Tag: ಅಶ್ಲೀಲ

  • ‘ಪಠಾಣ್’ ಸಿನಿಮಾದ ಅಶ್ಲೀಲ ಕಂಟೆಂಟ್ ತೆಗೆಯುವಂತೆ ಡಿಜಿಪಿಗೆ ಪತ್ರ

    ‘ಪಠಾಣ್’ ಸಿನಿಮಾದ ಅಶ್ಲೀಲ ಕಂಟೆಂಟ್ ತೆಗೆಯುವಂತೆ ಡಿಜಿಪಿಗೆ ಪತ್ರ

    ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಪಠಾಣ್’ ಸಿನಿಮಾಗೆ ಮತ್ತೊಂದು ಸಂಕಟ ಎದುರಾಗಿದೆ. ಈ ಸಿನಿಮಾದ ಅಶ್ಲೀಲ ಕಂಟೆಂಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಅವುಗಳನ್ನು ಸೋಷಿಯಲ್ ಮೀಡಿಯಾದಿಂದ ತೆಗೆದು ಹಾಕುವಂತೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯು ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದೆ.

    ಕಲ್ಯಾಣ ಸಮಿತಿಯು ಡಿಜಿಪಿಗೆ ಬರೆದ ಪತ್ರದಲ್ಲಿ, ಪಠಾಣ್ ಸಿನಿಮಾದ ಬೇಷರಂ ರಂಗ್ ಗೀತೆಯಲ್ಲಿ ಅಶ್ಲೀಲ ಅನಿಸುವಂತಹ ಕಂಟೆಂಟ್ ಇದೆ. ಇದು ಬಾಲಾಪರಾಧಿ ಕಾಯಿದೆ ಪ್ರಕಾರ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ ಕೂಡಲೇ ಅವುಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆಸಬೇಕು’ ಎಂದು ಬರೆಯಲಾಗಿದೆ. ಆ ಪತ್ರಕ್ಕೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಶ್ರೀವಾಸ್ತವ ಮತ್ತು ಹಲವರು ಸಹಿ ಮಾಡಿದ್ದಾರೆ.

    ಈಗಾಗಲೇ ಸೆನ್ಸಾರ್ ಮಂಡಳಿ ಕೂಡ ಕೆಲ ದೃಶ್ಯಗಳನ್ನು ತೋರಿಸಲು ಸಾಧ್ಯವೇ ಇಲ್ಲ ಎಂದು, ಅವುಗಳನ್ನು ಸಿನಿಮಾದಿಂದ ತಗೆದು ಹಾಕಬೇಕು ಎಂದು ನಿರ್ದೇಶನ ನೀಡಿದೆ. ಇನ್ನೂ ಹಲವರು ಈ ಚಿತ್ರಕ್ಕೆ ಪಠಾಣ್ ಎಂದು ಹೆಸರಿಡಲು ಬಿಡುವುದಿಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ. ಬೇಷರಂ ರಂಗ್ ಕೂಡ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡುತ್ತಿದೆ. ಹಾಗಾಗಿ ಈ ಹಾಡನ್ನೂ ಬಿಡುವುದಿಲ್ಲ ಎಂದು ಕೆಲವರು ಹೇಳಿದ್ದಾರೆ. ಚಿತ್ರಕ್ಕೆ ಒಂದರ ಮೇಲೊಂದು ಸಂಕಟ ಎದುರಾಗುತ್ತಲೇ ಇವೆ.

    ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಬೇಕಿತ್ತು. ಸೆನ್ಸಾರ್ ಹಲವು ಸೂಚನೆಗಳನ್ನು ನೀಡಿದ್ದರಿಂದ ಆ ಕಾರ್ಯದಲ್ಲಿ ಚಿತ್ರತಂಡ ತೊಡಗಿದೆ. ಅಲ್ಲದೇ, ಶೀರ್ಷಿಕೆ ಸೇರಿದಂತೆ ಹಲವು ವಿಚಾರಗಳನ್ನು ಸಿನಿಮಾದಿಂದ ಕೈ ಬಿಡುವಂತೆ ನಿರಂತರ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಚಿತ್ರತಂಡಕ್ಕೆ ಬಿಡುಗಡೆಗಿಂತ ಇಂತಹ ವಿಷಯಗಳೇ ತಲೆಬಿಸಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಅಶ್ಲೀಲ ವಿಡಿಯೋ ಹಂಚಿಕೆ: ಬಾಲಿವುಡ್ ನಟಿಯರ ವಿರುದ್ಧ ದೋಷಾರೋಪ ಪಟ್ಟಿ

    ಅಶ್ಲೀಲ ವಿಡಿಯೋ ಹಂಚಿಕೆ: ಬಾಲಿವುಡ್ ನಟಿಯರ ವಿರುದ್ಧ ದೋಷಾರೋಪ ಪಟ್ಟಿ

    ಬಾಲಿವುಡ್ ನಟಿಯರಾದ ಶೆರ್ಲಿನಾ ಚೋಪ್ರಾ, ಪೂನಂ ಪಾಂಡೆ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸೇರಿದಂತೆ ಹಲವರ ವಿರುದ್ಧ ಮಹಾರಾಷ್ಟ್ರ ಸೈಬರ್ ಪೊಲೀಸ್ ವಿಭಾಗವು 450 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ ಬೆನ್ನಲ್ಲೆ ಬಾಲಿವುಡ್ ಕೆಲ ನಟಿಯರಿಗೆ ನಡುಕು ಶುರುವಾಗಿದೆ. ಹಾಗಾಗಿ ಶರ್ಲಿನಾ ಸೇರಿದಂತೆ ಕೆಲವು ನಟಿಯರು ಈ ಕುರಿತು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

    ಪೂನಂ ಪಾಂಡೆ, ಶೆರ್ಲಿನಾ ಚೋಪ್ರಾ ಸೇರಿದಂತೆ ಕೆಲ ನಟಿಯರು ತಮ್ಮದೇ ಹೆಸರಿನಲ್ಲಿ ಅಪ್ಲಿಕೇಶನ್ ತೆರೆದು ಅವುಗಳ ಮೂಲಕ ತಮ್ಮದೇ ಅಶ್ಲೀಲ ವಿಡಿಯೋಗಳನ್ನು ಹಣಕ್ಕಾಗಿ ಮಾರುತ್ತಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಆರೋಪ ಮಾಡಲಾಗಿದೆ. ಐಷಾರಾಮಿ ಹೋಟೆಲ್ ಗಳಲ್ಲೇ ಈ ವಿಡಿಯೋಗಳ ಚಿತ್ರೀಕರಣ ನಡೆಯುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಕೆಲವು ಬಾರಿ ಹಣಕ್ಕಾಗಿಯೂ ಇವರು ಬೇರೆಯವರು ವಿಡಿಯೋ ಕಳುಹಿಸಿದ್ದಾರೆ ಎಂದೂ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದನ್ನೂ ಓದಿ:ರೂಪೇಶ್ ರಾಜಣ್ಣ ಸ್ವಾರ್ಥ ಬುದ್ದಿಗೆ ಶಿಕ್ಷೆ ಕೊಟ್ರು ಸುದೀಪ್‌

    ಈ ಕುರಿತು ಶೆರ್ಲಿನಾ ಚೋಪ್ರಾ ಪ್ರತಿಕ್ರಿಯೆ ಕೂಡ ನೀಡಿದ್ದು, ‘ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನಾನು ತಪ್ಪು ಮಾಡಿಲ್ಲ. ನಾನು ನಿರಾಪರಾಧಿ’ ಎಂದು ಹೇಳಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತಮ್ಮನ್ನು ಸುಖಾಸುಮ್ಮನೆ ಎಳೆತರಲಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ. ಈಗಾಗಲೇ ಕುಂದ್ರಾ ಜೈಲು ವಾಸವನ್ನೂ ಅನುಭವಿಸಿ ಬಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಖ್ಯಾತ ಗಾಯಕಿ ಶಿಲ್ಪಾ ರಾಜ್ ಅಶ್ಲೀಲ ವಿಡಿಯೋ: ಲೈವ್ ಗೆ ಬಂದು ಕಣ್ಣೀರಿಟ್ಟ ಸಿಂಗರ್

    ಖ್ಯಾತ ಗಾಯಕಿ ಶಿಲ್ಪಾ ರಾಜ್ ಅಶ್ಲೀಲ ವಿಡಿಯೋ: ಲೈವ್ ಗೆ ಬಂದು ಕಣ್ಣೀರಿಟ್ಟ ಸಿಂಗರ್

    ಭೋಜಪುರಿ ಸಿನಿಮಾ ರಂಗದ ಖ್ಯಾತ ಗಾಯಕಿ, ಸಣ್ಣ ವಯಸ್ಸಿನಲ್ಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಶಿಲ್ಪಾ ರಾಜ್ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಅತೀ ಸಣ್ಣ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದ ಶಿಲ್ಪಾ, ಆ ಅಶ್ಲೀಲ ವಿಡಿಯೋದಿಂದಾಗಿ ಕಣ್ಣೀರು ಹಾಕುವಂತಾಗಿದೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ಮೊನ್ನೆ ಮೊನ್ನೆಯಷ್ಟೇ ನಟಿ ಪ್ರಿಯಾಂಕ ಪಂಡಿತ್ ಮತ್ತು ನಟ ತ್ರಿಶಾಕರ್ ಮಧು ಅವರದ್ದು ಎನ್ನಲಾದ ಹಸಿಬಿಸಿಯ ಅಶ್ಲೀಲ ವಿಡಿಯೋ ಭೋಜಪುರಿ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿತ್ತು. ಆ ವಿಡಿಯೋ ಭಾರೀ ವೈರಲ್ ಆಗಿದ್ದರಿಂದ ನಟ-ನಟಿಯರು ಕೆಲ ತಿಂಗಳ ಕಾಲ ಮನೆಯಿಂದ ಆಚೆ ಬರದಂತೆ ಮಾಡಿತ್ತು. ಇದೀಗ ಶಿಲ್ಪಾ ರಾಜ್ ಸರದಿ. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ಈ ಅಶ್ಲೀಲ ವಿಡಿಯೋ ಆಚೆ ಬರುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದ ಮೂಲಕ ಲೈವ್ ಗೆ ಬಂದ ಶಿಲ್ಪಾ, ಯಾಕೆ ಈ ರೀತಿ ಮಾಡುತ್ತಿದ್ದೀರಿ? ನನಗೂ ಆ ವಿಡಿಯೋಗೂ ಸಂಬಂಧವೇ ಇಲ್ಲ. ಆ ವಿಡಿಯೋದಲ್ಲಿರುವ ಹುಡುಗ ಯಾರೆಂದೂ ನನಗೆ ಗೊತ್ತಿಲ್ಲ. ಈ ಕೆಲಸಕ್ಕೆ ನನಗೆ ತುಂಬಾ ನೋವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ ಶಿಲ್ಪಾ ರಾಜ್. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ನಾನು ಬಡಕುಟುಂಬದಿಂದ ಸಿನಿಮಾ ರಂಗಕ್ಕೆ ಬಂದವರು. ಅಭಿಮಾನಿಗಳೇ ನನ್ನನ್ನು ಇಷ್ಟಮಟ್ಟಿಗೆ ಬೆಳೆಸಿದ್ದಾರೆ. ಭೋಜಪುರಿ ಸಿನಿಮಾದ ಬಹುತೇಕ ಸ್ಟಾರ್ ನಟರ ಚಿತ್ರಗಳಿಗೆ ನಾನು ಆಡಿದ್ದೇನೆ ಅಂದರೆ, ಅದು ಅಭಿಮಾನಿಗಳಿಂದ. ಸಣ್ಣ ವಯಸ್ಸಿನಲ್ಲೇ ನನಗೆ ಇಷ್ಟು ದೊಡ್ಡ ಮಟ್ಟದ ಹೆಸರು ತರುವುದಕ್ಕೆ ಕಾರಣ ಅಭಿಮಾನಿಗಳು. ಹಾಗಾಗಿ ಆ ವಿಡಿಯೋವನ್ನು ಶೇರ್ ಮಾಡಬೇಡಿ ಎಂದು ಶಿಲ್ಪಾ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

  • 3 ತಿಂಗ್ಳಲ್ಲಿ 4,000ಕ್ಕೂ ಅಧಿಕ ಪೋರ್ನ್ ವೆಬ್‍ಸೈಟ್ ಸ್ಥಗಿತಗೊಳಿಸಿದ ಚೀನಾ!

    3 ತಿಂಗ್ಳಲ್ಲಿ 4,000ಕ್ಕೂ ಅಧಿಕ ಪೋರ್ನ್ ವೆಬ್‍ಸೈಟ್ ಸ್ಥಗಿತಗೊಳಿಸಿದ ಚೀನಾ!

    ಬೀಜಿಂಗ್: ಕೇವಲ ಮೂರು ತಿಂಗಳ ಅವಧಿಯಲ್ಲಿ ಚೀನಾ ಸರ್ಕಾರ ಅಶ್ಲೀಲ ವೆಬ್‍ಸೈಟ್ ಹಾಗೂ ಯುವಜನತೆಯ ಮನಸ್ಸಿನ ಮೇಲೆ ಪರಿಣಾಮ ಬೀರುವ ಸುಮಾರು 4,000 ಕ್ಕೂ ಅಧಿಕ ವೆಬ್‍ಸೈಟ್‍ಗಳನ್ನು ಸ್ಥಗಿತಗೊಳಿಸಿದೆ.

    ಮಾಧ್ಯಮಗಳ ಮಾಹಿತಿಗಳ ಪ್ರಕಾರ ಚೀನಾ ಸರ್ಕಾರ ಆನ್‍ಲೈನ್ ಸ್ವಚ್ಛತಾ ಆಂದೋಲನವನ್ನು ಪ್ರಾರಂಭಿಸಿದ್ದು, ಇದರಲ್ಲಿ ಅಂತರ್ಜಾಲದಲ್ಲಿ ಕಂಡುಬರುವ ನಿಯಮಬಾಹಿರ ಹಾಗೂ ಅಶ್ಲೀಲ ವೆಬ್‍ಸೈಟ್‍ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ. ಇದಲ್ಲದೇ ಚೀನಾ ಸರ್ಕಾರವು ಆನ್‍ಲೈನ್ ಸ್ವಚ್ಛತಾ ಆಂದೋಲನದ ಮೂಲಕ ಅಶ್ಲೀಲ ದೃಶ್ಯ ಹಾಗೂ ಸಾಹಿತ್ಯ ಪ್ರಕಟಿಸುವ ಎಲ್ಲ ರೀತಿಯ ವೆಬ್‍ಸೈಟ್‍ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ ಎಂದು ತಿಳಿದುಬಂದಿದೆ.

    ಚೀನಾವು ಕಳೆದ ಮೇ ತಿಂಗಳಿನಿಂದ ಈ ಆಂದೋಲನಕ್ಕೆ ಕರೆ ನೀಡಿದ್ದು, ಇಲ್ಲಿಯವರೆಗೆ ಒಟ್ಟು 4,000 ಕ್ಕೂ ಅಧಿಕ ಪೋರ್ನ್ ಸೈಟ್ ಸೇರಿದಂತೆ ಇತರೆ ವೆಬ್‍ಸೈಟ್‍ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಆಂದೋಲನಕ್ಕೂ ಮುನ್ನ ಚೀನಾ ಸರ್ಕಾರ ಸುಮಾರು 1,47,000 ದತ್ತಾಂಶಗಳ ಮಾದರಿಗಳನ್ನು ಪರಶೀಲನೆ ನಡೆಸಿದೆ. ಬಳಿಕ ಈ ನಿರ್ಧಾರ ತೆಗೆದುಕೊಂಡಿದೆ ಎನ್ನುವ ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸಿವೆ.

    ಕೇವಲ ಅಶ್ಲೀಲತೆಯನ್ನು ಪ್ರಕಟಿಸುವ ವೆಬ್‍ಸೈಟ್‍ಗಳು ಮಾತ್ರವಲ್ಲದೇ ಯುವಜನತೆಯನ್ನು ತಪ್ಪು ದಾರಿಗೆಳೆಯುವ ಇತರೆ 230 ಕ್ಕೂ ಅಧಿಕ ಸಂಸ್ಥೆಗಳಿಗೆ ಸಂಬಂಧಪಟ್ಟ ವೆಬ್‍ಸೈಟ್‍ಗಳನ್ನು ಸಹ ಕಿತ್ತುಹಾಕಿದೆ. ಇವುಗಳಲ್ಲಿ ಆನ್‍ಲೈನ್ ಕಾದಂಬರಿಗಳು, ಕಥೆಗಳು, ಪ್ರಚೋದನಾಕಾರಿ ಮತ್ತು ಅಶ್ಲೀಲ ಭಾಷಣದ ವಿಡಿಯೋಗಳು ವೆಬ್‍ಸೈಟ್‍ಗಳು ಸಹ ಸೇರಿವೆ. ಅಲ್ಲದೇ ಮುಂಬರುವ ದಿನಗಳಲ್ಲಿ ಮತ್ತಷ್ಟೂ ಕಠಿಣ ನಿಯಮಗಳನ್ನು ರೂಪಿಸುವುದಾಗಿ ಚೀನಾ ಸರ್ಕಾರ ಎಚ್ಚರಿಕೆ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮಂಗ್ಳೂರು ವಿವಿ ಪದವಿ ವಿದ್ಯಾರ್ಥಿಗಳ ಕನ್ನಡ ಪಠ್ಯದಲ್ಲಿ ಅಶ್ಲೀಲ ಕಥೆ!

    ಮಂಗ್ಳೂರು ವಿವಿ ಪದವಿ ವಿದ್ಯಾರ್ಥಿಗಳ ಕನ್ನಡ ಪಠ್ಯದಲ್ಲಿ ಅಶ್ಲೀಲ ಕಥೆ!

    ಮಂಗಳೂರು: ಇಲ್ಲಿನ ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಮತ್ತೊಂದು ಎಡವಟ್ಟು ಕಂಡುಬಂದಿದೆ. ದ್ವಿತೀಯ ಬಿಕಾಂ ಪದವಿ ವಿದ್ಯಾರ್ಥಿಗಳ ಕನ್ನಡ ಪಠ್ಯದಲ್ಲಿ ಅಶ್ಲೀಲತೆಯನ್ನು ಬಿಂಬಿಸುವ ಕಥೆಯೊಂದನ್ನು ಪಠ್ಯವಾಗಿ ನೀಡಿದ್ದು ಈಗ ಆಕ್ಷೇಪಕ್ಕೆ ಕಾರಣವಾಗಿದೆ.

    ನುಡಿ ನೂಪುರ ಎಂಬ ಪುಸ್ತಕದಲ್ಲಿ ಮಗುವಿನ ತಂದೆ ಹೆಸರಿನ ಪಠ್ಯ ಅಳವಡಿಸಲಾಗಿದೆ. ಇದರಲ್ಲಿ ಗಂಡ ಹೆಂಡತಿಯ ಸಂಬಂಧವನ್ನು ಹೊರತುಪಡಿಸಿ ಅಕ್ರಮ ಸಂಬಂಧ ಸರಿ ಅನ್ನುವಂತೆ ಬಿಂಬಿಸುವ ಕಥೆಯನ್ನು ಪಠ್ಯವಾಗಿ ಸೇರಿಸಲಾಗಿದೆ. ಅಲ್ಲದೆ, ವಿವಾಹೇತರ ಸಂಬಂಧವನ್ನು ಲಘು ಭಾಷೆಯಲ್ಲಿ ವಿವರಿಸಲಾಗಿದ್ದು, ಸ್ವತಃ ಇದನ್ನು ಬೋಧನೆ ಮಾಡುವ ಶಿಕ್ಷಕ ವೃಂದಕ್ಕೆ ಮುಜುಗರ ಸೃಷ್ಟಿಸುವಂತಿದೆ.

    ಮಟ್ಟಾರು ವಿಠಲ ಹೆಗ್ಡೆ ಎಂಬ ಕಥೆಗಾರ 1939ರಲ್ಲಿ ಬರೆದ ಈ ಕಥೆಯನ್ನು ಈಗ ಪಠ್ಯವಾಗಿ ಸೇರಿಸಿಕೊಂಡಿದ್ದರ ಉದ್ದೇಶವೇನು ಅನ್ನೋ ಪ್ರಶ್ನೆಯನ್ನು ಉಪನ್ಯಾಸಕರು ಮುಂದಿಟ್ಟಿದ್ದಾರೆ. ವಿದ್ಯಾರ್ಥಿಗಳಲ್ಲಿ ವಿವಾಹೇತರ ಸಂಬಂಧದ ಚಿತ್ರಣ ತಿಳಿಸಿ, ಯಾವ ರೀತಿಯ ವಿಕೃತಿಯನ್ನು ಹೇರುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ. ವಿವಿಯ ಪಠ್ಯ ಈಗಷ್ಟೆ ಮುದ್ರಣ ಆಗಿ ವಿದ್ಯಾರ್ಥಿಗಳ ಕೈಸೇರಿದ್ದು ಕೂಡಲೇ ಅದನ್ನು ಹಿಂಪಡೆಯಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಮೂಲಕ ಪಠ್ಯ ಪುಸ್ತಕ ರಚನಾ ಸಮಿತಿ ಯಾವ ರೀತಿಯ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತಿದೆ ಎಂಬ ಪ್ರಶ್ನೆಯೂ ಕೇಳಿಬಂದಿದೆ.