Tag: ಅವಳಿ ಮಕ್ಕಳು

  • ಅವಳಿ ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ

    ಅವಳಿ ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ

    ಮೈಸೂರು: ಅವಳಿ ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಮೈಸೂರಿನ ಬಂಡಿಪಾಳ್ಯದಲ್ಲಿ ನಡೆದಿದೆ.

    ಆಶಾ(30), ಅವಳಿ ಮಕ್ಕಳಾದ ಶೌರ್ಯಗೌಡ(8), ಸುಪ್ರೀತ್ ಗೌಡ(8) ಮೃತ ದುರ್ದೈವಿಗಳು. ಆಶಾ ತನ್ನ ಮಕ್ಕಳಿಗೆ ವಿಷ ಕೊಟ್ಟು ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ತದನಂತರ ಆಕೆ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಶಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‍ನೋಟ್ ಬರೆದಿದ್ದಳು.

    ಆಶಾ ತನ್ನ ಡೆತ್‍ನೋಟ್‍ನಲ್ಲಿ, “ನನ್ನ ಸಾವಿಗೆ ನಾನೇ ಕಾರಣ. ನನ್ನ ಕುಟುಂಬಕ್ಕೆ ನನ್ನಿಂದ ಅವಮಾನ ಆಗಿದೆ. ನಾನು ಇದರಿಂದ ದಿನ ಕೊರಗಿ ಸಾಯುವ ಬದಲು ಒಂದೇ ಸಾರಿ ಸಾಯಲು ನಿರ್ಧರಿಸಿದ್ದೇನೆ. ನಾನು ಸತ್ತ ಮೇಲೆ ನನ್ನ ಮಕ್ಕಳು ತಬ್ಬಲಿ ಆಗುತ್ತಾರೆ ಎಂದು ನಾನೇ ಅವರನ್ನು ಕೊಂದಿದ್ದೇನೆ. ಮೂವರನ್ನು ಒಟ್ಟಿಗೆ ಚಿತೆಯಲ್ಲಿ ಸುಟ್ಟು ಹಾಕಿ” ಎಂದು ಮನವಿ ಮಾಡಿಕೊಂಡಿದ್ದಾಳೆ.

    ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೋದರ ಮಾವನಿಂದಲೇ ಅವಳಿ ಮಕ್ಕಳ ಹತ್ಯೆ!

    ಸೋದರ ಮಾವನಿಂದಲೇ ಅವಳಿ ಮಕ್ಕಳ ಹತ್ಯೆ!

    ಹೈದರಾಬಾದ್: ಇಬ್ಬರು ಬುದ್ಧಿಮಾಂದ್ಯ ಮಕ್ಕಳನ್ನು ಸೋದರಮಾವನೇ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್‍ನ ಚೈತನ್ಯಪುರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    12 ವರ್ಷದ ಸೃಜನಾ ರೆಡ್ಡಿ ಹಾಗೂ ವಿಷ್ಣುವರ್ಧನ ರೆಡ್ಡಿ ಕೊಲೆಯಾದ ಅವಳಿ ಮಕ್ಕಳು. ಶುಕ್ರವಾರ ಅವಳಿ ಮಕ್ಕಳನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ತನ್ನ ಸೋದರ ಮಾವನೇ ಮಕ್ಕಳನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮಲ್ಲಿಕಾರ್ಜುನ ರೆಡ್ಡಿಯು ಹೈದರಾಬಾದ್‍ನ ಚೈತನ್ಯಪುರದ ಬಾಡಿಗೆ ಮನೆಯ ವಾಸಿಯಾಗಿದ್ದು, ಶುಕ್ರವಾರ ತನ್ನ ತಂಗಿ ಮಕ್ಕಳನ್ನು ಈಜು ಕಲಿಸುವುದಾಗಿ ಹೇಳಿ ನಲ್ಗೋಂಡ ಜಿಲ್ಲೆಯಿಂದ ಕರೆದುಕೊಂಡು ಬಂದಿದ್ದಾನೆ. ಮನೆಗೆ ಬಂದ ಮಕ್ಕಳನ್ನು ತನ್ನ ಸ್ನೇಹಿತ, ಮನೆಯಲ್ಲಿದ್ದ ಜೊತೆಗಾರ ಟ್ಯಾಕ್ಸಿ ಚಾಲಕನೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ. ಇಂದು ಬೆಳಗ್ಗೆ ಮಕ್ಕಳ ಮೃತದೇಹವನ್ನು ಕಾರಿನಲ್ಲಿ ಸಾಗಿಸುವಾಗ ಮನೆಯ ಮಾಲೀಕ ಗಮನಿಸಿ ಪೊಲೀಸರಿಗೆ ಸುದ್ದಿ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಪೊಲೀಸರು ಹತ್ಯೆಯ ಹಿಂದೆ ಪೋಷಕರ ಕೈವಾಡ ಶಂಕೆ ವ್ಯಕ್ತವಾಗಿ ಲಕ್ಷ್ಮೀ ಹಾಗೂ ಶ್ರೀನಿವಾಸ್‍ರವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ತನ್ನ ಅಣ್ಣ ಈಜು ಕಲಿಸುವ ಸಲುವಾಗಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ. ಇಬ್ಬರೂ ಅವಳಿ ಮಕ್ಕಳಾಗಿದ್ದು ಹುಟ್ಟಿನಿಂದಲೂ ಬುದ್ಧಿಮಾಂದ್ಯರಾಗಿದ್ದರು, ಅಲ್ಲದೇ ಇಬ್ಬರಿಗೂ ಮಾತು ಸಹ ಬರುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ಶನಿವಾರ ಬೆಳಗ್ಗೆ ಮಕ್ಕಳ ಹತ್ಯೆ ಕುರಿತು ಆರೋಪಿ ಮಲ್ಲಿಕಾರ್ಜುನ ರೆಡ್ಡಿ ಹಾಗೂ ಕೃತ್ಯಕ್ಕೆ ಸಹಾಯ ಮಾಡಿದ ಟ್ಯಾಕ್ಸಿ ಚಾಲಕನನ್ನು ಬಂಧಿಸಿದ್ದೇವೆ. ಕೃತ್ಯದಲ್ಲಿ ಆರೋಪಿ ತಂಗಿಯ ಕೈವಾಡ ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

  • 20 ಮುಂಬೈ ವೈದ್ಯರು, 12 ಗಂಟೆ ನಿರಂತರ ಸರ್ಜರಿ ಮಾಡಿ ಸಯಾಮಿ ಮಕ್ಕಳನ್ನ ಬೇರೆ ಮಾಡಿದ್ರು!

    20 ಮುಂಬೈ ವೈದ್ಯರು, 12 ಗಂಟೆ ನಿರಂತರ ಸರ್ಜರಿ ಮಾಡಿ ಸಯಾಮಿ ಮಕ್ಕಳನ್ನ ಬೇರೆ ಮಾಡಿದ್ರು!

    ಮುಂಬೈ: ಒಂದು ವರ್ಷಗಳ ಕಾಲ ಅಂಟಿಕೊಂಟಿದ್ದ ಸಯಾಮಿ ಮಕ್ಕಳನ್ನು 20 ವೈದ್ಯರು 12 ಗಂಟೆಗಳ ಕಾಲ ನಿರಂತರವಾಗಿ ಸರ್ಜರಿ ಮಾಡಿ ಬೇರೆ ಬೇರೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರೀತಿ ಮತ್ತು ರಾಣಿ ಅಂಟಿಕೊಂಡಿದ್ದ ಅವಳಿ ಮಕ್ಕಳು. ವಾಡಿಯಾ ಆಸ್ಪತ್ರೆಯ 20 ವೈದ್ಯರು ಸೇರಿ ಮಂಗಳವಾರ ಆಪರೇಷನ್ ಮಾಡಿ ಬೇರೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಆಸ್ಪತ್ರೆ ಎರಡನೇ ಬಾರಿ ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಿ ಯಶಸ್ಸು ಕಂಡಿರುವುದು ವಿಶೇಷ.

    ಗರ್ಭಿಣಿಯಾಗಿ 5 ತಿಂಗಳಾದ ಮೇಲೆ ಭ್ರೂಣದಲ್ಲಿ ಅವಳಿ ಮಕ್ಕಳು ಇರುವುದು ನನಗೆ ಗೊತ್ತಾಯಿತು. ಅಷ್ಟೇ ಅಲ್ಲದೇ ಇಬ್ಬರ ದೇಹ ಅಂಟಿಕೊಂಡಿರುವ ವಿಚಾರವೂ ತಿಳಿಯಿತು. 2016 ಸೆಪ್ಟಂಬರ್ 19 ರಂದು ನಾನು ಇಬ್ಬರು ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದೆ. ಈ ಸಂದರ್ಭದಲ್ಲಿ ಯಕೃತ್, ಕರಳು ಮತ್ತು ಮೂತ್ರಕೋಶವನ್ನ ಮಕ್ಕಳು ಹಂಚಿಕೊಂಡಿರುವುದು ತಿಳಿಯಿತು. ಹೀಗಾಗಿ ಅವರ ಆರೋಗ್ಯದ ಬಗ್ಗೆ ನಾನು ಭಯಪಟ್ಟಿದ್ದೆ. ಆದರೆ ಮಕ್ಕಳಿಗೆ ಈ ಶಸ್ತ್ರಚಿಕಿತ್ಸೆ ಮಾಡುವ ಮೊದಲು ವಿಶೇಷ ಪರೀಕ್ಷೆ ನಡೆಸಲಾಗಿತ್ತು ಎಂದು ತಾಯಿ ಶೀತಲ್ ಜಾಲ್ಟೆ ತಿಳಿಸಿದರು.

    1 ವರ್ಷ 3 ತಿಂಗಳ ಪ್ರೀತಿ ಮತ್ತು ರಾಣಿ ಅವಳಿ ಮಕ್ಕಳು ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯಕ್ಕೆ ಈ ಮಕ್ಕಳು ಐಸಿಯುನಲ್ಲಿ ಇದ್ದು, ಕೆಲ ಕೆಲವು ದಿನಗಳವರೆಗೆ ಇಲ್ಲೇ ಇರಬೇಕಾಗುತ್ತದೆ. ನಂತರ ಅವರ ಆರೋಗ್ಯ ಸ್ಥಿತಿಯನ್ನ ತಿಳಿದುಕೊಳ್ಳಲು ಅನೇಕ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಮಕ್ಕಳನ್ನು ಚರ್ಮದ ಮೂಲಕ ಕವರ್ ಮಾಡುವುದು ನಮಗೆ ಸವಾಲಿನ ಕೆಲಸವಾಗಿತ್ತು. ಇಂತಹ ಅಪರೂಪದ ಶಸ್ತ್ರಚಿಕಿತ್ಸೆಯಾದ ಬಳಿಕ ಘಾಟ್ಕೋಪಾರ್‍ದಲ್ಲಿರುವ ಜಾಲ್ಟೆ ಕುಟುಂಬ ಇಬ್ಬರು ಮಕ್ಕಳನ್ನು ನೋಡಿ ತುಂಬಾ ಸಂತೋಷಗೊಂಡಿದ್ದಾರೆ ಎಂದು ವಾಡಿಯಾ ಆಸ್ಪತ್ರೆಯ ಸಿಇಓ ಡಾ. ಮಿನ್ನೆ ಬೊಧಾನ್ವಾಲಾ ಹೇಳಿದರು.

  • ವಾಷಿಂಗ್‍ ಮಷೀನ್‍ಗೆ ಬಿದ್ದು 3 ವರ್ಷದ ಅವಳಿ ಮಕ್ಕಳ ದಾರುಣ ಸಾವು

    ವಾಷಿಂಗ್‍ ಮಷೀನ್‍ಗೆ ಬಿದ್ದು 3 ವರ್ಷದ ಅವಳಿ ಮಕ್ಕಳ ದಾರುಣ ಸಾವು

    – ತಾಯಿ ಅಂಗಡಿಗೆ ಹೋದಾಗ ದುರಂತ

    ನವದೆಹಲಿ: ಮೂರು ವರ್ಷ ವಯಸ್ಸಿನ ಅವಳಿ ಮಕ್ಕಳು ವಾಷಿಂಗ್ ಮಷೀನ್‍ನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ.

    ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ರೇಖಾ ಎಂಬವರು ಮನೆಯಲ್ಲಿ ಬಟ್ಟೆ ತೊಳೆಯಲು ವಾಷಿಂಗ್ ಮಿಷನ್‍ಗೆ ನೀರು ತುಂಬಿಸಿದ್ದರು. ಆದ್ರೆ ವಾಷಿಂಗ್ ಪೌಡರ್ ಖಾಲಿಯಾಗಿದ್ದು ನೋಡಿ ಇಬ್ಬರು ಮ್ಕಕಳಾದ ನಿಶಾಂತ್ ಮತ್ತು ನಕ್ಷ್ಯನನ್ನು ಮನೆಯಲ್ಲೇ ಬಿಟ್ಟು ವಾಷಿಂಗ್ ಪೌಡರ್ ತರಲು ಅಂಗಡಿಗೆ ಹೋಗಿದ್ದರು. ಈ ವೇಳೆ ವಾಷಿಂಗ್ ಮಷೀನ್ ಪಕ್ಕದಲ್ಲೇ ಇದ್ದ ಬಟ್ಟೆಯ ರಾಶಿಯ ಮೇಲೆ ಏರಿ ಮಕ್ಕಳು ವಾಷಿಂಗ್ ಮಷೀನ್ ಒಳಗೆ ಬಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ.

    5 ನಿಮಿಷದ ಬಳಿಕ ರೇಖಾ ಮನೆಗೆ ಹಿಂದಿರುಗಿ ಬಂದು ನೋಡಿದಾಗ ಮಕ್ಕಳು ನಾಪತ್ತೆಯಾಗಿದ್ರು. 20 ನಿಮಿಷಗಳ ಬಳಿಕ ಪೊಲೀಸರಿಗೆ ವಿಷಯ ಮುಟ್ಟಿಸಲಾಯ್ತು. ಮಕ್ಕಳ ತಂದೆ ರವೀಂದ್ರ ಕೂಡ ತಕ್ಷಣವೇ ಮನೆಗೆ ಬಂದು ಮಕ್ಕಳನ್ನು ಹುಡುಕಲು ಶುರು ಮಾಡಿದ್ರು. ಬಳಿಕ 12 ರಿಂದ 15 ಲೀಟರ್ ನೀರು ತುಂಬಿಸಲಾಗಿದ್ದ ವಾಷಿಂಗ್ ಮಷೀನ್‍ನಲ್ಲಿ ಮಕ್ಕಳು ಇದ್ದಿದ್ದು ಪತ್ತೆಯಾಗಿತ್ತು.

    ಕೂಡಲೇ ರವೀಂದ್ರ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ರು. ಆದ್ರೆ ಇದನ್ನು ನಂಬಲಾಗದೆ ರವೀಂದ್ರ ಮತ್ತೆ ಮಕ್ಕಳನ್ನ ಜೈಪುರ್ ಗೋಲ್ಡನ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲೂ ವೈದ್ಯರು ಮಕ್ಕಳು ಆಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

    ಸದ್ಯ ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.