Tag: ಅವಲಕ್ಕಿ

  • ಮೃದುವಾದ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

    ಮೃದುವಾದ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

    ಕ್ಕಿ ರೊಟ್ಟಿಯನ್ನು ಸಾಮಾನ್ಯವಾಗಿ ನಾವು ಸವಿದಿರುತ್ತೇವೆ. ಸ್ವಲ್ಪ ಗಟ್ಟಿಯಾಗಿರುವ ಅಕ್ಕಿ ರೊಟ್ಟಿಯನ್ನು ಮೃದುವಾಗಿ ಹೇಗೆ ಮಾಡಬಹುದು ಎಂದು ನಿಮಗೆ ಗೊತ್ತಾ? ಅವಲಕ್ಕಿಯನ್ನು ಬಳಸಿ ಸುಲಭವಾಗಿ ರೊಟ್ಟಿಯನ್ನು ಮೃದುವಾಗಿ ಮಾಡಬಹುದು ಎಂಬುದು ನಿಮಗೆ ಇಲ್ಲಿಯವರೆಗೆ ತಿಳಿದಿರಲಿಲ್ಲವೆಂದರೆ ಒಮ್ಮೆ ಈ ರೆಸಿಪಿ ನೋಡಿ ನೀವೂ ಟ್ರೈ ಮಾಡಿ. ಮೃದುವಾದ ಅವಲಕ್ಕಿ ರೊಟ್ಟಿಯನ್ನೂ ನೀವು ಖಂಡಿತವಾಗಿಯೂ ಇಷ್ಟಪಡುತ್ತೀರಿ.

    ಬೇಕಾಗುವ ಪದಾರ್ಥಗಳು:
    ಪೋಹಾ/ಅವಲಕ್ಕಿ – 1 ಕಪ್
    ಅಕ್ಕಿ ಹಿಟ್ಟು – 1 ಕಪ್
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ಸಣ್ಣಗೆ ಕತ್ತರಿಸಿದ ಕರಿ ಬೇವಿನ ಎಲೆಗಳು – ಸ್ವಲ್ಪ
    ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಶುಂಠಿ – 1 ಇಂಚು
    ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 2
    ಜೀರಿಗೆ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಬಿಸಿ ನೀರು – ಬೆರೆಸಲು
    ಎಣ್ಣೆ – 1 ಕಪ್ ಇದನ್ನೂ ಓದಿ: ಕ್ರಿಸ್ಪಿ ಪನೀರ್ ಫ್ರೈ ಮಾಡುವುದು ತುಂಬಾ ಸುಲಭ

    ಮಾಡುವ ವಿಧಾನ:
    * ಮೊದಲಿಗೆ, ಒಂದು ಬಟ್ಟಲಿನಲ್ಲಿ ಅವಲಕ್ಕಿಯನ್ನು ತೆಗೆದುಕೊಂಡು 10 ನಿಮಿಷ ನೀರಿನಲ್ಲಿ ನೆನೆಸಿಡಿ.
    * ಬಳಿಕ ಅವಲಕ್ಕಿಯನ್ನು ನೀರಿನಿಂದ ತೆಗೆದು ಇನ್ನೊಂದು ಪಾತ್ರೆಗೆ ವರ್ಗಾಯಿಸಿ.
    * ಈಗ ಅದಕ್ಕೆ ಅಕ್ಕಿ ಹಿಟ್ಟು, ಈರುಳ್ಳಿ, ಕೆಲವು ಕರಿ ಬೇವಿನ ಎಲೆಗಳು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
    * ಶುಂಠಿ, ಮೆಣಸಿನಕಾಯಿ, ಜೀರಿಗೆ ಮತ್ತು ಉಪ್ಪು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
    * ಅವಲಕ್ಕಿಯನ್ನು ಆದಷ್ಟು ಹಿಸುಕಿ, ಬಿಸಿನೀರನ್ನು ಸೇರಿಸುತ್ತಾ ದಪ್ಪ ಹಿಟ್ಟನ್ನಾಗಿ ಮಾಡಿಕೊಳ್ಳಿ.
    * ಈಗ ಬಾಳೆ ಎಲೆಗಳನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ, ಚೆಂಡಿನ ಗಾತ್ರದ ಹಿಟ್ಟನ್ನು ಅದಕ್ಕೆ ಹಾಕಿ ನಿಧಾನವಾಗಿ ಕೈಯಿಂದ ಹರಡಿ. (ಬಾಳೆ ಎಲೆ ಬದಲು ಬಟರ್ ಪೇಪರ್ ಬಳಸಬಹುದು)
    * ಈಗ ಬಿಸಿ ತವಾದ ಮೇಲೆ ಬಾಳೆ ಎಲೆಗೆ ಹರಡಿರುವ ಹಿಟ್ಟನ್ನು ಹಾಕಿ(ಬಾಳೆ ಎಲೆ ಮೇಲಿರಲಿ), 1 ನಿಮಿಷದ ಬಳಿಕ ಬಾಳೆ ಎಲೆಯನ್ನು ನಿಧಾನವಾಗಿ ತೆಗೆಯಿರಿ.
    * ರೊಟ್ಟಿಯನ್ನು ಎರಡೂ ಬದಿಗಳಲ್ಲಿ ಚೆನ್ನಾಗಿ ಕಾಯಿಸಿ.
    * ಈಗ ಮೃದುವಾದ ಅವಲಕ್ಕಿ ರೊಟ್ಟಿ ತಯಾರಾಗಿದ್ದು, ಅದನ್ನು ತೆಂಗಿನಕಾಯಿ ಚಟ್ನಿ ಜೊತೆ ಸವಿದರೆ ಸೂಪರ್ ಆಗಿರುತ್ತದೆ. ಇದನ್ನೂ ಓದಿ: ದಿಢೀರ್ ಅಂತ ತಯಾರಿಸಿ ಜೋಳದ ದೋಸೆ

    Live Tv
    [brid partner=56869869 player=32851 video=960834 autoplay=true]

  • ಒಮ್ಮೆ ತಿಂದರೆ ಮತ್ತೆ ಬೇಕು ಎನ್ನಿಸುವ ರುಚಿಯಾದ ಅವಲಕ್ಕಿ ಲಾಡು

    ಒಮ್ಮೆ ತಿಂದರೆ ಮತ್ತೆ ಬೇಕು ಎನ್ನಿಸುವ ರುಚಿಯಾದ ಅವಲಕ್ಕಿ ಲಾಡು

    ಡುಗೆ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ಇರುವ ಪದಾರ್ಥವೆಂದರೆ ಅವಲಕ್ಕಿಯಾಗಿದೆ. ಗಡಿಬಿಡಿಯ ಸಮಯದಲ್ಲಿ ಸಹಾಯಕ್ಕೆ ಬರುವುದು. ಸ್ವಲ್ಪ ಹೊತ್ತು ನೆನೆ ಹಾಕಿ ಅವಲಕ್ಕಿ ಒಗ್ಗರಣೆಯಿಂದ ಹಿಡಿದು, ಕೇಸರಿಭಾತ್, ಉಪ್ಪಿಟ್ಟು, ಬಿಸಿ ಬೇಳೆ ಬಾತ್, ದೋಸೆ ಮೊದಲಾದ ತಿಂಡಿಗಳನ್ನು ಸಿದ್ಧಪಡಿಸಬಹುದಾಗಿದೆ. ಹೀಗಿರುವಾಗ ನೀವು ಒಮ್ಮೆಯಾದರೂ ಅವಲಕ್ಕಿ ಲಾಡು ತಿಂದಿಲ್ಲವೆಂದರೆ ಒಮ್ಮೆ ಮಾಡಿ ನೋಡಲು ಇಲ್ಲಿದೆ ವಿಧಾನ.

    ಬೇಕಾಗುವ ಸಾಮಗ್ರಿಗಳು:
    * ಅವಲಕ್ಕಿ – 1 ಕಪ್
    * ತೆಂಗಿನ ಹುಡಿ – ಅರ್ಧ ಕಪ್
    * ಸಕ್ಕರೆ – 2 ಕಪ್
    * ಏಲಕ್ಕಿ ಪುಡಿ – ಅರ್ಧ ಚಮಚ
    * ಗೋಡಂಬಿ – 3-4
    * ಬಾದಾಮಿ – 3-4
    * ಪಿಸ್ತಾ – 3-4
    * ದ್ರಾಕ್ಷಿ – 8 9.
    * ತುಪ್ಪ – 4-5 ಚಮಚ
    * ಹಾಲು- 1 ಕಪ್


    ಮಾಡುವ ವಿಧಾನ:
    * ಅವಲಕ್ಕಿಯನ್ನು ಬಿಸಿಯಾದ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ.
    * ತೆಂಗಿನ ತುರಿ ಪೌಡರ್ ಅನ್ನು ಸೇರಿಸಿಕೊಂಡು ಹುರಿದ ಅವಲಕ್ಕಿಯೊಂದಿಗೆ ಮಿಶ್ರ ಮಾಡಿ. ಇದನ್ನೂ ಓದಿ:  ಸುಲಭವಾಗಿ ಮಾಡಿ ಬಿಸಿ ಬಿಸಿಯಾದ ತೆಂಗಿನ ಕಾಯಿ ದೋಸೆ

    * ಈಗ ಸಕ್ಕರೆ, ಅವಲಕ್ಕಿ, ತೆಂಗಿನ ತುರಿ ಪೌಡರ್ ಗ್ರೈಂಡರ್‍ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು.
    * ದ್ರಾಕ್ಷಿ, ಗೋಡಂಬಿ, ಬಾದಾಮಿ ಮತ್ತು ಪಿಸ್ತಾವನ್ನು ಮಂದ ಉರಿಯಲ್ಲಿ ಹುರಿದುಕೊಳ್ಳಿ.

    * ಅವಲಕ್ಕಿ ಮಿಶ್ರಣಕ್ಕೆ ಈಗ ಎಲ್ಲಾ ಡ್ರೈ ಪ್ರುಟ್ಸ್ ಅನ್ನು ಸೇರಿಸಿಕೊಳ್ಳಿ. ಹಾಲನ್ನು ತುಸು ಬೆಚ್ಚಗೆ ಮಾಡಿಕೊಂಡು ಅದಕ್ಕೆ ಸೇರಿಸಿ.
    * ಇನ್ನು ಲಾಡು ಕಟ್ಟುವುದಕ್ಕಾಗಿ ತುಪ್ಪವನ್ನು ಸೇರಿಸಿಕೊಂಡು ಉಂಡೆಯನ್ನು ಸಿದ್ಧಪಡಿಸಿಕೊಳ್ಳಿ. ಈಗ ರುಚಿಯಾದ ಅವಲಕ್ಕಿ ಲಾಡು ಸವಿಯಲು ಸಿದ್ಧವಾಗುತ್ತದೆ.

