Tag: ಅಲ್ಲು ಅರವಿಂದ್

  • ನಂದಮುರಿ ಬಾಲಕೃಷ್ಣ ನಟನೆಯ NBK108ನೇ ಚಿತ್ರಕ್ಕೆ ಚಾಲನೆ

    ನಂದಮುರಿ ಬಾಲಕೃಷ್ಣ ನಟನೆಯ NBK108ನೇ ಚಿತ್ರಕ್ಕೆ ಚಾಲನೆ

    ಗಾಡ್ ಆಫ್ ಮಾಸ್ ಎಂದೇ ಕರೆಸಿಕೊಳ್ಳೋ ತೆಲುಗು ನಟ ನಂದಮುರಿ ಬಾಲಕೃಷ್ಣ 108ನೇ ಸಿನಿಮಾ ಇಂದು ಅದ್ದೂರಿಯಾಗಿ ಸೆಟ್ಟೇರಿದೆ. ಬಾಲಕೃಷ್ಣ 108ನೇ ಚಿತ್ರಕ್ಕೆ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಇಬ್ಬರ ಕ್ರೇಜಿ ಕಾಂಬಿನೇಶನ್ ನಲ್ಲಿ  ಮೂಡಿ ಬರ್ತಿರುವ ಪ್ಯಾನ್ ಇಂಡಿಯಾ ಚಿತ್ರಕ್ಕೆ ಶೈನ್ ಸ್ಕ್ರೀನ್ಸ್ ಬ್ಯಾನರ್ ನಡಿ ಸಾಹು ಗರಪಟಿ ಮತ್ತು ಹರೀಶ್ ಪೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.

    NBK108ನೇ ಚಿತ್ರಕ್ಕೆ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಕ್ಲ್ಯಾಪ್ ಮಾಡಿದ್ದು, ನಿರ್ಮಾಪಕ ದಿಲ್ ರಾಜು ಕ್ಯಾಮೆರಾ ಚಾಲನೆ, ಲೆಜೆಂಡರಿ ನಿರ್ದೇಶಕ ಕೆ.ರಾಘವೇಂದ್ರ ರಾವ್ ಮುಹೂರ್ತ ಸೀನ್ ಗೆ ಆಕ್ಷನ್ ಕಟ್ ಹೇಳುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಲಾಯಿತು.    ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್

    ಬಾಲಕೃಷ್ಣ ಅಭಿನಯದ 108ನೇ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ಈ ಚಿತ್ರ ಮೂಡಿ ಬರ್ತಿದೆ. ಸದ್ಯದಲ್ಲೇ ಟೈಟಲ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಇಂದಿನಿಂದಲೇ ಚಿತ್ರೀಕರಣ ಆರಂಭವಾಗಲಿದ್ದು, ಆಕ್ಷನ್ ಸೀನ್ ನೊಂದಿಗೆ ಚಿತ್ರೀಕರಣ ಆರಂಭವಾಗಲಿದೆ. ಆಕ್ಷನ್ ಸೀನ್ ಸೆರೆ ಹಿಡಿಯಲೆಂದೇ ರಾಜೀವನ್ ಅವರ ನೇತೃತ್ವದಲ್ಲಿ ದೊಡ್ಡ ಸೆಟ್ ಗಳನ್ನು ನಿರ್ಮಾಣ ಮಾಡಲಾಗಿದ್ದು, ಖ್ಯಾತ ಸಾಹಸ ನಿರ್ದೇಶಕ ವಿ. ವೆಂಕಟ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

    ಆಕ್ಷನ್ ಹಾಗೂ ಮಾಸ್ ಎಲಿಮೆಂಟ್ ಒಳಗೊಂಡ ಈ ಚಿತ್ರಕ್ಕೆ ಬಾಲಕೃಷ್ಣ ಅವರ ಮಾಸ್ ಇಮೇಜ್, ಸ್ಟಾರ್ ಡಂ ಎಲ್ಲವನ್ನು ಗಮನದಲ್ಲಿಟ್ಟುಕೊಂಡೇ ಅನಿಲ್ ರವಿಪುಡಿ ಪವರ್ ಫುಲ್ ಕಥೆ ಹೆಣೆದಿದ್ದಾರೆ. ಚಿತ್ರದಲ್ಲಿ ಕನ್ನಡದ ನಟಿ ಶ್ರೀಲೀಲಾ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಎಸ್. ತಮನ್ ಸಂಗೀತ ನಿರ್ದೇಶನವಿದೆ.  ಬಾಲಕೃಷ್ಣ, ಅನಿಲ್ ರವಿಪುಡಿ, ಎಸ್. ತಮನ್ ಈ ಮೂರು ಕಾಂಬಿನೇಶನ್ ಒಂದಾಗಿರೋ ಈ ಚಿತ್ರದ ಮೇಲೆ ಬಾಲಯ್ಯ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿ.ರಾಮ್ ಪ್ರಸಾದ್ ಕ್ಯಾಮೆರಾ ನಿರ್ದೇಶನ, ತಮ್ಮಿ ರಾಜು ಸಂಕಲನ ಚಿತ್ರಕ್ಕಿದೆ. ಸದ್ಯದಲೇ ಸಿನಿಮಾ ಟೈಟಲ್, ತಾರಾಬಳಗ ಎಲ್ಲದರ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

