Tag: ಅಳಿಲು

  • ಅಯೋಧ್ಯೆಯಲ್ಲಿ ಬೆಂಗಳೂರಿನಿಂದ ಅಳಿಲು ಸೇವೆ!

    ಅಯೋಧ್ಯೆಯಲ್ಲಿ ಬೆಂಗಳೂರಿನಿಂದ ಅಳಿಲು ಸೇವೆ!

    ಬೆಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರದ (Ram Mandir) ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಈ ಅದ್ದೂರಿ ರಾಮೋತ್ಸವಕ್ಕೆ ದೇಶದೆಲ್ಲೆಡೆ ಭರದ ಸಿದ್ದತೆಗಳು ಸಾಗುತ್ತಿದ್ದು, ಕರ್ನಾಟಕದಿಂದ (Karnataka) ಶ್ರೀರಾಮನಿಗೆ ಅಳಿಲು (Squarrel) ಸೇವೆ ಸಲ್ಲಲಿದೆ.

    ಹೌದು. ಅಯೋಧ್ಯೆಯ ಮುಖ್ಯ ರೈಲ್ವೆ ನಿಲ್ದಾಣವಾದ ಅಯೋಧ್ಯೆಧಾಮದ ಮುಖ್ಯ ದ್ವಾರದಲ್ಲಿ ಬೆಂಗಳೂರಿನ ಗಿನ್ನಿಸ್ ವರ್ಲ್ಡ್ ಚಿತ್ರಶಿಲ್ಪಿ ಕಲ್ಯಾಣ್ ಎಸ್ ರಾಥೋಡ್ ಅವರು ನಿರ್ಮಿಸಿದ ಅಳಿಲು ಮೂರ್ತಿಯನ್ನು ಇಡಲಾಗುತ್ತಿದೆ.  ಇದನ್ನೂ ಓದಿ: ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ – ವಿಶ್ವದ ದೊಡ್ಡಣ್ಣ ಅಮೆರಿಕದಲ್ಲೂ ನೇರಪ್ರಸಾರ

    ಭಾರತೀಯ ರೈಲ್ವೆ ಇಲಾಖೆಯಿಂದ ಗುತ್ತಿಗೆ ಪಡೆದು ಕಲ್ಯಾಣ್ ಎಸ್ ರಾಥೋಡ್ ಈ ಅಳಿಲು ಪುತ್ಥಳಿಯನ್ನು ನಿರ್ಮಿಸಿದ್ದಾರೆ. ಸುಮಾರು ಎರಡೂವರೆ ಟನ್ ಕಾರ್ಟನ್ ಸ್ಟೀಲ್ ಬಳಸಿ,15 ಅಡಿ ಎತ್ತರ, 8 ಅಡಿ ಅಗಲ,13 ಅಡಿ ಉದ್ದದಲ್ಲಿ ಈ ಬೃಹತ್ ಅಳಿಲಿನ ಪುತ್ಥಳಿ ನಿರ್ಮಾಣವಾಗಿದೆ.

    ಕಾರ್ಟನ್ ಸ್ಟೀಲ್ ಬಳಸಿರುವುದರಿಂದ ಈ ಮೂರ್ತಿ ತುಕ್ಕು  ಹಿಡಿಯುವ ಸಾಧ್ಯತೆ ಕಡಿಮೆ. ಅಳಿಲು ಪುತ್ಥಳಿ ಈಗ ಟ್ರಕ್ ನಲ್ಲಿ ಅಯೋಧ್ಯೆಯತ್ತ ಹೊರಟ್ಟಿದ್ದು, ಜ.11 ರಂದು ಅಯೋಧ್ಯೆಗೆ ತಲುಪಲಿದೆ.

     

  • ಹಾವನ್ನೇ ಕಚ್ಚಿ ಕಚ್ಚಿ ತಿಂದ ಅಳಿಲು- ಫೋಟೋ ವೈರಲ್

    ಹಾವನ್ನೇ ಕಚ್ಚಿ ಕಚ್ಚಿ ತಿಂದ ಅಳಿಲು- ಫೋಟೋ ವೈರಲ್

    ವಾಷಿಂಗ್ಟನ್: ಒಂದು ಹಾವು ಹಾಗೂ ಅಳಿಲಿನ ಮಧ್ಯೆ ಮುಖಾಮುಖಿಯಾದರೆ ಏನಾಗುತ್ತೆ? ಸಾಮಾನ್ಯವಾಗಿ ಅಳಿಲು ಇಹಲೋಕ ತ್ಯಜಿಸುತ್ತೆ. ಆದರೆ ಯುಎಸ್‍ಎನಲ್ಲಿ ಒಂದು ಅಚ್ಚರಿ ನಡೆದಿದೆ. ಇಲ್ಲಿ ಅಳಿಲೊಂದು ಹಾವನ್ನು ತಿಂದು ಸದ್ಯ ಸಖತ್ ಸುದ್ದಿಯಲ್ಲಿದೆ.

    ಹೌದು. ಹೀಗೆ ಹಾವೊಂದನ್ನು ಅಳಿಲು ಹಿಡುದು ತಿನ್ನುತ್ತಿರುವ ಫೋಟೋವೊಂದನ್ನು ಅಮೆರಿಕದ ನ್ಯಾಷನಲ್ ಪಾರ್ಕ್ ಸರ್ವಿಸ್ ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ. ಹಾಗೆಯೇ ಈ ಫೋಟೋವನ್ನು ಗಡಾಲ್ಪೆ ಶಿಖರದ ನ್ಯಾಷನಲ್ ಪಾರ್ಕ್ ನಲ್ಲಿ ಸೆರೆ ಹಿಡಿದಿದ್ದು ಅಲ್ಲಿನ ಅಳಿಲುಗಳು ಸಾಧಾರಣವಾಗಿ ಸಸ್ಯವನ್ನೇ ಸೇವಿಸುತ್ತವೆ. ಹಣ್ಣು, ಒಣ ಹಣ್ಣು ಇತ್ಯಾದಿ ಹೀಗೆ. ಆದರೆ, ಹಕ್ಕಿಯ ಮೊಟ್ಟೆ, ಹಲ್ಲಿ ಹಾಗೂ ಹಾವನ್ನು ಕೂಡ ಅಳಿಲುಗಳು ತಿನ್ನುತ್ತವೆ ಎಂಬುದು ಗೊತ್ತಾ? ಅಷ್ಟೇ ಅಲ್ಲದೆ ಈ ಫೊಟೋವನ್ನು ಕ್ಲಿಕ್ಕಿಸಿದ ಕೆಲ ಸಮಯದಲ್ಲೇ ಅಳಿಲು ಹಾವನ್ನು ಇಡಿಯಾಗಿ ತಿಂದು, ಕೊನೆಯದಾಗಿ ಎರಡು ಇಂಚಷ್ಟೇ ಉಳಿಸಿತ್ತು ಎಂದು ಫೋಟೋಗೆ ಕ್ಯಾಪ್ಷನ್ ಕೂಡ ಬರೆಯಲಾಗಿದೆ.

    https://www.facebook.com/nationalparkservice/photos/a.10151984491216389/10156047373616389

    ಹಫಿಂಗ್ಟನ್ ಪೋಸ್ಟ್ ಪ್ರಕಾರ, ಈ ಫೋಟೋ ಹತ್ತು ವರ್ಷದಷ್ಟು ಹಳೆಯದು. ಉದ್ಯಾನದ ರೇಂಜರ್ ವಿಲಿಯಂ ಲೆಗೆಟ್ 2009ರಲ್ಲಿ ಈ ಸೆರೆ ಹಿಡಿದ ಫೋಟೋವನ್ನು ಸೆರೆಹಿಡಿದಿದ್ದರು. ಆದರೆ ಮೇ 10ರಂದು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಹಾವನ್ನು ನೋಡಿದ ಮೇಲೆ ಸ್ವರಕ್ಷಣೆಗೆ ಹೀಗೆ ಮಾಡಿದೆ ಎಂದು ಅಮೆರಿಕದ ನ್ಯಾಷನಲ್ ಪಾರ್ಕ್ ಸರ್ವೀಸ್ ಹೇಳಿದೆ.

    ಇಲ್ಲಿಯರೆಗೆ ಈ ಫೋಟೋವನ್ನು ಸುಮಾರು 3 ಸಾವಿರಕ್ಕೂ ಅಧಿಕ ಬಾರಿ ಷೇರ್ ಮಾಡಿದ್ದು, 7 ಸಾವಿರಕ್ಕೂ ಅಧೀಕ ಮಂದಿ ರಿಯಾಕ್ಟ್ ಮಾಡಿದ್ದಾರೆ. ತುಂಬಾ ಹಳೆಯ ಫೋಟೋವಾಗಿದ್ದರೂ ಈಗ ಇದು ನೆಟ್ಟಿಗರನ್ನು ಅಚ್ಚರಿಗೊಳಿಸುತ್ತಿದೆ.

  • ರಸ್ತೆ ಮಧ್ಯೆ ದೈತ್ಯ ಅಳಿಲುಗಳ ಡಿಶುಂ ಡಿಶುಂ! ವಿಡಿಯೋ ನೋಡಿ

    ರಸ್ತೆ ಮಧ್ಯೆ ದೈತ್ಯ ಅಳಿಲುಗಳ ಡಿಶುಂ ಡಿಶುಂ! ವಿಡಿಯೋ ನೋಡಿ

    ಬೀಜಿಂಗ್: ಅಳಿಲು ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರೋದು ಮುದ್ದಾದ ರೂಪ. ಆಹಾರವನ್ನ ಮುಂಗಾಲಿನಲ್ಲಿ ಹಿಡಿದುಕೊಂಡು ಮೆಲ್ಲುವುದನ್ನ ನೋಡಿದ್ರೆ ಸೋ ಕ್ಯೂಟ್ ಅನ್ನುವಂತಿರುತ್ತೆ. ಆದ್ರೆ ಹೆಗ್ಗಣ ಅಥವಾ ಮುಂಗುಸಿಯಷ್ಟು ದೊಡ್ಡದಾದ ದೈತ್ಯ ಅಳಿಲುಗಳನ್ನ ನೀವೆಲ್ಲಾದ್ರೂ ನೋಡಿದ್ದೀರಾ?

    ಇಲ್ಲ ಅಂತಾದ್ರೆ ಈ ವಿಡಿಯೋ ನೋಡಿ. ಎರಡು ದೈತ್ಯ ಅಳಿಲುಗಳು ರಸ್ತೆ ಮಧ್ಯೆ ಕುಸ್ತಿಪಟುಗಳಂತೆ ಕಾದಾಡಿವೆ. ಎರಡೂ ಅಳಿಲುಗಳು ಕೇವಲ ಹಿಂದಿನ ಕಾಲಿನ ಮೇಲೆ ನಿಂತುಕೊಂಡು ಮುಂಗಾಲಿನಿಂದ ಒಂದನ್ನೊಂದು ಹೊಡೆದು ಕುಸ್ತಿ ಮಾಡಿವೆ.

    ಚೀನಾದ ಹೈಕ್ಸಿ ಮೊಂಗೊಲ್‍ನಲ್ಲಿ ಈ ಘಟನೆ ನಡೆದಿದ್ದು ಪ್ರತ್ಯಕ್ಷದರ್ಶಿಯೊಬ್ಬರು ಇದನ್ನ ವಿಡಿಯೋ ಮಾಡಿದ್ದಾರೆ. ಆದ್ರೆ ಈ ಅಳಿಲುಗಳ ಜಗಳಕ್ಕೆ ಕಾರಣವಾಗಿದ್ದು ಏನು ಎಂಬುದು ಗೊತ್ತಿಲ್ಲ.

    ಅಂದಹಾಗೆ ಈ ದೈತ್ಯ ಅಳಿಲುಗಳನ್ನ ಮಾರ್ಮಟ್ ಅಂತ ಕರೀತಾರೆ. ಇವುಗಳಲ್ಲಿ 15 ವಿವಿಧ ಪ್ರಭೇದಗಳಿವೆ. ಇವು ಸಾಮಾನ್ಯವಾಗಿ ಉತ್ತರ ಅಮೆರಿಕದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಇವುಗಳ ತೂಕ ಸುಮಾರು 3 ರಿಂದ 7 ಕೆಜಿಯಷ್ಟು ಇರುತ್ತದೆ. ಇವು ಸಂಪೂರ್ಣ ಸಸ್ಯಹಾರಿ ಪ್ರಾಣಿಗಳು.

    https://www.youtube.com/watch?v=jXPxKJV6iVw