Tag: ಅಳು

  • ಮಗು ಅತ್ತಿದ್ದಕ್ಕೆ ದಂಪತಿಗೆ Bloody Indians ಎಂದ್ರು- ಕೊನೆಗೆ ವಿಮಾನದಿಂದಲೇ ಕೆಳಗೆ ಇಳಿಸಿದ್ರು!

    ಮಗು ಅತ್ತಿದ್ದಕ್ಕೆ ದಂಪತಿಗೆ Bloody Indians ಎಂದ್ರು- ಕೊನೆಗೆ ವಿಮಾನದಿಂದಲೇ ಕೆಳಗೆ ಇಳಿಸಿದ್ರು!

    ನವದೆಹಲಿ: 3 ವರ್ಷದ ಕಂದಮ್ಮ ಅಳುತ್ತಿದೆ ಅಂತಾ ಭಾರತೀಯ ಪೋಷಕರಿಗೆ ಬ್ಲಡಿ ಇಂಡಿಯನ್ಸ್ ಎಂದು ಅವಾಚ್ಯವಾಗಿ ಬೈದು, ಬಲವಂತವಾಗಿ ಲಂಡನ್‍ನಲ್ಲಿ ವಿಮಾನದಿಂದ ಕೆಳಗಿಸಲಾಗಿದೆ.

    ಜುಲೈ 23 ರಂದು ಲಂಡನ್- ಬರ್ಲಿನ್‍ಗೆ ಪ್ರಯಾಣ ಬೆಳೆಸಿದ್ದ (ಬಿಎ 8495) ಬ್ರಿಟಿಷ್ ಏರ್‍ವೇಸ್‍ನ ವಿಮಾನ ಸಿಬ್ಬಂದಿಯೇ ಹೀಗೆ ಅಮಾನವೀಯವಾಗಿ ನಡೆದುಕೊಂಡಿದೆ. ಈಗ ಜನಾಂಗೀಯ ನಿಂದನೆ ಮೂಲಕ ನಮ್ಮನ್ನು ಅವಮಾನಿಸಿ, ವಿಮಾನದಿಂದ ಕೆಳಗೆ ಇಳಿಸಲಾಗಿದೆ. ವಿಮಾನ ಸಂಸ್ಥೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಗುವಿನ ತಂದೆ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿದ್ದಾರೆ.

    ನಡೆದದ್ದು ಏನು?
    ಜುಲೈ 23ರಂದು ಭಾರತೀಯ ದಂಪತಿ ತಮ್ಮ 3 ತಿಂಗಳ ಮಗುವಿನ ಜೊತೆಗೆ ವಿಮಾನದಲ್ಲಿ ಲಂಡನ್‍ನಿಂದ ಪ್ರಯಾಣ ಬೆಳೆಸುತ್ತಿದ್ದರು. ಆದರೆ ಟೇಕ್ ಆಫ್ ಆಗುವಾಗ ಸಮಾಧಾನವಾಗಿದ್ದ ಮಗು, ನಂತರ ಅಳಲು ಪ್ರಾರಂಭಿಸಿದೆ. ತಕ್ಷಣವೇ ತಾಯಿ ಮಗುವನ್ನು ಸಮಾಧಾನ ಪಡಿಸುತ್ತಿದ್ದರು. ವಿಮಾನ ಸಿಬ್ಬಂದಿಯೊಬ್ಬರು ಬಂದು, ಮಗುವಿಗೆ ಸೀಟ್ ಬೆಲ್ಟ್ ಕಟ್ಟಿ ಎಂದು ಬೆದರಿಸಿದರು. ಆಗ ಮಗು ಮತ್ತಷ್ಟು ಜೋರಾಗಿ ಅಳಲು ಪ್ರಾರಂಭಿಸಿತ್ತು.

    ಮಗುವಿನ ಅಳು ನಿಲ್ಲಿಸಲು ದಂಪತಿಯ ಹಿಂದಿನ ಸೀಟ್‍ನಲ್ಲಿ ಕುಳಿತ್ತಿದ್ದ ಭಾರತೀಯ ಕುಟುಂಬವೊಂದು ಬಿಸ್ಕೇಟ್ ಗಳನ್ನು ನೀಡಿತ್ತು. ಬಳಿಕ ಮಗುವಿನ ತಾಯಿನ್ನು ಆಸನದಲ್ಲಿ ಕೂರಿಸಿದ್ದಲ್ಲದೆ, ಮಗು ಅಳುತ್ತಿದ್ದಾಗಲೇ ಸೀಟ್ ಬೆಲ್ಟ್ ಹಾಕಿದ್ದರು. ವಿಮಾನ ಸಿಬ್ಬಂದಿ ದಂಪತಿಯ ಬಳಿ ಬಂದು ಸಮ್ಮನೆ ಇರಿ ಇಲ್ಲ ಅಂದರೆ ವಿಮಾನದ ಕಿಟಕಿಯಿಂದ ಹೊರಗೆ ತಳ್ಳಬೇಕಾಗುತ್ತದೆ, ‘ಬ್ಲಡಿ ಇಂಡಿಯನ್ಸ್’ ಎಂದೂ ಅವಾಚ್ಯವಾಗಿ ನಿಂದಿಸಿದ್ದರು. ಮಗು ಅಳು ನಿಲ್ಲಿಸಲಿಲ್ಲ ಅಂತಾ ವಿಮಾನವನ್ನು ಟರ್ಮಿನಲ್‍ಗೆ ತಂದು ದಂಪತಿ, ಅವರ ಮಗು ಹಾಗೂ ಬಿಸ್ಕೇಟ್ ನೀಡಿದ್ದ ಕುಟುಂಬವನ್ನು ಕೆಳಗೆ ಇಳಿಸಿ ಸಿಬ್ಬಂದಿ ಹೋಗಿದ್ದಾರೆ.

    ಪ್ರಕರಣದ ಕುರಿತು ತನಿಖೆ ಕೈಗೊಂಡು, ಬ್ರಿಟಿಷ್ ಏರ್‍ವೇಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಗುವಿನ ತಂದೆ ಪತ್ರದ ಮೂಲಕ ಸಚಿವ ಸುರೇಶ್ ಪ್ರಭು ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಟಿಕೆಟ್ ತಪ್ಪಿದ್ದಕ್ಕೆ ಗೋಳೊ ಅಂತಾ ಗಳಗಳನೇ ಕಣ್ಣೀರಿಟ್ಟ ಬಿಜೆಪಿ ಮಾಜಿ ಎಂಎಲ್‍ಸಿ

    ಟಿಕೆಟ್ ತಪ್ಪಿದ್ದಕ್ಕೆ ಗೋಳೊ ಅಂತಾ ಗಳಗಳನೇ ಕಣ್ಣೀರಿಟ್ಟ ಬಿಜೆಪಿ ಮಾಜಿ ಎಂಎಲ್‍ಸಿ

    ಕಲಬುರಗಿ: ಇಂದು ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಯಾಗಿದೆ. ಪಟ್ಟಿಯಲ್ಲಿ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ತಪ್ಪಿದ್ದಕ್ಕೆ ಮಾಜಿ ಎಂಎಲ್‍ಸಿ ಶಶೀಲ್ ನಮೋಶಿ ಗಳಗಳನೇ ಅತ್ತಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಲಬುರಗಿ ಉತ್ತರದ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗುತ್ತೆ ಎಂಬ ನಂಬಿಕೆ ಇತ್ತು. ಆದ್ರೆ ಇಂದು ಬಿಡುಗಡೆಯಾದ ಪಟ್ಟಿಯಲ್ಲಿ ಚಂದ್ರಕಾಂತ್ ಬಿ. ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಎಲ್ಲ ವಿಭಾಗಗಳಲ್ಲಿಯೂ ನಾನು ಸಮರ್ಥ ಅಭ್ಯರ್ಥಿಯಾಗಿದ್ದು, 1992ರಿಂದಲೂ ಪಕ್ಷದಲ್ಲಿದ್ದೇನೆ ಎಂದು ಹೇಳಿ ಭಾವುಕರಾಗಿ ಕಣ್ಣೀರು ಹಾಕಿದರು.

    ಇದಾದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು, ನಾನು ಯಾರ ವಿರುದ್ಧವೂ ಹೇಳಿಕೆಗಳನ್ನು ನೀಡಲ್ಲ. ಆದ್ರೆ ನನಗೆ ಮೋಸ ಆಗಿದ್ದು ಮಾತ್ರ ಸತ್ಯ. ಬಿಜೆಪಿ ಹೈಕಮಾಂಡ್ ನಡೆಸಿದ ಸರ್ವೆಯಲ್ಲಿ ನನ್ನ ಹೆಸರು ಉಲ್ಲೇಖಿಸಲಾಗಿದೆ ಎಂಬ ಮಾಹಿತಿಗಳು ನನಗೆ ಸಿಕ್ಕಿದ್ದವು. ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯನ್ನು ಕೆರೆದು ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

  • ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ ನಟಿ ಐಶ್ವರ್ಯಾ ರೈ

    ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ ನಟಿ ಐಶ್ವರ್ಯಾ ರೈ

    ಮುಂಬೈ: ಮಾಜಿ ವಿಶ್ವ ಸುಂದರಿ, ಕರಾವಳಿ ಬೆಡಗಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಸಿನಿಮಾಗಳಿಗಿಂತ ಬೇರೆ ಬೇರೆ ವಿಷಯಗಳಿಗೆ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಅಭಿಷೇಕ್ ಜೊತೆ ಕರಣ್ ಜೋಹರ್ ಮನೆಗೆ ಹೋದಾಗ ಫೋಟೋಗ್ರಾಫ್ ಗಳಿಂದ ಪೇಚಿಗೆ ಸಿಲುಕಿಕೊಂಡಿದ್ದರು.

    ಐಶ್ ಮಗಳು ಆರಾಧ್ಯಾಳ ಹುಟ್ಟುಹಬ್ಬದ ಬೆನ್ನಲ್ಲೇ ಐಶ್ವರ್ಯಾ ರೈ ತಮ್ಮ ತಂದೆ ಕೃಷ್ಣರಾಜ್ ರೈ ಅವರ ಹುಟ್ಟುಹಬ್ಬವನ್ನು ಕೂಡ ವಿಶಿಷ್ಟವಾಗಿ ಆಚರಿಸಿದ್ದರು. ತಂದೆಯ ಹುಟ್ಟುಹಬ್ಬದ ನಿಮಿತ್ತ ಸ್ಮೈಲ್ ಫೌಂಡೇಶನ್ ಜೊತೆಯಲ್ಲಿ 100 ಮಕ್ಕಳಿಗೆ ಉಚಿತ ಸೀಳು ತುಟಿಯ ಶಸ್ತ್ರಚಿಕಿತ್ಸೆ ಮಾಡಿಸಲು ಐಶ್ವರ್ಯಾ ನಿರ್ಧರಿಸಿದ್ದರು. ಮಂಗಳವಾರ ಆ ಮಕ್ಕಳನ್ನು ಭೇಟಿ ಮಾಡಲು ಐಶ್ವರ್ಯಾ ರೈ, ಮಗಳು ಆರಾಧ್ಯಳ ಜೊತೆಗೆ ಆಸ್ಪತ್ರೆಗೆ ಬಂದಿದ್ದರು. ಕಾರ್ಯಕ್ರಮಕ್ಕೆ ಪತ್ರಕರ್ತರು ಹಾಜರಾಗಿದ್ದು, ಐಶ್ವರ್ಯಾಗೆ ಬೇಸರ ಮೂಡಿಸಿತ್ತು.

    ಐಶ್ವರ್ಯ ರೈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಅವರ ಮುಂದೆ ಒಂದೇ ಸಮನೇ ಫೋಟೋಗಳು ಕ್ಲಿಕ್ ಆಗ ತೊಡಗಿದವು. ಫೋಟೋಗ್ರಾಫರ್ ಗಳ ಫೋಟೋ ಕ್ಲಿಕ್ ಮಧ್ಯೆ ಸ್ವಲ್ಪ ಗದ್ದಲವು ಉಂಟಾಯಿತು. ಹೀಗಾಗಿ ಸ್ಥಳದಲ್ಲಿದ್ದ ಚಿಕ್ಕ ಮಕ್ಕಳು ಅಳಲಾರಂಭಿಸಿದವು. ತನ್ನಿಂದ ಬೇರೆಯವರಿಗೆ ತೊಂದರೆಯಾಗುತ್ತಿರುವುದನ್ನ ಗಮನಿಸಿದ ಐಶ್ವರ್ಯಾ ಫೋಟೋ ಕ್ಲಿಕ್ಕಿಸದಂತೆ, ಗಲಾಟೆ ಮಾಡದಂತೆ ಸೂಚಿಸಿದರು.

    ಇದನ್ನೂ ಓದಿ:  ನಟಿ ಐಶ್ವರ್ಯಾ ರೈಗೆ 44ರ ಸಂಭ್ರಮ- ಅಪ್ಪ, ಮಗಳಿಂದ ಸರ್ಪ್ರೈಸ್ ಪ್ಲಾನ್

    ಆದರೂ ಕ್ಯಾಮರಾಗಳು ಮಾತ್ರ ಕ್ಲಿಕ್ ಆಗುತ್ತಿದ್ದವು. ಆಗ ಸಿಟ್ಟಿಗೆದ್ದ ಐಶ್, ಇದು ಪ್ರೀಮಿಯರ್ ಶೋ ಅಲ್ಲ, ಸಾರ್ವಜನಿಕ ಕಾರ್ಯಕ್ರಮವೂ ಅಲ್ಲ ಅಂದ್ರು. ಸ್ವಲ್ಪ ಸುಮ್ಮನಾಗಿ ಎಂದರೂ ಬಿಡದ ಕ್ಯಾಮೆರಾ ಫ್ಲ್ಯಾಶ್ ಕ್ಲಿಕ್ ಆಗುತ್ತಲೇ ಇತ್ತು. ಕೊನೆಗೆ ಐಶು ಭಾವುಕರಾಗಿ ಕಣ್ಣೀರು ಸುರಿಸಿದರು.