನ ಸಾಹಿತಿಗಳಿಗೆ ಅವಮಾನಿಸಿದ್ದೇ ನಿಮ್ಮ ಸಾಧನೆಯೇ ಬೊಮ್ಮಾಯಿ ಅವರೇ? ಬಿಜೆಪಿ ಅವರ ಒಂದು ವರ್ಷದ ವಾರ್ಷಿಕೋತ್ಸವಕ್ಕೆ ಸಜ್ಜಾಗಿರುವ ಸರ್ಕಾರ ತಮ್ಮ ಸಾಧನೆ ಏನು ಎಂದು ನಾಡಿನ ಜನತೆಗೆ ಉತ್ತರಿಸಬೇಕು. ಇದನ್ನೂ ಓದಿ: ಗಣಿಗಾರಿಕೆಯಿಂದ ಭಾರತದ GDPಗೆ ಶೇ.2.5 ರಷ್ಟು ಕೊಡುಗೆ: ಪ್ರಲ್ಹಾದ್ ಜೋಶಿ

    ಪಠ್ಯಪುಸ್ತಕಗಳಲ್ಲಿ ಅವಾಂತರ ಸೃಷ್ಟಿಸಿದ ಸರ್ಕಾರ ಇನ್ನೂ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗಲಿಲ್ಲ. ದೇಶದ್ರೋಹಿಗಳನ್ನು ದೇಶಭಕ್ತರನ್ನಾಗಿ ಬಿಂಬಿಸಿದ್ದೇ ಸಾಧನೆಯೇ? ಸಾಹಿತ್ಯವನ್ನೇ ಅರಿಯದ, ಸುಳ್ಳು ಹೇಳುವುದನ್ನು, ಇತಿಹಾಸ ತಿರುಚುವುದನ್ನು ಕಾಯಕ ಮಾಡಿಕೊಂಡಿರುವ ಬಿಜೆಪಿಯ ಬಾಡಿಗೆ ಭಾಷಣಕಾರನೂ ಮಕ್ಕಳ ಭವಿಷ್ಯ ರೂಪಿಸುವ ಪಠ್ಯದಲ್ಲಿ ಜಾಗ ಪಡೆದದ್ದಕ್ಕಿಂತ ದುರಂತ ಬೇರೊಂದಿಲ್ಲ. ಪಠ್ಯ ಪುಸ್ತಕ ರಚನೆಗೆ ಅಪ್ರಬುದ್ಧರನ್ನು ಕೂರಿಸಿ ಅವಾಂತರ ಎಬ್ಬಿಸಿದ್ದು ಸರ್ಕಾರದ ಮಹಾ ಸಾಧನೆಗಳಲ್ಲೊಂದು! ಮಹಿಳೆಯರಿಗೆ, ಶೋಷಿತರಿಗೆ ಅಕ್ಷರದ ದಾಸೋಹ ನಡೆಸಿದ, “ಅಕ್ಷರದವ್ವ” ಎಂದೇ ಖ್ಯಾತರಾದ ಸಾವಿತ್ರಿ ಬಾ ಪುಲೆ ಅವರ ಪಠ್ಯವನ್ನು ಕೈಬಿಟ್ಟ ಸರ್ಕಾರ ಪಠ್ಯಪುಸ್ತಕಗಳಲ್ಲಿ ಬುಲ್ ಬುಲ್ ಹಕ್ಕಿ ಹಾರಿಸುತ್ತಿದೆ! ಶಿಕ್ಷಣ ವಿರೋಧಿಯಾಗಿ ವರ್ತಿಸಿದ್ದು, ಮಹನೀಯರಿಗೆ ಅವಮಾನಿಸಿದ್ದು ನಿಮ್ಮ ಒಂದು ವರ್ಷದ ಸಾಧನೆಯೇ ಬೊಮ್ಮಾಯಿ ಅವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಸ್ಥಾಪನೆಯಾಗಲಿದೆ 8 ವಿವಿ – ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ

    ರಾಜ್ಯದಲ್ಲಿ ಸ್ಥಾಪನೆಯಾಗಲಿದೆ 8 ವಿವಿ – ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ

    ಬೆಂಗಳೂರು: ಎಂಟು ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಕರ್ನಾಟಕ ವಿವಿಗಳ ಕಾಯ್ದೆ 2000ಕ್ಕೆ ತಿದ್ದುಪಡಿ ತರಲು ಇಂದು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

    ಈ ಕುರಿತು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದಾರೆ. ಕಾಯ್ದೆ ತಿದ್ದುಪಡಿಯಿಂದಾಗಿ ಚಾಮರಾಜನಗರ, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ, ಬೀದರ್ ಮತ್ತು ಮಂಡ್ಯ ವಿ.ವಿ.ಗಳ ಸ್ಥಾಪನೆ ಸುಗಮವಾಗಿ ನಡೆಯಲಿದೆ.

    ಹೊಸ ವಿವಿಗಳ ಪೈಕಿ ಕ್ರಮವಾಗಿ ಚಾಮರಾಜನಗರ ವಿವಿಯಲ್ಲಿ 18, ಹಾಸನ ವಿವಿಯಲ್ಲಿ 36, ಹಾವೇರಿ 40, ಬೀದರ್ 140, ಕೊಡಗು 24, ಕೊಪ್ಪಳ 40 ಮತ್ತು ಬಾಗಲಕೋಟೆ ವಿವಿಗಳು 71 ಕಾಲೇಜುಗಳನ್ನು ಹೊಂದಿರಲಿವೆ. ಇವುಗಳ ಜತೆಗೆ ಮಂಡ್ಯ ವಿವಿ ವ್ಯಾಪ್ತಿಗೆ ಆ ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳು ಬರಲಿವೆ.

    ಮಂಡ್ಯ ವಿವಿ ಒಂದನ್ನು ಹೊರತುಪಡಿಸಿ ಮಿಕ್ಕ 7 ವಿವಿಗಳ ಆರಂಭವನ್ನು ಈ ವರ್ಷದ ಬಜೆಟ್‍ನಲ್ಲಿ ಘೋಷಿಸಲಾಗಿತ್ತು. ಇದಕ್ಕಾಗಿ ಈಗಾಗಲೇ ತಲಾ 2 ಕೋಟಿ ರೂ.ಗಳಂತೆ ಒಟ್ಟು 14 ಕೋಟಿ ರೂ. ಒದಗಿಸಲಾಗಿದೆ. ಏಕೀಕೃತ ವಿವಿಯಾಗಿದ್ದ ಮಂಡ್ಯದ ಸರ್ಕಾರಿ ಕಾಲೇಜನ್ನು ಪೂರ್ಣ ಪ್ರಮಾಣದ ವಿವಿಯಾಗಿ ಮಾಡುವ ತೀರ್ಮಾನವನ್ನು ಇತ್ತೀಚೆಗೆ ಕೈಗೊಳ್ಳಲಾಗಿತ್ತು.

    ASHWATH NARAYAN 1

    ಜಿಲ್ಲೆಗೊಂದು ವಿವಿ ಇರಬೇಕು ಎನ್ನುವುದು ಸರ್ಕಾರದ ತೀರ್ಮಾನವಾಗಿದೆ. ಈ ಮೂಲಕ ಶೈಕ್ಷಣಿಕ ಅಸಮತೋಲನ ನಿವಾರಣೆ ಮಾಡಲಾಗುವುದು. ಜೊತೆಗೆ, ಯುವಜನರಿಗೆ ಮನೆ ಬಾಗಿಲಲ್ಲೇ ಗುಣಮಟ್ಟದ ಶಿಕ್ಷಣ ನೀಡುವ ಸದಾಶಯ ಇದರ ಹಿಂದಿದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಕುಡುಕ ಗಂಡನ ಮದ್ವೆಯಾಗಿದ್ದೇವೆ, ಡಿವೋರ್ಸ್ ಕೊಡೋಕೆ ಆಗ್ತಿಲ್ಲ: ಮುತಾಲಿಕ್

