Tag: ಅವಿವ ಬಿಡಪ

  • ರೆಬೆಲ್ ಸ್ಟಾರ್ ಸೊಸೆ ಅವಿವಗೆ ಸೀಮಂತ ಸಂಭ್ರಮ

    ರೆಬೆಲ್ ಸ್ಟಾರ್ ಸೊಸೆ ಅವಿವಗೆ ಸೀಮಂತ ಸಂಭ್ರಮ

    ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ (Abhishek Ambareesh) ಮತ್ತು ಸೊಸೆ ಅವಿವ ಬಿಡಪ (Aviva Bidapa) ಪೋಷಕರಾಗುತ್ತಿರುವ ಖುಷಿಯಲ್ಲಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಮನೆಗೆ ಪುಟ್ಟ ಕಂದಮ್ಮನ ಆಗಮನವಾಗಲಿದೆ. ಇದೇ ಸಂಭ್ರಮದಲ್ಲಿ ಅವಿವಗೆ ಸರಳವಾಗಿ ಸೀಮಂತ  ಮಾಡಿದ್ದಾರೆ.

    ಸೆ.15ರಂದು ತುಂಬು ಗರ್ಭಿಣಿಯಾಗಿರುವ ಅವಿವಗೆ ಸೀಮಂತ ಶಾಸ್ತ್ರ ಮಾಡಲಾಯಿತು. ಹಸಿರು ಬಣ್ಣದ ಸೀರೆಯುಟ್ಟು ಅಭಿಷೇಕ್ ಪತ್ನಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅವಿವ ಮುಖದಲ್ಲಿ ತಾಯ್ತನದ ಕಳೆ ಎದ್ದು ಕಾಣುತ್ತಿದೆ. ಇದನ್ನೂ ಓದಿ:ಸೆ.16ರಂದು ಫಿಲ್ಮ್ ಚೇಂಬರ್‌ನಲ್ಲಿ ಸಭೆ- ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲಿಯೂ ರಚಿಸಲು ಒತ್ತಾಯ

    ಬೆಂಗಳೂರಿನ ಸುಮಲತಾ (Sumalatha) ನಿವಾಸದಲ್ಲಿಯೇ ನಡೆದ ಈ ಸೀಮಂತ ಸಂಭ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಸರಳವಾಗಿ ಜರುಗಿದ ಈ ಸಮಾರಂಭದಲ್ಲಿ ಕುಟುಂಬಸ್ಥರು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.

    ಅಂದಹಾಗೆ, ಹಲವು ವರ್ಷಗಳಿಂದ ಅವಿವ ಮತ್ತು ಅಭಿಷೇಕ್ ಪ್ರೀತಿಸುತ್ತಿದ್ದರು. ಕಳೆದ ವರ್ಷ ಜೂನ್ 5ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  • ಅಭಿಷೇಕ್‌ ಅಂಬರೀಶ್‌ ಪತ್ನಿ ಪ್ರೆಗ್ನೆಂಟ್‌- ಸುಮಲತಾ ಮನೆಯಲ್ಲಿ ಸಂಭ್ರಮ

    ಅಭಿಷೇಕ್‌ ಅಂಬರೀಶ್‌ ಪತ್ನಿ ಪ್ರೆಗ್ನೆಂಟ್‌- ಸುಮಲತಾ ಮನೆಯಲ್ಲಿ ಸಂಭ್ರಮ

    ರೆಬಲ್ ಸ್ಟಾರ್ ಅಂಬರೀಶ್ ಪುತ್ರ ನಟ ಅಭಿಷೇಕ್ (Abhishek Ambareesh) ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ. ಮದುವೆಯಾಗಿ ಒಂದೇ ವರ್ಷಕ್ಕೆ ಪೋಷಕರಾಗುತ್ತಿರುವ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಪವನ್ ಕಲ್ಯಾಣ್

    ಸುಮಲತಾ ಅಂಬರೀಶ್ (Sumalatha Ambareesh) ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಅಭಿಷೇಕ್ ಪತ್ನಿ ಅವಿವ ಬಿಡಪ (Aviva Bidapa) ಪ್ರೆಗ್ನೆಂಟ್ ಆಗಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಜ್ಯೂ.ಅಂಬಿ ಬಂದ್ರು ಎಂದು ಸಂಭ್ರಮಿಸುತ್ತಿದ್ದಾರೆ.

    ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಅವಿವಗೆ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ಮಾಡಲು ತಯಾರಿ ನಡೆಯುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ:ದರ್ಶನ್‌ ಪ್ರಕರಣದ ಬಗ್ಗೆ ಇತ್ತೀಚೆಗೆ ಗೊತ್ತಾಯ್ತು: ಶರ್ಮಿಳಾ ಮಾಂಡ್ರೆ

    ಅಂದಹಾಗೆ, ಅವಿವ ಮತ್ತು ಅಭಿಷೇಕ್ ಹಲವು ವರ್ಷಗಳ ಪ್ರೀತಿಗೆ ಕಳೆದ ವರ್ಷ ಜೂನ್ 7ರಂದು ಅದ್ಧೂರಿಯಾಗಿ ಮದುವೆ ನಡೆಯಿತು.

  • ಮನೆಗೆ ಸೊಸೆ ಬಂದಿದ್ದಾಳೆ, ನಮ್ಮ ಬದುಕಲ್ಲಿ ಹೊಸ ಚಾಪ್ಟರ್ ಶುರುವಾಗಿದೆ- ಸುಮಲತಾ

    ಮನೆಗೆ ಸೊಸೆ ಬಂದಿದ್ದಾಳೆ, ನಮ್ಮ ಬದುಕಲ್ಲಿ ಹೊಸ ಚಾಪ್ಟರ್ ಶುರುವಾಗಿದೆ- ಸುಮಲತಾ

    ಹುಭಾಷಾ ನಟಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಂದು ಹುಟ್ಟುಹಬ್ಬದ ದಿನ ಪತಿ ಅಂಬರೀಶ್ ಸ್ಮಾರಕಕ್ಕೆ ಸುಮಲತಾ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.  ಈ ವರ್ಷದ ಹುಟ್ಟುಹಬ್ಬದಿಂದ ಹೊಸ ಅಧ್ಯಾಯ ಶುರುವಾಗಿದೆ ಎಂದು ಮಾತನಾಡಿದ್ದಾರೆ.

    ಅಂಬಿ ಸಮಾಧಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಕ್ಕೆ ನಟಿ ಪ್ರತಿಕ್ರಿಯಿಸಿ, 60 ವರ್ಷ ಆದ್ಮೇಲೆ ಜೀವನ ಅಧ್ಯಾಮ ಮುಗಿದಂತೆ ಎಂದು ಹೇಳ್ತಾರೆ. ಆದರೆ ಇವತ್ತಿನಿಂದ ಹೊಸ ಚಾಪ್ಟರ್ ಆರಂಭ ಆಗುತ್ತೆ ಅಂತಾ ಎಲ್ಲರೂ ಹಾರೈಸುತ್ತಿದ್ದಾರೆ. ಅಂಬರೀಶ್ ಅವರು ಮಾಡಿರುವ ಒಳ್ಳೆಯ ಕೆಲಸಗಳು, ಅವರು ಸಂಪಾದಿಸಿದ ಪ್ರೀತಿ ಇವತ್ತು ನಮಗೆ ಹಾರೈಕೆಯಾಗಿ ಬರುತ್ತಿದೆ. ಇದನ್ನೂ ಓದಿ:ಸುದೀಪ್, ದರ್ಶನ್ ಸಂಧಾನದ ಬಗ್ಗೆ ಸುಮಲತಾ ಪ್ರತಿಕ್ರಿಯೆ

    ಈ ವರ್ಷ ನಮಗೆ ಸ್ಪೆಷಲ್ ವರ್ಷನೇ ನಮಗೆ, ಯಾಕೆಂದರೆ ನನ್ನ ಮಗನ ಮದುವೆ ಆಯಿತು, ಮನೆಗೆ ಸೊಸೆನೂ(Aviva) ಬಂದಿದ್ದಾಳೆ. ಹಾಗಾಗಿ ನಮ್ಮ ಬಾಳಲ್ಲಿ ಹೊಸ ಚಾಪ್ಟರ್ ಶುರುವಾಗಿದೆ ಎಂದು ಖುಷಿಯಿಂದ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ತಮ್ಮ 60ನೇ ವರ್ಷದ ಹುಟ್ಟುಹಬ್ಬ ಸಖತ್ ಸ್ಪೆಷಲ್ ಎಂದಿದ್ದಾರೆ.

    ಇದು ನಮ್ಮ ವೈಯಕ್ತಿಕ ಬದುಕಿನ ಕಾರ್ಯಕ್ರಮವಾಗಿದೆ. ಫ್ಯಾಮಿಲಿ ಅಂದ ಮೇಲೆ ಎಲ್ಲರೂ ಒಂದೇನೆ. ಅವರು ಬೇರೇ ರೀತಿಯಲ್ಲಿ ಇರೋಲ್ಲ. ನಾವೆಲ್ಲರೂ ಒಂದೇ ಕುಟುಂಬದವರು ಅನ್ನೋ ಹಾಗೆ ಇರುತ್ತಾರೆ. ಈ ಬಗ್ಗೆ ನಾನು ಹೆಚ್ಚು ಮಾತನಾಡೋಕೆ ಇಷ್ಟಪಡಲ್ಲ, ಇದು ತೀರಾ ಪರ್ಸನಲ್ ವಿಚಾರ ಎಂದು ಸುದೀಪ್-ದರ್ಶನ್‌ ಸಂಧಾನದ ಬಗ್ಗೆ ಸುಮಲತಾ ರಿಯಾಕ್ಟ್‌ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್‌ನಲ್ಲಿ ಅಭಿ-ಅವಿವ ಅದ್ದೂರಿ ಆರತಕ್ಷತೆ

    ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್‌ನಲ್ಲಿ ಅಭಿ-ಅವಿವ ಅದ್ದೂರಿ ಆರತಕ್ಷತೆ

    ಸ್ಯಾಂಡಲ್‌ವುಡ್ (Sandalwood) ನಟ ಅಭಿಷೇಕ್- ಅವಿವ ಬಿಡಪ ಆರತಕ್ಷತೆಗೆ (Reception) ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಅಂಬಿ ಪುತ್ರನ ಅದ್ದೂರಿ ಆರತಕ್ಷತೆ ಹೇಗಿದೆ.? ಯಾರೆಲ್ಲಾ ಸ್ಟಾರ್ಸ್‌ ಅಭಿವಾ ಸಂಭ್ರಮಕ್ಕೆ ಭಾಗಿಯಾಗುತ್ತಾರೆ ಎಂಬುದರ ಡಿಟೈಲ್ಸ್ ಇಲ್ಲಿದೆ ನೋಡಿ.

    ಜೂನ್ 5ರಂದು ಬೆಂಗಳೂರಿನ ಚಾಮರ ವಜ್ರದಲ್ಲಿ ಅದ್ದೂರಿಯಾಗಿ ಅಭಿ-ಅವಿವ (Aviva Bidapa) ಮದುವೆಯಾದರು. ಅಂಬಿ (Ambareesh) ಪುತ್ರನ ಮದುವೆ ಸಂಭ್ರಮಕ್ಕೆ ರಜನಿಕಾಂತ್, ಸುದೀಪ್, ಮೀನಾ, ಯಶ್-ರಾಧಿಕಾ ಸಾಕ್ಷಿಯಾದರು. ಜೂನ್ 7ರಂದು ಸಂಜೆ 7ಕ್ಕೆ ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಅದರ ತಯಾರಿ ಕೂಡ ಯಾವ ರಾಜಮನೆತನಕ್ಕೂ ಕಡಿಮೆಯಿಲ್ಲದಂತೆ ಅದ್ದೂರಿಯಾಗಿ ಮಾಡಲಾಗಿದೆ.

    ಇಂಡಿಯನ್ ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್‌ನಲ್ಲಿ ಸ್ಟೇಜ್ ನಿರ್ಮಾಣ ಮಾಡಲಾಗಿದೆ. 300 ಶಾಗ್ಲಿಯರ್ಸ್ ಜೊತೆಗೆ 72 ಅಡಿ ಅಗಲ 32 ಉದ್ದದ ಶಾಗ್ಲಿಯರ್‌ನಲ್ಲಿ ಸ್ಟೇಜ್ ನಿರ್ಮಿಸಲಾಗಿದೆ. ವಿಶೇಷ ಅಂದರೆ, ಭಾರತದಲ್ಲಿ ಇದೇ ಮೊದಲ ಬಾರಿಗೆ ಕ್ರಿಸ್ಟಲ್ಸ್ ಡಿಸೈನ್ ಸ್ಟೇಜ್‌ ನಿರ್ಮಾಣ ಮಾಡಲಾಗಿದೆ. ಅಭಿಷೇಕ್ (Abhishek Ambareesh) ಆರತಕ್ಷತೆಗಾಗಿಯೇ ದೆಹಲಿ ಮುರದಾಬಾದ್‌ನಿಂದ ತರಿಸಲಾದ ಕ್ರಿಸ್ಟಲ್ಸ್ ಇದಾಗಿದೆ. ಅಭಿ-ಅವಿವ ಆರತಕ್ಷತೆಗೆ ವೆಡ್ಡಿಂಗ್ಸ್ ಬೈ ಧ್ರುವ ತಂಡದಿಂದ ವೇದಿಕೆ ನಿರ್ಮಾಣವಾಗಿದೆ.

    ಈಗಾಗಲೇ ಶಿವಣ್ಣ ಮಗಳು, ಜನಾರ್ದನ ರೆಡ್ಡಿ ಮಗಳು, ಯದುವೀರ್ ಮಹಾರಾಜರು ಸೇರಿದಂತೆ ಹಲವು ಗಣ್ಯರ ಮದುವೆಗೆ ಧ್ರುವ ಡಿಸೈನ್ ಮಾಡಿದ್ದಾರೆ. ಅಭಿ-ಅವಿವ ಆರತಕ್ಷತೆಗೆ 3 ಸಾವಿರ ಜನಕ್ಕೆ ಆಸನದ ವ್ಯವಸ್ಥೆ, 25 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ

    ಕಾಲಿವುಡ್ ನಟ ಸೂರ್ಯ, ಕಾಶ್ಮೀರ ಮುಖ್ಯ ಮಂತ್ರಿ ಫಾರುಖ್ ಅಬ್ದುಲಾ, ಮೆಗಾಸ್ಟಾರ್ ಚಿರಂಜೀವಿ ಕುಟುಂಬ, ನಾಗಾರ್ಜುನ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಕನ್ನಡ ಹಲವು ಸ್ಟಾರ್ ನಟ-ನಟಿಯರು ಭಾಗಿಯಾಗಲಿದ್ದಾರೆ.

  • ಅಂಬಿ ಪುತ್ರನ ಮದುವೆ ಸಂಭ್ರಮದಲ್ಲಿ ಮಿಂಚಿದ ಯಶ್, ರಾಧಿಕಾ ಜೋಡಿ

    ಅಂಬಿ ಪುತ್ರನ ಮದುವೆ ಸಂಭ್ರಮದಲ್ಲಿ ಮಿಂಚಿದ ಯಶ್, ರಾಧಿಕಾ ಜೋಡಿ

    ಸ್ಯಾಂಡಲ್‍ವುಡ್ ನಟ ಅಂಬಿ ಪುತ್ರ ಅಭಿಷೇಕ್  (Abhishek Ambareesh) ಹಾಗೂ ಅವಿವ ಬಿಡಪ (Aviva Bidpapa) ಮದುವೆ ಅದ್ದೂರಿಯಾಗಿ ನಡೆದಿದೆ. ಅವಿವ ಮದುವೆ (Wedding) ಸಂಭ್ರಮದಲ್ಲಿ ಕೆಜಿಎಫ್ 2 ಹೀರೋ ಯಶ್ (Yash), ರಾಧಿಕಾ ಪಂಡಿತ್ (Radhika Pandit) ಜೋಡಿ ಭಾಗಿಯಾಗಿದ್ದಾರೆ. ಅಭಿಷೇಕ್ ಮದುವೆಯಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು ಹೀಗೆ.

    ಅಂಬರೀಶ್ ಕುಟುಂಬದ ಜೊತೆ ನಟ ಯಶ್ ದಂಪತಿಗೆ ಒಳ್ಳೆಯ ಒಡನಾಟವಿದೆ. ಅಭಿಷೇಕ್ ಹಾಗೂ ಯಶ್ ಸಹೋದರರಂತೆ ಇದ್ದಾರೆ. ಇದೀಗ ಅಭಿ ಮದುವೆಯಲ್ಲಿ ಯಶ್ – ರಾಧಿಕಾ ಜೋಡಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿ ಇಬ್ಬರು ಮಸ್ತ್ ಆಗಿ ಮಿಂಚಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಅಂಬಿ ಪುತ್ರನ ಅದ್ದೂರಿ ಕಲ್ಯಾಣ- ಮದುವೆಯ ಕಲರ್‌ಫುಲ್ ಫೋಟೋಸ್

    ಅಭಿಷೇಕ್ ಹಾಗೂ ಅವಿವ ಮದುವೆ ಫೋಟೋ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅದರಲ್ಲೂ ಪುತ್ರ ಅಭಿಗೆ ನಟಿ ಸುಮಲತಾ ಮುದ್ದು ಮಾಡ್ತಿರುವ ಫೋಟೋ ಹೈಲೆಟ್ ಆಗುತ್ತಿದೆ.

    ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‍ನ ತ್ರಿಪುರ ವಾಸಿನಿಯಲ್ಲಿ ಅಭಿಷೇಕ್ ಹಾಗೂ ಅವಿವ ದಂಪತಿಯ ಆರತಕ್ಷತೆ ಅದ್ದೂರಿಯಾಗಿ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ ಹಾಗೂ ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಐವತ್ತು ದಿನ ಪೂರೈಸಿದ ಶಿವಾಜಿ ಸುರತ್ಕಲ್ 2

  • ಅಂಬಿ ಪುತ್ರನ ಅದ್ದೂರಿ ಕಲ್ಯಾಣ- ಮದುವೆಯ ಕಲರ್‌ಫುಲ್ ಫೋಟೋಸ್

    ಅಂಬಿ ಪುತ್ರನ ಅದ್ದೂರಿ ಕಲ್ಯಾಣ- ಮದುವೆಯ ಕಲರ್‌ಫುಲ್ ಫೋಟೋಸ್

    ಸ್ಯಾಂಡಲ್‌ವುಡ್‌ನ (Sandalwood) ಜ್ಯೂನಿಯರ್ ರೆಬಲ್ ಕಪಲ್ ಅಭಿಷೇಕ್- ಅವಿವ ಜೂನ್ 5ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 5 ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ‘ಅಭಿ’ವಾ (Abhiva) ಅದ್ದೂರಿ ಮದುವೆಗೆ ಚಿತ್ರರಂಗ ಸಾಕ್ಷಿಯಾಗಿದೆ. ಮದುವೆ ಸಂಭ್ರಮ ಹೇಗಿತ್ತು.? ಯಾರೆಲ್ಲಾ ಅಂಬರೀಶ್ ಪುತ್ರನ ಮದುವೆಗೆ ಹಾಜರಿ ಹಾಕಿದ್ರು ಎಂಬುದಕ್ಕೆ ಇಲ್ಲಿದೆ ಡಿಟೈಲ್ಸ್.

