Tag: ಅಲ್‍ಖೈದಾ

  • ಮುಸ್ಕಾನ್‍ಳನ್ನು ಅಲ್‍ಖೈದಾ ಮುಖ್ಯಸ್ಥ ಬೆಂಬಲಿಸಿರುವುದು ಆತಂಕಕಾರಿ: ಮುತಾಲಿಕ್

    ಮುಸ್ಕಾನ್‍ಳನ್ನು ಅಲ್‍ಖೈದಾ ಮುಖ್ಯಸ್ಥ ಬೆಂಬಲಿಸಿರುವುದು ಆತಂಕಕಾರಿ: ಮುತಾಲಿಕ್

    ಧಾರವಾಡ: ಇವತ್ತು ದೇಶಕ್ಕೆ ಆಫಘಾನಿಸ್ತಾನದ ವಿಡಿಯೋ ಪ್ರಸಾರವಾಗಿದೆ. ಇದು ದೇಶದ ಜನರಿಗೆ ಆತಂಕ ತಂದಿದೆ, ಇದು ಅಪಾಯಕಾರಿ ಬೆಳವಣಿಗೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಅಲ್ ಖೈದಾ ಮುಖ್ಯಸ್ಥ ಮಂಡ್ಯದ ಮುಸ್ಕಾನ್‍ಳನ್ನು ಬೆಂಬಲಿಸಿದ್ದಾನೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದರು.

    ಶಾಲೆಯಲ್ಲಿ ಹಿಜಬ್ ಬ್ಯಾನ್ ಮಾಡಿದ್ದನ್ನು ವಿರೋಧಿಸಿದ್ದು ಅಚ್ಚರಿ ತಂದಿದೆ. ಹಿಜಬ್ ವಿಚಾರ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಿದೆ ಎಂದ ಅವರು, ಉಗ್ರ ಸಂಘಟನೆಗಳು ಈ ರೀತಿ ಹೇಳಿಕೆಯನ್ನು ಕೊಡುತ್ತಾರೆ ಎಂದರೆ ಇದರ ಹಿಂದೆ ಇಸ್ಲಾಂ ಕೆಲಸ ಮಾಡುತ್ತಿದೆ. ದೇಶದ್ರೋಹಿ ಸಂಘಟನೆ ಕೆಲಸ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.

    muskhan

    ದೇಶದಲ್ಲಿ ಮುಸ್ಲಿಮರಿಗೆ ಸ್ವಾತಂತ್ರವಿದೆ, ಇಲ್ಲಿದ್ದಷ್ಟು ಅನುಕೂಲ ಎಲ್ಲಿಯೂ ಇಲ್ಲ, ಆದರೆ ಇಲ್ಲಿನ ಮುಸ್ಲಿಮರು ದೇಶದ್ರೋಹದ ಕೆಲಸ ಮಾಡುತ್ತಾರೆಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಆದರೆ ಸರ್ಕಾರ ಇದನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅಲ್‍ಖೈದಾ ಉಗ್ರ ಸಂಘಟನೆಗೆಳು ನೀಡಿರುವುದು ವಿದ್ಯಾರ್ಥಿನಿಗೆ ಬೆಂಬಲ ಅಲ್ಲ, ಬದಲಿಗೆ ಇದು ಇಸ್ಲಾಂಗೆ ಬೆಂಬಲವಾಗಿದೆ. ಇದನ್ನು ತಡೆಯಬೇಕು, ಅಲ್ ಖೈದಾ ಮುಖ್ಯಸ್ಥನ ವಿಡಿಯೋ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ಆಗಲಿ. ಇದರ ಹಿಂದಿನ ಸಿಎಫ್‍ಐ, ಪಿಎಫ್‍ಐ, ಎಸ್‍ಡಿಎಫ್‍ಐ ಸಂಘಟನೆ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ನಮಗೆ ಮಾನವೀಯತೆಯಲ್ಲಿ ನಂಬಿಕೆ ಇದ್ದರೆ, ಬಿಜೆಪಿ ಮನುವಾದದಲ್ಲಿ ನಂಬಿಕೆ ಇಟ್ಟಿದೆ: ಸಿದ್ದರಾಮಯ್ಯ

    ಈ ಸಂಘಟನೆಗಳನ್ನೆಲ್ಲಾ ಬ್ಯಾನ್ ಮಾಡಬೇಕು, ಇವರೆಲ್ಲ ಅಲ್ಲಿಯವರೆಗೆ ಹೋಗುತ್ತಾರೆ ಅಂದರೇನು, ಈ ವಿಷಯದಲ್ಲಿ ವಿದೇಶಿಯರು ಇದರಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ. ನಾವು ತಾಲೀಬಾನ್ ಥರಾ ಅಲ್ಲ, ನೀವೆಲ್ಲ ಮಹಿಳೆಯರನ್ನು ಮಶೀನ್ ಥರಾ ನೋಡುತ್ತೀರಿ, ಮಕ್ಕಳನ್ನು ಹೆರುವ ಯಂತ್ರದ ಥರಾ ನೋಡ್ತಾರೆ, ಅಂಥವರು ನಮ್ಮ ದೇಶದಲ್ಲಿ ಮೂಗು ತೂರಿಸೋದು ಬೇಡ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹಿಂದೂಗಳಂತೆ ಮುಸಲ್ಮಾನರೂ ಪೌರಕಾರ್ಮಿಕರಾಗಿ ದುಡಿಯಲಿ: ಸೊಗಡು ಶಿವಣ್ಣ