Tag: ಅಶ್ವಥಿ

  • ಮಂಡ್ಯದ ವಸತಿ ಶಾಲೆಯಿಂದ 9ನೇ ತರಗತಿ ವಿದ್ಯಾರ್ಥಿ ನಾಪತ್ತೆ – ಪೊಲೀಸರಿಗೆ ಸವಾಲಾಯ್ತು ಕೇಸ್

    ಮಂಡ್ಯದ ವಸತಿ ಶಾಲೆಯಿಂದ 9ನೇ ತರಗತಿ ವಿದ್ಯಾರ್ಥಿ ನಾಪತ್ತೆ – ಪೊಲೀಸರಿಗೆ ಸವಾಲಾಯ್ತು ಕೇಸ್

    ಮಂಡ್ಯ: ತಾಯಿ ಇಲ್ಲದ ತಬ್ಬಲಿ ಮಗು ಎಂದು ಅಜ್ಜಿ ಆ ಹುಡುಗನನ್ನು ಮುದ್ದಾಗಿ ಸಾಕಿದ್ದಳು. ಇದೀಗ ಆ ಹುಡುಗ ವಸತಿ ಶಾಲೆಯಿಂದ (Residential School) ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಇತ್ತ ಮುದ್ದಾಗಿ ಸಾಕಿದ್ದ ಮೊಮ್ಮಗ ಕಾಣುತ್ತಿಲ್ಲ ಎಂದು ಅಜ್ಜಿ ಕಣ್ಣೀರಿಡುತ್ತಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲೂಕಿನ ಹಿರೇಮರಹಳ್ಳಿ ಗ್ರಾಮದ ಈರೇಗೌಡ ಎಂಬುವವರ ಪುತ್ರ ಕಿಶೋರ್ ನಾಪತ್ತೆಯಾಗಿದ್ದಾನೆ. ಚಿಕ್ಕ ವಯಸ್ಸಿನಲ್ಲಿ ತಾಯಿ ಕಳೆದುಕೊಂಡು ತಬ್ಬಲಿಯಾದ ಕಿಶೋರ್‌ನನ್ನು ತಂದೆ ಹಾಗೂ ಅಜ್ಜಿ ಪ್ರೀತಿಯಿಂದ ಸಾಕಿ ಸಲಹಿದ್ದರು. ಕಿಶೋರ್‌ನನ್ನು ವಿದ್ಯಾವಂತನನ್ನಾಗಿ ಮಾಡಬೇಕೆಂಬ ಕನಸನ್ನು ಕಟ್ಟಿಕೊಂಡಿದ್ದರು. ಹೀಗಾಗಿ ಕಿಶೋರ್‌ನನ್ನು ಮಂಡ್ಯದ ತಂಗಳಕೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ (Morarji Desai Residential School) ಸೇರಿಸಿದ್ದರು. ಇದನ್ನೂ ಓದಿ: ಗೇಟ್ ತೆಗೆಯೋದು ತಡವಾಗಿದ್ದಕ್ಕೆ ಸೆಕ್ಯೂರಿಟಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕಿ

    ವಸತಿ ಶಾಲೆಯಲ್ಲಿ ಕಿಶೋರ್ 9ನೇ ತರಗತಿ ವಿದ್ಯಾಭ್ಯಾಸ (Education) ಮಾಡುತ್ತಿದ್ದ. ಜು.27ರಂದು ರಜೆ ಇದ್ದ ಕಾರಣ ಕಿಶೋರ್ ವಸತಿ ಶಾಲೆಯಿಂದ ಮನೆಗೆ ಬಂದಿದ್ದ. ನಂತರ ರಜೆ ಮುಗಿದ ಬಳಿಕ ತಂದೆ ಈರೇಗೌಡ ಕಿಶೋರ್‌ನನ್ನು ಆ.8 ರಂದು ಮತ್ತೆ ವಸತಿ ಶಾಲೆಗೆ ಬಿಟ್ಟು ಬಂದಿದ್ದರು. ಇದಾದ ನಂತರ ಮತ್ತೆ ಗೌರಿ-ಗಣೇಶ ಹಬ್ಬಕ್ಕೆ (Ganesha Festoival) ತಾಯಿಗೆ ಎಡೆ ಇಡಲು ಕಿಶೋರ್‌ನನ್ನು ಮನೆಗೆ ಕರೆತರಲು ಹೋದ ವೇಳೆ ಇಲ್ಲಿನ ಶಿಕ್ಷಕರು 20 ದಿನಗಳಿಂದ ನಿಮ್ಮ ಮಗ ಶಾಲೆಗೇ ಬಂದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಕ್ಸ್ ಚಚ್ಚಿ ಅಂಪೈರ್‌ರನ್ನು ಬಡಿದೆಬ್ಬಿಸಿದ ಸ್ಮಿತ್ – ಆಸಿಸ್ ಆಟಗಾರನ ಕ್ರೀಡಾ ಬದ್ಧತೆಗೆ ಮೆಚ್ಚುಗೆ