    Live Tv
    [brid partner=56869869 player=32851 video=960834 autoplay=true]

  • ರಿಷಬ್ ಶೆಟ್ಟಿಗೆ ತೆಲುಗಿನಿಂದ ಭಾರೀ ಆಫರ್: ಸಣ್ಣದೊಂದು ಬ್ರೇಕ್ ಕೇಳಿದ ನಟ

    ರಿಷಬ್ ಶೆಟ್ಟಿಗೆ ತೆಲುಗಿನಿಂದ ಭಾರೀ ಆಫರ್: ಸಣ್ಣದೊಂದು ಬ್ರೇಕ್ ಕೇಳಿದ ನಟ

    ಕಾಂತಾರ (Kantara) ಸಕ್ಸಸ್ ಬೆನ್ನೆಲ್ಲೇ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಅವರಿಗೆ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಿವೆ. ಹಾಗಂತ ರಿಷಬ್ ಏನೂ ಖಾಲಿ ಕುಳಿತಿರಲಿಲ್ಲ. ಒಂದು ಸಿನಿಮಾದ ನಿರ್ದೇಶನ, ಎರಡು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಬೇಕಿತ್ತು. ಈ ನಡುವೆಯೇ ತೆಲುಗು ಸಿನಿಮಾ ರಂಗದಿಂದ ಶೆಟ್ಟರಿಗೆ ಭರ್ಜರ್ ಆಫರ್ ಬಂದಿದೆ. ಅದನ್ನು ರಿಷಬ್ ಒಪ್ಪಿಕೊಂಡಿದ್ದಾರೆ ಎಂದು ಸ್ವತಃ ನಿರ್ಮಾಪಕರಿಗೆ ಹೇಳಿದ್ದಾರೆ.

    ಕಾಂತಾರ ಸಿನಿಮಾವನ್ನು ತೆಲುಗಿನಲ್ಲಿ ವಿತರಿಸಿದವರು ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಅವರ ತಂದೆ ಅಲ್ಲು ಅರವಿಂದ್ (Allu Arvind). ಇವರ ಗೀತಾ ಆರ್ಟ್ಸ್ (Geetha Arts) ಪ್ರೊಡಕ್ಷನ್ ಹೌಸ್ ಹಿಟ್ ಸಿನಿಮಾಗಳನ್ನು ಕೊಟ್ಟಿದೆ. ತೆಲುಗು ಸಿನಿಮಾ ರಂಗಕ್ಕೆ ಸಾಕಷ್ಟು ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆಯೂ ಇದೆ. ಈಗ ಅದೇ ಬ್ಯಾನರ್ ನಲ್ಲೇ ರಿಷಬ್ ಅವರಿಗೆ ಆಫರ್ ಹೋಗಿದ್ದು, ಈ ಅವಕಾಶವನ್ನು ರಿಷಬ್ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ ಅಲ್ಲು ಅರವಿಂದ್ ತಿಳಿಸಿದ್ದಾರೆ. ಇದನ್ನೂ ಓದಿ:ಕೈಲಾಗದವರು, ಗೆಲ್ಲಲಾರದವರು ನನ್ನ ಪೌರತ್ವ ಕೇಳ್ತಾರೆ : ನಟ ಚೇತನ್

    ತೆಲುಗಿನಲ್ಲಿ ಕಾಂತಾರ ಸಿನಿಮಾದ ಸಕ್ಸಸ್ ಮೀಟ್ ಆಯೋಜನೆ ಮಾಡಿದ್ದರು ಅರವಿಂದ್. ಈ ಸಕ್ಸಸ್ ಮೀಟ್ ನಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ ಸೇರಿದಂತೆ ಸಿನಿಮಾ ತಂಡದ ಹಲವರು ಸದಸ್ಯರಿದ್ದರು. ಇದೇ ಸಮಯದಲ್ಲೇ ತಮ್ಮ ಬ್ಯಾನರ್ ಮೂಲಕ ರಿಷಬ್ ಅವರು ಸಿನಿಮಾ ಮಾಡಲಿದ್ದಾರೆ ಎಂದು ಅರವಿಂದ್ ಘೋಷಣೆ ಮಾಡಿದರು. ಅದಕ್ಕೆ ರಿಷಬ್ ಕೂಡ ಒಪ್ಪಿಗೆ ಸೂಚಿಸಿದರು. ಇದಕ್ಕೂ ಮೊದಲು ತಮಗೆ ಸಣ್ಣದೊಂದು ಬ್ರೇಕ್ ಬೇಕಿರುವ ವಿಚಾರವನ್ನೂ ರಿಷಬ್ ಹಂಚಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಮೊಮ್ಮಗನಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ತಾತಾ – ನಾನು ಈಗಲೂ ಶಾಕ್‍ನಲ್ಲಿದ್ದೇನೆ ಎಂದ ನಟ ಅಲ್ಲು ಅರ್ಜುನ್

    ಮೊಮ್ಮಗನಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ತಾತಾ – ನಾನು ಈಗಲೂ ಶಾಕ್‍ನಲ್ಲಿದ್ದೇನೆ ಎಂದ ನಟ ಅಲ್ಲು ಅರ್ಜುನ್

    ಹೈದರಾಬಾದ್: ಟಾಲಿವುಡ್ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ತಮ್ಮ ಮೊಮ್ಮಗನ ಹುಟ್ಟುಹಬ್ಬಕ್ಕೆ ಸ್ವಿಮ್ಮಿಂಗ್ ಪೂಲ್ ಗಿಫ್ಟ್ ಆಗಿ ನೀಡಿದ್ದಾರೆ. ಇದನ್ನು ನೋಡಿ ಅಲ್ಲು ಅರ್ಜುನ್ ನಾನು ಈಗಲೂ ಶಾಕ್‍ನಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.

    ಅಲ್ಲು ಅರವಿಂದ್ ಒಂದು ತಿಂಗಳ ಹಿಂದೆ ತಮ್ಮ ಮೊಮ್ಮಗ ಅಯಾನ್ ಬಳಿ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಬೇಕು ಎಂದು ಕೇಳಿದ್ದಾರೆ. ಆಗ ಅಯಾನ್ ನನಗೆ ಸ್ವಿಮ್ಮಿಂಗ್ ಪೂಲ್ ಬೇಕು ಎಂದು ಹೇಳಿದ್ದಾನೆ. ಮೊಮ್ಮಗನ ಆಸೆಯಂತೆ ಆತನ ಹುಟ್ಟುಹಬ್ಬಕ್ಕೆ ಅಲ್ಲು ಅರವಿಂದ್ ಈಜುಕೊಳವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಬಗ್ಗೆ ಅಲ್ಲು ಅರ್ಜುನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.

     

    View this post on Instagram

     

    Happy Birthday My Baby ❤️ . My most priceless possession . 5 years of sweetness, naughtyness , cutenesses n infinite love . #alluayaan

    A post shared by Allu Arjun (@alluarjunonline) on

    ಪೋಸ್ಟ್ ನಲ್ಲಿ ಏನಿದೆ?
    “ನನ್ನ ತಂದೆಯವರು ಅಯಾನ್ ಹುಟ್ಟುಹಬ್ಬಕ್ಕೆ ಸ್ವಿಮ್ಮಿಂಗ್ ಪೂಲ್ ನೀಡಿದ್ದಾರೆ. ನಾನು ಈಗಲೂ ಶಾಕ್‍ನಲ್ಲಿದ್ದೇನೆ. ನನ್ನ ತಂದೆ ಒಂದು ತಿಂಗಳ ಹಿಂದೆ ಹುಟ್ಟುಹಬ್ಬಕ್ಕೆ ಏನೂ ಉಡುಗೊರೆ ಬೇಕು ಎಂದು ಅಯಾನ್‍ಗೆ ಕೇಳಿದರು. ಆಗ ಅಯಾನ್ ನನಗೆ ಸ್ವಿಮ್ಮಿಂಗ್ ಪೂಲ್ ಬೇಕು ಎಂದು ಹೇಳಿದ್ದ. ನನ್ನ ತಂದೆ ಆತನ ಮಾತಿಗೆ ಒಪ್ಪಿಕೊಂಡು ಈಜುಕೊಳವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಂತಹ ತಾತ ಪಡೆಯಲು ಅಯಾನ್ ಅದೃಷ್ಟ ಮಾಡಿದ್ದ ಎಂದು ಬರೆದುಕೊಂಡಿದ್ದಾರೆ.