  • ಕೆಲವೇ ನಿಮಿಷಗಳಲ್ಲಿ ಮಾಡಿ ಗೊಜ್ಜವಲಕ್ಕಿ

    ಕೆಲವೇ ನಿಮಿಷಗಳಲ್ಲಿ ಮಾಡಿ ಗೊಜ್ಜವಲಕ್ಕಿ

    ಭಾನುವಾರ ಬಂತೆಂದರೆ ಎಲ್ಲರೂ ಮನೆಯಲ್ಲಿ ಇರುತ್ತಾರೆ. ಆಗಾಗ ಮಕ್ಕಳಂತೂ ರುಚಿ ರುಚಿಯಾದ ತಿಂಡಿ ತಿನ್ನಲು ಏನಾದರೂ ಕೇಳುತ್ತಿರುತ್ತಾರೆ. ಹೀಗಾಗಿ ಎಲ್ಲರಿಗೂ ಇಷ್ಟವಾಗುವ ಏನಾದರೂ ಸ್ಪಷಲ್ ಮಾಡಬೇಕು ಅಂದುಕೊಳ್ತೋರಾ. ಮನೆಯಲ್ಲಿ ಯಾವಾಗಲೂ ಅವಲಕ್ಕಿ ಇರುತ್ತೆ. ಆದರೆ ಪ್ರತಿ ಬಾರಿಯೂ ಅವಲಕ್ಕಿ ಫ್ರೈ ಮಾಡಿ, ಮಾಡಿ ಬೇಸರವಾಗಿರುತ್ತದೆ. ಮತ್ತೆ ಅದೇ ತಿಂಡಿ ಮಾಡಿದರೂ ಮನೆಯಲ್ಲಿ ಅಷ್ಟಾಗಿ ಇಷ್ಟಪಡಲ್ಲ. ಹೀಗಾಗಿ ಅವಲಕ್ಕಿಯಲ್ಲಿ ಬೇರೆ ಏನು ಮಾಡಬಹುದು ಎಂದು ಯೋಚನೆ ಮಾಡುತ್ತಿರುತ್ತೀರಾ. ಆದ್ದರಿಂದ ನಿಮಗಾಗಿ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಗೊಜ್ಜವಲಕ್ಕಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು
    1. ದಪ್ಪ ಅವಲಕ್ಕಿ (ನೆನೆಸಿದ್ದು ) – 1 ಕಪ್
    2. ಸಾಂಬಾರು ಪುಡಿ – 2 ಚಮಚ
    3. ಬೆಲ್ಲ -4 ಚಮಚ
    4. ಸಾಸಿವೆ – 1 ಚಮಚ
    5. ಉದ್ದಿನ ಬೇಳೆ -ಅರ್ಧ ಚಮಚ
    6. ಕರಿಬೇವಿನಸೊಪ್ಪು – 3-4 ದಳ
    7. ಹುಣಸೇಹಣ್ಣಿನ ರಸ – 6 ಚಮಚ
    8. ಕಡಲೆ ಬೀಜ ಮತ್ತು ಗೋಡಂಬಿ
    9. ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿಕೊಳ್ಳಿ ಅದಕ್ಕೆ ಉದ್ದಿನಬೇಳೆ, ಸಾಸಿವೆ, ಕಡಲೆ ಬೀಜ, ಗೋಡಂಬಿ ಮತ್ತು ಕರಿಬೇವಿನಸೊಪ್ಪು ಹಾಕಿ ಹುರಿದುಕೊಳ್ಳಿ.
    * ಬಳಿಕ ಅದಕ್ಕೆ ಹುಣಸೇ ರಸ, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಸಾಂಬಾರುಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
    * ಅದಕ್ಕೆ ನೆನೆಸಿಟ್ಟುಕೊಂಡಿರುವ ಅವಲಕ್ಕಿಯನ್ನು ಹಾಕಿ ಮಿಕ್ಸ್ ಮಾಡಿದರೆ ಗೊಜ್ಜವಲಕ್ಕಿ ಸವಿಯಲು ಸಿದ್ಧ.

  • ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಬಾಲಕ ಸಾವು

    ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಬಾಲಕ ಸಾವು

    ಚಿಕ್ಕಮಗಳೂರು: ಅವಲಕ್ಕಿ ಗಂಟಲಲ್ಲಿ ಸಿಲುಕಿ ಮೂರು ವರ್ಷದ ಬಾಲಕನೋರ್ವ ಮೃತಪಟ್ಟ ಆಘಾತಕಾರಿ ಘಟನೆಯೊಂದು ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಸಮೀಪದ ಶಿರಗುಂದದಲ್ಲಿ ನಡೆದಿದೆ.

    ದುರ್ಗಾಪ್ರಸಾದ್ ದಂಪತಿಯ ಪುತ್ರ ಅನೀಶ್ ಮೃತ ದುರ್ದೈವಿ ಬಾಲಕ. ಸೋಮವಾರ ತಿನ್ನುವಾಗ ಅನೀಶ್ ಗಂಟಲಲ್ಲಿ ಅವಲಕ್ಕಿ ಸಿಲುಕಿದ್ದು, ಕೂಡಲೇ ಪೋಷಕರು ಆತನನ್ನು ನಗರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿ ಶಿಕ್ಷಕಿ ಸಾವು!

    ಈ ವೇಳೆ ಅಲ್ಲಿನ ವೈದ್ಯರು ಉಸಿರುಗಟ್ಟಿದ್ದ ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಪೋಷಕರು ಅಲ್ಲಿಂದ ಹಾಸನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಅನೀಶ್ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ:ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವು

    ಸದ್ಯ ಮಗನನ್ನು ಕಳೆದುಕೊಂಡ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತೀಚೆಗಷ್ಟೇ ಇದೇ ಜಿಲ್ಲೆಯ ಸಂಜೀವಿನಿ ಶಾಲೆಯ ಶಿಕ್ಷಕಿಯೊಬ್ಬರು ಆಗಷ್ಟೇ ದೇವಸ್ಥಾನದಿಂದ ಪೂಜೆ ಮಾಡಿಸಿಕೊಂಡು ಬಂದ ತೆಂಗಿನ ಕಾಯಿ ಚೂರು ತಿಂದು ಅದು ಗಂಟಲಲ್ಲಿ ಸಿಲುಕಿ ಮೃತಪಟ್ಟಿದ್ದರು. ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!