Tag: ಅವಾಚ್ಯ ಶಬ್ಧ

  • ದಸರಾ ಹಬ್ಬಕ್ಕೆ ರಜೆ ಕೇಳಿದಕ್ಕೆ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಜೆಸ್ಕಾಂ ಅಧಿಕಾರಿ

    ದಸರಾ ಹಬ್ಬಕ್ಕೆ ರಜೆ ಕೇಳಿದಕ್ಕೆ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಜೆಸ್ಕಾಂ ಅಧಿಕಾರಿ

    ಕಲಬುರಗಿ: ಸದಾ ಒಂದಿಲ್ಲಾ ಒಂದು ರೀತಿ ಸುದ್ದಿಯಲ್ಲಿರುವ ಕಲಬುರಗಿಯ ಜೆಸ್ಕಾಂ ಇಲಾಖೆ ಇದೀಗ ಮತ್ತೆ ಸುದ್ದಿಯಲ್ಲಿದೆ. ದಸರಾ ಹಬ್ಬದ ರಜೆ ಕೇಳಿದ್ದಕ್ಕೆ ಕಿರಿಯ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದ ಮಹಿಳಾ ಸಿಬ್ಬಂದಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಆಸ್ಪತ್ರೆಯ ಬೆಡ್ ಮೇಲಿರುವ ಮಹಿಳೆ ಹೆಸರು ರೂಪಾ. ಕಲಬುರಗಿಯ ಜೆಸ್ಕಾಂ ಇಲಾಖೆಯ ಲೆಕ್ಕಪತ್ರ ವಿಭಾಗದಲ್ಲಿ ಎಫ್‍ಡಿಎ ಆಗಿದ್ದಾರೆ. ಇವರು ಹಬ್ಬಕ್ಕೆ ರಜೆ ಕೊಡಿ ಅಂತಾ ಕೇಳಿದ್ದಕ್ಕೆ ಮೇಲಾಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು ಎಂದು ಹೇಳಿದ್ದಾರೆ.

    ಸಹಾಯಕ ಲೆಕ್ಕಾಧಿಕಾರಿ ಜಗದೇವಿ ಮತ್ತು ಡಿಸಿಎ ಶ್ರೀನಿವಾಸ್ ಬಾಯಿಗೆ ಬಂದಂತೆ ಬೈದಿದ್ದಾರೆ ಎನ್ನಲಾಗಿದೆ. ಇದರಿಂದ ಮಾನಸಿಕ ಅಘಾತಕ್ಕೆ ತುತ್ತಾದ ರೂಪ ಕಚೇರಿಯಲ್ಲಿಯೇ ಕುಸಿದುಬಿದ್ದಿದ್ದಾರೆ. ಕೂಡಲ್ಲೇ ಇತರೆ ಸಿಬ್ಬಂದಿ ರೂಪಾರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಇಬ್ಬರು ಆಫೀಸರ್‍ಗಳು ಕೇವಲ ರೂಪಾಗೆ ಮಾತ್ರವಲ್ಲದೇ ಇತರರಿಗೂ ಟಾರ್ಚ್‍ರ್ ಕೊಡ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಈ ಇಬ್ಬರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಎಲ್ಲಾ ಸಿಬ್ಬಂದಿ ದೂರು ನೀಡಿದ್ದಾರೆ. ಆದರೆ ಈ ಆರೋಪವನ್ನು ಶ್ರೀನಿವಾಸ್ ನಿರಾಕರಿಸುತ್ತಿದ್ದಾರೆ.

  • ವರ್ಗಾವಣೆ ಪತ್ರ ಕೇಳಿದ್ದಕ್ಕೆ ವಿದ್ಯಾರ್ಥಿನಿಗೆ ಆಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಸಿಬ್ಬಂದಿ

    ವರ್ಗಾವಣೆ ಪತ್ರ ಕೇಳಿದ್ದಕ್ಕೆ ವಿದ್ಯಾರ್ಥಿನಿಗೆ ಆಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಸಿಬ್ಬಂದಿ

    ತೂಮಕೂರು: ವರ್ಗಾವಣೆ ಪತ್ರ ಕೇಳಿದಕ್ಕೆ ವಿದ್ಯಾರ್ಥಿನಿ ಮೇಲೆ ಕಾಲೇಜು ಸಿಬ್ಬಂದಿ ಆಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ತುಮಕೂರು ನಗರದ ವಿವೇಕಾನಂದ ಕಾಮರ್ಸ್ ಕಾಲೇಜಿನಲ್ಲಿ ನಡೆದಿದೆ.

    ರಂಜಿತಾ(ಹೆಸರು ಬದಲಾಯಿಸಲಾಗಿದೆ) ಎಂಬ ವಿದ್ಯಾರ್ಥಿನಿ ಮೇಲೆ, ಕಾಲೇಜು ಮುಖ್ಯಸ್ಥರ ಕಾರು ಚಾಲಕ ಯದುಕುಮಾರ್ ಅವಾಚ್ಯ ಶಬ್ಧಗಳಿಂದ ಅವಹೇಳನ ಮಾಡಿ ಹಲ್ಲೆ ನಡೆಸಿದ್ದಾನೆ.

    ಎಂಕಾಂ ಮೊದಲ ವರ್ಷ ಪೂರೈಸಿದ ವಿದ್ಯಾರ್ಥಿನಿ ರಂಜಿತಾ ದ್ವಿತೀಯ ವರ್ಷದ ವ್ಯಾಸಾಂಗಕ್ಕಾಗಿ ಬೇರೆ ಕಾಲೇಜಿಗೆ ಹೋಗಲು ನಿರ್ಧರಿಸಿದ್ದಳು. ಈ ಕಾರಣಕ್ಕೆ ಪ್ರಾಂಶುಪಾಲರಾಗಿರುವ ಸುಮಾ ಅವರ ಬಳಿ ವರ್ಗಾವಣೆ ಪತ್ರವನ್ನು ನೀಡುವಂತೆ ಕೇಳಿದ್ದಾಳೆ.

    ಈ ವೇಳೆ ಪಕ್ಕದಲ್ಲಿದ್ದ ಕಾರು ಚಾಲಕ ಯದುಕುಮಾರ್ ವಿದ್ಯಾರ್ಥಿನಿಗೆ ಅಶ್ಲೀಲವಾಗಿ ಬೈದಿದ್ದಾನೆ. ಹಾಗಾಗಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆದ ಬಳಿಕ ರಶ್ಮಿ ಪೋಷಕರ ಜೊತೆ ಕಾಲೇಜಿಗೆ ಬಂದು ಪ್ರಶ್ನೆ ಮಾಡಿದ್ದಾಳೆ.

    ಪರಿಣಾಮವಾಗಿ ಕಾಲೇಜು ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾಲೇಜಿನ ಮುಖ್ಯಸ್ಥ ಬಿಜೆಪಿ ಮುಖಂಡರಾದ ಬ್ಯಾಟರಂಗೇಗೌಡರು ರಾಜಿ ಸಂಧಾನ ನಡೆಸಿ, ಕಾರು ಚಾಲಕನಿಂದ ವಿದ್ಯಾರ್ಥಿನಿಗೆ ಕ್ಷಮೆ ಕೇಳಿಸಿ ಆ ಜಗಳವನ್ನು ಮುಗಿಸಿದರು.