Tag: ಅವಘಡ

  • ಓವರ್‌ಲೋಡ್‌ನಿಂದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಪಲ್ಟಿ – ಓರ್ವ ಸಾವು

    ಓವರ್‌ಲೋಡ್‌ನಿಂದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಪಲ್ಟಿ – ಓರ್ವ ಸಾವು

    ಬೆಳಗಾವಿ: ಚಲಿಸುತ್ತಿದ್ದ ಕಾರಿನ ಮೇಲೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಪಲ್ಟಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಬೆಳಗಾವಿ (Belagavi) ಹೊರವಲಯದ ಸುವರ್ಣಸೌಧದ ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನು ಹುಬ್ಬಳ್ಳಿಯ (Hubballi) ಲಕ್ಷ್ಮಿನಗರದ ನಿವಾಸಿ ಗಿರೀಶ್ ಕುಲಕರ್ಣಿ(24) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: PUBLiC TV Impact | ಕತ್ತಲಲ್ಲಿ ವಾಸಿಸುತ್ತಿದ್ದ 30 ಕುಟುಂಬಗಳಿಗೆ ಬೆಳಕಿನ ಭಾಗ್ಯ

    ಬೆಳಗಾವಿ ಹೊರವಲಯದ ಸುವರ್ಣಸೌಧದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಬೆಳಗಾವಿಗೆ ಬರ್ತ್ಡೇ ಪಾರ್ಟಿಗೆಂದು ಮೂವರು ಯುವಕರು ಬಂದಿದ್ದರು. ಪಾರ್ಟಿ ಮುಗಿಸಿ ಮರಳಿ ಹುಬ್ಬಳ್ಳಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಪಕ್ಕದಲ್ಲಿ ಚಲಿಸುತ್ತಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌ ಏಕಾಏಕಿ ಕಾರಿನ ವಾಲಿ ಪಲ್ಟಿ ಹೊಡೆದಿದೆ.

    ಪಲ್ಟಿ ಹೊಡೆದ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ರಥಮ್ ಎಂಬಾತ ಗಂಭೀರ ಗಾಯಗೊಂಡಿದ್ದಾನೆ. ಸದ್ಯ ಯುವಕನ ಸ್ಥಿತಿ ಗಂಭೀರ, ಮತ್ತೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಟ್ರ್ಯಾಕ್ಟರ್‌ನಲ್ಲಿ ಓವರ್ ಲೋಡ್ ಆಗಿ ಕಬ್ಬು ತುಂಬಿದ್ದ ಪರಿಣಾಮ ಈ ಅವಘಡ ಸಂಭವಿಸಿದ್ದು, ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: MUDA Case | ಮುಡಾ ಬ್ರಹ್ಮಾಂಡ ಭ್ರಷ್ಟಾಚಾರಕ್ಕಿತ್ತಾ ಐಎಎಸ್ ಅಧಿಕಾರಿಯ ಶ್ರೀರಕ್ಷೆ?

  • ಬೆಂಗಳೂರಿನ ಗುಜುರಿ ಅಂಗಡಿಯಲ್ಲಿ ಅಗ್ನಿ ಅವಘಡ

    ಬೆಂಗಳೂರಿನ ಗುಜುರಿ ಅಂಗಡಿಯಲ್ಲಿ ಅಗ್ನಿ ಅವಘಡ

    ಬೆಂಗಳೂರು: ಗುಜುರಿ ಅಂಗಡಿಯೊಂದು ಹೊತ್ತಿ ಉರಿದಿರುವ ಘಟನೆ ಮೈಸೂರು ರಸ್ತೆಯ ನಾಯಂಡಹಳ್ಳಿ( Nayanda Halli) ಬಳಿ ನಡೆದಿದೆ.

    ಇಂದು ಮುಂಜಾನೆ ಸುಮಾರು 5:30ರಲ್ಲಿ ಗುಜುರಿ ಅಂಗಡಿಗೆ ಬೆಂಕಿ ತಗುಲಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ತೀವ್ರ ಬೆಂಕಿಯ ಪರಿಣಾಮ ಗುಜುರಿ ಅಂಗಡಿಯಲ್ಲಿದ್ದ ವೆಸ್ಟೇಜ್ ಎಲ್ಲವೂ ಬೆಂಕಿಗಾಹುತಿಯಾಗಿದೆ. ಇದನ್ನೂ ಓದಿ: ಮೋದಿಯವರು ಪಿತ್ರಾರ್ಜಿತ ಆಸ್ತಿಯಿಂದ ಜಾಹೀರಾತುಗಳಿಗೆ ದುಡ್ಡು ನೀಡುತ್ತಿದ್ದಾರೆಯೇ: ದಿನೇಶ್ ಗುಂಡೂರಾವ್ ಪ್ರಶ್ನೆ

    ಮುಂಜಾನೆಯಲ್ಲಿ ಅಂಗಡಿಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಪಾಯವಾಗಿಲ್ಲ. ಅದರೆ ಘಟನೆಯಿಂದ ತೀವ್ರ ನಷ್ಟವಾಗಿದೆ. ಕೂಡಲೇ ಸ್ಥಳಕ್ಕೆ 4 ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿ ಆಪರೇಷನ್‌ ಕಾಂಗ್ರೆಸ್‌ – ಕೊತ್ತುರು ಬಾಂಬ್‌ಗೆ ಸಮೃದ್ಧಿ, ವೆಂಕಟಶಿವಾರೆಡ್ಡಿ ಸ್ಪಷ್ಟನೆ

