Tag: ಅವನೇ ಶ್ರೀಮನ್ನಾರಯಣ

  • ರಕ್ಷಿತ್ ಶೆಟ್ಟಿಗೆ 36ರ ಹುಟ್ಟುಹಬ್ಬದ ಸಂಭ್ರಮ- ಅಭಿಮಾನಿಗಳಿಗೆ ಸಿಂಪಲ್ ಸ್ಟಾರ್‌ನಿಂದ ಗಿಫ್ಟ್

    ರಕ್ಷಿತ್ ಶೆಟ್ಟಿಗೆ 36ರ ಹುಟ್ಟುಹಬ್ಬದ ಸಂಭ್ರಮ- ಅಭಿಮಾನಿಗಳಿಗೆ ಸಿಂಪಲ್ ಸ್ಟಾರ್‌ನಿಂದ ಗಿಫ್ಟ್

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇಂದು ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

    ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಂಜೆ ‘ಅವನೇ ಶ್ರೀಮನ್ನಾರಾಯಣ’ ಚಿತ್ರತಂಡ ಟೀಸರ್ ಬಿಡುಗಡೆ ಆಗಲಿದೆ.

    ಸದ್ಯ ರಕ್ಷಿತ್ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ‘ಅವನೇ ಶ್ರೀಮನ್ನಾರಾಯಣ’ ಹಾಗೂ ‘777 ಚಾರ್ಲಿ’ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಈ ಎರಡು ಚಿತ್ರದ ಪೋಸ್ಟರ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಈಗ ಅವರು ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಗಾಗಿ ಕಾಯುತ್ತಿದ್ದಾರೆ.

    ಹಲವು ತಿಂಗಳ ಬಳಿಕ ಇಂದು ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಕ್ಕೆ ಮರಳಿದ್ದು ಅವನೇ ಶ್ರೀಮನ್ನಾರಾಯಣ ಚಿತ್ರದ ಇಂಟ್ರಸ್ಟಿಂಗ್ ಪೋಸ್ಟರ್ ವೊಂದು ಟ್ವಿಟ್ಟರಿನಲ್ಲಿ ಪ್ರೋಫೈಲ್ ಫೋಟೋವನ್ನಾಗಿ ಹಾಕಿದ್ದಾರೆ. ಈ ಪೋಸ್ಟರ್ ನಲ್ಲಿ ರಕ್ಷಿತ್ ಪೊಲೀಸ್ ಸಮವಸ್ತ್ರದಲ್ಲಿ ಗನ್ ಹಿಡಿದುಕೊಂಡು ನಿಂತಿದ್ದಾರೆ.

    ಅವನೇ ಶ್ರೀಮನ್ನಾರಾಯಣ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಈ ಚಿತ್ರದ ಚಿತ್ರೀಕರಣವೇ ಬರೋಬ್ಬರಿ 600 ದಿನ ನಡೆದಿದೆ. ಈ ಚಿತ್ರವನ್ನು ಸಚಿನ್ ರವಿ ನಿರ್ದೇಶನ ಮಾಡುತ್ತಿದ್ದು, ರಕ್ಷಿತ್ ಅವರಿಗೆ ನಾಯಕಿಯಾಗಿ ಶಾನ್ವಿ ಶ್ರೀವತ್ಸ್ ನಟಿಸಿದ್ದಾರೆ.

    ರಕ್ಷಿತ್ ನಟಿಸುತ್ತಿರುವ 777 ಚಾರ್ಲಿ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಪೋಸ್ಟರ್ ನಲ್ಲಿ ರಾಯಲ್ ಎನ್‍ಫೀಲ್ಡ್ ನಲ್ಲಿ ನಾಯಿ ಜೊತೆ ಹೋಗುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಎರಡು ಪೋಸ್ಟರ್ ಈ ಮೊದಲು ಬಿಡುಗಡೆಯಾಗಿದೆ. ಈ ಚಿತ್ರವನ್ನು ಕಿರಣ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ.

    ರಕ್ಷಿತ್ ಶೆಟ್ಟಿ ಕೆಲ ದಿನಗಳ ಹಿಂದೆ ಹೇಳಿದಂತೆಯೇ ಸಾಮಾಜಿಕ ಜಾಲತಾಣಕ್ಕೆ ರೀ- ಎಂಟ್ರಿ ನೀಡುವ ಮೂಲಕ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ.