Tag: ಅಲೋವೆರಾ

  • ಅಲೋವೇರಾ ಜ್ಯೂಸ್‍ನಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನ

    ಅಲೋವೇರಾ ಜ್ಯೂಸ್‍ನಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನ

    ಅಲೋವೆರಾವನ್ನು ಬಳಸುವುದರಿಂದ ಮತ್ತು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಉತ್ತಮ ಅಂಶಗಳು ದೊರೆಯುತ್ತವೆ. ಆಹಾರ ತಜ್ಞರು, ಸೌಂದರ್ಯ ತಜ್ಞರು ಅಲೋವೆರಾ ಕುರಿತಾಗಿ ಹೆಚ್ಚಾಗಿ ಹೇಳುತ್ತಾರೆ. ಅಲೋವೆರಾ ಅಂಶವುಳ್ಳ ಎಷ್ಟೊಂದು ಪ್ರಾಡೆಕ್ಟ್‍ಗಳು ನಮಗೆ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ನಾವೇ ಮನೆಯಲ್ಲಿ ಅಲೋವೆರಾ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.

    * ದಿನಕ್ಕೆ ಒಂದು ಗ್ಲಾಸ್ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಅಲೋವೆರಾ ಜ್ಯೂಸ್‍ನಲ್ಲಿರುವ ಪೌಷ್ಠಿಕಾಂಶಗಳು ದೇಹದಲ್ಲಿರುವ ಬೊಜ್ಜನ್ನು ಕಡಿಮೆ ಮಾಡಲು ನೆರವಾಗುತ್ತದೆ.

    * ಮಿನರಲ್ಸ್, ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಮತ್ತು ಇತರ ಕೆಲವೊಂದು ಪೌಷ್ಠಿಕಾಂಶಗಳನ್ನು ಅಲೋವೆರಾ ಒಳಗೊಂಡಿದೆ. ಈ ಎಲ್ಲಾ ಅಂಶಗಳು ದೇಹವನ್ನು ಶುದ್ಧವಾಗಿಡಲು ಸಹಾಯಕಾರಿಯಾಗಿದೆ.

    * ಅಲೋವೆರಾ ಬಳಕೆಯನ್ನು ಮಾಡುವುದರಿಂದ ಚರ್ಮದ ಜೀವಕೋಶಗಳು ಮತ್ತು ಕೂದಲಿನ ಆರೋಗ್ಯವು ಉತ್ತಮವಾಗಿರುತ್ತದೆ.

    * ಅಲೋವೆರಾವನ್ನು ಮನೆಯಲ್ಲಿ ಜ್ಯೂಸ್ ಮಾಡಿ ಸೇವಿಸುವುದರಿಂದ ಹಲ್ಲನ್ನು ಶುದ್ಧವಾಗಿಟ್ಟುಕೊಳ್ಳಬಹುದಾಗಿದೆ. ಬಾಯಿಯಲ್ಲಿರುವ ದುರ್ವಾಸನೆಯನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ.

    * ಕ್ಯಾನ್ಸರ್, ಕೊಲೆಸ್ಟ್ರಾಲ್, ಮಧುಮೇಹ, ಉರಿಯೂತ ಹಾಗೂ ಮೂತ್ರಪಿಂಡದಲ್ಲಿ ಕಲ್ಲು ಆಗುವುದನ್ನು ಹೊಗಲಾಡಿಸಲು ಮನೆ ಮದ್ದಾಗಿ ಅಲೋವೆರಾ ಜ್ಯೂಸ್ ಮಾಡಿ ಕುಡಿಯಬಹುದಾಗಿದೆ.

    * ನಿಯಮಿತವಾಗಿ ಅಲೋವೆರಾ ಜ್ಯೂಸ್ ಕುಡಿಯುತ್ತಾ ಬಂದಿದ್ದರೆ ಅಧಿಕವಾದ ರಕ್ತದೊತ್ತಡ ಹಾಗೂ ರಕ್ತವನ್ನು ಶುದ್ಧವಾಗಿಟ್ಟುಕೊಳ್ಳ ಬಹುದಾಗಿದೆ.

    ಅಲೋವೆರಾ ಜ್ಯೂಸ್ ತಯಾರಿಸುವ ವಿಧಾನ: ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ತಾಜಾ ಅಲೋವೆರಾ ಜೆಲ್ ಸೇರಿಸಿ. ಬಾಣಲೆಯಲ್ಲಿ ನೀರನ್ನು ಹಾಕಿ ಬಿಸಿ ಮಾಡಿ ಮತ್ತು ಜೆಲ್ ನೀರಿನೊಂದಿಗೆ ಬೆರೆಯುವವರೆಗೆ ನಿರಂತರವಾಗಿ ತಿರುವುತ್ತಿರಿ. ನೀವು ಈ ಅಲೋವೆರಾ ನೀರಿನ ಮಿಶ್ರಣಕ್ಕೆ ಬೇಕಾದರೆ ಸ್ವಲ್ಪ ನಿಂಬೆ ಸೇರಿಸಿದರೆ ಅಲೋವೆರಾ ಜ್ಯೂಸ್ ಸಿದ್ಧವಾಗುತ್ತದೆ.

  • ಲೈವ್ ನಲ್ಲಿ ಹೆಲ್ತ್ ಟಿಪ್ಸ್ ನೀಡ್ತಾ ಅಲೋವೆರಾ ಎಂದು ಬೇರೇನನ್ನೋ ತಿಂದು ಅಸ್ವಸ್ಥಳಾದ್ಲು!

    ಲೈವ್ ನಲ್ಲಿ ಹೆಲ್ತ್ ಟಿಪ್ಸ್ ನೀಡ್ತಾ ಅಲೋವೆರಾ ಎಂದು ಬೇರೇನನ್ನೋ ತಿಂದು ಅಸ್ವಸ್ಥಳಾದ್ಲು!

    ಬೀಜಿಂಗ್: ಇತ್ತೀಚಿನ ದಿನಗಳಲ್ಲಿ ವಿವಿಧ ಬ್ಲಾಗರ್‍ಗಳು ತಮ್ಮ ಫಾಲೋವರ್ಸ್‍ಗಳಿಗಾಗಿ ಮೇಕಪ್, ಫ್ಯಾಶನ್, ಅಡುಗೆ ಮುಂತಾದವುಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ, ಯೂಟ್ಯೂಬ್‍ಗಳಲ್ಲಿ ಹರಿಯಬಿಡುವುದು ಸಾಮಾನ್ಯ.

    ಅಂತೆಯೇ ಚೀನಾದ ಹೆಲ್ತ್ ವ್ಲಾಗರ್(ವಿಡಿಯೋ ಬ್ಲಾಗರ್)ವೊಬ್ಬರು ಲೈವ್ ನಲ್ಲಿ ಹೆಲ್ತ್ ಟಿಪ್ಸ್ ಗಳನ್ನು ನೀಡುತ್ತಾ ಅಲೋವೆರಾ ಅಂತಾ ಅದನ್ನೇ ಹೋಲುವ ಅಗೇವ್ ಎಂಬ ಗಿಡವನ್ನು ತಿಂದು ಅಸ್ವಸ್ಥರಾದ ಬಗ್ಗೆ ವರದಿಯಾಗಿದೆ. ಚೀನಾ ಮೂಲದ ಝಾಂಗ್ ಎಂಬಾಕೆ ವಿಷಕಾರಿ ಸಸ್ಯವೊಂದನ್ನು ತಿಂದು ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಏನಿದು ಘಟನೆ?: ಝಾಂಗ್ ತನ್ನ ಫೋಲೋವರ್ಸ್‍ಗಳಿಗೆ ಲೈವ್ ಸ್ಟ್ರೀಮ್‍ನಲ್ಲಿ ಅಲೋವೆರಾದಿಂದ ಆರೋಗ್ಯಕ್ಕೆ ಇರುವ ಲಾಭಗಳ ಬಗ್ಗೆ ಹೇಳುತ್ತಿದ್ದರು. ಅಲೋವೆರಾ ತಿಂದರೆ ಏನು ಪ್ರಯೋಜನ ಎಂಬುವುದರ ಬಗ್ಗೆ ಸವಿವರವಾಗಿ ಹೇಳುತ್ತಾ ಅಲೋವೆರಾ ಅಂತಾ ತಿಳಿದು ಅದನ್ನೇ ಹೋಲುವ ಬೇರೊಂದು ಗಿಡವನ್ನು ತಿಂದಿದ್ದಾರೆ. ಮೊದಲು ತಿಂದಾಗ ಅವರು ಆಹಾ…. ಇದು ತುಂಬಾ ಚೆನ್ನಾಗಿದೆ ಎಂದಿದ್ದಾರೆ. ಆದ್ರೆ ಸ್ವಲ್ಪ ಸಮಯದಲ್ಲೇ ಇದು ಕಹಿಯಾಗಿದೆ ಎಂದು ಹೇಳಿದ್ದು, ಆಕೆಯ ಗಂಟಲಿನಲ್ಲಿ ಏನೋ ಸಮಸ್ಯೆ ಆಗ್ತಿದೆ ಅಂತಾ ಮನದಟ್ಟಾಗಿದೆ. ಬಾಯಿ ಮರಗಟ್ಟಿದಂತಾಗಿದ್ದು, ಗಂಟಲಿನಲ್ಲಿ ಉರಿತ ಉಂಟಾಗಿದೆ.

    ತಕ್ಷಣವೇ ಝಾಂಗ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ಆಕೆ ತುಂಬಾ ಅಪಾಯಕಾರಿ ಸಸ್ಯವನ್ನು ತಿಂದಿದ್ದಾರೆ ಎಂದು ಆಸ್ಪತ್ರೆಯವರು ದೃಢಪಡಿಸಿರುವುದಾಗಿ ವರದಿಯಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.

    ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಕಾರ ಅಗೇವ್ ಸಸ್ಯದಲ್ಲಿ ಕ್ಯಾಲ್ಶಿಯಂ ಆಕ್ಸಿಲೇಟ್ ರಾಫೈಡ್ಸ್ ಹಾಗೂ ಇನ್ನೂ ಕೆಲವು ಕಿರಿಕಿರಿ ಉಂಟು ಮಾಡುವ ತೈಲಗಳು ಇರುತ್ತವೆ ಎನ್ನಲಾಗಿದೆ.