Tag: ಅಲೆಮಾರಿ ಜನಾಂಗ

  • ಗುಡಿಸಲಿನಲ್ಲಿ ಮಲಗಿದ್ದ ಬಾಲಕಿಗೆ  ಹಾವು ಕಚ್ಚಿ ಸಾವು

    ಗುಡಿಸಲಿನಲ್ಲಿ ಮಲಗಿದ್ದ ಬಾಲಕಿಗೆ ಹಾವು ಕಚ್ಚಿ ಸಾವು

    ಹಾವೇರಿ: ಹಾವು ಕಡಿದು ಅಲೆಮಾರಿ ಜನಾಂಗದ ಐದು ವರ್ಷದ ಬಾಲಕಿ ಮೃತಪಟ್ಟ ಘಟನೆ ಹಾವೇರಿಯ ನಾಗೇಂದ್ರಮಟ್ಟಿಯ ಹೊರವಲಯದಲ್ಲಿರೋ ಟೆಂಟ್ ನಲ್ಲಿ ನಡೆದಿದೆ.

    ಒಲಿವ್ವ ಸುಂಕಣ್ಣ ಮೋತಿ (5) ಮೃತ ಬಾಲಕಿ. ಗುಡಿಸಲಿನಲ್ಲಿ ಮಲಗಿದ್ದ ಒಲಿವ್ವ ಸುಂಕಣ್ಣ ಮೋತಿಗೆ ಭಾನುವಾರ ಬೆಳಿಗ್ಗೆ 3 ಗಂಟೆ ಸುಮಾರಿಗೆ ವಿಷಪೂರಿತ ಹಾವು ಕಡಿದಿದೆ. ಹಾವು ಕಡಿದಿರುವ ವಿಷಯ ಪಾಲಕರಿಗೆ ಬೆಳಿಗ್ಗೆ 4ಗಂಟೆಗೆ ಗೊತ್ತಾದ ತಕ್ಷಣ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.

    ಒಲಿವ್ವ ಗುಡಿಸಲಿನಲ್ಲಿ ನಿದ್ದೆಮಾಡುತ್ತಿದ್ದ ವೇಳೆ ಹಾವು ಕಡಿದು ಮೃತಪಟ್ಟಿದ್ದು, ಪುತ್ರಿಯನ್ನು ಕಳೆದುಕೊಂಡ ಅಲೆಮಾರಿ ಪಾಲಕರು ತೀವ್ರ ದುಖಿಃತರಾಗಿದ್ದಾರೆ. ಗುಡಿಸಲಿಗೆ ಬಾಲಕಿಯ ಶವವನ್ನು ತಗೆದುಕೊಂಡು ಬಂದಿರುವ ಅಲಮಾರಿಳ ದುಖಃದ ಕಟ್ಟೆ ಒಡೆದಿದೆ. ಇದನ್ನೂ ಓದಿ: ಕೆಲವು ಶಾಲೆಯಲ್ಲಿ ಹಿಜಬ್ ಯೂನಿಫಾರ್ಮ್ ಇದೆ, ಪರೀಕ್ಷೆಯಲ್ಲಿ ಹೇಗೆ ಮಾನಿಟರ್ ಮಾಡ್ತೀರಾ?: ದಿನೇಶ್ ಗುಂಡೂರಾವ್

    ಅಲೆಮಾರಿ ಬುಡುಗಜಂಗಮರ ಗುಡಿಸಲಿಗಳಿಲ್ಲ ಮೂಲಸೌಲಭ್ಯ, ಹಾವು ಕಡಿದು ಮೂರು ಜನರು ಸಾವನ್ನಪ್ಪಿದ್ದಾರೆ. ಈಗಾಗಲೇ ಮೂವರು ಹಾವು ಕಡಿದು ಸಾವನ್ನಪ್ಪಿದ್ದಾರೆ. ಈಗಲಾದರೂ ಸರ್ಕಾರ, ಜಿಲ್ಲಾಡಳಿತ ಎಚ್ಚೆತ್ತು ಅಲೆಮಾರಿ ಬುಡುಗಜಂಗಮ ಗುಡಿಸಲುವಸಿಗಳಿಗೆ ಮನೆ ನಿರ್ಮಿಸಿಕಡಬೇಕು. ಮೃತಪಟ್ಟಿರುವ ಬಾಲಕಿಯ ಕುಟುಂಬದವರಿಗೆ ಸೂಕ್ತಪರಿಹಾರ ಕೊಡಬೇಕೆಂದು ಶೆಟ್ಟಿ ವಿಭೂತಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ

  • ಶಾಸಕ ಶಿವರಾಜ ತಂಗಡಗಿಯ ಸುಳ್ಳು ಭರವಸೆಯಿಂದ ಬೇಸತ್ತ ಜನ- ಚುನಾವಣೆ ಬಹಿಷ್ಕರಿಸಲು ನಿರ್ಧಾರ

    ಶಾಸಕ ಶಿವರಾಜ ತಂಗಡಗಿಯ ಸುಳ್ಳು ಭರವಸೆಯಿಂದ ಬೇಸತ್ತ ಜನ- ಚುನಾವಣೆ ಬಹಿಷ್ಕರಿಸಲು ನಿರ್ಧಾರ

    ಕೊಪ್ಪಳ: ರಾಜ್ಯದಲ್ಲಿ ಅಲಕ್ಷಿತ ಹಿಂದುಳಿದ ಅಲೆಮಾರಿ ಜನಾಂಗವಾಗಿರುವ ಸಿಂಧೋಳಿ ಸಮಾಜವು ರಾಜಕೀಯ ನಾಯಕರ ಆಶ್ವಾಸನೆಗೆ ಸಿಲುಕಿ ತಮ್ಮ ಬದುಕನ್ನು ಬೀದಿಗೆ ತಂದುಕೊಂಡಿದ್ದಾರೆ.

    ಸತತ 2 ಬಾರಿ ಸಚಿವರಾಗಿ ಪ್ರಸ್ತುತ ಶಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಶಾಸಕ ಶಿವರಾಜ ತಂಗಡಗಿ ತನ್ನ ಕ್ಷೇತ್ರದಲ್ಲಿರುವ ಅಲೆಮಾರಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಕೊಪ್ಪಳದ ಗಂಗಾವತಿ ತಾಲೂಕಿನ ಕಾರಟಗಿಯ ತನ್ನ ಮನೆಯ ಹಿಂದೆಯೇ ಇರುವ ಅಲೇಮಾರಿ ಜನರು ಶಾಸಕರ ಕಣ್ಣಿಗೆ ಕಾಣಿಸಲಿಲ್ಲಾ ಅಂತಾ ಕಾಣ್ಸುತ್ತೆ. ಅದರ ಪ್ರಭಾವವೇ ಇಂದಿಗೂ ಕೂಡ ಈ ಜನಾಂಗ ಇರೋದಕ್ಕೆ ಸೂರಿಲ್ಲದೆ, ಒಡಾಡೋಕೆ ರಸ್ತೆಗಳಿಲ್ಲದೆ ಹಾಗೂ ಕುಡಿಯೋಕೆ ನೀರಿಲ್ಲದೆ, ಚಿಕ್ಕ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಇಲ್ಲಿ ದಿನನಿತ್ಯ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ.

    ಮುಂಜಾನೆ ಎದ್ದು ಶಾಸಕರು ತಮ್ಮ ಮನೆಯ ಬಾಗಿಲು ತೆಗೆದರೆ ಸಾಕು ಅಲೆಮಾರಿಗಳ ಕಷ್ಟ ಕಣ್ಣಿಗೆ ಕಾಣಿಸುತ್ತದೆ. ಆದರೆ ಶಾಸಕರು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಸಿಂಧೋಳಿ ಜನಾಂಗದವರ ಆಕ್ರೋಶಕ್ಕೆ ಕಾರಣವಾಗಿದೆ.

    ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ 40 ವರ್ಷದಿಂದ ವಾಸವಾಗಿದ್ದಾರೆ. ಕಳೆದ ಬಾರಿ ಚುನಾವಣೆ ಬಂದಾಗ ಶಾಸಕ ಶಿವರಾಜ ತಂಗಡಗಿ ಇವರಿಗೆ ಸುಂದರವಾದ ಬದುಕು ಕಟ್ಟಿಕೊಳ್ಳಲು ಏನು ಬೇಕು ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಿಕೊಡೋದಾಗಿ ಭರವಸೆ ಕೊಟ್ಟು ಹೊಗ್ಗಿದ್ದರು. ಆದ್ರೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಸಚಿವರು ಕೂಡ ಆದ್ರೂ ಯಾವ ವ್ಯವಸ್ಥೆಯನ್ನು ಇವರಿಗೆ ಕಲ್ಪಿಸಿಲ್ಲ. ಇದೀಗ ಮತ್ತೆ ಚುನಾವಣೆ ಬಂದಿದೆ. ಶಾಸಕರು ತಮಗೆ ನೀಡಿದ ಸುಳ್ಳು ಭರವಸೆಯಿಂದ ಬೇಸತ್ತಿರುವ ಜನರು ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸಲು ಸಿದ್ಧರಾಗಿದ್ದಾರೆ.