Tag: ಅಲರ್ಟ್

  • ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಆರ್ಭಟ- ಕರಾವಳಿಯಲ್ಲಿ 3 ದಿನ ಯೆಲ್ಲೊ ಅಲರ್ಟ್

    ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಆರ್ಭಟ- ಕರಾವಳಿಯಲ್ಲಿ 3 ದಿನ ಯೆಲ್ಲೊ ಅಲರ್ಟ್

    ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಕೂಡ ಉತ್ತಮ ಮಳೆಯಾಗಿದೆ. ಈ ಮೂಲಕ ರಾಜ್ಯದ ಹಲವೆಡೆ ವರುಣದೇವ (Rain) ತಂಪೆರೆದಿದ್ದಾನೆ.

    ಇಂದಿನಿಂದ ರಾಜ್ಯದಾದ್ಯಂತ ಮಳೆ ಪ್ರಮಾಣ ಇಳಿಕೆ ಸಾಧ್ಯತೆ ಇದೆ. ಉತ್ತರ ಒಳನಾಡಿಗೆ ಯಾವುದೇ ಅಲರ್ಟ್ ಇಲ್ಲ. ದಕ್ಷಿಣ ಒಳನಾಡಿನ ಕೊಡುಗು ಜಿಲ್ಲೆಗೆ ಆರೆಂಜ್ ಅಲರ್ಟ್ (Orange Alert) ಹಾಗೂ ಕರಾವಳಿ ಜಿಲ್ಲೆಗಳಿಗೆ ಮೂರು ದಿನ ಯಲ್ಲೋ ಅಲರ್ಟ್ (Yellow Alert) ಘೋಷಣೆ ಮಾಡಲಾಗಿದೆ. ಉಳಿದಂತೆ ಇತರೆ ಜಿಲ್ಲೆಗಳಲ್ಲಿ ಕೆಲವೆಡೆ ಮಾತ್ರ ಸಾಧಾರಣ ಮಳೆಯಾಗುವ ಸಂಭವವಿದೆ.

    ನಿನ್ನೆ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ..?: ಶಿವಮೊಗ್ಗ: 86.5 ಮಿ.ಮೀ, ಉತ್ತರ ಕನ್ನಡ: 81.5 ಮಿಮೀ, ರಾಮನಗರ: 74 ಮಿ.ಮೀ, ಚಾಮರಾಜನಗರ: 70.5 ಮಿ.ಮೀ, ರಾಯಚೂರು: 70 ಮಿ.ಮೀ, ಕೊಡಗು: 69.5 ಮಿ.ಮೀ, ದಕ್ಷಿಣ ಕನ್ನಡ: 69.5 ಮಿ.ಮೀ, ಉಡುಪಿ: 59.5 ಮಿ.ಮೀ, ಚಿಕ್ಕಮಗಳೂರು: 57 ಮಿ.ಮೀ, ಹಾವೇರಿ: 54 ಮಿ.ಮೀ, ತುಮಕೂರು: 49 ಮಿ.ಮೀ, ಚಿಕ್ಕಬಳ್ಳಾಪುರ: 47 ಮಿ.ಮೀ, ಬಳ್ಳಾರಿ: 46 ಮಿ.ಮೀ, ಮಂಡ್ಯ: 45 ಮಿ.ಮೀ, ಬೆಂಗಳೂರು ನಗರ: 44.5 ಮಿ.ಮೀ, ಮೈಸೂರು: 44 ಮಿ.ಮೀ, ಹಾಸನ: 36.5 ಮಿ.ಮೀ ಹಾಗೂ ದಾವಣಗೆರೆಯಲ್ಲಿ 34.5 ಮಿ.ಮೀ ಮಳೆಯಾಗಿದೆ.

    ಅತಿ ಹೆಚ್ಚು ಮಳೆ ಆಗಿರುವ ಸ್ಥಳಗಳು: ನೊಣಬೂರು, ಶಿವಮೊಗ್ಗ: 86.5 ಮಿ.ಮೀ, ಉತ್ತರ ಕನ್ನಡ ಜಿಲ್ಲೆಯ ಬೆಂಗ್ರೆ: 81.5ಮಿ.ಮೀ., ಹೆಬೆಲ್: 80ಮಿ.ಮೀ. & ಜಾಲಿ: 74ಮಿ.ಮೀ., ನಾಗವಾರ, ರಾಮನಗರ: 74ಮಿ.ಮೀ ಮಳೆಯಾಗಿದೆ.

    ನಿನ್ನೆ ಮಡಿಕೇರಿಯಲ್ಲಿ ಸುರಿದ ಭಾರೀ ಮಳೆಗೆ ಕುಶಾಲನಗರದ ಕೂಡ್ಲೂರಿನ ಕೆ.ಕೆ.ನಿಂಗಪ್ಪ ಬಡಾವಣೆಯಲ್ಲಿ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿದೆ. ಕುಶಾಲನಗರ ಉರ್ದು ಶಾಲಾ ಶಿಕ್ಷಕಿಯಾಗಿರುವ ಶಾಂತಲಾ ಎಂಬುವರಿಗೆ ಸೇರಿದ ಮನೆಯ ಬೆಡ್ ರೂಂ, ಅಡುಗೆ ಕೋಣೆ, ಡೈನಿಂಗ್ ರೂಂ ಗೋಡೆ ಹಾನಿಯಾಗಿದೆ. ತಡೆಗೋಡೆ ಕುಸಿದು ಮನೆಗೆ ಬಿದ್ದ ಹಿನ್ನಲೆ ಅಂದಾಜು 15 ಲಕ್ಷ ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಮಾಲೀಕರು ಒತ್ತಾಯ ಮಾಡಿದ್ದಾರೆ.

  • ಚೀನಾದಿಂದ ವಿದ್ಯಾರ್ಥಿನಿ ವಾಪಸ್ – ಮಂಡ್ಯದಲ್ಲಿ ಅಲರ್ಟ್

    ಚೀನಾದಿಂದ ವಿದ್ಯಾರ್ಥಿನಿ ವಾಪಸ್ – ಮಂಡ್ಯದಲ್ಲಿ ಅಲರ್ಟ್

    ಮಂಡ್ಯ: ಕೊರೋನಾ ವೈರಸ್ ಹಿನ್ನೆಲೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲೂ ಸಹ ಕಟ್ಟೆಚ್ಚರ ವಹಿಸಲಾಗಿದೆ. ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಂಡ್ಯ ಮೂಲದ ಯುವತಿ ತವರಿಗೆ ಬಂದಿದ್ದು, ಜಿಲ್ಲೆಯಾದ್ಯಂತ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ಕಳೆದ ಐದು ದಿನದ ಹಿಂದೆ ಚೀನಾದಿಂದ ಬಂದಿರುವ ಯುವತಿಯನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಯುವತಿಯ ರಕ್ತ ಕಣದಲ್ಲಿ ಕೊರೋನಾ ವೈರಸ್ ಬಂದಿರುವ ಯಾವುದೇ ಲಕ್ಷಣಗಳು ಗೋಚರವಾಗಿಲ್ಲ. ಈ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ.

    ಜೊತೆಗೆ ಯುವತಿಗೆ ಮನೆಯಿಂದ 15 ದಿನಗಳ ಕಾಲ ಹೊರಗಡೆ ಬಾರದಂತೆ ವೈದ್ಯರು ಸೂಚನೆ ನೀಡಿದ್ದಾರೆ. ಚೀನಾದಲ್ಲಿ ಕೊರೋನಾ ವೈರಸ್ ಬಾಧಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಐದು ದಿನಗಳ ಹಿಂದೆ ವಿದ್ಯಾರ್ಥಿನಿ ಮಂಡ್ಯಕ್ಕೆ ಮರಳಿದ್ದಾಳೆ.

    ಕೊರೋನಾ ವೈರಸ್ ಹಿನ್ನೆಲೆ ಮಂಡ್ಯ ಜಿಲ್ಲೆಯಾದ್ಯಾಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಫುಲ್ ಅಲರ್ಟ್ ಆಗಿದೆ. ಈಗಾಗಲೇ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಒಂದು ವಾರ್ಡ್ ತೆರದು ಅಲ್ಲಿ ಐದು ಹಾಸಿಗೆಗಳನ್ನು ಸಹ ಮೀಸಲಿಡಲಾಗಿದೆ. ಅಲ್ಲದೇ ಜನರಲ್ಲಿ ಈ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಬಿ. ಮಂಜೇಗೌಡ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ‘ಫಾನಿ’ ಸೈಕ್ಲೋನ್ ಎಫೆಕ್ಟ್ – ಕೇರಳದಲ್ಲಿ ಹೈ ಅಲರ್ಟ್

    ‘ಫಾನಿ’ ಸೈಕ್ಲೋನ್ ಎಫೆಕ್ಟ್ – ಕೇರಳದಲ್ಲಿ ಹೈ ಅಲರ್ಟ್

    ಬೆಂಗಳೂರು: ಹಿಂದೂ ಮಹಾಸಾಗರದ ಭಾಗ ಸೇರಿ ಬಂಗಾಳ ಕೊಲ್ಲಿಯಲ್ಲಿ (ಶ್ರೀಲಂಕಾ ಹಾಗೂ ತಮಿಳುನಾಡಿನ ಆಗ್ನೇಯ ಭಾಗದಲ್ಲಿ) ನಿರ್ಮಾಣವಾಗಿರುವ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದೆ.

    ಹವಾಮಾನ ಇಲಾಖೆ ನೀಡಿರುವ ಬುಲೆಟಿನ್ ಅನ್ವಯ ಏಪ್ರಿಲ್ 29ಕ್ಕೆ ಕೇರಳದ 4 ಜಿಲ್ಲೆಗಳಾದ ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ವಯನಾಡು ಜಿಲ್ಲೆಗಳಲ್ಲಿ ಸೈಕ್ಲೋನ್ ಪ್ರಭಾವ ಬೀರಲಿದೆ. ಏಪ್ರಿಲ್ 30ಕ್ಕೆ ಕೇರಳದ 8 ಜಿಲ್ಲೆಗಳಲ್ಲಿ ಅಂದರೆ ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ಕೊಟ್ಟಾಯಂ, ವಯನಾಡು, ಕೋಝಿಕ್ಕೋಡ್, ಪಾಲಕ್ಕಾಡ್ ಜಿಲ್ಲೆಗಳಿಗೆ ಪ್ರವೇಶ ಮಾಡುವ ಮುನ್ಸೂಚನೆ ಇರುವುದರಿಂದ ಙeಟಟoತಿ ಅಲರ್ಟ್ ಘೋಷಿಸಲಾಗಿದೆ.

    ಫಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕೇರಳದಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಿದೆ. ಮಾತ್ರವಲ್ಲದೇ ತಮಿಳುನಾಡು, ಕೇರಳ ಕರಾವಳಿಯಲ್ಲಿ ಭಾರೀ ಹಾನಿ ಸಾಧ್ಯತೆ ಇರುವುದಾಗಿ ತಿಳಿಸಿದೆ.

    ಫಾನಿ ಚಂಡಮಾರುತ ಶುರುವಾದಾಗ ಗಂಟೆಗೆ 90-115 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಕೇರಳದಲ್ಲಿ ಗಂಟೆಗೆ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಮುನ್ನೆಚ್ಚರಿಕೆ ನೀಡಲಾಗಿದೆ. ಪರಿಣಾಮ ತಮಿಳುನಾಡು, ಪುದುಚೇರಿಯಲ್ಲಿ ಭಾರೀ ಗಾಳಿ ಮಳೆಯ ಆಗುವ ಕುರಿತು ಅಂದಾಜಿಸಲಾಗಿದೆ.

    ಫಾನಿ ಚಂಡಮಾರುತದ ಬಿಸಿ ರಾಜ್ಯಕ್ಕೂ ತಟ್ಟಲಿದ್ದು, ಏ.28ರ ನಂತರ ಮೇ 2ರ ವರೆಗೂ ಹಳೆ ಮೈಸೂರು ಭಾಗದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನದಲ್ಲಿ ಚಂಡಮಾರುತ ಪರಿಣಾಮ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಇತ್ತ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಇದರಿಂದಾಗಿ ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎನ್.ಶ್ರೀನಿವಾಸರೆಡ್ಡಿ ಅವರು ತಿಳಿಸಿದ್ದರು.

    ಫಾನಿ ಚಂಡಮಾರುತ ಮೊದಲು ತಮಿಳುನಾಡಿನ ದಕ್ಷಿಣ ಭಾಗಕ್ಕೆ ಬಂದು ತಲುಪುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ದಿಕ್ಕು ಬದಲಾಯಿಸಿ, ಪೂರ್ವದ ಕಡೆಗೆ ದಿಕ್ಕು ಬದಲಿಸುವ ಅವಕಾಶ ಹೆಚ್ಚಿದೆ ಎಂದು ಹವಮಾನ ಇಲಾಖೆ ಸ್ಪಷ್ಟಪಡಿಸಿದೆ. ಚೆನ್ನೈನಿಂದ 1,340 ಕಿಲೋ ಮೀಟರ್ ದೂರದಲ್ಲಿ ಚಂಡಮಾರುತದ ಕೇಂದ್ರ ಸ್ಥಾನ ರಚನೆ ಆಗಿರುವ ಕುರಿತು ಮಾಹಿತಿ ಲಭಿಸಿದೆ.

  • ಹೆಲಿಕಾಪ್ಟರ್ ನಲ್ಲಿ ತುರ್ತಾಗಿ ತುಮಕೂರಿನತ್ತ ಸಿಎಂ – ರಾಜ್ಯಾದ್ಯಂತ ಪೊಲೀಸ್ ಹೈ ಅಲರ್ಟ್

    ಹೆಲಿಕಾಪ್ಟರ್ ನಲ್ಲಿ ತುರ್ತಾಗಿ ತುಮಕೂರಿನತ್ತ ಸಿಎಂ – ರಾಜ್ಯಾದ್ಯಂತ ಪೊಲೀಸ್ ಹೈ ಅಲರ್ಟ್

    ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೆಲಿಕಾಪ್ಟರ್ ನಲ್ಲಿ ತುರ್ತಾಗಿ ತುಮಕೂರಿನತ್ತ ತೆರಳಿದ್ದಾರೆ. ಇತ್ತ ಮುಂಜಾಗೃತ ಕ್ರಮವಾಗಿ ರಾಜ್ಯಾದ್ಯಂತ ಪೊಲೀಸ್ ಹೈ ಅಲರ್ಟ್ ಮಾಡಲಾಗಿದೆ.

    ಇಂದು ಸಿಎಂ ಕುಮಾರಸ್ವಾಮಿ ಹಿರೇಕೆರೂರು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೆ ಶ್ರೀಗಳ ಆರೋಗ್ಯ ಏರುಪೇರಿನ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದು ಮಾಡಿ ಶ್ರೀಗಳ ದರ್ಶನಕ್ಕಾಗಿ ಹೆಲಿಕಾಪ್ಟರ್ ಮೂಲಕ ತುಮಕೂರಿನ ಸಿದ್ದಗಂಗಾ ಮಠಕ್ಕೆ ಹೊರಟಿದ್ದಾರೆ. ಶ್ರೀಗಳ ಆರೋಗ್ಯದಲ್ಲಿ ಏರುಪೇರು ಸುದ್ದಿ ತಿಳಿದ ಕೂಡಲೇ ಸಿಎಂ ಕುಮಾರಸ್ವಾಮಿ ಅವರು ಮಠದ ಕಿರಿಯ ಸ್ವಾಮೀಜಿಯೊಂದಿಗೆ ಮಾತುಕತೆ ನಡೆಸಿದ್ದು, ಶ್ರೀಗಳ ಆರೋಗ್ಯ ಯಥಾಸ್ಥಿತಿ ಇದೆ. ಸದ್ಯಕ್ಕೆ ಆಂತಕಪಡುವ ಅಗತ್ಯವಿಲ್ಲ ಎಂದು ಕಿರಿಯ ಸ್ವಾಮೀಜಿಗಳು ಮಾಹಿತಿ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


    ಅಷ್ಟೇ ಅಲ್ಲದೇ ಶ್ರೀಗಳ ಆರೋಗ್ಯ ವಿಚಾರಕ್ಕಾಗಿ ಸಿದ್ದಗಂಗಾ ಮಠದೊಂದಿಗೆ ದೂರವಾಣಿ ಮೂಲಕ ನಿರಂತರ ಸಂಪರ್ಕದಲ್ಲಿದ್ದು, ಪ್ರತಿ ಗಂಟೆಗೊಮ್ಮೆ ಮಠದಿಂದ ಮಾಹಿತಿ ಪಡೆಯುತ್ತಿದ್ದಾರೆ. ಇತ್ತ ಸಿದ್ದಗಂಗಾ ಶ್ರೀಗಳ ಆರೋಗ್ಯ ಗಂಭೀರವಾದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದಶ್ರೀ ತುಮಕೂರಿಗೆ ಹೊರಟಿದ್ದಾರೆ. ಇಂದು ಬೆಂಗಳೂರಿನ ವಿಜಯನಗರ ಶಾಖಾ ಮಠದಲ್ಲಿ ಹುಣ್ಣಿಮೆ ಹಿನ್ನೆಲೆಯಲ್ಲಿ ಪೂಜೆಗೆ ಭಾಗಿಯಾಗಿದ್ದರು. ಆದರೆ ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ವಿಚಾರಿಸಲು ತುಮಕೂರಿಗೆ ತೆರಳುತ್ತಿದ್ದಾರೆ.

    ಪೊಲೀಸ್ ಭದ್ರತೆ:
    ತುಮಕೂರು, ಬೆಂಗಳೂರು, ರಾಮನಗರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಮುತ್ತಾ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಭದ್ರತೆಗೆ ಕೇಂದ್ರ ವಲಯದ 8 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

    ಸದ್ಯಕ್ಕೆ ಸಿದ್ದಗಂಗಾ ಮಠಕ್ಕೆ ಕೇಂದ್ರ ವಲಯದ ಪೊಲೀಸರು ತೆರಳುತ್ತಿದ್ದು, ತುಮಕೂರು ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗದಲ್ಲೂ ಬದಲಾವಣೆ ಮಾಡಲಾಗಿದೆ. ದಾಬಸ್‍ಪೇಟೆ, ಶಿರಾ ಕುಣಿಗಲ್ ಹೀಗೆ ಸಿದ್ದಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗದಲ್ಲಿ ಬದಲಾವಣೆ ಮಾಡಿದೆ. ಸದ್ಯಕ್ಕೆ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ವಲಯದ ಪೊಲೀಸರು ಎಲ್ಲಾ ಸಿಎಆರ್ ಮತ್ತು ಕೆಎಸ್‍ಆರ್ ಪಿಗೂ ಮಾಹಿತಿ ಕೊಟ್ಟಿದ್ದಾರೆ.

    ಇತ್ತ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುವ ವಾಹನಗಳ ರಸ್ತೆಯನ್ನ ಬದಲಾವಣೆ ಮಾಡಲಾಗಿದ್ದು, ಚಿತ್ರದುರ್ಗ, ದಾವಣಗೆರೆಯಿಂದ ಶಿರಾ ಮೂಲಕ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಿದೆ. ಕೇಂದ್ರ ವಲಯದ ಎಲ್ಲಾ ಪೊಲೀಸ್ ಸಿಬ್ಬಂದಿ ಆಯಾ ಠಾಣೆಗೆ ಬರುವಂತೆ ಸೂಚನೆ ನೀಡಲಾಗಿದೆ. ನಂತರದಲ್ಲಿ ಬೆಳವಣಿಗೆ ಸಾಧ್ಯತೆ ಇದೆ. ಸದ್ಯಕ್ಕೆ ಕೇಂದ್ರ ವಲಯ ಐಜಿ ದಯಾನಂದ ಅವರಿಂದ ಮಠದ ಆವರಣದ ಪರಿಶೀಲನೆ ನಡೆಯುತ್ತಿದೆ.

    ಮಠದ ಆವರಣದಲ್ಲೇ ಸಂಸ್ಕೃತ ಕಾಲೇಜಿನ 2ನೇ ಮಹಡಿಯಲ್ಲಿ ಪೊಲೀಸ್ ಕಂಟ್ರೋಲ್ ಗೆ ವ್ಯವಸ್ಥೆ ಮಾಡಲಾಗಿದ್ದು, ಕಂಟ್ರೋಲ್ ರೂಮ್‍ಗೆ ಐಜಿಪಿ ದಯಾನಂದ್, ಎಸ್‍ಪಿ ಕೋನವಂಶಿ ಕೃಷ್ಣ, ಎಎಸ್‍ಪಿ ಡಾ.ಶೋಭರಾಣ ಮತ್ತು ಡಿವೈಎಸ್ಪಿ ತಿಪ್ಪೇಸ್ವಾಮಿ ತೆರಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2019ರ ಆಗಮನಕ್ಕೆ ಎಂ.ಜಿ, ಬ್ರಿಗೇಡ್ ರೋಡ್ ಸುತ್ತಮುತ್ತ ಫುಲ್ ಅಲರ್ಟ್

    2019ರ ಆಗಮನಕ್ಕೆ ಎಂ.ಜಿ, ಬ್ರಿಗೇಡ್ ರೋಡ್ ಸುತ್ತಮುತ್ತ ಫುಲ್ ಅಲರ್ಟ್

    -ಪ್ರತಿ 3 ಗಂಟೆಗಳಿಗೊಮ್ಮೆ ಡಾಗ್ & ಬಾಂಬ್ ಸ್ಕ್ವಾಡ್ ತಪಾಸಣೆ

    ಬೆಂಗಳೂರು: ಹೊಸ ವರ್ಷ ಆಗಮನದ ಆಚರಣೆಯ ಹಿನ್ನೆಲೆಯಲ್ಲಿ ಎಂ.ಜಿ ರೋಡ್ ಹಾಗೂ ಬ್ರಿಗೇಡ್ ರೋಡ್ ಸುತ್ತಮುತ್ತ ಫುಲ್ ಅಲರ್ಟ್ ಆಗಿದೆ.

    ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕುಂಬ್ಳೆ ಸರ್ಕಲ್, ಕಬ್ಬನ್ ಪಾರ್ಕ್, ಯುಬಿ ಸಿಟಿ, ಲ್ಯಾವೆಲ್ಲೆ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಶ್ವಾನದಳ ಹಾಗೂ ಬಾಂಬ್ ಪತ್ತೆದಳ ತಪಾಸಣೆ ನಡೆಸಲಾಗುತ್ತದೆ.

    ಸ್ಕ್ವಾಡ್ ಎರಡು ತಂಡಗಳಾಗಿ ಪ್ರತಿಯೊಂದು ಜಾಗವನ್ನು ತಪಾಸಣೆ ಮಾಡುತ್ತಿದ್ದಾರೆ. ಮೆಟ್ರೋ ನಿಲ್ದಾಣ, ಫುಟ್ ಪಾತ್, ಪಾರ್ಕಿಂಗ್ ಸ್ಥಳಗಳಲ್ಲಿ ಫುಲ್ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೇ ಅನುಮಾನಾಸ್ಪದ ವಸ್ತು ಮತ್ತು ವ್ಯಕ್ತಿಗಳು ಕಂಡರೆ ಕೂಡಲೇ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಇಂದು ಮತ್ತು ನಾಳೆ ಎರಡೂ ದಿನ ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ನಿಂದ ತಪಾಸಣೆ ನಡೆಯುತ್ತದೆ. ಸದ್ಯ ಸ್ಕ್ವಾಡ್ ಪ್ರತಿ ಮೂರು ಗಂಟೆಗಳಿಗೊಮ್ಮೆ ತಪಾಸಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv