Tag: ಅಶೋಕ ಬ್ಲೇಡ್

  • ಎರಡು ಭಾಗದಲ್ಲಿ ಬರಲಿದೆ ನೀನಾಸಂ ಸತೀಶ್ ನಟನೆಯ ಅಶೋಕ ಬ್ಲೇಡ್

    ಎರಡು ಭಾಗದಲ್ಲಿ ಬರಲಿದೆ ನೀನಾಸಂ ಸತೀಶ್ ನಟನೆಯ ಅಶೋಕ ಬ್ಲೇಡ್

    ನ್ನಡ ಚಿತ್ರೋದ್ಯಮದ ಹೆಸರಾಂತ ನಟ ನೀನಾಸಂ ಸತೀಶ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯ ತಾವು ನಟಿಸುತ್ತಿರುವ ಅಶೋಕ ಬ್ಲೇಡ್ (Ashoka Blade) ಕುರಿತಾಗಿ ಮಹತ್ವದ ಸುದ್ದಿಯೊಂದನ್ನು ನೀಡಿದ್ದು, ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರಲಿದೆ ಎಂದಿದ್ದಾರೆ. ಪಾರ್ಟ್ 1  (Part 1) ಮತ್ತು ಪಾರ್ಟ್ 2 (Part 2) ಒಟ್ಟಿಗೆ ಶೂಟ್ ಮಾಡಿ, ನಂತರದ ದಿನಗಳಲ್ಲಿ ಒಂದೊಂದೇ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ.

    ಈ ಸಿನಿಮಾ ಎರಡು ಕಾಲ ಘಟ್ಟದಲ್ಲಿ ಮೂಡಿ ಬರಲಿದ್ದು, 70ರ ದಶಕದಿಂದ 2022ರವರೆಗಿನ ಕಥೆಯು ಸಿನಿಮಾದಲ್ಲಿದೆಯಂತೆ. ಈ ಎರಡು ಘಟ್ಟಗಳನ್ನು ವಿಭಾಗಗಳಾಗಿ ವಿಂಗಡಿಸಿ ಸಿನಿಮಾ ಮಾಡುತ್ತಿರುವುದಾಗಿ ಸತೀಶ್ (Ninasam Satish) ಮಾತನಾಡಿದ್ದಾರೆ. ಎರಡು ಭಾಗಗಳಲ್ಲಿ ಸಿನಿಮಾ ಮಾಡಲು ಕಥೆಯೇ ಪ್ರೇರೇಪಿಸಿತು. ಹಾಗಾಗಿ ಇಂಥದ್ದೊಂದು ತೀರ್ಮಾನಕ್ಕೆ ಬರಲಾಗಿದೆ ಎನ್ನುವುದು ಸತೀಶ್ ಮಾತು.

    ಈಗಾಗಲೇ ಬರೋಬ್ಬರಿ 100 ದಿನಗಳ ಕಾಲ ಅಶೋಕ ಬ್ಲೇಡ್ ಸಿನಿಮಾದ ಶೂಟಿಂಗ್ ನಡೆದಿದೆ. ಇನ್ನೂ ಮೂವತ್ತು ದಿನಗಳ ಕಾಲ ಚಿತ್ರೀಕರಣವಾದರೆ, ಸಿನಿಮಾ ಕಂಪ್ಲೀಟ್. ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದರಿಂದ ಆದಷ್ಟು ನೈಜತೆಗೆ ಹತ್ತಿರವಾಗುವಂತೆ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಸತೀಶ್ ಹೊಸ ಬಗೆಯ ಪಾತ್ರವನ್ನು ಮಾಡಿದ್ದಾರೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ತಯಾರಾಗಲಿದೆ. ಇದನ್ನೂ ಓದಿ:ನೀನು ಆಂಟಿಯಾಗಿ 1 ವರ್ಷದ ಅನುಭವವಿದೆ- ಬರ್ತ್‌ಡೇಯಂದು ಪತ್ನಿ ಕಾಲೆಳೆದ ನಟ ಸುದರ್ಶನ್

    ಸತೀಶ್ ನಾಯಕನಾದರೆ, ಕಾವ್ಯ ಶೆಟ್ಟಿ (Kavya Shetty) ನಾಯಕಿಯಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾವ್ಯ ಪೊಲೀಸ್ ಇನ್ಸೆಪೆಕ್ಟರ್ ಪಾತ್ರವನ್ನು ಮಾಡಿದ್ದಾರೆ. ವಿನೋದ್ ಈ ಸಿನಿಮಾದ ನಿರ್ದೇಶಕರಾದರೆ, ನರಹರಿ ನಿರ್ಮಾಪಕರು.

