Tag: ಅಲಿಬಾಬ

  • ನಾಡು, ನುಡಿಗಾಗಿ ರಾಜಕಾರಣಿಗಳು ಏನೂ ಮಾಡಿಲ್ಲ.. ಕನ್ನಡ ಕಾರ್ಯಕ್ರಮಗಳಿಗೆ ಅವರನ್ನ ಕರೆಯಲ್ಲ – ಕರವೇ ಅಧ್ಯಕ್ಷ

    ನಾಡು, ನುಡಿಗಾಗಿ ರಾಜಕಾರಣಿಗಳು ಏನೂ ಮಾಡಿಲ್ಲ.. ಕನ್ನಡ ಕಾರ್ಯಕ್ರಮಗಳಿಗೆ ಅವರನ್ನ ಕರೆಯಲ್ಲ – ಕರವೇ ಅಧ್ಯಕ್ಷ

    ಮಂಡ್ಯ: ನಾಡು, ನುಡಿಗಾಗಿ ರಾಜಕಾರಣಿಗಳು ಏನನ್ನೂ ಮಾಡಿಲ್ಲ. ಹೀಗಾಗಿ ಇನ್ಮುಂದೆ ಕನ್ನಡ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ (T.A.Narayana Gowda) ಹೇಳಿದ್ದಾರೆ.

    ಕೆ.ಆರ್‌. ಪೇಟೆಯಲ್ಲಿ (K.R. Pet) ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಲಿಬಾಬ ಎಂದಿದ್ದಕ್ಕೆ ಬಿಜೆಪಿ ಸಚಿವ ಕೆ.ಸಿ.ನಾರಾಯಣಗೌಡ (K.C.Narayana Gowda) ಹಾಗೂ ಜೆಡಿಎಸ್‌ ಮುಖಂಡ ಸಂತೋಷ್‌ ನಡುವೆ ವೇದಿಕೆಯಲ್ಲೇ ಜಗಳವಾಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಮಾತನಾಡಿದ ಕರವೇ ಅಧ್ಯಕ್ಷ, ಇನ್ಮೇಲೆ ಯಾವ ರಾಜಕಾರಣಿಗಳನ್ನೂ ಕನ್ನಡ ಕಾರ್ಯಕ್ರಮಗಳಿಗೆ ಕರೆಯಲ್ಲ. ನಾನು ನಮ್ಮ ಕಾರ್ಯಕರ್ತರಿಗೆ ರಾಜಕಾರಣಿಗಳನ್ನ ದೂರವಿಡಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಲಿಬಾಬಗೆ ಹೋಲಿಕೆ ವಿಚಾರಕ್ಕೆ ವೇದಿಕೆಯಲ್ಲೇ ಜೆಡಿಎಸ್ ಮುಖಂಡ, ಬಿಜೆಪಿ ಸಚಿವರ ಮಧ್ಯೆ ಫೈಟ್

    ಕೆ.ಆರ್. ಪೇಟೆಯಲ್ಲಿ ಕನ್ನಡ ವೇದಿಕೆಯನ್ನ ರಾಜಕಾರಣಕ್ಕೆ ಬಳಸಿಕೊಳ್ಳಲು ಬಂದರು. ಕಾರ್ಯಕ್ರಮವನ್ನ ರಾಜಕಾರಣದಿಂದ ಹಾಳು‌ಮಾಡಲು ನೋಡಿದರು. ಕೆ.ಆರ್. ಪೇಟೆಯಲ್ಲಿ ನಡೆಯುತ್ತಿದ್ದದ್ದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ. ಅದು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ. ಎಲ್ಲಾ ಪಕ್ಷದ ರಾಜಕಾರಣಿಗಳು ಕಾರ್ಯಕ್ರಮಕ್ಕೆ ಬಂದಿದ್ದರು. ಜೆಡಿಎಸ್ ಮುಖಂಡ ಸಂತೋಷ್ ರಾಜಕೀಯ ಮಾತಾಡಲು ಶುರು ಮಾಡಿದ. ಕರವೇ ಕಾರ್ಯಕ್ರಮದಲ್ಲಿ ಕನ್ನಡ, ಕರ್ನಾಟಕ ಪರ ಮಾತನಾಡಿಲ್ಲ. ಅದನ್ನ ಬಿಟ್ಟು ರಾಜಕಾರಣ ಮಾಡಲು ಶುರು ಮಾಡಿದ್ರು. ನಂತರ ನಾನು ಮೈಕ್ ತೆಗೊಂಡು ಸಚಿವ ನಾರಾಯಣಗೌಡ ಹಾಗೂ ಸಂತೋಷ್‌ ಇಬ್ಬರನ್ನೂ ಸುಮ್ಮನಾಗಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ವೇದಿಕೆಯಲ್ಲಿ ಹೊಡೆದಾಟಗಳು ಆಗುತ್ತಿದ್ವು. ಅದನ್ನ ನಾನು ತಡೆದೆ. ನೀವು ರಾಜಕೀಯ ಮಾಡಬೇಕಿದ್ರೆ ನಿಮ್ಮ ವೇದಿಕೆಗಳಲ್ಲಿ ಮಾಡಿ. ನಾಡು, ನುಡಿಗೆ ಎಲ್ಲಾ ರಾಜಕೀಯ ‌ಪಕ್ಷಗಳ ಸಾಧನೆ ಶೂನ್ಯ. ಅವರ ವೇದಿಕೆಗಳಲ್ಲಿ ರಾಜಕಾರಣ ಮಾಡಿಕೊಳ್ಳಲಿ. ಕನ್ನಡದ ಕಾರ್ಯಕ್ರಮದಲ್ಲಿ ರಾಜಕಾರಣ ಮಾಡಬಾರದು ಅನ್ನೋ ತಿಳುವಳಿಕೆ ಸಚಿವರಿಗೆ ಇರಬೇಕಿತ್ತು. ಕನ್ನಡವನ್ನ ಮರೆತು ರಾಜಕೀಯ ಕೆಸರೆರೆಚಾಟ ಮಾಡಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶಾರಿಕ್‌ನನ್ನು ವಶಕ್ಕೆ ಪಡೆದ NIA ಅಧಿಕಾರಿಗಳು

    Live Tv
    [brid partner=56869869 player=32851 video=960834 autoplay=true]

  • ಅಲಿಬಾಬಗೆ ಹೋಲಿಕೆ ವಿಚಾರಕ್ಕೆ ವೇದಿಕೆಯಲ್ಲೇ ಜೆಡಿಎಸ್ ಮುಖಂಡ, ಬಿಜೆಪಿ ಸಚಿವರ ಮಧ್ಯೆ ಫೈಟ್

    ಅಲಿಬಾಬಗೆ ಹೋಲಿಕೆ ವಿಚಾರಕ್ಕೆ ವೇದಿಕೆಯಲ್ಲೇ ಜೆಡಿಎಸ್ ಮುಖಂಡ, ಬಿಜೆಪಿ ಸಚಿವರ ಮಧ್ಯೆ ಫೈಟ್

    ಮಂಡ್ಯ: ಕನ್ನಡ ರಾಜ್ಯೋತ್ಸವ (Kannada Rajyotsava) ಸಮಾರಂಭದ ವೇದಿಕೆ ಕಾರ್ಯಕ್ರಮದಲ್ಲಿ ಅಲಿಬಾಬಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮುಖಂಡ ಹಾಗೂ ಬಿಜೆಪಿಯ (BJP) ಸಚಿವ ನಾರಾಯಣಗೌಡ (K.C.Narayana Gowda) ನಡುವೆ ವೇದಿಕೆಯಲ್ಲೇ ಗಲಾಟೆ ನಡೆಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ (T.A.Narayana Gowda) ಇಬ್ಬರಿಗೂ ಕ್ಲಾಸ್ ತೆಗೆದುಕೊಂಡ ಘಟನೆ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದಿದೆ.

    ಮಂಡ್ಯ (Mandya) ಜಿಲ್ಲೆಯ ಕೆ.ಆರ್. ಪೇಟೆ (K.R. Pet) ಕ್ಷೇತ್ರದಲ್ಲಿ ಇದೀಗ ಚುನಾವಣೆಗೂ ಮುನ್ನವೇ ಕೆಸರೆರಚಾಟ ಶುರುವಾಗಿದೆ. ಕರವೇಯಿಂದ ಆಯೋಜನೆ ಮಾಡಿದ್ದ ಕನ್ನಡದ ರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಜೆಡಿಎಸ್ (JDS) ಮುಖಂಡ ಸಂತೋಷ್ ಹಾಗೂ ಸಚಿವ ನಾರಾಯಣಗೌಡ ನಡುವೆ ಕೆಸರೆರಚಾಟ ನಡೆಯಿತು. ಇದಕ್ಕೆ ಮಧ್ಯ ಪ್ರವೇಶ ಮಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ದಸರಾ ಆನೆ ಬಲರಾಮನಿಗೆ ಗುಂಡೇಟು – ಫೈರಿಂಗ್‌ ಮಾಡಿದ್ದ ವ್ಯಕ್ತಿ ಬಂಧನ

    ಕೆ.ಆರ್. ಪೇಟೆ ಉಪಚುನಾವಣೆಯಲ್ಲಿ ಸಚಿವ ನಾರಾಯಣಗೌಡ ಬಿಜೆಪಿಯಿಂದ ಗೆಲುವು ಸಾಧಿಸಿದಾಗಿನಿಂದ ಜೆಡಿಎಸ್ ಮುಖಂಡರು ನಾರಾಯಣಗೌಡ ಅವರನ್ನು ಟಾರ್ಗೆಟ್ ಮಾಡುತ್ತಾ ವಾಗ್ದಾಳಿ ಮಾಡುತ್ತಲ್ಲೇ ಇದ್ದಾರೆ. ಹಾಗೆಯೇ ಕರವೇಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಸಂತೋಷ್ ಮಾತಾನಾಡುವ ವೇಳೆ, “ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಾಗೇಯೇ ಕೆ.ಆರ್. ಪೇಟೆಯಲ್ಲಿ ಭ್ರಷ್ಟಾಚಾರ ಇದೆ. ಎಲ್ಲರಿಗೂ ಅಲಿಬಾಬ ಮತ್ತು 40 ಕಳ್ಳರ ಕಥೆ ಗೊತ್ತು ಅಲ್ವಾ. ಹಾಗೆಯೇ ಕೆ.ಆರ್. ಪೇಟೆಯಲ್ಲಿ ಒಬ್ಬ ಅಲಿಬಾಬ ಇದ್ದಾನೆ. ಆತ ನಾಲ್ಕು ಕಳ್ಳರನ್ನು ಸಾಕಿಕೊಂಡಿದ್ದಾನೆ ” ಎಂದು ಪರೋಕ್ಷವಾಗಿ ಸಚಿವ ನಾರಾಯಣಗೌಡಗೆ ಹೇಳಿದ್ದಾರೆ. ಸಚಿವ ನಾರಾಯಣಗೌಡ ಈ ಮಾತನ್ನು ಕೇಳಿ, “ಯಾರಿಗೆ ಹೇಳ್ತಾ ಇದೀಯಾ ನೀನು. ನಾನು ಯಾವ ಭ್ರಷ್ಟಾಚಾರ ಮಾಡಿದ್ದೀನಿ. ಏನು ಮಾತಾನಾಡುತ್ತಾ ಇದೀಯಾ” ಎಂದು ಜೆಡಿಎಸ್ ಮುಖಂಡ ಸಂತೋಷ್‌ಗೆ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡರು.

    ಈ ಹೈಡ್ರಾಮವನ್ನು ನೋಡುವವರೆಗೆ ನೋಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ನಿರೂಪಕನ ಕೈಯಿಂದ ಮೈಕ್ ಕಿತ್ತುಕೊಂಡು ರಾಜಕೀಯ ಮುಖಂಡರಿಗೆ ಹಾಗೂ ಕಾರ್ಯಕ್ರಮದ ಆಯೋಜಕರಿಗೆ ಕ್ಲಾಸ್ ತೆಗೆದುಕೊಂಡರು. “ರಾಜಕೀಯ ಪಕ್ಷದವರನ್ನು ಈ ಕಾರ್ಯಕ್ರಮಕ್ಕೆ ಯಾಕೆ ಕರೆದುಕೊಂಡು ಬಂದ್ರಿ. ನಾಡು-ನುಡಿಗಾಗಿ ರಾಜಕಾರಣಿಗಳು ಏನೂ ಮಾಡಿಲ್ಲ. ನಾಡು-ನುಡಿಗೆ ರಾಜಕಾರಣಿಗಳು ಜೈಲಿಗೆ ಹೋಗಿಲ್ಲ. ಎಲ್ಲಾ ರಾಜಕಾರಣಿಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡ್ತಾರೆ. ಎಲ್ಲಾ ಭಾಷಿಕರನ್ನು ಓಲೈಸಿಕೊಂಡು ಕನ್ನಡಿಗರನ್ನು ಮರೆಯುತ್ತಾರೆ. ಬೆಳಗಾವಿಯಲ್ಲಿ 14 ಶಾಸಕರು ಇದ್ದಾರೆ. ಒಬ್ಬ ಶಾಸಕ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಕೇಳುತ್ತಿಲ್ಲ. ಇಂತಹ ರಾಜಕೀಯ ಮುಖಂಡರನ್ನು ಈ ಕಾರ್ಯಕ್ರಮಕ್ಕೆ ಕರೆದಿದ್ದೀರಾ ಎಂದು ಆಯೋಜಕರಿಗೆ ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಮಚ್ಚು ತೋರಿಸಿದ ಪ್ರಕರಣ – ದಂಪತಿ ವಿರುದ್ಧ ರೌಡಿಶೀಟರ್ ಕೇಸ್ ಹಾಕಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]