     

  • ಶೂಟಿಂಗ್ ವೇಳೆ ನಟ ಪೃಥ್ವಿರಾಜ್‌ಗೆ ಗಂಭೀರ ಗಾಯ: ಇಂದು ಸರ್ಜರಿ

    ಶೂಟಿಂಗ್ ವೇಳೆ ನಟ ಪೃಥ್ವಿರಾಜ್‌ಗೆ ಗಂಭೀರ ಗಾಯ: ಇಂದು ಸರ್ಜರಿ

    ಲಯಾಳಂನ (Malayalam) ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ನಿನ್ನ ನಡೆದ ಶೂಟಿಂಗ್ ವೇಳೆ ಕಾಲಿಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದರು. ವಿಲಾಯತ್ ಬುದ್ದ ಸಿನಿಮಾದ ಚಿತ್ರೀಕರಣದ ವೇಳೆ ಈ ಅವಘಡ (Avaghada) ನಡೆದಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಶಸ್ತ್ರ ಚಿಕಿತ್ಸೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.

    ಬಹು ನಿರೀಕ್ಷಿತ ಮಲಯಾಳಂನ ವಿಲಾಯತ್ ಬುದ್ದ (Vilayat Buddha) ಸಿನಿಮಾದ ಸಾಹಸ ಪ್ರಧಾನ ದೃಶ್ಯವನ್ನು ಚಿತ್ರೀಕರಣ ಮಾಡುತ್ತಿದ್ದರು ನಿರ್ದೇಶಕರು ಈ ವೇಳೆ ಕಾಲಿಗೆ ಬಲವಾಗಿಯೇ ಏಟಾಗಿತ್ತು. ಶಸ್ತ್ರ ಚಿಕಿತ್ಸೆಯ (Surgery) ನಂತರ ಕೆಲ ವಾರಗಳ ಕಾಲ ಅವರು ವಿಶ್ರಾಂತಿ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾಗಿ ಚಿತ್ರೀಕರಣಕ್ಕೆ ಬ್ರೇಕ್ ಬೀಳಲಿದೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್

    ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಸುದ್ದಿ ಹರಡುತ್ತಿದ್ದಂತೆಯೇ ಅವರ ಅಭಿಮಾನಿಗಳು ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. ನಟನ ಆರೋಗ್ಯದ ಕುರಿತಾಗಿ ಅಪ್ ಡೇಟ್ ಪಡೆಯಲು ಕಾದಿದ್ದರು. ಆತಂಕ ಪಡುವಂಥದ್ದು ಏನೂ ಆಗಿಲ್ಲ. ಸಣ್ಣದೊಂದು ಸರ್ಜರಿ ಮಾಡಬೇಕಿದೆ ಎಂದು ವೈದ್ಯರು ಹೇಳಿದ ಬಳಿಕವೇ ಅಭಿಮಾನಿಗಳು ಅಲ್ಲಿಂದ ಹೊರಟಿದ್ದಾರೆ.

     

    ಪೃಥ್ವಿರಾಜ್ ಸುಕುಮಾರನ್ ಗೂ ಕನ್ನಡ ಚಿತ್ರೋದ್ಯಮಕ್ಕೂ ಸಾಕಷ್ಟು ನಂಟಿದೆ. ಹೊಂಬಾಳೆ ಬ್ಯಾನರ್ಸ್ ನಲ್ಲಿ ಇವರೊಂದು ಸಿನಿಮಾವೊಂದನ್ನು ನಿರ್ದೇಶನ ಹಾಗೂ ನಟನೆ ಮಾಡಬೇಕಿದೆ. ಸಲಾರ್ ಸಿನಿಮಾದಲ್ಲೂ ಇವರು ಮಹತ್ವದ ಪಾತ್ರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

  • ಭಾರೀ ಅಗ್ನಿ ಅವಘಡ – 90ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿ

    ಭಾರೀ ಅಗ್ನಿ ಅವಘಡ – 90ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ 10 ಕಾರುಗಳು, 1 ಮೋಟಾರ್ ಸೈಕಲ್, 2 ಸ್ಕೂಟಿ, 30 ಹೊಸ ಇ-ರಿಕ್ಷಾ, 50 ಹಳೆಯ ಇ-ರಿಕ್ಷಾಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.

    ಜಾಮಿಯಾ ನಗರ ಮೆಟ್ರೋ ನಿಲ್ದಾಣ ಬಳಿ ಇರುವ ಎಲೆಕ್ಟ್ರಿಕ್ ಮೋಟಾರ್ ಪಾರ್ಕಿಂಗ್‌ನಲ್ಲಿ ಈ ಘಟನೆ ನಡೆದಿದೆ. ಬುಧವಾರ ಬೆಳಗ್ಗೆ 5 ಗಂಟೆಯ ಸುಮಾರು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದ್ದು, 11 ಅಗ್ನಿ ಶಾಮಕದಳ ವಾಹನಗಳ ಮೂಲಕ ಬೆಂಕಿಯನ್ನು ನಂದಿಸಲಾಗಿದೆ. ಇದನ್ನೂ ಓದಿ: ನಾಳೆಯಿಂದ ಪಿಯುಸಿ ತರಗತಿಗಳು ಪ್ರಾರಂಭ- ಹಿಜಬ್ ನಿಷೇಧ

    ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲವಾದರೂ ದೊಡ್ಡ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಹಾನಿಯಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲವೂ ಎಲೆಕ್ಟ್ರಿಕ್ ವಾಹನಗಳಾಗಿರುವ ಹಿನ್ನೆಲೆ ಇದು ಶಾರ್ಟ್ ಸಕ್ಯೂರ್ಟ್ ನಿಂದ ಆಗಿರುವ ಸಾಧ್ಯತೆ ಇದೆ, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರೆಪೋ ರೇಟ್ ಏರಿಸಿದ ಆರ್‌ಬಿಐ – ಹೆಚ್ಚಳವಾಗಲಿದೆ ಲೋನ್, ಇಎಂಐಗಳ ಬಡ್ಡಿ ದರ

    ದೆಹಲಿಯಲ್ಲಿ ಕಳೆದ ಕೆಲವು ವಾರಗಳಿಂದ ಹಲವು ಕಡೆಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಇತ್ತೀಚೆಗೆ ಮುಂಡ್ಕಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 27 ಜನರು ಸಾವನ್ನಪ್ಪಿದ್ದರು ಹಾಗೂ ಅನೇಕರು ಗಾಯಗೊಂಡರು. ಮೃತ ದೇಹಗಳ ಗುರುತು ಸಿಗದ ಕಾರಣ ಡಿಎನ್‌ಎ ಪ್ರೊಫೈಲಿಂಗ್ ಮೂಲಕ ಪತ್ತೆ ಮಾಡಲಾಗಿತ್ತು.

  • ಶಿವಮೊಗ್ಗ ದುರಂತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ: ಬಿಎಸ್‍ವೈ

    ಶಿವಮೊಗ್ಗ ದುರಂತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ: ಬಿಎಸ್‍ವೈ

    – ಹೆಚ್‍ಡಿಕೆ, ಪ್ರಹ್ಲಾದ್ ಜೋಷಿ ಸಂತಾಪ

    ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಹುಣಸೋಡು ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿದ ಕುರಿತಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಕುಟುಂಬದವರಲ್ಲಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೆಲ್ಲರೂ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ದುರ್ಘಟನೆಯ ಕುರಿತಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಸಿಎಂ ಬಿಎಸ್‍ವೈ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ಶಿವಮೊಗ್ಗದ ಅಬ್ಬಲಗೆರೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ಜಿಲಿಟಿನ್ ಕಡ್ಡಿಗಳ ಸ್ಫೋಟದಿಂದ ಅನೇಕ ಕಾರ್ಮಿಕರು ಸಾವು ಕಂಡಿರುವುದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ಸ್ಫೋಟ ದುರಂತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಬಡ ಕಾರ್ಮಿಕರ ಜೀವ ಹರಣಕ್ಕೆ, ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

    ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ಡೈನಾಮೈಟ್ ಲಾರಿ ಸ್ಫೋಟಗೊಂಡು 6ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದು ದುರದೃಷ್ಟಕರ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಕುಟಂಬದವರಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ. ಈ ದುರ್ಘಟನೆಯಲ್ಲಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.

  • ಕಟ್ಟಡ ದುರಂತ ಬೆನ್ನಲ್ಲೇ ಮತ್ತೊಂದು ಅವಘದ – ಮಹಿಳೆ ಸಾವು

    ಕಟ್ಟಡ ದುರಂತ ಬೆನ್ನಲ್ಲೇ ಮತ್ತೊಂದು ಅವಘದ – ಮಹಿಳೆ ಸಾವು

    ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್ ಇಟ್ಟಿಗೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿ, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಆರ್.ಕೆ ಹೆಗ್ಡೆ ನಗರದಲ್ಲಿ ನಡೆದಿದೆ.

    ಮಲ್ಲಮ್ಮ (30) ಮೃತ ಮಹಿಳೆಯಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಇಟ್ಟಿಗೆಗಳನ್ನ ಮೂರನೇ ಮಹಡಿಗೆ ಸಾಗಿಸುವಾಗ ಅವಘಡ ಸಂಭವಿಸಿದೆ. ಮಹಡಿ ಕೆಳಗಿದ್ದ ಮಹಿಳೆಯ ತಲೆ ಮೇಲೆ ಇಟ್ಟಿಗೆಗಳು ಬಿದ್ದ ಪರಿಣಾಮ ಅಧಿಕ ರಕ್ತಸ್ರಾವ ಆಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದರು ದಾರಿ ಮಧ್ಯೆದಲ್ಲಿಯೇ ಮಹಿಳೆ ಸಾವನ್ನಪ್ಪಿದ್ದಾರೆ.

    ಘಟನೆಯಲ್ಲಿ ಮಲ್ಲೇಶ್ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಂದಹಾಗೇ ಮೃತ ಮಲ್ಲಮ್ಮ ರಾಯಚೂರು ಜಿಲ್ಲೆಯ ಸಗಮಕುಂಟ ಗ್ರಾಮದ ನಿವಾಸಿಯಾಗಿದ್ದು, ಜಿಲ್ಲೆಯಲ್ಲಿ ಬರಗಾಲ ಆವರಿಸಿರುವ ಹಿನ್ನಲೆ ಬೆಂಗಳೂರಿಗೆ ದುಡಿಯಲು ಕುಟುಂಬ ಸಮೇತ ನಗರಕ್ಕೆ ವಲಸೆ ಬಂದಿದ್ದರು. ಘಟನೆಗೆ ಕಟ್ಟಡ ಮಾಲೀಕರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.

  • ಉಡುಪಿಯಲ್ಲಿ ಹೆಚ್ಚಾಗುತ್ತಿದೆ ಮಳೆರಾಯನ ಆರ್ಭಟ – ಎಲ್ಲೆಲ್ಲಿ ಏನಾಗಿದೆ?

    ಉಡುಪಿಯಲ್ಲಿ ಹೆಚ್ಚಾಗುತ್ತಿದೆ ಮಳೆರಾಯನ ಆರ್ಭಟ – ಎಲ್ಲೆಲ್ಲಿ ಏನಾಗಿದೆ?

    ಉಡುಪಿ: ಜಿಲ್ಲೆಯಲ್ಲಿ ಮೂರನೇ ದಿನ ಸುರಿದ ಮಳೆ ಭಾರೀ ಅನಾಹುತವನ್ನು ಸೃಷ್ಟಿಸಿದೆ. ಮಹಾಮಳೆಗೆ ಹಲವೆಡೆ ಮನೆಗಳು ಹಾನಿಯಾಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ತಗ್ಗು ಪ್ರದೇಶಗಳಿಗೆ ನೆರೆ ನೀರು ಆವರಿಸಿ ಜನ ಪರದಾಡುವಂತಾಗಿದೆ.

    ಮೀನುಗಾರಿಕೆ ಸಂಪೂರ್ಣ ಸ್ತಬ್ಧಗೊಂಡಿದ್ದು, ಬೋಟುಗಳು ಮಲ್ಪೆ ಬಂದರಿನಲ್ಲಿ ಲಂಗರು ಹಾಕಿವೆ. ಇನ್ನು ಐತಿಹಾಸಿಕ ದುರ್ಗಾ ಪರಮೇಶ್ವರೀ ದೇಗುಲದ ಗರ್ಭಗುಡಿಗೆ ನೀರು ಬಂದಿದ್ದು, ಸಮೃದ್ಧಿಯ ಸಂಕೇತ ಎಂಬ ನೆಲೆಯಲ್ಲಿ ಈ ಭಾಗದ ಭಕ್ತಜನತೆ ಪುಳಕಗೊಂಡಿದ್ದಾರೆ.

    ಮುಂಜಾಗೃತ ಕ್ರಮವಾಗಿ ಇವತ್ತು ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕೇರಳದ ಮಹಾಮಳೆಯ ಪರಿಣಾಮ ಕರಾವಳಿಗೂ ತಟ್ಟಿದ್ದು, ಎಲ್ಲೆಡೆ ನೀರಿನ ಮಟ್ಟ ಏರತೊಡಗಿದೆ. ಜಿಲ್ಲೆಯ ಪಂಚನದಿಗಳು ತುಂಬಿ ಹರಿಯುತ್ತಿದ್ದು, ಅಪಾಯದ ಮುನ್ಸೂಚನೆಯನ್ನು ನೀಡತೊಡಗಿವೆ.

    ಮಹಾಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕುಂದಾಪುರದ ಕಮಲಶಿಲೆಯಲ್ಲಿ ಮೈದುಂಬಿ ಹರಿಯುತ್ತಿರುವ ಕುಬ್ಜಾ ನದಿಯ ನೀರು ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗೆ ಬಂದಿದ್ದು, ಭಕ್ತರು ಪುಳಕಗೊಂಡಿದ್ದಾರೆ. ವಾಡಿಕೆಯಂತೆ ಮಹಾಮಳೆಗೆ ಈ ದೇವಸ್ಥಾನದೊಳಗೆ ನೀರು ಬಂದು ಕುಬ್ಜಾ ನದಿಯೆ ದೇವಿಗೆ ನೈಸರ್ಗಿಕ ಅಭಿಷೇಕವನ್ನು ಸಲ್ಲಿಸುತ್ತದೆ. ನಿನ್ನೆ ರಾತ್ರಿ ಭಾರೀ ಮಳೆ ಸುರಿದಿದ್ದರಿಂದ ಇಂದು ಗರ್ಭ ಗುಡಿಗೆ ನೀರು ಆವರಿಸಿದೆ. ಗರ್ಭಗುಡಿ ಜಲಾವೃತ ಆಗುತ್ತಿದ್ದಂತೆ ಅರ್ಚಕರು ದೇವಿಗೆ ಆರತಿ ಬೆಳಗಿದರು. ನೀರು ಬಂದ ಹಿನ್ನೆಲೆಯಲ್ಲಿ ಭಕ್ತರು ಪುಳಕಗೊಂಡರು.

    ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ತಡರಾತ್ರಿ ಬೀಸಿದ ಸುಂಟರಗಾಳಿಗೆ ಕಾರ್ಕಳದ ಜನತೆ ನಲುಗಿ ಹೋಗಿದ್ದಾರೆ. ಸುಂಟರಗಾಳಿಗೆ ಬಹುತೇಕ ಮನೆಗಳ ಛಾವಣಿ ಹಾರಿಹೋಗಿದ್ದು, ಕೆಲ ಮನೆಗಳ ಗೋಡೆ ಕುಸಿದಿವೆ. 50ಕ್ಕೂ ಹೆಚ್ಚು ವಿದ್ಯುತ್ ಕಂಬ ನೆಲಕ್ಕೆ ಉರುಳಿವೆ. ಮಕ್ಕುಬುಲ್ ಎಂಬವರ ಮನೆ ಮೇಲೆ ಮರಬಿದ್ದು ಮನೆ ಜಖಂ ಗೊಂಡಿದ್ದು, 18 ಲಕ್ಷ ರೂ. ನಷ್ಟವಾಗಿದೆ.

    ಕುಕ್ಕುಂದೂರು ಗ್ರಾಮಪಂಚಾಯತ್ ಕಟ್ಟಡವೂ ಭಾಗಶಃ ಹಾನಿಯಾಗಿದ್ದು, ಜಯಂತಿನಗರದ ಶಾಲೆ ಕಟ್ಟಡ ಕುಸಿದಿದೆ. ಇನ್ನು ಕಾರ್ಕಳ ತಾಲೂಕು ಕಚೇರಿ ಮೇಲೆ ಮರ ಉರುಳುವ ಜೊತೆಗೆ ಸಮೀಪದಲ್ಲಿದ್ದ ಸರ್ಕಾರಿ ವಾಹನದ ಮೇಲೂ ಮರದ ಕೊಂಬೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

    ಬ್ರಹ್ಮಾವರದ ಉಪ್ಪೂರು ಸ್ವರ್ಣ ನದಿ, ಸೀತಾ ನದಿ, ಸೌಪರ್ಣಿಕ ನದಿಗಳು ಮೈದುಂಬಿ ಹರಿಯುತ್ತಿವೆ. ಪರಿಣಾಮ ನದಿತಟದ ಅಕ್ಕಪಕ್ಕದ ಮನೆಗಳಿಗೆ ನೆರೆ ನೀರು ನುಗ್ಗಿದೆ. ನಿರಂತರವಾಗಿ ಸುರಿದ ಭಾರೀ ಮಳೆಗೆ ಬ್ರಹ್ಮಾವರ ತಾಲೂಕಿನ ಬೈಕಾಡಿ, ಉಪ್ಪೂರು, ಕಲ್ಯಾಣಪುರದಲ್ಲಿ ನೆರೆ ನೀರು ಆವರಿಸಿದೆ. ಕುಂದಾಪುರ ತಾಲೂಕಿನ ಬಡಾಕೆರೆ, ನಾವುಂದ, ಬಾಗು, ಮರವಂತೆ, ಅರೆಹೊಳೆ, ಕೋಣ್ಕಿ, ನಾಡ, ಪಡುಕೋಣೆ, ಚಿಕ್ಕಳಿ, ಸೇನಾಪುರ ಗ್ರಾಮಗಳಲ್ಲಿ ನೆರೆ ನೀರು ಗದ್ದೆ, ಮನೆಗಳಿಗೆ ನುಗ್ಗಿದೆ. ನದಿ ತೀರಗಳಲ್ಲಿ ಜನಜೀವನ ಸಂಕಷ್ಟಕ್ಕೆ ಸಿಲುಕಿದ್ದು, ದೋಣಿ ಮೂಲಕ ಸಂಚಾರ ಮಾಡುವ ಪರಿಸ್ಥಿತಿ ಎದರುರಾಗಿದೆ.

    ಶಿರೂರು ಅಳ್ವೆಗದ್ದೆ ಬಂದರಿನಲ್ಲಿ ಲಂಗರು ಹಾಕಿದ 6 ದೋಣಿ ಹಾಗೂ 2 ಪರ್ಷಿಯನ್ ಬೋಟ್ ನೀರಿನಲ್ಲಿ ಕೊಚ್ಚಿ ಹೋಗಿ ಸಮುದ್ರ ಪಾಲಾಗಿದೆ. ಒಂದು ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ಉಪ್ಪುಂದದ 3 ಸಾಗರ ದೀಪ ಹೆಸರಿನ ದೋಣಿ, 3 ಬಬ್ರಿಹಿಂಡ್ ಪ್ರಸಾದ ಹೆಸರಿನ ದೋಣಿ ಹಾಗೂ ಶಿರೂರಿನ ಸ್ಥಳೀಯರ 1 ಬೋಟ್, ಸೋಡಿಗದ್ದೆ ಸಮೀಪದ 1 ಬೋಟ್‍ಗೆ ಹಾನಿಯಾಗಿದೆ. ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರ ಹರಸಾಹಸದಿಂದ ದೋಣಿಗಳನ್ನು ಹಗ್ಗ ಕಟ್ಟಿ ರಕ್ಷಿಸಿದ್ದಾರೆ. ಆದರೆ ದೋಣಿ, ಬೋಟ್‍ನ ಎಂಜಿನ್‍ಗೆ ಸಂಪೂರ್ಣ ಹಾನಿಯಾಗಿದೆ. ತೂಫಾನಿನ ರಭಸಕ್ಕೆ ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟೊಂದು ಮುಳುಗಡೆಯಾಗಿದೆ.

    ಮೀನುಗಾರರನ್ನು ರಕ್ಷಣೆ ಮಾಡಲಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ. ಉಪ್ಪೂರು ಹೊಳೆ, ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದ್ದು ಈ ಭಾಗದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಂದು ಮೋಡಕವಿದ ವಾತಾವರಣವಿದ್ದು, ಮಳೆ ಮುಂದುವರಿಯುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಚಾರದ ವೇಳೆ ಭಾರೀ ಅವಘಡದಿಂದ ಪಾರಾದ ರಾಕಿಂಗ್ ಸ್ಟಾರ್!

    ಪ್ರಚಾರದ ವೇಳೆ ಭಾರೀ ಅವಘಡದಿಂದ ಪಾರಾದ ರಾಕಿಂಗ್ ಸ್ಟಾರ್!

    ಬೆಂಗಳೂರು: ರಾಜ್ಯಾದ್ಯಂತ ತಮ್ಮ ಇಷ್ಟದ ಅಭ್ಯರ್ಥಿ ಪರ ನಟ ಯಶ್ ಪ್ರಚಾರ ಮಾಡುತ್ತಿದ್ದಾರೆ. ಹೀಗೆ ಪ್ರಚಾರ ಮಾಡುವ ವೇಳೆ ನಡೆದ ಒಂದು ಅವಘಡದಿಂದಾಗಿ ಯಶ್ ಅದೃಷ್ಟವಶಾತ್ ಪಾರಾಗಿದ್ದಾರೆ.

    ತಾರೆಯರು ಪ್ರಚಾರಕ್ಕೆ ಬರುತ್ತಾರೆ ಎಂದರೆ ಭಾರೀ ಜನ ಸೇರ್ತಾರೆ. ತಮ್ಮ ನೆಚ್ಚಿನ ನಟನನ್ನ ನೋಡೋಕೆ ಸಿಗೋ ಅವಕಾಶವನ್ನ ಉಯೋಗಿಸಿಕೊಳ್ತಾರೆ. ಈ ವೇಳೆ ಆಗದವವರು ಆಗುವವರು ಯಾರು ಅನ್ನೋದು ಅಲ್ಲಿನ ಜನರ ಮಧ್ಯೆ ಗೊತ್ತಾಗಲ್ಲ. ಹೀಗೆ ಜನರ ಗುಂಪಿನಲ್ಲೇ ಇದ್ದ ಒಬ್ಬ ಕಿಡಿಗೇಡಿಯಿಂದ ಯಶ್ ಅವಘಡಕ್ಕೆ ಈಡಾಗುವ ಸಂದರ್ಭ ರಾಯಚೂರಿನ ಲಿಂಗಸೂರಿನಲ್ಲಿ ನಡೆದಿತ್ತು.

    ಲಿಂಗಸೂರಿನಲ್ಲಿ ಯಶ್ ಬಿಜೆಪಿ ಅಭ್ಯರ್ಥಿ ಮಾದಪ್ಪ ವಜ್ಜಲ್ ಪರ ಪ್ರಚಾರ ನಡೆಸುವ ವೇಳೆ ಕಿಡಿಗೇಡಿಯೊಬ್ಬ ಯಶ್ ನಿಂತಿರುವ ಕ್ಯಾಂಟರ್‍ಗೆ ಮಾದಪ್ಪ ವಜ್ಜಲ್ ಮೇಲೆ ಕಲ್ಲೆಸಿದಿದ್ದಾರೆ. ಕೊಂಚ ಗುರಿ ತಪ್ಪಿದರೂ ಯಶ್ ಮೇಲೆ ಆ ಕಲ್ಲು ಬೀಳುತ್ತಿತ್ತು. ಆದರೆ ಯಶ್ ಆ ದುರಂತದಿಂದ ಪಾರಾದರು.

    ತಾರೆಗಳು ರೋಡ್ ಶೋಗೆ ಬರುವ ವೇಳೆ ಇಂಥಹ ಪರಿಸ್ಥಿತಿ ಅನೇಕ ಬಾರಿ ಎದುರಾಗಿದ್ದಿದೆ. ಗೋಕಾಕ್ ಚಳುವಳಿ ವೇಳೆ ಕರೆಂಟ್ ಟ್ರಾಸ್ಸ್‍ಮಿಷನ್ ಲೈನ್ ರಾಜ್‍ಕುಮಾರ್‍ಗೆ ತಗುಲುವ ಸಂದರ್ಭವಿತ್ತು. ಅಭಿಮಾನಿಯೋರ್ವರ ಸಮಯಪ್ರಜ್ಞೆಯಿಂದಾಗಿ ರಾಜ್‍ಕುಮಾರ್ ಬಚಾವಾಗಿದ್ದರು. ಇದೀಗ ಯಶ್ ಕೂಡ ಅಂಥದ್ದೇ ಒಂದು ದೊಡ್ಡ ದುರಂತದಿಂದ ಬಚಾವಾಗಿದ್ದಾರೆ.

  • ಬ್ರೇಕ್ ಫೇಲ್ ಆಗಿ ಡಿವೈಡರ್, ಮರಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್- ಚಾಲಕನಿಂದ 16 ಮಕ್ಕಳ ರಕ್ಷಣೆ

    ಬ್ರೇಕ್ ಫೇಲ್ ಆಗಿ ಡಿವೈಡರ್, ಮರಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್- ಚಾಲಕನಿಂದ 16 ಮಕ್ಕಳ ರಕ್ಷಣೆ

    ಮುಂಬೈ: ಶಾಲಾ ಬಸ್‍ವೊಂದರ ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಬಸ್ ಚಾಲಕ 16 ಮಕ್ಕಳನ್ನು ಅಪಾಯದಿಂದ ಕಾಪಾಡಿದ್ದಾರೆ.

    ಗೋರೆಗಾಂವ್ ನ ಒಬೆರಾಯ್ ಮಾಲ್ ಸಿಗ್ನಲ್ ಬಳಿ ಈ ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದ ಬಸ್ ಗೋಕುಲ್ಧಾಮ್ ನಲ್ಲಿರುವ ರಯಾನ್ ಇಂಟರ್ ನ್ಯಾಷನಲ್ ಶಾಲೆಗೆ ಸೇರಿದ್ದಾಗಿದೆ.

    ಶಾಲೆಯಿಂದ ಮಧ್ಯಾಹ್ನ ಸುಮಾರು 1.30ಕ್ಕೆ ವಿದ್ಯಾರ್ಥಿಗಳನ್ನು ಪಿಕ್ ಮಾಡಿದೆ. ನಂತರ ಒಬೆರಾಯ್ ಮಾಲ್ ಜಂಕ್ಷನ್ ಬಳಿ ಬಂದಿದ್ದು, ಅಲ್ಲಿ ನನಗೆ ಬಸ್ ನ ಬ್ರೇಕ್ ಫೇಲ್ ಆಗಿರುವುದು ತಿಳಿಯಿತು. ಬಳಿಕ ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆಯಿತು. ನಾನು ಎಡಕ್ಕೆ ಬಸ್ ತಿರುಗಿಸಿದೆ. ಅಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದೆ. ರಸ್ತೆಯಲ್ಲಿ ಬಸ್ ಮೂರು ಸಣ್ಣ ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಜನರು ಗಾಯಗೊಂಡಿದ್ದಾರೆ. ಆದರೆ ನಾನು ವಿದ್ಯಾರ್ಥಿಗಳನ್ನು ಕಾಪಾಡಲು ಪ್ರಯತ್ನಿಸಿದೆ ಎಂದು ಬಸ್ ಚಾಲಕ ಕಿಶನ್ ಮಾರುತಿ ಗೈಕ್ವಾಡ್ ತಿಳಿಸಿದ್ದಾರೆ.

    ಅದೃಷ್ಟವಶಾತ್ ಚಾಲಕ ಮಕ್ಕಳನ್ನು ಸುರಕ್ಷಿತವಾಗಿ ಕಾಪಾಡಿದ್ದಾರೆ. ಅವರು ಅನುಭವಿ ಹಾಗೂ ತುಂಬಾ ಎಚ್ಚರಿಕೆಯಿಂದ ಚಾಲನೆ ಮಾಡುತ್ತಾರೆ. ಈ ಮಾರ್ಗದಲ್ಲಿ ಬಸ್ ಅನೇಕ ಬಾರಿ ಈ ರೀತಿಯ ತೊಂದರೆಯನ್ನು ಎದುರಿಸಿವೆ. ಬಸ್‍ಗಳನ್ನ ಸರಿಯಾಗಿ ನಿರ್ವಹಣೆ ಮಾಡಬೇಕಿರುವುದು ಶಾಲೆಯ ಜವಾಬ್ದಾರಿಯಾಗಿದೆ ಎಂದು ಮಕ್ಕಳ ಪೋಷಕರು ಹೇಳಿದ್ದಾರೆ.

    ಬ್ರೇಕ್ ಪೈಪ್ ಒಡೆದಿದೆ. ಆದ್ದರಿಂದ ಬ್ರೇಕ್ ಫೇಲ್ ಆಗಿದೆ. ಈ ರೀತಿ ಆಗಿರುವುದು ಇದೇ ಮೊದಲು ಎಂದು ಸಾಯಿ ಗಣೇಶ್ ಟ್ರಾವೆಲ್ಸ್ ನ ಮಾಲೀಕ ದೀಪಕ್ ನಾಯ್ಕ್ ಹೇಳಿದ್ದಾರೆ. ಅಪಘಾತದ ನಂತರ ಬೇರೆ ಬಸ್ಸಿನಲ್ಲಿ ಎಲ್ಲಾ ಮಕ್ಕಳು ಸುರಕ್ಷಿತರಾಗಿ ಮನೆಗೆ ಕಳುಹಿಸಲಾಗಿದೆ ಎಂದು ಶಾಲಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

  • ಕೆಮಿಕಲ್ ಫ್ಯಾಕ್ಟರಿಯಲ್ಲಿ ಸರಣಿ ಸ್ಫೋಟವಾಗಿ ಮೂವರ ಸಾವು, 15 ಮಂದಿಗೆ ಗಾಯ- 10 ಕಿ.ಮೀ ವರೆಗೆ ಕೇಳಿಸಿದ ಸ್ಫೋಟದ ಶಬ್ದ

    ಕೆಮಿಕಲ್ ಫ್ಯಾಕ್ಟರಿಯಲ್ಲಿ ಸರಣಿ ಸ್ಫೋಟವಾಗಿ ಮೂವರ ಸಾವು, 15 ಮಂದಿಗೆ ಗಾಯ- 10 ಕಿ.ಮೀ ವರೆಗೆ ಕೇಳಿಸಿದ ಸ್ಫೋಟದ ಶಬ್ದ

    ಮುಂಬೈ: ರಾಸಾಯನಿಕ ಕಾರ್ಖಾನೆಯಲ್ಲಿ ಸರಣಿ ಸ್ಫೋಟ ಸಂಭವಿಸಿದ ಪರಿಣಾಮ 3 ಜನರು ಸಾವನ್ನಪ್ಪಿದ್ದು, 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪಾಲ್‍ಘರ್ ನಲ್ಲಿ ನಡೆದಿದೆ.

    ಗುರುವಾರ ರಾತ್ರಿ ಸುಮಾರು 11.15ಕ್ಕೆ ಬೋಯಿಸರ್ ರಾಸಾಯನಿಕ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಸುತ್ತ-ಮುತ್ತ ಇದ್ದ ಪ್ರದಶಕ್ಕೆಲ್ಲಾ ಭುಕಂಪನದ ಅನುಭವದಂತೆ ನಡುಕ ಹುಟ್ಟಿಸಿತ್ತು. ಇದರಿಂದ ಮನೆಯಲ್ಲಿದ್ದ ಜನರೆಲ್ಲಾ ಭುಕಂಪನವಾಯಿತೆಂದು ಮನೆಯಿಂದ ಹೊರ ಬಂದು ಕುಳಿತಿದ್ದರು. ಸ್ಫೋಟದ ತೀವ್ರತೆಗೆ ಕೆಲವು ಮನೆಗಳ ಕಿಟಿಕಿಯ ಗಾಜುಗಳು ಪುಡಿಯಾಗಿದ್ದು, ಎಲ್ಲರನ್ನು ಆತಂಕಕ್ಕೆ ಎಡೆಮಾಡಿತ್ತು. ಫ್ಯಾಕ್ಟರಿಯ ಬಾಯ್ಲರ್ ರೂಮಿನಲ್ಲಿ ಸ್ಫೋಟ ನಡೆದಿರುವ ಸಾಧ್ಯತೆ ಇದೆ. ಆದರೂ ಸ್ಫೋಟಕ್ಕೆ ಕಾರಣವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

    ಘಟನೆ ನಡೆದ ಸ್ಥಳಕ್ಕೆ ಧಾವಿಸಿದ 25 ದಕ್ಕೂ ಹೆಚ್ಚು ಅಗ್ನಿಶಾಮಕ ಪಡೆಗಳು ಹೊತ್ತಿ ಉರಿಯುತ್ತಿದ್ದ ಕಾರ್ಖಾನೆಯ ಬೆಂಕಿಯನ್ನ ನಂದಿಸಲು ಹರಸಾಹಸ ಪಡಬೇಕಾಯಿತು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ನಮಗೆ ಇದ್ದಕ್ಕಿದ್ದಂತೆ ಯಾರೋ ಬಾಂಬ್ ದಾಳಿ ನಡೆಸಿರುವ ಹಾಗೆ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

    ಮುಂಜಾಗ್ರತೆಯ ಕ್ರಮವಾಗಿ ಆ ಮಾರ್ಗದ ರಸ್ತೆ ಸಂಚಾರವನ್ನ ಸ್ಥಗಿತಗೊಳಿಸಿದ್ದು, ಪ್ರದೇಶದ ವಿದ್ಯುತ್ ಪೂರೈಕೆಯನ್ನ ಸ್ಥಗಿತಗೊಳಿಸಲಾಗಿದೆ. ಈ ಅವಘಡ ನಡೆದ ಪ್ರದೇಶದ ನಾಲ್ಕು ರಾಸಾಯನಿಕ ಕೇಂದ್ರಗಳಾದ- ಪ್ರಾಚಿ ಇಂಡಸ್ಟ್ರಿ, ಭಾರತ್ ರಾಸಾಯನ್, ಆರತಿ ಇಂಡಸ್ಟ್ರಿ ಮತ್ತು ಯುನಿಮಾಕ್ಸ್ ಕಾರ್ಖಾನೆಗಳಿಗೂ ಹಾನಿಯಾಗಿದೆ ಎಂದು ಹೇಳಲಾಗಿದೆ.

    ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಪಿ ಸಿಂಗ್, ವಾಸೈನ ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ (ಡಿಐಎಸ್‍ಎಚ್) ನಿರ್ದೇಶಕರು ಈ ಅವಘಡದ ಕಾರಣವನ್ನ ಖಚಿತಪಡಿಸಿಕೊಂಡು ಬೋಯಿಸಾರ್ ಪೊಲೀಸರಿಗೆ ವರದಿ ಮಾಡುವುದಾಗಿ ತಿಳಿಸಿದರು.