Tag: ಅವನೇ ಶ್ರೀಮನ್ನಾರಾಯಣ

  • ಎಲ್ಲೆಲ್ಲೂ ಎಲ್ಲದರಲ್ಲೂ ಈಗ ಶ್ರೀಮನ್ನಾರಾಯಣನದ್ದೇ ಹವಾ

    ಎಲ್ಲೆಲ್ಲೂ ಎಲ್ಲದರಲ್ಲೂ ಈಗ ಶ್ರೀಮನ್ನಾರಾಯಣನದ್ದೇ ಹವಾ

    ಗ ಎಲ್ಲೆಡೆಯೂ ಅವನೇ ಶ್ರೀಮನ್ನಾರಾಯಣ ಚಿತ್ರದ ಹವಾ ಹಬ್ಬಿಕೊಂಡಿದೆ. ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ನಂತರದಲ್ಲಿ ನಟಿಸಿರುವ ಏಕೈಕ ಸಿನಿಮಾವಿದು. ಅಖಂಡ ಎರಡು ವರ್ಷಗಳ ಪರಿಶ್ರಮ, ಒಂದಿಡೀ ತಂಡದ ಅಹೋಕಾಲದ ಸಮರ್ಪಣಾ ಮನೋಭಾವದಿಂದಲೇ ರೂಪುಗೊಂಡಿರೋ ಈ ಸಿನಿಮಾ ಇದೇ ತಿಂಗಳ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದೀಗ ಈ ಚಿತ್ರದ ಆನ್‍ಲೈನ್ ಬುಕ್ಕಿಂಗ್ ಭರಾಟೆ ತೀವ್ರಗೊಂಡಿದೆ. ಹತ್ತು ದಿನ ಮೊದಲೇ ಆರಂಭವಾಗಿರೋ ಆನ್‍ಲೈನ್ ಟಿಕೆಟ್ ಬುಕ್ಕಿಂಗ್ ನಡೆಯುತ್ತಿರೋ ತೀವ್ರತೆಯೇ ಶ್ರೀಮನ್ನಾರಾಯಣನ ಗೆಲುವನ್ನೂ ಪ್ರತಿಫಲಿಸುವಂತಿರೋದು ಸುಳ್ಳಲ್ಲ.

    ಬೆಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲೊಂದಾಗಿರುವ ಊರ್ವಶಿ ಮುಂತಾದ ಥಿಯೇಟರ್ ಗಳಲ್ಲಿ ಈ ಚಿತ್ರದ ಆನ್‍ಲೈನ್ ಬುಕ್ಕಿಂಗ್‍ಗೆ ಚಾಲನೆ ಸಿಕ್ಕಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾದ ಟಿಕೆಟುಗಳನ್ನು ಕಾಯ್ದಿರಿಸೋ ಅವಕಾಶವನ್ನು ಈ ಮೂಲಕ ಕಲ್ಪಿಸಲಾಗಿದೆ. ಹೀಗೆ ಈ ಟಿಕೆಟ್ ಗಳನ್ನು ಮುಂಗಡವಾಗಿ ಪಡೆದುಕೊಳ್ಳಲು ನೂಕು ನುಗ್ಗಲು ಶುರುವಾಗಿ ಬಿಟ್ಟಿದೆ. ಬರೋಬ್ಬರಿ ಹತ್ತು ದಿನಗಳಷ್ಟು ಮುಂಚಿತವಾಗಿಯೇ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದರೂ ಸಹ ಪ್ರೇಕ್ಷಕರು ಮುಗಿ ಬೀಳಲಾರಂಭಿಸಿದ್ದಾರೆ. ಈಗಾಗಲೇ ಹೆಚ್ಚಿನ ಸೀಟುಗಳು ಕಾಯ್ದಿರಿಸಲ್ಪಟ್ಟಿವೆ.

    ಈ ವರ್ಷ ಬಿಡುಗಡೆಯಾಗಿದ್ದ ಅಷ್ಟೂ ಚಿತ್ರಗಳಿಗೆ ಹೋಲಿಕೆ ಮಾಡಿದರೆ ಅವನೇ ಶ್ರೀಮನ್ನಾರಾಯಣನಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್‍ನಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ ತೀರಾ ಭಿನ್ನವಾಗಿದೆ. ಅದರ ಭರಾಟೆಯೂ ಜೋರಾಗಿದೆ. ಇದಕ್ಕೆ ಕಾರಣವಾಗಿರೋದು ಈ ಸಿನಿಮಾ ಸುತ್ತ ಹಬ್ಬಿಕೊಂಡಿರುವ ಪಾಸಿಟಿವ್ ಟಾಕ್ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಶ್ರೀಮನ್ನಾರಾಯಣನ ಕ್ರೇಜ್ ಮೂಡಿಕೊಳ್ಳುವಂತೆ ಮಾಡಿ ಬಿಟ್ಟಿದೆ. ಅಲ್ಲಿ ಕಾಣಿಸಿರೋ ದೃಶ್ಯಾವಳಿಗಳು ಮತ್ತು ಭಿನ್ನ ಕಥೆಯ ಸುಳಿವುಗಳೇ ಪ್ರೇಕ್ಷಕರೆಲ್ಲ ಈ ಸಿನಿಮಾದತ್ತ ಆಕರ್ಷಿತರಾಗುವಂತೆ ಮಾಡಿ ಬಿಟ್ಟಿದೆ.

    ರಕ್ಷಿತ್ ಶೆಟ್ಟಿ ಪಾಲಿಗೆ ಇದು ಅತ್ಯಂತ ಮಹತ್ವದ ಸಿನಿಮಾ. ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡಾ ಭಾರೀ ಬಜೆಟ್ಟಿನಲ್ಲಿ ಅವನೇ ಶ್ರೀಮನ್ನಾರಾಯಣನನ್ನು ರೂಪಿಸಿದ್ದಾರೆ. ರಕ್ಷಿತ್ ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಇದೇ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ. ಶಾನ್ವಿ ಶ್ರೀವಾತ್ಸವ್ ಕೂಡಾ ಅಷ್ಟೇ ಭಿನ್ನವಾದ ಪಾತ್ರದಲ್ಲಿ ನಾಯಕಿಯಾಗಿ ರಕ್ಷಿತ್‍ಗೆ ಸಾಥ್ ಕೊಟ್ಟಿದ್ದಾರೆ. ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್ ಮೊದಲಾದವರ ತಾರಾಗಣ ಈ ಚಿತ್ರದಲ್ಲಿದೆ. ಅವನೇ ಶ್ರೀಮನ್ನಾರಾಯಣ ಇದೇ ತಿಂಗಳ 27ರಂದು ಅದ್ದೂರಿಯಾಗಿ ತೆರೆಗಾಣಲಿದ್ದಾನೆ.

    ಇದೀಗ ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಮೋಷನ್ ಭರಾಟೆ ಕೂಡಾ ಜೋರಾಗಿಯೇ ನಡೆಯುತ್ತಿದೆ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಇದನ್ನೂ ಕೂಡಾ ಭಿನ್ನವಾಗಿರುವಂತೆಯೇ ನೋಡಿಕೊಂಡಿದ್ದಾರೆ. ಈ ಚಿತ್ರ ಪ್ರಮೋಷನ್ ವೈಖರಿ ಕೂಡಾ ಭಿನ್ನವಾಗಿದೆ. ಅದರಲ್ಲಿ ಇತ್ತೀಚೆಇಗೆ ಕಾಣಿಸಿಕೊಳ್ಳುತ್ತಿರೋ ಪ್ರಮೋಷನ್ ಐಡಿಯಾಗಳಿಗೆ ಜನ ಸಾಮಾನ್ಯರೂ ಫಿದಾ ಆಗುತ್ತಿದ್ದಾರೆ. ಲಿಫ್ಟುಗಳ ಬಾಗಿಲು ಓಪನ್ ಆದೇಟಿಗೆ ಅಚಾನಕ್ಕಾಗಿ ಶ್ರೀಮನ್ನಾರಾಯಣ ಪೋಸ್ಟರ್ ಮೂಲಕವೂ ಇದೀಗ ದರ್ಶನ ನೀಡಲಾರಂಭಿಸಿದ್ದಾನೆ. ಇದೂ ಸೇರಿದಂತೆ ಪ್ರಚಾರದ ವಿಚಾರದಲ್ಲಿ ಭಿನ್ನವಾದ ಪ್ರಯತ್ನಗಳನ್ನು ಚಿತ್ರ ತಂಡ ಮಾಡುತ್ತಿದೆ. ಎಲ್ಲೆಂದರಲ್ಲಿ ಈ ಮೂಲಕ ಶ್ರೀಮನ್ನಾರಾಯಣ ಕಾಣಿಸಿಕೊಂಡು ಪ್ರೇಕ್ಷಕರ ಮನಸಲ್ಲಿ ಸರಿಯಾಗಿಯೇ ರಿಜಿಸ್ಟರ್ ಆಗಲಾರಂಭಿಸಿದ್ದಾನೆ.

  • ಮೊದಲ ಬಾರಿ ಟ್ರೈನ್ ಏರಿ ಬಂದು ಕನ್ನಡದಲ್ಲಿ ಇತಿಹಾಸ ನಿರ್ಮಿಸಿದ ಶ್ರೀಮನ್ನಾರಾಯಣ

    ಮೊದಲ ಬಾರಿ ಟ್ರೈನ್ ಏರಿ ಬಂದು ಕನ್ನಡದಲ್ಲಿ ಇತಿಹಾಸ ನಿರ್ಮಿಸಿದ ಶ್ರೀಮನ್ನಾರಾಯಣ

    ಬೆಂಗಳೂರು: ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಬೆಳ್ಳಿ ತೆರೆಗೆ ಬರಲು ಅವನೇ ಶ್ರೀಮನ್ನಾರಾಯಣ ಸಿದ್ಧನಾಗಿದ್ದಾನೆ.

    ರಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿರುವ ಈ ವರ್ಷದ ಅತ್ಯಂತ ನಿರೀಕ್ಷೆಗಳನ್ನ ಹುಟ್ಟುಹಾಕಿರೋ ಸಿನಿಮಾ ಈ ವರ್ಷದ ಕೊನೆಯ ವಾರ ನಿಮ್ಮನ್ನೆಲ್ಲ ರಂಜಿಸಲು ಸಿದ್ಧವಾಗಿದೆ. ಸಿನಿಮಾ ಟ್ರೈಲರ್, ಹಾಡುಗಳು ಈಗಾಗಲೇ ಭಾರೀ ಸದ್ದು ಮಾಡುತ್ತಿದೆ.

    ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾಗಳು ಹೊಸತನದಿಂದ ಇರೋದು ಎಲ್ಲರಿಗೂ ಗೊತ್ತಿದೆ. ಅವನೇ ಶ್ರೀಮನ್ನಾರಾಯಣ ಸಿನಿಮಾ ಹೆಸರಿನಲ್ಲೇ ವಿಭಿನ್ನವಾಗಿದ್ದು ಸಿನಿಮಾ ಕೂಡ ವಿಭಿನ್ನವಾಗಿರೋತ್ತೆ ಅನ್ನೋ ಮಾತು ಗಾಂಧಿನಗರದಲ್ಲಿ ಕೇಳಿಬಂದಿದೆ. ಕೇವಲ ಸಿನಿಮಾ ಮಾತ್ರ ಅಲ್ಲ ಈ ಸಿನಿಮಾದ ಜಾಹೀರಾತು ಸಹ ವಿಭಿನ್ನತೆಯಿಂದ ಕೂಡಿದೆ.

    ಹೌದು ಟ್ರೈನ್ ಬೋಗಿಗಳ ಮೇಲೆ ಅವನೇ ಶ್ರೀಮನ್ನಾರಾಯಣ ಪೋಸ್ಟರ್‍ಗಳು ಸಂಚಲನ ಮೂಡಿಸಿದೆ. ಕನ್ನಡದ ಚಿತ್ರವೊಂದು ಹೀಗೆ ರೈಲ್ವೇ ಬೋಗಿಯ ಮೇಲೆ ಜಾಹೀರಾತು ನೀಡುತ್ತಿರೋದು ಇದೇ ಮೊದಲು. ಸಿನಿಮಾ ಹೆಸರಿನ ಮೂಲಕವೇ ಸದ್ದು ಮಾಡಿತ್ತು. ಈಗ ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡುತ್ತಿರೋದು ಸಹ ಸಿನಿ ಪ್ರಿಯರಲ್ಲಿ ಸಿನಿಮಾದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ.

  • ‘ಎಲ್ರ ಗಮನ ನನ್ನ ಕಡೆ ಇದೆ ಅಂತ ಗೊತ್ತು, ಹಾಗೆ ಗಮನವಿಟ್ಟು ಕೇಳಿ’

    ‘ಎಲ್ರ ಗಮನ ನನ್ನ ಕಡೆ ಇದೆ ಅಂತ ಗೊತ್ತು, ಹಾಗೆ ಗಮನವಿಟ್ಟು ಕೇಳಿ’

    – ಮೂರು ವರ್ಷದ ಬಳಿಕ ಶ್ರೀಮನ್ನಾರಾಯಣನ ಅವತಾರದಲ್ಲಿ ರಕ್ಷಿತ್
    – 5 ಭಾಷೆಯಲ್ಲಿ ಟ್ರೈಲರ್ ರಿಲೀಸ್

    ಸ್ಯಾಂಡಲ್‍ವುಡ್ ನಟ ರಕ್ಷಿತ್ ಶೆಟ್ಟಿ ತೆರೆ ಮೇಲೆ ಕಾಣಿಸಿಕೊಂಡು ಬರೋಬ್ಬರಿ ಮೂರು ವರ್ಷಗಳಾಗಿವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ತೆರೆ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದರು. ಇದೀಗ ಬಹುನಿರೀಕ್ಷಿತ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಟ್ರೈಲರ್ ಮೂಲಕ ಮತ್ತೆ ತೆರೆ ಮೇಲೆ ಬಂದಿದ್ದಾರೆ.

    ಅವನೇ ಶ್ರೀಮನ್ನಾರಾಯಣ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡಿಕೊಂಡು ಬರುತ್ತಿರುವ ಸಿನಿಮಾ. ಎಂದಿನಂತೆ ರಕ್ಷಿತ್ ಶೆಟ್ಟಿ ತಮ್ಮ ಯೋಚನೆ, ಕಲ್ಪನೆ ಭಿನ್ನ ಎಂಬುದನ್ನು ಟ್ರೈಲರಿನಲ್ಲಿ ತೋರಿಸಿದ್ದಾರೆ. 80-90ರ ದಶಕದ ಘಮಲಿನಲ್ಲಿ ಸಿನಿಮಾ ಅರಳಿದ್ದು, ಪೋಸ್ಟರ್ ಮತ್ತು ಟೀಸರ್ ನೋಡಿದವರು ಮತ್ತೊಂದು ಕೆಜಿಎಫ್ ಅಂತಾ ಪ್ರಶ್ನೆ ಮಾಡಿದ್ದರು. ಈ ತರಹದ ಎಲ್ಲಾ ಪ್ರಶ್ನೆಗಳಿಗೂ ಟ್ರೈಲರ್ ಮೂಲಕ ರಕ್ಷಿತ್ ಉತ್ತರ ನೀಡಿದ್ದಾರೆ.

    90ರ ದಶಕದ ಕಾಲಘಟ್ಟದ ಶೈಲಿಯನ್ನು ಅವನೇ ಶ್ರೀಮನ್ನಾರಾಯಣದಲ್ಲಿ ಮರುಸೃಷ್ಟಿಸಲಾಗಿದೆ. ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಕ್ಷಿತ್ ಶೆಟ್ಟಿ, ದರೋಡೆಕೋರರ ಗ್ಯಾಂಗ್ ಪ್ರವೇಶಿಸಿ ಅವರಿಗೆ ಪ್ರತಿ ಮಾತಿನಲ್ಲಿ ಚಮಕ್ ನೀಡುತ್ತಾರೆ. ದರೋಡೆಕೋರರು ಮತ್ತು ರಕ್ಷಿತ್ ಶೆಟ್ಟಿ ನಡುವಿನ ಫೈಟಿಂಗ್ ದೃಶ್ಯಗಳು ಸಿನಿಮಾ ಬಗೆಗಿನ ಕುತೂಹಲವನ್ನು ಹೆಚ್ಚುವಂತೆ ಮಾಡುತ್ತವೆ.

    ನಟ ರಕ್ಷಿತ್ ಶೆಟ್ಟಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದ ದಿನವೇ ಇಂದು ಟ್ರೈಲರ್ ರಿಲೀಸ್ ಮಾಡುವುದಾಗಿ ತಿಳಿಸಿದ್ದರು. ಅದರಂತೆಯೇ ಯೂಟ್ಯೂಬ್ ನಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಟ್ರೈಲರ್ ರಿಲೀಸ್ ಆಗಿದೆ. ತಮಿಳಿನಲ್ಲಿ ಸೂಪರ್ ಸ್ಟಾರ್ ಧನುಷ್, ತೆಲುಗು ಟ್ರೈಲರನ್ನು ನಟ ನಾನಿ ಮತ್ತು ಮಲೆಯಾಳಂ ನಟ ನಿವಿನ್ ಪೌಲಿ ಸಿನಿಮಾ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಟ್ರೈಲರ್ 4.14 ನಿಮಿಷಗಳಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಪಾತ್ರವಾಗಿದೆ.

    ಇದೇ ಮೊದಲ ಬಾರಿಗೆ ನಟ ರಕ್ಷಿತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಜೋಡಿಯಾಗಿ ನಟಿ ಶಾನ್ವಿ ಶ್ರೀವಾಸ್ತವ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಸಚಿನ್ ರವಿ ನಿರ್ದೇಶನ ಮಾಡಿದ್ದಾರೆ. ಡಿಸೆಂಬರ್ 27 ರಂದು ಸಿನಿಮಾ ಬಿಡುಗಡೆಯಾಗಲಿದೆ.

  • ಬುಲೆಟ್ ಬೈಕ್ ಮೇಲೆ ಬಂದು ಗುಡ್‍ನ್ಯೂಸ್ ಕೊಟ್ಟ ಶ್ರೀಮನ್ನಾರಾಯಣ

    ಬುಲೆಟ್ ಬೈಕ್ ಮೇಲೆ ಬಂದು ಗುಡ್‍ನ್ಯೂಸ್ ಕೊಟ್ಟ ಶ್ರೀಮನ್ನಾರಾಯಣ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ `ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಮೂಲಕ ತೆರೆಯ ಮೇಲೆ ಬರಲು ಸಿದ್ಧಗೊಂಡಿದ್ದಾರೆ. ಬಹು ದಿನಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯೂ ಅಧಿಕೃತವಾಗಿ ತಿಳಿದಿರಲಿಲ್ಲ. ಇದೀಗ ಮೊದಲ ಬಾರಿಗೆ `ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

    ರಿಲೀಸ್ ಆಗಿರುವ ಪೋಸ್ಟರಿನಲ್ಲಿ ರಕ್ಷಿತ್ ಶೆಟ್ಟಿ ಬುಲೆಟ್ ಬೈಕ್ ಮೇಲೆ ಕುಳಿತುಕೊಂಡು ಒಂದು ಕೈಯಲ್ಲಿ ಬೈಕ್ ಹ್ಯಾಂಡಲ್ ಹಿಡಿದುಕೊಂಡು, ಮತ್ತೊಂದು ಕೈಯಲ್ಲಿ ಗನ್ ಹಿಡಿದ ಶೂಟ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಅವರ ಹಿಂದೆ ಖಳನಾಯಕರು ಕುದುರೆಯನ್ನೇರಿ ಬರುತ್ತಿದ್ದಾರೆ. ಸಿನಿಮಾದ ಫಸ್ಟ ಲುಕ್ ಜೊತೆಗೆ ಇದೇ ತಿಂಗಳ 28 ರಂದು ಟ್ರೈಲರ್ ಬಿಡುಗಡೆ ಮಾಡುವುದಾಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

    ಪೋಸ್ಟರ್ ಬಿಡುಗಡೆಗೆ ಒಂದು ಗಂಟೆ ಮೊದಲು ರಕ್ಷಿತ್ ಶೆಟ್ಟಿ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ತಿಳಿಸಿದ್ದರು. “ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದಿದೆ. ಇಂದು ಸಂಜೆ 6 ಗಂಟೆಗೆ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಫಸ್ಟ್ ಲುಕ್ ಅನ್ನು ಮತ್ತು ಟ್ರೈಲರ್ ದಿನಾಂಕದ ಜೊತೆಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ನಮ್ಮ ಮೇಲಿರಲಿ” ಎಂದು ಬರೆದುಕೊಂಡಿದ್ದರು.

    ಚಿತ್ರಕ್ಕೆ ಎಚ್.ಕೆ ಪ್ರಕಾಶ್ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಜೊತೆಯಾಗಿ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ರಕ್ಷಿತ್‍ಗೆ ನಟಿ ಶಾನ್ವಿ ಶ್ರೀವತ್ಸವ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

  • ಫೇಸ್‍ಬುಕ್ ಲೈವ್‍ನಲ್ಲಿ ಅವನೇ ಶ್ರೀಮನ್ನಾರಾಯಣ

    ಫೇಸ್‍ಬುಕ್ ಲೈವ್‍ನಲ್ಲಿ ಅವನೇ ಶ್ರೀಮನ್ನಾರಾಯಣ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ಶ್ರೀಮನ್ನಾರಾಯಣನಾಗಿ ತೆರೆಯ ಮೇಲೆ ಬರಲು ಸಿದ್ಧಗೊಂಡಿದ್ದಾರೆ. ಬಹುದಿನಗಳ ಬಳಿಕ ಫೇಸ್‍ಬುಕ್ ಲೈವ್ ಬಂದಿದ್ದ ರಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕುರಿತ ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು.

    ಸದ್ಯ ಸಿನಿಮಾದ ಡಬ್ಬಿಂಗ್, ಬ್ಯಾಕ್‍ಗ್ರೌಂಡ್ ಮ್ಯೂಸಿಕ್, ಗ್ರಾಫಿಕ್ಸ್ ಕೆಲಸ ನಡೆಯುತ್ತಿದೆ. ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲಿಯೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ. ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಕೆಲಸ ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಒಂದೇ ಸಿನಿಮಾದ ಮೇಲೆ ಕೆಲಸ ಮಾಡುತ್ತಿದ್ದರಿಂದ ಅಭಿಮಾನಿಗಳು ಚಿತ್ರ ಯಾವಾಗ ರಿಲೀಸ್ ಎಂಬ ಪ್ರಶ್ನೆ ಕೇಳುತ್ತಿರುತ್ತಾರೆ. ನನಗೂ ನಿಮ್ಮೊಂದಿಗೆ ಕುಳಿತು ಸಿನಿಮಾ ನೋಡಬೇಕೆಂಬ ಆಸೆ ಇದೆ ಎಂದು ರಕ್ಷಿತ್ ಶೆಟ್ಟಿ ತಿಳಿಸಿದರು.

    ಟ್ರೈಲರ್ ನೋಡಿದ ಮೇಲೆ ಅವನೇ ಶ್ರೀಮನ್ನಾರಾಯಣ ಸಿನಿಮಾದ ಬಗ್ಗೆ ಸ್ಪಷ್ಟತೆ ಸಿಗಲಿದೆ. ಉಳಿದವರು ಕಂಡಂತೆ ಸಿನಿಮಾದಂತೆ ಒಳ್ಳೆಯ ಕಥೆಯನ್ನು ಅವನೇ ಶ್ರೀಮನ್ನಾರಾಯಣ ಹೊಂದಿದೆ. ಚಿತ್ರ ಯಶಸ್ವಿಯಾಗಲಿದೆ ಎಂಬ ನಂಬಿಕೆಯೂ ನನಗಿದೆ. ಅವನೇ ಶ್ರೀಮನ್ನಾರಾಯಾಣ ಚಿತ್ರ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಹಾಗಾಗಿ ಎಲ್ಲ ಭಾಷೆಯ ವಿತರಕರೊಂದಿಗೆ ಮಾತನಾಡಿ ಟ್ರೈಲರ್ ರಿಲೀಸ್ ಮಾಡುತ್ತೇವೆ ಎಂದರು.

    ಸಿನಿಮಾ ಬಿಡುಗಡೆಯ ದಿನಾಂಕ ನಿಗದಿಯಾದ ಕೂಡಲೇ ಎಲ್ಲ ಐದು ಭಾಷೆಗಳ ಟ್ರೈಲರ್, ಹಾಡುಗಳನ್ನು ಬಿಡುಗಡೆ ಮಾಡುತ್ತವೆ. ಸಿನಿಮಾ ಬಿಡುಗಡೆಯ 45 ದಿನ ಮೊದಲು ಟ್ರೈಲರ್ ನಿಮ್ಮ ಮುಂದೆ ಬರಲಿದೆ. ಟ್ರೈಲರ್ ನಿಮ್ಮಲ್ಲರಿಗೂ ಖಂಡಿತ ಇಷ್ಟವಾಗುತ್ತದೆ. ಪುಣ್ಯಕೋಟಿ ಮತ್ತು ಚಾರ್ಲಿ ಸಿನಿಮಾದ ಕೆಲಸ ಸಹ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಎರಡು ಸಿನಿಮಾಗಳ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

    https://www.facebook.com/therakshitshetty/videos/349356869274878/

  • ತಡ ಮಾಡುತ್ತಲೇ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಶ್ರೀಮನ್ನಾರಾಯಣ!

    ತಡ ಮಾಡುತ್ತಲೇ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಶ್ರೀಮನ್ನಾರಾಯಣ!

    ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ಟೀಸರ್ ಮೂಲಕ ಇದರ ಕಥೆಯ ಮಜಾ ಏನೆಂಬುದು ಎಲ್ಲರಿಗೂ ತಿಳಿದು ಹೋಗಿದೆ. ಆದರೆ ಈ ಚಿತ್ರ ಸುದೀರ್ಘ ಕಾಲವನ್ನು ತೆಗೆದುಕೊಂಡು ಚಿತ್ರೀಕರಣಗೊಂಡಿದೆ, ತಡವಾಗಿದೆ ಎಂಬೆಲ್ಲ ಕೊರಗು ಅಭಿಮಾನಿಗಳಲ್ಲಿ ಇದ್ದೇ ಇದೆ. ಆದರೆ ಹೀಗೆ ತಡ ಮಾಡಿಯೇ ಶ್ರೀಮನ್ನಾರಾಯಣ ಸಾರ್ವಕಾಲಿಕ ದಾಖಲೆಯೊಂದರ ರೂವಾರಿಯಾಗಿದ್ದಾನೆ!

    ಅಷ್ಟಕ್ಕೂ ಅವನೇ ಶ್ರೀಮನ್ನಾರಾಯಣ ಚಿತ್ರ ಇಷ್ಟೊಂದು ತಡವಾಗಿ ರೂಪುಗೊಳ್ಳಲು ಕಾರಣವೇನು ಅಂತೊಂದು ಪ್ರಶ್ನೆ ಹಾಗೇ ಉಳಿದು ಹೋಗಿತ್ತು. ಇದಕ್ಕೆ ಉತ್ತರ ಹುಡುಕುತ್ತಾ ಹೋದರೆ ಮಜವಾದ ಉತ್ತರಗಳೇ ಎದುರುಗೊಳ್ಳುತ್ತವೆ!

    ಅಂದಹಾಗೆ ಅವನೇ ಶ್ರೀಮನ್ನಾರಾಯಣ ಚಿತ್ರದ ಕಥೆ ಎಂಬತ್ತರ ದಶಕದಲ್ಲಿ ನಡೆಯುವಂಥಾದ್ದೆಂಬ ಸುಳಿವು ಈಗಾಗಲೇ ಸಿಕ್ಕಿದೆ. ಈ ಕಾಲ ಘಟ್ಟವನ್ನು ಮರು ಸೃಷ್ಟಿಸೋದೇನು ಸಲೀಸಿನ ಕೆಲಸವಲ್ಲ. ಅದನ್ನು ಮತ್ತೆ ಸೃಷ್ಟಿಸೋದಕ್ಕಾಗಿ ಚಿತ್ರತಂಡ ಭಾರೀ ರಿಸ್ಕು ತೆಗೆದುಕೊಂಡಿದೆ. ಸಾಮಾನ್ಯವಾಗಿ ಒಂದು ಚಿತ್ರಕ್ಕೆ ಎರಡ್ಮೂರು ಸೆಟ್ ಹಾಕಿದರೆ ಅದೇ ಹೆಚ್ಚು. ಆದರೆ ಅವನೇ ಶ್ರೀಮನ್ನಾರಾಯಣ ಚಿತ್ರದ ಬಹುಪಾಲು ಚಿತ್ರೀಕರಣ ಸೆಟ್‍ನಲ್ಲಿಯೇ ನಡೆದಿದೆ. ಇದಕ್ಕೆಂದೇ ಬರೋಬ್ಬರಿ ಇಪ್ಪತ್ತು ಸೆಟ್‍ಗಳನ್ನು ಹಾಕಲಾಗಿತ್ತಂತೆ!

    ಹೀಗೆ ಸೆಟ್ ಹಾಕಿ ಚಿತ್ರೀಕರಿಸಿರೋದರಿಂದಲೇ ಇಡೀ ಚಿತ್ರ ರಿಚ್ ಆಗಿ ಮೂಡಿ ಬಂದಿದೆಯಂತೆ. ಈ ಚಿತ್ರ ಕನ್ನಡ ಮಾತ್ರವಲ್ಲದೇ ತಮಿಳು, ಹಿಂದಿ, ತೆಲುಗು, ಮಲೆಯಾಳಂನಲ್ಲಿಯೂ ಬಿಡುಗಡೆಯಾಗಲಿದೆ. ಇನ್ನುಳಿದಂತೆ ಈ ಚಿತ್ರಕ್ಕೆ ಅತೀ ಹೆಚ್ಚು ದಿನ ಚಿತ್ರೀಕರಣಗೊಂಡ ಚಿತ್ರವೆಂಬ ಗರಿಯೂ ಮೂಡಿಕೊಂಡಿದೆ. ಅವನೇ ಶ್ರೀಮನ್ನಾರಾಯಣಕ್ಕಾಗಿ ಇನ್ನೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಎಂಭತ್ತರ ದಶಕವನ್ನು ಮತ್ತೆ ಸೃಷ್ಟಿಸೋ ಕಾಯಕ ಈ ಇನ್ನೂರು ದಿನವೂ ನೆರವೇರಿದೆ. ಹೀಗೆ ತಡ ಮಾಡಿಕೊಂಡೇ ಈ ಚಿತ್ರ ದಾಖಲೆಯ ರೂವಾರಿಯಾಗಿ ಬಿಟ್ಟಿದೆ.

  • ‘ಅವನೇ ಶ್ರೀಮನ್ನಾರಾಯಣ’ ಟೀಸರ್ ರಿಲೀಸ್

    ‘ಅವನೇ ಶ್ರೀಮನ್ನಾರಾಯಣ’ ಟೀಸರ್ ರಿಲೀಸ್

    ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಸ್ಯಾಂಡಲ್‍ವುಡ್ ಮತ್ತೊಂದು ಹೈವೋಲ್ಟೇಜ್ ಸಿನಿಮಾವಾಗಿದೆ. ಇದೀಗ ಈ ಚಿತ್ರದ ಮಗದೊಂದು ಟೀಸರ್ ಬಿಡುಗಡೆಯಾಗಿದೆ.

    ರಕ್ಷಿತ್ ಹುಟ್ಟುಹಬ್ಬದ ಪ್ರಯುಕ್ತ ಗುರುವಾರವೇ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಟೀಸರ್ ನ ಕ್ವಾಲಿಟಿ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ‘ರಾಕ್ಷಸನ ಎದುರಿಸಬೇಕಾದರೆ, ಮೊದಲು ನಮ್ಮೊಳಗಿನ ರಾಕ್ಷಸನಿಂದ ಮುಕ್ತವಾಗಬೇಕು” ಎಂಬ ಡೈಲಾಗ್ ಅಭಿಮಾನಿಗಳಿಗೆ ಇಷ್ಟವಾಗಿದೆ.

    ಕೆಜಿಎಫ್ ಚಿತ್ರದಂತೆ 1980ರ ದಶಕದ ಬ್ಯಾಕ್‍ಡ್ರಾಪ್‍ನಲ್ಲಿ ಸಾಗುವ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಗೆ ಸಾವಿರಾರು ಜನ ಕಲಾವಿದರು ಸಾಥ್ ನೀಡಿದ್ದಾರೆ. ಬಿಡುಗಡೆಯಾದ ಒಂದೇ ದಿನದಲ್ಲಿ ಯೂಟ್ಯೂಬ್‍ನಲ್ಲಿ ನಂಬರ್ 1 ಟ್ರೆಂಡಿಂಗ್ ಆಗಿದೆ.

    ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿದಂತೆ ಪಂಚ ಭಾಷೆಯಲ್ಲಿ ಬೆಳ್ಳಿತೆರೆಗೆ ಬರಲಿದೆ. ಈ ಚಿತ್ರಕ್ಕೆ ಎಚ್.ಕೆ ಪ್ರಕಾಶ್ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೋಟಿ ಕೋಟಿ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ನಟಿ ಶಾನ್ವಿ ಶ್ರೀವತ್ಸವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ರಕ್ಷಿತ್ ಶೆಟ್ಟಿ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಗುರುವಾರ ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ ಹಲವು ತಿಂಗಳ ಬಳಿಕ ಸಾಮಾಜಿಕ ಜಾಲತಾಣಕ್ಕೆ ಮರಳಿದ್ದು, ಅವನೇ ಶ್ರೀಮನ್ನಾರಾಯಣ ಚಿತ್ರದ ಇಂಟ್ರಸ್ಟಿಂಗ್ ಪೋಸ್ಟರ್ ಅನ್ನು ಟ್ವಿಟ್ಟರಿನಲ್ಲಿ ಪ್ರೊಫೈಲ್ ಫೋಟೋವನ್ನಾಗಿ ಹಾಕಿದ್ದರು.

  • ದೇಶಕ್ಕಾಗಿ ದುಡಿಯುವವನಿಗೆ ಮತ ಹಾಕಿದ್ದೇನೆ – ರಕ್ಷಿತ್ ಶೆಟ್ಟಿ

    ದೇಶಕ್ಕಾಗಿ ದುಡಿಯುವವನಿಗೆ ಮತ ಹಾಕಿದ್ದೇನೆ – ರಕ್ಷಿತ್ ಶೆಟ್ಟಿ

    ಉಡುಪಿ: ಸ್ವಂತಕ್ಕೆ ಚಿಂತಿಸದೇ, ದೇಶಕ್ಕಾಗಿ ದುಡಿಯುವವನಿಗೆ ಮತ ಹಾಕಿದ್ದೇನೆ ಎಂದು ಕಿರಿಕ್ ಪಾರ್ಟಿ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

    ಜಿಲ್ಲೆಯ ಕುಕ್ಕಿಕಟ್ಟೆಯ ಖಾಸಗಿ ಅನುದಾನಿತ ಶಾಲೆಯಲ್ಲಿ ಕುಟುಂಬ ಸಮೇತ ರಕ್ಷಿತ್ ಶೆಟ್ಟಿ ಮತದಾನದಲ್ಲಿ ಪಾಲ್ಗೊಂಡಿದ್ದರು. ‘ಅವನೇ ಶ್ರೀಮನ್ನಾರಾಯಣ’ ಶೂಟಿಂಗ್ ನಲ್ಲಿ ಬಿಡುವು ಮಾಡಿಕೊಂಡು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

    ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕಾಗಿ ದುಡಿಯುವ ನಾಯಕ ಬೇಕು. ಅಂತವರನ್ನು ನಾವು ಆಯ್ಕೆ ಮಾಡಬೇಕು. ಒಬ್ಬ ನಾಯಕ ಬಂದರೆ ಒಂದು ಲಕ್ಷ ಜನವಾದರು ಬಂದು ಸೇರಬೇಕು. ಅಂತಹ ನಾಯಕತ್ವದ ಗುಣ ನಮ್ಮ ಲೀಡರ್ ಗೆ ಇರಬೇಕು. ನಮ್ಮ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂದರೆ ಮತದಾನ ಮಾಡುವುದು ನಮ್ಮ ಕರ್ತವ್ಯ. ಪ್ರಜೆಯಾಗಿ ನಾವು ಅದನ್ನು ಪಾಲಿಸಬೇಕು ಎಂದು ಎಲ್ಲರಿಗೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

    ಪ್ರಜೆಯಾಗಿ ನಾವು ಪಾಲಿಸಬೇಕಾದ ಮೊದಲ ಕರ್ತವ್ಯ ಮತದಾನದಲ್ಲಿ ಭಾಗವಹಿಸುವುದು. ಯಾರು ನಮ್ಮನ್ನು ಆಳುತ್ತಾರೆ ಅನ್ನೋದು ಇಲ್ಲಿ ಮುಖ್ಯ, ದೇಶದ ಮೇಲೆ ನಮಗಿರುವ ಪ್ರೀತಿ ಇಲ್ಲಿಂದ ಆರಂಭ ಆಗುತ್ತೆ ಎಂದರು. ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ರಕ್ಷಿತ್ ಶೆಟ್ಟಿ ಸದ್ಯ ‘ಅವನೇ ಶ್ರೀಮನ್ನಾರಾಯಣ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  • ಲೋಕಸಭಾ ಚುನಾವಣೆ ಬಳಿಕ ‘ಸ್ಯಾಂಡಲ್‍ವುಡ್’ಗೆ ಕ್ವೀನ್ ರೀ ಎಂಟ್ರಿ!

    ಲೋಕಸಭಾ ಚುನಾವಣೆ ಬಳಿಕ ‘ಸ್ಯಾಂಡಲ್‍ವುಡ್’ಗೆ ಕ್ವೀನ್ ರೀ ಎಂಟ್ರಿ!

    ಬೆಂಗಳೂರು: ಸಕ್ರಿಯ ರಾಜಕಾರಣದಲ್ಲಿ ತೊಡಗಿದ ನಂತರ ಸಿನಿಮಾದಿಂದ ದೂರವೇ ಉಳಿದಿರುವ ರಮ್ಯಾ ಮತ್ತೆ ಚಿತ್ರರಂಗದ ಕಡೆ ಮನಸು ಮಾಡಿದ್ದಾರೆ.

    ಪ್ರಸ್ತುತ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ ರಕ್ಷಿತ್ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭದಲ್ಲಿ ಸ್ಯಾಂಡಲ್‍ವುಡ್‍ಗೆ ರೀ ಎಂಟ್ರಿಯಾಗುವ ಕುರಿತು ಮಾತನಾಡಿದ್ದಾರೆ.

    ಜೂನ್ 6ರಂದು ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಟೀಸರ್ ನೋಡಿದ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿ ಟ್ವಿಟ್ಟರ್‍ನಲ್ಲಿ ಬರೆದುಕೊಂಡು ರಕ್ಷಿತ್‍ಗೆ ಟ್ಯಾಗ್ ಮಾಡಿದ್ದರು.

    ನಾನು ನಿಮ್ಮ ವಿಭಿನ್ನ ಸಿನಿಮಾಗಳನ್ನು ಇಷ್ಟಪಡುತ್ತೇನೆ. ನಿಮ್ಮ ಸಿನಿಮಾ ಪ್ರತಿಬಾರಿಯೂ ಹೊಸತನದಿಂದ ಕೂಡಿರುತ್ತದೆ. ಕನ್ನಡ ಸಿನಿಮಾಗಳಿಗೆ ನೀವು ಸರಿಯಾದ ವ್ಯಕ್ತಿ. ಹೊಸ ಹೊಸ ಸಿನಿಮಾಗಳನ್ನು ಕನ್ನಡ ಜನತೆಗೆ ನೀಡುವ ನಿಮ್ಮ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ನಿಮ್ಮ ಸಿನಿಮಾಗೆ ಶುಭವಾಗಲಿ ಅಂತಾ ತಿಳಿಸಿದ್ದರು.

    ರಮ್ಯಾ ಟ್ವೀಟ್‍ಗೆ ಪ್ರತಿಕ್ರಿಯಿಸಿದ ರಕ್ಷಿತ್ ಶೆಟ್ಟಿ, ನಮ್ಮ ಚಿತ್ರತಂಡಕ್ಕೆ ಶುಭ ಕೋರಿದ್ದಕ್ಕೆ ಧನ್ಯವಾದಗಳು. ನೀವು ಯಾವಾಗಲೂ ಸ್ಯಾಂಡಲ್‍ವುಡ್‍ನ ಕ್ವೀನ್. ಮತ್ತೆ ನಿಮ್ಮನ್ನು ಬೆಳ್ಳಿ ಪರದೆಯ ಮೇಲೆ ನೋಡಲು ಇಷ್ಟಪಡುತ್ತೇವೆ ಅಂತಾ ಉತ್ತರಿಸಿದ್ದರು. ಈ ಪ್ರಶ್ನೆಗೆ ‘2019’ ಎಂದಷ್ಟೇ ಬರೆದು ರಮ್ಯಾ ಟ್ವೀಟ್ ಮಾಡಿದ್ದಾರೆ. ರಮ್ಯಾ ಅವರ ಈ ಪ್ರತಿಕ್ರಿಯೆಗೆ 2019ರ ನಂತರ ಸ್ಯಾಂಡಲ್‍ವುಡ್‍ಗೆ ಮತ್ತೆ ಎಂಟ್ರಿಯಾಗುತ್ತಾರಾ ಎನ್ನುವ ಪ್ರಶ್ನೆಗಳನ್ನು ಇಟ್ಟುಕೊಂಡು ರಮ್ಯಾ ಅಭಿಮಾನಿಗಳು ಈಗ ಚರ್ಚೆ ಮಾಡುತ್ತಿದ್ದಾರೆ.

    2013ರ ಲೋಕಸಭಾ ಉಪಚಚುನಾವಣೆಯಲ್ಲಿ ಮಂಡ್ಯದಿಂದ ಗೆದ್ದಿದ್ದ ರಮ್ಯಾ 2014ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಈಗ ರಾಜಕಾರಣದಲ್ಲಿ ಪವರ್ ಫುಲ್ ನಾಯಕಿಯಾಗಿ ಗುರುತಿಸಿಕೊಳ್ಳುತ್ತಿರುವ ರಮ್ಯಾ ಕೊನೆಯದಾಗಿ ‘ನಾಗರಹಾವು’ ಸಿನಿಮಾದಲ್ಲಿ ನಟಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೇ ಹೆಚ್ಚು ಸುದ್ದಿಯಲ್ಲಿರುವ ರಮ್ಯಾ ಈಗ ಅಲ್ಲಿಯೇ ಚಂದನವನಕ್ಕೆ ರೀ ಎಂಟ್ರಿ ನೀಡುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

    https://twitter.com/rakshitshetty/status/1005074851902603265

  • ಶ್ರೀಮನ್ನಾರಾಯಣನಿಗೆ ಆಯ್ತು ಮುಹೂರ್ತ- ಚಿತ್ರ ಯಾಕೆ ಲೇಟಾಯ್ತು ಅಂತಾ ಹೇಳಿದ್ರು ರಕ್ಷಿತ್ ಶೆಟ್ಟಿ

    ಶ್ರೀಮನ್ನಾರಾಯಣನಿಗೆ ಆಯ್ತು ಮುಹೂರ್ತ- ಚಿತ್ರ ಯಾಕೆ ಲೇಟಾಯ್ತು ಅಂತಾ ಹೇಳಿದ್ರು ರಕ್ಷಿತ್ ಶೆಟ್ಟಿ

    ಬೆಂಗಳೂರು: ಕಿರಿಕ್ ಪಾರ್ಟಿಯ ಹೀರೋ ರಕ್ಷಿತ್ ಶೆಟ್ಟಿ ಈಗ ನಾರಾಯಣನ ಅವತಾರದಲ್ಲಿ ರಂಜಿಸೋಕ್ಕೆ ರೆಡಿಯಾಗ್ತಿದ್ದಾರೆ. ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ `ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಮುಹೂರ್ತ ನೆರೆವೇರಿಸಲಾಯ್ತು.

    ಅವನೇ ಶ್ರೀಮನ್ನಾರಾಯಣ ಪಿರಿಯಾಡಿಕಲ್ ಸಿನಿಮಾ ಆಗಿದ್ದು 80 ರ ದಶಕದ ಪೊಲೀಸ್ ಆಫೀಸರ್ ಪಾತ್ರದಲ್ಲಿ ರಕ್ಷಿತ್ ಕಾಣಿಸಿಕೊಳ್ಳಲಿದ್ದಾರೆ. ಒಂದು ವರ್ಷ ಸ್ಕ್ರಿಪ್ಟ್ ಕೆಲಸ ಮಾಡಿದ್ದರಿಂದ ಚಿತ್ರದ ಮುಹೂರ್ತ ಲೇಟ್ ಆಯ್ತು. ಬಹುತೇಕ ಸೆಟ್ ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದ್ದು ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲಿಯೂ ಚಿತ್ರೀಕರಣ ನಡೆಯಲಿದೆ ಅಂತಾ ರಕ್ಷಿತ್ ಶೆಟ್ಟಿ ತಿಳಿಸಿದ್ರು.

    ಸಚಿನ್ ಆ್ಯಕ್ಷನ್ ಕಟ್ ಹೇಳ್ತಿರೋ ಚೊಚ್ಚಲ ಸಿನಿಮಾ ಇದಾಗಿದ್ದು ರಕ್ಷಿತ್ ಜೊತೆ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ಸಾಥ್ ಕೊಡ್ತಿದ್ದಾರೆ. ಪೂಜೆ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಭಾಗಿಯಾಗಿ ಫಿಲಂ ಟೀಮ್‍ಗೆ ಗುಡ್‍ಲಕ್ ಅಂತ ವಿಶ್ ಮಾಡಿದ್ರು.