Tag: ಅವಳಿ

  • 19 ವರ್ಷದ ನಂತರ ಒಂದಾದ ಟ್ವಿನ್ಸ್- ಜಾರ್ಜಿಯಾದಲ್ಲಿ ಇಂದಿಗೂ ಬಗೆಹರಿಯದ ಕದ್ದು ಮಾರಾಟವಾದ ಮಕ್ಕಳ ಸಂಖ್ಯೆ

    19 ವರ್ಷದ ನಂತರ ಒಂದಾದ ಟ್ವಿನ್ಸ್- ಜಾರ್ಜಿಯಾದಲ್ಲಿ ಇಂದಿಗೂ ಬಗೆಹರಿಯದ ಕದ್ದು ಮಾರಾಟವಾದ ಮಕ್ಕಳ ಸಂಖ್ಯೆ

    -ಹುಟ್ಟಿನಿಂದ ಬೇರ್ಪಟ್ಟು, ಒಂದೇ ನಗರದಲ್ಲಿ ವಾಸವಿದ್ದ ಅವಳಿಗಳು

    ಅಟ್ಲಾಂಟ: ಹುಟ್ಟಿನಿಂದ ಬೇರ್ಪಟ್ಟು ಒಂದೇ ನಗರದಲ್ಲಿ ವಾಸವಿದ್ದ ಅವಳಿಗಳು (Twins) 19 ವರ್ಷದ ನಂತರ ಒಂದಾಗಿರುವ ಘಟನೆ ಪೂರ್ವ ಯುರೋಪಿಯನ್ ದೇಶ ಜಾರ್ಜಿಯಾದಲ್ಲಿ (Georgia) ನಡೆದಿದೆ.

    ಬೇರ್ಪಟ್ಟಿದ್ದು ಹೇಗೆ?
    ಆಮಿ ಖ್ವಿಟಿಯಾ ಮತ್ತು ಅನೋ ಸರ್ತಾನಿಯಾ ಬೇರ್ಪಟ್ಟಿದ್ದ ಅವಳಿ ಸಹೋದರಿಯರು. ಅವಳಿ ಮಕ್ಕಳ ತಾಯಿಯಾದ ಅಜಾ ಶೋನಿ ಅವರು 2002 ರಲ್ಲಿ ಆಮಿ ಮತ್ತು ಅನೋ ಎಂಬ ಅವಳಿ ಹೆಣ್ಣುಮಕ್ಕಳಿಗೆ ಜಾರ್ಜಿಯಾ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಅದರೆ ಅವರು ಮಕ್ಕಳ ಜನ್ಮ ತೂಡಕುಗಳಿಂದ ಕೋಮಾಗೆ ಜಾರಿದ್ದಾರೆ. ಆಕೆಯ ಗಂಡನಾದ ಗೋಚಾ ಗಖಾರಿಯಾ ಅವಳಿ ಹೆಣ್ಣುಮಕ್ಕಳನ್ನು ಆ ಪ್ರತ್ಯೇಕ ಕುಟುಂಬಗಳಿಗೆ ಮಾರಾಟ ಮಾಡಿ ಬೇರ್ಪಡಿಸಿದ್ದ. ಆದರೆ ಅವರು ಒಂದೇ ನಗರದಲ್ಲಿ ಸುಮಾರು 19 ವರ್ಷಗಳ ಕಾಲ ವಾಸವಿದ್ದರು. ಇದನ್ನೂ ಓದಿ:  ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ; ಮೊದಲ ಪಟ್ಟಿ ರಿಲೀಸ್

    ಒಂದಾಗಿದ್ದು ಹೇಗೆ?
    ಅನೋಳನ್ನು ಟಿಬಿಲಿಸಿ ಎಂಬವರು ಪೋಷಣೆ ಮಾಡುತ್ತಿದ್ದರು. ಆದರೆ ಅನೋಳಿಗೆ ಅವಳಿ ಸಹೋದರಿ ಇದ್ದಾಳೆ ಎಂಬುದರ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಅಥವಾ ಸುಳಿವು ಇರಲಿಲ್ಲ. ಒಂದು ದಿನ ಆಮಿಯ ಅಚ್ಚುಮೆಚ್ಚಿನ ಟಿವಿ ಶೋ ಆದ “ಜಾರ್ಜಿಯಾಸ್ ಗಾಟ್ ಟ್ಯಾಲೆಂಟ್” ಅನ್ನು ವೀಕ್ಷಿಸುವಾಗ ಮಗಳ ಹೋಲಿಕೆ ಹೊಂದಿರುವ ಹುಡುಗಿಯೊಬ್ಬಳು ನೃತ್ಯ ಮಾಡುವುದನ್ನು ನೋಡಿ ಆಶ್ಚರ್ಯವಾಗಿದ್ದಾರೆ. ಅಂದು ಅವರಿಗೆ ಆಕೆ ಅನೋಳ ಸಹೋದರಿ ಎಂಬುದು ತಿಳಿದಿರಲಿಲ್ಲ. ನಂತರ ಅವರು ವೈರಲ್ ಟಿಕ್‌ಟಾಕ್ ಮತ್ತು ಟ್ಯಾಲೆಂಟ್ ಶೋ ಮೂಲಕ ಪರಿಚಯವಾಗಿ, ಇಬ್ಬರೂ ಅವಳಿ ಸಹೋದರಿಯರು 19 ವರ್ಷದ ಬಳಿಕ ಒಂದಾಗಿದ್ದಾರೆ. ಇದನ್ನೂ ಓದಿ: 2024ರಲ್ಲಿ ಅಣು ಬಾಂಬ್ ಸ್ಫೋಟಗೊಳ್ಳುವ ಸಾಧ್ಯತೆ ಇದೆ: ಕೋಡಿಮಠ ಸ್ವಾಮೀಜಿ ಭವಿಷ್ಯ 

    ಈ ಪ್ರಕರಣದೊಂದಿಗೆ ಅಚ್ಚರಿದಾಯಕ ಅಂಶವೊಂದು ಬಹಿರಂಗಗೊಂಡಿದೆ. ಜಾರ್ಜಿಯನ್ ಆಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ಮಕ್ಕಳನ್ನು ಕದ್ದು ಮಾರಾಟ ಮಾಡಲಾಗುತ್ತಿದೆ. ಈವರೆಗೂ ಮಾರಾಟವಾದ ಸಾವಿರಾರು ಶಿಶುಗಳಲ್ಲಿ ಇವರೂ ಸೇರಿದ್ದಾರೆ. ಇತ್ತೀಚೆಗೆ ಕೂಡ ಜಾರ್ಜಿಯಾದಲ್ಲಿ ಇದೇ ರೀತಿ ಪ್ರಕರಣಗಳು ದಾಖಲಾಗಿವೆ. ಜಾರ್ಜಿಯಾದಿಂದ ಕದ್ದು ಮಾರಾಟವಾದ ಮಕ್ಕಳ ಸಂಖ್ಯೆಯ ಸಮಸ್ಯೆ ಬಗೆಹರಿಯದೆ ಹಲವು ದಶಕಗಳಿಂದ ಹಾಗೆ ಉಳಿದಿದೆ. ಇಂದಿಗೂ ಕೂಡ ಜಾರ್ಜಿಯಾವನ್ನು ಈ ಸಮಸ್ಯೆ ಬಾಧಿಸುತ್ತಿದೆ. ಈ ಸಮಸ್ಯೆ ಮೇಲೆ ಅವಳಿ ಸಹೋದರಿಯರ ಘಟನೆ ಬೆಳಕು ಚೆಲ್ಲುತ್ತದೆ. ಜಾರ್ಜಿಯಾದ ಆಸ್ಪತ್ರೆಗಳಲ್ಲಿ ಎಷ್ಟು ಮಕ್ಕಳನ್ನು ಕದ್ದು ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿಲ್ಲ. ಇದನ್ನೂ ಓದಿ: ಸಂಘಟನೆ ಕೆಲಸದಲ್ಲಿ ತೊಡಗಿಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡ್ತೇನೆ: ಜಗದೀಶ್ ಶೆಟ್ಟರ್

  • ವೈದ್ಯ ಲೋಕಕ್ಕೇ ಶಾಕ್ – 36 ವರ್ಷಗಳ ಕಾಲ ಪ್ರೆಗ್ನೆಂಟ್ ಆಗಿದ್ದ ಈ ವ್ಯಕ್ತಿ!

    ವೈದ್ಯ ಲೋಕಕ್ಕೇ ಶಾಕ್ – 36 ವರ್ಷಗಳ ಕಾಲ ಪ್ರೆಗ್ನೆಂಟ್ ಆಗಿದ್ದ ಈ ವ್ಯಕ್ತಿ!

    ಮುಂಬೈ: ವೈದ್ಯಕೀಯ ಲೋಕದಲ್ಲಿ ಅದೆಷ್ಟೋ ವಿಚಿತ್ರ ವಿದ್ಯಮಾನಗಳು ಘಟಿಸಿವೆ. ಹುಟ್ಟುವ ಮಕ್ಕಳು ಕೆಲವೊಮ್ಮ ಅಂಗವಿಕಲವಾಗಿ ಹುಟ್ಟುವುದು, ಇನ್ನೂ ಕೆಲವೊಮ್ಮೆ ಹೆಚ್ಚಿನ ಅಂಗಗಳನ್ನು ಹೊಂದಿ ವಿಸ್ಮಯ ಮೂಡಿಸಿರುವುದೂ ಇದೆ. ಇದೇ ರೀತಿ ಅವಳಿ ಮಕ್ಕಳ ಅಂಗಗಳು ಸೇರಿಕೊಂಡು ಹುಟ್ಟಿ ವೈದ್ಯಕೀಯ ಲೋಕಕ್ಕೆ ಸವಾಲು ಹಾಕಿರುವುದೂ ಇದೆ. ಇಲ್ಲೊಬ್ಬ ವ್ಯಕ್ತಿ ತನ್ನದೇ ಟ್ವಿನ್ಸ್‌ಗೆ (Twins) 36 ವರ್ಷಗಳ ಕಾಲ ಗರ್ಭ ಧರಿಸಿದ್ದ (Pregnant) ಬಲು ಅಪರೂಪದ ಪ್ರಕರಣವನ್ನು ತಡವಾಗಿ ಪತ್ತೆಹಚ್ಚಿದ್ದಾರೆ.

    ನಾಗ್ಪುರದ (Nagpur) 60 ವರ್ಷದ ವ್ಯಕ್ತಿಯೊಬ್ಬರು 3 ದಶಕಗಳಿಗೂ ಹೆಚ್ಚು ವರ್ಷಗಳ ಕಾಲ ತನ್ನ ದೊಡ್ಡ ಹೊಟ್ಟೆಯೊಂದಿಗೆ ಬದುಕಿದ್ದು, ಆತನನ್ನು ಗರ್ಭಿಣಿ ಎಂದೇ ಜನರು ಗೇಲಿ ಮಾಡುತ್ತಿದ್ದರು. ದಿ ಡೈಲಿ ಸ್ಟಾರ್ ಪ್ರಕಾರ, ಜೀವನೋಪಾಯಕ್ಕೆ ಕಷ್ಟಪಟ್ಟು ದುಡಿಯುತ್ತಿದ್ದ ಭಗತ್ ತನ್ನ ದೊಡ್ಡ ಹೊಟ್ಟೆಯನ್ನು ನಿರ್ಲಕ್ಷಿಸಿದ್ದ. ಆತನ ಗೆಳೆಯರು, ಕುಟುಂಬಸ್ಥರು ಕೂಡಾ ಆತನ ದೊಡ್ಡ ಹೊಟ್ಟೆಯ ಬಗ್ಗೆ ಹೀಯಾಳಿಸುತ್ತಿದ್ದರು. ಆದರೂ ಎಲ್ಲವನ್ನೂ ಸಹಿಸಿಕೊಂಡು ಆತ ತನ್ನ ದಿನ ದೂಡಿಕೊಂಡಿದ್ದ.

    ಆದರೆ ಭಗತ್‌ಗೆ 1999ರಲ್ಲಿ ಹೊಟ್ಟೆಯ ಭಾರೀ ಉಬ್ಬಿನಿಂದಾಗಿ ಉಸಿರಾಡುವುದೇ ಕಷ್ಟವಾಗತೊಡಗಿತು. ಕೊನೆಗೂ ಆತ ಮುಂಬೈನ ಆಸ್ಪತ್ರೆಗೆ ದಾಖಲಾದ. ಆದರೆ ಆತನಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ದೊಡ್ಡ ಅಚ್ಚರಿಯೇ ಕಾದಿತ್ತು. ಭಗತ್‌ನ ವೈದ್ಯಕೀಯ ಸ್ಥಿತಿ ಅಪರೂಪದಲ್ಲೇ ಅಪರೂಪವಾಗಿತ್ತು.

