Tag: ಅಶ್ವತ್ಥಾಮ

  • ಕಲ್ಕಿ 2898 AD: ಅಮಿತಾಭ್ ಫಸ್ಟ್ ಲುಕ್ ಗ್ಲಿಂಪ್ಸ್ ಗೆ ಫ್ಯಾನ್ಸ್ ಫಿದಾ

    ಕಲ್ಕಿ 2898 AD: ಅಮಿತಾಭ್ ಫಸ್ಟ್ ಲುಕ್ ಗ್ಲಿಂಪ್ಸ್ ಗೆ ಫ್ಯಾನ್ಸ್ ಫಿದಾ

    ನಾಗ್‌ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ (Kalki 2898 AD) ಸಿನಿಮಾ, ಈಗಾಗಲೇ ಶೂಟಿಂಗ್‌ನಲ್ಲಿ ಬಿಜಿಯಾಗಿದೆ. ಈ ನಡುವೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಈ ಸಿನಿಮಾ  ಟ್ರೆಂಡಿಂಗ್‌ನಲ್ಲಿಯೂ ಮುಂದುವರಿದಿದೆ. ಅದಕ್ಕೆ ಕಾರಣ ರಿಲೀಸ್‌ ಆದ ಅಮಿತಾಭ್ ಬಚ್ಚನ್‌ ಅವರ ಹೊಸ ಲುಕ್‌.

    ಹೌದು, ಕಳೆದ ವರ್ಷಅಮಿತಾಭ್ (Amitabh Bachchan)  ಅವರ ಬರ್ತ್‌ಡೇ ದಿನದಂದು ಕಲ್ಕಿ ಚಿತ್ರದಲ್ಲಿನ ಅವರ ಲುಕ್‌ ಹೇಗಿರಲಿದೆ ಎಂಬ ಸಣ್ಣ ಝಲಕ್‌ ರಿಲೀಸ್‌ ಆಗಿತ್ತು. ಅದಾದ ಬಳಿಕ ಚಿತ್ರದಲ್ಲಿ ಅಮಿತಾಭ್ ಪಾತ್ರ ಹೇಗಿರಲಿದೆ ಎಂಬ ಕುತೂಹಲವೂ ಹೆಚ್ಚಾಗಿತ್ತು. ಇದೀಗ ಆ ಕೌತುಕವನ್ನು ತಣಿದಿದೆ. ಅಂದರೆ, ಕಲ್ಕಿ ಚಿತ್ರದಲ್ಲಿನ ಅಮಿತಾಭ್ ಬಚ್ಚನ್‌ ಪಾತ್ರದ ಝಲಕ್‌ ಹೊರಬಿದ್ದಿದೆ.

    ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕಲ್ಕಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಅಶ್ವತ್ಥಾಮನಾಗಿ ಅಮಿತಾಭ್ ಬಚ್ಚನ್‌ ಕಾಣಿಸಿಕೊಳ್ಳಲಿದ್ದಾರೆ. ಒಂದು ನಿಮಿಷದ ಝಲಕ್‌ನಲ್ಲಿ ಎಲ್ಲ ಭಾಷೆಯನ್ನೂ ಬೆರೆಸಿ ಟೀಸರ್‌ ಬಿಡುಗಡೆ ಮಾಡಲಾಗಿದೆ.  ಪುಟಾಣಿಯೊಬ್ಬ ನೀವ್ಯಾರು, ನಿಮ್ಮ ಜತೆ ನಾನು ಯಾವ ಭಾಷೆಯಲ್ಲಿ ಮಾತನಾಡಲಿ? ಎಂದೆಲ್ಲ ಪ್ರಶ್ನೆ ಮಾಡಿದ್ದಾನೆ. ಆಗ, ಈಗ ನನ್ನ ಸಮಯ ಬಂದಿದೆ. ನನ್ನ ಕೊನೆಯ ಯುದ್ಧಕ್ಕೆ ಸಮಯ ಬಂದಿದೆ. ನಾನು ದ್ರೋಣಾಚಾರ್ಯರ ಮಗ ಅಶ್ವತ್ಥಾಮ (Ashwatthama) ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ ಅಮಿತಾಭ್ ಬಚ್ಚನ್.‌  ಈ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ ಸಿನಿಮಾದಲ್ಲಿ ಬಹುತಾರಾಗಣವೇ ಹೈಲೈಟ್.‌ ಪ್ರಬಾಸ್‌ ನಾಯಕನಾಗಿ ನಟಿಸುತ್ತಿದ್ದರೆ, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್‌, ಕಮಲ್‌ ಹಾಸನ್‌, ದಿಶಾ ಪಟಾಣಿ ಸೇರಿ ಘಟಾನುಘಟಿಗಳೇ ನಟಿಸುತ್ತಿದ್ದಾರೆ. ವೈಜಯಂತಿ ಮೂವೀಸ್‌ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಪುರಾಣ ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ ಇದಾಗಿದೆ.

  • ‘ಅಶ್ವತ್ಥಾಮ’ನಾದ ಶಾಹಿದ್ ಕಪೂರ್- ಆ್ಯಕ್ಷನ್ ಕಟ್ ಹೇಳ್ತಿದ್ದಾರೆ ‘ಅವನೇ ಶ್ರೀಮನ್ನಾರಾಯಣ’ ಡೈರೆಕ್ಟರ್

    ‘ಅಶ್ವತ್ಥಾಮ’ನಾದ ಶಾಹಿದ್ ಕಪೂರ್- ಆ್ಯಕ್ಷನ್ ಕಟ್ ಹೇಳ್ತಿದ್ದಾರೆ ‘ಅವನೇ ಶ್ರೀಮನ್ನಾರಾಯಣ’ ಡೈರೆಕ್ಟರ್

    ‘ಅವನೇ ಶ್ರೀಮನ್ನಾರಾಯಣ’ ಸೂತ್ರಧಾರ ಸಚಿನ್ ರವಿ (Sachin Ravi), ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್‌ಗೆ (Shahid Kapoor) ಆ್ಯಕ್ಷನ್ ಕಟ್ ಹೇಳುತ್ತಿರುವುದು ಗೊತ್ತೇ ಇದೆ. ಈ ಕ್ರೇಜಿ ಕಾಂಬಿನೇಷನ್ ಅಶ್ವತ್ಥಾಮನ ಕಥೆ ಹೇಳೋದಿಕ್ಕೆ ಬರುತ್ತಿದ್ದಾರೆ. ಮುಂಬೈನಲ್ಲಿ ಮಂಗಳವಾರ ನಡೆದ ಒಟಿಟಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.

    ಸಚಿನ್ ರವಿ ಹಾಗೂ ಶಾಹಿದ್ ಕಪೂರ್ ಸಿನಿಮಾಗೆ ‘ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್’ ಎಂಬ ಟೈಟಲ್ ಇಡಲಾಗಿದೆ. ಸಚಿನ್ ರವಿ ಚಿತ್ರದ ಅಶ್ವತ್ಥಾಮನ ಪಾತ್ರಕ್ಕೆ ಶಾಹಿದ್ ಕಪೂರ್ ಹೀರೋ ಆಗುತ್ತಿದ್ದಾರೆ. ಅಶ್ವತ್ಥಾಮನಾಗಿಯೇ ಶಾಹಿದ್ ಕಪೂರ್ ಇಲ್ಲಿ ಅಬ್ಬರಿಸಲಿದ್ದಾರೆ. ಅಶ್ವತ್ಥಾಮ ಒಬ್ಬ ಗ್ರೇಟ್ ವಾರಿಯರ್ ಅನ್ನೋದು ಗೊತ್ತೇ ಇದೆ. ಆದರೆ ಏಳು ಚಿರಂಜೀವಿಗಳಲ್ಲಿ ಒಬ್ಬ ಅನ್ನೋದು ಕೂಡ ನಂಬಿಕೆ. ಅಶ್ವತ್ಥಾಮನಿಗೆ ಸಾವೇ ಇಲ್ಲ ಅನ್ನೋದು ಚಿರಂಜೀವಿಯ ಅರ್ಥ ಅಂತೇ ಹೇಳಬಹುದು.

    ಈ ಕಥೆಯಲ್ಲಿ ಅಶ್ವತ್ಥಾಮ ವರ್ತಮಾನದಲ್ಲಿರುವ ನಾಯಕ. ಅಮರತ್ವದ ಪರಿಕಲ್ಪನೆಯನ್ನು ಶೋಧಿಸುವ ಕೆಲಸ ಆತನದ್ದು. ಇಷ್ಟನ್ನಷ್ಟೇ ಹೇಳಬಲ್ಲೆ. ಆದರೆ ಈ ಚಿತ್ರ ಅದ್ಭುತ ಆ್ಯಕ್ಷನ್ ಇರುವ, ಮತ್ತು ಎಲ್ಲಾ ತಲೆಮಾರಿನ ವೀಕ್ಷಕರನ್ನೂ ಸೆಳೆಯಬಲ್ಲ ಚಿತ್ರವಾಗಲಿದೆ. ಅಶ್ವತ್ಥಾಮನಂತೆ ಅಮರತ್ವ ಹೊಂದಿರುವ ವ್ಯಕ್ತಿಗಳನ್ನು ಚಿತ್ರದಲ್ಲಿ ತರುವ ಪ್ರಯತ್ನವೂ ಇರಲಿದೆ. ಕಾಲ್ಪನಿಕ ಸನ್ನಿವೇಶನಗಳ ಅನ್ವೇಷಣೆ ಹಾಗೂ ಅದರ ಸಾಧ್ಯತೆ ಕುರಿತು ಕಥೆ ರಚಿಸಿ, ಸಾಧ್ಯವಾಗಿಸುವುದು ಚಿತ್ರ ನಿರ್ದೇಶನಕಾಗಿ ಸವಾಲಿನ ಕೆಲಸ. ನನ್ನ ಬಾಲ್ಯದಿಂದಲೂ ಅಶ್ವತ್ಥಾಮನ ಪಾತ್ರ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಈ ಪಾತ್ರದ ಬಗ್ಗೆಯೇ ಚಿತ್ರ ಮಾಡುವ ಯೋಜನೆ ಹೊಂದಿದ್ದೆ. ಕಡೆಗೂ ನನ್ನ ಕಲ್ಪನೆಯ ಚಿತ್ರ ಸೆಟ್ಟೇರುತ್ತಿದೆ ಎಂಬ ಸಂಭ್ರಮ ನನ್ನದು. ಈ ಚಿತ್ರದ ಹಲವು ಕುತೂಹಲಕರ ಅಂಶಗಳ ಕುರಿತು ಶಾಹೀದ್ ಕಪೂರ್ ಜತೆ ಬಹಳಷ್ಟು ಹೊತ್ತು ಕಳೆದಿದ್ದೇನೆ ಎಂದು ಚಿತ್ರದ ತಯಾರಿ ಕುರಿತು ತಮ್ಮ ಅನುಭವವನ್ನು ಸಚಿನ್ ರವಿ ಹಂಚಿಕೊಂಡರು.

    ಅಶ್ವತ್ಥಾಮ ಚಿತ್ರವನ್ನು ಪೂಜಾ ಎಂಟರ್‌ಟೈನ್‌ಮೆಂಟ್ ಕಂಪನಿ ನಿರ್ಮಾಣ ಮಾಡುತ್ತಿದೆ. ವಿಷ್ಣು ಭಗ್ನಾನಿ, ಜಾಕಿ ಭಗ್ನಾನಿ ಹಾಗೂ ದೀಪ್ತಿಕಾ ದೇಶಮುಖ್ ನಿರ್ಮಾಣ ಮಾಡುತ್ತಿದ್ದಾರೆ.

    ಹಲವು ವರ್ಷಗಳಿಂದ ರಕ್ಷಿತ್ ಶೆಟ್ಟಿ (Rakshit Shetty) ತಂಡದಲ್ಲಿ ಸಚಿನ್ ಬಿ ರವಿ ಗುರುತಿಸಿಕೊಂಡಿದ್ದಾರೆ. ಸಂಕಲನಕಾರಾಗಿ, ಗ್ರಾಫಿಕ್ಸ್ ಪರಿಣಿತರಾಗಿ ಕೆಲಸ ನಿಭಾಯಿಸಿದ್ದಾರೆ. ಅವನೇ ಶ್ರೀಮನ್ನಾರಾಯಣ ಚಿತ್ರಕ್ಕಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಇದೀಗ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ‘ಫ್ಯಾಂಟಸಿ ಅಡ್ವೆಂಚರಸ್’ ಡ್ರಾಮಾ ಅವನೇ ಶ್ರೀಮನ್ನಾರಾಯಣ ಸಿನಿಮಾ ನಿರ್ದೇಶಕರ ಪ್ರತಿಭೆಗೆ ಹಿಡಿದ ಕನ್ನಡಿ. ಈಗ ಸಚಿನ್ ಅಶ್ವತ್ಥಾಮನ ಮೂಲಕ ಪೌರಾಣಿಕ ಕಥೆ ಹರವಿಡಲಿದ್ದಾರೆ.

  • ಅಭಿಮನ್ಯು ಟೀಂಗೆ ಹೊಸ ಮೆಂಬರ್ ಎಂಟ್ರಿ- ಅಶ್ವತ್ಥಾಮ ಭವಿಷ್ಯದ ಕ್ಯಾಪ್ಟನ್!

    ಅಭಿಮನ್ಯು ಟೀಂಗೆ ಹೊಸ ಮೆಂಬರ್ ಎಂಟ್ರಿ- ಅಶ್ವತ್ಥಾಮ ಭವಿಷ್ಯದ ಕ್ಯಾಪ್ಟನ್!

    ಮೈಸೂರು: ಈ ಬಾರಿಯ ಸರಳ ದಸರಾಕ್ಕೆ ಬರಲು ಅರ್ಜುನ ನೇತೃತ್ವದ ಗಜಪಡೆ ಸಿದ್ಧವಾಗಿದೆ. ಇದರೊಂದಿಗೆ ಅಭಿಮನ್ಯು ಟೀಂಗೆ ಹೊಸ ಆನೆ ಸೇರ್ಪಡೆಯಾಗಿದೆ. ಅದರ ಹೆಸರು ಅಶ್ವತ್ಥಾಮ. ಮಹಾಭಾರತದ ದ್ರೋಣಾಚಾರ್ಯರ ಮಗನ ಹೆಸರಿನ ಈ ಆನೆ ಈ ಬಾರಿಯ ದಸರೆಯ ಪ್ರಮುಖ ಆಕರ್ಷಣೆಯಾಗಲಿದೆ.

    ಪುಂಡ ಹಾಗೂ ಜಗಮೊಂಡನಾಗಿದ್ದ ಈ ಆನೆ ಈಗ ದಸರಾ ಆನೆಗಳ ತಂಡ ಸೇರಿದೆ. ಅಶ್ವತ್ಥಾಮ ನಾಲ್ಕು ವರ್ಷದ ಹಿಂದೆ ಕಾಡಿನಿಂದ ನಾಡಿಗೆ ಬಂದು ಸಿಕ್ಕಾಪಟ್ಟೆ ಕಿರಿಕ್ ಮಾಡಿತ್ತು. ಹಾಸನ ಜಿಲ್ಲೆ ಸಕಲೇಶಪುರದ ಸುತ್ತಮುತ್ತ ಕಾಡಿನಿಂದ ನಾಡಿಗೆ ಬರುತ್ತಿದ್ದ ಈ ಆನೆ ಬೆಳೆದ ಬೆಳೆಯನ್ನು ತಿಂದು ಮತ್ತೆ ಕಾಡು ಸೇರುತ್ತಿತ್ತು. ಇದರಿಂದ ಆತಂಕಗೊಂಡ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಆಗ ಆಪರೇಷನ್ ಗಜರಾಜ ಶುರುವಾಗಿತ್ತು. ಗ್ರಾಮಸ್ಥರು ಹೇಳಿದ ಪ್ರಕಾರ ಆನೆ ಭಾರಿ ಗಾತ್ರದ್ದಾಗಿತ್ತು. ಉದ್ದನೆಯ ದಂತ, ಆಕರ್ಷಕ ಮೈ ಕಟ್ಟಿನ ಒಂಟಿ ಸಲಗ ಅಂತಾ ಗೊತ್ತಾಗಿತ್ತು. ಆದ್ದರಿಂದ ಅರಣ್ಯ ಇಲಾಖೆಯವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿರಲಿಲ್ಲ. ಅಶ್ವತ್ಥಾಮನ ಸೆರೆಗೆ ಬಂದಿದ್ದು, ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಆನೆ ನೇತೃತ್ವದಲ್ಲಿ ಅರ್ಜುನ ಸೇರಿ ಹಲವು ಆನೆಗಳ ಕಾರ್ಯಾಚರಣೆಯಲ್ಲಿ ಅಶ್ವತ್ಥಾಮ ಸೆರೆಯಾಗಿತ್ತು. ಇದನ್ನೂ ಓದಿ: ಈ ಬಾರಿ ಸರಳ, ಸಾಂಪ್ರದಾಯಿಕ ದಸರಾ ಆಚರಣೆ

