Tag: ಅಶೋಕ್ ನಗರ

  • ಇನ್ನೊಬ್ಬಳೊಂದಿಗೆ ಮದುವೆ ಫಿಕ್ಸ್ ಆಗಿದ್ದಕ್ಕೆ ಜಗಳ – ಬುರ್ಖಾ ಧರಿಸಿ ಬಂದು 5ನೇ ಮಹಡಿಯಿಂದ ತಳ್ಳಿ ಪ್ರೇಯಸಿಯ ಕೊಲೆ

    ಇನ್ನೊಬ್ಬಳೊಂದಿಗೆ ಮದುವೆ ಫಿಕ್ಸ್ ಆಗಿದ್ದಕ್ಕೆ ಜಗಳ – ಬುರ್ಖಾ ಧರಿಸಿ ಬಂದು 5ನೇ ಮಹಡಿಯಿಂದ ತಳ್ಳಿ ಪ್ರೇಯಸಿಯ ಕೊಲೆ

    ನವದೆಹಲಿ: ಬುರ್ಖಾ (Burkha) ಧರಿಸಿ ಬಂದು ಕಟ್ಟಡದ 5ನೇ ಮಹಡಿಯಿಂದ ತಳ್ಳಿ ಪ್ರೇಯಸಿಯನ್ನು ಕೊಲೆ ಮಾಡಿ ಪ್ರಿಯಕರ ಎಸ್ಕೇಪ್ ಆದ ಘಟನೆ ಈಶಾನ್ಯ ದೆಹಲಿಯ ಅಶೋಕ್ ನಗರದಲ್ಲಿ (Ashok Nagar) ನಡೆದಿದೆ.

    ನೇಹಾ (19) ಕೊಲೆಯಾದ ಪ್ರೇಯಸಿ. ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ತೌಫೀಕ್ ಮತ್ತು ನೇಹಾ ಹಲವಾರು ತಿಂಗಳುಗಳಿಂದ ಸಂಬಂಧದಲ್ಲಿದ್ದರು. ತೌಫೀಕ್ ತನ್ನ ಕುಟುಂಬ ನೋಡಿದ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ರೆಡಿಯಾಗಿದ್ದಾನೆ ಎಂದು ತಿಳಿದು ನೇಹಾ ಹಾಗೂ ತೌಫೀಕ್ ನಡುವೆ ಜಗಳ ಉಂಟಾಗಿದೆ. ಈ ಹಿನ್ನೆಲೆ ತೌಫೀಕ್ ತನ್ನ ಗುರುತನ್ನು ಮರೆಮಾಚಿ ಬುರ್ಖಾ ಧರಿಸಿ ನೇಹಾಳ ಮನೆಗೆ ಬಂದು ಆಕೆಯನ್ನು ಐದನೇ ಮಹಡಿಯಿಂದ ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾನೆ.  ಇದನ್ನೂ ಓದಿ: ಚಿತ್ರದುರ್ಗ | ಬಾತ್‌ರೂಮಲ್ಲಿ ವ್ಯಕ್ತಿಯ ಬರ್ಬರ ಹತ್ಯೆ – 7 ಆರೋಪಿಗಳ ಬಂಧನ

    ಘಟನೆಯಿಂದ ತೀವ್ರ ಗಾಯಗೊಂಡಿದ್ದ ನೇಹಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಘಟನಾ ಸ್ಥಳದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದ ವೇಳೆ ಬುರ್ಖಾ ಧರಿಸಿ ಕಟ್ಟಡದ ಒಳಗೆ ಅನುಮಾನಾಸ್ಪದವಾಗಿ ವ್ಯಕ್ತಿಯೋರ್ವ ನುಗ್ಗಿರುವ ದೃಶ್ಯ ಸೆರೆಯಾಗಿದ್ದು, ಬಳಿಕ ಆತುರಾತುರವಾಗಿ ಹೊರಬಂದಿರುವುದು ಕೂಡ ಸೆರೆಯಾಗಿದೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿ ದೆಹಲಿ ಪೊಲೀಸರು ವಿಚಾರಣೆ ನಡೆಸಿದ ವೇಳೆ ತೌಫೀಕ್ ಗುರುತು ಮರೆಮಾಚಿ ಬಂದಿರುವುದನ್ನು ಒಪ್ಪಿಕೊಂಡಿದ್ದಾನೆ.  ಇದನ್ನೂ ಓದಿ: ವಾರಕ್ಕೆ 3 ದಿನ ಕಾವೇರಿ ಆರತಿ – 10,000 ಆಸನಗಳ ವ್ಯವಸ್ಥೆ, 70% ಉಚಿತ, 30% ಟಿಕೆಟ್: ಡಿಕೆಶಿ

    ನೇಹಾ ಹಾಗೂ ತೌಫೀಕ್ ನಡುವೆ ಸಂಬಂಧ ಇತ್ತು ಎಂಬುದನ್ನು ನೇಹಾಳ ಕುಟುಂಬ ತಿರಸ್ಕರಿಸಿದೆ. ನೇಹಾಳಿಗೆ ತೌಫೀಕ್ ಜೊತೆ ಯಾವ ಸಂಬಂಧವಿರಲಿಲ್ಲ. ಅಲ್ಲದೇ ನೇಹಾ ತೌಫೀಕ್‌ಗೆ ರಾಖಿ ಕಟ್ಟುತ್ತಿದ್ದಳು ಎಂದು ಆಕೆಯ ತಂದೆ ಹೇಳಿದ್ದಾರೆ. ನೇಹಾಳಿಗೆ ತೌಫೀಕ್ ಸುಮಾರು ಮೂರು ವರ್ಷಗಳಿಂದ ಪರಿಚಯ. ತೌಫೀಕ್ ಆಗಾಗ ಮನೆಗೆ ಭೇಟಿ ನೀಡುತ್ತಿದ್ದರು ಎಂದು ಕುಟುಂಬ ಹೇಳಿಕೊಂಡಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ಕುಡಿದು ಅಂಬುಲೆನ್ಸ್ ಚಾಲನೆ – ಚಾಲಕನಿಗೆ 13,000 ದಂಡ!

  • ಸೈಟ್ ಮಾರಾಟ ಮಾಡಿಕೊಡುವುದಾಗಿ ನಂಬಿಸಿ ನಿವೃತ್ತ ಎಸಿಪಿಗೆ ವಂಚನೆ

    ಸೈಟ್ ಮಾರಾಟ ಮಾಡಿಕೊಡುವುದಾಗಿ ನಂಬಿಸಿ ನಿವೃತ್ತ ಎಸಿಪಿಗೆ ವಂಚನೆ

    ಬೆಂಗಳೂರು: ಸೈಟ್ ಮಾರಾಟ ಮಾಡಿಕೊಡುವುದಾಗಿ ನಂಬಿಸಿ ನಿವೃತ್ತ ಎಸಿಪಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿ ಒಂದರ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನಿವೃತ್ತ ಎಸಿಪಿ ಲವಕುಮಾರ್ ಎಂಬುವರು ಜಿಗಣಿಯ ನವ್ಯ ಲೇಔಟ್‍ನಲ್ಲಿ 90 ಲಕ್ಷ ಮೌಲ್ಯದ ಮೂರು ನಿವೇಶನ ಹೊಂದಿದ್ದರು. ಕೆಲದಿನಗಳ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ನಿರ್ಮಾಣ್ ಶೆಲ್ಟರ್ಸ್ ಕಂಪೆನಿ ಸಂಪರ್ಕಿಸಿ ತಮ್ಮ ಬಳಿಯಿರುವ ನಿವೇಶನಗಳನ್ನು ಮಾರಾಟ ಮಾಡಿಕೊಡಿಕೊಡುವುದಾಗಿ ಹೇಳಿದ್ದು, ಇದರಂತೆ ಪವರ್ ಅಫ್ ಅರ್ಟಾನಿ ಮೂಲಕ ಮೂಲ ದಾಖಲಾತಿ ನೀಡಿದ್ದರು. ಇದನ್ನೂ ಓದಿ: ಮೆಣಸಿಕಾಯಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಮೂವರಿಗೆ ಜೈಲು

    ಇದೀಗ ಕಂಪೆನಿಯೂ ಮೂರು ಸೈಟ್ ಮಾರಾಟ ಮಾಡಿ 85 ಲಕ್ಷ ರೂಪಾಯಿ ಮಾರಾಟ ಮಾಡಿ 30 ಲಕ್ಷ ಹಣ ನೀಡಿ ಉಳಿದ ಹಣ ಸ್ವಂತ ಬಳಕೆ ಉಪಯೋಗಿಸಿಕೊಂಡು ಹಣ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ನಿವೃತ್ತ ಎಸಿಪಿ ಉಲ್ಲೇಖಿಸಿದ್ದಾರೆ. ಲವಕುಮಾರ್ ನೀಡಿದ ದೂರಿನ ಮೇರೆಗೆ ನಿರ್ಮಾಣ್ ಶೆಲ್ಟರ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮೀನಾರಾಯಣ್, ಕಂಪೆನಿ ಸಿಬ್ಬಂದಿ ಶಶಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಲಕ್ಷ್ಮೀ ನಾರಾಯಣ್ ಇದೇ ರೀತಿ ಸಾಕಷ್ಟು ಜನರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಾರಕ್ಕೊಮ್ಮೆ ಕುಡಿತಿದ್ದೋರು ಇನ್ಮೇಲೆ ದಿನಾ ಕುಡಿಯಲು ಆರಂಭಿಸ್ತಾರೆ – ಮಹಿಳೆಯರ ಪ್ರತಿಭಟನೆ

  • ಸಿಸಿಬಿ ದಾಳಿಗೆ ಹೆದರಿ ಬಿಲ್ಡಿಂಗ್‍ನಿಂದ ಹಾರಿ ಕೋಮಾಗೆ ಜಾರಿದ ಯುವತಿ

    ಸಿಸಿಬಿ ದಾಳಿಗೆ ಹೆದರಿ ಬಿಲ್ಡಿಂಗ್‍ನಿಂದ ಹಾರಿ ಕೋಮಾಗೆ ಜಾರಿದ ಯುವತಿ

    ಬೆಂಗಳೂರು: ಸಿಸಿಬಿ ಪೊಲೀಸರ ದಾಳಿಗೆ ಹೆದರಿ ಪಬ್ ಬಿಲ್ಡಿಂಗ್‍ನಿಂದ ಹಾರಿ ಬಿದ್ದು ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಬಿದ್ದ ರಭಸಕ್ಕೆ ಯುವತಿ ಕೋಮಾ ಸ್ಥಿತಿಗೆ ತಲುಪಿದ್ದಾರೆ. ಕಳೆದ 25 ರಂದು ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ರಿಗೇಡ್ ಪಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.

    ಪೊಲೀಸರ ದಾಳಿಯಿಂದ ಭಯಗೊಂಡ ಯುವತಿ ಬ್ರಿಗೇಡ್ ಪಬ್ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿದ್ದಾರೆ. ಸಿಸಿಬಿ ಪೊಲೀಸರ ಎದುರಲ್ಲೇ ಈ ಘಟನೆ ನಡೆದಿದೆ.

    ದಾಳಿ ನಡೆದ ದಿನ ಒಂದೇ ಬಾರೀ ಮೂರು ಕಡೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಎರಡು ಪಬ್‍ಗಳ ಮೇಲಿನ ದಾಳಿ ಸಂಬಂಧ ಪ್ರತ್ಯೇಕ ಕೇಸ್ ದಾಖಲಿಸಿದ್ದರು. ಆದರೆ ಬ್ರಿಗೇಡ್ ಪಬ್ ಕಟ್ಟಡದಿಂದ ಯುವತಿ ಹಾರಿ ಗಂಭೀರವಾಗಿ ಗಾಯಗೊಂಡ ಕೇಸನ್ನು ದಾಖಲಿಸಿಕೊಂಡಿಲ್ಲ. ಹೀಗಾಗಿ ಸಿಸಿಬಿ ಪೊಲೀಸರ ವಿರುದ್ಧ ಕೇಸ್ ಮುಚ್ಚಿಹಾಕುತ್ತಿರುವ ಆರೋಪ ಕೇಳಿಬಂದಿದೆ.