    ಮೈಸೂರು ಸೀಮೆಯಲ್ಲಿ 70ರ ದಶಕದಲ್ಲಿ ನಡೆದ ಒಂದು ಘಟನೆ ಬಗ್ಗೆ ಕೇಳಿದ್ದೆ. ಅದು ಎಲ್ಲೂ ದಾಖಲಾಗಿಲ್ಲ. ಎಲ್ಲೂ ಅದರ ಬಗ್ಗೆ ಉಲ್ಲೇಖವಿಲ್ಲ. ಕೊನೆಗೆ ಆ ಕಥೆಯ ವಿವರಗಳನ್ನು ಹುಡುಕಿಕೊಂಡು ಹೋದಾಗ ಹಲವು ಮಹತ್ವದ ವಿಷಯಗಳು ಗೊತ್ತಾಯಿತು. ಇದು ಕನ್ನಡ ನೆಲದ ವೀರರ ಕಥೆ. ಯುದ್ಧ ಎಂದರೆ ಯುದ್ಧಭೂಮಿ ಅಥವಾ ಸಾಮ್ರಾಜ್ಯ ವಿಸ್ತರಣೆಯ ಕಥೆಯಲ್ಲ. ಎರಡು ಸಮುದಾಯಗಳ ಕುರಿತ ಕಥೆ ಇದೆ. ವ್ಯಾಪಾರಿಗಳು ಮತ್ತು ಕಾರ್ಮಿಕರ ನಡುವಿನ ಕಥೆ ಇದೆ. ಇದರಲ್ಲಿ ಭಾಗವಹಿಸಿದ ಕೆಲವರನ್ನು ಹುಡುಕಿ ಮಾತಾಡಿಸಿದೆ. ಒಂದಿಷ್ಟು ಮಾಹಿತಿ ಸಿಕ್ಕಿತು. ಅದನ್ನು ಬೆಳೆಸಿ ಚಿತ್ರಕಥೆ ಮಾಡಿದ್ದೇನೆ. ಈ ಕಥೆ ಎಲ್ಲರಿಗೂ ಇಷ್ಟವಾಗಿದೆ ಎಂದು‌ ಚಿತ್ರದ ಕಥೆಯ ಬಗ್ಗೆ ಟಿ.ಕೆ.ದಯಾನಂದ್ ಹೇಳುವ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Special -‘ಬಾಟಲಿ ಆಯುವ ಹುಡುಗ’ನ ಬೆನ್ನಿಗೆ ನಿಂತ ನಟ ನೀನಾಸಂ ಸತೀಶ್, ದಯಾನಂದ್

    Special -‘ಬಾಟಲಿ ಆಯುವ ಹುಡುಗ’ನ ಬೆನ್ನಿಗೆ ನಿಂತ ನಟ ನೀನಾಸಂ ಸತೀಶ್, ದಯಾನಂದ್

    ನ್ನಡದ ಹೆಸರಾಂತ ನಟ ನೀನಾಸಂ ಸತೀಶ್ ಇದೀಗ ಅವರ ಹೊಸ ಸಿನಿಮಾ ‘ಅಶೋಕ ಬ್ಲೇಡ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದದ್ದು ಪ್ರತಿಭಾವಂತ ಬರಹಗಾರ ಟಿ.ಕೆ.ದಯಾನಂದ್. ತಮ್ಮ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ನಡೆದ ಘಟನೆಯೊಂದನ್ನು ದಯಾನಂದ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಬೀದಿಗೆ ಬಿದ್ದಿದ್ದ ಹುಡುಗನಿಗೆ ಹೊಸ ಬದುಕು ರೂಪಿಸುವಲ್ಲಿ ನಟ ಸತೀಶ್ ನೀನಾಸಂ ನೆರವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಓವರ್ ಟು ದಯಾನಂದ್..

    ಅಶೋಕ ಬ್ಲೇಡ್ ಶೂಟಿಂಗಲ್ಲಿದ್ದೆ.. ಒಬ್ಬ ಹುಚ್ಚನ ಥರ ಇರೋ ಹುಡುಗ ಖಾಲಿಬಾಟಲಿ ತುಂಬಿದ ಚೀಲವೊಂದನ್ನು ಹಿಡಿದು ಸಿನಿಮ ಸೆಟ್’ನಲ್ಲಿ ಓಡಾಡುತ್ತಿದ್ದ, ನಮ್ಮ ಅಸೋಸಿಯೇಟ್ ಡೈರೆಕ್ಟರ್ ಸುಹಾಸ್ ಸ್ಕ್ರಿಪ್ಟ್ ಹಿಡಿದು  ಏನೋ ಪ್ರಿಪೇರ್ ಆಗ್ತಿದ್ದ ವೇಳೆ ಈತ ಸುಹಾಸ್ ಪಕ್ಕ ನಿಂತು ಸ್ಕ್ರಿಪ್ಟನ್ನೇ ನೋಡ್ತಿದ್ದ.  ಕುತೂಹಲವಾಗಿ ಪಕ್ಕ ಕೂರಿಸಿಕೊಂಡು ಏನ ಮರಾಯ ವಯಸ್ಸುಡುಗ ಹಿಂಗಾಗಿದಿ? ಯಾವೂರು, ಅಪ್ಪ-ಅಮ್ಮ ಏನ್ಮಾಡ್ತರೆ? ಅಂದೆ. ಬಿಕ್ಕಲು ಶುರುಮಾಡಿದವನು ಒಂದೇ ಸಮ ಅಳತೊಡಗಿದ.

    ಅವನದೊಂದು ದಾರುಣ ಕಥೆ. ಈತ ಚಿತ್ರದುರ್ಗದ ಹೊಳಲ್ಕೆರೆಯವ.  ಅಪ್ಪ ಮರಳುಲೋಡ್ ಮಾಡುವಾಗ ಟ್ರಾಕ್ಟರ್ ಮಗುಚಿಬಿದ್ದು ತೀರಿದ್ದಾರೆ. ಮಾತು ಬಾರದ ತಾಯಿ ಇವನನ್ನು ಎದೆಯೆತ್ತರ ಸಾಕಿ ಆಕೆಯೂ ತೀರಿದ್ದಾರೆ. ನಂತರ ಈತ ನೋಡಿದ್ದು ಕ್ರೂರ ಸಮಾಜದ ಹತ್ತೆಂಟು ಮುಖಗಳು, ಸಂಬಂಧಗಳು ಯಾತನೆ ಕೊಡಲು ಶುರುವಾದಂತೆ ವೈರಾಗ್ಯ ಹುಟ್ಟಿದವನಂತೆ ಮನೆ ತೊರೆದು ಗರಗರ ಸುತ್ತುತ್ತಿದ್ದಾನೆ. ಹೊಟ್ಟೆಪಾಡಿಗೆ ಬಾಟಲಿ ಆಯುತ್ತಾನೆ, ಕೆಜಿಗೆ 20 ಸಿಗುತ್ತದೆ. ದಿನಕ್ಕೆ 150-200. ಊಟ ಮಾಡಿ ಟ್ರೈನು, ಗುಡಿ, ಫುಟ್’ಪಾತ್ ಎಲ್ಲೆಂದರಲ್ಲಿ ರಾತ್ರಿ ಕಳೆಯುತ್ತಾನೆ. ಇದನ್ನೂ ಓದಿ: ರಾಜಣ್ಣ ಮನೆಯ ಮಿಸ್ಟರ್ ಗರಗಸ ಎಂದು ಕಿಚ್ಚನ ಬಳಿ ದೂರಿಟ್ಟ ಮನೆಮಂದಿ

    ಆತ ಹೇಳಿಕೊಂಡ ವ್ಯಥೆಯೊಂದು ಇಲ್ಲಿ ಬರೆಯಲಾಗದಷ್ಟು ಬರ್ಬರವಾಗಿದೆ.‌ ಸಣ್ಣವಯಸ್ಸಿಗೇ ತಿನ್ನಬಾರದ ಏಟುಗಳನ್ನೆಲ್ಲ ತಿಂದು ಬಿಟ್ಟಿದೆ ಈ ಜೀವ. ಅಳುತ್ತಿದ್ದ ಅವನನ್ನು ಎಬ್ಬಿಸಿಕೊಂಡು ಬಟ್ಟೆ ಅಂಗಡಿಗೆ ಒಯ್ದು, ಅವನಿಗಿಷ್ಟವಾದ ಬಟ್ಟೆ ಕೊಡಿಸಿ, ಕಟಿಂಗ್ ಶೇವಿಂಗ್ ಮಾಡಿಸಿದರೆ ಮುದ್ದಾದ ಈ ಹೊಸ ದೇವರಾಜ ತಯಾರಾದ. ನಟ ಸತೀಶ್ ನೀನಾಸಂರಿಗೆ ಪರಿಚಯ ಮಾಡಿಸಿದೆ. ದಿನಬೆಳಗಾದರೆ ಎಲ್ಲರಿಂದ ದೂರ ಓಡಿಸಲ್ಪಡುತ್ತಿದ್ದ ಹುಡುಗ ಕಾನ್ಫಿಡೆಂಟಾಗಿ ಸತೀಶ್ ನೀನಾಸಂರ ಕೈಕುಲುಕಿ ಶೇಕ್ ಹ್ಯಾಂಡ್ ಕೊಟ್ಟ. ಸತೀಶ್’ರಿಗೆ ಎಲ್ಲ ವಿವರಿಸಿದೆ. ಈಗ ದೇವರಾಜನ ಬದುಕಿಗೊಂದು ವ್ಯವಸ್ಥೆಯಾಗುತ್ತಿದೆ. ಸತೀಶ್ ನೀನಾಸಂ, ದೇವರಾಜನ ಬೆನ್ನಿಗೆ ನಿಂತಿದ್ದಾರೆ. ಹೀಗೆ ಶೂಟಿಂಗ್ ನಡುವೆ ನಮ್ಮ ಒಂದು ದಿನ ಸಾರ್ಥಕವಾಯ್ತು.

    ಹೀಗೆ ದಯಾನಂದ ದಾರುಣ ಬದುಕಿನ ವ್ಯಥೆಯೊಂದನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಅಲ್ಲದೇ, ಈ ಹುಡುಗನ ಊರಿನವರು ಯಾರಾದರೂ ಸಂಪರ್ಕಕ್ಕೆ ಬನ್ನಿ ಎಂದು ಅವರು ಕೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೀನಾಸಂ ಸತೀಶ್ ಹುಟ್ಟು ಹಬ್ಬ: ಅಭಿಮಾನಿಗಳಿಗೆ ಭೇಟಿಯಿಲ್ಲ. ಹಾಗಂತ, ನಿರಾಸೆನೂ ಮಾಡಿಲ್ಲ

    ನೀನಾಸಂ ಸತೀಶ್ ಹುಟ್ಟು ಹಬ್ಬ: ಅಭಿಮಾನಿಗಳಿಗೆ ಭೇಟಿಯಿಲ್ಲ. ಹಾಗಂತ, ನಿರಾಸೆನೂ ಮಾಡಿಲ್ಲ

    ಳೆದ ಬಾರಿ ಗೆಳೆಯ ಸಂಚಾರಿ ವಿಜಯ್ ನಿಧನದಿಂದಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದ ನಟ ನೀನಾಸಂ ಸತೀಶ್, ಈ ಬಾರಿಯೂ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದರೂ, ಅಭಿಮಾನಿಗಳಿಗಂತೂ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿಯೂ ಅವರು ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೆ, ಅವರ ನಟನೆಯ ನಾನಾ ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿವೆ.

    ಸದ್ಯ ಸತೀಶ್ ನೀನಾಸಂ ‘ಪೆಟ್ರೊಮ್ಯಾಕ್ಸ್’, ‘ಮ್ಯಾಟ್ನಿ’, ‘ಡಿಯರ್ ವಿಕ್ರಮ್’, ‘ದಸರಾ’, ‘ಅಶೋಕ ಬ್ಲೇಡ್ ‘ ಇಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೂ ಸಿನಿಮಾಗಳ ಪೋಸ್ಟರ್ ಇಂದು ರಿಲೀಸ್ ಆಗಿ ಅಭಿಮಾನಿಗಳಿಗೆ ಭರ್ಜರಿ ಸಂಭ್ರಮವನ್ನೇ ತಂದಿವೆ. ಒಂದಕ್ಕಿಂತ ಒಂದು ಪೋಸ್ಟರ್ ಕುತೂಹಲ ಮೂಡಿಸಿವೆ. ಇದನ್ನೂ ಓದಿ:ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದವರ ಲಿಸ್ಟ್ ನಲ್ಲಿ ಕರಣ್ ಜೋಹರ್

    ಈಗಾಗಲೇ ಪೆಟ್ರೊಮ್ಯಾಕ್ಸ್, ಡಿಯರ್ ವಿಕ್ರಮ್ ಸಿನಿಮಾ ರಿಲೀಸ್ ಗೆ ರೆಡಿ ಇವೆ. ಪೆಟ್ರೊಮ್ಯಾಕ್ಸ್ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆ ಆಗುತ್ತಿದ್ದರೆ, ಡಿಯರ್ ವಿಕ್ರಮ್ ನೇರವಾಗಿ ಓಟಿಟಿಯಲ್ಲಿ ದೊಡ್ಡ ಮಟ್ಟದಲ್ಲಿ ಸ್ಟ್ರೀಮಿಂಗ್ ಆಗಲಿದೆ. ದಸರಾ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಮ್ಯಾಟ್ನಿ ಕೂಡ ಭರದಿಂದ ಚಿತ್ರೀಕರಣ ನಡೆದಿದೆ. ಈಗಷ್ಟೇ ಅಶೋಕ ಬ್ಲೇಡ್ ಚಿತ್ರೀಕರಣ ಶುರುವಾಗಿದೆ. ಅಲ್ಲದೇ, ತಮಿಳಿನಲ್ಲೂ ಸತೀಶ್ ನಟಿಸಿದ್ದು, ಈ ಸಿನಿಮಾ ಕೂಡ ರಿಲೀಸ್ ಗೆ ರೆಡಿಯಿದೆ.

    ರಿಲೀಸ್ ಗೆ ರೆಡಿ ಇರುವ ಮತ್ತು ಶೂಟಿಂಗ್ ನಲ್ಲಿ ತೊಡಗಿರುವ ಅಷ್ಟೂ ಸಿನಿಮಾಗಳ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ನಿರ್ದೇಶಕರು ಕೂಡ ಈಗಾಗಲೇ ಹೊಸ ಬಗೆಯ ಸಿನಿಮಾ ಕೊಟ್ಟವರು. ಹಾಗಾಗಿ ಅಷ್ಟೂ ಸಿನಿಮಾಗಳು ನಿರೀಕ್ಷೆ ಮೂಡಿಸಿವೆ. ಸತೀಶ್ ಕೂಡ ಆಯಾ ಪಾತ್ರಗಳಿಗೆ ರೆಡಿಯಾಗಿಯೇ ಕ್ಯಾಮೆರಾ ಮುಂದೆ ನಿಂತಿರುವುದರಿಂದ ಈ ವರ್ಷ ಅವರನ್ನು ನಾನಾ ಪಾತ್ರಗಳಲ್ಲೂ ನೋಡಬಹುದು.

    Live Tv