    ಅಂದು 30 ವರ್ಷದ ಗಂಡಾನೆಯಾಗಿದ್ದ, ಅಶ್ವತ್ಥಾಮನನ್ನು ಕಂಡ ಅಧಿಕಾರಿಗಳು ಇದಕ್ಕೆ ತರಬೇತಿ ನೀಡಿ ಪಳಗಿಸಿದರೆ ಅತ್ಯುತ್ತಮ ಆನೆಯಾಗಲಿದೆ ಅನಿಸಿತು. ತಕ್ಷಣ ಮೇಲಧಿಕಾರಿಗಳಿಂದ ಅನುಮತಿ ಪಡೆದು, ಹರವೆ ಆನೆ ಕ್ಯಾಂಪ್‍ಗೆ ಕರೆತಂದು ತರಬೇತಿ ನೀಡಿದ್ದರು. ಶಿಬಿರಕ್ಕೆ ಬಂದ ಆನೆಗೆ ಅಶ್ವತ್ಥಾಮ ಎಂದು ನಾಮಕರಣ ಮಾಡಲಾಯಿತು. ಬರೋಬ್ಬರಿ 3,500ಕೆಜಿ ತೂಕವಿದ್ದ ಅಶ್ವತ್ಥಾಮ, 2.85 ಮೀಟರ್ ಎತ್ತರ, 3.46 ಮೀಟರ್ ಉದ್ದವಿತ್ತು. ದಂತಗಳು ಆಕರ್ಷಕವಾಗಿ ಉದ್ದವಾಗಿದ್ದು, ಉಗ್ರ ಸ್ವರೂಪಿಯಾಗಿದ್ದ ಅಶ್ವತ್ಥಾಮ ಎಲ್ಲರಲ್ಲೂ ಆತಂಕ ಸೃಷ್ಟಿಸಿತ್ತು. ತರಬೇತಿಯಿಂದ ಉಗ್ರನಾಗಿದ್ದ ಆನೆ ಸೌಮ್ಯವಾಗಿದೆ. ಸಮತಟ್ಟಾದ ಬೆನ್ನು ಇರುವ ಕಾರಣ ದಸರೆಗೆ ಆಯ್ಕೆ ಮಾಡಲಾಗಿದೆ. ಅಶ್ವತ್ಥಾಮನಿಗೆ ಕೇವಲ 34 ವರ್ಷ ಜೊತೆಗೆ ಸಮತಟ್ಟಾದ ಬೆನ್ನು ಇದೆ. ಚಿನ್ನದ ಅಂಬಾರಿ ಕಟ್ಟಲು ಹೇಳಿ ಮಾಡಿಸಿದ ಮೈ ಕಟ್ಟು. ಹೀಗಾಗಿಯೇ ಅಶ್ವತ್ಥಾಮ ಭವಿಷ್ಯದ ಅಂಬಾರಿ ಹೊರುವ ಆನೆ ಎಂದೇ ಬಿಂಬಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಸೋನಿಯಾ ಗಾಂಧಿ ಅನಿವಾರ್ಯತೆ ಇದೆ, ನಮಗೆ ಇಲ್ಲ: ಪ್ರತಾಪ್ ಸಿಂಹ

    ಇದೇ ಮೊದಲ ಬಾರಿಗೆ ಅಶ್ವತ್ಥಾಮ ಮೈಸೂರು ದಸರೆಗೆ ಪ್ರವೇಶ ಮಾಡಲಿದ್ದು, ಅಶ್ವತ್ಥಾಮನಿಗೆ ಮಾವುತ ಶಿವು ಹಾಗೂ ಕಾವಾಡಿ ಗಣೇಶ್ ಜೊತೆಯಾಗಿದ್ದಾರೆ. ಕೇವಲ ನಾಲ್ಕು ವರ್ಷದಲ್ಲಿ ಇವರ ನಡುವೆ ಅವಿನಾಭಾವ ಸಂಬಂಧ ಬೆಳೆದಿದ್ದು, ಇವರು ಹೇಳಿದ ಎಲ್ಲಾ ಮಾತುಗಳನ್ನು ಚಾಚು ತಪ್ಪದೆ ಪಾಲಿಸುವ ಅಶ್ವತ್ಥಾಮ ಇದೀಗ ಎಲ್ಲರ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದೆ.