Tag: ಅಲಿಖಾನ್

  • ರೆಡ್ಡಿ ಆಪ್ತ ಅಲಿಖಾನ್‍ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ರೆಡ್ಡಿ ಆಪ್ತ ಅಲಿಖಾನ್‍ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    – ಪೊಲೀಸರ ಮುಂದೆ ಶರಣಾದ ಗಣಿಧಣಿ ಬಂಟ

    ಬೆಂಗಳೂರು: ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ  ನಿರೀಕ್ಷಣಾ ಜಾಮೀನು ಅರ್ಜಿಯನ್ನ ತಿರಸ್ಕರಿಸಲಾಗಿದ್ದು, ಇದರ ಪರಿಣಾಮ ಒಂದನೇ ಎಸಿಎಂಎಂ ನ್ಯಾಯಾಲಯದ ಮುಂದೆ ಅಲಿಖಾನ್ ಶರಣಾಗಿದ್ದಾನೆ.

    ನಗರದ 61 ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಮೂರ್ತಿ ವಿದ್ಯಾಧರ್ ಶಿರಹಟ್ಟಿ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಇತ್ತ ಅಲಿಖಾನ್ ಶರಣಾಗುತ್ತಿದಂತೆ ನ್ಯಾಯಾಲಯದ ಮುಂದೇ ಹಾಜರಾದ ಪ್ರಕರಣದ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ಅವರು ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಅವರ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳು, ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿರುವುದರಿಂದ ಪೊಲೀಸ್ ಕಸ್ಟಡಿ ಕೋರಿ ಮತ್ತೊಂದು ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದರು.

    ನ್ಯಾಯಾಲಯ 7 ದಿನಗಳ ಕಾಲ ಅಲಿಖಾನ್‍ಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ನಾಳೆ ಸಾರ್ವತ್ರಿಕ ರಜೆ ಕಾರಣ ಸಿಸಿಬಿ ಪೊಲೀಸರ ಕಸ್ಟಡಿ ಅರ್ಜಿ ಗುರುವಾರ ವಿಚಾರಣೆಗೆ ಬರಲಿದೆ. ಇದರಿಂದ ನ.27 ರ ತನಕ ಅಲಿಖಾನ್ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾನೆ. ಈ ಕುರಿತು ಒಂದನೇ ಎಸಿಎಂಎಂ ನ್ಯಾಯಮೂರ್ತಿ ಜಗದೀಶ್ ಆದೇಶ ನೀಡಿದ್ದಾರೆ.

    ಅಲಿಖಾನ್ ವಿರುದ್ಧ ಇಡಿ ಹೆಸರಿನಲ್ಲಿ ಡೀಲ್ ಮಾಡಿದ ಆರೋಪ ಮಾಡಲಾಗಿದ್ದು, 18 ಕೋಟಿ ಮೌಲ್ಯದ ಚಿನ್ನ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಆರೋಪಿಸಿದ್ದಾರೆ. ಈ ಹಿಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಅಲಿಖಾನ್ ಹಣವನ್ನು ಹಿಂದಿರುಗಿಸುವುದಾಗಿ ಹೇಳಿದ್ದ. ಅಲ್ಲದೇ ಈ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದು, ದೇವರ ಹರಕೆ ತೀರಿಸಿಲು ಪಡೆದಿದ್ದಾಗಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದ.

    ಅಲಿಖಾನ್ ಪರ ವಕೀಲ ಚಂದ್ರಶೇಖರ್ ಸೋಮವಾರ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಸಿಸಿಬಿ ಪರ ಪಿಪಿ ಶೈಲಾಜಾ ನಾಯಕ್ ವಾದ ಮಾಡಿದ್ದು, ಪ್ರಕರಣದಲ್ಲಿ ಅಲಿಖಾನ್ ಭಾಗಿಯಾಗಿರುವುದು ಕಂಡು ಬಂದಿದೆ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಅವಶ್ಯಕತೆ ಇದೆ. ಪರೋಕ್ಷವಾಗಿ ತಾನು ಭಾಗಿಯಾದ ಬಗ್ಗೆ ಅಲಿಖಾನ್ ಒಪ್ಪಿಗೆ ನೀಡಿದ್ದು, ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ನಾನು ಗೌರವಯುತವಾಗಿ ಹಣ ವಾಪಸ್ ಕೊಡುವುದಾಗಿ ಹೇಳಿದ್ದಾರೆ. ಅಲ್ಲದೇ ತಾಜ್ ಹೋಟೆಲ್ ನಲ್ಲಿ ಫರೀಧ್ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಎಲ್ಲರ ಭೇಟಿ ಸಂಶಯಾಸ್ಪದವಾಗಿದೆ ಎಂದು ವಾದ ಮಂಡಿಸಿದ್ದರು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು, ನಾಳೆ ಸಾರ್ವತ್ರಿಕ ರಜೆ ಹಿನ್ನೆಲೆ, ಗುರುವಾರ ಪೊಲೀಸ್ ಕಸ್ಟಡಿಗೆ ಪಡೆಯಲು ಸಿಸಿಬಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗುವುದು, 18 ಕೋಟಿ ರೂ. ಹಣವನ್ನ ಸ್ವಾಧೀನಕ್ಕೆ ಪಡೆಯಲು ಬಾಡಿ ವಾರೆಂಟ್ ಮೇಲೆ ಕಸ್ಟಡಿ ಪಡೆಯಲಾಗುದು ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 10 ದಿನದಲ್ಲಿ 18 ಕೋಟಿ ಹಣ ವಾಪಸ್ ಕೊಡೋದಾಗಿ ಅಲಿಖಾನ್ ಪ್ರಮಾಣಪತ್ರ!

    10 ದಿನದಲ್ಲಿ 18 ಕೋಟಿ ಹಣ ವಾಪಸ್ ಕೊಡೋದಾಗಿ ಅಲಿಖಾನ್ ಪ್ರಮಾಣಪತ್ರ!

    ಬೆಂಗಳೂರು: ಅಂಬಿಡೆಂಟ್ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ನ್ಯಾಯಾಲಯ ಜಾಮೀನು ನೀಡಿದ್ದರೆ, ಇತ್ತ ರೆಡ್ಡಿ ಆಪ್ತ ಅಲಿಖಾನ್ 18 ಕೋಟಿ ರೂ.ಗಳನ್ನು ವಾಪಸ್ ನೀಡುವುದಾಗಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದಾನೆ.

    ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿರುವ ಅಲಿಖಾನ್ ಪೂರ್ತಿ ಹಣವನ್ನು ಹಿಂದಿರುಗಿಸುತ್ತೇನೆ. ಸ್ವಲ್ಪ ಕಾಲಾವಕಾಶ ನೀಡಿ ಎಂದು ಮನವಿ ಸಲ್ಲಿಸಿದ್ದಾನೆ. ಅಲಿಖಾನ್ ಪ್ರಮಾಣ ಪತ್ರಕ್ಕೆ ಸಿಸಿಬಿ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದು, ಹಣ ನೀಡುವುದಾಗಿ ಹೇಳಿರುವ ಅಲಿಖಾನ್ ಎಷ್ಟು ದಿನಗಳಲ್ಲಿ ನೀಡುತ್ತಾರೆ ಎಂದು ತಿಳಿಸಿಲ್ಲ ಎಂದು ಹೇಳಿದ್ದರು. ಆದರೆ ಸಿಸಿಬಿ ಪೊಲೀಸರ ಅಕ್ಷೇಪದ ಬಳಿಕ 10 ದಿನಗಳಲ್ಲಿ ಹಣ ವಾಪಸ್ ನೀಡುತ್ತೇನೆ ಎಂದು ಮತ್ತೊಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

    ನ್ಯಾಯಾಲಯಕ್ಕೆ ಸಲ್ಲಿಕೆ ಆಗಿರುವ ಪ್ರಮಾಣ ಪಾತ್ರದಲ್ಲಿ ಅಲಿಖಾನ್ ನಾನು ದೇವರ ಹರಕೆ ತಿರುಸಲು ಚಿನ್ನವನ್ನು ಬಳಕೆ ಮಾಡಿಕೊಂಡಿದ್ದು, ಫರೀದ್ ಬಳಿ ಸಾಲದ ರೂಪದಲ್ಲಿ ಹಣ ಪಡೆದಿದ್ದೇನೆ. ದೇವರ ಹರಕೆ ತಿರಿಸಲು ಹಣ ಖರ್ಚು ಆಗಿದ್ದು, 10 ದಿನಗಳಲ್ಲಿ ಹಣ ಪಾವತಿ ಮಾಡುತ್ತೇನೆ ಎಂದು ತಿಳಿಸಲಾಗಿದೆ.

    ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಸಿಗುತ್ತದೆ ಎಂಬ ನಿರೀಕ್ಷೆ ಮೇಲೆ ರೆಡ್ಡಿ ಸಹೋದರ ಕರುಣಾಕರ ರೆಡ್ಡಿ ಹಾಗೂ ಆಪ್ತ ಅಲಿಖಾನ್ ಪರಪ್ಪನ ಆಗ್ರಹಾರ ಜೈಲಿನ ಬಳಿ ಆಗಮಿಸಿದ್ದಾರೆ. ಇತ್ತ ಜಾಮೀನು ಸಿಕ್ಕ ಖುಷಿ ಸಂಗತಿ ತಿಳಿಸಿದ ಜನಾರ್ದನ ರೆಡ್ಡಿ ಬೆಂಬಲಿಗರು ಜೈಲಿನ ಬಳಿ ಸಿಹಿ ಹಂಚಿಕೆ ಮಾಡಿ ಸಂಭ್ರಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಮ್ ಬಾಸ್ ಇಲ್ಲೇ ಇದ್ದಾರೆ, ನಾನ್ ಇಲ್ಲಿಂದ ಹೋಗಲ್ಲ – ಸ್ವಾಮಿ ನಿಷ್ಠೆ ಮೆರೆದ ರೆಡ್ಡಿ ಪಿಎ ಅಲಿಖಾನ್

    ನಮ್ ಬಾಸ್ ಇಲ್ಲೇ ಇದ್ದಾರೆ, ನಾನ್ ಇಲ್ಲಿಂದ ಹೋಗಲ್ಲ – ಸ್ವಾಮಿ ನಿಷ್ಠೆ ಮೆರೆದ ರೆಡ್ಡಿ ಪಿಎ ಅಲಿಖಾನ್

    ಬೆಂಗಳೂರು: ಅಂಬಿಡೆಂಟ್ ಕಂಪೆನಿ ಜೊತೆ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿರೋ ಮಾಜಿ ಗಣಿಧಣಿ ಜನಾರ್ದನ ರೆಡ್ಡಿ ಅವರ ಪಿಎ ಅಲಿಖಾನ್ ಸ್ವಾಮಿನಿಷ್ಠೆ ಮೆರೆದಿದ್ದಾರೆ.

    ರೆಡ್ಡಿ ವಿಚಾರಣೆಯಾಗುತ್ತಿದ್ದಂತೆಯೇ ಅಲಿಖಾನ್ ನನ್ನು ಮನೆಗೆ ತೆರಳುವಂತೆ ಪೊಲೀಸರು ಸೂಚಿಸಿದ್ದರು. ಈ ವೇಳೆ ಅಲಿಖಾನ್, ನಮ್ಮ ಬಾಸ್ ಇಲ್ಲೇ ಇದ್ದಾರೆ. ಹೀಗಾಗಿ ನಾನೂ ಇಲ್ಲೇ ಇರುತ್ತೀನಿ. ನಮ್ಮ ಬಾಸ್ ನ ಬಿಟ್ಟು ಹೋಗಲ್ಲ ಅಂತ ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಈ ಮೂಲಕ ಕಷ್ಟದ ವೇಳೆಯೂ ಶಿಷ್ಯ ಆಲಿಖಾನ್ ಗಣಿಧಣಿಗೆ ನಿಷ್ಠೆ ಮೆರೆದಿದ್ದಾನೆ ಎಂದು ಹೇಳಲಾಗುತ್ತಿದೆ.

    ರೆಟ್ಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಿಖಾನ್ ನನ್ನು ಶನಿವಾರ ಪೊಲೀಸರು ಬಂಧಿಸಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು. ಆದ್ರೆ ಸದ್ಯ ಅಲಿಖಾನ್ , ಜನಾರ್ದನ ರೆಡ್ಡಿ ಜೊತೆಯೇ ಸಿಸಿಬಿ ಕಚೇರಿಯಲ್ಲಿದ್ದಾನೆ.

    ಅಲಿಖಾನ್ ಅರೆಸ್ಟ್:
    ಅಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಜೊತೆ ಸಿಸಿಬಿ ಅಧಿಕಾರಿಗಳ ಬಳಿ ಆಗಮಿಸಿದ್ದ ಅಲಿಖಾನ್ ನನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಅಲಿಖಾನ್ ನನ್ನು ಶನಿವಾರ ಪೊಲೀಸರು ಬಂಧಿಸಿದ್ದರು. ಅಲಿಕಾನ್ ವಿರುದ್ಧ ನಿನ್ನೆ ಬೆಳಗ್ಗೆಯೇ ಅಕ್ರಮ ಶಸ್ತ್ರಾಸ್ತ್ರದ ಕಾಯ್ದೆಯಡಿ ಸಿಸಿಬಿ ಪೊಲೀಸರು ಪ್ರತ್ಯೇಕ ಕೇಸ್ ದಾಖಲಿಸಿದ್ದರು. ಹೀಗಾಗಿ ರೆಡ್ಡಿ ಜೊತೆ ಬಂದ ಅಲಿಖಾನ್ ನನ್ನು ಸಿಸಿಬಿ ಬಂಧಿಸಿತ್ತು. ಅಲಿಖಾನ್ ಹೊಂದಿರುವ ಶಸ್ತ್ರಾಸ್ರ ಪರವಾನಿಗೆ 2017ರಲ್ಲಿ ಅಂತ್ಯಗೊಂಡಿತ್ತು. ಪರವಾನಿಗೆಯನ್ನು ನವೀಕರಣ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಅಲಿಖಾನ್ ಬಂಧನವಾಗಿದೆ. ಅಲಿಖಾನ್ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ 5 ಜೀವಂತ ಗುಂಡುಗಳು ಪತ್ತೆಯಾಗಿದ್ದವು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಆಂಬಿಡೆಂಟ್ ಡೀಲ್ ಪ್ರಕರಣದ ಸೂತ್ರಧಾರಿ ಆಗಿರುವ ಅಲಿಖಾನ್ ಜಾಮೀನು ಸಹ ಪಡೆದುಕೊಂಡಿದ್ದ. ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಜನಾರ್ದನ ರೆಡ್ಡಿ ಜೊತೆಯಲ್ಲಿ ಅಲಿಖಾನ್ ಸಿಸಿಬಿ ಕಚೇರಿಗೆ ಆಗಮಿಸುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರೆಡ್ಡಿ ಆಪ್ತ ಅಲಿಖಾನ್ ಬಂಧನ

    ರೆಡ್ಡಿ ಆಪ್ತ ಅಲಿಖಾನ್ ಬಂಧನ

    ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಅಲಿಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಜೊತೆ ಆಗಮಿಸಿದ್ದ ಅಲಿಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ಅಲಿಕಾನ್ ವಿರುದ್ಧ ಬೆಳಗ್ಗೆಯೇ ಅಕ್ರಮ ಶಸ್ತ್ರಾಸ್ತ್ರದ ಕಾಯ್ದೆಯಡಿ ಸಿಸಿಬಿ ಪೊಲೀಸರು ಪ್ರತ್ಯೇಕ ಕೇಸ್ ದಾಖಲಿಸಿದ್ದರು. ಹೀಗಾಗಿ ಇದೀಗ ರೆಡ್ಡಿ ಜೊತೆ ಬಂದ ಅಲಿಖಾನ್ ನನ್ನು ಸಿಸಿಬಿ ಬಂಧಿಸಿದೆ ಅಂತ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಅಲಿಖಾನ್ ಹೊಂದಿರುವ ಶಸ್ತ್ರಾಸ್ರ ಪರವಾನಿಗೆ 2017ರಲ್ಲಿ ಅಂತ್ಯಗೊಂಡಿತ್ತು. ಪರವಾನಿಗೆಯನ್ನು ನವೀಕರಣ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಅಲಿಖಾನ್ ಬಂಧನವಾಗಿದೆ. ಅಲಿಖಾನ್ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ 5 ಜೀವಂತ ಗುಂಡುಗಳು ಪತ್ತೆಯಾಗಿದ್ದವು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಆಂಬಿಡೆಂಟ್ ಡೀಲ್ ಪ್ರಕರಣದ ಸೂತ್ರಧಾರಿ ಆಗಿರುವ ಅಲಿಖಾನ್ ಜಾಮೀನು ಸಹ ಪಡೆದುಕೊಂಡಿದ್ದ. ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಜನಾರ್ದನ ರೆಡ್ಡಿ ಜೊತೆಯಲ್ಲಿ ಅಲಿಖಾನ್ ಸಿಸಿಬಿ ಕಚೇರಿಗೆ ಆಗಮಿಸುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನು ಓದಿ: ಅಂಬಿಡೆಂಟ್ ಡೀಲ್ ಪ್ರಕರಣ- ಜನಾರ್ದನ ರೆಡ್ಡಿ ಮೊದಲ ಪ್ರತಿಕ್ರಿಯೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಜನಾರ್ದನ ರೆಡ್ಡಿ ರಾತ್ರೋರಾತ್ರಿ ಮೊಳಕಾಲ್ಮೂರಿನಿಂದ ಪರಾರಿಯಾಗಿದ್ದು ಹೇಗೆ? ಈಗ ಎಲ್ಲಿದ್ದಾರೆ?

    ಜನಾರ್ದನ ರೆಡ್ಡಿ ರಾತ್ರೋರಾತ್ರಿ ಮೊಳಕಾಲ್ಮೂರಿನಿಂದ ಪರಾರಿಯಾಗಿದ್ದು ಹೇಗೆ? ಈಗ ಎಲ್ಲಿದ್ದಾರೆ?

    ಬೆಂಗಳೂರು: ಅಂಬಿಡೆಂಟ್ ಚೀಟಿಂಗ್ ಕೇಸ್ ನಲ್ಲಿ ಸಿಸಿಬಿ ಪೊಲೀಸರು ತನ್ನನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಗಣಿಧಣಿ ಜನಾರ್ದನ ರೆಡ್ಡಿ ರಾತ್ರೋರಾತ್ರಿ ಕರ್ನಾಟಕವನ್ನು ತೊರೆದು ಆಂಧ್ರಕ್ಕೆ ಪರಾರಿಯಾಗಿದ್ದಾರೆ.

    ಚೀಟಿಂಗ್ ಕೇಸ್ ನಲ್ಲಿ ರೆಡ್ಡಿ ಪಾತ್ರ ಇದೆ ಎನ್ನುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಿಸಿಬಿ ಜನಾರ್ದನ ರೆಡ್ಡಿಯ ಚಲನವಲನದ ಮೇಲೆ ಕಣ್ಣಿಟ್ಟಿತ್ತು. ಈ ಮಾಹಿತಿ ಸಿಸಿಬಿಯಿಂದಲೇ ಸೋರಿಕೆಯಾಗುತ್ತಿದ್ದಂತೆ ಹಂತ ಹಂತವಾಗಿ ಜನಾರ್ದನ ರೆಡ್ಡಿ ಸ್ಥಳ ಬದಲಾವಣೆ ಮಾಡಿಕೊಳ್ಳುತ್ತಾ ಎಸ್ಕೇಪ್ ಆಗಿದ್ದಾರೆ.

    ಮೊಳಕಾಳ್ಮೂರು ತೋಟದ ಮನೆಯಿಂದ ನವೆಂಬರ್ 4ರಂದು ಕಾಲ್ಕಿತ್ತ ಜನಾರ್ದನ ರೆಡ್ಡಿ ಸಿಸಿಬಿ ತಂಡದಿಂದ ತಪ್ಪಿಸಿಕೊಳ್ಳಲು ಇಂದು ಪ್ರತಿ ಗಂಟೆಗೂ ಸ್ಥಳ ಬದಲಾವಣೆ ಮಾಡುತ್ತಿದ್ದಾರೆ.

    ರೆಡ್ಡಿ ಆಪ್ತ ಅಲಿಖಾನ್ ಅಂಬಿಡೆಂಟ್ ಚೀಟಿಂಗ್ ಪ್ರಕರಣದ ಬಗ್ಗೆ ಜನಾರ್ದನ ರೆಡ್ಡಿಗೆ ಮಾಹಿತಿ ನೀಡಲು ಬೆಂಗಳೂರಿನ ಆರ್ ಟಿ ನಗರ ನಿವಾಸದಿಂದ ಮೊಳಕಾಳ್ಮೂರು ತೋಟದ ಮನೆಗೆ ನವೆಂಬರ್ 4ರಂದು ಬಂದಿದ್ದ. ಮಧ್ಯರಾತ್ರಿಯವರೆಗೆ ಅಲ್ಲಿಯೇ ವಾಸ್ತವ್ಯ ಹೂಡಿದ್ದ. ಬಳಿಕ ಅಲ್ಲಿಂದ ಇಬ್ಬರು ಸೇರಿ ಪ್ರಯಾಣ ಬೆಳೆಸಿ ನವೆಂಬರ್ 5ಕ್ಕೆ ತಿರುಪತಿ ತಲುಪಿದ್ದಾರೆ.

    ತಿರುಪತಿಯಲ್ಲಿ ಮಧ್ಯಾಹ್ನದವರೆಗೂ ಇದ್ದು, ಅಲ್ಲಿಂದ ಹೈದರಾಬಾದ್‍ಗೆ ಪ್ರಯಾಣ ಬೆಳೆಸಿದ್ದಾರೆ. ಸುಮಾರು 550 ಕಿ.ಮೀ ಕಾರಿನಲ್ಲಿಯೇ ಪ್ರಯಾಣ ಮಾಡಿ ರಾತ್ರಿ 10 ಗಂಟೆಗೆ ಹೈದರಾಬಾದ್ ತಲುಪಿದ್ದಾರೆ. ಬಳಿಕ ಜ್ಯೂಬಿಲಿ ಹಿಲ್ಸ್‍ಗೆ ರಾತ್ರಿ 11 ಗಂಟೆಗೆ ಬಂದು ಸ್ನೇಹಿತನ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಸಿಸಿಬಿ ತಂಡದಿಂದ ವಶಕ್ಕೆ ಪಡೆಯಲು ಸಿದ್ಧತೆ ನಡೆದಿದೆ ಅಂತಾ ಸುದ್ದಿ ಗೊತ್ತಾಗುತ್ತಿದ್ದಂತೆ ಪರಾರಿಯಾಗಿದ್ದಾರೆ.

    ಹೈದ್ರಾಬಾದ್‍ನಿಂದ ಬೆಳಗ್ಗೆ ನಿರ್ಗಮನವಾಗಿದ್ದಾರೆ. ಸದ್ಯದ ಬೆಳವಣಿಗೆ ಪ್ರಕಾರ ಪ್ರತಿ ಗಂಟೆ ಗಂಟೆ ಜನಾರ್ದನ ರೆಡ್ಡಿ ಸ್ಥಳ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಹೈದ್ರಾಬಾದ್‍ನಿಂದ ವಿಜಯವಾಡ ಕಡೆ ಪ್ರಯಾಣ ಬೆಳೆಸಿ ದಾರಿ ಮಧ್ಯೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ.

    ಮೂರು ತಂಡ ರಚನೆ: ರೆಡ್ಡಿಯನ್ನು ಹುಡುಕಲು ಬೆಂಗಳೂರು ಸಿಸಿಬಿ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದು ಹೈದರಾಬಾದ್, ಬೆಂಗಳೂರು, ಬಳ್ಳಾರಿಯಲ್ಲಿ ಶೋಧ ಕಾರ್ಯ ಆರಂಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv