Tag: ಅರ್ ಅಶೋಕ್

  • ಸಿಎಂ ವಿರುದ್ಧ ಹೇಳಿಕೆ ನೀಡಿದರೆ ಶಿಸ್ತು ಕ್ರಮ: ಆರ್ ಅಶೋಕ್ ಎಚ್ಚರಿಕೆ

    ಸಿಎಂ ವಿರುದ್ಧ ಹೇಳಿಕೆ ನೀಡಿದರೆ ಶಿಸ್ತು ಕ್ರಮ: ಆರ್ ಅಶೋಕ್ ಎಚ್ಚರಿಕೆ

    ಬೆಂಗಳೂರು: ನಿಸ್ಸಂಶಯವಾಗಿ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಅವರ ಬದಲಾವಣೆ ಕೇವಲ ಊಹಾಪೋಹ. ಈ ವಿಚಾರ ಮುಗಿದು ಹೋಗಿದ್ದು, ಪಕ್ಷದ ನಾಯಕರು ಸಿಎಂ ಬದಲಾವಣೆ ಕುರಿತಂತೆ ಹೇಳಿಕೆಗಳನ್ನು ನೀಡಿದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಸಿದರು.

    ಈ ಕುರಿತಂತೆ ಮಾಹಿತಿ ನೀಡಿದ ಸಚಿವ ಆರ್ ಅಶೋಕ್, ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದ್ದು, ಮುಖ್ಯಮಂತ್ರಿಗಳು, ಪ್ರಧಾನ ಕಾರ್ಯದರ್ಶಿ ಹಾಗೂ ಮೂವರು ಹಿರಿಯ ಸಚಿವರು ಇದರಲ್ಲಿ ಇರಲಿದ್ದಾರೆ. ಈ ಸಮಿತಿಯ ಉದ್ದೇಶವೇ ಊಹಾಪೋಹದ ಸುದ್ದಿಗಳಿಗೆ ಕಡಿವಾಣ ಹಾಕುವುದಾಗಿದೆ. ಅದು ಪರವಾದರೂ ಆಗಿರಬಹುದು ಅಥವಾ ವಿರುದ್ಧವಾದರೂ ಇರಬಹುದು. ಈ ಶಿಸ್ತನ್ನು ಉಲ್ಲಂಘಿಸಿದ್ದೇ ಆದಲ್ಲಿ ಅಂಥವರ ವಿರುದ್ಧ ಪಕ್ಷ ಗಂಭೀರ ಕ್ರಮ ಜರುಗಿಸಲಿದೆ ಎಂದು ಹೇಳಿದರು.

    ಸಿಎಂ ಬದಲಾವಣೆ ವಿಚಾರಕ್ಕೆ ಫುಲ್ ಸ್ಟಾಪ್ ಹಾಕಲಾಗಿದೆ ಎಂದು ನಾನು ಭಾನುವಾರವೇ ಸ್ಪಷ್ಟಪಡಿಸಿದ್ದೇನೆ. ಯಡಿಯೂರಪ್ಪನವರೇ ನಮ್ಮ ನಾಯಕರಾಗಿದ್ದು, ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮುಂಗಾರು ಪ್ರವಾಹ ಪೂರ್ವ ಸಿದ್ಧತೆ: ಕಂದಾಯ ಸಚಿವ ಅಶೋಕ್ ಸಭೆ

    ಈ ವೇಳೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಹಾಗೂ ಸದಸ್ಯರು ಕಾವೇರಿಯಲ್ಲಿ ಅಸ್ಥಿ ವಿಸರ್ಜನೆಯ ಕಾರ್ಯ ಕೈಗೊಂಡ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

  • ಗೌರಿ ಹತ್ಯೆ ಕೇಸ್ ಮುಚ್ಚಿ ಹಾಕೋಕೆ ಸ್ಕೆಚ್- ಸರ್ಕಾರದ ವಿರುದ್ಧ ಬಿಜೆಪಿ ಕೆಂಡಾಮಂಡಲ

    ಗೌರಿ ಹತ್ಯೆ ಕೇಸ್ ಮುಚ್ಚಿ ಹಾಕೋಕೆ ಸ್ಕೆಚ್- ಸರ್ಕಾರದ ವಿರುದ್ಧ ಬಿಜೆಪಿ ಕೆಂಡಾಮಂಡಲ

    ಬೆಂಗಳೂರು: ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಬಂಧಿಸೋ ಮೂಲಕ ಗೌರಿ ಲಂಕೇಶ್ ಹತ್ಯೆ ಕೇಸ್‍ನಿಂದ ಜನರನ್ನು ದಿಕ್ಕು ತಪ್ಪಿಸಲು ಸರ್ಕಾರ ಯತ್ನಿಸುತ್ತಿದೆ ಅಂತಾ ಬಿಜೆಪಿ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

    ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ನೇಮಕಗೊಂಡಿರುವ ಎಸ್‍ಐಟಿ ಕೆಲಸವೇ ಮಾಡುತ್ತಿಲ್ಲ. ಎಸ್‍ಐಟಿ ತಂಡ ಗಣೇಶನ ಮಾಡಿ ಅಂದ್ರೆ ಅವರ ಅಪ್ಪನನ್ನು ಮಾಡ್ತಿದೆ. ಬೆಳಗೆರೆ ಸುಪಾರಿ ಪ್ರಕರಣವನ್ನು ದೊಡ್ಡದು ಮಾಡಲು ಹೊರಟಿದೆ. ಆದ್ರೆ ಗೌರಿ ಕೇಸೇ ಬೇರೆ. ಹಂತಕರ ಬಗ್ಗೆ ಯಾವುದೇ ಸುಳಿವು ಅವರಿಗೆ ಸಿಕ್ಕಿಲ್ಲ. ಜನರ ಮನಸ್ಸನ್ನು ಬೇರೆ ಕಡೆ ತಿರುಗಿಸಲು ರವಿ ಬೆಳೆಗೆರೆ ಪ್ರಕರಣವನ್ನು ಅದಕ್ಕೆ ಲಿಂಕ್ ಮಾಡುತ್ತಿದ್ದಾರೆ. ರವಿ ಬೆಳೆಗೆರೆ ಸುಪಾರಿ ಪ್ರಕರಣ ತನಿಖೆಗೆ ಬೇರೆ ಪೊಲೀಸ್ ವಿಭಾಗಗಳಿವೆ. ಎಸ್‍ಐಟಿ ತನಗೆ ವಹಿಸಿದ ಮೂಲ ಕರ್ತವ್ಯವನ್ನೇ ಮೆರೆತು ಬೇರೆ ಮಾಡಲು ಹೊರಟಿದೆ ಅಂತ ಅಂತ ಕಿಡಿಕಾರಿದ್ರು.

    ಗೌರಿ ಹಂತಕರ ಬಗ್ಗೆ ಯಾವುದೇ ಸುಳಿವು ಅವರಿಗೆ ಸಿಕ್ಕಿಲ್ಲ. ಆದ್ರೆ ವಹಿಸಿದ ಮೂಲ ಕರ್ತವ್ಯವನ್ನು ಬಿಟ್ಟು ಬೆಳಗೆರೆ ಕೇಸ್ ಹಿಂದೆ ಬಿದ್ದಿದೆ. ಒಟ್ಟಿನಲ್ಲಿ ವಿಷಯಾಂತರ ಮಾಡಲು ಸರ್ಕಾರ ಹೊರಟಿದೆ ಅಂತಾ ಸಿಡಿಮಿಡಿಗೊಂಡಿದ್ದಾರೆ.

    ಪೊಲೀಸ್ ಇಲಾಖೆ ಯಾರ ಹಿಡಿತದಲ್ಲಿ ಇದೆ ಅನ್ನೋದೆ ಗೊತ್ತಾಗ್ತಿಲ್ಲ. ಕೆಂಪಯ್ಯ ಹಿಡಿತದಲ್ಲೇ ಪೊಲೀಸ್ ಇಲಾಖೆ ಇದೆ. ರಾಮಲಿಂಗಾರೆಡ್ಡಿ ಕೂಡ ಬೇರೆ ಗೃಹ ಸಚಿವರಂತೆ ಕೆಂಪಯ್ಯ ಕೆಳಗೆ ಕಾರ್ಯನಿರ್ವಹಿಸ್ತಿದ್ದಾರೆ. ಗೌರಿ ಹತ್ಯೆ ಹಂತಕರನ್ನ ಹಿಡಿದೇ ಬಿಡ್ತೀವಿ ಅಂತಾ ಸುಮ್ನೆ ಹೇಳ್ತಿದ್ದಾರೆ ಅಷ್ಟೇ ಅಂತ ಅವರು ಆರೋಪಿಸಿದ್ದಾರೆ.