Tag: ಅವಾಜ್

  • ಬೆಂಗ್ಳೂರಲ್ಲಿ ಮಾಜಿ ಶಾಸಕರ ಪುತ್ರನ ಅವಾಂತರ- ಡ್ರಂಕ್&ಡ್ರೈವ್ ಪ್ರಶ್ನಿಸಿದ್ದಕ್ಕೆ ಎಂಎಲ್‍ಎ ಅಭ್ಯರ್ಥಿ ಎಂದು ಅವಾಜ್

    ಬೆಂಗ್ಳೂರಲ್ಲಿ ಮಾಜಿ ಶಾಸಕರ ಪುತ್ರನ ಅವಾಂತರ- ಡ್ರಂಕ್&ಡ್ರೈವ್ ಪ್ರಶ್ನಿಸಿದ್ದಕ್ಕೆ ಎಂಎಲ್‍ಎ ಅಭ್ಯರ್ಥಿ ಎಂದು ಅವಾಜ್

    ಬೆಂಗಳೂರು: ಮಧ್ಯರಾತ್ರಿಯಲ್ಲಿ ಮಾಜಿ ಶಾಸಕರ ಪುತ್ರನ ಅವಾಂತರ ನಡೆದಿದೆ. ಕುಡಿದ ಅಮಲಿನಲ್ಲಿ ಮುಂದಿನ ಎಂಎಲ್‍ಎ ಅಭ್ಯರ್ಥಿ ಎಂದು ಪೊಲೀಸರಿಗೆ ಅವಾಜ್ ಹಾಕಿ ಸ್ಟೇಷನ್ ಮೆಟ್ಟಿಲೇರಿದ್ದಾರೆ.

    ಉಡುಪಿ ಮಾಜಿ ಶಾಸಕ ಜಯರಾಮ ಶೆಟ್ಟಿ ಪುತ್ರ ರತನ್ ಶೆಟ್ಟಿ ಮಂಗಳವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಡಿಡಿ ಚೆಕ್ ಮಾಡುತ್ತಿದ್ದ ಪೊಲೀಸರು ರತನ್ ಶೆಟ್ಟಿ ಇದ್ದ ಕಾರು ಚಾಲಕನನ್ನ ಡ್ರಂಕ್ & ಡ್ರೈವ್ ತಪಾಸಣೆ ನಡೆಸಿದ್ದರು.

    ಈ ವೇಳೆ ರತನ್ ಶೆಟ್ಟಿ ತಾನು ಮುಂದಿನ ಎಂಎಲ್‍ಎ ಅಭ್ಯರ್ಥಿ. ನನ್ನನ್ನೇ ತಡೆಯುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಹಾಗೂ ರತನ್ ನಡುವೆ ಮಾತಿನ ಚಕಮಕಿಯಾಗಿದೆ. ಪೊಲೀಸರು ರತನ್‍ ರನ್ನ ವಶಕ್ಕೆ ಪಡೆದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

    ನಂತರ ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಇತ್ತ ರತನ್ ಶೆಟ್ಟಿ ಸಹ ಪೊಲೀಸರು ತನ್ನನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ. ನಂತರ ರತನ್ ಗೆ ಕುಡಿದ ಅಮಲಿನಲಿನಿಂದ ಆದ ಎಡವಡ್ಡು ಅರಿವಾಗಿದೆ. ಇದೀಗ ಕ್ಷಮಾಪಣೆ ಪತ್ರ ಬರೆದು ಕೊಟ್ಟು ವಾಪಸ್ ಹೋಗಿದ್ದಾರೆ.

  • ಲೋಕಲ್ ಚಾನೆಲ್ ಮಾಲೀಕನಿಂದ ನಡು ರಸ್ತೆಯಲ್ಲೇ ಪಾರ್ಟಿ – ಪ್ರಶ್ನಿಸಿದ್ದಕ್ಕೆ ಪೊಲೀಸರಿಗೆ ಅವಾಜ್!

    ಲೋಕಲ್ ಚಾನೆಲ್ ಮಾಲೀಕನಿಂದ ನಡು ರಸ್ತೆಯಲ್ಲೇ ಪಾರ್ಟಿ – ಪ್ರಶ್ನಿಸಿದ್ದಕ್ಕೆ ಪೊಲೀಸರಿಗೆ ಅವಾಜ್!

    ಬೆಂಗಳೂರು: ನಡು ರಸ್ತೆಯಲ್ಲಿಯೇ ಹುಟ್ಟುಹಬ್ಬದ ಪಾರ್ಟಿ ಮಾಡುತ್ತಿದ್ದ ಲೋಕಲ್ ಚಾನೆಲ್ ಮಾಲೀಕನೊಬ್ಬನನ್ನು ಪೊಲೀಸರು ಪ್ರಶ್ನೆ ಮಾಡಿದ್ದಕ್ಕೆ ಅವಾಜ್ ಹಾಕಿರುವ ಘಟನೆ ನಗರದ ಅಂದ್ರಹಳ್ಳಿಯಲ್ಲಿ ನಡೆದಿದೆ.

    ಲೋಕಲ್ ಚಾನೆಲ್ ಮಾಲೀಕ ಮುರಳಿ ಎಂಬಾತ ರಸ್ತೆಯಲ್ಲಿ ಪಾರ್ಟಿ ಮಾಡಿರುವುದನ್ನು ಪೊಲೀಸರು ಪ್ರಶ್ನೇ ಮಾಡಿದ್ದಾರೆ. ಅದಕ್ಕೆ ನಾನು ಮೀಡಿಯಾದವನು ಎಲ್ಲಿ ಬೇಕಾದರೂ ಪಾರ್ಟಿ ಮಾಡುತ್ತೇನೆ. ಅದನ್ನ ಕೇಳೋಕೆ ನಿವ್ಯಾರು ಅಂತ ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ.

    ಅಂದ್ರಹಳ್ಳಿಯ ಮಧ್ಯರಾತ್ರಿ ನಡು ಬೀದಿಯಲ್ಲಿ ಮುರಳಿ ಬರ್ತ್ ಡೇ ಪಾರ್ಟಿ ಮಾಡುತ್ತಿದ್ದನು. ಆದರೆ ಪಾರ್ಟಿಯಲ್ಲಿ ಕೂಗಾಟ ಜೋರಾಗಿದ್ದರಿಂದ ಸ್ಥಳೀಯರಿಗೆ ತೊಂದರೆಯಾಗಿದೆ. ಆದ್ದರಿಂದ ಸ್ಥಳೀಯರು ಬ್ಯಾಡರಹಳ್ಳಿ ಪೆÇಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಬೀಟ್ ಪಿಸಿಗಳು ಇದನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಆದರೆ ಮುರಳಿ, ನಾನು ಮನಸ್ಸು ಮಾಡಿದರೆ ನಿಮ್ಮ ಜಾಗವನ್ನು ಖಾಲಿ ಮಾಡಿಸುತ್ತೇನೆ. ನನ್ನ ಎದುರು ಹಾಕ್ಕೊಂಡ್ರೆ ಪರಿಣಾಮ ನೆಟ್ಟಗಿರಲ್ಲ ಅಂತ ಬೆದರಿಕೆ ಹಾಕಿ ಧಮ್ಕಿ ಹಾಕಿದ್ದಾನೆ.

    ಮುರಳಿ ರಾದ್ಧಾಂತ ಜೋರಾಗಿದ್ದರೀಂದ ಸ್ಥಳಕ್ಕೆ ಇನ್ಸ್ ಪೆಕ್ಟರ್ ಸತ್ಯನಾರಾಯಣ್ ಮತ್ತು ಪಿಎಸ್‍ಐ ಮಂಜುನಾಥ್ ಭೇಟಿ ನೀಡಿ ಆರೋಪಿ ಮುರುಳಿ ಮತ್ತು ಜೊತೆಗಿದ್ದ ಅಭಿಷೇಕ್ ಮೇಲೆ ಎಫ್‍ಐಆರ್ ದಾಖಲು ಮಾಡಿದ್ದಾರೆ.