Tag: ಅಲೆಮಾರಿಗಳು

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನಿರಾಶ್ರಿತರಿಗೆ 1 ತಿಂಗಳಿಗಾಗುವಷ್ಟು ರೇಷನ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನಿರಾಶ್ರಿತರಿಗೆ 1 ತಿಂಗಳಿಗಾಗುವಷ್ಟು ರೇಷನ್

    ಚಿಕ್ಕಮಗಳೂರು: ಲಾಕ್‍ಡೌನ್ ಘೋಷಿಸಿದ ಮೇಲೆ ಮೇಲೆ ಶೆಡ್ ಬಿಟ್ಟು ಹೊರ ಹೋಗದೆ ಯಾರಾದರೂ ಕೊಟ್ಟರೆ ಅದನ್ನೇ ಊಟ ಮಾಡಿಕೊಂಡಿದ್ದ ಚಿಕ್ಕಮಗಳೂರಿನ ಹೆಳವ ಸಮುದಾಯದ ಕುಟುಂಬಗಳಿಗೆ ದಾನಿಗಳಾದ ರೋನಾಲ್ಡೋ ಕುಲಾಸೋ ಸಹೋದರ ಜೋ ಕುಲಾಸೋ ಅವರು ಒಂದು ತಿಂಗಳಿಗೆ ಆಗುವಷ್ಟು ಆಹಾರದ ಸಾಮಾಗ್ರಿಗಳ ಕಿಟ್ ನೀಡಿದ್ದಾರೆ.

    ಕಿಟ್‍ನಲ್ಲಿ ಅಕ್ಕಿ, ತೊಗರಿಬೇಳೆ, ಸಕ್ಕರೆ, ಗೋಧಿ ಹಿಟ್ಟು, ರವೆ, ಉಪ್ಪು, ಈರುಳ್ಳಿ, ಟೀ ಪುಡಿ, ಖಾರದಪುಡಿ, ದನಿಯಾ ಪುಡಿ, ಮೈ ಸೋಪು, ಬಟ್ಟೆ ಸೋಪು, ಅಡುಗೆ ಎಣ್ಣೆ ಒಳಗೊಂಡಿದೆ. ಸುಮಾರು 20 ಮಕ್ಕಳು ಸೇರಿದಂತೆ 14 ಕುಟುಂಬದ 54 ಜನ ಇಲ್ಲಿ ವಾಸವಿದ್ದಾರೆ. ಬೀದಿ ಮೇಲೆ ನಾನಾ ರೀತಿಯ ವ್ಯಾಪಾರ ಮಾಡಿಕೊಂಡು ಬಂದ ದುಡ್ಡಲ್ಲೇ ಊಟ ಮಾಡುತ್ತಿದ್ದ ಇವರು, ಲಾಕ್‍ಡೌನ್ ಹಿನ್ನೆಲೆ ತಿಂಗಳಿಂದ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದರು. ಯಾರಾದರೂ ತಂದು ಕೊಟ್ಟರೇ ಊಟ ಇಲ್ಲವಾದಲ್ಲಿ ಇಲ್ಲ ಎನ್ನುವ ಸ್ಥಿತಿ ಇತ್ತು.

    ಹಲವು ದಿನಗಳ ಕಾಲ ದಿನಕ್ಕೆ ಒಂದು ಹೊತ್ತು ಊಟ ಮಾಡಿ ಬದುಕಿದ್ದರು. ಈ ಬಗ್ಗೆ ‘ಪಬ್ಲಿಕ್ ಟಿವಿ’ಯೂ ಸುದ್ದಿ ಮಾಡಿತ್ತು. ಸುದ್ದಿ ನೋಡಿದ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಆಹಾರ ಸಾಮಾಗ್ರಿ ವಿತರಿಸಿದ್ದರು. ಇಂದು ಬೆಂಗಳೂರಿನಿಂದ ಬಂದ ದಾನಿಗಳು ನಿರಾಶ್ರಿತ ಹೆಳವ ಕುಟುಂಬಗಳಿಗೆ ತಿಂಗಳ ಸಾಮಾಗ್ರಿ ನೀಡಿದ್ದಾರೆ.

    ಇದೇ ಶೆಡ್‍ನಲ್ಲಿನ ಮಹಿಳೆಯೊಬ್ಬರು ನಾಲ್ಕು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಲಾಕ್ ಡೌನ್ ಆಗಿದ್ದರಿಂದ ಹಣವಿಲ್ಲದೆ, ಹೊಟ್ಟೆ ತುಂಬಾ ಊಟ ಸಿಗದೆ, ತಾಯಿಗೆ ಹಣ್ಣು, ತರಕಾರಿ ಸೇರಿದಂತೆ ಪೌಷ್ಠಿಕ ಆಹಾರವೂ ಸಿಗದೆ ಮಗುವಿಗೆ ಹೊಟ್ಟೆ ತುಂಬ ಹಾಲು ಕುಡಿಸಲೂ ಸಾಧ್ಯವಾಗಿರಲಿಲ್ಲ. ಇದೀಗ ದಾನಿಗಳು ರೇಷನ್ ಕೊಟ್ಟಿರುವುದರಿಂದ ನಿರಾಶ್ರಿತರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಬೆಂಗ್ಳೂರು ರಸ್ತೆ ಬದಿಗಳಲ್ಲಿ ರಾಜರೋಷವಾಗಿ ಮಾರಾಟವಾಗ್ತಿದೆ ಮಚ್ಚು ಲಾಂಗ್‍ಗಳು

    ಬೆಂಗ್ಳೂರು ರಸ್ತೆ ಬದಿಗಳಲ್ಲಿ ರಾಜರೋಷವಾಗಿ ಮಾರಾಟವಾಗ್ತಿದೆ ಮಚ್ಚು ಲಾಂಗ್‍ಗಳು

    ಬೆಂಗಳೂರು: ರೌಡಿಗಳ ಕೈಗೆ ಮಾರಕಾಸ್ತ್ರಗಳು ಹೇಗೆ ಸಿಗುತ್ತೆ, ಎಲ್ಲಿ ಸಿಗುತ್ತೆ ಎನ್ನುವುದು ಸಾಮಾನ್ಯರಿಗೆ ತಿಳಿಯದ ವಿಚಾರ. ಎಲ್ಲೋ ಅಜ್ಞಾತ ಸ್ಥಳಗಳಲ್ಲಿ ಈ ಮಚ್ಚು ಲಾಂಗ್‍ಗಳು ರೆಡಿಯಾಗುತ್ತಿದ್ದವು. ಆದರೆ ಮಧ್ಯಪ್ರದೇಶ ಮೂಲದ ಅಲೆಮಾರಿ ಜನರು ರಾಜರೋಷವಾಗಿ ಬೆಂಗಳೂರು ರಸ್ತೆಯ ಪಕ್ಕದಲ್ಲೇ ಇಂತಹ ಮಾರಕಾಸ್ತ್ರಗಳನ್ನ ರೆಡಿ ಮಾಡಿ ಮಾರಾಟ ಮಾಡುತ್ತಿದ್ದಾರೆ.

    ರೈತಾಪಿ ವರ್ಗದವರಿಗೆ ಬೇಕಾದ ಸಲಕರಣೆಗಳ ಜೊತೆಗೆ ಭಾರೀ ಹರಿತವಾಗಿರೋ ಮಚ್ಚುಗಳನ್ನ ರಸ್ತೆ ಪಕ್ಕದಲ್ಲೇ ಮಾರಾಟ ಮಾಡುತ್ತಿದ್ದಾರೆ. ಮಾಗಡಿ ರಸ್ತೆಯ ಚಿಕ್ಕ ಗೊಲ್ಲರಟ್ಟಿಯ ರಸ್ತೆ ಪಕ್ಕ ಬಿಡಾರ ಹಾಕಿರುವ ಅಲೆಮಾರಿಗಳು ಹೆಚ್ಚು ಉದ್ದವಾದ ಮಚ್ಚುಗಳನ್ನ ಮಾಡಿಕೊಡಲ್ಲ ಎನ್ನುತ್ತಾರೆ. ಆದರೆ ನಮಗೆ ಸಿನಿಮಾ ಶೂಟಿಂಗ್‍ಗೆ ಲಾಂಗ್ ಬೇಕು ಮಾಡಿ ಕೊಡುತ್ತಿರಾ ಎಂದು ಕೇಳಿದರೆ, “ಮಾಡ್ತಿವಿ ಇದೇ ಲಾಸ್ಟ್ ಸೈಜ್” ಎಂದು ಹೇಳಿ ಚೀಲಗಳ ಮಧ್ಯೆ ಇಟ್ಟಿದ್ದ ದೊಡ್ಡ ಮಚ್ಚುಗಳನ್ನು ತೋರಿಸುತ್ತಾರೆ. ಇದೇ ಅಳತೆಯಲ್ಲಿ ಲಾಂಗ್ ಮಾಡಿಕೊಡುವಂತೆ ಕೇಳಿದರೆ, ಮಾಡಿಕೊಡಲು ಈ ಮಧ್ಯಪ್ರದೇಶದ ಗ್ಯಾಂಗ್ ಒಪ್ಪಿಕೊಂಡಿರುವುದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ವೇಳೆ ಬಯಲಾಗಿದೆ.

    ಮೊದಲು ಲಾಂಗ್ ತಯಾರಿಸಿ ಕೊಡಲು ಒಪ್ಪಿಕೊಂಡಿದ್ದ ಅಲೆಮಾರಿಗಳು ನಂತರ ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆಯ ಸುಳಿವು ತಿಳಿದು ಆಗಲ್ಲ ಮುಂದೆ ಇರೋದನ್ನು ತಗೆದುಕೊಳ್ಳಿ, ನಮಗೆ ಆ ಲಾಂಗ್ ತರ ಮಾಡೋದಕ್ಕೆ ಬರೋದಿಲ್ಲ ಎಂದು ದೂರ ಸರಿದಿದ್ದಾರೆ.

    ಎಷ್ಟು ಸುಲಭವಾಗಿ ಮಚ್ಚು, ಚೂರಿ, ಲಾಂಗ್‍ಗಳು ಕಡಿಮೆ ಬೆಲೆಗೆ ಸಿಗುತ್ತೆ ಎಂದು ತಿಳಿದ ಪುಡಿ ರೌಡಿಗಳ ಇದನ್ನೇ ಕೊಂಡುಕೊಂಡು ನಾನೇ ಡಾನ್ ಎಂದುಕೊಂಡು ಬಿಲ್ಡಪ್ ನೀಡುತ್ತಿದ್ದಾರೆ. ಇಷ್ಟೆಲ್ಲಾ ರಾಜರೋಷವಾಗಿ ರಸ್ತೆಯಲ್ಲಿ ಮಾರಕಾಸ್ತ್ರಗಳು ತಯಾರಿಕೆಯಾಗಿ, ಮಾರಾಟವಾಗುತ್ತಿದ್ದರೂ ಪೊಲೀಸರು ಮಾತ್ರ ಸುಮ್ಮನಿದ್ದಾರೆ.

  • ಅಲೆಮಾರಿಗಳು ನೆಲೆ ಕಂಡುಕೊಳ್ಳಲು ಹೋದ್ರೆ ಗುಡಿಸಲುಗಳಿಗೆ ಬೆಂಕಿ ಇಟ್ರು!

    ಅಲೆಮಾರಿಗಳು ನೆಲೆ ಕಂಡುಕೊಳ್ಳಲು ಹೋದ್ರೆ ಗುಡಿಸಲುಗಳಿಗೆ ಬೆಂಕಿ ಇಟ್ರು!

    -ಸೂರಿಲ್ಲದೆ ಬೀದಿಗೆ ಬಂದ್ವು ಐದು ಕುಟುಂಬಗಳು

    ತುಮಕೂರು: ನೆಲೆ ಕಂಡುಕೊಂಡಿದ್ದ ಅಲೆಮಾರಿ ಜನಾಂಗದ ಗುಡಿಸಿಲಿಗೆ ಕೆಲ ದುಷ್ಕರ್ಮಿಗಳು ಬೆಂಕಿಯಿಟ್ಟ ಅಮಾನವೀಯತೆ ಮೆರೆದ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಐ.ಕೆ.ಕಾಲೊನಿ ಬಳಿ ನಡೆದಿದೆ.

    ಅರಸಮ್ಮ, ಶಶಿಕಲಾ, ಗಂಗಮ್ಮ, ಆಂಜಿನಮ್ಮ ಹಾಗೂ ಮಂಜಮ್ಮ ಎಂಬವರಿಗೆ ಸೇರಿದ ಗುಡಿಸಲು ಬೆಂಕಿಗಾಹುತಿಯಾಗಿವೆ. ಈ ಕುಟುಂಬಗಳು ಪಿಡಬ್ಲ್ಯೂಡಿಗೆ ಸೇರಿದ ಜಾಗದಲ್ಲಿ ಕಳೆದ 20 ವರ್ಷದಿಂದ ವಾಸವಾಗಿವೆ. ಈಗ ಸೂರಿಲ್ಲದೆ ಐದೂ ಕುಟುಂಬಗಳು ಬೀದಿಗೆ ಬಿದ್ದಿದ್ದು, ಮಕ್ಕಳ ಶಾಲಾ ಪುಸ್ತಕಗಳು, ಬಟ್ಟೆ, ಧವಸ ದಾನ್ಯ ಇತರೆ ವಸ್ತುಗಳು ಬೆಂಕಿಗಾಹುತಿಯಾಗಿವೆ.

    ನಾವು ಕೂಲಿ ಕೆಲಸಕ್ಕೆ ಹೋದಾಗ ಶುಕ್ರವಾರ ಮಧ್ಯಾಹ್ನ, ಸಂಜೆ ಹಾಗೂ ಇಂದು ಬೆಳಗ್ಗೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಇಲ್ಲಿಂದ ನಮ್ಮನ್ನು ತೆರವುಗೊಳಿಸಲು ಹೀಗೆ ಮಾಡುತ್ತಿದ್ದಾರೆ. ಗ್ರಾಮಸ್ಥರೂ ನಮಗೆ ಇರಲು ಅವಕಾಶ ನೀಡುತ್ತಿಲ್ಲ. ಮುಂದೆ ನಾವು ಎಲ್ಲಿ ನೆಲೆ ಕಂಡುಕೊಳ್ಳವುದು ಅಂತಾ ಗೊತ್ತಾಗುತ್ತಿಲ್ಲ ಎಂದು ಸಂತ್ರಸ್ತ ರಾಮಕೃಷ್ಣ ಅಳಲು ತೋಡಿಕೊಂಡಿದ್ದಾರೆ.

    ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದಾರೆ. ಅಷ್ಟೇ ಅಲ್ಲದೆ ನಾನು ತುಂಬು ಗರ್ಭಿಣಿ, ಸೂರಿಲ್ಲದೆ ಬೀದಿಗೆ ಬಂದಿದ್ದೇವೆ. ಎಲ್ಲಿಗೆ ಹೋಗಬೇಕು?, ಏನು ಮಾಡಬೇಕು? ಅಂತಾ ಅರ್ಥವಾಗುತ್ತಿಲ್ಲ. ನಮ್ಮ ಆಧಾರ್ ಕಾರ್ಡ್, ಪಡಿತರ ಚೀತಿ, ಹಾಸಿಗೆ, ಧವಸ ಧಾನ್ಯಗಳು ಸುಟ್ಟು ಹೋಗಿವೆ ಎಂದು ಮಹಿಳೆ ಅಸಹಾಯಕತೆ ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv