Tag: ಅವಳಿ ಸಹೋದರಿಯರು

  • ಅವಳಿ ಸಹೋದರಿಯರ ವಿಶೇಷ ಸಾಧನೆ – ಇಬ್ಬರಿಗೂ ಸಮಾನ ಅಂಕ

    ಅವಳಿ ಸಹೋದರಿಯರ ವಿಶೇಷ ಸಾಧನೆ – ಇಬ್ಬರಿಗೂ ಸಮಾನ ಅಂಕ

    ಮಂಗಳೂರು: ಅವಳಿ ಸಹೋದರಿಯರಿಬ್ಬರು (Twin Sisters) ಪಿಯುಸಿ (PUC) ಪರೀಕ್ಷೆಯಲ್ಲಿ ಸಮಾನವಾದ ಅಂಕಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆಗೈದಿದ್ದಲ್ಲದೇ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.

    ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಗಂಡಿ (Belthangady) ತಾಲೂಕಿನ ನೆರಿಯ ಗ್ರಾಮದ ಅವಳಿ ಸಹೋದರಿಯರಾದ ಸ್ಪಂದನ ಮತ್ತು ಸ್ಪರ್ಶ ಪಿಯುಸಿ ಪರೀಕ್ಷೆಯಲ್ಲಿ 600ರಲ್ಲಿ 594 ಅಂಕ ಪಡೆದು ವಿಶೇಷ ಸಾಧನೆಗೈದಿದ್ದಾರೆ. ಉಜಿರೆಯ (Ujire) ಎಸ್‌ಡಿಎಂ  ಕಾಲೇಜಿನ (SDM College) ದ್ವಿತೀಯ ಪಿಯುಸಿ ವಾಣಿಜ್ಯ (Commerce) ವಿಭಾಗದ ವಿದ್ಯಾರ್ಥಿನಿಯರಾದ ಇವರು ಸಮಾನವಾಗಿ 594 ಅಂಕ ಪಡೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದನ್ನೂ ಓದಿ: ಪಿಯು ಪರೀಕ್ಷಾ ಫಲಿತಾಂಶ – ದಕ್ಷಿಣ ಕನ್ನಡ ಫಸ್ಟ್‌, ಉಡುಪಿ ಸೆಕೆಂಡ್‌ 

    ಸ್ಪಂದನ ಮತ್ತು ಸ್ಪರ್ಶ ಇಂಗ್ಲಿಷ್ (English) ಮತ್ತು ಅರ್ಥಶಾಸ್ತ್ರ (Economics) ವಿಷಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಷಯಗಳಲ್ಲಿ ಸಮಾನವಾದ ಅಂಕಗಳನ್ನು ಪಡೆದಿದ್ದಾರೆ. ಸ್ಪಂದನ ಇಂಗ್ಲಿಷ್‌ನಲ್ಲಿ 98 ಹಾಗೂ ಸ್ಪರ್ಶ 97 ಅಂಕಗಳನ್ನು ಪಡೆದಿದ್ದಾರೆ. ಅರ್ಥಶಾಸ್ತ್ರದಲ್ಲಿ ಸ್ಪಂದನ 98 ಅಂಕಗಳನ್ನು ಪಡೆದಿದ್ದರೆ, ಸ್ಪರ್ಶ 99 ಅಂಕಗಳನ್ನು ಪಡೆದಿದ್ದಾರೆ. ಹಿಂದಿಯಲ್ಲಿ (Hindi) ಇಬ್ಬರೂ 98 ಅಂಕಗಳನ್ನು ಪಡೆದು ಉಳಿದೆಲ್ಲಾ ವಿಷಯಗಳಲ್ಲಿ 100 ಅಂಕಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: 2nd PUC Result: ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಅನನ್ಯಾ ರಾಜ್ಯಕ್ಕೆ ಪ್ರಥಮ ಸ್ಥಾನ

  • ಬೇರೆ ಬೇರೆಯವರ ಜೊತೆ ಮದ್ವೆಗೆ ಸಿದ್ಧತೆ – ಅವಳಿ ಸಹೋದರಿಯರು ಆತ್ಮಹತ್ಯೆ

    ಬೇರೆ ಬೇರೆಯವರ ಜೊತೆ ಮದ್ವೆಗೆ ಸಿದ್ಧತೆ – ಅವಳಿ ಸಹೋದರಿಯರು ಆತ್ಮಹತ್ಯೆ

    ಮಂಡ್ಯ: ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಹೆತ್ತವರು ನಿರ್ಧರಿಸಿದ್ದರಿಂದ ಅವಳಿ ಸಹೋದರಿಯರು ಆತ್ಮಹತ್ಯೆಗೆ ಶರಣಾದ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿಲ್ಲ.

    ದೀಪಿಕಾ (19) ಮತ್ತು ದಿವ್ಯ(19) ಆತ್ಮಹತ್ಯೆ ಮಾಡಿಕೊಂಡ ಅವಳಿ ಸಹೋದರಿಯರು. ಈ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಬ್ಯಾಕ್ ಲೇಸ್ ಟಾಪ್ ತೊಟ್ಟ ಟಾಲಿವುಡ್ ಬ್ಯೂಟಿ – ಪಡ್ಡೆ ಹುಡ್ಗರ ನಿದ್ದೆ ಕದ್ದ ಸಮಂತಾ

    ಅವಳಿ ಸಹೋದರಿಯರು ಮದುವೆಯ ವಯಸ್ಸಿಗೆ ಬಂದಿದ್ದರು. ಹೀಗಾಗಿ ಇಬ್ಬರಿಗೂ ಮದುವೆ ಮಾಡಲು ಹೆತ್ತವರು ತೀರ್ಮಾನಿಸಿದರು. ಅಂತೆಯೇ ಇಬ್ಬರಿಗೂ ಬೇರೆ ಬೇರೆ ಮನೆಯಿಂದ ಮದುವೆಯ ಪ್ರಪೋಸಲ್ಸ್ ಕೂಡ ಬಂದಿತ್ತು. ಹೀಗಾಗಿ ಇಬ್ಬರನ್ನ ಬೇರೆ ಬೇರೆಯಾಗಿ ಮದುವೆ ಮಾಡಿಕೊಡಲು ಅವಳಿ ಸಹೋದರಿಯ ಪೋಷಕರು ತೀರ್ಮಾನಿಸಿದರು.

    ಅಂತಿಮ ವರ್ಷದ ಡಿಪ್ಲೊಮಾ ಓದುತ್ತಿದ್ದ ದೀಪಿಕಾ ಹಾಗೂ ದಿವ್ಯಾ ಚಿಕ್ಕಂದಿನಿಂದಲೇ ಅನ್ಯೋನ್ಯತೆಯಿಂದ ಇದ್ದರು. ಆದರೆ ಇದೀಗ ತಮ್ಮನ್ನು ಬೇರೆ ಬೇರೆ ಕಡೆ ಮದುವೆ ಮಾಡಿಕೊಡುತ್ತಾರೆ. ಇದರಿಂದ ನಾವು ಬೇರೆ ಬೇರೆಯಾಗುತ್ತೇವೆ. ಅಲ್ಲದೆ ಈ ಮೂಲಕ ನಮ್ಮ ಬಾಂಧವ್ಯ ಕೂಡ ಕೊನೆಯಾಗುತ್ತದೆ ಎಂದು ನೊಂದ ದೀಪಿಕಾ ಹಾಗೂ ದಿವ್ಯಾ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದು, ಮನೆಯಲ್ಲಿನ ಬೇರೆ ಬೇರೆ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಆನ್ ಲೈನ್ ಕ್ಲಾಸ್ ಇಲ್ಲ, ಶಾಲೆ ಇಲ್ಲ- ಜಿಲ್ಲೆಗೆ ರ್‍ಯಾಂಕ್ ಪಡೆದ ಬಾಲಕ

    ಸದ್ಯ ಕುಟುಂಬಸ್ಥರು ಅವಳಿ ಸಹೋದರಿಯರ ಅಂತ್ಯಕ್ರಿಯೆಯನ್ನು ಒಟ್ಟಿಗೆ ನೆರವೇರಿಸಿದ್ದಾರೆ. ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಒಂದೇ ದಿನ ಹುಟ್ಟಿ, ಒಂದೇ ದಿನ ಕಾರಿನಲ್ಲಿ ಪ್ರಾಣಬಿಟ್ಟ ಅವಳಿ ಸಹೋದರಿಯರು

    ಒಂದೇ ದಿನ ಹುಟ್ಟಿ, ಒಂದೇ ದಿನ ಕಾರಿನಲ್ಲಿ ಪ್ರಾಣಬಿಟ್ಟ ಅವಳಿ ಸಹೋದರಿಯರು

    ಗುರ್‍ಗಾಂವ್: ಅವಳಿ ಸಹೋದರಿಯರು ಒಂದೇ ದಿನ ಸಾವನ್ನಪ್ಪಿರುವ ಘಟನೆ ದೆಹಲಿ ಬಳಿಯ ಗುರ್‍ಗಾಂವ್‍ನಲ್ಲಿ ಬುಧವಾರ ನಡೆದಿದೆ.

    ಐದು ವರ್ಷದ ಹರ್ಷ ಮತ್ತು ಹರ್ಷಿತ ಸಾವನ್ನಪ್ಪಿದ ಕಂದಮ್ಮಗಳು. ಬೇಸಿಗೆ ರಜೆಗೆಂದು ಅಜ್ಜಿಯ ಊರಾದ ಪಟೋಡಿ ವಿಭಾಗದ ಜಮಲ್‍ಪುರ್‍ಗೆ ತೆರಳಿದ್ದರು. ಬುಧವಾರ ಮಧ್ಯಾಹ್ನ ಹರ್ಷ ಮತ್ತು ಹರ್ಷಿತಾ ಆಟ ಆಡುತ್ತಾ ಮನೆಯ ಹಿಂದುಗಡೆಯ ಹುಂಡೈ ಕಾರಿನ ಒಳಗಡೆ ಹೋಗಿದ್ದಾರೆ.

    ಕಾರಿನ ಒಳಗಡೆ ಆಡುವಾಗ ಕಾರ್ ಆಟೋಮೆಟಿಕ್ ಲಾಕ್ ಅಗಿದೆ. ಮಕ್ಕಳು ಕಾರಿನ ಲಾಕ್ ತೆಗೆಯಲು ಪ್ರಯತ್ನಿಸಿದ್ರೂ ಅದು ಓಪನ್ ಆಗಿಲ್ಲ. ಸಂಜೆ 4 ಗಂಟೆಗೆ ಮನೆಯ ಸದಸ್ಯರಿಗೆ ಹರ್ಷ ಮತ್ತು ಹರ್ಷಿತಾ ನಾಪತ್ತೆಯಾಗಿದ್ದು ತಿಳಿದಿದೆ. ಮಕ್ಕಳನ್ನು ಹುಡುಕಲು ಆರಂಭಿಸಿದಾಗ ಕಾರಿನಲ್ಲಿ ಹರ್ಷ ಮತ್ತು ಹರ್ಷಿತಾಳ ದೇಹಗಳು ಪತ್ತೆಯಾಗಿವೆ. ಕೂಡಲೇ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ ಅವಳಿ ಸಹೋದರಿಯರು ಸಾವನ್ನಪ್ಪಿದ್ದಾರೆ.

    ನನ್ನ ಮಕ್ಕಳಿಬ್ರೂ ಹುಟ್ಟಿದಾಗ ನಮ್ಮ ಕುಟುಂಬದಲ್ಲಿ ಸಂತೋಷ ಮನೆ ಮಾಡಿತ್ತು. ಇಬ್ಬರನ್ನು ಮೀರತ್‍ನ ಸೆಂಟ್ರಲ್ ಸ್ಕೂಲ್ ದಾಖಲು ಮಾಡಲಾಗಿತ್ತು. ಮಕ್ಕಳಿಬ್ಬರೂ ತುಂಬಾ ಚೂಟಿಯಾಗಿದ್ದರು ಎಂದು ಮಕ್ಕಳ ತಂದೆ ಗೋವಿಂದ್ ಕಣ್ಣೀರು ಹಾಕುತ್ತಾ ಹೇಳಿದರು.

    ಹರ್ಷ ಮತ್ತು ಹರ್ಷಿತಾ ಒಂದೇ ದಿನ ಹುಟ್ಟಿ ನಮಗೆಲ್ಲ ಖುಷಿ ನೀಡಿದ್ದರು. ಇಬ್ಬರು ಒಂದೇ ದಿನ ಸಾವನ್ನಪ್ತಾರೆ ಎಂದು ಗೊತ್ತಿರಲಿಲ್ಲ ಎಂದು ಮಕ್ಕಳ ಚಿಕ್ಕಪ್ಪ ಕನ್ವಾಲ್ ಸಿಂಗ್ ತಿಳಿಸಿದರು.