Tag: ಅವಳಿ ಜವಳಿ

  • ಅವಳಿ ಮಕ್ಕಳಿಗೆ ಪೋಷಕರಾದ ನಟಿ ಪ್ರೀತಿ ಜಿಂಟಾ ದಂಪತಿ

    ಅವಳಿ ಮಕ್ಕಳಿಗೆ ಪೋಷಕರಾದ ನಟಿ ಪ್ರೀತಿ ಜಿಂಟಾ ದಂಪತಿ

    ಮುಂಬೈ: ಬಾಡಿಗೆ ತಾಯ್ತನದ ಮೂಲಕ ಬಾಲಿವುಡ್ ನಟಿ ಪ್ರೀತಿ ಜಿಂಟಾ ಹಾಗೂ ಅವರ ಪತಿ ಜಿನ್ ಗುಡ್‍ಎನಾಫ್ ಅವಳಿ-ಜವಳಿ ಮಕ್ಕಳಿಗೆ ಪೋಷಕರಾಗಿರುವ ಸಿಹಿ ವಿಚಾರವನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

    Preity Zinta

    ಒಂದು ಕಾಲದಲ್ಲಿ ಬಾಲಿವುಡ್ ಟಾಪ್ ಹೀರೋಹಿನ್ ಆಗಿ ಮಿಂಚಿದ್ದ ನಟಿ ಪ್ರೀತಿ ಜಿಂಟಾ 2016ರಲ್ಲಿ ಜಿನ್ ಗುಡ್‍ಎನಾಫ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿವಾಹದ ಬಳಿಕ ಸಿನಿಮಾದಿಂದ ದೂರ ಉಳಿದರೂ ಪ್ರೀತಿ ಜಿಂಟಾ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಸದ್ಯ ಬಾಡಿಗೆ ತಾಯ್ತನದ ಮೂಲಕ ಪ್ರೀತಿ ಜಿಂಟಾ ಮತ್ತು ಜಿನ್ ಗುಡ್‍ಎನಾಫ್ ಅವಳಿ-ಜವಳಿ ಮಕ್ಕಳಿಗೆ ಪೋಷಕರಾಗಿದ್ದು, ಈ ವಿಚಾರವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾಮಿಲಿ ಜೊತೆಗೆ ಜಾಲಿ ಮೂಡ್‍ನಲ್ಲಿ ಶ್ವೇತಾ ಚೆಂಗಪ್ಪ

     

    View this post on Instagram

     

    A post shared by Preity G Zinta (@realpz)

    ಪತಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿರುವ ಪ್ರೀತಿ ಜಿಂಟಾ, ಎಲ್ಲರಿಗೂ ನಮಸ್ಕಾರ, ಇಂದು ನಾನು ನಿಮ್ಮೆಲ್ಲರೊಂದಿಗೆ ಸಿಹಿ ವಿಚಾರವೊಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ಅವಳಿ ಮಕ್ಕಳಾದ ಜೈ ಜಿಂಟಾ ಗುಡ್‍ಎನಾಫ್ ಮತ್ತು ಜಿಯಾ ಜಿಂಟಾ ಗುಡ್‍ಎನಾಫ್ ರನ್ನು ನಮ್ಮ ಕುಟುಂಬಕ್ಕೆ ಬರಮಾಡಿಕೊಳ್ಳುತ್ತಿರುವುದಕ್ಕೆ ಜೀನ್ ಮತ್ತು ನನಗೆ ತುಂಬಾ ಸಂತೋಷವಾಗುತ್ತಿದೆ ಮತ್ತು ನಮ್ಮ ಹೃದಯ ಕೃತಜ್ಞತೆ ಮತ್ತು ತುಂಬಾ ಪ್ರೀತಿಯಿಂದ ತುಂಬಿವೆ. ನಮ್ಮ ಜೀವನದಲ್ಲಿನ ಈ ಹೊಸ ಪಯಣಕ್ಕೆ ಬಹಳ ಕಾತುರದಿಂದ ಕಾಯುತ್ತಿದ್ದೇವೆ. ಈ ಅದ್ಭುತ ಪ್ರಯಾಣದಲ್ಲಿ ಮಗುವನ್ನು ಪಡೆಯಲು ನೆರವಾದ ವೈದ್ಯರು, ನರ್ಸ್‍ಗಳಿಗೂ ಮತ್ತು ನಮ್ಮ ಬಾಡಿಗೆ ತಾಯಿಗೆ ಹೃತ್ಪೂರ್ವಕವಾದ ಧನ್ಯವಾದಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ

  • ಒಂದೇ ಕಾಲೇಜಿನಲ್ಲಿ ನಾಲ್ಕು ಅವಳಿ ಜೋಡಿಗಳು

    ಒಂದೇ ಕಾಲೇಜಿನಲ್ಲಿ ನಾಲ್ಕು ಅವಳಿ ಜೋಡಿಗಳು

    ತುಮಕೂರು: ಜಿಲ್ಲೆಯ ಕುಣಿಗಲ್‍ನ ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಒಂದೇ ಕಾಲೇಜಿನಲ್ಲಿ ನಾಲ್ಕು ಅವಳಿ ಜೋಡಿ ಓದುತ್ತಿದ್ದು, ಕಾಲೇಜಿನ ವಿಶೇಷ ಆಕರ್ಷಣೆ ಆಗಿದ್ದಾರೆ.

    ಈ ಅವಳಿ-ಜವಳಿ ಜೋಡಿಗಳನ್ನು ನೋಡಿದರೆ ಹುಬ್ಬೇರದವರೇ ಇಲ್ಲ. ಏಕೆಂದರೆ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ವರು ಅವಳಿ ಜವಳಿ ಚಹರೆ ಒಂದೇ ರೀತಿ ಇದೆ. ಅರುಣ್-ವರುಣ್, ಕಾವ್ಯ-ಕವನ, ಸಾನಿಯಾ-ಸಾಧಿಕಾ, ಕವಿತಾ-ಲಾವಣ್ಯ ಜೋಡಿ ನೋಡಿ ಎಲ್ಲರಿಗೂ ಕನ್‍ಫ್ಯೂಶನ್.

    ಈ ನಾಲ್ಕು ಅವಳಿ ಜೋಡಿಗಳ ಕಲರವ ಉಪನ್ಯಾಸಕರು ಹಾಗೂ ಸಹಪಾರಿಗಳಿಗೆ ಅವಳ್ಯಾರು ಇವನ್ಯಾರು ಎಂದು ತಕ್ಷಣಕ್ಕೆ ಗುರುತು ಹಚ್ಚಲು ಆಗದೇ ಪರದಾಡಬೇಕಾಗಿದೆ. ಎಷ್ಟೋ ನಾನು ಅವನಲ್ಲ, ನಾನು ಅವಳಲ್ಲ ಎಂದು ಅವರೇ ಹೇಳಿದ ಬಳಿಕ ಗೊತ್ತಾಗಿರುವ ಪ್ರಸಂಗಗಳು ನಡೆದಿವೆ.

    ಈ ಅವಳಿ ಜೋಡಿಗಳ ಇನ್ನೊಂದು ವಿಶೇಷ ಅಂದರೆ ಒಂದೇ ರೀತಿಯ ಯೂನಿಫಾರ್ಮ್, ಒಂದೇ ರೀತಿ ಹೇರ್ ಸ್ಟೈಲ್, ಒಂದೇ ರೀತಿಯ ಮಾತುಕತೆ. ಅದು ಅಲ್ಲದೇ ಯಾವಾಗಲೂ ಜೊತೆ ಜೊತೆಯಲ್ಲೇ ಇರುತ್ತಾರೆ. ಪರೀಕ್ಷೆ ವೇಳೆಯಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ವಿಶೇಷವಾಗಿ ” ಕುಟುಂಬ” ಪಾಠ ಮಾಡಲಾಗತ್ತದೆ.


    ಶಿಕ್ಷಕರು, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಗುಣಮಟ್ಟ ಹೆಚ್ಚಿಸಲು ಕಾಳಜಿ ವಹಿಸಿದರೆ, ಇದೇ ಕಾಲೇಜಿನ ನಾಲ್ವರು ಅವಳಿ ಜೋಡಿಗಳು ಆ ಕಾಲೇಜಿನ ವಿಶೇಷ ಆಕರ್ಷಣೆಯಾಗಿದ್ದಾರೆ. ಒಂದೇ ಕಾಲೇಜಿನಲ್ಲಿ ಬರೋಬ್ಬರಿ ನಾಲ್ಕು ಜೋಡಿ ಅವಳಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರೋದ್ರಿಂದ ಕಾಲೇಜಿನ ವಿಶೇಷತೆಯೂ ಹೆಚ್ಚಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv