Tag: ಅಲೋಪತಿ

  • ನಿಯಮ ಉಲ್ಲಂಘನೆ ಮಾಡುವ ಕೆಮ್ಮಿನ ಸಿರಪ್ ಕಂಪನಿಗಳ ಮೇಲೆ `ಮಹಾ’ಅಸ್ತ್ರ

    ನಿಯಮ ಉಲ್ಲಂಘನೆ ಮಾಡುವ ಕೆಮ್ಮಿನ ಸಿರಪ್ ಕಂಪನಿಗಳ ಮೇಲೆ `ಮಹಾ’ಅಸ್ತ್ರ

    ಮುಂಬೈ: ನಿಯಮ ಉಲ್ಲಂಘನೆ ಮಾಡಿರುವ ಆರು ಕೆಮ್ಮಿನ ಸಿರಪ್ (Cough Syrup) ತಯಾರಕ ಕಂಪನಿಗಳ ಪರವಾನಗಿ ಅಮಾನತುಗೊಳಿಸಲಾಗಿದೆ ಎಂದು ಮಹಾರಾಷ್ಟ್ರ (Maharashtra) ಸರ್ಕಾರ ವಿಧಾನಸಭೆಯಲ್ಲಿ ಘೋಷಿಸಿದೆ.

    ಬಿಜೆಪಿ ಶಾಸಕ ಆಶಿಕ್ ಶೇಲಾರ್ ಹಾಗೂ ಇತರರ ನೊಟೀಸ್‍ಗೆ ಉತ್ತರಿಸಿದ ಆಹಾರ ಮತ್ತು ಔಷಧ ಆಡಳಿತ (Food and Drugs Administration Minister) ಸಚಿವ ಸಂಜಯ್ ರಾಥೋಡ್ (Sanjay Rathod) ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ನೋಯ್ಡಾ ಮೂಲದ ಸಂಸ್ಥೆ ತಯಾರಿಸಿದ್ದ ಕೆಮ್ಮಿನ ಸಿರಪ್‍ನಿಂದ ಕಳೆದ ವರ್ಷ ಉಜ್ಬೇಕಿಸ್ತಾನದ (Uzbekistan) 18 ಮಕ್ಕಳು ಸಾವಿಗೀಡಾಗಿದ್ದರು. ಈ ಪ್ರಕರಣದಲ್ಲಿ ಮೂರು ಸಿಬ್ಬಂದಿಯನ್ನು ಬಂಧಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮಾಡಾಳ್ ಕುಟುಂಬದಿಂದ ಖತರ್ನಾಕ್ ಪ್ಲಾನ್- ಲೋಕಾಯುಕ್ತ ಬರುತ್ತೆ ಅಂತ ಸಿಸಿಟಿವಿ ಆಫ್!

    ಸರ್ಕಾರವು 1ಂ8 ಕೆಮ್ಮಿನ ಸಿರಪ್ ತಯಾರಿಕಾ ಕಂಪನಿಗಳಲ್ಲಿ 84 ಕಂಪನಿಗಳ ತನಿಖೆ ಆರಂಭಿಸಿದೆ. ನಿಯಮ ಉಲ್ಲಂಘಿಸಿರುವ 17 ಸಂಸ್ಥೆಗಳಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ ಎಂದಿದ್ದಾರೆ.

    ಭಾರತದಿಂದ ರಫ್ತಾಗಿದ್ದ ಕೆಮ್ಮಿನ ಸಿರಪ್‍ನಿಂದಾಗಿ ಗ್ಯಾಂಬಿಯಾದ (Gambia) 66 ಮಕ್ಕಳು ಮೃತಪಟ್ಟಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಕಂಪನಿ ಹರಿಯಾಣ ಮೂಲದ್ದಾಗಿದ್ದು ರಾಜ್ಯದಲ್ಲಿ ಯಾವುದೇ ಉತ್ಪಾದನಾ ಘಟಕ ಹೊಂದಿಲ್ಲ ಎಂದಿದ್ದಾರೆ.

    ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಬೇರೆ ರಾಜ್ಯಗಳಿಗೆ ಔಷಧಗಳನ್ನು ರಫ್ತು ಮಾಡುವಾಗ ವಿಶ್ವ ಆರೋಗ್ಯ ಸಂಸ್ಥೆಯ ಜಿಎಂಪಿ ನಿಯಮವನ್ನು ಅನುಸರಿಸುತ್ತಿದ್ದೇವೆ. ರಾಜ್ಯದ 996 ಅಲೋಪತಿ ಔಷಧ ತಯಾರಿಕ ಘಟಕದಿಂದ 514 ಉತ್ಪನ್ನಗಳು ರಫ್ತಾಗುತ್ತಿವೆ ಎಂದು ಹೇಳಿದ್ದಾರೆ.

    20% ಕಂಪನಿಗಳು ಸಿರಪ್ ತಯಾರಿಕಾ ನಿಯಮ ಉಲ್ಲಂಘಿಸಿ ದಾಳಿಗಳನ್ನು ಎದುರಿಸುತ್ತಿವೆ. ಜನರ ಜೀವದ ಜೊತೆ ಚೆಲ್ಲಾಟ ಆಡುವವರನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಎಂದು ಶಾಸಕ ಸಂಜಯ್ ಶಿರ್ಸತ್ (Sanjay Shirsat) ಹೇಳಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಹಿಂದೂ ದೇವಾಲಯದಲ್ಲಿ ಮತ್ತೆ ಮೋದಿ ವಿರೋಧಿ ಬರಹ – 2 ತಿಂಗಳಲ್ಲಿ 4ನೇ ಘಟನೆ

  • ಬಾಬಾ ರಾಮ್‍ದೇವ್ ಬಹಿರಂಗ ಚರ್ಚೆಗೆ ಬರಲಿ- ಐಎಂಎ ಸವಾಲು

    ಬಾಬಾ ರಾಮ್‍ದೇವ್ ಬಹಿರಂಗ ಚರ್ಚೆಗೆ ಬರಲಿ- ಐಎಂಎ ಸವಾಲು

    – ದಿನ ಅವರು ನಿಗದಿಪಡಿಸಲಿ, ಸ್ಥಳ ನಾವು ಹುಡುಕುತ್ತೇವೆ

    ಡೆಹ್ರಾಡೂನ್: ಯೋಗ ಗುರು ಬಾಬಾ ರಾಮ್‍ದೇವ್ ಬಹಿರಂಗ ಚರ್ಚೆಗೆ ಆಗಮಿಸಲಿ ಎಂದು ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ)ಯ ಉತ್ತರಾಖಂಡ್ ವಿಭಾಗ ಆಹ್ವಾನಿಸಿದೆ.

    ಅಲೋಪತಿ ಹಾಗೂ ವೈಜ್ಞಾನಿಕ ವೈದ್ಯಕೀಯ ಪದ್ಧತಿ ವಿರುದ್ಧ ಬಾಬಾ ರಾಮ್‍ದೇವ್ ಹೇಳಿಕೆ ನೀಡಿದ್ದರು. ಬಳಿಕ ಅವರ ಮಾತನ್ನು ಹಿಂಪಡೆದಿದ್ದರು. ಆದರೆ ಸುಮ್ಮನಾಗದ ಐಎಂಎ, ಬಾಬಾ ರಾಮ್‍ದೇವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಲಿಖಿತ ರೂಪದಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿತ್ತು. ಇದೀಗ ಬಹಿರಂಗ ಚರ್ಚೆಗೆ ಆಗಮಿಸುವಂತೆ ರಾಮ್‍ದೇವ್ ಅವರನ್ನು ಆಹ್ವಾನಿಸಿದೆ. ಇದನ್ನೂ ಓದಿ: ಬಾಬಾ ರಾಮ್‍ದೇವ್ ಅವರಿಗೆ 1000 ಕೋಟಿ ರೂ. ಮಾನನಷ್ಟ ನೋಟಿಸ್ ನೀಡಿದ ಐಎಂಎ

