Tag: ಅಶ್ರಫ್

  • ಕುಡುಪು ಮೈದಾನದಲ್ಲಿ ಹತ್ಯೆಯಾಗಿದ್ದ ಅಶ್ರಫ್ ಕುಟುಂಬಸ್ಥರ ಭೇಟಿಯಾದ ರಾಜ್ಯ ಕಾಂಗ್ರೆಸ್ ನಿಯೋಗ

    ಕುಡುಪು ಮೈದಾನದಲ್ಲಿ ಹತ್ಯೆಯಾಗಿದ್ದ ಅಶ್ರಫ್ ಕುಟುಂಬಸ್ಥರ ಭೇಟಿಯಾದ ರಾಜ್ಯ ಕಾಂಗ್ರೆಸ್ ನಿಯೋಗ

    ಮಂಗಳೂರು: ಜಿಲ್ಲೆಯ ಕುಡುಪುವಿನ ಮೈದಾನದಲ್ಲಿ ನಡೆದಿದ್ದ ಗುಂಪು ಹತ್ಯೆಯಲ್ಲಿ ಸಾವನ್ನಪ್ಪಿದ ಕೇರಳದ (Kerala) ವಯನಾಡ್‌ನ (Wayanad) ಅಶ್ರಫ್ ಕುಟುಂಬಸ್ಥರನ್ನು ರಾಜ್ಯ ಕಾಂಗ್ರೆಸ್ (Congress) ನಿಯೋಗ ಭೇಟಿಯಾಗಿದೆ.

    ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂಸದ ಕೆ.ಸಿ.ವೇಣುಗೋಪಾಲ್ ಕೋರಿಕೆಯಂತೆ, ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಬೆಂಗಳೂರು ನಿವಾಸದಲ್ಲಿ ಸಚಿವ ಜಮೀರ್ ಅಹ್ಮದ್, ಎಐಸಿಸಿ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸಿರ್ ಅಹ್ಮದ್, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಕಾಂಗ್ರೆಸ್ ಮುಖಂಡ ಜಿ.ಎ.ಬಾವಾ ಚರ್ಚೆ ನಡೆಸಿ, ಪರಿಹಾರ ವಿತರಿಸಿದ್ದಾರೆ.ಇದನ್ನೂ ಓದಿ: ಮಾಟ ಮಾಡ್ತಾರೆ ಅಂತ ಒಂದೇ ಕುಟುಂಬದ ಐವರನ್ನು ಜೀವಂತವಾಗಿ ಸುಟ್ಟು ಹತ್ಯೆ

    ಚರ್ಚೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಲು ಸರ್ಕಾರದ ವತಿಯಿಂದ ವಿಶೇಷ ಅಭಿಯೋಜಕರನ್ನು ನೇಮಿಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಗುಂಪು ಹತ್ಯಾ ಕಾಯ್ದೆ ಪ್ರಕಾರ ಹತ್ಯೆಯಾದ ಅಶ್ರಫ್ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಒದಗಿಸುವ ಕುರಿತು ಚರ್ಚೆ ನಡೆಸಲಾಗಿದೆ.

    Attended the meeting with the Mangalore delegation at Govt Residence of Hon’ble Karnataka Legislative Assembly Speaker Speaker U. T. Khader in Bengaluru City

    ಇನ್ನೂ ತಮ್ಮ ವೈಯುಕ್ತಿಕ ನೆಲೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ 10 ಲಕ್ಷ ರೂ. ಹಾಗೂ ಯು.ಟಿ.ಖಾದರ್ 5 ಲಕ್ಷ ರೂ. ಪರಿಹಾರದ ಮೊತ್ತವನ್ನು ಅಶ್ರಫ್ ಕುಟುಂಬಸ್ಥರಿಗೆ ವಿತರಿಸಿದರು.ಇದನ್ನೂ ಓದಿ: ಪಾಕ್ ಬೇಹುಗಾರ್ತಿಗೆ ಕೇರಳ ಸರ್ಕಾರ ಧನಸಹಾಯ – ಸರ್ಕಾರದ ಖರ್ಚಿನಲ್ಲಿ ವ್ಲಾಗರ್ ಜ್ಯೋತಿ ಪ್ರವಾಸ

  • ಅಶ್ರಫ್‌ ಹತ್ಯೆ ವಿಚಾರ ಪ್ರಸ್ತಾಪಿಸಿ ಸಚಿವರಿಗೆ ಮುಸ್ಲಿಂ ಮುಖಂಡರಿಂದ ಕ್ಲಾಸ್‌ – ಟೇಬಲ್‌ ಬಡಿದು ಆಕ್ರೋಶ

    ಅಶ್ರಫ್‌ ಹತ್ಯೆ ವಿಚಾರ ಪ್ರಸ್ತಾಪಿಸಿ ಸಚಿವರಿಗೆ ಮುಸ್ಲಿಂ ಮುಖಂಡರಿಂದ ಕ್ಲಾಸ್‌ – ಟೇಬಲ್‌ ಬಡಿದು ಆಕ್ರೋಶ

    – ಮಂಗಳೂರಲ್ಲಿ ಗೃಹ ಸಚಿವರ ಜೊತೆಗಿನ ಸಭೆಯಲ್ಲಿ ಭಾರಿ ಗಲಾಟೆ

    ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ (Suhas Shetty) ಹತ್ಯೆ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ್‌ (G.Parameshwar) ಮಂಗಳೂರಲ್ಲಿ ಸಭೆ ನಡೆಸಿದ್ದಾರೆ. ಸಚಿವರು ನಡೆಸಿದ ಸಭೆಯಲ್ಲಿ ಭಾರಿ ಗಲಾಟೆ ಗದ್ದಲ ನಡೆದಿದೆ.

    ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಗೃಹ ಸಚಿವರ ಜೊತೆ ಮಾತುಕತೆಗೆ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ತೆರಳಿದ್ದರು. ಪರಮೇಶ್ವರ್ ಜೊತೆ ಮಾತುಕತೆಯಲ್ಲಿ ಮೊನ್ನೆ ನಡೆದ ಗುಂಪು ಹತ್ಯೆ ವಿಚಾರ ಪ್ರಸ್ತಾಪವಾಯಿತು. ಇದೇ ವಿಚಾರದ ಚರ್ಚೆ ವೇಳೆ ಸಭೆಯಲ್ಲಿ ಗದ್ದಲವಾಗಿದೆ.‌ ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಕೇಸ್ – ಸಫ್ವಾನ್ ಗ್ಯಾಂಗ್‌ನ ಇಬ್ಬರು ಆರೋಪಿಗಳು ಅರೆಸ್ಟ್

    ಟೇಬಲ್ ಬಡಿದು ಗೃಹ ಸಚಿವರ ಸಭೆಯಲ್ಲಿ ಮುಸ್ಲಿಂ ಮುಖಂಡರ ಆಕ್ರೋಶ ಹೊರಹಾಕಿದ್ದಾರೆ. ಕುಡುಪು ಬಳಿ ನಡೆದ ಅಶ್ರಫ್ ಗುಂಪು ಹತ್ಯೆ ಬಗ್ಗೆ ಸ್ಥಳೀಯ ಮುಸ್ಲಿಂ ನಾಯಕರು ಮಾಹಿತಿ ನೀಡಿದ್ದಾರೆ. ಸಮಗ್ರ ಮಾಹಿತಿ ಪಡೆದು ಕಮಿಷನರ್ ಕಚೇರಿ ಪರಮೇಶ್ವರ್ ತೆರಳಿದ್ದಾರೆ. ಸಭೆಯಲ್ಲಿ ಪರಮೇಶ್ವರ್‌ಗೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಾಥ್ ನೀಡಿದ್ದರು.

    ಸುಹಾಸ್‌ ಶೆಟ್ಟಿ ಹತ್ಯೆ ಹಿನ್ನೆಲೆ ಮಂಗಳೂರಿನಲ್ಲಿ ಆಕ್ರೋಶದ ಕಾವು ಹೆಚ್ಚಾಗಿದೆ. ಹಿಂದೂಪರ ಸಂಘಟನೆಗಳು ಹತ್ಯೆ ಖಂಡಿಸಿ ದಕ್ಷಿಣ ಕನ್ನಡ ಬಂದ್‌ ಮಾಡಿದ್ದಾರೆ. ಸುಹಾಸ್‌ ಹತ್ಯೆ ಬೆನ್ನಲ್ಲೇ ಹಲವೆಡೆ ಘರ್ಷಣೆಗಳು ಕೂಡ ಆಗಿವೆ. ಮಂಗಳೂರಿನ ಮೂರು ಕಡೆ ಚಾಕು ಇರಿತ ಆಗಿದೆ. ಇದನ್ನೂ ಓದಿ: ಮಂಗಳೂರಲ್ಲಿ ಮೀನು ವ್ಯಾಪಾರಿಯ ಹತ್ಯೆಗೆ ಯತ್ನ – ಹಿಂದೂ ಮಹಿಳೆಯ ಸಮಯಪ್ರಜ್ಞೆಯಿಂದ ಬಚಾವ್

    ಪ್ರಕರಣದ ಗಂಭೀರತೆ ಅರಿತು ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಪೊಲೀಸರು ಮಾಹಿತಿ ಪಡೆದುಕೊಂಡಿದ್ದು, ಸ್ಥಳೀಯ ಮುಖಂಡರ ಜೊತೆ ಸಭೆ ನಡೆಸಿದ್ದರು.

  • ಅತಿಕ್, ಅಶ್ರಫ್ ಹತ್ಯೆ – ಮೂವರು ಹಂತಕರ ಬಂಧನ, ಯುಪಿಯಲ್ಲಿ ಹೈ ಅಲರ್ಟ್

    ಅತಿಕ್, ಅಶ್ರಫ್ ಹತ್ಯೆ – ಮೂವರು ಹಂತಕರ ಬಂಧನ, ಯುಪಿಯಲ್ಲಿ ಹೈ ಅಲರ್ಟ್

    ಲಕ್ನೋ: ಮಾಜಿ ಸಂಸದ, ಗ್ಯಾಂಗ್‌ಸ್ಟರ್ ಅತಿಕ್ ಅಹ್ಮದ್ (Atiq Ahmed) ಹಾಗೂ ಆತನ ಸಹೋದರ ಅಶ್ರಫ್‌ನನ್ನು (Ashraf) ಶನಿವಾರ ಪ್ರಯಾಗ್‌ರಾಜ್‌ನಲ್ಲಿ (Prayagraj) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಉತ್ತರ ಪ್ರದೇಶದಾದ್ಯಂತ (Uttar Pradesh) ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

    ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಗಳಾದ ಅತಿಕ್ ಹಾಗೂ ಅಶ್ರಫ್‌ನನ್ನು ಶನಿವಾರ ಪ್ರಯಾಗ್‌ರಾಜ್ ಆಸ್ಪತ್ರೆಗೆ ಮೆಡಿಕಲ್ ಚೆಕಪ್‌ಗೆಂದು ಕರೆದುಕೊಂಡು ಹೋಗುತ್ತಿದ್ದ ವೇಳೆ ಅವರಿಬ್ಬರ ಮೇಲೆ ಗುಂಡು ಹಾರಿಸಲಾಗಿದೆ. ಅತಿಕ್ ಹಾಗೂ ಅಶ್ರಫ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆಯೇ ಪತ್ರಕರ್ತರ ರೂಪದಲ್ಲಿ ಬಂದಿದ್ದ ಬಂದೂಕುಧಾರಿಗಳು ಅವರಿಬ್ಬರ ಮೇಲೆ ಗುಂಡು ಹಾರಿಸಿ ಹತ್ಯೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಘಟನೆಗೆ ಸಂಬಂಧಿಸಿದಂತೆ ಮೂವರು ಹಂತಕರನ್ನು ತಕ್ಷಣವೇ ಅಧಿಕಾರಿಗಳು ಬಂಧಿಸಿದ್ದು, ಅವರನ್ನು ಲವ್ಲೇಶ್, ಸನ್ನಿ ಹಾಗೂ ಅರುಣ್ ಮೌರ್ಯ ಎಂದು ಪೊಲೀಸರು ಗುರುತಿಸಿದ್ದಾರೆ. ಇವರು ಪತ್ರಕರ್ತರಂತೆ ಬಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅತಿಕ್ ಹಾಗೂ ಅಶ್ರಫ್ ಮೇಲೆ ಗುಂಡು ಹಾರಿಸಿದ್ದಾರೆ.

    ಘಟನೆಯ ಬಳಿಕ ಮಥುರಾ, ಅಯೋಧ್ಯೆ ಸೇರಿದಂತೆ ಉತ್ತರಪ್ರದೇಶದಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಪ್ರಮುಖ ನಗರಗಳಲ್ಲಿ ಭದ್ರತಾ ಅಧಿಕಾರಿಗಳು ಗುಸ್ತು ತಿರುಗುತ್ತಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಭಾನುವಾರ ಎಲ್ಲಾ ಜಿಲ್ಲೆಗಳಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ವಿಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಏನಿದು ಪ್ರಕರಣ?
    2005ರಲ್ಲಿ ಅಲಹಾಬಾದ್ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ನಾಯಕ ರಾಜು ಪಾಲ್ ಗೆದ್ದಿದ್ದರು. ಇದಾದ 1 ತಿಂಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಫೆ.24 ರಂದು ಉಮೇಶ್ ಪಾಲ್ ಅವರನ್ನು ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.

    ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 40 ಜನರನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ. ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್, ಆತನ ಸಹೋದರ ಮತ್ತು ಮಾಜಿ ಶಾಸಕ ಅಶ್ರಫ್ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದು ಇವರಿಬ್ಬರೂ ಜೈಲಿನಲ್ಲಿದ್ದರು. ಇದನ್ನೂ ಓದಿ: ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ರೌಡಿ ಅತಿಕ್‌ ಅಹ್ಮದ್‌, ಸಹೋದರ ಗ್ಯಾಂಗ್‌ವಾರ್‌ಗೆ ಬಲಿ

    ಕಳೆದ ಕೆಲ ದಿನಗಳ ಹಿಂದಷ್ಟೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಅತಿಕ್ ಅಹ್ಮದ್‌ನ ಪುತ್ರ ಅಸದ್‌ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಇದಕ್ಕೂ ಮುನ್ನವೇ ತಮ್ಮನ್ನು ಜೈಲಿನಿಂದ ಹೊರಗಡೆ ಕರೆದುಕೊಂಡು ಹೋಗುವ ವೇಳೆ ಯಾರಾದರೂ ತಮ್ಮನ್ನು ಗುಂಡಿಕ್ಕಿ ಕೊಲ್ಲಬಹುದು ಎಂದು ಅಶ್ರಫ್ ಭೀತಿ ವ್ಯಕ್ತಪಡಿಸಿದ್ದ. ಹಾಗೂ ತಮ್ಮನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಹೋಗದಂತೆ ಮನವಿ ಮಾಡಿಕೊಂಡಿದ್ದ. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್‌ – ಗ್ಯಾಂಗ್‌ ಸ್ಟಾರ್‌ ಅತಿಕ್‌ ಪುತ್ರ ಎನ್‌ಕೌಂಟರ್‌ಗೆ ಬಲಿ

  • ಹಿರಿಯ ಅಧಿಕಾರಿಯಿಂದ ಬೆದರಿಕೆ, 2 ವಾರದೊಳಗೆ ನನ್ನ ಕೊಲ್ಬೋದು – ಅತೀಕ್ ಸಹೋದರ ಅಶ್ರಫ್

    ಹಿರಿಯ ಅಧಿಕಾರಿಯಿಂದ ಬೆದರಿಕೆ, 2 ವಾರದೊಳಗೆ ನನ್ನ ಕೊಲ್ಬೋದು – ಅತೀಕ್ ಸಹೋದರ ಅಶ್ರಫ್

    ಲಕ್ನೋ: ನನಗೆ ಹಿರಿಯ ಅಧಿಕಾರಿಯಿಂದ ಜೀವ ಬೆದರಿಕೆಯಿದೆ ಎಂದು ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನ (Atiq Ahmed) ಸಹೋದರ ಅಶ್ರಫ್ ಅಹ್ಮದ್ (Ashraf Ahmed) ಹೇಳಿಕೆ ನೀಡಿದ್ದಾನೆ.

    2006ರಲ್ಲಿ ಉಮೇಶ್ ಪಾಲ್ (Umesh Pal) ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ 7 ಜನರಲ್ಲಿ ಅಶ್ರಫ್ ಅಹ್ಮದ್ ಕೂಡಾ ಒಬ್ಬ. ತನಗೆ ಜೀವಬೆದರಿಕೆಯಿದ್ದು, 2 ವಾರದೊಳಗೆ ನನ್ನನ್ನು ಕೊಲೆ ಮಾಡಬಹುದು ಎಂದು ಅಶ್ರಫ್ ಭೀತಿ ವ್ಯಕ್ತಪಡಿಸಿದ್ದಾನೆ.

    ಮಂಗಳವಾರ ಅಶ್ರಫ್‌ನನ್ನು ಬರೇಲಿ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಅತೀಕ್‌ನನ್ನು ಗುಜರಾತ್‌ನ ಸಾಬರಮತಿ ಜೈಲಿಗೆ ಕರೆತರಲಾಗುತ್ತಿದೆ. ಅಶ್ರಫ್‌ನನ್ನು ಬರೇಲಿ ಜೈಲಿಗೆ ಸ್ಥಳಾಂತರಿಸುವಾಗ ನನ್ನನ್ನು ಜೈಲಿನಿಂದ ಹೊರಗೆ ಕರೆದೊಯ್ಯುವ ಸಂದರ್ಭದಲ್ಲಿ 2 ವಾರಗಳ ಒಳಗಾಗಿ ಕೊಲ್ಲುವ ಸಾಧ್ಯತೆಯಿದೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ನನಗೆ ವಯಸ್ಸಾಗಿದೆ, ಟಿಕೆಟ್ ಬೇಡ: ಶಾಸಕ ಎಂ.ವೈ ಪಾಟೀಲ್

    ಈ ಹಿಂದೆ ಅಶ್ರಫ್ ತನ್ನನ್ನು ದಯವಿಟ್ಟು ಜೈಲಿನಿಂದ ಹೊಗೆ ಕರೆದುಕೊಂಡು ಹೋಗಬೇಡಿ. ಜೈಲಿನಿಂದ ಆಚೆ ಕರೆದುಕೊಂಡು ಹೋಗುವ ವೇಳೆ ನನ್ನನ್ನು ಕೊಲೆ ಮಾಡುವ ಸಾಧ್ಯತೆಯಿದೆ ಎಂದು ಭೀತಿ ವ್ಯಕ್ತಪಡಿಸಿದ್ದ. ಇದೀಗ ಅಶ್ರಫ್ ನನ್ನನ್ನು ಜೈಲಿನಿಂದ ಆಚೆ ಕರೆದುಕೊಂಡು ಹೋಗುವ ವೇಳೆ 2 ವಾರಗಳಲ್ಲಿ ಕೊಲ್ಲುವುದಾಗಿ ಅಧಿಕಾರಿಯೊಬ್ಬರು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ.

    ಬೆದರಿಕೆಯ ಕುರಿತು ಮಾತನಾಡಿದ ಅಶ್ರಫ್, ತನಗೆ ಬೆದರಿಕೆಯನ್ನು ಹಿರಿಯ ಅಧಿಕಾರಿಯೊಬ್ಬರು ನೀಡಿದ್ದಾರೆ. ಅವರ ಹೆಸರನ್ನು ಮುಖ್ಯಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅಲಹಾಬಾದ್ ಮುಖ್ಯ ನ್ಯಾಯಮೂರ್ತಿಗೆ ಬಹಿರಂಗಪಡಿಸುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಕಲ್ಲೆಸೆದರೆ 5 ವರ್ಷ ಜೈಲು?- ರೈಲ್ವೆ ಎಚ್ಚರಿಕೆ

  • ದಯವಿಟ್ಟು ನನ್ನನ್ನು ಜೈಲಿಂದ ಹೊರಗೆ ಕಳಿಸ್ಬೇಡಿ – ಎನ್‌ಕೌಂಟರ್ ಭೀತಿಗೆ ನ್ಯಾಯಾಲಯ ಮೊರೆ ಹೋದ UP ಗ್ಯಾಂಗ್‌ಸ್ಟರ್

    ದಯವಿಟ್ಟು ನನ್ನನ್ನು ಜೈಲಿಂದ ಹೊರಗೆ ಕಳಿಸ್ಬೇಡಿ – ಎನ್‌ಕೌಂಟರ್ ಭೀತಿಗೆ ನ್ಯಾಯಾಲಯ ಮೊರೆ ಹೋದ UP ಗ್ಯಾಂಗ್‌ಸ್ಟರ್

    ಲಕ್ನೋ: ಯೋಗಿ ಆದಿತ್ಯನಾಥ್ (Yogi Adityanath) ಅವರ ಸರ್ಕಾರವಿರುವ ಉತ್ತರ ಪ್ರದೇಶದಲ್ಲಿ (Uttar Pradesh) ಜೈಲಿನಲ್ಲಿರುವ (Jail) ಮಾಜಿ ಶಾಸಕನೊಬ್ಬ ತನ್ನ ಮೇಲೆ ಎನ್‌ಕೌಂಟರ್ (Encounter) ಆಗುವ ಭೀತಿಯಿಂದ ಜೈಲಿನಿಂದ ದಯವಿಟ್ಟು ಹೊರಗೆ ಕಳುಹಿಸಬೇಡಿ ಎಂದು ಕೋರ್ಟ್‌ಗೆ (Court) ಮನವಿ ಮಾಡಿದ್ದಾನೆ.

    ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ (Atiq Ahmed) ಸಹೋದರ ಅಶ್ರಫ್ (Ashraf) ಉತ್ತರ ಪ್ರದೇಶದ ಬರೇಲಿಯಲ್ಲಿರುವ ಜೈಲಿನಲ್ಲಿದ್ದು, ತನ್ನನ್ನು ಜೈಲಿನಿಂದ ಹೊರಗೆ ವರ್ಗಾಯಿಸುವುದರಿಂದ ಎನ್‌ಕೌಂಟರ್ ಆಗುವ ಬಗ್ಗೆ ಭೀತಿ ವ್ಯಕ್ತಪಡಿಸಿದ್ದಾನೆ. ಕಳೆದ ವಾರ ಪ್ರಯಾಗ್‌ರಾಜ್‌ನಲ್ಲಿ ಉಮೇಶ್ ಪಾಲ್ (Umesh Pal) ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಗುಂಡಿಕ್ಕಿ ಕೊಂದಿದ್ದರು. ಈ ಹಿನ್ನೆಲೆ ಇದೀಗ ಅಶ್ರಫ್ ತನ್ನ ಮೇಲೂ ದಾಳಿ ನಡೆಯುವ ಭೀತಿಯನ್ನು ವ್ಯಕ್ತಪಡಿಸಿದ್ದಾನೆ.

    ಬಿಎಸ್‌ಪಿ ಶಾಸಕರಾಗಿದ್ದ ರಾಜು ಪಾಲ್ (Raju Pal) ಅವರನ್ನು 2005ರಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಅಲಹಾಬಾದ್‌ನ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಕಿರಿಯ ಸಹೋದರ ಕಾಲಿದ್ ಅಜೀಂ ಅವರನ್ನು ಸೋಲಿಸಿ ರಾಜು ಪಾಲ್ ಗೆದ್ದಿದ್ದರು. ಇದಾದ ತಿಂಗಳ ಬಳಿಕ ಅವರ ಹತ್ಯೆ ನಡೆಸಲಾಗಿತ್ತು. ಇದನ್ನೂ ಓದಿ: UP ಉಮೇಶ್ ಪಾಲ್ ಕೊಲೆ ಕೇಸ್ – ಎನ್‍ಕೌಂಟರ್‌ಗೆ ಆರೋಪಿ ಬಲಿ

    ರಾಜು ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್, ಆತನ ಸಹೋದರ ಹಾಗೂ ಮಾಜಿ ಶಾಸಕ ಅಶ್ರಫ್ ಪ್ರಮುಖ ಆರೋಪಿಗಳಾಗಿದ್ದಾರೆ. ಸದ್ಯ ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ. ಅಶ್ರಫ್ ಬರೇಲಿ ಜೈಲಿನಲ್ಲಿದ್ದರೆ, ಅತೀಕ್ ಅಹ್ಮದ್ ಸಬರಮತಿ ಜೈಲಿನಲ್ಲಿದ್ದಾನೆ.

    ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನನ್ನು ಫೆಬ್ರವರಿ 24 ರಂದು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಎನ್‌ಕೌಂಟರ್ ಮಾಡಿ ಹತ್ಯೆ ಮಾಡಿತ್ತು. ಇದಾದ ಮರುದಿನವೇ ಅಶ್ರಫ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ನ್ಯಾಯಾಲಯದ ವಿಚಾರಣೆಗೆ ಅಥವಾ ಜೈಲಿನಿಂದ ವರ್ಗಾವಣೆಯಾಗುವ ಸಂದರ್ಭ ಜೈಲಿನ ಆವರಣದಿಂದ ಹೊರಗೆ ಹೋಗುವಾಗ ದಾರಿಯಲ್ಲಿ ತನ್ನ ಮೇಲೆ ದಾಳಿ ನಡೆಸಬಹುದು ಎಂದು ಅಶ್ರಫ್ ಭೀತಿ ವ್ಯಕ್ತಪಡಿಸಿದ್ದಾನೆ. ಇದನ್ನೂ ಓದಿ: ಬುಧವಾರದಿಂದ ಸರ್ಕಾರಿ ನೌಕರರ ಮುಷ್ಕರ: ಯಾವ ಕಚೇರಿಗಳು ಬಂದ್‌ ಆಗಲಿವೆ?

  • ಕೆಜಿ ಹಳ್ಳಿ ಗಲಭೆಯಲ್ಲಿ ಅಶ್ರಫ್ ಕೈವಾಡ..?- ಐಸ್ ರೀಡರ್ ಅಪ್ಲಿಕೇಷನ್‍ನಿಂದ ಡೇಟಾ ಇರೇಸ್

    ಕೆಜಿ ಹಳ್ಳಿ ಗಲಭೆಯಲ್ಲಿ ಅಶ್ರಫ್ ಕೈವಾಡ..?- ಐಸ್ ರೀಡರ್ ಅಪ್ಲಿಕೇಷನ್‍ನಿಂದ ಡೇಟಾ ಇರೇಸ್

    ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮುಖಂಡರ ಅರೆಸ್ಟ್ ಕೇಸ್‍ನಲ್ಲಿ ಮೊಬೈಲ್ (Mobile) ರಿಟ್ರೀವ್ ಮಾಡುವುದೇ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಅದೊಂದು ಆಪ್‍ನಿಂದ ಮೊಬೈಲ್‍ನಲ್ಲಿದ್ದ ಎಲ್ಲವೂ ಖಾಲಿ ತೋರಿಸ್ತಿದೆ. ಈ ನಡುವೆ ಮೂರು ರಾಜ್ಯಗಳ ಕೋ ಆರ್ಡಿನೇಟರ್ ನನ್ನು ಖಾಕಿ ಖೆಡ್ಡಾಗೆ ಕೆಡವಿದೆ.

    ಪಿಎಫ್‍ಐ ಮುಖಂಡರ ಮೇಲಿನ ದಾಳಿ ಸಂಬಂಧ ಪೊಲೀಸರ ವಿಚಾರಣೆ ತೀವ್ರಗೊಂಡಿದೆ. ಈ ನಡುವೆ ದೆಹಲಿಯಲ್ಲಿ ಸಿಕ್ಕ ಮಂಗಳೂರು (Mangaluru) ಮೂಲದ ಮೊಹಮದ್ ಅಶ್ರಫ್‍ನನ್ನ ಬಾಡಿ ವಾರೆಂಟ್ ಮೇಲೆ ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಜಾರ್ಖಂಡ್ ಸೇರಿದಂತೆ ಮೂರು ರಾಜ್ಯಗಳ ಕೋ ಆರ್ಡಿನೇಟರ್ ಆಗಿ ಮೊಹಮದ್ ಅಶ್ರಫ್ (Mohammad Ashraf) ಕೆಲಸ ಮಾಡ್ತಿದ್ದಾಗಿ ತಿಳಿದುಬಂದಿದೆ.

    `ಟ್ರೈನಿಂಗ್ ಟು ಬಿ ಆರ್ಗನೈಸ್ಡ್` ಲೆಟರ್‌ ಗೂ ಮಹಮ್ಮದ್ ಆಶ್ರಫ್‍ಗೂ ಲಿಂಕ್ ಇರೋ ಶಂಕೆ ವ್ಯಕ್ತವಾಗಿದ್ದು, ಆಶ್ರಫ್ ವಿಚಾರಣೆಗಾಗಿ ಕೇಂದ್ರ ಅಪರಾಧ ವಿಭಾಗ (CCB) ಹಾಗೂ ಕೆಜಿಹಳ್ಳಿ ಪೊಲೀಸರು ಕಾಯುತ್ತಿದ್ದಾರೆ. ವಿಚಾರಣೆ ವೇಳೆ ಮಹತ್ವದ ಮಾಹಿತಿಗಳು ಹೊರಬೀಳೋ ನಿರೀಕ್ಷೆಗಳಿವೆ. ಇದನ್ನೂ ಓದಿ: PFI ಶಂಕಿತರ ಮೊಬೈಲ್‌ನಲ್ಲಿತ್ತು ಸಾಕ್ಷಿಗಳನ್ನೇ ನಾಶ ಮಾಡುವ ಆಪ್

    ಬಂಧಿತ 15 ಮಂದಿ ಆರೋಪಿಗಳಿಂದ 55 ಮೊಬೈಲ್ ಮತ್ತು 15 ಲ್ಯಾಪ್‍ಟಾಪ್ (LapTop) ವಶಕ್ಕೆ ಪಡೆಯಲಾಗಿದೆ. ಮೊಬೈಲ್ ರಿಟ್ರೀವ್‍ಗಾಗಿ ಪೊಲೀಸರು ಎಫ್‍ಎಸ್‍ಎಲ್ ಮೊರೆ ಹೋಗಿದ್ದಾರೆ. ಬಹುತೇಕ ಮೊಬೈಲ್‍ಗಳಲ್ಲಿ ಯಾವುದೇ ಡೇಟಾಗಳು ಸಿಕ್ತಿಲ್ಲ. ಐಸ್ ರೀಡರ್ (Eyes Reader) ಅನ್ನೊ ಅಪ್ಲಿಕೇಷನ್ ಇನ್ಸ್ ಸ್ಟಾಲ್ ಮಾಡಿಕೊಂಡು, ಲಾಗಿನ್ ಆದರೆ ಎಲ್ಲಾ ಮೊಬೈಲ್ ಡೇಟಾ ರಿಮೂವ್ ಆಗುತ್ತಂತೆ. ಹೀಗಾಗಿ ಇದೆ ಅಪ್ಲಿಕೇಷನ್ ಬಳಸಿ ಮೊಬೈಲ್ ಡೇಟಾ ಇರೇಸ್ ಮಾಡಿರುವ ಸಾಧ್ಯತೆಯಿದೆ.

    ಕೋರ್ಟ್ (Court) ಪರ್ಮೀಷನ್ ಪಡೆದು, ಮೊಬೈಲ್‍ಗಳಲ್ಲಿನ ಸೀಕ್ರೆಟ್ ಹೊರತೆಗೆಯಲು ಪೊಲೀಸರು ಎಫ್‍ಎಸ್‍ಎಲ್‍ಗೆ ಮೊಬೈಲ್‍ಗಳನ್ನ ಕಳಿಸಿ ಕೊಟ್ಟಿದ್ದಾರೆ.ಸಮಾಜದಲ್ಲಿ ಅಶಾಂತಿ, ದೇಶದ ವಿರುದ್ಧ ಷಡ್ಯಂತ್ರ್ಯದಂತಹ ಗಂಭೀರ ಆರೋಪ ಅರೆಸ್ಟ್ ಆದವರ ಮೇಲಿದೆ.

    Live Tv
    [brid partner=56869869 player=32851 video=960834 autoplay=true]