    ನೂತನ ವಿವಿಗಳ ಸ್ಥಾಪನೆಗೆ ಆರ್ಥಿಕ ಮತ್ತು ಯೋಜನಾ ಇಲಾಖೆಗಳು ಒಪ್ಪಿಗೆ ನೀಡಿವೆ. ಇವು ಕಡಿಮೆ ಸ್ಥಳ, ಕಡಿಮೆ ಸಿಬ್ಬಂದಿ ಮತ್ತು ಕಡಿಮೆ ವೆಚ್ಚದೊಂದಿಗೆ ಕಾರ್ಯ ಚಟುವಟಿಕೆ ನಡೆಸಲಿವೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿಗಳಿಕೆ – ಡಿಕೆಶಿ ಆಪ್ತನಿಗೆ CBI ನೋಟಿಸ್

    Live Tv
    [brid partner=56869869 player=32851 video=960834 autoplay=true]

  • ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಖುದ್ದಾಗಿ ತೆರಳಿ ಗೌರವ ಸಲ್ಲಿಸಿದ ರಾಜ್ಯಪಾಲರು

    ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಖುದ್ದಾಗಿ ತೆರಳಿ ಗೌರವ ಸಲ್ಲಿಸಿದ ರಾಜ್ಯಪಾಲರು

    ಬೆಂಗಳೂರು: ಕ್ವಿಟ್ ಇಂಡಿಯಾ ಚಳವಳಿ ವರ್ಷಾಚರಣೆ ಅಂಗವಾಗಿ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಂಗಳವಾರ ಬೆಂಗಳೂರಿನಲ್ಲಿರುವ ಮೂವರು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಖುದ್ದಾಗಿ ತೆರಳಿ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ, ಸಿಹಿ ತಿನಿಸುವ ಮೂಲಕ ಗೌರವ ಸಲ್ಲಿಸಿದರು.

    ಜೆಪಿ ನಗರದ 4ನೇ ಹಂತದ ಆಶ್ರಯ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿರುವ ಸ್ವಾತಂತ್ರ್ಯ ಹೋರಾಟಗಾರರಾದ ಆರ್. ನಾರಾಯಣಪ್ಪ ಅವರ ಮನೆಗೆ ತೆರಳಿದ ಅವರು, ಆರ್. ನಾರಾಯಣಪ್ಪ ಅವರಿಗೆ ಸನ್ಮಾನಿಸಿ, ಸಿಹಿ ತಿನಿಸಿದರು. ನಂತರ ಅವರಿಗೆ ಪ್ರಮಾಣ ಪತ್ರ ನೀಡಿ, ನಮನ ಸಲ್ಲಿಸಿದರು. ಈ ವೇಳೆ ಕಂದಾಯ ಸಚಿವ ಆರ್. ಅಶೋಕ್ ಭಾಗಿಯಾಗಿದ್ದರು.

    ನಂತರ ಬನಶಂಕರಿ 3ನೇ ಹಂತದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಾದ ಶಂಕರನಾರಾಯಣ ರಾವ್ ಅವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ, ಸಿಹಿ ತಿನಿಸಿದರು. ಅವರೊಂದಿಗೆ ಕೆಲಕಾಲ ಕುಶಲೋಪರಿ ವಿಚಾರಿಸಿದ ರಾಜ್ಯಪಾಲರು, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ತಮಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