    ಬಾಬಾ ರಾಮ್‍ದೇವ್ ಅವರಿಗೆ ಬಹಿರಂಗ ಪತ್ರ ಬರೆದಿರುವ ಉತ್ತರಾಖಂಡ್‍ನ ವಿಭಾಗದ ಐಎಂಎ ಅಧ್ಯಕ್ಷ ಡಾ.ಅಜಯ್ ಖನ್ನಾ, ಯೋಗಗುರುವಿನ ಹೇಳಿಕೆ ಉದ್ಧಟತನ, ಬೇಜವಾಬ್ದಾರಿ ಹಾಗೂ ಸ್ವಾರ್ಥದಿಂದ ಕೂಡಿದೆ. ಹೀಗಾಗಿ ಮಾಧ್ಯಮ ಮಿತ್ರರ ಸಮ್ಮುಖದಲ್ಲಿ ಐಎಂಎ ಹಾಗೂ ಯೋಗಪೀಠದ ನಡುವೆ ಬಹಿರಂಗ ಚರ್ಚೆ ನಡೆಯಲಿ ಎಂದು ಪತ್ರದಲ್ಲಿ ತಿಳಿಸಲಾಗಿದೆ.

    ಆರೋಗ್ಯಕರ ಚರ್ಚೆಯ ದಿನಾಂಕ ಹಾಗೂ ಸಮಯವನ್ನು ನೀವೇ ನಿರ್ಧರಿಸಿ, ಚರ್ಚೆಯ ಸ್ಥಳವನ್ನು ನಾವು ನಿರ್ಧರಿಸುತ್ತೇವೆ. ಬಾಬಾ ರಾಮ್‍ದೇವ್ ಅವರ ಹೇಳಿಕೆಯಿಂದಾಗಿ ಅಲೋಪತಿ ಹಾಗೂ ಆಯುರ್ವೇದದ ನಡುವಿನ ಸಾಮರಸ್ಯಕ್ಕೆ ಧಕ್ಕೆಯಾಗಿದೆ. ಇದನ್ನು ಮರುಸ್ಥಾಪಿಸುವ ಉದ್ದೇಶದಿಂದ ಬಹಿರಂಗ ಚರ್ಚೆ ನಡೆಯಬೇಕಿದೆ ಎಂದು ಐಎಂಎ ಹೇಳಿದೆ. ಅಲ್ಲದೆ ಪತಂಜಲಿ ಔಷಧಿಯನ್ನು ಆಸ್ಪತ್ರೆಗಳಲ್ಲಿ ಬಳಸಿದ್ದೇವೆ ಎಂಬುದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಸಹ ಮತ್ತೊಂದು ಪತ್ರದಲ್ಲಿ ಕೋರಲಾಗಿದೆ.

  • ಬಾಬಾ ರಾಮ್‍ದೇವ್ ಅವರಿಗೆ 1000 ಕೋಟಿ ರೂ. ಮಾನನಷ್ಟ ನೋಟಿಸ್ ನೀಡಿದ ಐಎಂಎ

    ಬಾಬಾ ರಾಮ್‍ದೇವ್ ಅವರಿಗೆ 1000 ಕೋಟಿ ರೂ. ಮಾನನಷ್ಟ ನೋಟಿಸ್ ನೀಡಿದ ಐಎಂಎ

    ನವದೆಹಲಿ: ಅಲೋಪತಿ ಔಷಧಿ ಕುರಿತು ಯೋಗ ಗುರು ಬಾಬಾ ರಾಮ್‍ದೇವ್ ನೀಡಿದ ಹೇಳಿಕೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಉತ್ತರಾಖಂಡ್ ವಿಭಾಗ ಬರೋಬ್ಬರಿ 1000 ಕೋಟಿ ರೂ. ಮಾನನಷ್ಟ ನೋಟಿಸ್ ನೀಡಿದೆ.

    ಬಾಬಾ ರಾಮ್‍ದೇವ್ ಅವರು ತಮ್ಮ ಹೇಳಿಕೆ ಕುರಿತು ವೀಡಿಯೋ ಪೋಸ್ಟ್ ಮಾಡಬೇಕು ಹಾಗೂ 15 ದಿನಗಳೊಳಗೆ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಬೇಕು.  ಇಲ್ಲವಾದಲ್ಲಿ 1000 ಕೋಟಿ ರೂ.ಗಳನ್ನು ಬೇಡಿಕೆ ಇಡುತ್ತೇವೆ ಎಂದು ಐಎಂಎ ನೋಟಿಸ್‍ನಲ್ಲಿ ಬರೆಯಲಾಗಿದೆ. ಅಲ್ಲದೆ ಐಎಂಎ ಪರವಾಗಿ ರಾಮ್‍ದೇವ್ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಲಾಗಿದೆ ಎಂದು ಉತ್ತರಾಖಂಡ್ ವಿಭಾಗದ ಅಧ್ಯಕ್ಷ ಡಾ.ಅಜಯ್ ಖನ್ನಾ ಹೇಳಿದ್ದಾರೆ.

    ಸೋಮವಾರ ಐಎಂಎನ ಉತ್ತರಾಖಂಡ್ ವಿಭಾಗ ಬಾಬಾ ರಾಮ್‍ದೇವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತಿರಾಥ್ ಸಿಂಗ್ ಹಾಗೂ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಬಾಬಾ ರಾಮ್‍ದೇವ್ ಹೇಳಿಕೆಯ ಕುರಿತು ಐಎಂಎ ವೈದ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

    ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರ ಪತ್ರದ ಬಳಿಕ ಬಾಬಾ ರಾಮ್‍ದೇವ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಸೋಮವಾರ ಐಎಂಎಗೆ 25 ಪ್ರಶ್ನೆಗಳನ್ನು ಕೇಳಿದ್ದ ಅವರು, ಅಧಿಕ ರಕ್ತದೊತ್ತಡ(ಬಿಪಿ) ಹಾಗೂ ಟೈಪ್-1, ಟೈಪ್-2 ಮಧುಮೇಹ ಸೇರಿದಂತೆ ಮುಂತಾದ ಖಾಯಿಲೆಗಳಿಗೆ ಅಲೋಪತಿ ಶಾಶ್ವತ ಪರಿಹಾರ ನೀಡುತ್ತದೆಯೇ ಎಂದು ಅವರು ಪ್ರಶ್ನಿಸಿದ್ದರು. ಅಲ್ಲದೆ ಥೈರಾಯ್ಡ್, ಸಂಧಿವಾತ, ಕೊಲೈಟಿಸ್ ಹಾಗೂ ಅಸ್ತಮಾಗೆ ಫಾರ್ಮಾ ಉದ್ಯಮದಲ್ಲಿ ಶಾಶ್ವತ ಚಿಕಿತ್ಸೆ ಇದೆಯೇ ಎಂದಿದ್ದರು.

    ಟಿಬಿ ಹಾಗೂ ಚಿಕನ್‍ಪಾಕ್ಸ್ ಗೆ ನೀವು ಪರಿಹಾರ ಕಂಡುಕೊಂಡಂತೆ, ಲಿವರ್‍ಗೆ ಸಂಬಂಧಿಸಿದ ಖಾಯಿಲೆಗಳಿತ್ತ ಸಹ ಗಮನ ಹರಿಸಿ ಎಂದಿದ್ದರು. ಇದೆಲ್ಲದರ ಬಳಿಕ ಅಲೋಪತಿಗೆ ಈಗ 200 ವರ್ಷಗಳು. ಅಲ್ಲದೆ ಅಲೋಪತಿ ಸರ್ವಶಕ್ತ ಮತ್ತು ‘ಸರ್ವಗುಣ ಸಂಪನ್ನ’ ಎನ್ನುವುದಾದರೆ ವೈದ್ಯರು ಅನಾರೋಗ್ಯಕ್ಕೆ ಒಳಗಾಗಬಾರದು ಎಂದು ಯೋಗ ಗುರು ಹೇಳಿದ್ದರು.

    ಯೋಗ ಗುರು ಬಾಬಾ ರಾಮ್‍ದೇವ್ ಅವರು ಅಲೋಪಥಿಕ್ ಔಷಧದ ವಿರುದ್ಧದ ಹೇಳಿಕೆಗಳನ್ನು ಹಿಂಪಡೆದಿದ್ದಾರೆ. ಈ ವಿಷಯದ ವಿವಾದವನ್ನು ನಿಲ್ಲಿಸಿದ ರೀತಿ ಶ್ಲಾಘನೀಯ ಮತ್ತು ಅವರ ಪ್ರಬುದ್ಧತೆಯನ್ನು ತೋರಿಸುತ್ತದೆ. ಭಾರತದ ಜನ ಕೋವಿಡ್-19 ಹೇಗೆ ಎದುರಿಸಿದ್ದಾರೆ ಎಂಬುದನ್ನು ನಾವು ಜಗತ್ತಿಗೆ ತೋರಿಸಬೇಕಿದೆ. ಖಂಡಿತ ನಮ್ಮ ಗೆಲುವು ನಿಶ್ಚಿತ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

  • ಅಲೋಪತಿ ಚಿಕಿತ್ಸೆ ನೀಡಿ ಯುವಕನ ಜೀವಕ್ಕೆ ಕುತ್ತು ತಂದ ಹೋಮಿಯೋಪತಿ ವೈದ್ಯ!

    ಅಲೋಪತಿ ಚಿಕಿತ್ಸೆ ನೀಡಿ ಯುವಕನ ಜೀವಕ್ಕೆ ಕುತ್ತು ತಂದ ಹೋಮಿಯೋಪತಿ ವೈದ್ಯ!

    ಬೆಳಗಾವಿ: ಜ್ವರ ಬಂದಿದೆ ಎಂದು ವ್ಯಕ್ತಿಯೊಬ್ಬರು ಯಾರದ್ದೋ ಮಾತು ಕೇಳಿ ಡಾಕ್ಟರ್ ಹತ್ತಿರ ಹೋದರು. ಆದರೆ ಆ ಡಾಕ್ಟರ್ ಮಹಾಶಯ ಬೇಕಾಬಿಟ್ಟಿ ಇಂಜೆಕ್ಷನ್ ಕೊಟ್ಟು ವ್ಯಕ್ತಿಯ ಬದುಕಿಗೇ ಕುತ್ತು ತಂದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ರಸ್ತೆಯಿಂದ ಕುಂಟುತ್ತಾ ಇಳಿಯುತ್ತಿರುವ ಯುವಕನಿಗೆ ಇದೀಗ ಆಸ್ಪತ್ರೆಯ ಬೆಡ್‍ ನಲ್ಲಿ ಯಾರಿಗೂ ಬೇಡವಾದ ನರಳಾಟ. ಈ ಅಮಾಯಕನ ಶೋಚನಿಯ ಸ್ಥಿತಿಗೆ ಕಾರಣ ಗುರುನಾಥ್ ಪಾಟೀಲ್ ಅನೆನ್ನೋ ಹೋಮಿಯೋಪತಿ ಡಾಕ್ಟರ್ ಮಾಡಿರುವ ಮಹಾ ಎಡವಟ್ಟು.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಗೋಟೂರಿನ ನಿವಾಸಿ ಶಂಕರ್. ಕಳೆದ ತಿಂಗಳು ಸಣ್ಣ ಮಟ್ಟಿಗೆ ಜ್ವರ ಬಂದಿತ್ತು. ಆಗ ಸೀದಾ ಹೋಗಿದ್ದು ಈ ಹೋಮಿಯೋಪತಿ ವೈದ್ಯ ಗುರುನಾಥ್ ಬಳಿಗೆ. ಚೆಕ್ ಮಾಡಿದ ಡಾಕ್ಟರ್ ಭರ್ಜರಿಯಾಗಿ ಎರಡು ಇಂಜೆಕ್ಷನ್ ಚುಚ್ಚಿದ್ದರು. ಔಷಧಿ ಕೊಟ್ಟು ಇದನ್ನು ನುಂಗು, ನೀನು ನೂರಕ್ಕೆ ನೂರು ಸರಿ ಹೋಗ್ತಿಯಾ ಎಂದು ಮನೆಗೆ ಕಳಸಿಕೊಟ್ಟರು.

    ಡಾಕ್ಟರ್ ಗುರುನಾಥ್ ಅದ್ಯಾವ ನರದ ಮೇಲೆ ಸೂಜಿ ಚುಚ್ಚಿದರೋ ಗೊತ್ತಿಲ್ಲ ಚುಚ್ಚಿದ ಜಾಗದಲ್ಲಿ ಕೀವಾಗಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ. ಅಸಲಿಗೆ ಹೋಮಿಯೋಪತಿ ವೈದ್ಯರಾಗಿರೋ ಗುರುನಾಥ್ ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ಕರ್ನಾಟಕ ಖಾಸಗಿ ವೈದ್ಯಕೀಯ ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಸದ್ಯ ಈ ಕೇಸ್ ಸಂಕೇಶ್ವರ ಪೊಲೀಸರ ಕೈಯಲ್ಲಿದ್ದು, ನ್ಯಾಯ ಕೊಡಿಸಬೇಕಿದೆ.