Tag: ಅರ್ಶ್‌ದೀಪ್‌ ಸಿಂಗ್‌

  • ನೋಬಾಲ್ ಎಸೆಯುವುದು ಅಪರಾಧ – ಅರ್ಶ್‍ದೀಪ್ ಸಿಂಗ್ ತಪ್ಪಿಗೆ ಚಾಟಿ ಬೀಸಿದ ಪಾಂಡ್ಯ

    ನೋಬಾಲ್ ಎಸೆಯುವುದು ಅಪರಾಧ – ಅರ್ಶ್‍ದೀಪ್ ಸಿಂಗ್ ತಪ್ಪಿಗೆ ಚಾಟಿ ಬೀಸಿದ ಪಾಂಡ್ಯ

    ಪುಣೆ: ಕ್ರಿಕೆಟ್‍ನಲ್ಲಿ ನೋಬಾಲ್ (No-Ball) ಎಸೆಯುವುದು ಅಪರಾಧ. ಆದರೆ ಅರ್ಶ್‍ದೀಪ್ ಸಿಂಗ್ (Arshdeep Singh) ಮಾಡಿದ ತಪ್ಪನ್ನು ತಿದ್ದಿಕೊಂಡು ಮುಂದುವರಿಯಬೇಕು ಎಂದು ಟೀಂ ಇಂಡಿಯಾ (Team India) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) 2ನೇ ಟಿ20 ಪಂದ್ಯದಲ್ಲಿ 5 ನೋ ಬಾಲ್ ಎಸೆದ ವೇಗಿ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

    ಶ್ರೀಲಂಕಾ (Sri Lanka) ವಿರುದ್ಧ ಗುರುವಾರ ಪುಣೆಯಲ್ಲಿ ನಡೆದ 2ನೇ ಟಿ20 (T20I) ಪಂದ್ಯದಲ್ಲಿ ಕೇವಲ 2 ಓವರ್ ಎಸೆದ ವೇಗಿ ಅರ್ಶ್‍ದೀಪ್ ಸಿಂಗ್ ಬರೋಬ್ಬರಿ 37 ರನ್ ನೀಡಿ ದುಬಾರಿ ಎನಿಸಿಕೊಂಡರು. ಜೊತೆಗೆ 5 ನೋಬಾಲ್ ಎಸೆದು ಟೀಕೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ, ನಮಗೆ ಒಳ್ಳೆಯ ದಿನ, ಕೆಟ್ಟ ದಿನ ಇರಬಹುದು ಆದರೆ ನಾವು ಅದನ್ನು ಸಹಿಸಿಕೊಂಡು ಮುಂದುವರಿಯಬೇಕು. ಅರ್ಶ್‍ದೀಪ್ ಎಸೆದ ನೋಬಾಲ್ ಫಲಿತಾಂಶದ ಮೇಲೆ ಹೊಡೆತ ನೀಡಿದೆ. ನೋಬಾಲ್ ಯಾವುದೇ ಮಾದರಿ ಕ್ರಿಕೆಟ್‍ನಲ್ಲೂ ಅಪರಾಧ. ನಾವು ಪವರ್‌ಪ್ಲೇನಲ್ಲಿ ಮಾಡಿದ ತಪ್ಪಿನಿಂದ ಪಂದ್ಯ ಸೋತಿದ್ದೇವೆ. ಇದನ್ನು ಸರಿಪಡಿಸಿಕೊಂಡು ಮುಂದಿನ ಪಂದ್ಯವಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳ ಸುರಿಮಳೆ ಆಟ – ಆರಂಭದಲ್ಲಿ ಹಿನ್ನಡೆಯಾದ್ರೂ ಹೋರಾಡಿ ಸೋತ ಭಾರತ