    ತದನಂತರ ಮಲ್ಲೇಶ್ವಂರಂನಲ್ಲಿರುವ ನಾಗಭೂಷಣ್ ರಾವ್ ಅವರ ಮನೆಗೆ ತೆರಳಿದ ಗೆಹ್ಲೋಟ್, ನಾಗಭೂಷಣ್ ರಾವ್ ಅವರನ್ನು ಸನ್ಮಾನಿಸಿ, ಸಿಹಿ ತಿನಿಸಿದರು. ನಂತರ ಅವರ ಕುಶಲೋಪರಿ ವಿಚಾರಿಸಿದರು. ಈ ವೇಳೆ ನಾಗಭೂಷಣ್ ಅವರು ಸ್ವಾತಂತ್ರ್ಯದ ಹೋರಾಟಗಳಲ್ಲಿ ಭಾಗಿಯಾದ ಘಟನೆಗಳ ಬಗ್ಗೆ ವಿವರಿಸಿದರು. ಇದರ ಬಗ್ಗೆ ಮಾಹಿತಿ ಪಡೆದ ರಾಜ್ಯಪಾಲರು, ತಮ್ಮ ದೇಶ ಸೇವೆ ನಮ್ಮೆಲ್ಲರಿಗೆ ಸ್ಫೂರ್ತಿ. ನಿಮಗೆ ಹಾಗೂ ನಿಮ್ಮ ಕುಟುಂಬಗಳಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿ ತಲೆಬಾಗಿ ನಮಿಸಿದರು. ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ: ಈಶ್ವರ ಖಂಡ್ರೆ ವಾಗ್ದಾಳಿ

    ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್‍ನಾರಾಯಣ, ಜಿಲ್ಲಾಧಿಕಾರಿ ಶ್ರೀನಿವಾಸ್ ಸೇರಿದಂತೆ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಎಲ್ಲಿದ್ದೀಯಪ್ಪಾ ಕುಮಾರಸ್ವಾಮಿ?: ಸಚಿವ ಅಶ್ವಥ್‍ನಾರಾಯಣ್ ಲೇವಡಿ

    Live Tv
    [brid partner=56869869 player=32851 video=960834 autoplay=true]

  • ಮಂಕಿಪಾಕ್ಸ್ ಪತ್ತೆಗೆ RTPCR ಕಿಟ್ ಬಿಡುಗಡೆಗೊಳಿಸಿದ ಅಶ್ವಥ್‍ನಾರಾಯಣ

    ಮಂಕಿಪಾಕ್ಸ್ ಪತ್ತೆಗೆ RTPCR ಕಿಟ್ ಬಿಡುಗಡೆಗೊಳಿಸಿದ ಅಶ್ವಥ್‍ನಾರಾಯಣ

    ಬೆಂಗಳೂರು: ಮಂಕಿಪಾಕ್ಸ್ ಪತ್ತೆಹಚ್ಚಲು ಅಭಿವೃದ್ಧಿಪಡಿಸಿರುವ ಆರ್‌ಟಿಪಿಸಿಆರ್ ಕಿಟ್ ಸೇರಿದಂತೆ ಒಂಬತ್ತು ಉತ್ಪನ್ನಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವಥ್‍ನಾರಾಯಣ ಬಿಡುಗಡೆ ಮಾಡಿದರು.

    ನಿಯೋಡೆಎಕ್ಸ್ ಬಯೋಟೆಕ್ ಲ್ಯಾಬ್ಸ್‌ನ ಡಾ.ಪ್ರಭಾಕರ ಕುಲಕರ್ಣಿ ಅಭಿವೃದ್ಧಿಪಡಿಸಿರುವ ಈ ಕಿಟ್‍ನಿಂದ ಸುಲಭವಾಗಿ ಮಂಕಿಪಾಕ್ಸ್ ವೈರಸ್ ಅನ್ನು ಪತ್ತೆಹಚ್ಚಬಹುದಾಗಿದೆ. ಇದೇ ರೀತಿ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಹಚ್ಚಲು ನೆರವಾಗುವ ಅನ್ಕೊ ಡಿಎಕ್ಸ್, ನ್ಯೂ ಹಾರ್ಟ್ ಮತ್ತು ಪ್ಯೂರ್ ವಾಟರ್ ಹೀಗೆ ಒಂಬತ್ತು ಉತ್ಪನ್ನಗಳನ್ನು ಸಚಿವರು ಬಿಡುಗಡೆ ಮಾಡಿದರು. ಇದನ್ನೂ ಓದಿ: ಸ್ವಾತಂತ್ರ‍್ಯ ಹೋರಾಟಗಾರರ ಮನೆಗಳಿಗೇ ತೆರಳಿ ಸನ್ಮಾನಿಸಲಿದ್ದಾರೆ ರಾಜ್ಯಪಾಲರು

