Tag: ಅವರೆಕಾಯಿ

  • ಅವರೆಕಾಯಿ ಮೇಳಕ್ಕೆ ಅನುಮತಿ ನಿರಾಕರಿಸಿದ ಪಾಲಿಕೆ ಆಯುಕ್ತ

    ಅವರೆಕಾಯಿ ಮೇಳಕ್ಕೆ ಅನುಮತಿ ನಿರಾಕರಿಸಿದ ಪಾಲಿಕೆ ಆಯುಕ್ತ

    ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್‍ನಲ್ಲಿ ನಡೆಯಲಿರುವ ಅವರೆಕಾಯಿ ಮೇಳ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಈ ವರ್ಷ ಅವರೆಕಾಯಿ ಮೇಳ ನಡೆಯುವುದು ಅನುಮಾನ. ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಮೇಳ ನಡೆಸಲು ಅನುಮತಿ ನಿರಾಕರಿಸಿದ್ದಾರೆ.

    ಅವರೆಕಾಳು ಮೇಳ ಕಳೆದ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ ಈ ಬಾರಿ ಸ್ಥಳೀಯ ವೆಲ್‍ಫೇರ್ ಅಸೋಸಿಯೇಷನ್ ಹಾಗೂ ಪಾಲಿಕೆ ಸದಸ್ಯ ಕಮೀಷನರ್ ಗೆ ಮನವಿ ಮಾಡಿದ್ದು, ಮೇಳ ನಡೆಯಲು ಅವಕಾಶ ನೀಡಬಾರದೆಂದು ಮನವಿ ಮಾಡಿದ್ದಾರೆ ಎಂದು ಖುದ್ದು ಕಮೀಷನರ್ ಅನಿಲ್ ಕುಮಾರ್ ಹೇಳಿದರು.

    ಮೇಳದಿಂದ ಒಂದು ಕುಟುಂಬಕ್ಕೆ ಮಾತ್ರ ಸಹಾಯವಾಗುತ್ತಿದೆ. ಅವರೆ ಮಿಕ್ಸಚರ್, ಅವರೆ ದೋಸೆ, ಹಲ್ವಾ, ಪೇಡಾ ಎಲ್ಲ ತಯಾರಾಗುತ್ತಿತ್ತು. ಹಾಗೇ ಅದು ಒಂದು ಕುಟುಂಬದ ಲಾಭವಾಗಿತ್ತು. ಜೊತೆಗೆ ಸ್ವಚ್ಛತೆಯನ್ನು ಕಾಪಾಡುತ್ತಿರಲಿಲ್ಲ. ಹೀಗಾಗಿ ಅವರೆ ಮೇಳಕ್ಕೆ ಅನುಮತಿ ನೀಡಿಲ್ಲ ಎಂದು ಕಮೀಷನರ್ ತಿಳಿಸಿದರು.

    ಬಿಬಿಎಂಪಿ ಮೂಲಗಳ ಮಾಹಿತಿಯಂತೆ ಅವರೆ ಮೇಳದಿಂದ ರೈತರಿಗೆ ಸಹಾಯವಾಗುತ್ತದೆ ಅನುಮತಿ ನೀಡಿ ಎಂದು ಶಿಫಾರಸ್ಸುಗಳ ಸುರಿಮಳೆಯಾಗಿದೆ. ಉಪಮುಖ್ಯಮಂತ್ರಿ, ಮೇಯರ್, ಶಾಸಕರು, ವಿಧಾನ ಪರಿಷತ್ ಸದಸ್ಯರೆಲ್ಲ ಆಯುಕ್ತರಿಗೆ ಕರೆ ಮಾಡಿದ್ದಾರೆ.

  • ಚಳಿಗಾಲದ ಅತಿಥಿ ಅವರೆಕಾಯಿಗೆ ರೇಷ್ಮೆನಾಡಲ್ಲಿ ಫುಲ್ ಡಿಮ್ಯಾಂಡ್

    ಚಳಿಗಾಲದ ಅತಿಥಿ ಅವರೆಕಾಯಿಗೆ ರೇಷ್ಮೆನಾಡಲ್ಲಿ ಫುಲ್ ಡಿಮ್ಯಾಂಡ್

    ರಾಮನಗರ: ಚಳಿಗಾಲ ವಿಶೇಷ ಅತಿಥಿ ಎಂದೇ ಕರೆಸಿಕೊಳ್ಳುವ ಅವರೆಕಾಯಿಗೆ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಫುಲ್ ಡಿಮ್ಯಾಂಡ್ ಇದ್ದು, ಬೇರೆ ಬೇರೆ ಜಿಲ್ಲೆಗಳಿಂದಲೂ ಅವರೆಕಾಯಿ ರಾಮನಗರಕ್ಕೆ ಬಂದು ಬೀಳ್ತಿದೆ. ವಿಶೇಷವೆಂದರೆ ಹುಣಸೂರಿನ ಅವರೆಕಾರಿ ಈ ಬಾರಿ ಜಿಲ್ಲೆಯ ತಾಲೂಕುಗಳಿಗೆ ಎತ್ತೇಚ್ಚವಾಗಿ ಹರಿದು ಬರುತ್ತಿದೆ.

    ತೊಗರಿಕಾಯಿ ನಂತರ ಮಾರುಕಟ್ಟೆ ಪ್ರವೇಶಿಸುವ ಅವರೆಕಾಯಿ ಸಾಮಾನ್ಯವಾಗಿ ನವೆಂಬರ್ ನಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಅದರಂತೆ ಈ ವರ್ಷವೂ ಯಥೇಚ್ಚ ಪ್ರಮಾಣದಲ್ಲಿ ಅವರೆಕಾಯಿ ಮಾರುಕಟ್ಟೆಗೆ ಬಂದಿದೆ.

    ಡಿಸೆಂಬರ್ ಅಂತ್ಯದಿಂದ ಜನವರಿ ಮೊದಲೆರಡು ವಾರ ಅತಿ ಹೆಚ್ಚು ಅವರೆಕಾಯಿ ಫಸಲು ಬರುತ್ತೆ. ಇದೀಗ ಈ ಅವರೆಕಾಯಿ ರಾಮನಗರ ಜಿಲ್ಲೆಯ ಮಾಗಡಿ, ಚನ್ನಪಟ್ಟಣ, ಕನಕಪುರ ಅಷ್ಟೇ ಅಲ್ಲದೆ ಕುಣಿಗಲ್, ನೆಲಮಂಗಲ ಮಾರುಕಟ್ಟೆಯಲ್ಲಿಯೂ ಸಹ ಸೋನೆ ಅವರೆಕಾಯಿಯ ಘಮಲು ಜೋರಾಗಿದ್ದು, ಚಳಿಗಾಲದಲ್ಲಿ ಬಾಯಿಗೆ ರುಚಿ ನೀಡುವ ಅವರೆಕಾಯಿಗೆ ಎಲ್ಲಿಲ್ಲದ ಬೇಡಿಕೆಯುಂಟಾಗಿದೆ.

    ಪ್ರತಿನಿತ್ಯ ಮಾರುಕಟ್ಟೆಗೆ 2-3 ಟೆಂಪೋ ಅವರೆಕಾಯಿ ರಾಮನಗರ ಜಿಲ್ಲೆಗೆ ಬಂದು ಬೀಳುತ್ತಿದೆ. ಪ್ರತಿ ಲೋಡ್‍ನಲ್ಲಿ ತಲಾ 65-70 ಕಿಲೋ ಅವರೆಕಾಯಿ ತುಂಬಿದ 25-30 ಚೀಲಗಳನ್ನು ತುಂಬಲಾಗುತ್ತಿದೆ. ಹೋಲ್‍ಸೇಲ್ ವ್ಯಾಪಾರಿಗಳು ಹುಣಸೂರಿನಿಂದ ತಂದ ಕಾಯಿಯನ್ನು ಸ್ಥಳೀಯವಾಗಿ ಅಂಗಡಿ ಮಾಲೀಕರು, ಕೈಗಾಡಿ ವ್ಯಾಪಾರಸ್ಥರು ಖರೀದಿಸಿ ಖುಷಿಖುಷಿಯಾಗಿ ಮಾರಾಟ ಮಾಡುತ್ತಿದ್ದಾರೆ.

    ಚಳಿಗಾಲದ ಅತಿಥಿಯಾಗಿರುವ ಅವರೆಕಾಯಿಗೆ ಹೋಟೆಲ್, ಮನೆ ಮನೆಗಳಲ್ಲಿಯೂ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಹೋಟೆಲ್‍ಗಳಲ್ಲಿ ಅವರೆಕಾಯಿ ಉಪ್ಪಿಟ್ಟು, ಅವರೆಕಾಯಿ ಪಲ್ಯ, ಅವರೆಕಾಯಿ ಸಾರು, ಮುದ್ದೆ ಊಟಕ್ಕೆ ಗ್ರಾಹಕರು ಮುಗಿಬೀಳ್ತಿದ್ದಾರೆ. ಅಲ್ಲದೆ ಮನೆಗಳಲ್ಲಿ ಅವರೆಕಾಯಿ ಸಾಂಬಾರ್, ಮುದ್ದೆ, ಅವರೆಕಾಯಿ ಸೊಪ್ಪಿನ ಬಸ್ಸಾರು, ಹಿದುಕಿದ ಅವರೆಕಾಯಿ ಸಾಂಬಾರ್ ಈ ರೀತಿಯ ನಾನಾ ತರಹದ ಅಡುಗೆಗಳಲ್ಲಿ ಅವರೆಕಾಯಿ ಬಳಕೆಯಾಗುತ್ತಿದೆ.

  • ಈರುಳ್ಳಿ, ನುಗ್ಗೆಕಾಯಿ ಆಯ್ತು, ಇದೀಗ ಅವರೆಕಾಯಿ ಸರದಿ

    ಈರುಳ್ಳಿ, ನುಗ್ಗೆಕಾಯಿ ಆಯ್ತು, ಇದೀಗ ಅವರೆಕಾಯಿ ಸರದಿ

    ಬೆಂಗಳೂರು: ಇತ್ತೀಚೆಗಷ್ಟೆ ಈರುಳ್ಳಿ ಬೆಲೆ ಹಾಗೂ ನುಗ್ಗೆಕಾಯಿ ಬೆಲೆ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಈಗ ಅವರೆಕಾಯಿ ಬೆಲೆ ಜಾಸ್ತಿಯಾಗಿದೆ. ಇದರಿಂದ ಅವರೆಕಾಯಿ ಪ್ರಿಯರಿಗೆ ಶಾಕ್ ಆಗಿದೆ.

    ಕಳೆದ ವರ್ಷ ಕೇವಲ 20 ರಿಂದ 40 ರೂ. ಸಿಗುತ್ತಿದ್ದ ಅವರೆಕಾಯಿ, ಈ ಬಾರಿ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಒಂದು ಕೆಜಿ ಸಾಧಾರಣ ಅವರೆಕಾಯಿ ಬೆಲೆ 40 ರಿಂದ 50 ರೂಪಾಯಿ ಮಾರಟವಾಗುತ್ತಿದ್ದು, ಬೆಸ್ಟ್ ಕ್ವಾಲಿಟಿ ಅವರೆಕಾಯಿ ಬೇಕು ಎಂದರೆ 70 ರಿಂದ 80 ರೂ. ಮಾರಾಟವಾಗುತ್ತಿದೆ.

    ರಾಗಿ, ಮೆಕ್ಕೆಜೋಳ, ಜೋಳ, ತೊಗರಿ ಹೊಲಗಳಲ್ಲಿ ಉಪ ಬೆಳೆಯಾಗಿ ಅವರೆಕಾಯಿಯನ್ನು ಬೆಳೆಸಲಾಗುತ್ತಿತ್ತು. ಆದರೆ ಈ ಬಾರಿ ಸುರಿದ ಅಕಾಲಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾದ ಪರಿಣಾಮ ರೋಗ ಬಂದು ಅವರೆಕಾಯಿ ಇಳುವರಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಾರುಕಟ್ಟೆಗೆ ಕೇವಲ 2 ರಿಂದ 3 ಲೋಡ್ ಅವರೆಕಾಯಿ ಮಾತ್ರ ಪೂರೈಕೆಗೆ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

    ಡೆಂಕಣಕೋಟೆ, ಥಳಿ, ಆನೇಕಲ್, ಚಿತ್ರದುರ್ಗ, ಮಾಗಡಿಗಳಿಂದ ಸೊಗಡು ಅವರೆಕಾಯಿ ಮಾರುಕಟ್ಟೆಗೆ ಪ್ರವೇಶಿಸಬೇಕಿತ್ತು. ಇನ್ನೂ ಜನವರಿ ಮೊದಲ ವಾರ ಬರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಸದ್ಯ ಈರುಳ್ಳಿ, ನುಗ್ಗೆಕಾಯಿ ಬೆಲೆ ಕೇಳಿ ಸುಸ್ತಾದ ಜನ, ಈಗ ಅವರೆಕಾಯಿ ಬೆಲೆ ಕೂಡ ಶಾಕ್ ನೀಡಿದ್ದು, ಮುಂದಿನ ದಿನದಲ್ಲಿ ಇನ್ಯಾವೆಲ್ಲ ತರಕಾರಿ ರೇಟ್ ಜಾಸ್ತಿ ಆಗಬಹುದು ಎಂದು ಚಿಂತೆಯಲ್ಲಿದ್ದಾರೆ.

  • ಹಿತ್ಕವರೆ ಕಾಳಿನ ಸಾಂಬಾರ್ ಮಾಡೋಕೆ ಇಲ್ಲಿದೆ ಸಖತ್ ಸಿಂಪಲ್ ರೆಸಿಪಿ

    ಹಿತ್ಕವರೆ ಕಾಳಿನ ಸಾಂಬಾರ್ ಮಾಡೋಕೆ ಇಲ್ಲಿದೆ ಸಖತ್ ಸಿಂಪಲ್ ರೆಸಿಪಿ

    ಕರ್ನಾಟಕದ ಫೇಮಸ್ ಡಿಶ್‍ಗಳಲ್ಲಿ ಹಿತ್ಕವರೆ ಕಾಳಿನ ಸಾಂಬಾರು ಕೂಡ ಒಂದು. ಅವರೆಕಾಯಿ ಸೀಸನ್‍ಲ್ಲಿ ಹೆಚ್ಚಾಗಿ ಇದನ್ನ ಮಾಡ್ತಾರೆ. ಹಲವು ವಿಧಾನಗಳಲ್ಲಿ ಈ ಸಾಂಬಾರು ಮಾಡ್ತಾರೆ. ಅವುಗಳಲ್ಲಿ ಒಂದು ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:

    ಹಿತ್ಕವರೆ ಕಾಳು- 2 ಕಪ್
    ಕೊತ್ತಂಬರಿ ಬೀಜ – 1 ಚಮಚ
    ಜೀರಿಗೆ – 1 ಚಮಚ
    ಉದ್ದಿನ ಬೇಳೆ – ಅರ್ಧ ಚಮಚ
    ಕಡ್ಲೆ ಬೇಳೆ – 1 ಚಮಚ
    ಮೆಂತೆ – ಕಾಲು ಚಮಚ
    ಸಾಸಿವೆ – ಕಾಲು ಚಮಚ
    ಚಕ್ಕೆ – ಅರ್ಧ ಇಂಚು
    ಇಂಗು – ದೊಡ್ಡ ಚಿಟಿಕೆ
    ಲವಂಗ – 3
    ಶುಂಠಿ – ಅರ್ಧ ಇಂಚು
    ಬೆಳ್ಳುಳ್ಳಿ – 2 ಎಸಳು
    ಒಣಮೆಣಸಿನಕಾಯಿ – 5,6
    ತೆಂಗಿನ ತುರಿ – ಅರ್ಧ ಕಪ್
    ಬೆಳ್ಳುಳ್ಳಿ – 1(ಚಿಕ್ಕದು) ಕಟ್ ಮಾಡಿಕೊಳ್ಳಿ
    ಕರಿಬೇವಿನ ಎಲೆ – 8 ರಿಂದ 10
    ಬೆಲ್ಲ – 2 ಚಮಚ(ಇಷ್ಟವಿದ್ದಲ್ಲಿ ಬಳಸಿ)
    ಉಪ್ಪು – ರುಚಿಗೆ ತಕ್ಕಷ್ಟು
    ಹುಣಸೆಹಣ್ಣಿನ ರಸ – 1 ಚಮಚ

    ಮಾಡುವ ವಿಧಾನ:

    * ಸಿಪ್ಪೆತೆಗೆದು ಹಿದುಕಿದ ಅವರೆಕಾಳಿಗೆ ಅಂದಾಜು 1 ಕಪ್ ನೀರು ಹಾಗೂ 1 ಚಿಟಿಕೆ ಉಪ್ಪು ಹಾಕಿ ಬೇಯಲು ಇಡಿ.

    * ಬಾಣಲೆಯಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಸಾಸಿವೆ, ಮೆಂತ್ಯೆ, ಚೆಕ್ಕೆ, ಲವಂಗ ಇಂಗು, ಒಣಮೆಣಸಿನಕಾಯಿ ಹಾಕಿ ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ 2 ರಿಂದ 3 ನಿಮಿಷ ಚೆನ್ನಾಗಿ ಫೈ ಮಾಡಿ ಬಳಿಕ ಪ್ಲೇಟಿಗೆ ಹಾಕಿ.

    * ನಂತರ ಅದೇ ಬಾಣಲೆಗೆ ಅರ್ಧ ಚಮಚ ಎಣ್ಣೆ ಹಾಕಿ ಬೆಳ್ಳುಳ್ಳಿ, ಶುಂಠಿ, ಕಟ್ ಮಾಡಿದ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಹುರಿಯಿರಿ.

    * ಬಳಿಕ ಇವುಗಳನ್ನೆಲ್ಲಾ ಒಂದು ಮಿಕ್ಸಿಯಲ್ಲಿ ಹಾಕಿ, ಅದಕ್ಕೆ ತುರಿದ ತೆಂಗಿನ ಕಾಯಿ, ಹುಣಸೆ ಹಣ್ಣನ್ನು ಬೆರೆಸಿ ಅರ್ಧ ಕಪ್ ನೀರು ಹಾಕಿ ರುಬ್ಬಿಕೊಳ್ಳಿ.

    * ಇತ್ತ ಬೆಂದ ಅವರೆಕಾಳಿಗೆ ಬೆಲ್ಲ, ಸ್ವಲ್ಪ ಉಪ್ಪು ಹಾಗೂ, ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಒಗ್ಗರಣೆ ಹಾಕಿದ್ರೆ ಹಿತ್ಕವರೆ ಕಾಳಿನ ಸಾಂಬಾರ್ ಸವಿಯೋದಕ್ಕೆ ಸಿದ್ಧ.