Tag: ಅಲ್‍ಖೈದಾ

  • ಅತೀಕ್ ಹತ್ಯೆಯ ದ್ವೇಷ ತೀರಿಸಿಕೊಳ್ಳಲು ಭಾರತದ ಮೇಲೆ ದಾಳಿ ನಡೆಸ್ತೇವೆ: ಅಲ್ ಖೈದಾ

    ಅತೀಕ್ ಹತ್ಯೆಯ ದ್ವೇಷ ತೀರಿಸಿಕೊಳ್ಳಲು ಭಾರತದ ಮೇಲೆ ದಾಳಿ ನಡೆಸ್ತೇವೆ: ಅಲ್ ಖೈದಾ

    ನವದೆಹಲಿ: ಗ್ಯಾಂಗ್‍ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ (Atiq Ahmed) ಹಾಗೂ ಆತನ ಸಹೋದರ ಆಶ್ರಫ್ ಹತ್ಯೆಯ ಸೇಡನ್ನು ತೀರಿಸಿಕೊಳ್ಳಲು ಭಾರತದ  (India) ಮೇಲೆ ದಾಳಿ ನಡೆಸುವುದಾಗಿ ಅಲ್ ಖೈದಾ (Al-Qaeda) ಬೆದರಿಕೆ ಹಾಕಿದೆ.

    ಅಲ್ ಖೈದಾ ಉಗ್ರ ಸಂಘಟನೆಯು ಅಸ್-ಸಾಹಬ್ ಬಿಡುಗಡೆ ಮಾಡಿದ 7 ಪುಟಗಳ ನಿಯತಕಾಲಿಕದಲ್ಲಿ ಈ ಸಂದೇಶವನ್ನು ಕಳುಹಿಸಿದೆ. ಈ ವೇಳೆ ಅಲ್‍ಖೈದಾ ಈದ್ ಸಂದೇಶವನ್ನು ಕಳಿಸಿ, ಎಲ್ಲರಿಗೂ ಶುಭಕೋರಿದೆ. ಅಷ್ಟೇ ಅಲ್ಲದೇ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಆಶ್ರಫ್‍ನನ್ನು ಹುತಾತ್ಮರು ಎಂದು ಕರೆದಿದೆ. ಅಷ್ಟೇ ಅಲ್ಲದೇ ಅತೀಕ್‍ನನ್ನು ಪ್ರಶಂಸಿಸಿದೆ. ಇದೇ ವೇಳೆ ಮುಸ್ಲಿಮರಿಗೆ ಸ್ವಂತಂತ್ರವನ್ನು ಕೊಡಿಸುವುದಾಗಿ ಭರವಸೆಯನ್ನು ನೀಡಿದೆ.

    ಅತೀಕ್‍ಗೆ ಹಲವು ಉಗ್ರ ಸಂಘಟನೆ ಹಾಗೂ ಪಾಕ್ ಗುಪ್ತಚರ ಇಲಾಖೆಯ ಜೊತೆಗೆ ನಂಟಿದೆ ಎಂದು ಇತ್ತೀಚೆಗೆ ಕೋರ್ಟ್‍ಗೆ ಸಲ್ಲಿದ್ದ ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು. ಇದನ್ನೂ ಓದಿ: ಅತೀಕ್ ಅಹ್ಮದ್ ಪ್ರಕರಣ – ಐವರು ಪೊಲೀಸರ ಅಮಾನತು

    ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿಗಳಾದ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅವರನ್ನು ಪತ್ರಕರ್ತರ ಸೋಗಿನಲ್ಲಿ ಬಂದು ಏಪ್ರಿಲ್ 16ರಂದು ಪ್ರಯಾಗ್‌ರಾಜ್‍ನಲ್ಲಿ ಗುಂಡು ಹಾರಿಸಿದ್ದರು. ಅತೀಕ್ ಮತ್ತು ಆತನ ಸಹೋದರನನ್ನು ಸಂದರ್ಶಿಸಲು ಬಂದಿದ್ದ ಹಲವು ಪೊಲೀಸ್ ಅಧಿಕಾರಿಗಳು ಮತ್ತು ಮಾಧ್ಯಮದವರ ಸಮ್ಮುಖದಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: ಅತೀಕ್ ಅಹ್ಮದ್ 1,169 ಕೋಟಿ ರೂ. ಒಡೆಯ- ಹುಡುಕಿದಷ್ಟು ಸಿಗುತ್ತಿದೆ ಗ್ಯಾಂಗಸ್ಟರ್‌ನ ಆಸ್ತಿ

  • ಅಲ್‍ಖೈದಾ ಜೊತೆ ಸಂಪರ್ಕದಲ್ಲಿದ್ದ 34 ಜನರ ಬಂಧನ

    ಅಲ್‍ಖೈದಾ ಜೊತೆ ಸಂಪರ್ಕದಲ್ಲಿದ್ದ 34 ಜನರ ಬಂಧನ

    ಗುವಾಹಟಿ: ಅಲ್‍ಖೈದಾ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಅಸ್ಸಾಂನ 34 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸಸ್ವಿಯಾಗಿದ್ದಾರೆ.

    POLICE JEEP

    ಬಂಧನದ ಬಳಿಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಾಂತ, ಅಲ್‍ಖೈದಾ ಉಗ್ರರ ಸಂಪರ್ಕ ಹೊಂದಿರುವ ಆರೋಪದಡಿ 34 ಜನರನ್ನು ಬಂಧಿಸಲಾಗಿದೆ. ಇಂತಹ ಕೃತ್ಯಗಳನ್ನು ರಾಜ್ಯದಲ್ಲಿ ನಡೆಸಲು ಆಸ್ಪದ ಕೊಡುವುದಿಲ್ಲ. ಬಾಂಗ್ಲಾದೇಶದ ಕೆಲ ಕಿಡಿಗೇಡಿಗಳ ತಂಡ ಸ್ಥಳೀಯರಿಗೆ ಉಗ್ರ ಸಂಘಟನೆಯ ಬೆಂಬಲದೊಂದಿಗೆ ಕ್ಯಾಂಪ್ ಒಂದನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದು ದಾಳಿ ನಡೆಸಿದ್ದೇವೆ ಎಂದರು. ಇದನ್ನೂ ಓದಿ: ಶಿವಮೊಗ್ಗ SDPI ಕಚೇರಿ ಮೇಲೆ ಪೊಲೀಸರ ದಾಳಿ – ಮಹತ್ವದ ದಾಖಲೆ ವಶಕ್ಕೆ

    ರಾಜ್ಯದಲ್ಲಿ ಕೆಲವು ಹೊಸ ಗುಂಪುಗಳು ಮೊಳಕೆಯೊಡೆಯುತ್ತಿದ್ದು, ಯುವಕರನ್ನು ಉಗ್ರ ಸಂಘಟನೆಗಳತ್ತ ಸೆಳೆದು ವಿಷಬೀಜ ಬಿತ್ತಿ ದ್ವೇಷ ಭಾವನೆಯನ್ನು ಹರಡುವ ಮೂಲಕ ಯುವಕರ ಲಾಭವನ್ನು ಪಡೆಯುತ್ತಿವೆ. ಅಸ್ಸಾಂನ ಮದರಾಸಗಳಲ್ಲಿ ಹಲವು ಬಗೆಯ ತಂಡಗಳಿವೆ. ಮದರಾಸಗಳಲ್ಲಿ ನೆಲೆಸಿರುವ ಈ ತಂಡಗಳು ಬಾಂಗ್ಲಾದೇಶದ ವಲಸಿಗರಾಗಿದ್ದಾರೆ. ಇವರಿಗೆ ಉಗ್ರರ ಜೊತೆ ಒಡನಾಟವಿದ್ದು, ಅಸ್ಸಾಂನ ಯುವಕರಿಗೆ ಪ್ರಜೋದನೆ ನೀಡಿ ಉಗ್ರ ಸಂಘಟನೆಗಳೊಂದಿಗೆ ಕೈಜೋಡಿಸಿ ದುಷ್ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದರು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪುರುಷರೊಂದಿಗೆ ಸೆಕ್ಸ್ – ವ್ಯಕ್ತಿಗೆ ಒಂದೇ ಬಾರಿಗೆ ಕೊರೊನಾ, ಮಂಕಿಪಾಕ್ಸ್, HIV ಪಾಸಿಟಿವ್‌

    Live Tv
    [brid partner=56869869 player=32851 video=960834 autoplay=true]

  • ಮುಂಬೈ ತಾಜ್ ಹೋಟೆಲ್ ಮಾದರಿಯಲ್ಲೇ ಭೀಕರ ಗುಂಡಿನ ದಾಳಿ – 8 ನಾಗರಿಕರ ಬಲಿ

    ಮುಂಬೈ ತಾಜ್ ಹೋಟೆಲ್ ಮಾದರಿಯಲ್ಲೇ ಭೀಕರ ಗುಂಡಿನ ದಾಳಿ – 8 ನಾಗರಿಕರ ಬಲಿ

    ಮೊಗಾಡಿಶು: ಮುಂಬೈನ ತಾಜ್ ಹೋಟೆಲ್ ಅನ್ನು ಉಗ್ರರು ವಶಕ್ಕೆ ಪಡೆದು ಹತ್ಯಾಕಾಂಡ ನಡೆಸಿದ್ದ ಮಾದರಿಯಲ್ಲೇ ಸೊಮಾಲಿಯಾ ರಾಜಧಾನಿ ಮೊಗಾದಿಶುನಲ್ಲಿ ಗುಂಡಿನ ದಾಳಿ ಹಾಗೂ ಬಾಂಬ್ ಸ್ಫೋಟ ನಡೆದಿದೆ.

    ಅಲ್‌ಖೈದಾ ಜೊತೆಗೆ ನೇರ ಸಂಪರ್ಕ ಹೊಂದಿರುವ ಅಲ್-ಶಬಾಬ್ ಸಂಘಟನೆಯ ಉಗ್ರರು ಹೋಟೆಲ್ ಮೇಲೆ ದಾಳಿ ನಡೆಸಿದ್ದು, 8 ಮಂದಿ ನಾಗಕರಿಕರು ಬಲಿಯಾಗಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: 21 ಯುದ್ಧವಿಮಾನ, 5 ರಕ್ಷಣಾ ಹಡಗುಗಳಿಂದ ತೈವಾನ್ ಸುತ್ತುವರಿದ ಚೀನಾ

    ಅಲ್-ಶಬಾಬ್ ಭಯೋತ್ಪಾದಕ ಗುಂಪಿನ ಉಗ್ರರು ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿ, ಮನಬಂದಂತೆ ಗುಂಡು ಹಾರಿಸಿದ್ದಾರೆ. ಇದರಿಂದ ಹಲವಾರು ಸಾವು-ನೋವುಗಳು ವರದಿಯಾಗಿವೆ. ಹೋಟೆಲ್ ಒಳಗೆ ಸ್ಫೋಟದ ಸದ್ದು ಕೂಡ ಕೇಳಿಬಂದಿದೆ. ದಾಳಿಯಲ್ಲಿ 8 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮಥುರಾ ದೇವಾಲಯದಲ್ಲಿ ಜನದಟ್ಟಣೆ – ಉಸಿರುಗಟ್ಟಿ ಇಬ್ಬರ ಸಾವು

    BOMB BLAST
    ಸಾಂದರ್ಭಿಕ ಚಿತ್ರ

    ಹಯಾತ್ ಹೋಟೆಲ್ ಮೇಲಿನ ದಾಳಿಯು ಭದ್ರತಾ ಪಡೆಗಳು ಮತ್ತು ಜಿಹಾದಿ ಗುಂಪಿನ ಬಂದೂಕುಧಾರಿಗಳ ನಡುವೆ ಭಾರೀ ಗುಂಡಿನ ಚಕಮಕಿ ಉಂಟುಮಾಡಿದೆ. ಉಗ್ರರು ಇನ್ನೂ ಕಟ್ಟಡದೊಳಗೆ ಅಡಗಿಕೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿ ಮೊಹಮ್ಮದ್ ಅಬ್ದಿಕದಿರ್ ಹಸನ್ ತಿಳಿಸಿದ್ದಾರೆ.

    ಈ ವರ್ಷದ ಮೇನಲ್ಲಿ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಅಧಿಕಾರ ವಹಿಸಿಕೊಂಡ ನಂತರ ಸೊಮಾಲಿಯಲ್ಲಿ ನಡೆದ ಮೊದಲ ದಾಳಿ ಇದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗ್ಳೂರಿನ ಶಂಕಿತ ಉಗ್ರರ ಕೇಸ್: ಭಾರತದ ಮೇಲೆ ವಿಧ್ವಂಸಕ ದಾಳಿಗೆ ಅಲ್‌ಖೈದಾದಿಂದ ಟ್ರೈನಿಂಗ್‌

    ಬೆಂಗ್ಳೂರಿನ ಶಂಕಿತ ಉಗ್ರರ ಕೇಸ್: ಭಾರತದ ಮೇಲೆ ವಿಧ್ವಂಸಕ ದಾಳಿಗೆ ಅಲ್‌ಖೈದಾದಿಂದ ಟ್ರೈನಿಂಗ್‌

    ಬೆಂಗಳೂರು: ಸಿಸಿಬಿಯಿಂದ ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಸ್ಫೋಟಕ ಮಾಹಿತಿಗಳು ಬಯಲಾಗಿವೆ.

    ಇತ್ತೀಚೆಗೆಷ್ಟೇ ಬೆಂಗಳೂರಿನಲ್ಲಿ ಅಲ್‌ಖೈದಾ ಉಗ್ರ ಸಂಘಟನೆಗಳ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಈ ಕುರಿತು ತನಿಖೆ ನಡೆಯುತ್ತಿದ್ದ ವೇಳೆ ಶಂಕಿತರು ಸ್ಫೋಟಕ ಮಾಹಿತಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಮಹದಾಯಿ ವಿಷಯದಲ್ಲಿ ಮತ್ತೆ ಗೋವಾ ಕ್ಯಾತೆ – ಕರ್ನಾಟಕದ ವಿರುದ್ಧ ತುರ್ತು ತನಿಖೆಗೆ ಶಾಸಕ ಮನವಿ

    ಶಂಕಿತ ಉಗ್ರನಿಂದ ಸ್ಫೋಟಕ ಮಾಹಿತಿ: 2015ರಲ್ಲಿ ಅಲ್ ಖೈದಾ ತನ್ನ ಅಂತಿಮ ಬ್ಯಾಚ್‌ಗೆ ತರಬೇತಿ ನೀಡಿತ್ತು. ನಂತರ ಅಲ್‌ಖೈದಾ ಹೊಸ ಬ್ಯಾಚ್‌ಗೆ ಟ್ರೈನಿಂಗ್‌ ನೀಡಲು ಹುಟುಕಾಟ ನಡೆಸಿತ್ತು. ಇದೇ ವೇಳೆ ಸಂಘಟನೆಯ ಹೆಡ್ಲರ್‌ಗಳು ಅಖ್ತರ್ ಹುಸೇನ್ ಅನ್ನು ಸಂಪರ್ಕಿಸಿದ್ದರು. ಇವನಿಗೆ ಅಲ್‌ಖೈದಾ ಸಂಘಟನೆಗೆ ಹುಡುಗರನ್ನ ಸೇರಿಸುವಂತೆ ಸೂಚನೆ ನೀಡಿದ್ದರು. ಅದಕ್ಕಾಗಿ ಕಾಶ್ಮೀರದಲ್ಲಿ ಕೋಮು ಗಲಭೆ ನಡೆಸಿ ಅಲ್ಲಿಂದ ಅಫ್ಘಾನಿಸ್ತಾನಕ್ಕೆ ತೆರಳಲು ಪ್ಲಾನ್ ಮಾಡಿದ್ದರು. ಅಫ್ಘಾನಿಸ್ತಾನದಲ್ಲಿ ಉಗ್ರ ಸಂಘಟನೆಗಳಿಂದ ತರಬೇತಿ ಪಡೆಯಲೂ ಯೋಜನೆ ರೂಪಿಸಿದ್ದರು.

    ಉಗ್ರ ಸಂಘಟನೆಗಳಿಂದ ತರಬೇತಿ ಪಡೆದು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಬೆಂಗಳೂರಿನಲ್ಲಿ ಗೇಮ್ ಪ್ಲ್ಯಾನ್ ಮಾಡಿಕೊಂಡಿದ್ದರು. ಇದಕ್ಕಾಗಿ ಅಖ್ತರ್ ಹುಸೇನ್ ಲಸ್ಕರ್ ಹಾಗೂ ಎಂ.ಡಿ ಹುಸೇನ್ ಹೆಸರಿನಲ್ಲಿ ಎರಡು ಫೇಸ್‌ಬುಕ್ ನಕಲಿ ಖಾತೆಗಳನ್ನು ಓಪನ್ ಮಾಡಿದ್ದರು. ಇದನ್ನೂ ಓದಿ: ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ತಾಯಿ

    ಅಖ್ತರ್ ಎಂ.ಡಿ.ಹುಸೇನ್ ಹೆಸರಿನ ಖಾತೆ ಮೂಲಕ ಉಗ್ರ ಸಂಘಟನೆಗೆ ಸಂಬಂಧಿಸಿದಂತೆ ಪ್ರಚೋದನೆ ನೀಡುವ ಪೋಸ್ಟ್ಗಳನ್ನು ಹಾಕುತ್ತಿದ್ದನು. ಜೊತೆಗೆ ಅಲ್‌ಖೈದಾ ಉಗ್ರ ಸಂಘಟನೆಯ ಪ್ರಚೋದನಕಾರಿ ಹೇಳಿಕೆಗಳ ವೀಡಿಯೋ, ಉಗ್ರರ ಫೋಟೋಗಳು ಸೇರಿದಂತೆ ಪ್ರತಿಯೊಂದು ಚಟುವಟಿಕೆಗಳ ವೀಡಿಯೋಗಳನ್ನ ಅಪ್ಲೋಡ್ ಮಾಡುತ್ತಿದ್ದ.

    ಇತ್ತೀಚೆಗೆ ಕಾಶ್ಮೀರದಲ್ಲಿ ಮುಸ್ಲಿಮರ ಮುಂದೆ ರೂಟ್ ಮಾರ್ಚ್ ಮಾಡುವ ಫೋಟೋ ಸಹ ಅಪ್ಲೋಡ್ ಮಾಡಿ ಪ್ರಚೋದನೆ ನೀಡಿದ್ದ. ಈ ವೇಳೆ ಅಲ್ ಖೈದಾ ಹ್ಯಾಂಡ್ಲರ್‌ಗಳ ಸಂಪರ್ಕ ಹೆಚ್ಚಾಗಿದೆ ಎಂದು ಸಿಸಿಬಿ ವಿಚಾರಣೆ ವೇಳೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾನೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಲ್‌ಖೈದಾ ಮುಖ್ಯಸ್ಥನ ಹತ್ಯೆಗೆ ಬಳಸಿದ್ದು ಬ್ಲೇಡ್ ಬಾಂಬ್ – ಇದು ಸ್ಫೋಟಿಸಲ್ಲ, ಛಿದ್ರಿಸುತ್ತೆ!

    ಅಲ್‌ಖೈದಾ ಮುಖ್ಯಸ್ಥನ ಹತ್ಯೆಗೆ ಬಳಸಿದ್ದು ಬ್ಲೇಡ್ ಬಾಂಬ್ – ಇದು ಸ್ಫೋಟಿಸಲ್ಲ, ಛಿದ್ರಿಸುತ್ತೆ!

    ವಾಷಿಂಗ್ಟನ್: ಅಫ್ಘಾನಿಸ್ತಾನದ ಕಾಬೂಲ್‌ನ ತನ್ನ ಮನೆಯ ಬಾಲ್ಕನಿಯಲ್ಲಿ ನಿಂತಿದ್ದ ಝವಾಹಿರಿಯನ್ನು ಕೊಲ್ಲಲು ಅಮೆರಿಕ ಬಳಸಿದ ಕಪಣಿ ಸ್ಫೋಟಿಸಿಲ್ಲ. ಆತನ ಮನೆಯವರಿಗೂ ಯಾವುದೇ ಹಾನಿಯಾಗಿಲ್ಲ. ಏಕೆಂದರೆ ಇದು ಸಾಮಾನ್ಯ ಕ್ಷಿಪಣಿಯಲ್ಲ. ಅಮೆರಿಕದ ಅತ್ಯಂತ ನೆಚ್ಚಿನ, ಸ್ಫೋಟಗೊಳ್ಳದ ಬ್ಲೇಡ್ ಕ್ಷಿಪಣಿ.

    ನೂರಾರು ಜನರ ಮಧ್ಯೆಯಿದ್ದರು, ತನ್ನ ನಿರ್ದಿಷ್ಟ ಗುರಿಯನ್ನು ತಲುಪಿ ಹೊಡೆದು ಛಿದ್ರ ಛಿದ್ರ ಮಾಡುತ್ತದೆ. ಅಕ್ಕ ಪಕ್ಕದಲ್ಲಿರುವವರಿಗೆ ಒಂದಿಷ್ಟು ಹಾನಿ ಮಾಡುವುದಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ:  ಹರೀಶ್ ರಾಜ್ ಸಿನಿಪಯಣಕ್ಕೆ ಬೆಳ್ಳಿಹಬ್ಬದ ಸಂಭ್ರಮ: ಅಭಿಮಾನಿಗಳಿಗೆ ಋಣಿ ಎಂದ ನಟ

    `ಹೆಲ್‌ಫೈರ್ ಆರ್-9 ಎಕ್ಸ್’ ಎಂಬ ಈ ಕ್ಷಿಪಣಿ ಅಣ್ವಸ್ತ್ರ ಸಿಡಿತಲೆಯನ್ನು ಹೊಂದಿಲ್ಲ. 5 ಅಡಿ ಉದ್ದ, 15 ಕೆಜಿ ತೂಕದ ಇದು ತನ್ನ ಒಡಲಿನಲ್ಲಿ ಆರು ರೇಜರ್ ನಂತರ ಬ್ಲೇಡ್‌ಗಳನ್ನು ಹೊಂದಿರುತ್ತದೆ. ತನ್ನ ಗುರಿ ಸಮೀಪಿಸುತ್ತಿದ್ದಂತೆ ಆ ಬ್ಲೇಡ್‌ಗಳು ತೆರೆದುಕೊಂಡು ನಿರ್ದಿಷ್ಟ ವ್ಯಕ್ತಿಯನ್ನ ನಿರ್ದಿಷ್ಟ ಜಾಗದಲ್ಲೇ ಕತ್ತರಿಸಿ ಹಾಕಿಬಿಡುತ್ತವೆ. ಇದನ್ನೂ ಓದಿ: ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಯ್ತು ‘ವಿಜಯಾನಂದ’ ಟ್ರೈಲರ್

    2017ರಲ್ಲಿ ಅಲ್‌ಖೈದಾ ನಾಯಕ ಅಬು ಆಲ್ ಖಯರ್ ಅಲ್ ಮಸ್ತಿಯನ್ನು ಕೊಲ್ಲಲು ಅಮೆರಿಕ ಇದೇ ಕ್ಷಿಪಣಿ ಬಳಸಲಾಗಿತ್ತು. ಸಿರಿಯಾದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಬುವನ್ನು ಗುರಿಯಾಗಿಸಿ, `R9X Hellfire‘ ಉಡಾವಣೆ ಮಾಡಲಾಗಿತ್ತು. ಆ ಕಾರಿನ ಹಿಂಭಾಗ ಹಾಗೂ ಮುಂಭಾಗಕ್ಕೆ ಏನೂ ಆಗಿರಲಿಲ್ಲ. ಆದರೆ ಕಾರಿನ ಚಾವಣಿ, ಒಳಾಂಗಣ, ಕಾರಿನೊಳಗಿದ್ದವರು ಸಂಪೂರ್ಣ ಛಿದ್ರ-ಛಿದ್ರವಾಗಿದ್ದರು. ಈಗ ಈ ಕ್ಷಿಪಣಿಯ ಬಗ್ಗೆ ಭಾರೀ ಚರ್ಚೆಯಾಗಿತ್ತು. ಇದೇ ಕ್ಷಿಪಣಿಯನ್ನು ಅಲ್‌ಖೈದಾ ಮುಖ್ಯಸ್ಥನ ಹತ್ಯೆಗೆ ಬಳಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದ ಉಲ್ಲಂಘಿಸಿದೆ: ಆಂಟನಿ ಬ್ಲಿಂಕೆನ್

    ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದ ಉಲ್ಲಂಘಿಸಿದೆ: ಆಂಟನಿ ಬ್ಲಿಂಕೆನ್

    ವಾಷಿಂಗ್ಟನ್: ಅಲ್‍ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಆಯ್ಮಾನ್ ಅಲ್ ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಕಿಡಿಕಾರಿದ್ದಾರೆ.

    ಅಫ್ಗಾನಿಸ್ತಾನದಲ್ಲಿ ನಡೆದ ಅಮೆರಿಕದ ಡ್ರೋನ್ ದಾಳಿಯಲ್ಲಿ ಆಯ್ಮಾನ್ ಅಲ್ ಝವಾಹಿರಿಯನ್ನು ಹತ್ಯೆ ಮಾಡಲಾಗಿದೆ. ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ ಆಯ್ಮಾನ್ ಅಲ್ ಝವಾಹಿರಿ, ಒಸಾಮಾ ಬಿಲ್ ಲಾಡೆನ್ ನಂತರದಲ್ಲಿ ಅಲ್‍ಖೈದಾ ಮುಖ್ಯಸ್ಥನಾಗಿದ್ದ. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದಿದ್ದ ದಾಳಿಯ ಪ್ರಮುಖ ಶಂಕಿತ ಸಂಚುಕೋರನೂ ಆಗಿದ್ದನು. ಜೊತೆಗೆ ಜಾಗತಿಕ ಭಯೋತ್ಪಾದನಾ ಜಾಲದ ಪ್ರಮುಖ ಆದರ್ಶವಾದಿಯಾಗಿದ್ದ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥ ಝವಾಹಿರಿ ಹತ್ಯೆ- ಮೋಸ್ಟ್ ವಾಂಟೆಡ್ ಉಗ್ರನ ಮೇಲೆ ಡ್ರೋಣ್ ಸ್ಟ್ರೈಕ್‌

    ಈ ಹಿನ್ನೆಲೆ ಆಂಟೋನಿ ಬ್ಲಿಂಕೆನ್ ಅಸಮಾಧಾನ ವ್ಯಕ್ತಪಡಿಸಿದ್ದು, ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದವನ್ನು ‘ತೀವ್ರವಾಗಿ’ ಉಲ್ಲಂಘಿಸಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

    ತಾಲಿಬಾನ್ ಅವರು ತಮ್ಮ ಒಪ್ಪಂದಗಳಿಗೆ ಬದ್ಧವಾಗಿರಲು ಅಸಮರ್ಥವಾಗಿದೆ. ಈ ಹಿನ್ನೆಲೆ ನಾವು ಅಫ್ಘಾನ್ ಜನರನ್ನು ಮಾನವೀಯ ನೆರವಿನೊಂದಿಗೆ ಬೆಂಬಲಿಸುವುದನ್ನು ಮುಂದುವರಿಸುತ್ತೇವೆ. ಅವರ ಮಾನವ ಹಕ್ಕುಗಳ ರಕ್ಷಣೆಗಾಗಿ, ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರ ರಕ್ಷಣೆಗಾಗಿ ಪ್ರತಿಪಾದಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಲಸಿನ ಹಣ್ಣಿಗಾಗಿ ಗಜರಾಜನ ಸರ್ಕಸ್ – ಕೊನೆಗೆ ಏನಾಯ್ತು ನೋಡಿ 

    Live Tv
    [brid partner=56869869 player=32851 video=960834 autoplay=true]

  • ಯಾವುದೇ ಧರ್ಮವೂ ಕೆಲವರ ಮಾತಿನಿಂದ ನಂಬಿಕೆ ಕೆಡಿಸುವಷ್ಟು ದುರ್ಬಲವಲ್ಲ: ಪ್ರಿಯಾಂಕ ಚತುರ್ವೇದಿ

    ಯಾವುದೇ ಧರ್ಮವೂ ಕೆಲವರ ಮಾತಿನಿಂದ ನಂಬಿಕೆ ಕೆಡಿಸುವಷ್ಟು ದುರ್ಬಲವಲ್ಲ: ಪ್ರಿಯಾಂಕ ಚತುರ್ವೇದಿ

    ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಬಿಜೆಪಿ ವಕ್ತಾರೆ ನೀಡಿದ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಶಿವಸೇನಾ ಸಂಸದೆ ಪ್ರಿಯಾಂಕ ಚತುರ್ವೇದಿ, ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳ ಬೆದರಿಕೆಗಳನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು ಎಂದು ಕರೆ ನೀಡಿದ್ದಾರೆ.

    ಧಾರ್ಮಿಕ ಭಾವನೆಗಳ ಮೇಲಿನ ಗೌರವ ಮತ್ತು ಅದರ ಆಧಾರದ ಮೇಲೆ ಬೆದರಿಕೆಯೊಡ್ಡುತ್ತಿರುವುದರ ನಡುವಿನ ವ್ಯತ್ಯಾಸವನ್ನು ಒತ್ತಿಹೇಳಿದ ಚತುರ್ವೇದಿ, ಯಾವುದೇ ಧರ್ಮವು ಕೆಲವೇ ಕೆಲವರ ಮಾತುಗಳಿಂದ ಅವರ ನಂಬಿಕೆ ಕೆಡಿಸುವಷ್ಟು ದುರ್ಬಲವಾಗಿರುವುದಿಲ್ಲ. ಹಾಗಾಗಿ ಅಲ್-ಖೈದಾದಂತಹ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳ ಬೆದರಿಕೆಗಳನ್ನು ಮಧ್ಯಪ್ರಾಚ್ಯ ರಾಷ್ಟ್ರಗಳು ನಿಸ್ಸಂದಿಗ್ಧವಾಗಿ ಖಂಡಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ಒಂದು ಬಗೆ, ಅದರ ಆಧಾರದ ಮೇಲೆಯೇ ಬೆದರಿಕೆಗಳನ್ನು ನೀಡುವುದು ಇನ್ನೊಂದು ಬಗೆ. ಆದರೆ ಕೆಲವರ ಮಾತುಗಳು ಧರ್ಮದ ಮೇಲಿನ ನಂಬಿಕೆಯನ್ನೇ ಕೆಡಿಸಬಹುದು ಎನ್ನುವಷ್ಟು ಯಾವುದೇ ಧರ್ಮವೂ ದುರ್ಬಲವಾಗಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

    ಭಯೋತ್ಪಾದಕ ಸಂಘಟನೆ ಅಲ್-ಖೈದಾ ಗುಜರಾತ್, ಉತ್ತರ ಪ್ರದೇಶ, ಮುಂಬೈ ಮತ್ತು ದೆಹಲಿಯಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಪತ್ರವನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ. ನಮ್ಮ ಪ್ರವಾದಿಯ ಘನತೆಗಾಗಿ ಹೋರಾಡಿ ಎಂದು ಪತ್ರದಲ್ಲಿ ಬರೆದಿದ್ದಾರೆ. ಅಲ್ ಖೈದಾ ಅಂಗಸಂಸ್ಥೆಯು ಕೇಸರಿ ಭಯೋತ್ಪಾದಕರು ಈಗ ದೆಹಲಿ, ಮುಂಬೈ, ಉತ್ತರಪ್ರದೇಶ ಹಾಗೂ ಗುಜರಾತ್‌ನಲ್ಲಿ ತಮ್ಮ ಅಂತ್ಯಕ್ಕಾಗಿ ಕಾಯಬೇಕು ಎಂದೂ ಎಚ್ಚರಿಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪತ್ರವನ್ನು ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರು ಅಪ್‌ಲೋಡ್ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖಾದಳ ಕಾರ್ಯೋನ್ಮುಖವಾಗಿವೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‍ ಕುರಿತು ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅಮಾನತು

    ಈಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ವಿಶ್ವದಾದ್ಯಂತ ಅನೇಕ ಮುಸ್ಲಿಮರ ಹೃದಯಗಳು ರಕ್ತಸಿಕ್ತಗೊಂಡಿದ್ದು, ಪ್ರತಿಕಾರದ ಜ್ವಾಲೆಯಿಂದ ಉರಿಯುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ನಮ್ಮ ಪ್ರವಾದಿಗೆ ಅವಮಾನಿಸಿರುವವರನ್ನು ನಾವು ಕೊಲ್ಲುತ್ತೇವೆ. ಅವರನ್ನು ಸ್ಫೋಟಿಸಲು ನಮ್ಮ ಮಕ್ಕಳ ದೇಹದೊಂದಿಗೆ ಸ್ಫೋಟಕಗಳನ್ನು ಬಂಧಿಸಿಡುತ್ತೇವೆ. ಇದರಲ್ಲಿ ಯಾವುದೇ ಕ್ಷಮಾದಾನವಿಲ್ಲ ಎಂದು ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.

  • ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್‌ಳನ್ನು ಬಂಧಿಸಬೇಕು: ಮುತಾಲಿಕ್

    ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್‌ಳನ್ನು ಬಂಧಿಸಬೇಕು: ಮುತಾಲಿಕ್

    ಬೆಳಗಾವಿ: ಅಲ್‌ಖೈದಾ ಜವಹರಿಗೆ ಭಾರತದಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ. ನಮ್ಮ ದೇಶ ತಾಲಿಬಾನ್ ಅಲ್ಲ. ಕುರಾನ್ ಮೇಲೆ ನಮ್ಮ ದೇಶ ನಡೆಯಲ್ಲ. ಮುಸ್ಕಾನ್ ಹೊಗಳುವ ಅವಶ್ಯಕತೆ ಇಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಮುಸ್ಕಾನ್ ಹೊಗಳಿ ಅಲ್‌ಖೈದಾ ಮುಖ್ಯಸ್ಥ ವೀಡಿಯೋ ಬಿಡುಗಡೆ ಮಾಡಿದ ವಿಚಾರವಾಗಿ, ಸಿದ್ದರಾಮಯ್ಯ ಆರ್‌ಎಸ್‌ಎಸ್ ಮಾಡಿಸಿದ ವೀಡಿಯೋ ಎಂಬ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್, ಅಲ್‌ಖೈದಾ ಜವಹರಿ ಮುಸ್ಕಾನ್ ಹೊಗಳಿದ್ದು ಅತ್ಯಂತ ಖಂಡನೀಯವಾದದ್ದು. ಇದು ಅಷ್ಟು ಹಗುರವಾಗಿ ತೆಗೆದುಕೊಳ್ಳುವ ಹಾಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಗೋಮಾಂಸ ತಿನ್ನುವವರ ಜೊತೆ ಬೇಡ, ಹಿಂದೂಗಳು ಹಿಂದೂ ಡ್ರೈವರ್ ಜೊತೆ ದೇವಾಲಯಕ್ಕೆ ಹೋಗಲಿ: ಭಾರತ್ ರಕ್ಷಣ್ ವೇದಿಕೆ

    ಅಲ್‌ಖೈದಾ ಸಂಘಟನೆಯನ್ನು ನಿಷೇಧ ಮಾಡಲಾಗಿದೆ. ಬ್ಯಾನ್ ಆದ ನಂತರ ಈ ವೀಡಿಯೋ ಎಲ್ಲಿಂದ ಬಂತು? ಹೇಗೆ ಬಂತು? ಕರ್ನಾಟಕದ ಮಂಡ್ಯ ಮೂಲದ ಮುಸ್ಕಾನ್‌ವರೆಗೂ ಹೇಗೆ ಬಂತು ಎನ್ನುವುದನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಂಡು ವಿಚಾರಣೆ ನಡೆಸಬೇಕು. ಮುಸ್ಕಾನ್ ಹಾಗೂ ಆಕೆಯ ತಂದೆಯನ್ನು ಬಂಧಿಸಬೇಕು. ಅವರ ಮನೆಗೆ ಯಾರೆಲ್ಲಾ ಭೇಟಿ ಕೊಟ್ಟಿದ್ದಾರೆ ಎಂಬ ವಿಚಾರಣೆ ನಡೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಭಾಷೆ ಬಳಕೆಯಾಗಬೇಕು: ಅಮಿತ್ ಶಾ

    ಮಹಾರಾಷ್ಟ್ರದ ಮುಸ್ಲಿಂ ಎಂಎಲ್‌ಎ ಬಂದು ಅವರಿಗೆ ಮೊಬೈಲ್ ಕೊಟ್ಟು ಹೋಗಿದ್ದಾರೆ. ಆ ಮೊಬೈಲ್ ಎಲ್ಲಿಂದ ಬಂತು ಎಂಬುದನ್ನು ತಿಳಿಯಬೇಕು. ತಕ್ಷಣ ಅದನ್ನು ಸೀಜ್ ಮಾಡಬೇಕು ಎಂದು ಹೇಳಿದರು.

  • ಪಾಪ ಸಿದ್ದರಾಮಯ್ಯಗೆ ಇತ್ತೀಚೆಗೆ ಏನಾಗ್ತಿದೆಯೋ ಗೊತ್ತಾಗ್ತಿಲ್ಲ: ಸುಧಾಕರ್ ತಿರುಗೇಟು

    ಪಾಪ ಸಿದ್ದರಾಮಯ್ಯಗೆ ಇತ್ತೀಚೆಗೆ ಏನಾಗ್ತಿದೆಯೋ ಗೊತ್ತಾಗ್ತಿಲ್ಲ: ಸುಧಾಕರ್ ತಿರುಗೇಟು

    ಚಿಕ್ಕಬಳ್ಳಾಪುರ: ಪಾಪ ಸಿದ್ದರಾಮಯ್ಯನವರಿಗೆ ಇತ್ತೀಚೆಗೆ ಏನಾಗುತ್ತಿದೆಯೋ ಗೊತ್ತಾಗುತ್ತಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಮಾಜಿ ಸಿಎಂ ಹೇಳಿಕೆಗೆ ತಿರುಗೇಟು ನೀಡಿದರು.

    ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸುಧಾಕರ್, ಆರ್‌ಎಸ್‌ಎಸ್ ಎಂಬುದು ಸ್ವಯಂ ಸೇವಾ ಸಂಸ್ಥೆ. ದೇಶ ಸೇವೆ ಮಾಡುವುದೇ ಅದರ ಕಾಯಕ. ಆರ್‌ಎಸ್‌ಎಸ್ ನಲ್ಲಿರುವವರು ತಮ್ಮ ಬದುಕನ್ನೇ ದೇಶ ಹಾಗೂ ಜನರ ಸೇವೆಗೆ ಮುಡಿಪಾಗಿಟ್ಟಿದ್ದಾರೆ. ಆರ್‌ಎಸ್‌ಎಸ್ ಬಗ್ಗೆ ಅನುಮಾನ ಇರುವವರು ಅವರ ಜೊತೆ ಒಂದು ದಿನ ಇದ್ದು ಬರಲಿ. ಅವರಿಗೆ ಜ್ಞಾನೋದಯ ಆಗುತ್ತದೆ ಎಂದು ಟೀಕಿಸಿದರು. ಇದನ್ನೂ ಓದಿ: ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ, ಇದು ಎಲ್ಲರ ಸರ್ಕಾರ: ಡಾ.ಕೆ ಸುಧಾಕರ್

    ಆರ್‌ಎಸ್‌ಎಸ್ ಟೀಕೆ ಮಾಡುವವರಿಗೆ ಅದರ ಇತಿಹಾಸ, ಚರಿತ್ರೆ ಗೊತ್ತಿಲ್ಲ. ದೀನದಯಾಳ್ ಉಪಾಧ್ಯಯ ಅವರ ಕಥೆಯನ್ನು ಓದಿದರೆ ಅರ್ಥವಾಗುತ್ತದೆ. ಆರ್‌ಎಸ್‌ಎಸ್ ಅನ್ನು ರಾಜಕರಣ ಮಾಡಬೇಡಿ. ಆರ್‌ಎಸ್‌ಎಸ್ ಇರುವುದರ ಬಗ್ಗೆ ಈ ದೇಶದ ಜನರು ಹೆಮ್ಮೆ ಪಡಬೇಕು ಎಂದು ಶ್ಲಾಘಿಸಿದರು.

    ಆರ್‌ಎಸ್‌ಎಸ್ ಸಂಸ್ಥೆಯವರು ಕೋವಿಡ್ ಸಮಯದಲ್ಲಿ ಸಮಾಜಮುಖಿ ಕೆಲಸ ಮಾಡಿದ್ದಾರೆ. ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಾರೆ. ಮನೆ ಮನೆಗೆ ಹೋಗಿ ಆಹಾರ ಸಾಮಗ್ರಿಗಳನ್ನು ನೀಡಿದ್ದಾರೆ. ಆದರೂ ಅವರು ಈ ಬಗ್ಗೆ ಪ್ರಚಾರ ಅಥವಾ ತೋರ್ಪಡಿಸಿಕೊಂಡಿಲ್ಲ ಎಂದರು.

    ಆರ್‌ಎಸ್‌ಎಸ್ ಬಗ್ಗೆ ಅಪಹಾಸ್ಯ, ಟೀಕೆ ಮಾಡಿದರೆ ಅವರವರ ತನವನ್ನು ಅವರು ಕಳೆದುಕೊಳ್ಳುತ್ತಾರೆ. ನಮ್ಮ ಸರ್ಕಾರ ನಾವು ಯಾವ ಧರ್ಮದವರನ್ನೂ ಓಲೈಕೆ ಮಾಡುವುದಿಲ್ಲ. ಯಾವ ಧರ್ಮದವರನ್ನೂ ತಲೆ ಮೇಲೆ ಇಟ್ಟುಕೊಳ್ಳುವುದಿಲ್ಲ. ನಮಗೆ ಎಲ್ಲಾ ಧರ್ಮದವರೂ ಸಮಾನರು. ಈ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಕೂಡ ಸಮಾನವಾಗಿ ಕಾಣುತ್ತೇವೆ. ಅದುವೇ ಭಾರತೀಯ ಜನತಾ ಪಕ್ಷದ ವೈಶಿಷ್ಟ್ಯ ಎಂದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಜನರ ಗಮನ ಕೋಮುಸಂಘರ್ಷದತ್ತ ಸೆಳೆದು ಬೆಲೆ ಏರಿಕೆ ಮಾಡುತ್ತಿದೆ: AAP

    ಈ ವೇಳೆ ಅಲ್‌ಖೈದಾ ವಿಚಾರವಾಗಿ ಮಾತನಾಡಿದ ಸುಧಾಕರ್, ಅಲ್‌ಖೈದಾ ಮುಖ್ಯಸ್ಥನ ಹೇಳಿಕೆ ಬಗ್ಗೆ ಮಾತನಾಡುವುದು ನನ್ನ ಪ್ರಕಾರ ಅಪರಾಧ. ಅಲ್‌ಖೈದಾ ಎಂಬುದು ಅಂತರಾಷ್ಟ್ರೀಯ ಮಟ್ಟದ ಉಗ್ರ ಸಂಘಟನೆ. ಅಂತಹ ಸಂಘಟನೆಯವರ ಹೇಳೀಕೆಯನ್ನು ಇಡೀ ಭಾರತದ ಪ್ರತಿಯೊಬ್ಬ ಪ್ರಜೆ ಕೂಡ ಒಕ್ಕೊರಲಿನಿಂದ ಖಂಡಿಸಬೇಕು ಎಂದರು.

    ಈಗಾಗಲೇ ಅಲ್‌ಖೈದಾ ಸಂಘಟನೆಯನ್ನು ಬಹಿಷ್ಕಾರ ಹಾಕಿದ್ದೇವೆ. ಹೀಗಾಗಿ ಅಲ್‌ಖೈದಾ ಮುಖ್ಯಸ್ಥನ ಹೇಳಿಕೆ ಬಗ್ಗೆ ಮಾತನಾಡುವುದು ಅಪರಾಧ. ಯಾರು ಆತ? ಅಂತರಾಷ್ಟ್ರೀಯ ಮಟ್ಟದ ಉಗ್ರ, ಮುಗ್ದ ಜನರ ಬಲಿ ಭಯೋತ್ಪಾದಕ. ಅಂತಹ ಭಯೋತ್ಪಾದಕ ಸಂಸ್ಥೆ ಹಾಗೂ ಆತನ ಹೇಳಿಕೆ ಬಗ್ಗೆ ಮಾತನಾಡೋದು ಸರಿ ಅಲ್ಲ ಎಂದರು.

  • ಅಲ್‍ಖೈದಾಕ್ಕೆ ಸಮಸವಸ್ತ್ರದ ಮಹತ್ವ ಅರ್ಥವಾಗಲ್ಲ: ಹಿಮಂತ ಬಿಸ್ವಾ

    ಅಲ್‍ಖೈದಾಕ್ಕೆ ಸಮಸವಸ್ತ್ರದ ಮಹತ್ವ ಅರ್ಥವಾಗಲ್ಲ: ಹಿಮಂತ ಬಿಸ್ವಾ

    ಡೆಹ್ರಾಡೂನ್: ಅಲ್‍ಖೈದಾಕ್ಕೆ ಸಮಸವಸ್ತ್ರದ ಮಹತ್ವ ಅರ್ಥವಾಗುವುದಿಲ್ಲ. ಆದರೆ ಭಾರತೀಯ ಮುಸ್ಲಿಮರಿಗೆ ಇದರ ಪ್ರಾಮುಖ್ಯತೆ ಅರ್ಥವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ ಖೈದಾ ಮುಖ್ಯಸ್ಥ ಅಯ್ಮಾನ್ ಅಲ್ ಜವಾಹಿರಿ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಮುಸ್ಲಿಂ ವಿದ್ಯಾರ್ಥಿ ಮುಸ್ಕಾನ್ ಖಾನ್‍ರನ್ನು ಶ್ಲಾಘಿಸಿದ್ದ. ಇದರಿಂದ ಕರ್ನಾಟಕದಲ್ಲಿ ಹಿಜಬ್ ಗಲಾಟೆ ಮತ್ತೆ ಎದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದರು. ಧಾರ್ಮಿಕ ಬಟ್ಟೆಗಳನ್ನು ನಿರ್ಬಂಧಿಸದಿದ್ದರೆ, ಶಿಕ್ಷಣ ಸಂಸ್ಥೆಗಳು ಧಾರ್ಮಿಕ ನಡವಳಿಕೆಯ ಪ್ರದರ್ಶನಕ್ಕೆ ವೇದಿಕೆಯಾಗುತ್ತವೆ ಎಂದರು.

    ನೀವು ಹಿಜಬ್ ಧರಿಸಿದರೆ ನಾನು ಬೇರೆ ಯಾವುದನ್ನಾದರೂ ಧರಿಸುತ್ತೇನೆ ಎನ್ನುತ್ತಾರೆ. ಈ ರೀತಿಯೇ ಶಾಲೆ, ಕಾಲೇಜುಗಳಲ್ಲಿ ನಡೆದರೆ ಧಾರ್ಮಿಕ ಉಡುಪು ಮತ್ತು ಧಾರ್ಮಿಕ ನಡುವಳಿಕೆಯ ಪ್ರದರ್ಶನದ ವೇದಿಕೆಯಾಗುತ್ತದೆ. ಇದರಿಂದ ಶಾಲೆ, ಕಾಲೇಜುಗಳು ಹೇಗೆ ಮುಂದುವರಿಯುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಹಲಾಲ್‌ ಆಯ್ತು ಈಗ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ

    ಈ ಎಲ್ಲಾ ಕಾರಣದಿಂದಾಗಿ ಶಾಲೆ, ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಹಿಂದೂ ಮತ್ತು ಮುಸ್ಲಿಂರ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದರ ಜೊತೆಗೆ ಬಡವ, ಶ್ರೀಮಂತ ಎಂಬ ಮನೋಭಾವವು ಇರುವುದಿಲ್ಲ ಎಂದು ಹೇಳಿದರು.

    ಇದೆಲ್ಲವನ್ನು ಅಲ್ ಖೈದಾ ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ. ಆದರೆ ನಾವು ಸಮವಸ್ತ್ರವನ್ನು ಧರಿಸಬೇಕು ಎಂಬುದನ್ನು ಭಾರತೀಯ ಮುಸ್ಲಿಮರು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನಗೆ ಖಚಿತವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