    ಎಲೆಕ್ಟ್ರಾನಿಕ್ಸ್ ಸಿಟಿಯ ಹೆಲಿಕ್ಸ್ ಪಾರ್ಕ್‍ನಲ್ಲಿ ಇರುವ ಮಾನವ ತಳಿಶಾಸ್ತ್ರ ಕೇಂದ್ರವು (ಸಿಎಚ್‍ಜಿ) ಅಪರೂಪದ ರೋಗಗಳ ಸಂಶೋಧನೆ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದು, ಅದರ ನೂತನ ಕಟ್ಟಡ ನಿರ್ಮಾಣಕ್ಕೆ ಅಶ್ವಥ್‍ನಾರಾಯಣ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.

    ಸುಮಾರು ನಲವತ್ತು ಸಾವಿರ ಚದರ ಅಡಿ ವಿಸ್ತರಣೆಯ ಮೂರು ಮಹಡಿಯ ಕಟ್ಟಡ ನಿರ್ಮಿಸುತ್ತಿದ್ದು, ಇಲ್ಲಿ ಅಪರೂಪದ ಕಾಯಿಲೆ ಹೊಂದಿರುವ ವರ್ಷಕ್ಕೆ ಸುಮಾರು ಎರಡೂವರೆ ಸಾವಿರ ಕುಟುಂಬಗಳಿಗೆ ಸಮಗ್ರ ಅನುವಂಶಿಕ ಸಮಾಲೋಚನೆ ಸೌಲಭ್ಯ, ಎಕ್ಸೋಮ್ ಸೀಕ್ವೆನ್ಸಿಂಗ್ ಸೇರಿದಂತೆ ರೋಗನಿರ್ಣಯದ ಪರೀಕ್ಷಾ ಸೌಲಭ್ಯದ ಸಾಮರ್ಥ್ಯ ಹೆಚ್ಚಿಸಲು ಬಳಸಲಾಗುವುದು ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ತ್ಯಾಗ, ಬಲಿದಾನಗಳ ಸ್ಮರಣೆಯೇ ಅಮೃತ ಮಹೋತ್ಸವ: ಅಶ್ವಥ್‍ನಾರಾಯಣ

    ಪ್ರಸವಪೂರ್ವ ರೋಗನಿರ್ಣಯಕ್ಕಾಗಿ ತರಬೇತಿ ಮತ್ತು ಸೇವಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ, ಗರ್ಭಾವಸ್ಥೆಯಲ್ಲಿನ ಅನುವಂಶಿಕ ರೋಗಗಳನ್ನು ಆರಂಭದಲ್ಲೇ ಗುರುತಿಸುವಿಕೆಗೆ ಸಹಾಯ ಮಾಡುವುದು ಕೂಡ ಇದರ ಮುಖ್ಯ ಉದ್ದೇಶ. ಪ್ರಯೋಗಾಲಯದ ತಳಿಶಾಸ್ತ್ರದಲ್ಲಿ ತರಬೇತಿ ನೀಡುವುದಕ್ಕೂ ಕ್ರಮ ತೆಗೆದುಕೊಳ್ಳಲಾಗುವುದು. ಒಟ್ಟಿನಲ್ಲಿ ಅಪರೂಪದ ರೋಗಗಳಿಗೆ ಕಡಿಮೆ ವೆಚ್ಚದ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಂಶೋಧನೆ ಮತ್ತು ಹೊಸ ಔಷಧಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.

    ಮಾನವನ ಆರೋಗ್ಯ ಮತ್ತು ಕಾಯಿಲೆಗೆ ಸಂಬಂಧಿಸಿದಂತೆ ತಳಿಶಾಸ್ತ್ರದಲ್ಲಿ ಶಿಕ್ಷಣ, ಅನುವಂಶಿಕ ಕಾಯಿಲೆಗಳ ತರಬೇತಿ ಮತ್ತು ಸಂಶೋಧನೆಗಾಗಿ ರಾಷ್ಟ್ರಮಟ್ಟದಲ್ಲಿ ಶೇಷ್ಟತೆಯ ಕೇಂದ್ರವೆಂದು ಇದನ್ನು ಗುರುತಿಸಿದ್ದು, ಇಪ್ಪತ್ತು ವರ್ಷಗಳಿಂದ ರಾಜ್ಯ ಮಾತ್ರವಲ್ಲದೆ, ಇಡೀ ದೇಶದ ಅಪರೂಪದ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಇದಕ್ಕೊಂದು ಕಟ್ಟಡದ ಅಗತ್ಯವನ್ನು ಮನಗಂಡು ನಿರ್ಮಿಸಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

    ಕಳೆದ ಹದಿನೈದು ವರ್ಷಗಳಲ್ಲಿ ಸುಮಾರು ಮೂವತ್ತೈದು ಸಾವಿರ ಕುಟುಂಬಗಳಿಗೆ ಅನುವಂಶಿಕ ರೋಗಗಳನ್ನು ಪತ್ತೆಹಚ್ಚಿ ಅದಕ್ಕೆ ಸೂಕ್ತ ಸಲಹೆ ನೀಡುತ್ತಿರುವುದು ನಿಜಕ್ಕೂ ಮೆಚ್ಚುವಂತಹದ್ದು ಎಂದು ಸಚಿವರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಹಿಂದಿಯನ್ನು ಕಿತ್ತೊಗೆದು, ಕನ್ನಡಿಗರ ಸ್ವಾಭಿಮಾನ ಉಳಿಸಿ : ಅಮಿತ್ ಶಾ ವಿರುದ್ಧ ಸಿದ್ದು ಕಿಡಿ

    ಕರ್ನಾಟಕ ನಾವಿನ್ಯತಾ ಮತ್ತು ತಂತ್ರಜ್ಞಾನ ಸಂಸ್ಥೆ (ಕಿಟ್ಸ್)ಯಡಿಯ ಬೆಂಗಳೂರು ಜೈವಿಕ ನಾವಿನ್ಯತಾ ಸಂಸ್ಥೆಯಲ್ಲಿ (ಬಿಬಿಸಿ) ಕಾರ್ಯನಿರ್ವಹಿಸುತ್ತಿರುವ ನಮೋದ್ಯಮಗಳು ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿವೆ.

    Live Tv
    [brid partner=56869869 player=32851 video=960834 autoplay=true]

  • ತ್ಯಾಗ, ಬಲಿದಾನಗಳ ಸ್ಮರಣೆಯೇ ಅಮೃತ ಮಹೋತ್ಸವ: ಅಶ್ವಥ್‍ನಾರಾಯಣ

    ತ್ಯಾಗ, ಬಲಿದಾನಗಳ ಸ್ಮರಣೆಯೇ ಅಮೃತ ಮಹೋತ್ಸವ: ಅಶ್ವಥ್‍ನಾರಾಯಣ

    ಬೆಂಗಳೂರು: ಭಾರತದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನರ ತ್ಯಾಗ, ಬಲಿದಾನಗಳು ನಡೆದಿವೆ. ಆ ತ್ಯಾಗ, ಬಲಿದಾನ ಮಾಡಿರುವ ಮಹನೀಯರನ್ನು ನೆನೆಯಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಗೆ ಕರೆ ನೀಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್‍ನಾರಾಯಣ ಹೇಳಿದರು.

    ಅಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯುನ್ಮಾನ ಮಾಧ್ಯಮ ವಿಭಾಗ ಮತ್ತು ದಿಶಾ ಭಾರತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 75 ವರ್ಷಗಳಲ್ಲಿ ಭಾರತವು ವಿವಿಧತೆಯಲ್ಲಿ ಏಕತೆ ಸಾಧಿಸಿದೆ. ಅದಕ್ಕಾಗಿಯೇ ಪ್ರಧಾನಿ ಮೋದಿ ಅವರು ಇದೊಂದು ಅಮೃತ ಕಾಲ ಎಂದು ಘೋಷಿಸಿದ್ದಾರೆ ಎಂದರು.

    ನಮ್ಮ ರಾಜ್ಯದಲ್ಲಿ ಆರೂವರೆ ಕೋಟಿ ಜನಸಂಖ್ಯೆ ಇದ್ದರೂ, ಗುಣಮಟ್ಟದ ಶಿಕ್ಷಣದ ಕೊರತೆಯಿಂದಾಗಿ ಟ್ಯಾಲೆಂಟ್‍ಗೂ ಕೊರತೆ ಉಂಟಾಗಿದೆ. ತರಗತಿಯ ಕಲಿಕೆಯಿಂದ ಹೊರಬಂದರೆ ಮಾತ್ರ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಎನ್‍ಇಪಿ ಜಾರಿಗೆ ತರಲಾಗಿದೆ. ಈ ನಾಡಿನಲ್ಲಿ ಪ್ರತಿಯೊಬ್ಬ ಯುವಕರೂ ಕೌಶಲ ಹೊಂದಬೇಕು. ಆ ಮೂಲಕ ಪ್ರತಿಯೊಬ್ಬರೂ ಉದ್ಯೋಗ ಪಡೆಯುವಂತಾಗಬೇಕು ಎಂಬ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಇಡಿ, ಸಿಬಿಐಯವರು ಬರ್ತಾರೆ ಅಂತ ನಿದ್ದೆ ಬರ್ತಿಲ್ಲ, ಟೆನ್ಶನ್ ಹೆಚ್ಚಾಗಿದೆ: ಕೆಜಿಎಫ್ ಬಾಬು

    ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ್‍ಕುಮಾರ್ ಮಾತನಾಡಿ, ಮನೆಗಿಂತ ದೊಡ್ಡ ವಿಶ್ವವಿದ್ಯಾಲಯ ಮತ್ತೊಂದಿಲ್ಲ. ಮನೆಯ ಸಂಸ್ಕೃತಿಯಿಂದ ಕಲಿಯದ ಪಾಠ ಬೇರೆ ಎಲ್ಲಿಂದಲೂ ಕಲಿಯಲು ಸಾಧ್ಯವಿಲ್ಲ. ದಾನ, ಧರ್ಮದ ಬಗ್ಗೆ ಯಾವ ವಿಶ್ವವಿದ್ಯಾಲಯದಲ್ಲಿ ಕಲಿಸುವುದಿಲ್ಲ. ಆದರೆ ನಮ್ಮ ಹಳ್ಳಿಗಳಲ್ಲಿರುವ ರೈತರು ಬೆಳೆ ಬಂದಾಗ ಬಡವರಿಗೆ, ದರಿದ್ರರಿಗೆ ದಾನ ಮಾಡಿ ನಂತರ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಪರಂಪರಾಗತದಿಂದ ಇಂತಹ ಗುಣವನ್ನು ಕಲಿಸಿದ್ದು ಭಾರತ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಬೆಂವಿವಿ ಕುಲಪತಿ ಡಾ.ಎಸ್.ಎಂ.ಜಯಕರ, ಕುಲಸಚಿವ ಡಾ.ಎಂ.ಕೊಟ್ರೇಶ್, ದಿಶಾ ಭಾರತ್ ಅಧ್ಯಕ್ಷ ಡಾ.ಎನ್.ವಿ.ರಘುರಾಮ್ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮ- ಮತ್ತೆ 8 ಅಭ್ಯರ್ಥಿಗಳು ಅರೆಸ್ಟ್; ಹಲವರು ಸರ್ಕಾರಿ ನೌಕರರು

    Live Tv
    [brid partner=56869869 player=32851 video=960834 autoplay=true]