Tag: ಅಲೆಕ್ಸಾ

  • ಕೋತಿಗಳ ದಾಳಿಯಿಂದ ಮಕ್ಕಳಿಬ್ಬರ ಜೀವ ಉಳಿಸಿದ ಅಲೆಕ್ಸಾ

    ಕೋತಿಗಳ ದಾಳಿಯಿಂದ ಮಕ್ಕಳಿಬ್ಬರ ಜೀವ ಉಳಿಸಿದ ಅಲೆಕ್ಸಾ

    ಲಕ್ನೋ: ತಂತ್ರಜ್ಞಾನ ಎಂಬುದು ಎಷ್ಟು ಅಪಾಯಕಾರಿಯೋ ಅಷ್ಟೇ ಪ್ರಯೋಜನಗಳು ಕೂಡ ಇವೆ. ಅಲೆಕ್ಸಾ (Alexa) ಎಂಬ ತಂತ್ರಜ್ಞಾನದಿಂದ ಬಾಲಕಿಯೊಬ್ಬಳು ತನ್ನ ಜೊತೆಗೆ ಒಂದು ವರ್ಷದ ಪುಟ್ಟ ಮಗುವಿನ ಪ್ರಾಣವನ್ನು ಕೂಡ ಉಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ.

    ಬಸ್ತಿಯ 13 ವರ್ಷದ ಬಾಲಕಿ ನಿಖಿತಾ ಮನೆಯೊಳಗೆ ತಮ್ಮ ಸೊಸೆ ವಮಿಕಾಳೊಂದಿಗೆ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಕುಟುಂಬದ ಇತರ ಸದಸ್ಯರು ಪಕ್ಕದ ರೂಮಿನಲ್ಲಿದ್ದರು. ಇದನ್ನೂ ಓದಿ: ಚೀನಾದ ತಾಳಕ್ಕೆ ಕುಣಿಯುತ್ತಿದ್ದರೂ ಮಾನವೀಯ ನೆರವು – ಭಾರತದ ಸಹಾಯಕ್ಕೆ ಧನ್ಯವಾದ ಹೇಳಿದ ಮಾಲ್ಡೀವ್ಸ್‌

    ನಡೆದಿದ್ದೇನು?: ಬಾಲಕಿ ನಿಖಿತಾ ತನ್ನ ಸೊಸೆ ಜೊತೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಐದರಿಂದ ಆರು ಮಂಗಗಳಿದ್ದ ಗುಂಪೊಂದು ಮನೆಗೆ ನುಗ್ಗಿ ಅಡುಗೆ ಮನೆಯಲ್ಲಿ ಅವ್ಯವಸ್ಥೆ ಸೃಷ್ಟಿಸಿವೆ. ಪಾತ್ರೆ, ಆಹಾರ ಪದಾರ್ಥಗಳನ್ನೆಲ್ಲಾ ಎಸೆದು ಚೆಲ್ಲಾಪಿಲ್ಲಿ ಮಾಡಿವೆ. ಅಲ್ಲದೇ ಮಂಗವೊಂದು ಹಲವಾರು ಬಾರಿ ನಿಖಿತಾ ಹಾಗೂ ವಮಿಕಾ ಬಳಿಗೆ ಬಂದು ಹೋಗುತ್ತಿತ್ತು. ಇದರಿಂದ ನಿಖಿತಾ ಭಯಗೊಂಡಳು.

    ಮಂಗಗಳಿಂದ ಪಾರಾಗಲು ಕೊನೆಗೆ ನಿಖಿತಾ ಫ್ರಿಡ್ಜ್‌ ಮೇಲೆ ಇಟ್ಟಿದ್ದ ಅಲೆಕ್ಸಾದ ಮೊರೆ ಹೋಗಿದ್ದಾಳೆ. ಅದರಲ್ಲಿ ನಾಯಿ ಬೊಗಳುವ ಶಬ್ದವನ್ನು ಪ್ಲೇ ಮಾಡಿದಳು. ಈ ವೇಳೆ ಅಲೆಕ್ಸಾ ರಿಯಾಕ್ಟ್‌ ಮಾಡಿದೆ. ಪರಿಣಾಮ ಮಂಗಗಳು ಹೆದರಿ ಅಲ್ಲಿಂದ ಓಡಿ ಹೋದವು. ಹೀಗಾಗಿ ಇವರಿಬ್ಬರು ಮಂಗಗಳ ದಾಳಿಯಿಂದ ಗ್ರೇಟ್‌ ಎಸ್ಕೇಪ್‌ ಆದರು.

    ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ನಿಖಿತಾ ಅವರ ತಾಯಿ ಶಿಪ್ರಾ ಓಜಾ, ಮೊದಲು ತಮ್ಮ ಮಗಳ ತ್ವರಿತ ಕ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು. ಅಲೆಕ್ಸಾವು ಇಬ್ಬರ ಪ್ರಾಣವನ್ನು ಉಳಿಸಿದೆ ಎಂದು ಹೇಳಿದ್ದಾರೆ.

  • ‘ಅಲೆಕ್ಸಾ’ ಚಿತ್ರಕ್ಕಾಗಿ ತನಿಖಾಧಿಕಾರಿಯಾದ ಅದಿತಿ ಪ್ರಭುದೇವ

    ‘ಅಲೆಕ್ಸಾ’ ಚಿತ್ರಕ್ಕಾಗಿ ತನಿಖಾಧಿಕಾರಿಯಾದ ಅದಿತಿ ಪ್ರಭುದೇವ

    ವನ್ ತೇಜ್ ಹಾಗೂ ಅದಿತಿ ಪ್ರಭುದೇವ ಪ್ರಮುಖಪಾತ್ರದಲ್ಲಿ ನಟಿಸಿರುವ ‘ಅಲೆಕ್ಸಾ’ (Alexa)ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಜೀವ (Jeeva) ನಿರ್ದೇಶಿಸಿರುವ ಈ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ವಿ.ಚಂದ್ರು ನಿರ್ಮಾಣದ ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ ಬರುತ್ತಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.

