Tag: ಅಲಿಘರ್

  • Uttar Pradesh| ಟ್ರಕ್‌ಗೆ ಹಿಂಬದಿಯಿಂದ ಡಬಲ್ ಡೆಕ್ಕರ್ ಬಸ್ ಡಿಕ್ಕಿ – ಐವರು ಸಾವು, 15 ಮಂದಿಗೆ ಗಾಯ

    Uttar Pradesh| ಟ್ರಕ್‌ಗೆ ಹಿಂಬದಿಯಿಂದ ಡಬಲ್ ಡೆಕ್ಕರ್ ಬಸ್ ಡಿಕ್ಕಿ – ಐವರು ಸಾವು, 15 ಮಂದಿಗೆ ಗಾಯ

    ಲಕ್ನೋ: ಟ್ರಕ್‌ಗೆ (Truck) ಹಿಂಬದಿಯಿಂದ ಡಬಲ್ ಡೆಕ್ಕರ್ ಬಸ್ (Double Decker Bus) ಡಿಕ್ಕಿ ಹೊಡೆದ ಪರಿಣಾಮ 5 ತಿಂಗಳ ಮಗು ಸೇರಿ ಐವರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಅಲಿಘರ್‌ನ (Aligarh) ಯಮುನಾ ಎಕ್ಸ್‌ಪ್ರೆಸ್‌ ವೇಯಲ್ಲಿ (Yamuna Expressway) ನಡೆದಿದೆ.

    ದೆಹಲಿಯಿಂದ ಅಜಂಗಢಕ್ಕೆ ತೆರಳುತ್ತಿದ್ದ ಬಸ್ ಹಿಂಬದಿಯಿಂದ ಟ್ರಕ್‌ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಗುದ್ದಿದ ರಭಸಕ್ಕೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹ ಹಾಗೂ ಪ್ರಯಾಣಿಕರು ಬಸ್ ಒಳಗೆ ಸಿಲುಕಿಕೊಂಡಿದ್ದಾರೆ. ಅಪಘಾತದಲ್ಲಿ 11 ತಿಂಗಳ ಹೆಣ್ಣು ಮಗು, ಐದು ವರ್ಷದ ಮಗು, ಮೂವರು ಮಹಿಳೆಯರು ಮತ್ತು ಒಂಬತ್ತು ಪುರುಷರು ಸೇರಿದಂತೆ 15 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: PUBLiC TV Impact| ಸರ್ಕಾರಕ್ಕೆ ರೇಷನ್ ಕಾರ್ಡ್ ಪರಿಷ್ಕರಣೆ ವರದಿ ಸಲ್ಲಿಕೆ: ರದ್ದಿಗೆ ಮಾನದಂಡ ಏನು?

    ಸ್ಥಳೀಯರು ಬಸ್ಸಿನ ಗಾಜುಗಳನ್ನು ಒಡೆದು ಗಾಯಾಳುಗಳನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜೇವರ್‌ನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಗಿದೆ. ಮೃತರ ಪೈಕಿ ಮೂರು ಶವಗಳ ಗುರುತು ಪತ್ತೆ ಹಚ್ಚಿದ್ದು, ಇಬ್ಬರ ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ: 6 ತಿಂಗಳಿನಿಂದ ಸಿಕ್ಕಿಲ್ಲ ವೇತನ – ಹಲವು ಇಂದಿರಾ ಕ್ಯಾಂಟೀನ್‌ಗಳಿಗೆ ಬಿತ್ತು ಬೀಗ!

    ಬಸ್ ಫೈಜಾಬಾದ್ ಮೂಲದ ಟ್ರಾವೆಲ್ಸ್ ಕಂಪನಿಗೆ ಸೇರಿದೆ. ತಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಮತ್ತೆ ಕೋಟ್ಯಧೀಶನಾದ ಮಲೆ ಮಾದಪ್ಪ – 2.43 ಕೋಟಿ ರೂ. ಕಾಣಿಕೆ ಹಣ ಸಂಗ್ರಹ

  • ಫೇಸ್‍ಬುಕ್ ಲೈವ್ ಬಳಿಕ ಪತ್ನಿಗೆ ಗುಂಡಿಕ್ಕಿ ಪತಿ ಆತ್ಮಹತ್ಯೆಗೆ ಶರಣು

    ಫೇಸ್‍ಬುಕ್ ಲೈವ್ ಬಳಿಕ ಪತ್ನಿಗೆ ಗುಂಡಿಕ್ಕಿ ಪತಿ ಆತ್ಮಹತ್ಯೆಗೆ ಶರಣು

    – ಅಣ್ಣ, ಅತ್ತಿಗೆ ಬೆನ್ನಲ್ಲೇ ತಮ್ಮನೂ ಗುಂಡಿಕ್ಕಿಕೊಂಡ

    ಲಕ್ನೋ: ಫೇಸ್‍ಬುಕ್ ಲೈವ್ ಬಳಿಕ ಪತಿಯೋರ್ವ ಪತ್ನಿಗೆ ಗುಂಡಿಕ್ಕಿ ಆತ್ಮಹತ್ಯೆಗೆ ಶರಣಾದ ಹಾಗೂ ಅಣ್ಣ ಅತ್ತಿಗೆ ಬೆನಲ್ಲೇ ತಮ್ಮನೂ ಗುಂಡಿಕ್ಕಿಕೊಂಡ ಘಟನೆ ಉತ್ತರ ಪ್ರದೇಶದ ಅಲಿಘರ್ ಜಿಲ್ಲೆಯಲ್ಲಿ ನಡೆದಿದೆ.

    ಅಲಿಘರ್ ಜಿಲ್ಲೆಯ ಬಾರೌಲಾ ನಿವಾಸಿ ಶೈಲೇಂದ್ರ, ಪಿಂಕಿ ದಂಪತಿ ಹಾಗೂ ವಿಶಾಲ್ ಮೃತ ದುರ್ದೈವಿಗಳು. ಶೈಲೇಂದ್ರ ಹಾಗೂ ಪಿಂಕಿ ಪರಸ್ಪರ ಪ್ರೀತಿಸಿ ಮದುವೆಯಾವಿದ್ದರು. ಆದರೆ ವಿಶಾಲ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

    ಬಾರೌಲಾ ನಿವಾಸಿ ಬಾಬುಲ್ ವರ್ಮಾ ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಅವರ ಹಿರಿಯ ಮಗ ಕುಟುಂಬದೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಉಳಿದಂತೆ ಶೈಲೇಂದ್ರ ಮತ್ತು ವಿಶಾಲ್ ಪೋಷಕರೊಂದಿಗೆ ವಾಸಿಸುತ್ತಿದ್ದರು. ಶೈಲೇಂದ್ರ ಬಿಫಾರ್ಮ ಮುಗಿಸಿ ಔಷಧದ ಅಂಗಡಿ ನಡೆಸುತ್ತಿದ್ದರು. ಶೈಲೇಂದ್ರ ನೆರೆ ಮೆನೆಯಲ್ಲೇ ವಾಸಿಸುತ್ತಿದ್ದ ಪಿಂಕಿ ವರ್ಮಾಳನ್ನು ಸುಮಾರು ಒಂದೂವರೆ ವರ್ಷ ಪ್ರೀತಿಸಿ ಮದುವೆಯಾಗಿದ್ದ. ಆದರೆ ಮನೆಯಲ್ಲಿ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು. ಬುಧವಾರ ಶೈಲೇಂದ್ರ ತಾಯಿಯೊಂದಿಗೆ ಜಗಳವಾಡಿದ್ದ.

    ತಾಯಿಯೊಂದಿಗೆ ನಡೆದ ಜಗಳದ ಬಳಿಕ ಶೈಲೇಂದ್ರ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ ಎಂದು ಫೇಸ್‍ಬುಕ್‍ನಲ್ಲಿ ವಿಡಿಯೋ ಅಪ್‍ಲೋಡ್ ಮಾಡಿದ್ದ. “ಕುಟುಂಬದ ಕಿರುಕುಳ, ಜಗಳದಿಂದ ಬೇಸತ್ತು ಹೋಗಿದ್ದೇನೆ. ಇನ್ನು ಮುಂದೆ ಬದುಕಲು ಸಾಧ್ಯವಿಲ್ಲ. ನನ್ನ ಬಳಿ ಉತ್ತರವಿಲ್ಲ” ಎಂದು ಶೈಲೇಂದ್ರ ವಿಡಿಯೋದಲ್ಲಿ ಹೇಳಿದ್ದ.

    ವಿಡಿಯೋ ಅಪ್‍ಲೋಡ್ ಆದ ಬಳಿಕ ಶೈಲೇಂದ್ರ ಮೊದಲು ಪತ್ನಿ ಪಿಂಕಿಗೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬೆನ್ನಲ್ಲೇ ಅಲ್ಲಿಗೆ ಬಂದ ವಿಶಾಲ್ ಕೂಡ ಗುಂಡಿಕ್ಕಿಕೊಂಡಿದ್ದಾನೆ. ಸಹೋದರರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಪಿಂಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಳು. ಹೀಗಾಗಿ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆದರೆ ಮಾರ್ಗ ಮಧ್ಯದಲ್ಲೇ ಪಿಂಕಿ ಸಾವನ್ನಪ್ಪಿದ್ದಾಳೆ.

    ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಬಂದ ಅಲಿಘರ್ ಜಿಲ್ಲೆ ಬನ್ನಾ ದೇವಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮೂವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ಆರಂಭಿಸಿದ್ದಾರೆ.