Tag: ಅವಕಾಶ

  • ಸೌಂದರ್ಯವಿದ್ದರೂ ಅವಕಾಶವಿಲ್ಲ ಎಂದ ಹನಿ ರೋಸ್ ಫ್ಯಾನ್ಸ್

    ಸೌಂದರ್ಯವಿದ್ದರೂ ಅವಕಾಶವಿಲ್ಲ ಎಂದ ಹನಿ ರೋಸ್ ಫ್ಯಾನ್ಸ್

    ನ್ನ ಬ್ಯೂಟಿಯಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಹನಿ ರೋಸ್ (Honey Rose) ಗೆ ಅವಕಾಶಗಳೇ ಇಲ್ಲವಂತೆ. ಸಖತ್ ಬೋಲ್ಡ್ ಆಗಿರುವಂತಹ ಪಾತ್ರಗಳನ್ನು ಮಾಡಿದರೂ ಅವರಿಗೆ ಅವಕಾಶ ಯಾಕೆ ಹುಡುಕಿಕೊಂಡು ಬರುತ್ತಿಲ್ಲ ಎನ್ನುವುದು ಅವರ ಅಭಿಮಾನಿಗಳ ಚಿಂತೆಯಾಗಿದೆ.

    ಸದಾ ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಾಕುತ್ತಾ, ಅಭಿಮಾನಿಗಳ ಕಾಮೆಂಟ್ ಗಳನ್ನು ಎಂಜಾಯ್ ಮಾಡುವ  ಹನಿ ರೋಸ್, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.  ಬಾಲಕೃಷ್ಣ (Balakrishna) ಜೊತೆ ನಟಿಸಿದ್ದ ವೀರ ಸಿಂಹ ರೆಡ್ಡಿ ಚಿತ್ರ ಭಾರೀ ಗೆಲುವು ಕಂಡಿದೆ. ಆದರೂ, ಹನಿಗೆ ಅವಕಾಶವಿಲ್ಲವಂತೆ.

    ಸೌಂದರ್ಯದ ಜೊತೆಗೆ ಪ್ರತಿಭೆಯೂ ಇದೆ. ಆದರೂ, ಸಿನಿಮಾ ರಂಗ ನಿಮ್ಮನ್ನು ಗುರುತಿಸುತ್ತಿಲ್ಲವಲ್ಲ ಯಾಕೆ ಎಂದು ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದ್ದಾನೆ. ನಿಮ್ಮನ್ನು ಕೇವಲ ಐಟಂ ಸಾಂಗ್ ಗೆ ಮಾತ್ರ ಸೀಮಿತ ಮಾಡಿದ್ದಾರಾ ಎನ್ನುವ ಪ್ರಶ್ನೆಯನ್ನೂ ಹಾಕಿದ್ದಾರೆ. ಇದನ್ನೂ ಓದಿ: ಕ್ರಿಕೆಟರ್ ಆಗುವ ಕನಸು ಕಂಡ ಬಡ ಹುಡುಗಿಗೆ ನಟ ಅರ್ಜುನ್ ಕಪೂರ್ ಸಾಥ್

    ಹನಿ ರೋಸ್ ಅವಕಾಶಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳೇ ನಟಿಗೆ ಎದುರಾಗಿವೆ. ನಿರ್ದೇಶಕರ ಜೊತೆ ಕಿರಿಕ್ ಏನಾದರೂ ಮಾಡಿಕೊಂಡಿದ್ದೀರಾ? ಅದಕ್ಕಾಗಿ ಅವಕಾಶಗಳು ನಿಮ್ಮಿಂದ ದೂರವಾಗುತ್ತಿದ್ದಾವಾ ಎನ್ನುವ ಅನುಮಾನವನ್ನೂ ಕೆಲವರು ವ್ಯಕ್ತ ಪಡಿಸಿದ್ದಾರೆ.

    ಸೌಂದರ್ಯದ ಗಣಿಯೇ ಆಗಿರುವ ಹನಿಗೆ ತೂಕ ಇಳಿಸಿಕೊಳ್ಳುವಂತೆ ಕೆಲವರು ಸಲಹೆ ನೀಡಿದ್ದಾರೆ. ತೂಕ ಇಳಿಸಿಕೊಂಡರೆ ನಿರ್ದೇಶಕರು ನಿಮ್ಮನ್ನು ಕರೆಯಬಹುದು ಅನಿಸತ್ತೆ. ಅದೊಂದು ಸಲ ಟ್ರೈ ಮಾಡಿ ಎಂದು ಕೆಲವರು ಬಿಟ್ಟಿ ಸಲಹೆ ನೀಡಿದ್ದಾರೆ.

  • ‘ನನಗೆ ಅವಕಾಶ ಕೊಡಿ’ ಎಂದು ಪೋಸ್ಟ್ ಹಾಕಿದ ರಂಗಿತರಂಗ ಖ್ಯಾತಿಯ ನಟಿ

    ‘ನನಗೆ ಅವಕಾಶ ಕೊಡಿ’ ಎಂದು ಪೋಸ್ಟ್ ಹಾಕಿದ ರಂಗಿತರಂಗ ಖ್ಯಾತಿಯ ನಟಿ

    ನ್ನಡ ಸಿನಿಮಾ ರಂಗದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದ್ದ ‘ರಂಗಿತರಂಗ’ (Rangitaranga) ಚಿತ್ರವು ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಆನಂತರ ದೇಶ ವಿದೇಶಗಳಲ್ಲೂ ತನ್ನ ಗೆಲುವಿನ ಪತಾಕೆಯನ್ನು ಹಾರಿಸಿತ್ತು. ರಾತ್ರೋರಾತ್ರಿ ಅನೂಪ್ ಭಂಡಾರಿ (Anoop Bhandari)ಎಂಬ ನಿರ್ದೇಶಕ, ನಿರೂಪ ಭಂಡಾರಿ ಎನ್ನುವ ನಟ ಹಾಗೂ  ಆವಂತಿಕಾ ಶೆಟ್ಟಿ (Avantika Shetty) ಎನ್ನುವ ನಟಿ ಫೇಮಸ್ ಆಗಿ ಬಿಟ್ಟರು. ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜರು ಈ ಚಿತ್ರದ ಬಗ್ಗೆ ಮಾತನಾಡಿದರು. ಆನಂತರ ಅನೂಪ್ ನಡೆದದ್ದು ಹಾದಿ ಆಯಿತು.

    ರಂಗಿತರಂಗದ ನಂತರ ಅನೂಪ್ ‘ರಾಜರಥ’ ಚಿತ್ರ ಮಾಡಿದರೂ, ಅದು ಹೇಳಿಕೊಳ್ಳುವಂತಹ ಗೆಲುವನ್ನು ತಂದುಕೊಡಲಿಲ್ಲ. ಆದರೂ, ಅವರು ಛಲ ಬಿಡದೇ ಭಾರೀ ಬಜೆಟ್ ಚಿತ್ರಕ್ಕೆ ಕೈ ಹಾಕಿ ಗೆಲುವು ಕಂಡರು. ಆದರೆ, ಆವಂತಿಕಾ ಶೆಟ್ಟಿಗೆ ಮಾತ್ರ ನಂತರದ ಸಿನಿಮಾಗಳಲ್ಲಿ ಅಷ್ಟೇನೂ ಯಶಸ್ಸು ಮತ್ತು ಬೇಡಿಕೆ ಬರಲಿಲ್ಲ. ಎರಡ್ಮೂರು ಚಿತ್ರಗಳನ್ನು ಮಾಡಿ, ತೆರೆಮರೆಗೆ ಸರಿದುಬಿಟ್ಟರು ಆವಂತಿಕಾ. ಈಗ ಮತ್ತೆ ಸಿನಿಮಾ ಮಾಡುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ

    ಕುಟುಂಬದ ಸಮಸ್ಯೆಯ ಕಾರಣದಿಂದಾಗಿ ಆವಂತಿಕಾ ಸಿನಿಮಾ ರಂಗದಿಂದಲೇ ದೂರ ಸರಿದರಂತೆ. ನೆಮ್ಮದಿಗಾಗಿ ಆಧ್ಯಾತ್ಮದತ್ತ ಒಲವು ಬೆಳೆಸಿಕೊಂಡರಂತೆ. ಕೋವಿಡ್ ಮತ್ತಿತರ ಕಾರಣದಿಂದಾಗಿ ಬರೋಬ್ಬರಿ ಐದು ವರ್ಷಗಳಿಂದ ಅವರು ಯಾವುದೇ ಸಿನಿಮಾ ಮಾಡಿಲ್ಲ. ಮುಂಬೈನಲ್ಲೇ ಬೀಡುಬಿಟ್ಟಿದ್ದರಿಂದ ಕನ್ನಡ ಮಾತನಾಡಲು ಕೂಡ ಕಷ್ಟವಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಆವಂತಿಕಾ, ‘ನನಗೆ ಸಿನಿಮಾದಲ್ಲಿ ನಟಿಸುವ ಆಸಕ್ತಿಯಿದೆ. ಯಾರಾದರೂ ಅವಕಾಶ ಕೊಡಬೇಕು ಅಷ್ಟೆ. ಅವಕಾಶ ಕೊಟ್ಟರೆ ಖಂಡಿತವಾಗಿಯೂ ನಟಿಸುತ್ತೇನೆ. ಈ ಮೂಲಕ ಅವಕಾಶಕ್ಕಾಗಿ ಕೇಳುತ್ತಿದ್ದೇನೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ತಮ್ಮ ವೈಯಕ್ತಿಕ ಬದುಕಿನ ಬಗ್ಗೆಯೂ ಅವರು ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.

  • ‘ವಿಕ್ರಮ್’ ಗೆಲುವಿನಿಂದ ಬಾಲಿವುಡ್ ಗೆ ಹಾರಿದ ನಿರ್ದೇಶಕ ಲೋಕೇಶ್

    ‘ವಿಕ್ರಮ್’ ಗೆಲುವಿನಿಂದ ಬಾಲಿವುಡ್ ಗೆ ಹಾರಿದ ನಿರ್ದೇಶಕ ಲೋಕೇಶ್

    ಮಿಳಿನ ಖ್ಯಾತ ನಟ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಬೇಟೆಯಾಡಿದೆ. ಅದು ಯಾವ ಮಟ್ಟಿಗೆ ಯಶಸ್ಸು ತಂದುಕೊಟ್ಟಿದೆ ಎಂದರೆ, ಕಮಲ್ ಈವರೆಗೂ ಮಾಡಿದ್ದ ಅಷ್ಟೂ ಸಾಲವನ್ನು ತೀರಿಸಿದೆಯಂತೆ. ಅಲ್ಲದೇ, ಹಲವು ವರ್ಷಗಳ ನಂತರ ಕಮಲ್ ಅವರಿಗೆ ದೊಡ್ಡ ಮಟ್ಟದ ಯಶಸ್ಸೂ ತಂದುಕೊಟ್ಟಿದೆ. ಹಾಗಾಗಿ ಕಮಲ್ ಜೊತೆ ನಿರ್ದೇಶಕ ಲೋಕೇಶ್ ಕೂಡ ಇದೀಗ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ.

    ವಿಕ್ರಮ್ ಭಾರೀ ಯಶಸ್ಸಿನ ಬೆನ್ನಲ್ಲೆ ಅವರಿಗೆ ಬಾಲಿವುಡ್ ನಲ್ಲಿ ಅವಕಾಶ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅದೂ ಸಲ್ಮಾನ್ ಖಾನ್ ಸಿನಿಮಾದಲ್ಲಿ ಅನ್ನುವುದು ಮತ್ತೊಂದು ವಿಶೇಷ. ಸ್ವತಃ ಸಲ್ಮಾನ್ ಖಾನ್ ಅವರೇ ಲೋಕೇಶ್ ಅವರನ್ನು ಸಂಪರ್ಕಿಸಿ, ಮುಂದಿನ ದಿನಗಳಲ್ಲಿ ಕೆಲಸ ಮಾಡುವ ಆಹ್ವಾನ ನೀಡಿದ್ದಾರಂತೆ. ಈ ವಿಷಯ ಬಿಟೌನ್ ನಲ್ಲಿ ಭಾರೀ ಸದ್ದಂತೂ ಮಾಡುತ್ತಿದೆ. ಸಲ್ಮಾನ್ ಖಾನ್ ಕೂಡ ಓಡುವ ಕುದುರೆ ಆಗಿರುವುದರಿಂದ ಈಗಿನಿಂದಲೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್‌ ಕೊಟ್ರು ಬ್ರೇಕಿಂಗ್‌ ನ್ಯೂಸ್

    ವಿಕ್ರಮ್ ಸಿನಿಮಾದ ಬಹುತೇಕ ಯಶಸ್ಸನ್ನು ತನ್ನ ನಿರ್ದೇಶಕ ಮತ್ತು ಟೀಮ್ ಗೆ ಅರ್ಪಿಸಿದ್ದರು ಕಮಲ್. ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಸಹಾಯಕ ನಿರ್ದೇಶಕರಿಗೂ ಕೂಡ ಹಲವು ಉಡುಗೊರೆಯನ್ನು ನೀಡಿದ್ದರು. ಅಷ್ಟರ ಮಟ್ಟಿಗೆ ವಿಕ್ರಮ್ ಸಿನಿಮಾ ಗೆಲುವನ್ನು ದಾಖಲಿಸಿತ್ತು. ಹಾಗಾಗಿ ವಿಕ್ರಮ್ ಯಶಸ್ಸು ನಿರ್ದೇಶಕರಿಗೆ ಮತ್ತೊಂದು ಗುರುತರ ಜವಾಬ್ದಾರಿಯನ್ನು ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾದಲ್ಲಿ ಚಾನ್ಸ್ ಕೊಡಿಸೋ ನೆಪ – 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ

    ಸಿನಿಮಾದಲ್ಲಿ ಚಾನ್ಸ್ ಕೊಡಿಸೋ ನೆಪ – 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ

    – ಹಣ ಪಡೆಯುದವನ್ನ ತಾನೇ ರೆಕಾರ್ಡ್ ಮಾಡ್ತಿದ್ದ

    ಮೈಸೂರು: ಕಿರುತೆರೆ, ಬೆಳ್ಳಿತೆರೆಯಲ್ಲಿ ಮಿಂಚಬೇಕು ಅಂತ ಬಹಳಷ್ಟು ಜನರಿಗೆ ಆಸೆ ಇರುತ್ತೆ. ಇಲ್ಲೊಬ್ಬ ವಂಚಕ ಇದನ್ನೇ ಬಂಡವಾಳ ಮಾಡಿಕೊಂಡು ಬರೋಬ್ಬರಿ 50ಕ್ಕೂ ಹೆಚ್ಚಿನ ಮಹಿಳೆಯರಿಗೆ ಮೋಸ ಮಾಡಿದ್ದಾನೆ.

    ಗಿರೀಶ್ ಅಲಿಯಾಸ್ ಸಿನಿಮಾ ಗಿರೀಶ್ ವಂಚನೆ ಮಾಡಿದ ವ್ಯಕ್ತಿ. ಈತ ಮೈಸೂರಿನ ಗುರುಕಾರ್ ರೇವಣ್ಣ ರಸ್ತೆಯ ನಿವಾಸಿ. ಇವನು ಮಹಿಳೆಯರಿಗೆ ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿ ಹಣ ಪಡೆದು ವಂಚಿಸಿದ್ದಾನೆ. ಸಿನಿಮಾ, ಧಾರಾವಾಹಿಯಲ್ಲಿ ಮಿಂಚಬೇಕು ಎನ್ನುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದನು.

    ಮಹಿಳೆಯರಿಂದ ಹಣ ಪಡೆಯುವುದನ್ನು ತಾನೇ ಸ್ವತಃ ವಿಡಿಯೋ ಮಾಡುವ ಮೂಲಕ ಮಹಿಳೆಯನ್ನು ನಂಬಿಸುತ್ತಿದ್ದನು. ವಂಚನೆ ಮಾತ್ರವಲ್ಲದೇ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೂಡ ನೀಡಿದ್ದಾನೆ. ಮೊದಲು ಸಿನಿಮಾ, ಧಾರಾವಾಹಿಗಾಗಿ ಕಲಾವಿದರು ಬೇಕು ಎಂದು ಜಾಹೀರಾತು ನೀಡುತ್ತಾನೆ. ಈ ಜಾಹೀರಾತು ನೋಡಿ ಈತನನ್ನು ಭೇಟಿ ಮಾಡಿದವರಿಗೆ ತಾನೇ ಕಥೆ ಹೇಳಿ ಯಾಮಾರಿಸುತ್ತಾನೆ. ಕೆಲವರಿಗೆ ತಾನು ಪೊಲೀಸ್ ಎಂದು ಕೂಡ ಸುಳ್ಳು ಹೇಳಿದ್ದಾನೆ. ಹೀಗೆ ಸುಳ್ಳು ಹೇಳಿ ಬರೋಬ್ಬರಿ 50ಕ್ಕೂ ಹೆಚ್ಚಿನ ಮಹಿಳೆಯರಿಗೆ ಮೋಸ ಮಾಡಿದ್ದಾನೆ.

    ಇದೀಗ ವಂಚನೆಗೆ ಒಳಗಾದ ಮಹಿಳೆಯರು ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯಕ್ಕೆ ಆರೋಪಿ ಗಿರೀಶ್ ತಲೆ ಮರೆಸಿಕೊಂಡಿದ್ದಾನೆ. ಈ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಖತರ್ನಾಕ್ ಗಿರೀಶ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ತಮಗೆ ನ್ಯಾಯ ಕೊಡಿಸುವಂತೆ ನಗರ ಪೊಲೀಸ್ ಕಮಿಷನರ್‌ಗೂ ಮಹಿಳೆಯರು ಮನವಿ ಮಾಡಿಕೊಂಡಿದ್ದಾರೆ.

  • ಬಾಲಿವುಡ್ ನಂತ್ರ ಭೋಜ್‍ಪುರಿಯಲ್ಲಿ ಹಾಡಲು ರಾನುಗೆ ಅವಕಾಶ

    ಬಾಲಿವುಡ್ ನಂತ್ರ ಭೋಜ್‍ಪುರಿಯಲ್ಲಿ ಹಾಡಲು ರಾನುಗೆ ಅವಕಾಶ

    ಮುಂಬೈ: ಸಾಮಾಜಿಕ ಜಾಲತಾಣದಿಂದ ವೈರಲ್ ಆದ ರಾನು ಮೊಂಡಲ್ ಅವರಿಗೆ ಇದೀಗ ಸಿನಿಮಾಗಳಲ್ಲಿ ಹಾಡಲು ಸಾಕಷ್ಟು ಅವಕಾಶಗಳು ಒದಗಿ ಬರುತ್ತಿವೆ. ಬಾಲಿವುಡ್‍ನಲ್ಲಿ ಈಗಾಗಲೇ ಒಂದು ಹಾಡನ್ನು ರೆಕಾರ್ಡ್ ಮಾಡಿದ ರಾನು ಅವರು, ಈಗ ಭೋಜ್‍ಪುರಿ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

    ಭೋಜ್‍ಪುರಿ ನಟ ಪ್ರದೀಪ್ ಪಾಂಡೆ ಚಿಂಟು ಅವರು ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಈಗ ಕೇಳಿ ಬರುತ್ತಿರುವ ಹೆಸರು ರಾನು ಮೊಂಡಲ್. ಇಡೀ ದೇಶದ ಜನತೆ ಅಲ್ಲದೆ ಭೋಜ್‍ಪುರಿ ಅಭಿಮಾನಿಗಳ ಹೃದಯದಲ್ಲೂ ಅವರು ತಮಗೆ ಜಾಗ ಮಾಡಿಕೊಂಡಿದ್ದಾರೆ. ಅವರ ಹಾಡು ಕೇಳಿ ಸ್ವತಃ ನಾನೇ ಅವರ ಅಭಿಮಾನಿ ಆಗಿದ್ದೇನೆ. ನಾನು ಅಲ್ಲದೆ ನಮ್ಮ ಇಡೀ ಭೋಜ್‍ಪುರಿ ಚಿತ್ರರಂಗ ಕೂಡ ಅವರ ಅಭಿಮಾನಿ ಆಗಿದೆ ಎಂದರು. ಇದನ್ನೂ ಓದಿ: ಬಾಲಿವುಡ್‍ಗೆ ಕಾಲಿಟ್ಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ

    ಇಡೀ ಭೋಜ್‍ಪುರಿ ಚಿತ್ರರಂಗ ರಾನು ಅವರನ್ನು ಸ್ವಾಗತಿಸಬೇಕು ಎಂದುಕೊಂಡಿದೆ. ನಾನು ಅವರನ್ನು ಹುಡುಕಿ ನನ್ನ ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ. ಇದು ನನ್ನ ಇಚ್ಛೆ ಕೂಡ. ಅವರ ಧ್ವನಿ ಒಬ್ಬರ ಹೃದಯವನ್ನು ಮುಟ್ಟುತ್ತದೆ. ಅವರ ಧ್ವನಿಯಲ್ಲಿ ಆತ್ಮ ಇದೆ. ಅವರು ನನ್ನ ಜೊತೆ ಭೋಜ್‍ಪುರಿ ಹಾಡು ಹಾಡಲಿ ಎಂದು ನಾನು ಬಯಸುತ್ತೇನೆ. ಶೀಘ್ರದಲ್ಲೇ ನಾನು ಎಲ್ಲರಿಗೂ ಈ ಸುದ್ದಿಯನ್ನು ನೀಡುತ್ತೇನೆ ಎಂದು ಪ್ರದೀಪ್ ಪಾಂಡೆ ಹೇಳಿದ್ದಾರೆ. ಇದನ್ನೂ ಓದಿ: 10 ವರ್ಷದ ಬಳಿಕ ರಾನು ಮೊಂಡಲ್ ಭೇಟಿಯಾದ ಮಗಳು

    ರೈಲ್ವೆ ನಿಲ್ದಾಣದಲ್ಲಿ ಹಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾನು ಅವರು ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಬಾಲಿವುಡ್ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಹೊಸ ಚಿತ್ರದಲ್ಲಿ ಹಾಡಲು ರಾನು ಮೊಂಡಲ್ ಅವರಿಗೆ ಅವಕಾಶ ನೀಡಿದ್ದರು. ಈ ವಿಷಯವನ್ನು ಸ್ವತಃ ಹಿಮೇಶ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಅಲ್ಲದೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ತಮ್ಮ ಚಿತ್ರದಲ್ಲಿ ರಾನು ಅವರಿಗೆ ಅವಕಾಶ ನೀಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ. ಇದನ್ನೂ ಓದಿ: ಬೇಡ ಎಂದ್ರೂ ರಾನುಗೆ 7 ಲಕ್ಷ ಸಂಭಾವನೆ ನೀಡಿದ ಹಿಮೇಶ್

  • ದರ್ಶನ್, ಸುದೀಪ್, ಯಶ್, ಪುನೀತ್ ಅವರಲ್ಲಿ ಜಗ್ಗೇಶ್ ವಿಶೇಷ ಮನವಿ

    ದರ್ಶನ್, ಸುದೀಪ್, ಯಶ್, ಪುನೀತ್ ಅವರಲ್ಲಿ ಜಗ್ಗೇಶ್ ವಿಶೇಷ ಮನವಿ

    ಬೆಂಗಳೂರು: ದರ್ಶನ್, ಸುದೀಪ್, ಪುನೀತ್, ಯಶ್ ಅವರು ತಮ್ಮ ಮುಂದಿನ ಸಿನಿಮಾಗಳಲ್ಲಿ ಹಿರಿಯ ನಾಯಕರಿಗೆ ಅವಕಾಶಗಳನ್ನ ನೀಡಬೇಕು ಎಂದು ನವರಸ ನಾಯಕ ಜಗ್ಗೇಶ್ ಅವರು ಮನವಿ ಮಾಡಿಕೊಂಡಿದ್ದಾರೆ.

    8 ಎಂಎಂ ಬುಲೆಟ್ ಚಿತ್ರವೂ ಇಂದು ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದ್ದು, ಚಿತ್ರದ ನಾಯಕ ಜಗ್ಗೇಶ್ ಪ್ರೇಕ್ಷರ ಜೊತೆ ಚಿತ್ರವನ್ನ ವೀಕ್ಷಿಸಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಕೊಂಡಿರುವ ನಟ ಜಗ್ಗೇಶ್ ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಮತ್ತಷ್ಟು ವಿಭಿನ್ನ ಪಾತ್ರಗಳನ್ನ ಮುಂದೆಯೂ ಮಾಡುತ್ತೇನೆ ಎಂದು ಪಬ್ಲಿಕ್ ಟಿವಿಗೆ ತಿಳಿಸಿದರು.

    ಕನ್ನಡ ಚಿತ್ರರಂಗವನ್ನ ದೊಡ್ಡ ಮಟ್ಟದಲ್ಲಿ ಕರೆದೊಯ್ಯುತ್ತಿರುವ ಯುವಪೀಳಿಗೆಗೆ ಸೇರಿದ ದರ್ಶನ್, ಯಶ್, ಸುದೀಪ್, ಪುನೀತ್ ಮುಂತಾದವರು ನಮ್ಮ ಸಿನಿಮಾ ರಂಗವನ್ನ ಬೆಳೆಸುತ್ತಿದ್ದಾರೆ. ಇಂತಹವರು ತಮ್ಮ ಸಿನಿಮಾಗಳಲ್ಲಿ ಹಿರಿಯ ನಟ-ನಟಿಯರಿಗೆ ಅವಕಾಶಗಳನ್ನ ನೀಡಬೇಕು ಎಂದು ಈ ವೇಳೆ ಮನವಿ ಮಾಡಿದರು.

    ನಾನು 80, 90, 20, 21 ದಶಕದವರ ಜೊತೆ ನಟಿಸಿದ್ದು, ಎಲ್ಲಾ ಪೀಳಿಗೆಯವರ ಜೊತೆ ಕೆಲಸ ಮಾಡಿದ್ದು ಬಹಳ ಖುಷಿಯಾಗಿದೆ. ನಾನು ಎಷ್ಟೇ ವಿಭಿನ್ನ ಪಾತ್ರಗಳಲ್ಲಿ ಅಭಿಯಯಿಸಿದರೂ ಕಾಮಿಡಿಯನ್ನ ಮಾತ್ರ ಬಿಡುವುದಿಲ್ಲ ಎಂದು ಹೇಳಿದರು.

    ಸದ್ಯಕ್ಕೆ ಶ್ರುತಿ ನಾಯ್ಡು ನಿರ್ದೇಶನದ ಪ್ರೀಮಿಯಂ ಪದ್ಮಿನಿ ಚಿತ್ರದಲ್ಲಿ ನಟಿಸುತ್ತಿರುವ ನಟ ಜಗ್ಗೇಶ್, ತೋತಾಪುರಿ ಎಂಬ ಚಿತ್ರದಲ್ಲೂ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಿನಿಮಾ ನಟರ ಮಕ್ಕಳ ಕಷ್ಟ ಬಿಚ್ಚಿಟ್ಟ ಸಾರಥಿ!

    ಸಿನಿಮಾ ನಟರ ಮಕ್ಕಳ ಕಷ್ಟ ಬಿಚ್ಚಿಟ್ಟ ಸಾರಥಿ!

    ಬೆಂಗಳೂರು: ಸ್ಟಾರ್ ನಟರ ಮಕ್ಕಳು ಸಿನಿಮಾ ರಂಗದಲ್ಲಿ ಸುಲಭವಾಗಿ ಗುರುತಿಸಿಕೊಂಡು ಬೆಳೆಯಬಹುದು ಎಂದುಕೊಂಡಿದ್ದಾರೆ. ಆದರೆ ಸ್ಟಾರ್ ನಟರ ಮಕ್ಕಳು ಅನುಭವಿಸುವ ಕಷ್ಟ ನಮಗೆ ಮಾತ್ರ ಗೊತ್ತು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ಸ್ಟಾರ್ ಗಳ ಮಕ್ಕಳು ಸಿನಿಮಾಲ್ಯಾಂಡ್‍ಗೆ ಬರಬೇಕು ಅಂದರೆ ಸೈಕಲ್ ಹೊಡೆಯೋದು ಬೇಕಾಗಿಲ್ಲ. ನಟರಾಗಬೇಕು ಎಂಬ ಆಸೆ ಇದ್ದರೆ ಮುಖಕ್ಕೆ ಮೇಕಪ್ ಹಾಕಿಕೊಂಡು ಕ್ಯಾಮೆರಾ ಮುಂದೆ ಬಂದರೆ ಅಷ್ಟೇ ಸಾಕು ಅಪ್ಪನ ಹೆಸರಲ್ಲಿ ಬೆಳೆಯಬಹುದು. ಬಣ್ಣದ ಜಗತ್ತಿನಲ್ಲಿ ಗಟ್ಟಿಯಾಗಿ ನಿಲ್ಲಬಹುದು ಎಂದುಕೊಂಡಿರುತ್ತಾರೆ. ಆದರೆ ನಟ ದರ್ಶನ್ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.

    ನಟನ ಮಗ ನಟ ಆಗುತ್ತಾನೆ ನಿಜ. ಆದರೆ ಸಿನಿಮಾ ಲ್ಯಾಂಡ್‍ನಲ್ಲಿ ಆತ ಪಡುವ ಕಷ್ಟ ಅಷ್ಟಿಷ್ಟಲ್ಲ. ಮೇಲ್ನೋಟಕ್ಕೆ ಅಪ್ಪನ ಹೆಸರೇಳಿಕೊಂಡು ಚಿತ್ರರಂಗಕ್ಕೆ ಲಗ್ಗೆ ಇಟ್ಟಿರಬಹುದು. ಆದರೆ ಮಾಯಾಬಜಾರ್ ನಲ್ಲಿ ಮಿನುಗೋಕೆ, ಸಿನಿರಸಿಕರಿಂದ ಸೈ ಎನಿಸಿಕೊಳ್ಳೋಕೆ ಸ್ಟಾರ್ ನಟರು ಪಡುವ ಕಷ್ಟ ಅವರಿಗಷ್ಟೇ ಗೊತ್ತು. ಅಪ್ಪ, ಅಣ್ತಮ್ಮನ ಹೆಸರೇಳಿಕೊಂಡು ಸಿನಿಮಾಫೀಲ್ಡ್ ಗೆ ಬಂದವರು ಏನೆಲ್ಲಾ ಕಷ್ಟಪಡುತ್ತಾರೆ ಎಂಬುದನ್ನ ಕಿರಿಯ ಗೆಳೆಯ ಧರ್ಮ ಕೀರ್ತಿರಾಜ್ ನಾಯಕನಾಗಿರುವ ಚಾಣಾಕ್ಷ ಸುದ್ದಿಗೊಷ್ಠಿಯಲ್ಲಿ ದರ್ಶನ್ ಹೇಳುವ ಪ್ರಯತ್ನ ಮಾಡಿದ್ದಾರೆ.

    ಸಿನಿಮಾ ನಟರುಗಳ ಮಕ್ಕಳಿಗೆ ತುಂಬಾ ಜವಾಬ್ದಾರಿ ಇರುತ್ತದೆ. ಅಪ್ಪ-ಅಮ್ಮ, ಅಣ್ತಮ್ಮಂದಿರ ಹೆಸರೇಳಿಕೊಂಡು ಚಿತ್ರರಂಗಕ್ಕೆ ಬಂದಿಲ್ಲದವರು ಚಿತ್ರರಂಗದಲ್ಲಿ ಗಟ್ಟಿಯಾಗಿ ನಿಲ್ಲೋದಕ್ಕೆ ಸಮಸ್ಯೆ ಆಗಲ್ಲ. ಆದರೆ ಕಲಾವಿದರ ಕುಟುಂಬದಿಂದ ಮತ್ತೊಬ್ಬ ಕಲಾವಿದ ಚಿತ್ರರಂಗಕ್ಕೆ ಬರುತ್ತಿದ್ದಾನೆ ಎಂದಾಗ ನಿರೀಕ್ಷೆಗಳು ಗರಿಗೆದರುತ್ತವೆ. ಆ ನಿರೀಕ್ಷೆಯನ್ನ ಯಶಸ್ವಿಯಾಗಿ ಮಾಡುವಲ್ಲಿ ಸೋತ ಅಂದರೆ ನೀವು ಆತನನ್ನ ಇಷ್ಟಪಡುವುದಿರಲಿ ಆತ ಚಿತ್ರರಂಗದಲ್ಲಿ ಉಳಿಯೋದು ಕಷ್ಟವಾಗುತ್ತದೆ. ಆದ್ದರಿಂದ ಸ್ಟಾರ್ ಮಕ್ಕಳ ಬಗ್ಗೆ ನೀವು ಇಟ್ಟುಕೊಂಡಿರುವ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಿ. ಯಾಕೆಂದರೆ ಕಲಾವಿದರ ಮಕ್ಕಳಾಗಿ ಅವರು ಪಡುವ ಕಷ್ಟ ಅವರಿಗಷ್ಟೇ ಗೊತ್ತು ಎಂದು ದರ್ಶನ್ ಹೇಳಿದ್ದಾರೆ.

    ಖ್ಯಾತ ಖಳನಾಯಕನ ಮಗನಾಗಿದ್ದರೂ, ದಾಸನನ್ನ ಕರೆದು ಯಾರೂ ಅವಕಾಶ ಕೊಟ್ಟಿರಲಿಲ್ಲ. ಲೈಟ್‍ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡು ನಂತರ ಸೀರಿಯಲ್‍ ನಲ್ಲಿ ಸಣ್ಣಪುಟ್ಟ ಪಾತ್ರ ಮಾಡಿ ಸೈ ಎನಿಸಿಕೊಂಡಾಗಲೇ ದಾಸನಿಗೆ ಅವಕಾಶಗಳು ಅರಸಿ ಬಂದಿದ್ದು. ಅದೊಂದು ದಿನ ಸಣ್ಣದೊಂದು ಅವಕಾಶಕ್ಕಾಗಿ ಆಸೆಯ ಕಣ್ಣುಗಳಿಂದ ನೋಡುತ್ತಿದ್ದ ದಾಸ ಇವತ್ತು ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದಾರೆ. ತಾನು ಪಟ್ಟ ಕಷ್ಟ ಇಂಡಸ್ಟ್ರಿಗೆ ಬರುವ ಯಾವೊಬ್ಬ ಕಲಾವಿದನೂ ಪಡಬಾರದು ಅಂತ ಹೊಸಬರ ಚಿತ್ರಗಳಿಗೆ ಜೊತೆಗೆ ಸ್ನೇಹಿತರ ಸಿನಿಮಾಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗಮನಿಸಿ, ಬುಧವಾರದಿಂದ ಶಿರಾಡಿ ಘಾಟ್ ಬಸ್ ಸಂಚಾರಕ್ಕೆ ಮುಕ್ತ

    ಗಮನಿಸಿ, ಬುಧವಾರದಿಂದ ಶಿರಾಡಿ ಘಾಟ್ ಬಸ್ ಸಂಚಾರಕ್ಕೆ ಮುಕ್ತ

    ಮಂಗಳೂರು: ಭೂ-ಕುಸಿತ ಹಾಗೂ ಭಾರೀ ಮಳೆಯಿಂದಾಗಿ ಬಂದ್ ಆಗಿದ್ದ ಶಿರಾಡಿ ಘಾಟಿ ರಸ್ತೆಯಲ್ಲಿ ಅಕ್ಟೋಬರ್ 3(ಬುಧವಾರ)ರಿಂದ ಬಸ್ ಸಂಚಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಸಸಿಕಾಂತ್ ಸೆಂಥಿಲ್ ಅನುಮತಿ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಯವರು, ಭಾರಿ ಮಳೆಯಿಂದ ರಸ್ತೆ ಮೇಲೆ ಗುಡ್ಡ ಕುಸಿತ ಉಂಟಾಗಿದ್ದ ಕಾರಣ ಶಿರಾಡಿ ಘಾಟ್‍ನ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿತ್ತು. ಸದ್ಯ ತೆರವು ಕಾರ್ಯಾಚರಣೆ ಪೂರ್ಣಗೊಂಡಿದೆ. ಈ ಮೊದಲು ಸೆಪ್ಟೆಂಬರ್ 5 ರಿಂದ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಅಕ್ಟೋಬರ್ 3 ರಿಂದ ಸಾರಿಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲದೇ ಇನ್ನೆರಡು ವಾರಗಳ ಬಳಿಕ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ. ಘಾಟ್ ರಸ್ತೆಯ ಕುಸಿತ ಸ್ಥಳಗಳಲ್ಲಿ 24 ಗಂಟೆ ಪೊಲೀಸ್ ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಇದಲ್ಲದೇ ಜಿಲ್ಲಾಡಳಿತ ಹೆದ್ದಾರಿ ಪರಿಸ್ಥಿತಿ ಅವಲೋಕಿಸಲು ತಜ್ಞರ ಮೊರೆ ಹೋಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರಾದ ತಂಗವೇಲುರವರು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಇನ್ನೊಂದು ವಾರದಲ್ಲಿ ಸ್ಥಳ ಪರಿಶೀಲನೆ ನಡೆಸುತ್ತಾರೆ ಎಂದು ತಿಳಿದು ಬಂದಿದೆ. ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

    ಶಿರಾಡಿ ಘಾಟ್ ಕಾಂಕ್ರೀಟ್ ಆದ ಬಳಿಕ ಕಳೆದ ಜುಲೈ 15ರಂದು ಅಧಿಕೃತ ಉದ್ಘಾಟನೆ ಆಗಿತ್ತು. ಆದರೆ ಭೂಕುಸಿತ ಕಾರಣದಿಂದಾಗಿ ಶಿರಾಡಿ ಘಾಟ್ ಹೆದ್ದಾರಿ ಸ್ಥಗಿತಗೊಳಿಸಲಾಗಿತ್ತು. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಜೊತೆಗೆ ಸಂಪಾಜೆ ಘಾಟಿಯಲ್ಲಿ ಗುಡ್ಡ ಕುಸಿತ ಸಂಭವಿದ್ದ ಪರಿಣಾಮ ರಸ್ತೆ ಸಂಪರ್ಕ ಬಂದ್ ಆಗಿತ್ತು. ಚಾರ್ಮಾಡಿ ರಸ್ತೆಯಲ್ಲಿ ವಾಹನಗಳ ದಟ್ಟನೆ ಜಾಸ್ತಿಯಾಗಿ ಭಾರೀ ಟ್ರಾಫಿಕ್ ಜಾಮ್ ಆಗುತ್ತಿರುವ ಹಿನ್ನಲೆಯಲ್ಲಿ ಲಘು ವಾಹನಗಳಿಗೆ ಶಿರಾಡಿ ಘಾಟಿ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಬೇಕೆಂಬ ಬೇಡಿಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ ಕೊನೆಯ ವಾರ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ತಿಳಿಸಿದ್ದರು. ಈ ವೇಳೆ ಗಡ್ಕರಿ ಒಂದು ವಾರದ ಒಳಗಡೆ ರಸ್ತೆಯನ್ನು ದುರಸ್ತಿ ಮಾಡಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಸೆಪ್ಟೆಂಬರ್ 5 ರಿಂದ ಹಾಸನ ಜಿಲ್ಲಾಡಳಿತ ಲಘು ವಾಹನಗಳಿಗೆ ಈ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಿತ್ತು.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ಬೆಂಗಳೂರು: ಸಿನಿಮಾ ಅವಕಾಶ ಇಲ್ಲದೆ ಊಬರ್ ಕ್ಯಾಬ್ ಓಡಿಸುತ್ತಿರುವ ಹಿರಿಯ ನಟ ಕೆ.ಎಸ್.ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

    ಶಂಕರ್ ಅಶ್ವಥ್ ಕ್ಯಾಬ್ ಡ್ರೈವರ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸುದ್ದಿ ತಿಳಿದ ಬಳಿಕ ಕನ್ನಡ ಚಿತ್ರರಂಗದ ಕೆಲವರು ಶಂಕರ್ ಸಹಾಯಕ್ಕೆ ಮುಂದಾಗಿದ್ದರು. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶಂಕರ್ ಅಶ್ವಥ್ ಕುಟುಂಬಕ್ಕೆ ಪರೋಕ್ಷವಾಗಿ ನೆರವಾಗಿದ್ದಾರೆ. ಇದನ್ನೂ ಓದಿ: ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ಆದ ಕೆ.ಎಸ್. ಅಶ್ವಥ್ ಪುತ್ರ!

    ಸದ್ಯ ಚಾಲೆಂಜಿಂಗ್ ಸ್ಟಾರ್ ಅಭಿನಯಿಸುತ್ತಿರುವ ಯಜಮಾನ ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೂ ಸಿನಿಮಾದಲ್ಲಿ ಅವಕಾಶ ನೀಡಿ ಎಂದು ದರ್ಶನ್ ಚಿತ್ರತಂಡದ ಹತ್ತಿರ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಶಂಕರ್ ಅಶ್ವಥ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದೇನೆ: ಶಂಕರ್ ಅಶ್ವಥ್

    ಯಜಮಾನ ಚಿತ್ರದಲ್ಲಿ ನನಗೂ ಅವಕಾಶ ನೀಡುವಂತೆ ದರ್ಶನ್ ಚಿತ್ರತಂಡಕ್ಕೆ ಹೇಳಿದ್ದಾರೆ ಎಂದು ಸ್ವತಃ ಶಂಕರ್ ಅಶ್ವಥ್ ತಮ್ಮ ಫೇಸ್ ಬುಕ್‍ನಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಶಂಕರ್ ಅಶ್ವಥ್ ಅವರಿಗೆ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಇದನ್ನೂ ಓದಿ: ಶಂಕರ್ ಅಶ್ವಥ್‍ರನ್ನು ಭೇಟಿ ಮಾಡಿದ ಪ್ರಥಮ್

  • ಬಿಗ್ ಬಾಸ್ ಮನೆಯಿಂದ ಹೊರಬಂದ್ಮೇಲೆ ಹೀಗಿದೆ ದಿವಾಕರ್ ಲೈಫ್!

    ಬಿಗ್ ಬಾಸ್ ಮನೆಯಿಂದ ಹೊರಬಂದ್ಮೇಲೆ ಹೀಗಿದೆ ದಿವಾಕರ್ ಲೈಫ್!

    ಬೆಂಗಳೂರು: ಬಿಗ್ ಬಾಸ್ ಎನ್ನುವ ಬಿಗ್ ರಿಯಾಲಿಟಿ ಕಾರ್ಯಕ್ರಮದಲ್ಲಿ ಒಬ್ಬ ಕಾಮನ್‍ಮ್ಯಾನ್ ಆಗಿ ದಿವಾಕರ್ ಮನೆಯೊಳಗೆ ಹೋಗಿದ್ದರು. ಆದರೆ ದಿವಾಕರ್ ಬರುವಾಗ ಸೆಲೆಬ್ರಿಟಿ ಆಗಿ ಹೊರಗೆ ಬಂದರು. ಸೆಮಿಫೈನಲಿಸ್ಟ್ ಆಗಿ ಹೊರಹೊಮ್ಮಿದ ದಿವಾಕರ್ ಗೆ ಅವಕಾಶಗಳ ಸುರಿಮಳೆ ಬರುತ್ತೆ ಎಂದು ಊಹಿಸಲಾಗಿತ್ತು. ಆದರೆ ದಿವಾಕರ್ ಬಾಳಲ್ಲಿ ಅದೃಷ್ಟದೇವಿಯ ಆಗಮನ ಆಗಲೇ ಇಲ್ಲ.

    ದಿವಾಕರ್ ಟ್ಯಾಲೆಂಟ್ ನೋಡಿ ಹಲವು ನಿರ್ಮಾಪಕರು ಮನೆ ಮುಂದೆ ಕ್ಯೂ ನಿಲ್ಲಬಹುದೇನೋ ಎನ್ನುವುದು ಎಲ್ಲರ ಆಲೋಚನೆಯಾಗಿತ್ತು. ಆದರೆ ಸದ್ಯಕ್ಕಿರೋದು ಒಂದೇ ಒಂದು ಪ್ರಾಜೆಕ್ಟ್. ಅಂದುಕೊಂಡಂಗೆಲ್ಲಾ ಆಗಿದ್ದರೆ ದಿವಾಕರ್ ಗೆ ಈಗ ಕೈತುಂಬಾ ಕೆಲಸ ಇರಬೇಕಿತ್ತು. ಆದ್ರೆ ಇರೋ ಒಬ್ಬ ಮಗನನ್ನ ಚೆನ್ನಾಗಿ ನೋಡಿಕೊಳ್ಳಬೇಕು, ಹೆಂಡತಿಯನ್ನ ಖುಷಿಯಾಗಿ ಇಡಬೇಕು ಎನ್ನುವ ಆಸೆ ಹೊತ್ತ ಕಂಗಳು ಮತ್ತದೇ ಸೇಲ್ಸ್ ಅಂಗಡಿ ಕಡೆ ತಿರುಗಿನೋಡುವಂತಾಗಿದೆ. ಮೊದಲು ಯಾವ ಕೆಲಸ ದಿವಾಕರ್ ಗೆ ಕೈ ಹಿಡಿದಿತ್ತೋ ಅದೇ ಕೆಲಸ ದಿವಾಕರ್ ಗೆ ಈಗ ಅನ್ನ ನೀರು ಕೊಡುತ್ತಿದೆ.

    ದಿವಾಕರ್ ಮಹಾ ಸ್ವಾಭಿಮಾನಿ ಎನ್ನುವುದು ಬಿಗ್ ಬಾಸ್ ಶೋ ನೋಡಿದವರಿಗೆ ತಿಳಿದಿರುತ್ತೆ. ಹೇಳಿ ಕೇಳಿ ದಿವಾಕರ್ ಗೆ ಗೊತ್ತಿರೋದು ಒಂದು ಪುಟ್ಟ ಪ್ರಪಂಚ. ಬಿಗ್ ಬಾಸ್ ಮನೆಯ ಒಂದಿಷ್ಟು ಗಣ್ಯರು ಬಿಟ್ಟರೆ ಹೊರಗಿನ ಜಗತ್ತು ದಿವಾಕರ್ ಗೆ ತಿಳಿಯದು. ಮನೆಯಿಂದ ಹೊರ ಬರುವಾಗ ಅನೇಕರು ಸಲಹೆ ಸೂಚನೆ ಏನೋ ಕೊಟ್ಟರು. ಆದರೆ ಕೆಲಸ ಕೊಡಲಿಲ್ಲ. ಇವತ್ತಲ್ಲಾ ನಾಳೆ ಅದೃಷ್ಟ ದೇವತೆ ಮನೆ ಮುಂದೆ ಬರಬಹುದು ಎಂದು ಕಾದು ಕುಳಿತಿದ್ದ ದಿವಾಕರ್ ಗೆನಿರಾಶೆ ಆಗಿದೆ. ಆದರೂ ಆತ್ಮವಿಶ್ವಾಸ ಕೈಬಿಟ್ಟಿಲ್ಲ.

    ದಿವಾಕರ್ ಗೆ ಇಷ್ಟೊಂದು ಆತ್ಮವಿಶ್ವಾಸ ಇರೋದಕ್ಕೆ ಕಾರಣ ಒಬ್ಬ ವ್ಯಕ್ತಿ. ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ದಿವಾಕರ್ ಗೆ ಹುರಿದುಂಬಿಸುತ್ತಿದ್ದ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ನೈತಿಕವಾಗಿ, ಆರ್ಥಿಕವಾಗಿ ಬೆಂಬಲ ಕೊಡುತ್ತಿದ್ದಾರೆ. ಮುಂದೆ ತಮ್ಮ ಸಿನಿಮಾದಲ್ಲಿ ಪಾತ್ರ ಕೊಡೋದಾಗಿಯೂ ಭರವಸೆ ಕೊಟ್ಟಿದ್ದಾರಂತೆ. ಆದರೆ ಅಲ್ಲಿಯವರೆಗಾದರೂ ಜೀವನ ನಡೀಬೇಕಲ್ಲ. ನಾಡಿನ ಪಾಲಿಗೆ ದಿವಾಕರ್ ಗೆ ಸೆಲೆಬ್ರಿಟಿ ಎನ್ನುವ ಲೇಬಲ್ ಬಿದ್ದಿದೆ. ಸೇಲ್ಸ್ ಬ್ಯಾಗ್ ಹಾಕಿಕೊಂಡು ಊರೂರು ಸುತ್ತೋಕೆ ಮನಸ್ಸು ಒಪುತ್ತಿಲ್ಲ. ಆದರೂ ಜನರ ಪ್ರೀತಿ ದಿವಾಕರ್ ಕೈಬಿಟ್ಟಿಲ್ಲ.

    ಬಿಗ್ ಬಾಸ್ ಮನೆಯಲ್ಲಿದ್ದಾಗ ದಿವಾಕರ್ ಕೈ ಸೇರಿದ್ದ ಮೂರು ಮತ್ತೊಂದಿಷ್ಟು ಹಣ. ಯಾರನ್ನೋ ಹುಡುಕಿಕೊಂಡು ಕೆಲಸ ಕೊಡಿ ಎಂದು ಕೇಳುವ ಮನಸ್ಸು ದಿವಾಕರ್ ಗೆ ಇಲ್ಲ. ಆದರೆ ಒಂದಲ್ಲ ಒಂದು ದಿನ ಒಳ್ಳೆಯದಾಗುತ್ತೆ ಎನ್ನುವ ಭರವಸೆ ದಿವಾಕರ್ ಗೆ ಇದೆ.