    ಇದೊಂದು ಮರ್ಡರ್ ಮಿಸ್ಟರಿ ಚಿತ್ರ. ಕಥೆ ಕೇಳಿದ ತಕ್ಷಣ ನಿರ್ಮಾಪಕರು ಇಷ್ಟಪಟ್ಟರು. ಇನ್ವೆಸ್ಟಿಕೇಶನ್ ಆಫೀಸರ್ ಆಗಿ ಅದಿತಿ ಪ್ರಭುದೇವ (Aditi Prabhudev) ನಟಿಸಿದ್ದಾರೆ. ಪವನ್ ತೇಜ್ (Pawan Tej) ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಫಾರ್ಮಾಸೆಟಿಕಲ್ ಮಾಫಿಯಾ ಬಗ್ಗೆ ಕೂಡ ಕ್ಲೈಮ್ಯಾಕ್ಸ್ ನಲ್ಲಿ ತೋರಿಸಿದ್ದೇವೆ‌. ಈ ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಆಲೋಚನೆ ಇದೆ. ಮೈಸೂರು, ಮಡಿಕೇರಿ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಮೂರು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳು ಚಿತ್ರದಲ್ಲಿದೆ.‌ ಅಕ್ಟೋಬರ್ ಕೊನೆ ಅಥವಾ ನವೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ಬರಲಿದೆ ಎಂದು ನಿರ್ದೇಶಕ ಜೀವ ತಿಳಿಸಿದರು.

    ನನಗೆ ನಿಜಜೀವನದಲ್ಲಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸ್ಸಿತ್ತು. ಅದು ಆಗಲಿಲ್ಲ.‌ ನಿರ್ದೇಶಕರು ನೀವು ಈ ಚಿತ್ರದಲ್ಲಿ ಇನ್ವೆಸ್ಟಿಕೇಶನ್ ಆಫೀಸರ್ ಅಂದ ತಕ್ಷಣ ಒಪ್ಪಿಕೊಂಡೆ. ಸಾಹಸ ದೃಶ್ಯಗಳಲ್ಲೂ ಕಾಣಿಸಿಕೊಳ್ಳುವ ಕನಸ್ಸಿತ್ತು. ಅದು ಈ ಚಿತ್ರದಲ್ಲಿ ನನಸ್ಸಾಗಿದೆ. ಸಾಹಸ ನಿರ್ದೇಶಕ ರವಿವರ್ಮ ಹಾಗೂ ಮಾಸ್ ಮಾದ ಅವರು ಸಾಹಸ ಸಂಯೋಜನೆಯಲ್ಲಿ ನಾನು ಅಭಿನಯಿಸಿರುವ ಸಾಹಸ ಸನ್ನಿವೇಶಗಳು ಚೆನ್ನಾಗಿ ಬಂದಿದೆ ಎಂದರು ನಟಿ ಅದಿತಿ ಪ್ರಭುದೇವ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಜೊತೆ ಸಂಪರ್ಕದಲ್ಲಿದ್ದೇನೆ, ಆಕೆಯ ಸಕ್ಸಸ್ ಬಗ್ಗೆ ಖುಷಿಯಿದೆ- ರಕ್ಷಿತ್ ಶೆಟ್ಟಿ

    ಚಿತ್ರದಲ್ಲಿ ಗಂಡ – ಹೆಂಡತಿ ಕೊಲೆ ಆಗಿರುತ್ತದೆ. ಆ‌ ಕೊಲೆಯ ತನಿಖೆಯ ಸುತ್ತ ಕಥೆ ಸಾಗುತ್ತದೆ ಎಂದು ಮಾತನಾಡಿದ ನಾಯಕ ಪವನ್ ತೇಜ್ ಅದಿತಿ ಪ್ರಭುದೇವ ಅವರ ಜೊತೆ ನಟಿಸುವ ಹಂಬಲವಿತ್ತು. ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದರು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ. ಪ್ರೋತ್ಸಾಹ ನೀಡಿ ಎನ್ನುತ್ತಾರೆ ನಿರ್ಮಾಪಕ ವಿ.ಚಂದ್ರು. ಚಿತ್ರದ ಬಹುತೇಕ ಕಲಾವಿದರು, ತಂತ್ರಜ್ಞರು ಹಾಗೂ ಚಿತ್ರದ ವಿತರಕರಾದ ರಿಲಯನ್ಸ್ ಎಂಟರ್ಟೈನ್ಮೆಂಟ್ ಅವರು ‘ಅಲೆಕ್ಸಾ’ ಬಗ್ಗೆ ಮಾತನಾಡಿದರು.

    ಪವನ್ ತೇಜ್, ಅದಿತಿ ಪ್ರಭುದೇವ, ನಾಗಾರ್ಜುನ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.  ಸತೀಶ್ ಬಿ  ಅವರ ಛಾಯಾಗ್ರಹಣ ಹಾಗೂ ಉಮೇಶ್ ಆರ್ ಬಿ  ಸಂಕಲನ ಅಲೆಕ್ಸಾ ಚಿತ್ರದಲ್ಲಿ ಸುಂದರವಾಗಿ ಮೂಡಿಬಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]