Tag: ಅವಿಶ್ವಾಸ ನಿರ್ಣಯ

  • ಎರಡನೇ ಬಾರಿ ವಿಶ್ವಾಸ ಪರೀಕ್ಷೆಯಲ್ಲಿ ಗೆದ್ದ ಮೋದಿ – ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲು

    ಎರಡನೇ ಬಾರಿ ವಿಶ್ವಾಸ ಪರೀಕ್ಷೆಯಲ್ಲಿ ಗೆದ್ದ ಮೋದಿ – ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲು

    – ಬೆಂಗಳೂರಲ್ಲಿ ಯುಪಿಎಗೆ ಅಂತ್ಯಕ್ರಿಯೆ ಮಾಡಲಾಗಿದೆ ಎಂದ ಪ್ರಧಾನಿ

    ನವದೆಹಲಿ: ಲೋಕಸಭೆಯಲ್ಲಿ (Lok Sabha) ನಿರೀಕ್ಷೆಯಂತೆ ಎಲ್ಲವೂ ನಡೆದಿದೆ. ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿಲುವಳಿಗೆ ಸೋಲಾಗಿದೆ. ಎರಡನೇ ಬಾರಿ ಪ್ರಧಾನಿ ಮೋದಿ (Narendra Modi) ನೇತೃತ್ವದ ಸರ್ಕಾರ ವಿಶ್ವಾಸ ಪರೀಕ್ಷೆಯಲ್ಲಿ ಗೆದ್ದು ಬೀಗಿದೆ.

    ವಿಪಕ್ಷಗಳ ಗೈರಿನಲ್ಲಿ ಧ್ವನಿಮತದ ಮೂಲಕ ಅವಿಶ್ವಾಸ ನಿಲುವಳಿಯನ್ನು ಎನ್‌ಡಿಎ ಸರ್ಕಾರ ಸೋಲಿಸಿದೆ. ಈ ಸೋಲನ್ನು ವಿಪಕ್ಷಗಳ ಕೂಟ ಕೂಡ ನಿರೀಕ್ಷೆ ಮಾಡಿತ್ತು. ಏಕೆಂದರೆ, ವಿಪಕ್ಷಗಳ ಕೂಟದ ಬಳಿ ಅಗತ್ಯ ಸಂಖ್ಯಾ ಬಲವೇ ಇರಲಿಲ್ಲ. ಮೋದಿಯನ್ನು ಸಂಸತ್‌ಗೆ ಕರೆಯಿಸಿ ಮಣಿಪುರ ಹಿಂಸಾಚಾರದ ಬಗ್ಗೆ ಹೇಳಿಕೆ ಕೊಡಿಸಬೇಕೆಂಬ ಏಕೈಕ ಉದ್ದೇಶದಿಂದ ಐಎನ್‌ಡಿಐಎ ಕೂಟ ಈ ನಿಲುವಳಿಯನ್ನು ಮಂಡಿಸಿತ್ತು. ಇದನ್ನೂ ಓದಿ: ಮಣಿಪುರ ಶೀಘ್ರದಲ್ಲೇ ಶಾಂತಿಯ ಬೆಳಕನ್ನು ಕಾಣಲಿದೆ: ಮೋದಿ ಭರವಸೆ

    ಒಂದರ್ಥದಲ್ಲಿ ವಿಪಕ್ಷ ಕೂಟ ತಮ್ಮ ಉದ್ದೇಶ ಸಾಧನೆಯಲ್ಲಿ ಯಶಸ್ಸು ಸಾಧಿಸಿತು. ಕಾರಣ ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು, ಮಣಿಪುರದ ಹಿಂಸಾಚಾರದ ಬಗ್ಗೆ ಸುದೀರ್ಘ ಹೇಳಿಕೆ ಕೊಟ್ಟರು.

    ಅವಿಶ್ವಾಸ ನಿರ್ಣಯದ ಮೇಲೆ ಕಳೆದ ಮೂರು ದಿನಗಳಿಂದ ನಡೆದ ಚರ್ಚೆಯಲ್ಲಿ ಕೇಂದ್ರದ ವಿರುದ್ಧ ನಾನಾ ಆರೋಪ ಮಾಡಿದ್ದ ವಿಪಕ್ಷಗಳಿಗೆ ಲಘು ಧಾಟಿಯಲ್ಲಿಯೇ ಪ್ರಧಾನಿ ತಿರುಗೇಟು ನೀಡಿದರು. ಸುದೀರ್ಘ 2 ಗಂಟೆ 13 ನಿಮಿಷ ಪ್ರತ್ಯುತ್ತರ ನೀಡಿದ ಪ್ರಧಾನಿ ಮೋದಿ ವಿಪಕ್ಷಗಳ ಕೂಟದ ಬಂಡವಾಳವನ್ನು ಇಂಚಿAಚಾಗಿ ಬಯಲು ಮಾಡಿದರು. ಮೋದಿಯ ಪ್ರತಿ ಮಾತನ್ನು ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಬೆಂಬಲಿಸಿದರೆ, ವಿಪಕ್ಷ ಸದಸ್ಯರು ಮಾತು ಮಾತಿಗೂ ಅಡ್ಡಿಪಡಿಸಲು ನೋಡಿದರು. ಮಣಿಪುರ.. ಮಣಿಪುರ ಎಂದು ಘೋಷಣೆ ಕೂಗುತ್ತಿದ್ದರು. ಇದಕ್ಕೆ ತಲೆಕೆಡಿಸಿಕೊಳ್ಳದ ಮೋದಿ ವ್ಯಂಗ್ಯಾಸ್ತçಗಳನ್ನು ಪ್ರಯೋಗಿಸುತ್ತಾ ಸಾಗಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ಮೋದಿ ಭಾಷಣದ ಮಧ್ಯೆ ಸಭಾತ್ಯಾಗ ಮಾಡಿದ ವಿಪಕ್ಷಗಳ ಸಂಸದರು

    ಅವಿಶ್ವಾಸ ಪರೀಕ್ಷೆ ಇಟ್ಟ ವಿಪಕ್ಷಗಳಿಗೆ ಧನ್ಯವಾದ. ದೇವರೇ ಅವಿಶ್ವಾಸ ನಿಲುವಳಿ ಮಂಡಿಸಲು ವಿಪಕ್ಷಗಳಿಗೆ ಸೂಚಿಸಿದ್ದಾರೆ. 2018ರಲ್ಲಿ ಏನಾಯ್ತು ಅಂತಾ ಗೊತ್ತಲ್ಲ. ಈಗಲೂ ಅದೇ ಆಗಲಿದೆ. 2024ರಲ್ಲಿ ಎನ್‌ಡಿಎ ಎಲ್ಲಾ ದಾಖಲೆ ಉಡೀಸ್ ಮಾಡಲಿದೆ. ಇದು ನಮಗೆ ಪರೀಕ್ಷೆಯಲ್ಲ. ಇದು ನಮಗೆ ಶುಭಸೂಚಕ ಎಂದು ಮೋದಿ ವ್ಯಾಖ್ಯಾನಿಸಿದರು.

    ವಿಪಕ್ಷಗಳಿಗೆ ಅಧಿಕಾರ ದಾಹ ಹೆಚ್ಚಿದೆ. ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವ ಪಕ್ಷಗಳೆಲ್ಲಾ ಒಂದಾಗಿವೆ. ಬೆಂಗಳೂರಲ್ಲಿ ಯುಪಿಎಗೆ ಅಂತ್ಯಕ್ರಿಯೆ ಮಾಡಲಾಗಿದೆ. ನಮ್ಮ ಎನ್‌ಡಿಎ ಅಕ್ಷರ ಕದ್ದು ಆ ಕಡೆ ಈ ಕಡೆ ಐಐ ಸೇರಿಸಿಕೊಂಡಿದ್ದಾರೆ. ಇದು ಘಮಾಂಡಿಯಾ ಕೂಟ ಎಂದು ಲೇವಡಿ ಮಾಡಿದರು. ಮೋದಿ ಮಾತು ಕೇಳಲಾಗದೇ ವಿಪಕ್ಷಗಳು ವಾಕೌಟ್ ಮಾಡಿದವು. ಇದನ್ನೂ ಓದಿ: ವಿಪಕ್ಷಗಳ ನೋ ಬಾಲ್‌ಗೆ ನಮ್ಮವರಿಂದ ಸಿಕ್ಸರ್‌, ಬೌಂಡರಿ, ಕೊನೆಗೆ ಸೆಂಚುರಿ: ನರೇಂದ್ರ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೋಕಸಭೆಯಲ್ಲಿ ಮೋದಿ ಭಾಷಣದ ಮಧ್ಯೆ ಸಭಾತ್ಯಾಗ ಮಾಡಿದ ವಿಪಕ್ಷಗಳ ಸಂಸದರು

    ಲೋಕಸಭೆಯಲ್ಲಿ ಮೋದಿ ಭಾಷಣದ ಮಧ್ಯೆ ಸಭಾತ್ಯಾಗ ಮಾಡಿದ ವಿಪಕ್ಷಗಳ ಸಂಸದರು

    ನವದೆಹಲಿ: ಲೋಕಸಭೆಯಲ್ಲಿ (Lok Sabha) ಅವಿಶ್ವಾಸ ನಿರ್ಣಯದ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಷಣ ಮಾಡುತ್ತಿದ್ದ ಮಧ್ಯೆಯೇ ವಿಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದರು.

    ವಿಪಕ್ಷಗಳ ಅವಿಶ್ವಾಸ ನಿರ್ಣಯ ಕುರಿತು ಕಳೆದ ಮೂರು ದಿನಗಳಿಂದ ಚರ್ಚೆ ನಡೆಯಿತು. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, ತಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು. ಮೋದಿ ಭಾಷಣದ ಮಧ್ಯೆ ವಿಪಕ್ಷಗಳ ಹತ್ತಾರು ಸಂಸದರು ಲೋಕಸಭೆಯಿಂದ ಹೊರನಡೆದರು. ಇದನ್ನೂ ಓದಿ: ವಿಪಕ್ಷಗಳ ನೋ ಬಾಲ್‌ಗೆ ನಮ್ಮವರಿಂದ ಸಿಕ್ಸರ್‌, ಬೌಂಡರಿ, ಕೊನೆಗೆ ಸೆಂಚುರಿ: ನರೇಂದ್ರ ಮೋದಿ

    ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ವಿಪಕ್ಷಗಳ ಒಕ್ಕೂಟ, ಕಾಂಗ್ರೆಸ್‌, ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. 2028 ರಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವಾಗ ಸ್ವಲ್ಪ ತಯಾರಾಗಿ ಬನ್ನಿ ಎಂದು ವಿಪಕ್ಷಗಳಿಗೆ ಮೋದಿ ವ್ಯಂಗ್ಯ ಮಾಡಿದರು. ಆ ಮೂಲಕ ಮುಂದಿನ ಬಾರಿಯೂ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುತ್ತೆ ಆಶಯವನ್ನು ವ್ಯಕ್ತಪಡಿಸಿದರು.

    ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಬಗ್ಗೆ ಬುಧವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾತನಾಡುವಾಗ, ಮೋದಿ ಸರ್ಕಾರವು ಇಡೀ ದೇಶವನ್ನು ಸುಡಲು ಸಜ್ಜಾಗಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಪ್ರಧಾನಿ ಪರಮಾತ್ಮನಲ್ಲ, ಮೋದಿ ದೇವರಲ್ಲ, ಸದನಕ್ಕೆ ಬಂದು ಮಾತನಾಡಲಿ: ಖರ್ಗೆ ಕೆಂಡ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಪಕ್ಷಗಳ ನೋ ಬಾಲ್‌ಗೆ ನಮ್ಮವರಿಂದ ಸಿಕ್ಸರ್‌, ಬೌಂಡರಿ, ಕೊನೆಗೆ ಸೆಂಚುರಿ:  ನರೇಂದ್ರ ಮೋದಿ

    ವಿಪಕ್ಷಗಳ ನೋ ಬಾಲ್‌ಗೆ ನಮ್ಮವರಿಂದ ಸಿಕ್ಸರ್‌, ಬೌಂಡರಿ, ಕೊನೆಗೆ ಸೆಂಚುರಿ: ನರೇಂದ್ರ ಮೋದಿ

    ನವದೆಹಲಿ: ವಿಪಕ್ಷಗಳಿಗೆ ಐದು ವರ್ಷ ಸಮಯ ನೀಡಿದ್ದೆ,  ಆದರೆ ಅವರು ಸರಿಯಾಗಿ ತಯಾರಿ ಮಾಡಿಕೊಂಡು ಬಂದಿರಲಿಲ್ಲ. ವಿಪಕ್ಷಗಳು ಫೀಲ್ಡ್‌ ಸೆಟ್‌ ಮಾಡಿದ್ದರು. ಆದರೆ ನಮ್ಮ ಸಂಸದರು ಸಿಕ್ಸರ್‌, ಬೌಂಡರಿ ಸಿಡಿಸಿದರು. ಅವರು ನೋ ಬಾಲ್‌ ಎಸೆಯುತ್ತಲೇ ಇದ್ದರು. ನಾವು ಸೆಂಚುರಿ ಸಿಡಿಸಿದೆವು. ಇದು ವಿಪಕ್ಷಗಳ ಅವಿಶ್ವಾಸ ನಿರ್ಣಯ ಭಾಷಣಕ್ಕೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಚಾಟಿ ಬೀಸಿದ ಪರಿ.

    ಅವಿಶ್ವಾಸ ನಿರ್ಣಯದ (No Confidence Motion) ಮೇಲೆ ನೀವು ಹೇಗೆ ಚರ್ಚೆ ಮಾಡುತ್ತಿದ್ದೀರಿ? ನೀವು ಮತ್ತೆ ಬರಲಿದ್ದೀರಿ ಎಂದು ಮೊದಲೇ ಹೇಳಿದ್ದೆ. ಅವಿಶ್ವಾಸ ನಿರ್ಣಯದಲ್ಲಿ ಹಲವು ವಿಚಿತ್ರಗಳಿದ್ದವು. ಹಿಂದೆ ನಾನು ಎಂದೂ ಈ ರೀತಿ ಕಂಡಿರಲಿಲ್ಲ. ವಿಪಕ್ಷಗಳ ಪೈಕಿ ಅತಿದೊಡ್ಡ ಪಕ್ಷದ ನಾಯಕರ ಹೆಸರು ಭಾಷಣಕಾರರಲ್ಲಿ ಇರಲಿಲ್ಲ ಎಂದು ಕುಟುಕಿದರು.

    ಈ ಬಾರಿ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಅವರಿಗೆ ಏನಾಯಿತು? ಅವರಿಗೆ ಅವರ ಪಕ್ಷ ಮಾತನಾಡಲು ಅವಕಾಶ ನೀಡಲಿಲ್ಲ. ಇಂದು ಅವರಿಗೆ ಅವಕಾಶ ನೀಡಲಾಯಿತು. ಕಾಂಗ್ರೆಸ್ ಪದೇ ಪದೇ ನಾಯಕರಿಗೆ ಅವಮಾನ ಮಾಡುತ್ತಿದೆ. ನಾವು ಅಧೀರ್ ರಂಜನ್ ಚೌಧರಿ ಅವರಿಗೆ ಕರುಣೆ ವ್ಯಕ್ತಪಡಿಸುತ್ತೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು.

    ವಿಪಕ್ಷಗಳ ಕಪ್ಪು ಕಾಡಿಗೆಯಂತೆ ಕಪ್ಪು ಬಟ್ಟೆ ಧರಿಸಿ ಸನದಕ್ಕೆ ಬಂದು ಭಾರತಕ್ಕೆ ದೃಷ್ಟಿಯಾಗದಂತೆ ಮಾಡಿವೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ. ವಿಪಕ್ಷಗಳ ಬೈಗುಳವನ್ನು ನಾನು ಟಾನಿಕ್ ಮಾಡಿಕೊಂಡಿದ್ದೇನೆ. ವಿಪಕ್ಷಗಳ ನಾಯಕರಿಗೆ ಗೌಪ್ಯ ವರದಾನ ಸಿಕ್ಕಿದೆ. ಅವರು ಯಾರಿಗೆ ಕೆಟ್ಟದ್ದನ್ನು ಬಯಸುತ್ತಾರೋ ಅವರಿಗೆ ಒಳ್ಳೆದಾಗುತ್ತದೆ. ಒಂದು ಉದಾಹರಣೆ ನಾನೇ. ನನ್ನ ಬಗ್ಗೆ ಬಹಳಷ್ಟು ಹೇಳಿದರು. ಆದರೆ ನನಗೆ ಏನು ಆಗಲಿಲ್ಲ ಎಂದು ಹೇಳಿ ಕುಟುಕಿದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೌನ ವೃತದಲ್ಲಿರುವ ಮೋದಿ ಮಾತನಾಡಿಸಲು ಅವಿಶ್ವಾಸ ನಿರ್ಣಯ – ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಟೀಕೆ

    ಮೌನ ವೃತದಲ್ಲಿರುವ ಮೋದಿ ಮಾತನಾಡಿಸಲು ಅವಿಶ್ವಾಸ ನಿರ್ಣಯ – ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಟೀಕೆ

    ನವದೆಹಲಿ: ಬಿಜೆಪಿ (BJP) ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಮೈತ್ರಿಕೂಟ INDIA ಹೊರಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಸಂಸತ್‌ನಲ್ಲಿ ನಡೆಯುತ್ತಿದೆ. ಅವಿಶ್ವಾಸ ನಿರ್ಣಯವು ಮಣಿಪುರದ ವಿಚಾರವಾಗಿ ಪ್ರಧಾನಿ ಮೋದಿ (Narendra Modi) ಅನುಸರಿಸುತ್ತಿರುವ ಮೌನ ವ್ರತವನ್ನು ಮುರಿಯುವಂತೆ ಮಾಡುತ್ತೆ ಎಂದು ಕಾಂಗ್ರೆಸ್‌ ತಿಳಿಸಿದೆ.

    ಅವಿಶ್ವಾಸ ನಿರ್ಣಯದ ಚರ್ಚೆ ವೇಳೆ ಮೊದಲ ಮಾತನಾಡಿದ ಕಾಂಗ್ರೆಸ್ (Congress) ಸಂಸದ ಗೌರವ್ ಗೊಗೊಯ್ (Gaurav Gogoi), ಮಣಿಪುರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮೌನ ವ್ರತವನ್ನು ಮುರಿಯಲು INDIA ಒಕ್ಕೂಟವು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ತಂದಿತು. ಒಂದು ಭಾರತವು ಎರಡು ಮಣಿಪುರಗಳನ್ನು (Manipur) ಸೃಷ್ಟಿಸಿದೆ. ಒಂದು ಬೆಟ್ಟಗಳಲ್ಲಿ ಮತ್ತು ಇನ್ನೊಂದು ಕಣಿವೆಯಲ್ಲಿ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ- ಸಂತ್ರಸ್ತರಿಗಾಗಿ ಅಮೆರಿಕಾದಲ್ಲಿ 8 ಲಕ್ಷ ರೂ. ಸಂಗ್ರಹಿಸಿದ 16ರ ಹುಡುಗಿ

    ಮಣಿಪುರವು ನ್ಯಾಯವನ್ನು ಕೇಳುತ್ತದೆ. ಮಣಿಪುರಕ್ಕೆ ಬೆಂಕಿ ಬಿದ್ದಿದ್ದು, ಇಡೀ ಭಾರತವೇ ಹೊತ್ತಿ ಉರಿಯುತ್ತಿದೆ. ಮಣಿಪುರ ಇಬ್ಭಾಗವಾದರೆ ದೇಶವೇ ಇಬ್ಭಾಗವಾಗುತ್ತದೆ. ಪ್ರಧಾನಿ ಮೋದಿಯವರು ಸದನಕ್ಕೆ ಬಂದು ಮಣಿಪುರದ ಬಗ್ಗೆ ಮಾತನಾಡಬೇಕು. ಆದರೆ ಅವರು ಮೌನ ವ್ರತ ಪಾಲಿಸಿದರು. ಅವರು ಲೋಕಸಭೆಯಲ್ಲಿ ಅಥವಾ ರಾಜ್ಯಸಭೆಯಲ್ಲಿ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮೋದಿ ಮೌನವಾಗಿರಲು ಮೂರು ಕಾರಣಗಳಿವೆ. ರಾಜ್ಯ ಸರ್ಕಾರದ ವೈಫಲ್ಯ, ಗೃಹ ಇಲಾಖೆ ಮತ್ತು ರಾಷ್ಟ್ರೀಯ ಭದ್ರತಾ ವ್ಯವಸ್ಥೆ ವೈಫಲ್ಯ, ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿರುವುದು. ಈ ಕಾರಣಗಳಿಗಾಗಿ ಪ್ರಧಾನಿಗಳು ಮೌನವಾಗಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಹರಿಯಾಣದಲ್ಲಿ ಕೋಮು ಸಂಘರ್ಷ: 3 ಜಿಲ್ಲೆಯ 14 ಹಳ್ಳಿಗಳಲ್ಲಿ ಮುಸ್ಲಿಮರಿಗೆ ಬಹಿಷ್ಕಾರ – ಜಿಲ್ಲಾಡಳಿತಕ್ಕೆ ಬಹಿರಂಗ ಪತ್ರ

    ಗೊಗೊಯ್ ಅವರು ತಮ್ಮ ಪ್ರಸ್ತಾವನೆಯನ್ನು ಸಲ್ಲಿಸಿದರು. ಈ ಸದನವು ಮಂತ್ರಿ ಮಂಡಳಿಯಲ್ಲಿ ವಿಶ್ವಾಸವನ್ನು ಬಯಸುತ್ತದೆ ಎಂದು ಸದನದ ಮುಂದೆ ಸಲ್ಲಿಸಿದರು. ಚರ್ಚೆಯಲ್ಲಿ ಐದು ಸಚಿವರು ಮಾತನಾಡಲಿದ್ದಾರೆ. ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕಿರಣ್ ರಿಜಿಜು. ಇನ್ನು ಹತ್ತು ಬಿಜೆಪಿ ಸಂಸದರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ – ಆಗಸ್ಟ್ 8ರಿಂದ 10ರವರೆಗೆ ಲೋಕಸಭೆಯಲ್ಲಿ ಚರ್ಚೆ

    ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ – ಆಗಸ್ಟ್ 8ರಿಂದ 10ರವರೆಗೆ ಲೋಕಸಭೆಯಲ್ಲಿ ಚರ್ಚೆ

    ನವದೆಹಲಿ: ಮಣಿಪುರ ಹಿಂಸಾಚಾರ (Manipur Violence) ವಿಚಾರಕ್ಕೆ ಸಂಬಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರ ವಿರುದ್ಧ ವಿರೋಧ ಪಕ್ಷಗಳ ಒಕ್ಕೂಟ INDIA ಸಲ್ಲಿಸಿದ್ದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಆಗಸ್ಟ್ 8ರಿಂದ 10ರವರೆಗೆ ನಡೆಸಲು ನಿರ್ಧರಿಸಿದೆ.

    ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ (No-Confidence Motion) ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10 ರಂದು ಉತ್ತರ ನೀಡಲಿದ್ದಾರೆ. ವಿರೋಧ ಪಕ್ಷಗಳ ಪರವಾಗಿ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಅವಿಶ್ವಾಸ ನಿರ್ಣಯ ಮಂಡಿಸಿದರು. ಸೋನಿಯಗಾಂಧಿ, ಫಾರೂಕ್ ಅಬ್ದುಲ್ಲಾ ಸೇರಿದಂತೆ ಐವತ್ತಕ್ಕೂ ಹೆಚ್ಚು ಸಂಸದರು ನಿರ್ಣಯಕ್ಕೆ ಬೆಂಬಲ ನೀಡಿದ್ದರು. ಇದನ್ನೂ ಓದಿ: ತರಕಾರಿ ಬೆಲೆ ಏರಿಕೆ – ಆಜಾದ್‌ಪುರ ಮಂಡಿ ತರಕಾರಿ ಮಾರುಕಟ್ಟೆಗೆ ರಾಗಾ ಭೇಟಿ

    ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ದಿನಾಂಕ ನಿಗದಿ ಮಾಡಿರುವುದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ವಿರೋಧ ಪಕ್ಷಗಳ ಉಪಸ್ಥಿತಿಯಿಲ್ಲದೆ ಅವಿಶ್ವಾಸ ನಿರ್ಣಯ ಚರ್ಚೆಯ ದಿನಾಂಕ ಅಂತಿಮಗೊಳಿಸಲಾಗಿದೆ ಎಂದು ಆರೋಪಿಸಿವೆ. ಆಗಸ್ಟ್ 8ರಿಂದ 10ರ ಬದಲಿಗೆ ನಾಳೆಯೇ ಚರ್ಚೆ ನಡೆಯಬೇಕು ಎಂದು ಹಲವು ನಾಯಕರು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: Commercial LPG Cylinder Price: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ – ಪ್ರಧಾನಿ ಮೋದಿ ತಯಾರಿ ಏನು?

    ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ – ಪ್ರಧಾನಿ ಮೋದಿ ತಯಾರಿ ಏನು?

    ನವದೆಹಲಿ: ಮಣಿಪುರ ಹಿಂಸಾಚಾರ (Manipur Violence) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಮೋದಿ (Narendra Modi) ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿವೆ. ಕಾಂಗ್ರೆಸ್ (Congress) ಸಂಸದ ಗೌರವ್ ಗೊಗೊಯ್ ಅವರು ಲೋಕಸಭೆಯಲ್ಲಿ ಬುಧವಾರ ಅವಿಶ್ವಾಸ ನಿರ್ಣಯಕ್ಕೆ (No Confidence Motion) ನೋಟಿಸ್ ನೀಡಿದರು. ಇದಲ್ಲದೇ ತೆಲಂಗಾಣದ ಆಡಳಿತ ಪಕ್ಷ ಬಿಆರ್‌ಎಸ್ ಕೂಡ ಪ್ರತ್ಯೇಕ ಅವಿಶ್ವಾಸ ನಿರ್ಣಯ ಮಂಡಿಸಿದೆ.

    ಸ್ಪೀಕರ್ ಓಂಬಿರ್ಲಾ ಈಗಾಗಲೇ ಅವಿಶ್ವಾಸ ನಿರ್ಣಯ ನೋಟಿಸ್‌ ಸ್ವೀಕರಿಸಿದ್ದು, ಶೀಘ್ರದಲ್ಲಿ ಚರ್ಚೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಮಣಿಪುರದ ಬಗ್ಗೆ ಹೇಗಾದರೂ ಮಾಡಿ ಪ್ರಧಾನಿಯಿಂದ ಮಾತನಾಡಿಸಬೇಕು ಎಂದು ನಿರ್ಧರಿಸಿರುವ ವಿಪಕ್ಷಗಳು ಕಡೆಯ ಅಸ್ತ್ರ ಎನ್ನುವಂತೆ ಅವಿಶ್ವಾಸ ನಿರ್ಣಯ ಮಂಡಿಸಿವೆ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಲು ಸರ್ಕಾರವೂ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದನ್ನೂ ಓದಿ: ಹಿಂದಿನ ತಪ್ಪು ಮರೆಮಾಚಲು UPAಯಿಂದ INDIA ಅಂತ ಬದಲಾಯಿಸಿಕೊಂಡಿದ್ದಾರೆ: ಮೋದಿ ವಾಗ್ದಾಳಿ

    ಮೂಲಗಳ ಪ್ರಕಾರ ಸರ್ಕಾರ ಮಣಿಪುರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಲು ಕಾಯುತ್ತಿದೆ. ಮಣಿಪುರ ನಿಯಂತ್ರಣಕ್ಕೆ ಬರುತ್ತಿದ್ದಂತೆ ಈ ಬಗ್ಗೆ ಸದನದಲ್ಲಿ ಮಾತನಾಡಬಹುದು ಎಂದು ಹಿರಿಯ ನಾಯಕರು ನಿರೀಕ್ಷೆ ಮಾಡಿದ್ದಾರೆ.

    ತಮ್ಮ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ಉತ್ತರ ನೀಡಲಿದ್ದಾರೆ. ಇದರಲ್ಲಿ ಎರಡು ರೀತಿಯಲ್ಲಿ ಪ್ರತಿಪಕ್ಷಗಳನ್ನು ಟಾರ್ಗೆಟ್ ಮಾಡಬಹುದು ಎನ್ನಲಾಗುತ್ತಿದೆ. ಮೊದಲನೆಯದಾಗಿ ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಬಿಜೆಪಿಯೇತರ ರಾಜ್ಯಗಳ ಅಂಕಿ ಅಂಶಗಳು ಮತ್ತು ಘಟನೆಗಳನ್ನು ಉಲ್ಲೇಖಿಸಿ ಮತ್ತು ಎರಡನೆಯದಾಗಿ ಭ್ರಷ್ಟಾಚಾರದ ಪ್ರಕರಣಗಳಿಗೆ ಸಂಬಂಧಿಸಿದಂತೆ. ಮಣಿಪುರದ ಹಿಂಸಾಚಾರವನ್ನು ಪ್ರಸ್ತಾಪಿಸಿ ಅದಕ್ಕಿಂತ ಹೆಚ್ಚು, ಕಾಂಗ್ರೆಸ್ ಆಡಳಿತದಲ್ಲಿ ನಡೆದ ಪ್ರಮುಖ ಘಟನೆಗಳನ್ನು ಉಲ್ಲೇಖಿಸಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ – ಬುಧವಾರ ತೀರ್ಮಾನ ಆಗಲಿಲ್ಲ ಯಾಕೆ?

    ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಪ್ರಸ್ತುತ ಲೋಕಸಭೆಯಲ್ಲಿ 330 ಸಂಸದರ ಬೆಂಬಲವನ್ನು ಹೊಂದಿದೆ. ಬಿಜೆಪಿ ಒಂದೇ 301 ಸಂಸದರನ್ನು ಹೊಂದಿದೆ. ವಿರೋಧ ಪಾಳಯ ಅಂದರೆ ಭಾರತ ಒಕ್ಕೂಟವು ಲೋಕಸಭೆಯಲ್ಲಿ 142 ಮತ್ತು ರಾಜ್ಯಸಭೆಯಲ್ಲಿ 96 ಸಂಸದರನ್ನು ಹೊಂದಿದೆ. ಸಂಖ್ಯಾಬಲದ ದೃಷ್ಟಿಯಿಂದ ಉಭಯ ಸದನಗಳಲ್ಲಿ ಆಡಳಿತ ಪಕ್ಷ ಬಲಿಷ್ಠವಾಗಿದೆ. ಸರ್ಕಾರಕ್ಕೆ ಯಾವುದೇ ಅಪಾಯಗಳಿಲ್ಲ.

    ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ನಿಯಮವೂ ಇದೆ. ಇದನ್ನು ನಿಯಮ 198 ರ ಅಡಿಯಲ್ಲಿ ಲೋಕಸಭೆಯಲ್ಲಿ ಪರಿಚಯಿಸಲಾಗಿದೆ. ಸಂಸತ್ತಿನಲ್ಲಿ ಈ ಅವಿಶ್ವಾಸ ನಿರ್ಣಯ ಮಂಡಿಸಲು ಸುಮಾರು 50 ಸಂಸದರ ಅಗತ್ಯವಿದೆ. ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಮತದಾನದ ಸಮಯದಲ್ಲಿ, ಶೇಕಡಾ 51 ಕ್ಕಿಂತ ಹೆಚ್ಚು ಸಂಸದರು ಅದರ ಪರವಾಗಿ ಮತ ಚಲಾಯಿಸಿದರೆ, ಆಗ ಸರ್ಕಾರಕ್ಕೆ ತೊಂದರೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಬಹುಮತ ಸಾಬೀತು ಪಡಿಸಬೇಕಿದೆ. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ –  ಬುಧವಾರ ತೀರ್ಮಾನ ಆಗಲಿಲ್ಲ ಯಾಕೆ?

    ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ – ಬುಧವಾರ ತೀರ್ಮಾನ ಆಗಲಿಲ್ಲ ಯಾಕೆ?

    ನವದೆಹಲಿ: ಮಣಿಪುರದ ವಿಚಾರವಾಗಿ ಕೇಂದ್ರ ಸರ್ಕಾರದ (Modi Government)  ವಿರುದ್ಧ ವಿಪಕ್ಷಗಳ ಕೂಟ ನಿರೀಕ್ಷೆಯಂತೆ ಅವಿಶ್ವಾಸ ನಿರ್ಣಯದ (No-Confidence Motion) ಅಸ್ತ್ರ ಪ್ರಯೋಗಿಸಿದೆ. ಇಂದು ಬೆಳಗ್ಗೆ ಐಎನ್‌ಡಿಐಎ (INDIA) ಪರವಾಗಿ ಕಾಂಗ್ರೆಸ್ (Congress) ಮತ್ತು ಬಿಆಆರ್‌ಎಸ್‌ (BRS) ನೀಡಿದ ಅವಿಶ್ವಾಸ ತೀರ್ಮಾನದ ನೋಟಿಸ್‌ ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Lok Sabha Speaker Om Birla) ಸಮ್ಮತಿ ಸೂಚಿಸಿದ್ದಾರೆ.
    ಈ ಬಗ್ಗೆ ಎಲ್ಲಾ ಪಕ್ಷಗಳ ಜೊತೆ ಚರ್ಚಿಸಿ, ಚರ್ಚೆಗೆ ದಿನಾಂಕ ನಿಗದಿ ಮಾಡುವುದಾಗಿ ಪ್ರಕಟಿಸಿದ್ದಾರೆ. ಮುಂದಿನ 10 ದಿನಗಳಲ್ಲಿ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಆಗಲಿದೆ. ಈ ವೇಳೆ ಪ್ರಧಾನಿ ಮೋದಿ (PM Modi)  ಉತ್ತರಿಸಲೇಬೇಕಾಗುತ್ತದೆ. ಆಗ ಪ್ರಧಾನಿಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವುದು ವಿಪಕ್ಷಗಳ ತಂತ್ರವಾಗಿದೆ.
    ಲೋಕಸಭೆಯಲ್ಲಿ ಎನ್‍ಡಿಎ (NDA) ಬಹುಮತ ಹೊಂದಿರುವ ಕಾರಣ ಈ ನಿಲುವಳಿ ಸುಲಭವಾಗಿ ಬಿದ್ದು ಹೋಗಲಿದೆ. ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಕಾಂಗ್ರೆಸ್‍ನ ಅವಿಶ್ವಾಸ ನಿಲುವಳಿ ಮಂಡಿಸಿರುವುದನ್ನು ಬಿಎಸ್‍ಪಿ ಆಕ್ಷೇಪಿಸಿದೆ. ಇದರ ಮಧ್ಯೆ, ಮಣಿಪುರದ (Manipura) ವಿಚಾರದಲ್ಲಿ ಗದ್ದಲ ಪರ್ವ ಮುಂದುವರೆದಿದೆ.
    ಅವಿಶ್ವಾಸ ತೀರ್ಮಾನ ಇವತ್ತೇಕೆ ಆಗಲಿಲ್ಲ?
    ಕಾಂಗ್ರೆಸ್ ಸಂಸದ ಗೌರವ್ ಗೋಗಯ್‍ರಿಂದ ಇಂದು ಬೆಳಗ್ಗೆ 9:10ಕ್ಕೆ ಲೋಕಸಭೆ ಸ್ಪೀಕರ್ ಕಚೇರಿಗೆ ಅವಿಶ್ವಾಸ ನಿಲುವಳಿ ನೊಟೀಸ್ ಸಲ್ಲಿಕೆ ಸಲ್ಲಿಕೆ. ಯಾವುದೇ ದಿನ ಬೆಳಗ್ಗೆ 10 ಗಂಟೆಯೊಳಗೆ ನೋಟಿಸ್‌ ನೀಡಿದಲ್ಲಿ ಅದೇ ದಿನ ತೀರ್ಮಾನಿಸಬೇಕಾಗುತ್ತದೆ. ಇದನ್ನೂ ಓದಿ: ಇನ್ಮುಂದೆ ರಷ್ಯಾದಲ್ಲಿ ಗಂಡು ಹೆಣ್ಣಾಗಿ.. ಹೆಣ್ಣು ಗಂಡಾಗಿ ಬದಲಾಗುವಂತಿಲ್ಲ
    ಮಧ್ಯಾಹ್ನ 12 ಗಂಟೆಗೆ ವಿಪಕ್ಷಗಳ ನೋಟಿಸ್‌ ಪರಿಶೀಲಿಸಿ ಸ್ಪೀಕರ್ ಓಂ ಬಿರ್ಲಾ ಅನುಮತಿ ನೀಡಿದರು. ಸಾಮಾನ್ಯವಾಗಿ 10 ದಿನದಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ದಿನಾಂಕ ನಿಗದಿ ಮಾಡಲಾಗುತ್ತದೆ. ಅವಿಶ್ವಾಸದ ತೀರ್ಮಾನದ ಪರವಾಗಿ ಅತೀ ಹೆಚ್ಚು ಮತ ಬಿದ್ದರೆ ಸರ್ಕಾರ ಸಹಜವಾಗಿ ಪತನವಾಗುತ್ತದೆ.
    ಲೋಕಸಭೆಯಲ್ಲಿ ಯಾರ ಬಲ ಎಷ್ಟು?
    ಸದನದ ಒಟ್ಟು ಬಲ  545 ಆಗಿದ್ದು ಬಹುಮತಕ್ಕೆ 272 ಸದಸ್ಯರ ಬಲ ಬೇಕು. ಎನ್‌ಡಿಎಗೆ 331, ಐಎನ್‌ಡಿಐಎಗೆ 144, ತಟಸ್ಥ – 70 (ಬಿಆರ್‌ಎಸ್, ವೈಎಸ್‍ಆರ್‌ಸಿಪಿ, ಬಿಜೆಡಿ) ಮಂದಿ ಸದಸ್ಯರಿದ್ದಾರೆ.

    ಇತಿಹಾಸ ಏನು ಹೇಳುತ್ತೆ?
    ಈವರೆಗೂ ಲೋಕಸಭೆಯಲ್ಲಿ 27 ಬಾರಿ ಅವಿಶ್ವಾಸ  ನಿರ್ಣಯ ಮಂಡನೆಯಾಗಿದೆ. 15 ಬಾರಿ ಇಂದಿರಾ ಗಾಂಧಿ ವಿರುದ್ಧ ಅವಿಶ್ವಾಸ ತೀರ್ಮಾನವಾಗಿದ್ದರೆ, ಪಿವಿ ನರಸಿಂಹರಾವ್ ವಿರುದ್ಧ ಮೂರು ಬಾರಿ, ಮೊರಾರ್ಜಿ ದೇಸಾಯಿ ವಿರುದ್ಧ ಎರಡು ಬಾರಿ, ನೆಹರೂ, ರಾಜೀವ್‍ಗಾಂಧಿ, ವಾಜಪೇಯಿ, ಮೋದಿ ವಿರುದ್ಧ ತಲಾ 1 ಬಾರಿ ಮಂಡನೆಯಾಗಿದೆ. ಮೊರಾರ್ಜಿ ದೇಸಾಯಿ, ವಾಜಪೇಯಿ ವಿರುದ್ಧ ಮಾತ್ರ ಅವಿಶ್ವಾಸ ತೀರ್ಮಾನಕ್ಕೆ ಗೆಲುವು ಸಿಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

    ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

    ನವದೆಹಲಿ: ಮಣಿಪುರ (Manipur) ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ (No Trust Motion) ಸಲ್ಲಿಸಲಾಗಿದೆ. ಕಾಂಗ್ರೆಸ್ ಮತ್ತು ಭಾರತ್ ರಾಷ್ಟ್ರ ಸಮಿತಿ ಬುಧವಾರ ನೋಟಿಸ್‌ಗಳನ್ನು ಸಲ್ಲಿಸಿವೆ.

    ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೊಯ್ ಅವರು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಕಚೇರಿಗೆ ನೋಟಿಸ್ ಸಲ್ಲಿಸಿದ್ದಾರೆ. ಅವಿಶ್ವಾಸ ಗೊತ್ತುವಳಿ ಮಂಡನೆಗೆ ಪ್ರತ್ಯೇಕ ನೋಟಿಸ್ ಅನ್ನು ಭಾರತ್ ರಾಷ್ಟ್ರ ಸಮಿತಿ ಸಂಸದ ನಾಗೇಶ್ವರ್ ರಾವ್ ಅವರು ಸ್ಪೀಕರ್‌ಗೆ ಸಲ್ಲಿಸಿದ್ದಾರೆ.

    ಮುಂದಿನ ಹಂತದಲ್ಲಿ ಲೋಕಸಭೆಯ ಸ್ಪೀಕರ್ ಕ್ರಮಬದ್ಧವಾಗಿ ನಿರ್ಣಯವನ್ನು ಸದನದಲ್ಲಿ ಓದಲಿದ್ದಾರೆ. ಬಳಿಕ ಅದನ್ನು ಮತಕ್ಕೆ ಹಾಕಲಿದ್ದಾರೆ. ವಿಪಕ್ಷಗಳ ಈ ಕಸರತ್ತಿನಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಯಾವುದೇ ಅಪಾಯಗಳಿಲ್ಲ. ಎನ್‌ಡಿಎ ಒಕ್ಕೂಟಕ್ಕೆ 332 ಸದಸ್ಯರ ಬೆಂಬಲವಿದ್ದು, ವಿಪಕ್ಷಗಳ ಇಂಡಿಯಾ ಒಕ್ಕೂಟಕ್ಕೆ 144 ಅಸುಪಾಸಿನ ಬೆಂಬಲವಿದೆ. ಇದನ್ನೂ ಓದಿ: ಉತ್ತರದಲ್ಲಿ ಅವಾಂತರದ ಬಳಿಕ ಮುಂಗಾರು ದಕ್ಷಿಣ ಭಾರತಕ್ಕೆ – ಕರ್ನಾಟಕ ಸೇರಿ 3 ರಾಜ್ಯಗಳಲ್ಲಿ ರೆಡ್ ಅಲರ್ಟ್

    ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಸದನದಲ್ಲಿ ಮಾತನಾಡಬೇಕು ಎಂದು ಒತ್ತಾಯಿಸುತ್ತಿರುವ ಪ್ರತಿಪಕ್ಷ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈವರೆಗೂ ಪ್ರಧಾನಿ ನರೇಂದ್ರ ಮೋದಿ ಮಾತನಾಡದ ಹಿನ್ನೆಲೆ ಜುಲೈ 20 ರಿಂದ ಆರಂಭವಾಗಿರುವ ಕಲಾಪ ನಿರಂತರವಾಗಿ ಮುಂದೂಡಿಕೆಯಾಗುತ್ತಿದೆ. ಇದನ್ನೂ ಓದಿ: ಸರ್ಕಾರ ಮುಸ್ಲಿಂ ಓಲೈಕೆಗೆ ಸಂವಿಧಾನಬಾಹಿರವಾಗಿ ವರ್ತಿಸಿದ್ರೆ ಪರಿಣಾಮ ನೆಟ್ಟಗಿರಲ್ಲ: ಸುನೀಲ್ ಕುಮಾರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಪ್ರೀಂ ಕೋರ್ಟ್‌ನಲ್ಲಿ ಇಮ್ರಾನ್‌ಗೆ ಸೋಲು- ಅವಿಶ್ವಾಸ ನಿರ್ಣಯ ಮತಕ್ಕೆ ಹಾಕಲು ಸೂಚನೆ

    ಸುಪ್ರೀಂ ಕೋರ್ಟ್‌ನಲ್ಲಿ ಇಮ್ರಾನ್‌ಗೆ ಸೋಲು- ಅವಿಶ್ವಾಸ ನಿರ್ಣಯ ಮತಕ್ಕೆ ಹಾಕಲು ಸೂಚನೆ

    ಇಸ್ಲಾಮಾಬಾದ್‌: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧದ ಅವಿಶ್ವಾಸ ಗೊತ್ತುವಳಿಯನ್ನು ಸ್ವೀಕರಿಸದೇ ಇರುವುದು ಅಸಾಂವಿಧಾನಿಕ. ಹೀಗಾಗಿ ಖಾನ್‌ ವಿರುದ್ಧದ ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಸೂಚನೆ ನೀಡಿದೆ.

    ವಿಸರ್ಜನೆಗೊಂಡಿರುವ ಪಾಕಿಸ್ತಾನದ ಸಂಸತ್ತು ನ್ಯಾಷನಲ್‌ ಅಸೆಂಬ್ಲಿಯನ್ನು ಮರುಸ್ಥಾಪನೆ ಮಾಡಿರುವ ಸುಪ್ರೀಂ ಕೋರ್ಟ್‌, ಏ.9 ರಂದು ಸಂಸತ್‌ನ ಅಧಿವೇಶನ ಕರೆಯುವಂತೆ ಸ್ಪೀಕರ್‌ಗೆ ಸೂಚಿಸಿದೆ. ಇದನ್ನೂ ಓದಿ: ಪಾಕ್‍ನಲ್ಲಿ ತಿಕ್ಕಾಟ – ಭಾರತದ ಸಹಾಯ ಕೇಳಿದ ಪಿಒಕೆ ಪ್ರಜೆ

    ಪ್ರಧಾನಿ ಹುದ್ದೆಯಿಂದ ತಮ್ಮನ್ನು ಪದಚ್ಯುತಗೊಳಿಸುವ ಪ್ರಯತ್ನವನ್ನು ವಿಫಲಗೊಳಿಸಿದ್ದ ಇಮ್ರಾನ್‌ ಖಾನ್‌, ಕಳೆದ ಭಾನುವಾರ ಪಾಕಿಸ್ತಾನದ ಸಂಸತ್ತನ್ನು ವಿಸರ್ಜನೆ ಮಾಡಲು ಅಧ್ಯಕ್ಷ ಆರಿಫ್‌ ಅಲ್ವಿ ಅವರಿಂದ ಅನುಮೋದನೆ ಪಡೆದುಕೊಂಡಿದ್ದರು.

    ಮೈತ್ರಿಕೂಟದ ಕೆಲ ಪಕ್ಷಗಳು ಖಾನ್‌ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಆದರೆ ಇದಕ್ಕೆ ಉಪ ಸಭಾಪತಿ ಖಾಸಿಮ್‌ ಸೂರಿ ಸೊಪ್ಪು ಹಾಕಿರಲಿಲ್ಲ. ಇದರಿಂದ ಸಂಸತ್ತು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಇಮ್ರಾನ್‌ ಖಾನ್‌ ಸಲಹೆ ನೀಡಿದ್ದರು. ಇದನ್ನೂ ಓದಿ: ಇಮ್ರಾನ್ ಖಾನ್ ಅಧಿಕಾರಕ್ಕೆ ಕತ್ತರಿ ಬೀಳ್ತಿದ್ದಂತೇ ಆಪ್ತರಿಗೆ ಸಂಕಷ್ಟ

    ಇದು ಅಸಾಂವಿಧಾನಿಕ ಎಂದು ಆರೋಪಿಸಿದ್ದ ಪ್ರತಿ ಪಕ್ಷಗಳು, ಸಭಾಪತಿ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

    ಪಾಕಿಸ್ತಾನದ ಸಂವಿಧಾನದ 58 ನೇ ವಿಧಿಯನ್ವಯ, ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ವೇಳೆ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಲಾಗುವುದಿಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

  • ಇಮ್ರಾನ್‌ ಖಾನ್‌ ನೂರಕ್ಕೆ ನೂರರಷ್ಟು ತೊಂದರೆಯಲ್ಲಿದ್ದಾರೆ: ಮಿತ್ರ ಪಕ್ಷ ಹೇಳಿಕೆ

    ಇಮ್ರಾನ್‌ ಖಾನ್‌ ನೂರಕ್ಕೆ ನೂರರಷ್ಟು ತೊಂದರೆಯಲ್ಲಿದ್ದಾರೆ: ಮಿತ್ರ ಪಕ್ಷ ಹೇಳಿಕೆ

    ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ತಲೆದೋರಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಸರ್ಕಾರ ಪತನವಾಗುವ ಮುನ್ಸೂಚನೆಗಳು ವ್ಯಕ್ತವಾಗುತ್ತಿವೆ. ಇಮ್ರಾನ್‌ ಖಾನ್‌ ಅವರು ನೂರಕ್ಕೆ ನೂರರಷ್ಟು ತೊಂದರೆಗೆ ಸಿಲುಕಿದ್ದಾರೆ ಎಂದು ಮಿತ್ರ ಪಕ್ಷದವರು ಹೇಳುತ್ತಿದ್ದಾರೆ.

    ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಮೂರು ಪ್ರಮುಖ ಮಿತ್ರಪಕ್ಷಗಳು ಅವರ ಸಂಪುಟದಿಂದ ಹೊರಬರಲಿರುವುದರಿಂದ ಸಂಸತ್ತಿನಲ್ಲಿ ಸರ್ಕಾರ ಬಹುಮತ ಕಳೆದುಕೊಳ್ಳುವ ಅಂಚಿನಲ್ಲಿದೆ ಎಂದು ಸರ್ಕಾರವನ್ನು ಬೆಂಬಲಿಸುವ ಪಕ್ಷದ ಉನ್ನತ ನಾಯಕರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ಆಕ್ರಮಣ ಪ್ರತಿಭಟಿಸಲು ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು: ಇಂಗ್ಲೆಂಡ್ ಪ್ರಧಾನಿ

    PAK

    ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಅವಿಶ್ವಾಸ ಮತದಲ್ಲಿ ವಿರೋಧ ಗುಂಪಿಗೆ ಬೆಂಬಲವನ್ನು ಹೆಚ್ಚಿಸುತ್ತದೆ ಎಂದು ಸಂದರ್ಶನವೊಂದರಲ್ಲಿ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್-ಕ್ವೈಡ್ ಪಕ್ಷದ ಚೌಧರಿ ಪರ್ವೇಜ್ ಇಲಾಹಿ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

    ಮಿತ್ರ ಪಕ್ಷಗಳ ನಾಯಕರನ್ನು ವೈಯಕ್ತಿಕವಾಗಿ ಭೇಟಿಯಾಗುವುದು ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಉಳಿಯುವಂತೆ ಮನವರಿಕೆ ಮಾಡುವ ಜವಾಬ್ದಾರಿ ಈಗ ಇಮ್ರಾನ್ ಖಾನ್ ಅವರ ಮೇಲಿದೆ. ಒಟ್ಟಾರೆ ಇಮ್ರಾನ್‌ ಖಾನ್‌ ಶೇ.100ರಷ್ಟು ತೊಂದರೆಯಲ್ಲಿದ್ದಾರೆ ಎಂದು ಇಲಾಹಿ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ

    ಖಾನ್ ಅವರು ಆರ್ಥಿಕತೆ ಮತ್ತು ವಿದೇಶಾಂಗ ನೀತಿಯನ್ನು ತಪ್ಪಾಗಿ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಅವಿಶ್ವಾಸ ಮತವನ್ನು ಕರೆಯುವಂತೆ ವಿರೋಧ ಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್‌ಗೆ ಕೇಳಿಕೊಂಡಿವೆ. ಮಾರ್ಚ್ 28, 30 ರ ನಡುವೆ ಶಾಸಕರು ಮತ ಚಲಾಯಿಸಬಹುದು ಎಂದು ಸರ್ಕಾರದ ಕೆಲವು ಸಚಿವರು ಹೇಳಿದ್ದಾರೆ.

    ಬಲೂಚಿಸ್ತಾನ್ ಅವಾಮಿ ಪಕ್ಷ 5 ಸ್ಥಾನಗಳನ್ನು ಮತ್ತು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್-ಪಾಕಿಸ್ತಾನದ ಏಳು ಸದಸ್ಯರು ಪ್ರತಿಪಕ್ಷವನ್ನು ಬೆಂಬಲಿಸಬೇಕೇ ಅಥವಾ ಸರ್ಕಾರದಲ್ಲಿ ಉಳಿಯಬೇಕೇ ಎಂಬುದರ ಕುರಿತು ಜಂಟಿ ನಿರ್ಧಾರವನ್ನು ತೆಗೆದುಕೊಳ್ಳಲು ಯೋಚಿಸಿದ್ದಾರೆ ಎಂದು ಇಲಾಹಿ ಹೇಳಿದ್ದಾರೆ.