    ಭಗತ್‌ನನ್ನು ಪರೀಕ್ಷೆಗೆ ಒಳಪಡಿಸಿದ ಡಾ. ಅಜಯ್ ಮೆಹ್ತಾ, ಆರಂಭದಲ್ಲಿ ಆತನ ಹೊಟ್ಟೆಯಲ್ಲಿ ದೊಡ್ಡ ಗಡ್ಡೆ ಇರುವುದಾಗಿ ಊಹಿಸಿಕೊಂಡರು. ಆತನ ಹೊಟ್ಟೆಯನ್ನು ಸೀಳಿ ತೆರೆದಾಗಿ ಇದೊಂದು ಕ್ಯಾನ್ಸರ್‌ನ ಗಡ್ಡೆ ಎಂದು ಭಾವಿಸಿದರು. ಅದನ್ನು ಹೊರತೆಗೆಯಲು ಪ್ರಯತ್ನಿಸಿದಾಗ ಅಲ್ಲಿ ಇನ್ನೊಂದು ಅಪೂರ್ಣ ಮಾನವನೇ ಇರೋದನ್ನು ಕಂಡು ಬೆರಗಾದರು. ಇದನ್ನೂ ಓದಿ: ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು

    ಭಗತ್‌ನ ಹೊಟ್ಟೆಯಲ್ಲಿದ್ದ ವಸ್ತುವಿನಲ್ಲಿ ಹಲವು ಅಂಗಗಳಿದ್ದವು. ಒಂದೊಂದೇ ಅಂಗಗಳು ಹೊರ ಬಂದಿದ್ದವು. ಜನನಾಂಗದ ಕೆಲವು ಭಾಗಗಳು, ಕೂದಲಿನ ಕೆಲವು ಭಾಗಗಳು, ಕೆಲ ಅಂಗಗಳು, ದವಡೆ, ಕೈ-ಕಾಲುಗಳು ಹಾಗೂ ಅದರಲ್ಲಿ ಕೂದಲು ಸಹ ಇತ್ತು. ಇದನ್ನು ನೋಡಿ ಗಾಬರಿಗೊಂಡೆವು. ಗೊಂದಲ, ಆಶ್ಚರ್ಯ, ಭಯಾನಕತೆ ಎಲ್ಲವೂ ಆ ಸಂದರ್ಭದಲ್ಲಿತ್ತು ಎಂದು ವೈದ್ಯರು ತಿಳಿಸಿದ್ದರು.

    ತನ್ನದೇ ಟ್ವಿನ್ಸ್‌ಗೆ ಗರ್ಭ ಧರಿಸಿದ್ದು ಹೇಗೆ?
    ಭಗತ್‌ನ ಪ್ರಕರಣದಲ್ಲಿ ಆತನ ಅವಳಿ ತನ್ನದೇ ಹೊಟ್ಟೆಯೊಳಗೆ ಬೆಳೆದಿತ್ತು. ಅದು ಆತನ ಗಮನಕ್ಕೆ ಬಂದಿರಲಿಲ್ಲ. ಆದರೆ ಆ ಅವಳಿ ಅಪೂರ್ಣವಾಗಿ ನಿರ್ಜೀವಾವಸ್ಥೆಯಲ್ಲಿತ್ತು. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಇದನ್ನು ಫೆಟಸ್-ಇನ್-ಫೀಟು (FIF) ಎಂದು ಕರೆಯಲಾಗುತ್ತದೆ. ಇಂತಹ ಪ್ರಕರಣಗಳು ಅತಿ ಅಪರೂಪದ್ದಾಗಿದೆ. ಒಂದು ದೋಷಪೂರಿತ ಕಶೇರುಕ ಭ್ರೂಣ ಅದರ ಅವಳಿ ದೇಹದೊಳಗೆ ಸುತ್ತುವರಿಯಲ್ಪಟ್ಟಾಗ ಇಂತಹ ಪ್ರಕರಣಗಳಾಗುತ್ತವೆ. ಇಲ್ಲಿಯವರೆಗೆ ಇಂತಕ 100ಕ್ಕೂ ಕಡಿಮೆ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿದ ಒತ್ತಡ; ಸಾರ್ವಜನಿಕರ ಎದುರೇ ಆಧಾರ್ ಕೇಂದ್ರದ ಸಿಬ್ಬಂದಿ ಕಣ್ಣೀರು

  • 2 ತಿಂಗಳಿಂದ ನನ್ನ ಮಕ್ಕಳು ಕಾಣ್ತಿಲ್ಲ: ಸಿಎಂ, ಗೃಹ ಸಚಿವರಿಗೆ ಪತ್ರ ಬರೆದ ಅವಳಿ ಸಹೋದರಿಯರ ತಂದೆ

    2 ತಿಂಗಳಿಂದ ನನ್ನ ಮಕ್ಕಳು ಕಾಣ್ತಿಲ್ಲ: ಸಿಎಂ, ಗೃಹ ಸಚಿವರಿಗೆ ಪತ್ರ ಬರೆದ ಅವಳಿ ಸಹೋದರಿಯರ ತಂದೆ

    ಗಾಂಧೀನಗರ: ಕಳೆದ 2 ತಿಂಗಳಿಂದ ನನ್ನ ಅವಳಿ ಮಕ್ಕಳು ಕಾಣೆಯಾಗಿದ್ದಾರೆಂದು ಗುಜರಾತ್‌ (Gujarat) ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ವ್ಯಕ್ತಿಯೊಬ್ಬ ಪತ್ರ ಬರೆದಿರುವ ಘಟನೆ ನಡೆದಿದೆ.

    ವಡೋದರ (Vadodara) ನಿವಾಸಿ ಚಿಮನ್‌ ಎಂಬಾತನ ಮಕ್ಕಳಾದ ಪದವಿ ಓದುತ್ತಿರುವ ಶೀತಲಾ ಹಾಗೂ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿರುವ ಸರಿಕಾ ಕಾಣೆಯಾಗಿರುವ ಅವಳಿ ಸಹೋದರಿಯರು. ಎಂದಿನಂತೆ ಕಾಲೇಜಿಗೆ ಹೋಗಿದ್ದ ಇಬ್ಬರು ಸಹೋದರಿಯರು ಫೆ.17 ರಿಂದ ನಾಪತ್ತೆಯಾಗಿದ್ದಾರೆ. ಮಕ್ಕಳಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದ ತಂದೆ ಕೊನೆಗೆ ಸಯಾಜಿಗಂಜ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ನಿಷೇಧಿತ ಪಿಎಫ್‍ಐನ ಇಬ್ಬರು ಮುಖಂಡರ ಬಂಧನ

    ಆದರೆ, 25 ದಿನಗಳು ಕಳೆದರೂ ಪೊಲೀಸರಿಂದ ಯಾವುದೇ ತೃಪ್ತಿಕರ ಉತ್ತರ ಸಿಗದ ಕಾರಣ ಚಿಮನ್‌ ನಂತರ ಪೊಲೀಸ್ ಕಮಿಷನರ್ ಅವರನ್ನು ಸಂಪರ್ಕಿಸಿದರು. ಪ್ರಕರಣವನ್ನು ವಡೋದರಾ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಯಿತು.

    51 ದಿನಗಳು ಕಳೆದರೂ ಅವರ ಇಬ್ಬರು ಪುತ್ರಿಯರ ಗುರುತು ಪತ್ತೆಯಾಗದ ಕಾರಣ ಹತಾಶರಾದ ಚಿಮನ್ ಈಗ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಮತ್ತು ಗೃಹ ಸಚಿವ ಹರ್ಷ ಶಾಂಘ್ವಿಗೆ (Harsh Shanghvi) ಪತ್ರ ಬರೆದಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಸಹೋದರಿಯರ ವಾಟ್ಸ್‌ ಆ್ಯಪ್ ಚಾಟ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಭರ್ಜರಿ ಭೇಟೆ – ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

    ನನ್ನ ಇಬ್ಬರು ಮಕ್ಕಳ ಬಗ್ಗೆ ಇನ್ನೂ ಕುರುಹು ಸಿಕ್ಕಿಲ್ಲ. ಅವರ ಬಗ್ಗೆ ಪೊಲೀಸರಿಂದ ಮಾಹಿತಿ ಸಿಗಬಹುದು ಎಂಬ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿದ್ದೇನೆ. ನಿತ್ಯ ಆತಂಕದಿಂದಲೇ ದಿನ ದೂಡುತ್ತಿದ್ದೇನೆ ಎಂದು ನಾಪತ್ತೆಯಾಗಿರುವ ಸಹೋದರಿಯರ ತಂದೆ ನೊಂದು ನುಡಿದಿದ್ದಾರೆ.

  • ಅವಳಿ ಮಕ್ಕಳಿಗೆ ಜನ್ಮ ನೀಡಿದ ಕನ್ನಡದ  ಮತ್ತೋರ್ವ ನಟಿ ನಮಿತಾ

    ಅವಳಿ ಮಕ್ಕಳಿಗೆ ಜನ್ಮ ನೀಡಿದ ಕನ್ನಡದ ಮತ್ತೋರ್ವ ನಟಿ ನಮಿತಾ

    ವಿಚಂದ್ರನ್ ನಟನೆಯ ‘ಹೂ’ ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ನಮಿತಾ ಕೃಷ್ಣ ಜನ್ಮಾಷ್ಟಮಿ ದಿನದಂದೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ನಮಿತಾ ಅವರೇ ಸೋಷಿಯಲ್ ಮೀಡಿಯಾದ ಮೂಲಕ ಬಹಿರಂಗ ಪಡಿಸಿದ್ದಾರೆ. ಪತಿಯ ಜೊತೆ ಅವಳಿ ಮಕ್ಕಳ ಪೋಟೋವನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ.

    ನಾಲ್ಕು ವರ್ಷಗಳ ಹಿಂದೆ ನಮಿತಾ ಅವರಿಗೆ ಮದುವೆ ಆಗಿತ್ತು. 2017ರಲ್ಲಿ ಚೆನ್ನೈ ಮೂಲದ ವೀರೇಂದ್ರ ಚೌಧರಿ ಅವರ ಜೊತೆ ನಟಿ ಹಸೆಮಣೆ ಏರಿದ್ದರು. ಇತ್ತೀಚೆಗಷ್ಟೇ ಅವರು ಬೇಬಿ ಪಂಪ್ ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದರು. ಸಾಕಷ್ಟು ಅಭಿಮಾನಿಗಳು ನೆಚ್ಚಿನ ನಟಿಗೆ ಶುಭ ಹಾರೈಸಿದ್ದರು. ಮದುವೆಯ ನಂತರ ಸಿನಿಮಾ ರಂಗದಿಂದ ನಮಿತಾ ದೂರವಿದ್ದರೂ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅವರು ಹೊಂದಿದ್ದರು. ಇದನ್ನೂ ಓದಿ:ಉದಯ್‌ ಹಿಂಬದಿಯಿಂದ ತಬ್ಬಿ ಕಿಸ್‌ ಮಾಡ್ತಾರೆ: ಬಿಗ್‌ ಬಾಸ್‌ ಮನೆಯಲ್ಲಿ ಮಹಿಳಾ ಸ್ಪರ್ಧಿಗಳು ಗರಂ

    ನಮಿತಾ ಮೂಲತಃ ಗುಜರಾತ್ ಮೂಲದವರು ಆಗಿದ್ದರು, ಹೆಚಚ್ಉ ಫೇಮಸ್ ಆಗಿದ್ದ ತೆಲುಗು ಸಿನಿಮಾ ರಂಗದ ಮೂಲಕ ಆನಂತರ ಕನ್ನಡ ಸಿನಿಮಾ ರಂಗಕ್ಕೂ ಕಾಲಿಟ್ಟ ಅವರು, ರವಿಚಂದ್ರನ್ ಸೇರಿದಂತೆ ಅನೇಕ ಕಲಾವಿದರ ಚಿತ್ರದಲ್ಲಿ ನಟಿಸಿದ್ದಾರೆ. ಸೊಂತಮ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಂದೆಯ ಕ್ಲೀನ್ ಶೇವ್ ನೋಡಿ ಅವಳಿ ಮಕ್ಕಳ ಕಣ್ಣೀರು- ವೀಡಿಯೋ ವೈರಲ್

    ತಂದೆಯ ಕ್ಲೀನ್ ಶೇವ್ ನೋಡಿ ಅವಳಿ ಮಕ್ಕಳ ಕಣ್ಣೀರು- ವೀಡಿಯೋ ವೈರಲ್

    ತಂದೆ ತಲೆ ಕೂದಲು, ಗಡ್ಡ ಬೋಳಿಸಿಕೊಂಡಿರುವುದ್ದನ್ನು ನೋಡಿ ಗುರುತು ಸಿಗದೇ ಅವಳಿ ಜವಳಿ ಹೆಣ್ಣು ಮಕ್ಕಳು ಹೆದರಿ ಅತ್ತಿರುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಟಿಕ್‍ಟಾಕ್ ಬಳಕೆದಾರರಾದ ಜೊನಾಥನ್ ನಾರ್ಮೊಯ್ಲ್ ಎಂಬ ವ್ಯಕ್ತಿ ತಲೆ ಕೂದಲು ಮತ್ತು ಗಡ್ಡ ತೆಗೆದ ತಂದೆಯ ಹೊಸ ಲುಕ್ ನೋಡಿದ ಇಬ್ಬರು ಹೆಣ್ಣು ಮಕ್ಕಳು ಅವರನ್ನು ಅಪರಿಚಿತರೆಂದು ಭಾವಿಸಿಕೊಂಡು ಗಳಗಳನೇ ಅತ್ತಿದ್ದಾರೆ.

    ವೈರಲ್ ಆಗಿರುವ ವೀಡಿಯೋನಲ್ಲಿ ಇಬ್ಬರು ಹೆಣ್ಣು ಮಕ್ಕಳು ಸೋಫಾದ ಮೇಲೆ ಕುಳಿತುಕೊಂಡಿರುತ್ತಾರೆ. ಈ ವೇಳೆ ತಂದೆಯನ್ನ ಮಕ್ಕಳು ದಿಟ್ಟಿಸಿ ನೋಡುತ್ತಿರುವ ವೇಳೆ ಜೊನಾಥನ್ ನಾರ್ಮೊಯ್ಲ್ ಮಾತಾನಾಡಿಸಲು ಮುಂದಾಗುತ್ತಾರೆ. ಹಾಯ್, ಇಬ್ಬರು ಏನು ಮಾಡುತ್ತಿದ್ದೀರಾ? ಎಂದು ಕೇಳುತ್ತಾರೆ ಇದರಿಂದ ಭಯಭೀತರಾದ ಮಕ್ಕಳಿಬ್ಬರು ಒಬ್ಬರ ನಂತರ ಒಬ್ಬರು ಅಳಲು ಪ್ರಾರಂಭಿಸುತ್ತಾರೆ.

    https://twitter.com/Aqualady6666/status/1367372395762229248

    ಬಳಿಕ ತಂದೆ ಮಗುವೊಂದಕ್ಕೆ ಎತ್ತಿಕೊಳ್ಳುವುದಾಗಿ ಕೈಚಾಚುತ್ತಾರೆ. ಈ ವೇಳೆ ಮತ್ತೊಂದು ಮಗು ತನ್ನ ಸಹೋದರಿಗೆ ಹೋಗದಂತೆ ಕೈ ಅಡ್ಡವಿಟ್ಟು ರಕ್ಷಣೆ ಮಾಡುತ್ತದೆ. ಸದ್ಯ 37 ಸೆಕೆಂಡ್ ಇರುವ ಈ ಮುದ್ದು ಮುಖದ ಮಕ್ಕಳ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, 45 ಲಕ್ಷಕ್ಕೂ ಅಧಿಕ ವಿವ್ಸ್ ಪಡೆದುಕೊಂಡಿದೆ ಹಾಗೂ 1.8 ಲಕ್ಷ ಲೈಕ್ಸ್ ಮತ್ತು 44,000 ಕಮೆಂಟ್ಸ್ ಪಡೆದುಕೊಂಡಿದೆ.