Tag: ಅಲ್ಪಸಂಖ್ಯಾತರು

  • ಕುಮಾರಸ್ವಾಮಿಗೆ ಬಲಿ ಕೊಡೋದಕ್ಕೆ ಅಲ್ಪಸಂಖ್ಯಾತರೇ ಸಿಗೋದಾ: ಜಮೀರ್‌ ಪ್ರಶ್ನೆ

    ಕುಮಾರಸ್ವಾಮಿಗೆ ಬಲಿ ಕೊಡೋದಕ್ಕೆ ಅಲ್ಪಸಂಖ್ಯಾತರೇ ಸಿಗೋದಾ: ಜಮೀರ್‌ ಪ್ರಶ್ನೆ

    ಮಂಡ್ಯ: ಎಚ್‌.ಡಿ.ಕುಮಾರಸ್ವಾಮಿ ಅವರು ಮುಸಲ್ಮಾನರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಬಲಿ ಕೊಡೋದಕ್ಕೆ ಅವರಿಗೆ ಸಿಗೋದೆ ಅಲ್ಪಸಂಖ್ಯಾತರು ಎಂದು ಶಾಸಕ ಜಮೀರ್‌ ಅಹ್ಮದ್‌ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನವರು ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಮಡಿಕೇರಿಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಎಂಎಲ್ಸಿ ಟಿಕೆಟ್ ಕೊಟ್ಟಿದ್ದಾರೆ. ಅಲ್ಲಿ ಮುಸ್ಲಿಂ ಅಭ್ಯರ್ಥಿ ಗೆಲ್ಲೋಕೆ ಸಾಧ್ಯವೇ? ಮುಸಲ್ಮಾನರ ಮೇಲೆ ಪ್ರೀತಿ ಇದ್ದರೆ ಹಾಸನದಲ್ಲಿ ಟಿಕೆಟ್ ಕೊಡಬೇಕಿತ್ತು. ರೇವಣ್ಣರ ಮಗನಿಗೆ ಟಿಕೆಟ್ ಕೊಡುವ ಬದಲು ಕಾರ್ಯಕರ್ತರಿಗೊ, ಮುಸ್ಲಿಂ ಅಭ್ಯರ್ಥಿಗೊ ಟಿಕೆಟ್ ಕೊಡಬಹುದಿತ್ತು. ಮೈಸೂರು, ಮಂಡ್ಯ ಅಥವಾ ತುಮಕೂರಿನಲ್ಲಿ ಕೊಡಬೇಕಿತ್ತು. ಮುಸ್ಲಿಮರಿಗೆ ಕೊಟ್ಟಂತೆಯೂ ಆಗಬೇಕು, ಬಿಜೆಪಿಗೆ ಸಹಾಯ ಮಾಡಿದಂತೆಯೂ ಆಗಬೇಕು ಎಂಬ ಕಾರಣಕ್ಕೆ ಸೋಲುವ ಕಡೆ ಟಿಕೆಟ್‌ ಕೊಟ್ಟಿದ್ದಾರೆ. ಕುಮಾರಸ್ವಾಮಿಗೆ ಬಲಿ ಕೊಡೋದಕ್ಕೆ ಮುಸಲ್ಮಾನರೇ ಸಿಗೋದು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸಾಲ ವಾಪಸ್ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ

    ಗೆಲ್ಲುವ ಕಡೆ ಕೊಟ್ಟರೆ ಕುಮಾರಸ್ವಾಮಿ ಅವರಿಗೂ ಪ್ರೀತಿ ಇದೆ ಅಂತ ಒಪ್ಪಿಕೊಳ್ಳುತ್ತೇನೆ. ರಾಮನಗರಕ್ಕೆ ರಾಜೀನಾಮೆ ಕೊಟ್ಟಾಗ ಅನಿತಕ್ಕನಿಗೆ ಟಿಕೆಟ್ ಕೊಡುವ ಬದಲು ಮುಸ್ಲಿಮರಿಗೆ ಕೊಡಬಹುದಿತ್ತು. ಜೆಡಿಎಸ್‍ನಿಂದ ನೂರಕ್ಕೆ ನೂರರಷ್ಟು ಮುಸಲ್ಮಾನರಿಗೆ ಅನ್ಯಾಯವಾಗುತ್ತಿದೆ. ಜೆಡಿಎಸ್ ಗೆಲ್ಲುವ ಕಡೆ ಅಲ್ಪಸಂಖ್ಯಾತರು ಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಒಡಿಶಾ ಸಿಎಂ ಬೆಂಗಾವಲು ವಾಹನ ಮೇಲೆ ಮೊಟ್ಟೆ ಎಸೆತ- ವೈರಲ್ ವೀಡಿಯೋ

    ಮಂಡ್ಯ ಜನರು ಈಗಾಗಲೇ ಜೆಡಿಎಸ್ ತಿರಸ್ಕರಿಸಿದ್ದಾರೆ. ಹೆಚ್‌ಡಿಕೆ ಮುಖ್ಯಮಂತ್ರಿ ಆಗಿದ್ದಾಗಲೇ ನಿಖಿಲ್‌ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ. ಜಮಾನದಲ್ಲಿ ಜೆಡಿಎಸ್ ಭದ್ರಕೋಟೆ ಆಗಿತ್ತು. ಕುಮಾರಸ್ವಾಮಿ ಬಗ್ಗೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. 2006 ರಲ್ಲಿ ಕುಮಾರಸ್ವಾಮಿ ಒಳ್ಳೆ ಸರ್ಕಾರ ಕೊಟ್ಟಿದ್ದರು, ಇಲ್ಲ ಅಂತ ಹೇಳಲ್ಲ. ಆ ವೇಳೆ ಜನಪ್ರಿಯರೂ ಆಗಿದ್ದರು. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಒಳ್ಳೆಯದಾಗುತ್ತೆ ಎಂದು ಎಲ್ಲ ವರ್ಗದ ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. 2018ರಲ್ಲಿ ವೆಸ್ಟನ್ ಹೋಟೆಲ್‍ನಲ್ಲಿ ಉಳಿದುಕೊಂಡು ಎಕ್ಸ್ ಪೋಸ್ ಆಗಿದ್ದರು. ಈಗ ಅದು ಹುಸಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಪರಿಷತ್ ಚುನಾವಣೆ – ಕಾಂಗ್ರೆಸ್ ಟಿಕೆಟ್‍ಗೆ 20ಕ್ಕೂ ಹೆಚ್ಚು ಅಲ್ಪಸಂಖ್ಯಾತರ ಕಸರತ್ತು

    ಪರಿಷತ್ ಚುನಾವಣೆ – ಕಾಂಗ್ರೆಸ್ ಟಿಕೆಟ್‍ಗೆ 20ಕ್ಕೂ ಹೆಚ್ಚು ಅಲ್ಪಸಂಖ್ಯಾತರ ಕಸರತ್ತು

    ಧಾರವಾಡ: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾಗಲಿರುವ ವಿಧಾನ ಪರಿಷತ್ ಚುನಾವಣೆ ಈಗಾಗಲೇ ಘೋಷಣೆಯಾಗಿದೆ. ಹೀಗಾಗಿ ಧಾರವಾಡದ ದ್ವಿಸದಸ್ಯಿಯ ಕ್ಷೇತ್ರದ ಟಿಕೆಟ್‍ಗಾಗಿ ಎಲ್ಲ ಕಡೆ ಕಸರತ್ತು ಆರಂಭವಾಗಿದೆ.

    ಧಾರವಾಡ ಕ್ಷೇತ್ರದಲ್ಲಿ ಮೂರು ಜಿಲ್ಲೆಗಳು ಬರಲಿವೆ. ಅದರಲ್ಲಿ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯ ಸ್ಥಳಿಯ ಸಂಸ್ಥೆಗಳ ಸದಸ್ಯರು ಮತದಾನ ಮಾಡಲಿದ್ದಾರೆ. ಹೀಗಾಗಿ ಟಿಕೆಟ್ ಗಿಟ್ಟಿಸಿಕೊಳ್ಳಲು ಮೂರು ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಆಕಾಂಕ್ಷಿಗಳು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ರೂ ಕ್ರಮ ಆಗ್ಲೇಬೇಕು: ಕೆ.ಬಿ.ಕೋಳಿವಾಡ

    ಕಳೆದ ಬಾರಿ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಶ್ರೀನಿವಾಸ ಮಾನೆ ಹಾನಗಲ್ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ. ಇನ್ನೋರ್ವ ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಈಗ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಡಿಸೆಂಬರ್ 10 ರಂದು ಈ ದ್ವಿಸದಸ್ಯಿಯ ಕ್ಷೇತ್ರದ ಮತದಾನ ನಡೆಯಲಿದ್ದು, ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಲು ನಿರ್ಧಾರ ಮಾಡಲಾಗಿದೆ.

    ಈ ಹಿನ್ನೆಲೆ ಕಾಂಗ್ರೆಸ್ ನಲ್ಲಿರುವ ಈ ಮೂರು ಜಿಲ್ಲೆಯ ಅಲ್ಪಸಂಖ್ಯಾತ ಟಿಕೆಟ್ ಆಕಾಂಕ್ಷಿಗಳು ಎಲ್ಲಿಲ್ಲದ ಕಸರತ್ತು ನಡೆಸಿದ್ದಾರೆ. ಇದರಲ್ಲಿ ಕಾಂಗ್ರೆಸ್ ಮುಖಂಡ ಸಲೀಂ ಅಹ್ಮದ್, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಇಸ್ಲಾಯಿಲ್ ತಮಾಟಗಾರ, ಇಮ್ರಾನ್ ಕಳ್ಳಿಮನಿ, ಅಲ್ತಾಫ್ ಹಳ್ಳುರ ಸೇರಿ 20 ಕ್ಕೂ ಹೆಚ್ಚು ಅಲ್ಪಸಂಖ್ಯಾತ ಟಿಕೆಟ್ ಆಕಾಂಕ್ಷಿಗಳು ಕಸರತ್ತು ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರಮಾಣ ವಚನ ಸ್ವೀಕರಿಸಿದ ರಮೇಶ್ ಭೂಸನೂರು

    ಮತ್ತೊಂದು ಕಡೆ ಬಿಜೆಪಿ ಪಕ್ಷದಿಂದ ಈಗಿರುವ ಪ್ರದೀಪ್ ಶೆಟ್ಟರ್ ಅವರಿಗೆ ಟಿಕೆಟ್ ಫೈನಲ್ ಎನ್ನಲಾಗುತ್ತಿದೆ. ಆದರೂ ಮಹೇಶ್ ನಾಲವಾಡ ಹಾಗೂ ನಾಗೇಶ್ ಕಲಬುರ್ಗಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಪ್ರಸ್ತುತ ಬಿಜೆಪಿ ಒಬ್ಬರನ್ನೇ ಕಣದಲ್ಲಿ ಇಳಿಸುವ ನಿರ್ಧಾರ ಮಾಡಿದರೆ ಪ್ರದೀಪ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲಿದೆ. ಇನ್ನೋರ್ವ ಅಭ್ಯರ್ಥಿ ಏನಾದ್ರು ಕಣದಲ್ಲಿ ಇಳಿಸಲು ನಿರ್ಧಾರ ಮಾಡಿದರೆ ಇವರಿಬ್ಬರಲ್ಲಿ ಯಾರಿಗೆ ಟಿಕೆಟ್ ಕೊಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

  • 2023 ರಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ, ಇದು ದೈವದ ಆಟ: ಶರವಣ

    2023 ರಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ, ಇದು ದೈವದ ಆಟ: ಶರವಣ

    – ಭೈರತಿ ಸುರೇಶ್‍ರೊಂದಿಗೆ ಜಮೀರ್ ಡೀಲ್ ಮಾಡಿಕೊಂಡಿದ್ರು
    – ಜಮೀರ್ ಸಿಎಂ ಅಭ್ಯರ್ಥಿ ಅಂತ ಘೋಷಣೆ ಮಾಡಿ

    ಬೆಂಗಳೂರು: 2023 ರಲ್ಲಿ ಜೆಡಿಎಸ್ ಪಕ್ಷ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ. ಇದು ದೈವದ ಆಟ ಯಾರು ಇದನ್ನು ತಡೆಯೋಕೆ ಆಗುವುದಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ನಮ್ಮ ಟಾರ್ಗೆಟ್ 123. ನಾವು ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಜೆಡಿಎಸ್ ವಕ್ತಾರ ಟಿ.ಎ ಶರವಣ ಭವಿಷ್ಯ ನುಡಿದಿದ್ದಾರೆ.

    ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಸಿದ್ದರಾಮಯ್ಯಗೆ 5 ಪ್ರಶ್ನೆ ಕೇಳಿದ್ರು. ಆದ್ರೆ ಯಾವುದಕ್ಕೂ ಉತ್ತರ ಕೊಟ್ಟಿಲ್ಲ. ಕಾಂಗ್ರೆಸ್‍ಗೆ ಅಲ್ಪಸಂಖ್ಯಾತರ ಬಗ್ಗೆ ಮಾತಾಡೋ ನೈತಿಕತೆ ಇಲ್ಲ. ಸಿದ್ದರಾಮಯ್ಯ ಉತ್ತರ ಕೊಡೋ ಬದಲಾಗಿ ಕುಮಾರಸ್ವಾಮಿ ಮೇಲೆ ವೈಯಕ್ತಿಕವಾಗಿ ಅಟ್ಯಾಕ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗ್ತಿರೋದು ನೀವೇ ಸಿದ್ದರಾಮಯ್ಯ ಅಲ್ಲ – ಹೆಚ್‍ಡಿಕೆ ವಿರುದ್ಧ ಜಮೀರ್ ಗುಡುಗು

    ಡೀಲ್ ಮಾಡಿದ್ದು ಯಾರು?
    ಭೈರತಿ ಸುರೇಶ್ ಅವರನ್ನು ಎಂಎಲ್‍ಸಿ ಮಾಡೋಣ ಎಂದು ಜಮೀರ್ ಅಹ್ಮದ್ ಹೇಳಿದ್ರು. ಆದ್ರೆ ಅವತ್ತು ಅವ್ರ ಕುಲಬಾಂಧವರನ್ನು ಗೆಲ್ಲಿಸಬೇಕು ಅಂತ ಜಮೀರ್‍ಗೆ ಅನ್ನಿಸಿಲ್ಲವಾ? ಭೈರತಿ ಸುರೇಶ್‍ರೊಂದಿಗೆ ಜಮೀರ್ ಡೀಲ್ ಮಾಡಿಕೊಂಡಿದ್ರು. ಇವತ್ತು ಸಮುದಾಯ ಬಗ್ಗೆ ಪ್ರೀತಿ ಉಕ್ಕಿ ಬರುತ್ತಿದೆ. ಇದಕ್ಕೆ ಜಮೀರ್ ಉತ್ತರ ಕೊಡಬೇಕು. ವಿಧಾನಸೌಧದ ಒಳಗೆ ಜಮೀರ್ ಅವರನ್ನು ಬಿಟ್ಟಿರಲಿಲ್ಲ. ಕುಮಾರಸ್ವಾಮಿ ಅವತ್ತು ನಿಮ್ಮ ಹೆಗಲ ಮೇಲೆ ಕೈ ಹಾಕಿ ಎಂಎಲ್‍ಎ ಮಾಡ್ತೀನಿ ಅಂತ ಕರೆದುಕೊಂಡು ಬಂದಿದ್ದರು. ನಿಮ್ಮ ಮೂಲ ಬೇರು ಯಾವುದು? ಅದನ್ನು ಮರೆತು ಹೋದ್ರಾ? ಅಂದು ಕುಮಾರಸ್ವಾಮಿ ಅವರನ್ನು ಇಂದ್ರ, ಚಂದ್ರ ಸರ್ವಸ್ವ ಅಂತ ಹೇಳಿದ್ರು. ಇವತ್ತು ಅವ್ರ ವಿರುದ್ಧ ಮಾತಾಡ್ತೀರಾ? ಜಮೀರ್‍ಗೆ ತಾಕತ್ ಇದ್ದರೆ ಕಾಂಗ್ರೆಸ್‍ನಲ್ಲಿ ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ ಎಂದು ಘೋಷಣೆ ಮಾಡಿಸಲಿ. ಅಥವಾ ಡಿಸಿಎಂ ಸ್ಥಾನ ಘೋಷಣೆ ಮಾಡಲಿ ಅದು ಇಲ್ಲವೆಂದಿದ್ದರೆ ಪರಿಷತ್ ವಿಪಕ್ಷ ಸ್ಥಾನ ಇಬ್ರಾಹಿಗೆ ಕೊಡಲಿ ನೋಡೋಣ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ಡೀಲರ್: ಜಮೀರ್ ವಾಗ್ದಾಳಿ

    ಯಾವುದರಲ್ಲಿ ಎಷ್ಟು ಡೀಲ್ ಮಾಡಿದ್ದೀರಿ ಎಂಬುದು ನಮಗೆ ಗೊತ್ತು. ದೇವೇಗೌಡರು ದೇವರು ಎಂದು ಹೇಳಿದ್ರಿ, ಇವತ್ತು ಅವರ ವಿರುದ್ಧವೇ ಮಾತನಾಡಿದ್ದೀರಿ. ಇನ್ನು ಮುಂದೆ ಜಮೀರ್‍ಗೆ ಕುಮಾರಸ್ವಾಮಿ ಉತ್ತರ ಕೊಡಬೇಡಿ. ನಾವು ಅವ್ರಿಗೆ ಉತ್ತರ ಕೊಡ್ತೀವಿ. ಎರಡು ಬಾರಿ ಸೋತು ಮನೆಯಲ್ಲಿ ಜಮೀರ್ ಇದ್ದರು. ಶಾಸಕನಾಗಿ ಮಾಡೋಕೆ ಯಾರು ಕಾರಣ? ಸಿದ್ದರಾಮಯ್ಯ ಇವತ್ತು ನಾಯಕ ಅಂತೀರಾ? ಇಲ್ಲಿ ಇದ್ದಾಗ ಕುಮಾರಣ್ಣ, ಈಗ ಸಿದ್ದರಾಮಣ್ಣ, ಮುಂದೆ ಯಾರನ್ನು ಅಣ್ಣಾ ಅಂತಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಅಲ್ಪಸಂಖ್ಯಾತ ನಾಯಕರನ್ನು ಮುಗಿಸಿ ಆಯ್ತು. ನಿಮ್ಮನ್ನು ಸಿದ್ದರಾಮಯ್ಯ ಮುಗಿಸುತ್ತಾರೆ. ದೇವೇಗೌಡ ಫ್ಯಾಕ್ಟರಿಯಲ್ಲಿ ಎಷ್ಟೋ ಜನ ಬಂದು ಹೋಗಿದ್ದಾರೆ. ತೊಡೆ ತಟ್ಟಿದವರು ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಬೇಡಿ. ಯೋಚನೆ ಮಾಡಿ ಹೇಳಿಕೆ ಕೊಡಿ ಎಂದು ಜಮೀರ್ ವಿರುದ್ಧ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ

    ಇಕ್ಬಾಲ್ ಅನ್ಸಾರ್ ಅವ್ರನ್ನು ಮಂತ್ರಿ ಮಾಡಿದ್ದು ಯಾರು? ಕಾಂಗ್ರೆಸ್ ನಿಂದ ಸೋತು ಹೋಗಿದ್ರು. ಕುಮಾರಸ್ವಾಮಿ ಟಿಕೆಟ್ ಕೊಟ್ಟು ಗೆಲ್ಲಿಸಿದ್ರು. ಕುಮಾರಸ್ವಾಮಿ ಹೆಸರಿನಲ್ಲಿ ಅನ್ಸಾರಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಇವತ್ತು ಅದನ್ನು ಮರೆತು ಮಾತನಾಡುತ್ತಿದ್ದೀರಿ. ಸಿದ್ದರಾಮಯ್ಯರಿಗೆ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ ಜಮೀರ್‍ ನ್ನು ಸಿಎಂ ಅಭ್ಯರ್ಥಿ ಅಂತ ಘೋಷಣೆ ಮಾಡಿ. ಸಿದ್ದರಾಮಯ್ಯ 5 ವರ್ಷ ಅಲ್ಪಸಂಖ್ಯಾತರಿಗೆ ಏನ್ ಕೆಲಸ ಮಾಡಿದ್ರು? ಅಕ್ಕಿ ಕೊಟ್ಟೆ, ಆ ಭಾಗ್ಯ, ಈ ಭಾಗ್ಯ ಅಂತೀರಾ ಅಷ್ಟೇ. ಸಿದ್ದರಾಮಯ್ಯ ಅಲ್ಪಸಂಖ್ಯಾತ ನಾಯಕರನ್ನು ಮುಗಿಸಿದ್ದಾರೆ. ಜಮೀರ್ ಅವರನ್ನು ಮುಗಿಸುತ್ತಾರೆ. ಹೀಗಾಗಿ ಜಮೀರ್ ಎಚ್ಚರವಾಗಿ ಇರಿ. ನಮ್ಮದು ಸಣ್ಣ ಪಕ್ಷ ನಾವು ಸಿಎಂ ಮಾಡೋದು ಬಿಡಿ. ನಿಮ್ಮದು ರಾಷ್ಟ್ರೀಯ ಪಕ್ಷ ನೀವು ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ ಕೊಡಿ ಎಂದು ಸವಾಲೆಸೆದರು.

  • ನಿಮಗೆ ಕೇಸರಿ ಕಂಡರೆ ಯಾಕೆ ಅಷ್ಟು ಭಯ – ಸಿದ್ದರಾಮಯ್ಯಗೆ ರಘುಪತಿ ಭಟ್ ಪ್ರಶ್ನೆ

    ನಿಮಗೆ ಕೇಸರಿ ಕಂಡರೆ ಯಾಕೆ ಅಷ್ಟು ಭಯ – ಸಿದ್ದರಾಮಯ್ಯಗೆ ರಘುಪತಿ ಭಟ್ ಪ್ರಶ್ನೆ

    -ಕೇಸರಿ ಬಟ್ಟೆ ಧರಿಸಿದ ಕಾಪು ಪೊಲೀಸರು

    ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಉಡುಪಿಯ ಕಾಪು ಪೊಲೀಸರು ಕೇಸರಿ ಬಟ್ಟೆ ಧರಿಸಿದ ಫೋಟೋ ಟ್ವೀಟ್ ಮಾಡಿ ಟೀಕಿಸಿದ್ದರು. ನಿಮಗೆ ಕೇಸರಿ ಕಂಡರೆ ಯಾಕೆ ಅಷ್ಟು ಭಯ? ನೀವು ಟಿಪ್ಪುವಿನ ಪೋಷಾಕು ಧರಿಸಿ, ಖಡ್ಗ ಹಿಡಿದಿಲ್ಲವೇ? ಪಚ್ಚೆ ಶಾಲು, ಟೊಪ್ಪಿ ಧರಿಸಿದಾಗ ಭಾವೈಕ್ಯತೆ ನೆನಪಾಗಲಿಲ್ಲವೇ? ಪೊಲೀಸರು ಕೇಸರಿ ಬಟ್ಟೆ ಧರಿಸಿದರೆ ನಿಮಗೆ ಏನು ಸಮಸ್ಯೆ? ಎಂದು ಉಡುಪಿ ಶಾಸಕ ರಘುಪತಿ ಭಟ್ ಪ್ರಶ್ನಿಸಿದ್ದಾರೆ.

    ಪೊಲೀಸರು ವಿಜಯದಶಮಿಯಂದು ಕೇಸರಿ ಉಡುಪು ಧರಿಸಿದ್ದಕ್ಕೆ ಸಿದ್ದರಾಮಯ್ಯ ಆಕ್ಷೇಪಿಸಿ ಟ್ವೀಟ್ ಮಾಡಿದ್ದರು. ಪೊಲೀಸರ ಕೈಗೆ ತ್ರಿಶೂಲ ಕೊಟ್ಟುಬಿಡಿ ಎಂದು ಕಿಡಿಕಾರಿದ್ದರು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಸರಿ ತ್ಯಾಗದ ಸಂಕೇತ. ದೇಶದಲ್ಲಿ ಕೇಸರಿಯನ್ನು ಹಿಂದಿನಿಂದಲೂ ಪೂಜಿಸಿಕೊಂಡು ಬಂದಿದ್ದೇವೆ. ಅಲ್ಪಸಂಖ್ಯಾತರ ಮತ ಬ್ಯಾಂಕ್ ಉದ್ದೇಶವಿಟ್ಟುಕೊಂಡು ಕೇಸರಿಯನ್ನು ದ್ವೇಷಿಸಿದ್ದೀರಿ. ಕೇಸರಿಯನ್ನು ದ್ವೇಷಿಸಿದಕ್ಕೆ ಕಾಂಗ್ರೆಸ್‍ಗೆ ಈ ಪರಿಸ್ಥಿತಿ ಬಂದಿದೆ. ಕೇಸರಿಯನ್ನು ವಿರೋಧಿಸಿದರೆ ಇನ್ನಷ್ಟು ಮೂಲೆಗುಂಪಾಗುತ್ತೀರಿ. ಹಬ್ಬದ ದಿನ ಪೊಲೀಸರು ಕೇಸರಿ ಧರಿಸಿದ್ದನ್ನು ಸಮರ್ಥಿಸುತ್ತೇನೆ ಎಂದು ರಘುಪತಿ ಭಟ್ ಹೇಳಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ತ್ರಿಶೂಲಗಳನ್ನು ಕೊಟ್ಟು ಹಿಂಸೆಯ ದೀಕ್ಷೆ ಕೊಡಿ: ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಕಿಡಿ

    ನಮ್ಮ ರಾಷ್ಟ್ರ ಧ್ವಜದಲ್ಲಿ ಕೇಸರಿ ಬಣ್ಣ ಇದೆ. ಕೇಸರಿ ಧರಿಸಿದ್ದು ಅಪರಾಧವೇನಲ್ಲ. ಸಿದ್ದರಾಮಯ್ಯ ಭಾವನೆ ಈ ಟ್ವೀಟ್‍ನಿಂದ ಗೊತ್ತಾಗುತ್ತೆ. ತ್ರಿಶೂಲ ಯಾರನ್ನೂ ಕೊಲ್ಲುವ ಆಯುಧವಲ್ಲ. ತ್ರಿಶೂಲ ಹಿಂದೂಗಳು ಆರಾಧಿಸುವ ಆಯುಧ. ಪೊಲೀಸರಿಗೆ ತ್ರಿಶೂಲ ಕೊಡುವುದು ಒಳ್ಳೆಯ ಸಂಗತಿ. ಸಿದ್ದರಾಮಯ್ಯನವರು ಹೇಳಿರುವುದು ಸರಿಯಾಗಿದೆ ಎಂದು ಶಾಸಕ ರಘುಪತಿ ಭಟ್ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ದುರ್ಗಾ ದೌಡ್ – ಮೆರವಣಿಗೆಯಲ್ಲಿ ತಲವಾರು ಪ್ರದರ್ಶಿಸಿದ ಕಾರ್ಯಕರ್ತರು

  • ಪೌರತ್ವ ಕಾಯ್ದೆ ವಿರೋಧಿಸುವವರೆಲ್ಲಾ ದೇಶದ್ರೋಹಿಗಳು: ರೇಣುಕಾಚಾರ್ಯ

    ಪೌರತ್ವ ಕಾಯ್ದೆ ವಿರೋಧಿಸುವವರೆಲ್ಲಾ ದೇಶದ್ರೋಹಿಗಳು: ರೇಣುಕಾಚಾರ್ಯ

    – ಅಲ್ಪಸಂಖ್ಯಾತರ ಕುರಿತ ತಮ್ಮ ಹೇಳಿಕೆ ಸಮರ್ಥಿಸಿದ ರೇಣುಕಾಚಾರ್ಯ

    ಮೈಸೂರು: ಯಾರು ಪೌರತ್ವ ಕಾಯ್ದೆ ವಿರೋಧಿಸುತ್ತಾರೋ ಅವರು ದೇಶದ್ರೋಹಿಗಳು. ಕಾಂಗ್ರೆಸ್ ಇರಬಹುದು, ಜೆಡಿಎಸ್ ಇರಬಹುದು. ಪೌರತ್ವ ಕಾಯ್ದೆ ವಿರೋಧಿಸುವವರು ದೇಶ ದ್ರೋಹಿಗಳು ಎಂದು ಶಾಸಕ ರೇಣುಕಾಚಾರ್ಯ ಮೈಸೂರಿನ ಸುತ್ತೂರು ಕ್ಷೇತ್ರದಲ್ಲಿ ಹೇಳಿದ್ದಾರೆ.

    ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಬುದ್ಧಿ ಸ್ಥಿಮಿತವಾಗಿಲ್ಲ. ಕುಮಾರಸ್ವಾಮಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ನಡೆಯೇ ಅರ್ಥವಾಗುತ್ತಿಲ್ಲ. ರಕ್ಷಣಾ ಇಲಾಖೆಯ ಮಾನಸಿಕ ಸ್ಥೈರ್ಯ ಕುಗ್ಗಿಸುವಂತಹ ಹೇಳಿಕೆಯನ್ನು ಕುಮಾರಸ್ವಾಮಿ ನೀಡುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾದವರು ಈ ರೀತಿ ಮಾತನಾಡಿದರೆ ಹೇಗೆ? ಈ ರೀತಿ ಹೇಳಿಕೆ ನೀಡಿದರೆ ಜನ ಅದನ್ನು ಸ್ವಾಗತ ಮಾಡ್ತಾರಾ? ಎಂದು ಕಟುವಾಗಿ ಪ್ರಶ್ನಿಸಿದರು.

    ಎಲ್ಲೋ ಒಂದು ಕಡೆ ಅಲ್ಪಸಂಖ್ಯಾತರಲ್ಲಿ ವಿಷ ಬೀಜ, ಜಾತಿ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಅಧಿಕಾರವಧಿಯಲ್ಲಿ ಜಾತಿ ಜನಗಣತಿ ಮಾಡಿಸಿದ್ರು ಹಾಗಾದರೆ ಯಾವ ಕಾರಣಕ್ಕೆ ಮಾಡಿಸಿದ್ದರು. ಧರ್ಮ ಒಡೆಯುವ ಕೆಲಸವನ್ನು ಅವರು ಮಾಡಿದರು ಎಂದು ಕಿಡಕಾರಿದರು. ಪೌರತ್ವ ಕಾಯ್ದೆಯನ್ನು ಯಾರು ವಿರೋಧ ಮಾಡುತ್ತಾರೋ ಅವರನ್ನು ನಾನು ದೇಶದ್ರೋಹಿಗಳು ಎಂದು ಕರೆದಿದ್ದೀನಿ. ಇದರಲ್ಲಿ ತಪ್ಪೇನಿದೆ ಎಂದು ಮರುಪ್ರಶ್ನಿಸಿದರು.

    ಯು.ಟಿ ಖಾದರ್ ಹಾಗೂ ಜಮೀರ್ ಅಹ್ಮದ್ ಬುದ್ಧಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಇಬ್ಬರೂ ಸ್ಥಿಮಿತ ಕಳೆದುಕೊಂಡಿದ್ದಾರೆ. ಜಮೀರ್ ಅಹ್ಮದ್ ನಾನೇ ಅಲ್ಪಸಂಖ್ಯಾತರ ಮುಖಂಡ ಅಂದುಕೊಂಡಿದ್ದಾರೆ. ಮೊದಲು ಅವರೇ ಮತಾಂಧರು. ಎಲುಬಿಲ್ಲದ ನಾಲಿಗೆ ಎಂದು ಹುಚ್ಚುಚ್ಚಾಗಿ ಮಾತನಾಡುತ್ತಾರೆ ಎಂದ ಸುತ್ತೂರಿನಲ್ಲಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

    ಹೇಳಿಕೆ ಸಮರ್ಥಿಸಿಕೊಂಡ ರೇಣುಕಾಚಾರ್ಯ:
    ವೋಟ್ ಹಾಕೋದು ಬೇರೆಯವರಿಗೆ ಆದರೆ ಸವಲತ್ತುಗಳನ್ನು ಕೊಡಲು ನಾವು ಬೇಕಾ? ಅಲ್ಪ ಸಂಖ್ಯಾತರಿಗೆ ಎಂ.ಪಿ ರೇಣುಕಾಚಾರ್ಯ ಮತ್ತೊಮ್ಮೆ ಪ್ರಶ್ನಿಸಿದ್ದಾರೆ. ಅಲ್ಪ ಸಂಖ್ಯಾತರಿಗೆ ಯಾವುದೇ ಪ್ಯಾಕೇಜ್ ನೀಡುವುದಿಲ್ಲ ಎಂದು ಇತ್ತೀಚೆಗೆ ತಾವು ನೀಡಿರುವ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ನಮ್ಮ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರಿಗೆ ನೀರು, ವಿದ್ಯುತ್, ರಸ್ತೆ ಮೊದಲಾದ ಮೂಲಭೂತ ಸೌಕರ್ಯಗಳನ್ನು ನೀಡುತ್ತೇವೆ. ಆದರೆ ಇತರೆ ಯಾವುದೇ ಪ್ಯಾಕೇಜ್‍ಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ನಮಗೆ ಮತ ಹಾಕದಿದ್ದರೂ ಸಹ ನಾವು ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಹೂವಿನ ಹಾರದೊಂದಿಗೆ ಬಂದು ನಿಮಗೇ ಮತಹಾಕಿದ್ದೇವೆ ಎಂದು ಹೇಳುತ್ತಾರೆ. ಮತ ಯಾರಿಗೋ ಹಾಕಿ ನಮ್ಮ ಬಳಿಗೆ ಬಂದು ಸವಲತ್ತುಗಳನ್ನು ಕೇಳುತ್ತಾರೆ. ವೋಟ್ ಹಾಕೋದು ಯಾರಿಗೋ, ಸವಲತ್ತುಗಳನ್ನು ನೀಡಲು ನಾವು ಬೇಕೇ ಎಂದು ಪ್ರಶ್ನಿಸಿದರು.

  • ಸುಮಲತಾಗೆ ಮೋದಿ ಬೆಂಬಲ- ನಿಷ್ಠೆ ಬದಲಿಸಿ ನಿಖಿಲ್ ಪರ ನಿಂತ್ರು ದರ್ಶನ್ ಫ್ಯಾನ್ಸ್

    ಸುಮಲತಾಗೆ ಮೋದಿ ಬೆಂಬಲ- ನಿಷ್ಠೆ ಬದಲಿಸಿ ನಿಖಿಲ್ ಪರ ನಿಂತ್ರು ದರ್ಶನ್ ಫ್ಯಾನ್ಸ್

    -ತೆನೆಯ ಹೊರೆ ಹೊತ್ತ ಡಿ ಫ್ಯಾನ್ಸ್

    ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಂತೆ ದರ್ಶನ್ ಅಭಿಮಾನಿಗಳು ನಿಷ್ಠೆ ಬದಲಿಸಿದ್ದು, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಬೆಂಬಲಿಸಲು ನಿರ್ಧರಿಸಿದ್ದಾರೆ.

    ಹೌದು, ಕಳೆದೊಂದು ವಾರದ ಹಿಂದೆ ದರ್ಶನ್ ಜೊತೆ ಇದ್ದ ಗಿರೀಶ್ ಎಂಬ ಅಭಿಮಾನಿ ಹಾಗೂ ಇನ್ನೂ ಒಂದೂವರೆ ಸಾವಿರ ಯುವಕರು ಜೆಡಿಎಸ್‍ಗೆ ಬೆಂಬಲಿಸಲು ಮುಂದಾಗಿದ್ದಾರೆ. ನಿಖಿಲ್ ಗೆದ್ದರೆ ಜಿಲ್ಲೆಯಲ್ಲಿ ಅಭಿವೃದ್ಧಿ ಆಗಲಿದೆ. ಅವರ ತಂದೆ ಸಿಎಂ ಆಗಿರುವುದರಿಂದ ಅಭಿವೃದ್ಧಿ ಕಾರ್ಯ ಜಿಲ್ಲೆಯಲ್ಲಿ ನಡೆಯುತ್ತದೆ. ಅಲ್ಲದೆ ಜಿಲ್ಲೆಯಲ್ಲಿ ಕಾವೇರಿ ನದಿಯಲ್ಲಿ ಡಿಸ್ನಿ ಲ್ಯಾಂಡ್ ಯೋಜನೆ ಕಾರ್ಯರೂಪಕ್ಕೆ ಬಂದರೆ ಈ ಭಾಗದ ಜನರಿಗೆ ಉದ್ಯೋಗ ಅವಕಾಶ ದೊರಕಲಿದೆ. ಆದರಿಂದ ನಾವು ನಿಖಿಲ್ ಪರ ಪ್ರಚಾರಕ್ಕೆ ಮುಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಇನ್ನೊಂದೆಡೆ ಮೋದಿ ಹಾಗೂ ಬಿಜೆಪಿ ಸುಮಲತಾರಿಗೆ ಬೆಂಬಲ ನೀಡುತ್ತಿರುವುದಕ್ಕೆ ಅಲ್ಪಸಂಖ್ಯಾತರು ಮತ ಕೂಡ ಪಕ್ಷೇತರ ಅಭ್ಯರ್ಥಿ ಕೈತಪ್ಪುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಅವರು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತ ಬಂದಿದ್ದಾರೆ. ನಮ್ಮನ್ನು ಟಾರ್ಗೆಟ್ ಮಾಡಿ ಆರೋಪಗಳನ್ನು ಮಾಡುತ್ತಾರೆ. ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುತ್ತಾರೆ. ಈಗ ಸುಮಲತಾರಿಗೆ ಬಿಜೆಪಿ ಬೆಂಬಲ ನೀಡುತ್ತಿದೆ. ಪರೋಕ್ಷವಾಗಿ ಸುಮಲತಾ ಅವರು ಬಿಜೆಪಿ ಪರ ಇದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ. ಆದರಿಂದ ನಾವು ಸುಮಲತಾರಿಗೆ ಬೆಂಬಲ ನೀಡಲ್ಲ ಎಂದು ಅಲ್ಪಸಂಖ್ಯಾತರು ಆರೋಪಿಸಿದ್ದಾರೆ.

  • ದೇಶದಲ್ಲಿ ಅಲ್ಪಸಂಖ್ಯಾತರು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ: ಶಿವಶಂಕರ ರೆಡ್ಡಿ

    ದೇಶದಲ್ಲಿ ಅಲ್ಪಸಂಖ್ಯಾತರು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ: ಶಿವಶಂಕರ ರೆಡ್ಡಿ

    ಚಿಕ್ಕಬಳ್ಳಾಪುರ: ಭಾರತ ಜಾತ್ಯಾತೀತವಾದ ದೇಶವಾಗಿದ್ದು, ಎಲ್ಲಾ ಜನಾಂಗದವರು, ಧರ್ಮೀಯರು ಸಮಾನತೆಯಿಂದ ಬದುಕುವಂತಹ ಸಂವಿಧಾನವನ್ನ ನಾವು ಒಪ್ಪಿಕೊಂಡಿದ್ದೇವೆ. ಆದರೂ ಕೂಡ ದೇಶದಲ್ಲಿ ಅಲ್ಪಸಂಖ್ಯಾತರು ಭಯದಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಶಾದಿ ಮಹಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಜಾತಿ, ಧರ್ಮದ ವಿರುದ್ಧ ಕೆಲ ಮತೀಯ ಶಕ್ತಿಗಳು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿವೆ. ಹೀಗಾಗಿ ಜಾತ್ಯಾತೀತ ತತ್ವಗಳಿಗೆ ತಿಲಾಂಜಲಿ ಇಡುವಂತಹ ಪ್ರಯತ್ನಗಳು ನಡೆಯುತ್ತಿವೆ. ಇದರಿಂದಾಗಿ ಈ ದೇಶದಲ್ಲಿ ಅಲ್ಪ ಸಂಖ್ಯಾತರು ಭಯದಿಂದ ಬದುಕುವಂತಾಗಿದೆ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು.

    ಈ ಮತೀಯ ಶಕ್ತಿಗಳಿಂದ ದೇಶವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ತಮ್ಮದು ಜಾತ್ಯಾತೀತ ದೇಶವಾಗಿರುವುದರಿಂದ ಇಲ್ಲಿ ಎಲ್ಲಾ ವರ್ಗದ ಜನರು ಇದ್ದಾರೆ. ಆದರಿಂದ ನಾವೆಲ್ಲರೂ ಸೇರಿ ಜಾತ್ಯಾತೀತ ಸಂವಿಧಾನವನ್ನು ಉಳಿಸುವಂತಹ ಕೆಲಸ ಮಾಡಬೇಕಿದೆ ಎಂದು ಅಲ್ಪಸಂಖ್ಯಾತರಲ್ಲಿ ಶಿವಶಂಕರ್ ರೆಡ್ಡಿ ಮನವಿ ಮಾಡಿಕೊಂಡರು.

    ಇದೇ ವೇಳೆ ಇಂದು ಬೆಂಗಳೂರಿನಲ್ಲಿ ಏರ್ ಶೋ ತಾಲೀಮು ವೇಳೆ ಯುದ್ಧವಿಮಾನಗಳ ಅಪಘಾತ ದುರಾದೃಷ್ಟಕರ ಎಂದು ಬೇಸರ ವ್ಯಕ್ತ ಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ಭಾಗ್ಯ- ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ ಕೊಟ್ಟಿದ್ದು ಹೀಗೆ

    ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ಭಾಗ್ಯ- ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ ಕೊಟ್ಟಿದ್ದು ಹೀಗೆ

    ಚಿಕ್ಕಬಳ್ಳಾಪುರ: ಕೋಮುಗಲಭೆ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ನೀಡಿರುವ ಸರ್ಕಾರದ ಕ್ರಮವನ್ನು ಗೃಹಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ, ಕಾವೇರಿ, ವಿಚಾರದಲ್ಲಿ ರೈತರ ಮೇಲಿನ ಕೇಸ್ ಗಳನ್ನ ಹಿಂಪಡೆದಿದ್ದೀವಿ. ಟಿಪ್ಪು-ಜಯಂತಿ ವೇಳೆ ಹಲವಡೆ ಪರ ವಿರೋಧದ ಪ್ರತಿಭಟನೆಗಳು ನಡೆದಿವೆ. ಆಸ್ತಿ-ಪಾಸ್ತಿ ಹಾನಿ, ಕೊಲೆ ಯತ್ನ ಪ್ರಕರಣಗಳನ್ನು ನಾವು ಹಿಂಪಡೆಯುವುದಿಲ್ಲ. ಆಸ್ತಿ-ಪಾಸ್ತಿ ಹಾನಿ, ಕೊಲೆ ಯತ್ನ ಪ್ರಕರಣಗಳು ಇಲ್ಲದೆ ಇರುವವರ ಕೆಲ ಪ್ರಕರಣಗಳನ್ನ ನಾವು ಕೈಬಿಟ್ಟಿದ್ದೇವೆ ಅಂತ ಹೇಳಿದ್ರು. ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಸಿಕ್ತು ಕ್ಲೀನ್‍ಚಿಟ್ ಭಾಗ್ಯ- ಸರ್ಕಾರದಿಂದಲೇ ಹಿಂದೂ-ಮುಸ್ಲಿಂ ಇಬ್ಭಾಗ ಕೆಲಸ

    ಯಡಿಯೂರಪ್ಪ ಈ ತರ ಎಷ್ಟು ಕೇಸ್ ಮಾಡಿದ್ದಾರೆ ಪಟ್ಟಿ ಕೊಡ್ತೀನಿ. ಉತ್ತರ ಪ್ರದೇಶದಲ್ಲಿ 20 ಸಾವಿರ ಕೇಸ್ ವಿತ್ ಡ್ರಾ ಮಾಡಿದ್ದಾರೆ. ಪಿಎಫ್‍ಐ, ಎಸ್ ಡಿಪಿಐ ಜೊತೆ ಕಾಂಗ್ರೆಸ್ ಹೊಂದಾಣಿಕೆ ಅಂತ ಆರೋಪ ವ್ಯಕ್ತವಾಗುತ್ತಿದೆ. ನಾವು ಯಾಕೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಬಿಜೆಪಿಯವರೇ ದಕ್ಷಿಣ ಕನ್ನಡದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದವರು ಅಂತ ಅವರು ತಿಳಿಸಿದ್ರು.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗ ಬಂದ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯವರು ಈ ಮಾತುಗಳನ್ನ ಬಿಟ್ಟು ಕೆಲಸ ಮಾಡೋದು ಕಲೀಬೇಕು. ಲೆಕ್ಕ ಕೇಳೋಕೆ ಅಮಿತ್ ಷಾ ಯಾರು? ಯಡಿಯೂರಪ್ಪ ಯಾರು? ಅಮಿತ್ ಶಾ ಸಂವಿಧಾನಾತ್ಮಕ ಹುದ್ದೆಯಲ್ಲಿ ಇದ್ದಾರಾ..? ಅವರಿಗೂ ಇದಕ್ಕೂ ಲೆಕ್ಕ ಕೇಳೋದಕ್ಕೂ ಸಂಬಂಧ ಇಲ್ಲ ಅಂದ್ರು.

    ಮೋದಿಯವರು ರಾಜ್ಯಕ್ಕೆ ಬಂದಾಗ ಬಂದ್ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ರೈತರ ಪರ ಸರ್ಕಾರವಾಗಿದೆ. ನಿನ್ನೆಯ ಬಂದ್ ಗೂ ನಮಗೂ ಯಾವುದೇ ಸಂಬಂಧವಿಲ್ಲ. ನಾನು ಮೋದಿ ಬಂದಾಗ ಬಂದ್ ಬೇಡ ಅಂತ ಹೇಳ್ತಿನಿ. ಸಂಘಟನೆಯವರು ನನ್ನ ಮಾತು ಕೇಳ್ತಾರಾ..? ಮಹದಾಯಿ ವಿಚಾರದಲ್ಲಿ ಅಮಿತ್ ಶಾ, ಮೋದಿ ಗಮನ ಸೆಳೆಯಲು ಬಂದ್ ಮಾಡಲಾಗುತ್ತಿದೆ. ಮಹದಾಯಿ ಬಗ್ಗೆ ಅಮಿತ್ ಶಾ ತುಟಿಕ್ ಪಿಟಿಕ್ ಅನ್ನಲಿಲ್ಲ. ಮೋದಿ ಮಹದಾಯಿ ವಿಚಾರದಲ್ಲಿ ಏನೂ ಮಾತೋಡೋದೆ ಇಲ್ಲ ಅಂತ ಕಿಡಿಕಾರಿದ್ರು.

  • ಅಲ್ಪಸಂಖ್ಯಾತರಿಗೆ ಸಿಕ್ತು ಕ್ಲೀನ್‍ಚಿಟ್ ಭಾಗ್ಯ- ಸರ್ಕಾರದಿಂದಲೇ ಹಿಂದೂ-ಮುಸ್ಲಿಂ ಇಬ್ಭಾಗ ಕೆಲಸ

    ಅಲ್ಪಸಂಖ್ಯಾತರಿಗೆ ಸಿಕ್ತು ಕ್ಲೀನ್‍ಚಿಟ್ ಭಾಗ್ಯ- ಸರ್ಕಾರದಿಂದಲೇ ಹಿಂದೂ-ಮುಸ್ಲಿಂ ಇಬ್ಭಾಗ ಕೆಲಸ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮತ್ತೆ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದೆ. ಸಿದ್ದರಾಮಯ್ಯ ಸರ್ಕಾರದಿಂದಲೇ ಹಿಂದೂ-ಮುಸ್ಲಿಂ ಇಬ್ಭಾಗ ಮಾಡುವ ಕೆಲಸ ನಡೆಯುತ್ತಿದೆ ಎಂಬ ಆರೋಪವೊಂದು ಇದೀಗ ಕೇಳಿ ಬಂದಿದೆ.

    ಕೋಮು ಗಲಭೆಗಳಲ್ಲಿ ಭಾಗಿಯಾದ ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ನೀಡಲು ಸಿದ್ದರಾಮಯ್ಯ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಅಭಿಯೋಜನೆಯಿಂದ ಕೇಸ್‍ಗಳನ್ನು ವಾಪಸ್ ಪಡೆಯಲು ಕೋರಿ ಪತ್ರ ಬರೆಯಲಾಗಿದೆ.

    5 ವರ್ಷಗಳಲ್ಲಿ 20 ಜಿಲ್ಲೆ, ಬೆಳಗಾವಿ ಮತ್ತು ಮಂಗಳೂರು ಕಮಿಷನರೇಟ್‍ಗಳಲ್ಲಿ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರ ಅಭಿಯೋಜನೆಯನ್ನು ಕೋರಿದೆ. ಒಟ್ಟಿನಲ್ಲಿ ಕೋಮು ಭಾವನೆ ಬಿತ್ತಿದ್ದಾರೆ ಎಂದು ಸರ್ಕಾರ, ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಕೇಸ್ ಹಾಕುತ್ತೆ. ಆದ್ರೆ ಇತ್ತ ಕೋಮುಗಲಭೆಗಳಲ್ಲಿ ಭಾಗಿಯಾಗಿರೋ ಮುಸ್ಲಿಮರ ಮೇಲಿನ ಕೇಸ್ ವಾಪಸ್ ಪಡಿತಾರೆ ಅನ್ನೋ ಆರೋಪ ಕೇಳಿಬಂದಿದೆ.