    ಅಂಬರೀಶ್ ಅವರ ಆಸೆಯಂತೆಯೇ ಪುತ್ರ ಅಭಿಷೇಕ್ ಮದುವೆ ನಡೆದಿದೆ. ಅಂಬಿ ಪುತ್ರನ ಮದುವೆ ಗೌಡರ ಸಂಪ್ರದಾಯದಂತೆ ಅದ್ಧೂರಿಯಾಗಿ ಜರುಗಿದೆ. ಕೆಲ ವರ್ಷಗಳ ಹಿಂದೆ ಸಮಾರಂಭವೊಂದರಲ್ಲಿ ಭೇಟಿಯಾದ ಅಭಿ-ಅವಿವ, ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು. ಸತತ 5 ವರ್ಷಗಳ ಪ್ರೇಮ ಬರಹಕ್ಕೆ ಇಂದು ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಗುರುಹಿರಿಯರ ಒಪ್ಪಿಗೆ ಮೇರೆಗೆ ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಅದ್ದೂರಿಯಾಗಿ ಅಭಿ-ಅವಿವ ಮದುವೆಯಾಗಿದ್ದಾರೆ.‌ ಇದನ್ನೂ ಓದಿ:ಐವತ್ತು ದಿನ ಪೂರೈಸಿದ ಶಿವಾಜಿ ಸುರತ್ಕಲ್ 2

    ಅಂಬರೀಶ್ ಅವರು ಇದ್ದಾಗಲೇ ಮಗನ ಪ್ರೀತಿ ಬಗ್ಗೆ ತಿಳಿದಿತ್ತು. ಅವಿವರನ್ನ (Aviva) ಅಂದೇ ಸೊಸೆ ಎಂದು ಅಂಬಿ ತೀರ್ಮಾನಿಸಿದ್ದರು. ಮಗನ ಮದುವೆ ಗೇಗಿರಬೇಕು ಎಂದು ಅಂಬರೀಶ್ ಇಷ್ಟಪಟ್ಟಿದ್ದರೋ ಅದೇ ರೀತಿ ಇಂದು ಅಭಿ-ಅವಿವ ಮದುವೆ ಜರುಗಿದೆ. ಪತಿಯ ಸ್ಥಾನದಲ್ಲಿ ಮುಂದೆ ನಿಂತು ಸುಮಲತಾ ಮದುವೆಯನ್ನ ಮಗನ ಮನದರಸಿ ಜೊತೆ ನಡೆಸಿಕೊಟ್ಟರು.

    ಮದುವೆಯಲ್ಲಿ ಅಭಿಷೇಕ್ (Abhishek Ambareesh) ಗೋಲ್ಡನ್ ಬಣ್ಣದ ಶರ್ಟ್ ಮತ್ತು ಪಂಚೆಯಲ್ಲಿ ಕಾಣಿಸಿಕೊಂಡರೆ, ವಧು ಅವಿವ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಕೂಡ ಗೋಲ್ಡನ್ ಸೀರೆಯಲ್ಲಿ ಮಿಂಚಿದ್ದಾರೆ. ವಿಶೇಷ ಅಂದರೆ ತಮ್ಮ ಮದುವೆಗೆ, ಅವಿವ ಅವರೇ ಉಡುಗೆಯನ್ನ ಡಿಸೈನ್ ಮಾಡಿದ್ದಾರೆ.

    ಅಂಬಿ ಪುತ್ರನ ಮದುವೆ ಚಿತ್ರರಂಗದ ದಂಡೇ ಬಂದಿತ್ತು. ಅಭಿ ಕಲ್ಯಾಣದಲ್ಲಿ ರಜನಿಕಾಂತ್, ಮೀನಾ, ನ್ಯಾಷನಲ್ ಸ್ಟಾರ್ ಯಶ್-ರಾಧಿಕಾ ಪಂಡಿತ್, ಸುದೀಪ್, ಪವಿತ್ರಾ ಲೋಕೇಶ್, ತೆಲುಗು ನಟ ನರೇಶ್, ಸಿಂಗರ್ ವಿಜಯ್ ಪ್ರಕಾಶ್ ದಂಪತಿ, ಗುರುಕಿರಣ್, ತಮಿಳು ನಟ ಮೋಹನ್ ಬಾಬು, ಕ್ರಿಕೆಟಿಗ ಅನಿಲ್ ಕುಂಬ್ಳೆ, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗಿಯಾಗಿದ್ದರು. ಇದೀಗ ಅಂಬಿ ಪುತ್ರನ ದಾಂಪತ್ಯ ಜೀವನಕ್ಕೆ ಅಭಿಮಾನಿಗಳು ಕೂಡ ಶುಭಕೋರುತ್ತಿದ್ದಾರೆ.

    ಇನ್ನೂ ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.

  • ಜೂನ್ 5ಕ್ಕೆ ಅಂಬಿ ಪುತ್ರನ ಮದುವೆ- ಅವಿವ ಜೊತೆ ಅಭಿ ಕಲ್ಯಾಣ

    ಜೂನ್ 5ಕ್ಕೆ ಅಂಬಿ ಪುತ್ರನ ಮದುವೆ- ಅವಿವ ಜೊತೆ ಅಭಿ ಕಲ್ಯಾಣ

    ಸ್ಯಾಂಡಲ್‌ವುಡ್‌ನಲ್ಲಿ ಅಂಬಿ ಪುತ್ರನ ಮದುವೆ ಸಂಭ್ರಮ ಮನೆ ಮಾಡಿದೆ. ಬಹುಕಾಲದ ಗೆಳತಿ ಜೊತೆ ಮದುವೆಯೆಂಬ ಮುದ್ರೆ ಒತ್ತಲು ಅಭಿಷೇಕ್ ಅಂಬರೀಶ್ (Abhishek Ambareesh) ರೆಡಿಯಾಗಿದ್ದಾರೆ. ಅವಿವ ಬಿಡಪ (Aviva Bidapa) ಜೊತೆ ಜೂನ್ 5ಕ್ಕೆ ಹಸೆಮಣೆ (Wedding) ಏರಲಿದ್ದಾರೆ.

    ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ. ಈಗಾಗಲೇ ಹಳದಿ ಶಾಸ್ತ್ರ, ವರಪೂಜೆ, ಮೆಹಂದಿ ಶಾಸ್ತ್ರದ ಕಾರ್ಯಕ್ರಮಗಳನ್ನು ಅಂಬಿ ಮನೆಯಲ್ಲೇ ನೆರವೇರಿಸಲಾಗಿದೆ. ಭಾನುವಾರ (ಜೂನ್ 4) ಸಂಜೆ ಸಂಗೀತ ಕಾರ್ಯಕ್ರಮ ನಡೆಯಲಿದೆ.

    ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.

    ಈಗಾಗಲೇ ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರದಲ್ಲಿ ಹೊಸ ಜೋಡಿ ಮಿಂಚಿರುವ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವಿವ ಡಿಸೈನ್ ಮಾಡಿರುವ ಧರಿಸಿನಲ್ಲಿ ಅಭಿ-ಅವಿವ ಹೇಗೆ ಕಾಣುತ್ತಾರೆ? ಮದುವೆ ಲುಕ್ ಹೇಗಿರಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಒಟ್ನಲ್ಲಿ ಅಂಬಿ ಪುತ್ರನಿಗೆ ಶುಭವಾಗಲಿ ಎಂಬುದೇ ಅಭಿಮಾನಿಗಳ ಆಶಯ.

  • ಅದ್ದೂರಿಯಾಗಿ ನಡೆಯಿತು ಅಂಬಿ ಪುತ್ರನ ಅರಿಶಿನ ಶಾಸ್ತ್ರ

    ಅದ್ದೂರಿಯಾಗಿ ನಡೆಯಿತು ಅಂಬಿ ಪುತ್ರನ ಅರಿಶಿನ ಶಾಸ್ತ್ರ

    ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಂಬಿ ಪುತ್ರನ ಮಗನ ಮದುವೆಗೆ (Wedding) ಕೌಂಟ್‌ಡೌನ್ ಶುರುವಾಗಿದೆ. ಸದ್ಯ ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿರುವ ನಟ ಅಭಿಷೇಕ್ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ಅಭಿಷೇಕ್ ಅಂಬರೀಶ್- ಅವಿವ ಬಿಡಪ (Aviva Bidapa) ಜೋಡಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸಿ, ಇದೀಗ ಮದುವೆ ಎಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಜೂನ್ 5ರಂದು (ಸೋಮವಾರ) ಅದ್ದೂರಿಯಾಗಿ ಮದುವೆ (Wedding) ಕಾರ್ಯಕ್ರಮ ಜರುಗಲಿದೆ. ಜೂನ್ 7ರಂದು ಭರ್ಜರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ. ಅಭಿಷೇಕ್- ಅವಿವ ವಿವಾಹದ ಆಮಂತ್ರಣ ಪತ್ರ ವೈರಲ್ ಆಗಿದೆ. ಸದ್ಯ ವೈಟ್ ಬಣ್ಣದ ಉಡುಗೆಯಲ್ಲಿ ಅಭಿಷೇಕ್ ಅರಿಶಿನ ಶಾಸ್ತ್ರದಲ್ಲಿ (Arishina Shastra) ಮಿಂಚಿದ್ದಾರೆ. ಮನೆ ಕೂಡ ಅದ್ದೂರಿಯಾಗಿ ಅಲಂಕರಿಸಲಾಗಿದೆ.

    ಇನ್ನೂ 2022ರ ಡಿಸೆಂಬರ್ 11ರಂದು ಅಭಿಷೇಕ್ ಹಾಗೂ ಅವಿವ ನಿಶ್ಚಿತಾರ್ಥ ನೆರವೇರಿತು. ಕುಟುಂಬದವರು, ಆಪ್ತರು, ಗಣ್ಯರ ಸಮ್ಮುಖದಲ್ಲಿ ಈ ಶುಭ ಕಾರ್ಯ ನಡೆದಿತ್ತು. ಈಗ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಜೂನ್ 4ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ. ಇದನ್ನೂ ಓದಿ:ವರುಣ್‌ ತೇಜ್-‌ ನಟಿ ಲಾವಣ್ಯ ಎಂಗೇಜ್‌ಮೇಟ್ ಡೇಟ್ ಫಿಕ್ಸ್

    ಸಿನಿಮಾ- ರಾಜಕೀಯ (Politics) ಎರಡೂ ಕ್ಷೇತ್ರದ ಗಣ್ಯರು ಅಭಿಷೇಕ್- ಅವಿವ ಆರತಕ್ಷತೆಗೆ ಬರಲಿದ್ದಾರೆ. ಮದುವೆಗೆ ಆಪ್ತ ಬಳಗದವರಿಗಷ್ಟೇ ಆಹ್ವಾನ ನೀಡಲಾಗಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಹೊಸ ಬಾಳಿಗೆ ಕಾಲಿಡುತ್ತಿರುವ ಹೊಸ ಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.