Tag: ಅಳುವು

  • ಆಸ್ಪತ್ರೆಯಲ್ಲಿ ಅತ್ತಿದ್ದಕ್ಕೆ 3,100 ರೂ. ಬಿಲ್

    ಆಸ್ಪತ್ರೆಯಲ್ಲಿ ಅತ್ತಿದ್ದಕ್ಕೆ 3,100 ರೂ. ಬಿಲ್

    ನ್ಯೂಯಾರ್ಕ್: ರೋಗಿಯೊಬ್ಬರು ಆಸ್ಪತ್ರೆಯಲ್ಲಿ ಅತ್ತಿದ್ದಕ್ಕೆ ಹೆಚ್ಚುವರಿ 40 ಡಾಲರ್(3,100 ರೂ.) ಬಿಲ್ ವಿಧಿಸಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.

    ಈ ಕುರಿತು ಕ್ಯಾಮಿಲಿ ಜಾನ್ಸನ್ ತನ್ನ ಸಹೋದರಿಯ ಆಸ್ಪತ್ರೆಯ ಬಿಲ್‍ನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಆಕೆಯ ಸಹೋದರಿಯು ಅಪರೂಪದ ಕಾಯಿಲೆಯಿಂದಾಗಿ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಇದ್ದಕ್ಕಿದ್ದಂತೆ ಭಾವುಕರಾದರು. ಈ ಹಿನ್ನೆಲೆಯಲ್ಲಿ ವೈದ್ಯರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ರೋಗಿಗೆ ಯಾವುದೇ ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡದೇ ಹೆಚ್ಚುವರಿ ಶುಲ್ಕ ವಿಧಿಸಿದ್ದಾರೆ ಎಂದು ಕ್ಯಾಮಿಲಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲೇ ಮಾತನಾಡಿದ ಕನ್ನಡಿಗ ಸಂಸದ ಚಂದ್ರ ಆರ್ಯ

    ಈ ಹಿಂದೆ ಅಮೆರಿಕದ ವೈದ್ಯರೊಬ್ಬರು ಆಸ್ಪತ್ರೆಯ ವಿರುದ್ಧ ಕಿಡಿಕಾರಿದ್ದರು. ರೋಗಿಗಳಿಗೆ ಆರೋಗ್ಯ ಸೇವೆ ನೀಡುವ ಮುನ್ನ ಅವರ ಮಾನಸಿಕ ಸ್ಥಿತಿಯ ಬಗ್ಗೆ ಅಸಂಬಂಧ ಪ್ರಶ್ನೆಗಳನ್ನ ಕೇಳಿ ಅವರನ್ನು ಭಾವುಕರನ್ನಾಗಿ ಮಾಡಿ ಹೆಚ್ಚುವರಿ ಬಿಲ್ ವಿಧಿಸುವುದೇ ಇಲ್ಲಿನ ವೈದ್ಯರ ಕೆಲಸವಾಗಿ ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಮಳೆಯಿಂದ ಸಂಭವಿಸಿದ ಅವಾಂತರಗಳೇನು?