    ಆ.8 ರಂದು ಈರೇಗೌಡ ಕಿಶೋರ್‌ನನ್ನು ಮೊರಾರ್ಜಿ ದೇಸಾಯಿ ಶಾಲೆಗೆ ಬಿಡುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಕಿಶೋರ್ ಮತ್ತೆ ಶಾಲೆಯಿಂದ ಹೊರ ಬರುವ ದೃಶ್ಯ ಮಾತ್ರ ಇಲ್ಲ. ಇದಲ್ಲದೇ ಕಿಶೋರ್ ಟ್ರಂಕ್ ಹಾಗೂ ಬಟ್ಟೆಗಳು ಹಾಸ್ಟೆಲ್‌ನಲ್ಲೇ ಇವೆ. ಟ್ರಂಕ್ ಬಳಿ ಒಂದು ಲೆಟರ್ ಸಿಕ್ಕಿದ್ದು, ಇದ್ರಲ್ಲಿ ನನಗೆ ಈ ಶಾಲೆಯಲ್ಲಿ ಓದಲು ಇಷ್ಟವಿಲ್ಲ. ಈ ಬಗ್ಗೆ ನಿಮಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಅಪ್ಪ-ಚಿಕ್ಕಪ್ಪ ನನ್ನ ಹುಡುಕಬೇಡಿ ಎಂದು ಬರೆದಿದೆ. ಆದ್ರೆ ಕಿಶೋರ್ ಪೋಷಕರು ಇದು ನನ್ನ ಮಗನ ಕೈಬರಹವಲ್ಲ ಎಂದು ಹೇಳುತ್ತಿದ್ದಾರೆ. ಇತ್ತ ಪ್ರೀತಿಯಿಂದ ಸಾಕಿದ ಮೊಮ್ಮಗ ಕಾಣೆಯಾಗಿರುವ ಸುದ್ದಿಯನ್ನು ಕೇಳಿ ಅಜ್ಜಿ ಕಣ್ಣೀರು ಹಾಕುತ್ತಿದ್ದಾಳೆ. ಇದನ್ನೂ ಓದಿ: ಕೆರೆ ಮಧ್ಯ ತೆಪ್ಪದಲ್ಲಿ ತೆರಳಿ ಬೆಸ್ಕಾಂ ಸಿಬ್ಬಂದಿಯಿಂದ ವಿದ್ಯುತ್ ದುರಸ್ತಿ – ಎಲ್ಲೆಡೆ ಮೆಚ್ಚುಗೆ

    ವಿದ್ಯಾರ್ಥಿಯೊಬ್ಬ ಮೊರಾರ್ಜಿ ದೇಸಾಯಿ ಶಾಲೆಯಿಂದ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಿಸಿಟಿವಿ ದೃಶ್ಯದಲ್ಲಿ ವಿದ್ಯಾರ್ಥಿ ಶಾಲೆಯಿಂದ ಹೊರಗೆ ಹೋಗುವುದು ಸೆರೆಯಾಗಿಲ್ಲ. ಹೀಗಿರುವಾಗ ವಿದ್ಯಾರ್ಥಿ ಎಲ್ಲಿಗೆ ಹೋದ ಎಂಬ ಪ್ರಶ್ನೆಗಳು ಮೂಡುತ್ತಿದೆ. ಈ ಬಗ್ಗೆ ಕಿಶೋರ್ ಪೋಷಕರು ಕೆರಗೊಡು ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಕೇಳಿದ್ರೆ ಈ ಬಗ್ಗೆ ತನಿಖೆ ನಡೆಯುತ್ತಿದೆ. ವಿದ್ಯಾರ್ಥಿಯನ್ನು ಹುಡುಕುತ್ತೇವೆ, ಅಲ್ಲದೇ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ ಹಾಗೂ ವಾರ್ಡನ್ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಿಸಿ ಆದೇಶ ಉಲ್ಲಂಘಿಸಿ ತಹಶೀಲ್ದಾರ್ ಭರ್ಜರಿ ಬರ್ತ್ ಡೇ ಪಾರ್ಟಿ

    ಡಿಸಿ ಆದೇಶ ಉಲ್ಲಂಘಿಸಿ ತಹಶೀಲ್ದಾರ್ ಭರ್ಜರಿ ಬರ್ತ್ ಡೇ ಪಾರ್ಟಿ

    – ಜನರಿಗೊಂದು ರೂಲ್ಸ್ ಅಧಿಕಾರಿಗಳಿಗೊಂದು ರೂಲ್ಸ್?

    ಮಂಡ್ಯ: ಕೊರೊನಾ ಮೂರನೇ ಅಲೆ ಹಿನ್ನೆಲೆ ಮಂಡ್ಯ ಜಿಲ್ಲೆಯಲ್ಲಿ ಮದುವೆ, ಸಭೆ-ಸಮಾರಂಭಗಳಿಗೆ 30ಕ್ಕೂ ಹೆಚ್ಚು ಜನ ಸೇರುವಂತಿಲ್ಲ ಎಂಬ ಆದೇಶ ಇದೆ. ಮಂಡ್ಯ ತಹಶೀಲ್ದಾರ್ ನೂರಾರು ಜನರನ್ನು ಸೇರಿಸಿಕೊಂಡು ತಮ್ಮ ಮಗನ ಬರ್ತ್ ಡೇ ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳುವ ಮೂಲಕ ಜಿಲ್ಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿದ್ದಾರೆ.

    ಮಂಡ್ಯದ ತಹಶೀಲ್ದಾರ್ ಚಂದ್ರಶೇಖರ್ ಶಂಗಾಳಿ ಅವರು ತಮ್ಮ ಮಗನ ಹುಟ್ಟುಹಬ್ಬವನ್ನು ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್‍ನಲ್ಲಿರುವ ರಾಯಲ್ ಆರ್ಕಿಡ್ ಹೋಟೆಲ್‍ನಲ್ಲಿ ನೂರಾರು ಜನರನ್ನು ಸೇರಿಸಿಕೊಂಡು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಮಂಗಳವಾರ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಅವರು ಜಿಲ್ಲೆಯಲ್ಲಿ ಕೊರೊನಾ ಮೂರನೇ ತಡೆಗಟ್ಟುವ ದೃಷ್ಟಿಯಿಂದ ಮದುವೆ ಸೇರಿದಂತೆ 30 ಜನರು ಸೇರುವ ಎಲ್ಲಾ ಕಾರ್ಯಕ್ರಮಗಳಿಗೆ ನಿಬಂಧ ವಿಧಿಸಿದ್ದರು. ಇದನ್ನೂ ಓದಿ: ಕೊರೊನಾ ಭೀತಿ-ಮಂಡ್ಯದಲ್ಲಿ 30ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮ ನಿಷೇಧ

    ಇದೀಗ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಮಂಡ್ಯ ತಹಶೀಲ್ದಾರ್ ನೂರಾರು ಜನರನ್ನು ಸೇರಿಸಿಕೊಂಡು ಬರ್ತ್ ಡೇ ಪಾರ್ಟಿಯನ್ನು ಮಾಡಿದ್ದಾರೆ. ಈ ಪಾರ್ಟಿಗೆ ಮಂಡ್ಯ ಜಿಲ್ಲೆಯ ವಿವಿಧ ಅಧಿಕಾರಿಗಳು, ಸಂಘಟನೆಗಳ ಮುಖಂಡರು, ಕುಟುಂಬಸ್ಥರು ಸೇರಿದಂತೆ ಬೇರೆ ಜಿಲ್ಲೆಗಳಿಂದ ಜನರು ಬಂದಿದ್ದರು. ಜಿಲ್ಲಾಧಿಕಾರಿಗಳು ಜನರು ಹೀಗೆ ಇರಬೇಕೆಂದು ರೂಲ್ಸ್ ಮಾಡುವಾಗ ತಮ್ಮ ಅಧಿಕಾರಿಗಳಿಗೆ ಆ ರೂಲ್ಸ್‍ಗಳು ಅನ್ವಯ ಆಗುವುದಿಲ್ಲವೆ?, ಜನರಿಗೊಂದು ನ್ಯಾಯ ಅಧಿಕಾರಿಗಳಿಗೊಂದು ನ್ಯಾಯ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ತಹಶೀಲ್ದಾರ್ ಮೇಲೆ ಏನು ಕ್ರಮಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

  • ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಐದು ದಿನ ಕಂಪ್ಲೀಟ್ ಲಾಕ್‍ಡೌನ್

    ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಐದು ದಿನ ಕಂಪ್ಲೀಟ್ ಲಾಕ್‍ಡೌನ್

    ಮಂಡ್ಯ: ಜಿಲ್ಲೆಯಲ್ಲಿ ಸದ್ಯ ಕೊರೊನಾ ಹತೋಟಿಗೆ ಬರುತ್ತಿದ್ದು, ಸಂಪೂರ್ಣವಾಗಿ ಕೊರೊನಾ ನಿಯಂತ್ರಣ ಮಾಡಲು ಮಂಡ್ಯ ಜಿಲ್ಲಾಡಳಿತ ಇದೀಗ ಮತ್ತೆ ಐದು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಮಾಡಲು ನಿರ್ಧರಿಸಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಜಿಲ್ಲಾಧಿಕಾರಿ ಎಸ್. ಅಶ್ವಥಿ ಅವರು, ಮಂಡ್ಯ ಜಿಲ್ಲಾಡಳಿತ ಕಳೆದ ಎರಡು ವಾರದಲ್ಲಿ ಎಂಟು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಮೊರೆ ಹೋದ ಕಾರಣ ಪ್ರತಿ ನಿತ್ಯ ಜಿಲ್ಲೆಯಲ್ಲಿ ದಾಖಲಾಗುತ್ತಿದ್ದ ಸಾವಿರಕ್ಕೂ ಅಧಿಕ ಕೊರೊನಾ ಕೇಸ್‍ಗಳು 500ರ ಗಡಿಗೆ ಬಂದು ನಿಂತಿದೆ. ಇದೀಗ ಪಾಸಿಟಿವ್ ಸಂಖ್ಯೆಯನ್ನು ಮತ್ತಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಸೋಮವಾರದಿಂದ ಐದು ದಿನಗಳ ಕಾಲ ಕಂಪ್ಲೀಟ್ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದರು. ಇದನ್ನೂ ಓದಿ:ತಂದೆಯ ಶವದ ಮುಂದೆ ಒಡಹುಟ್ಟಿದವರ ಜಗಳ – ಬಳಿಕ ಶವವಾಗಿ ಸಿಕ್ಕ ಮಗ

    ಸದ್ಯ ಜೂನ್ 7, 8, 10, 12 ಮತ್ತು 13 ರಂದು ಸಂಪೂರ್ಣ ಲಾಕ್‍ಡೌನ್‍ನನ್ನು ಮತ್ತೆ ಘೋಷಣೆ ಮಾಡಿದೆ. ಈ ದಿನಗಳಲ್ಲಿ ಜಿಲ್ಲೆಯಲ್ಲಿ ಹಣ್ಣು, ತರಕಾರಿ, ದಿನಸಿ, ಮಾಂಸ ಖರೀದಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಉಳಿದಂತೆ ಬ್ಯಾಂಕ್‍ಗಳು, ಹಾಲಿನ ಬೂತ್‍ಗಳು, ಎಟಿಎಂ ಹಾಗೂ ಪೆಟ್ರೋಲ್ ಬಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಈ ಮಧ್ಯೆ ಜೂನ್ 6, 9 ಮತ್ತು 11ರಂದು ಮೂರು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್‍ನನ್ನು ಸಡಿಲಗೊಳಿಸಿ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಜನರು ಜಿಲ್ಲಾಡಳಿತದ ಈ ನಿರ್ಧಾರದ ಜೊತೆಗೆ ಸಹಕರಿಸಿ ಕೊರೊನಾ ನಿಯಂತ್ರಣ ಮಾಡಬೇಕೆಂದು ಮನವಿ ಮಾಡಿದ್ದಾರೆ.