    ಅನಗತ್ಯ ದಾಖಲೆ ಬರೆದ ಅರ್ಶ್‌ದೀಪ್‌:
    ಗಾಯದ ಸಮಸ್ಯೆಯಿಂದಾಗಿ ಮೊದಲ ಟಿ20 ಪಂದ್ಯದಿಂದ ಹೊರಗುಳಿದಿದ್ದ ಅರ್ಶ್‍ದೀಪ್ ಸಿಂಗ್ 2ನೇ ಪಂದ್ಯದಲ್ಲಿ ಭಾರೀ ನಿರಾಸೆ ಅನುಭವಿಸಿದ್ದಾರೆ. ಕೇವಲ 2 ಓವರ್‌ಗಳ ಬೌಲಿಂಗ್ ಮಾಡಿದ ಅರ್ಶ್‍ದೀಪ್ ಬರೊಬ್ಬರಿ 37 ರನ್ ಚಚ್ಚಿಸಿಕೊಂಡರು. 18.50 ಎಕಾನಮಿಯಲ್ಲಿ ಬೌಲಿಂಗ್ ನಡೆಸಿ ಹಿನ್ನಡೆ ಅನುಭವಿಸಿದ್ದು ಮಾತ್ರವಲ್ಲದೇ ಒಂದೇ ಪಂದ್ಯದಲ್ಲಿ 5 ನೋಬಾಲ್ ಎಸೆದು ಕೆಟ್ಟದಾಖಲೆ ಬರೆದರು. ಇದನ್ನೂ ಓದಿ: ಏಕದಿನ ಮಾದರಿಯಲ್ಲಿ ಏಷ್ಯಾಕಪ್ 2023 – ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಭಾರತ-ಪಾಕ್

    207 ರನ್ ಗಳ ಬೃಹತ್ ಗುರಿ ಪಡೆದ ಭಾರತ ಸೂರ್ಯಕುಮಾರ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನಡುವೆಯೂ ಸೋಲನುಭವಿಸಿದೆ. ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡು ಕಂಗೆಟ್ಟಿದ್ದ ವೇಳೆ ಒಂದಾದ ಸೂರ್ಯ-ಅಕ್ಷರ್ ಜೋಡಿ 6ನೇ ವಿಕೆಟ್‍ಗೆ 91 ರನ್ (40 ಎಸೆತ) ಜೊತೆಯಾಟವಾಡಿ ಗೆಲುವಿನ ಆಸೆ ಚಿಗುರಿಸಿದರು. ಆ ಬಳಿಕ ವಿಕೆಟ್ ಕೈಚೆಲ್ಲಿಕೊಂಡು ಅಂತಿಮವಾಗಿ ಭಾರತ ಸೋಲು ಕಂಡಿತು. ಶ್ರೀಲಂಕಾ 16 ರನ್‍ಗಳ ಅಂತರದ ಜಯದೊಂದಿಗೆ ಸರಣಿಯನ್ನು 1-1 ಸಮಬಲಗೊಳಿಸಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಂಡೋ-ಪಾಕ್‌ ಕದನ – ಭಾರತಕ್ಕೆ 160 ರನ್‌ಗಳ ಗುರಿ

    ಇಂಡೋ-ಪಾಕ್‌ ಕದನ – ಭಾರತಕ್ಕೆ 160 ರನ್‌ಗಳ ಗುರಿ

    ಮೆಲ್ಬರ್ನ್‌: ಟೀಂ ಇಂಡಿಯಾದ (Team India) ಸಂಘಟಿತ ಬೌಲಿಂಗ್‌ ಪ್ರದರ್ಶನದ ಹೊರತಾಗಿಯೂ ಅಬ್ಬರಿಸಿದ ಪಾಕಿಸ್ತಾನ (Pakistan) ಭಾರತಕ್ಕೆ 160 ರನ್‌ಗಳ ಗುರಿ ನೀಡಿದೆ.

    ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ (T20 World Cup) ಪಂದ್ಯದಲ್ಲಿ ಭಾರತದ ವಿರುದ್ಧ ಸೆಣಸಿದ ಪಾಕಿಸ್ತಾನ ಶಾನ್‌ ಮಸೂದ್‌ (Shan Masood) ಹಾಗೂ ಇಫ್ತಿಖರ್‌ ಅಹ್ಮದ್‌ (Iftikhar Ahmed) ಅರ್ಧ ಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿ ಟೀಂ ಇಂಡಿಯಾಕ್ಕೆ 160 ರನ್‌ಗಳ ಗುರಿ ನೀಡಿದೆ.

    ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಪಾಕಿಸ್ತಾನಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಬಾಬರ್‌ ಆಜಂ (Babar Azam) ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ರಿಜ್ವಾನ್‌ ಅಲ್ಪ ಮೊತ್ತಕ್ಕೆ ನಿರ್ಗಮಿಸಿದರು. ಅರ್ಶ್‌ದೀಪ್‌ ಸಿಂಗ್‌ ಅವರ ಒಂದೇ ಎಸೆತದಲ್ಲಿ ಬಾಬರ್‌ ಆಜಂಗೆ ಪೆವಿಲಿಯನ್‌ ದಾರಿ ತೋರಿದರು. ಇನ್ನೂ ಭರವಸೆಯ ಅಟಗಾರ ಮೊಹಮ್ಮದ್‌ ರಿಜ್ವಾನ್‌ 12 ಎಸತೆಗಳಲ್ಲಿ ಕೇವಲ 4 ರನ್‌ಗಳಿಸಿ ಅರ್ಶ್‌ದೀಪ್‌ಗೆ ವಿಕೆಟ್‌ ಒಪ್ಪಿಸಿದರು.

    ಶಾನ್‌ ಮಸೂದ್‌, ಇಫ್ತಿಖರ್‌ ಅರ್ಧಶತಕಗಳ ಆಟ:
    ಮೂರು ಮತ್ತು 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಶಾನ್‌ ಮಸೂದ್‌ ಹಾಗೂ ಇಫ್ತಿಖರ್‌ ಫಿಕರ್‌ ಅಹ್ಮದ್‌ ಸಾಂಘಿಕ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಭರ್ಜರಿ ಬೌಂಡರಿ ಸಿಕ್ಸರ್‌ಗಳ ಆಟದಿಂದ ಇವರಿಬ್ಬರ ಜೊತೆಯಾಟದಲ್ಲಿ ತಂಡಕ್ಕೆ 50 ಎಸೆತಗಳಲ್ಲಿ 76 ರನ್‌ಗಳು ಸೇರ್ಪಡೆಯಾಯಿತು. ಭರ್ಜರಿ ಸಿಕ್ಸ್‌ ಬಾರಿಸಿದ ಇಫ್ತಿಖರ್‌ 34 ಎಸೆತಗಳಲ್ಲಿ ಆಕರ್ಷಕ 51 ರನ್‌ (4 ಸಿಕ್ಸರ್‌, 2 ಬೌಂಡರಿ) ಗಳಿಸಿ ಮಿಂಚಿದರು. ಈ ವೇಳೆ ಇಫ್ತಿಖರ್‌ ಆಟಕ್ಕೆ ಶಮಿ ಬ್ರೇಕ್‌ ಹಾಕಿದರು. ಆ ನಂತರವೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಮಸೂದ್‌ 42 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 52 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು.

    ನಂತರದಲ್ಲಿ ಕ್ರೀಸ್‌ಗಿಳಿಸಿದ ಶಹದಾಬ್‌ ಖಾನ್‌ 5 ರನ್‌, ಹೈದರ್‌ ಅಲಿ 2 ರನ್‌, ಮೊಹಮ್ಮದ್‌ ನವಾಜ್‌ 9 ರನ್‌, ಅಸಿಫ್‌ ಅಲಿ 2 ರನ್‌ ಹಾಗೂ ಶಾಹೀನ್ ಶಾ ಆಫ್ರಿದಿ 16 ರನ್‌ ಗಳಿಸಿದರೆ ಹ್ಯಾರಿಸ್‌ ರಫ್‌ 6 ರನ್‌ಗಳಿಸಿ ಅಜೇಯರಾಗುಳಿದರು.

    ಪಾಂಡ್ಯ, ಅರ್ಶ್‌ದೀಪ್‌ ಬೌಲಿಂಗ್‌ ಮಿಂಚು: ಪಾಕ್‌ ತಂಡದ ಎದುರು ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ಹಾರ್ದಿಕ್‌ ಪಾಂಡ್ಯ 4 ಓವರ್‌ಗಳಲ್ಲಿ 30 ರನ್‌ ನೀಡಿ 3 ವಿಕೆಟ್‌ ಕಬಳಿಸಿದರೇ 32 ರನ್‌ ನೀಡಿದ ಅರ್ಶ್‌ದೀಪ್‌ ಸಿಂಗ್‌ 3 ವಿಕೆಟ್‌ ಪಡೆದು ಮಿಂಚಿದರು. 4 ಓವರ್‌ಗಳಲ್ಲಿ 25 ರನ್‌ ನೀಡಿದ ವೇಗಿ ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌ 22 ರನ್‌ ನೀಡಿ ತಲಾ ಒಂದೊಂದು ವಿಕೆಟ್‌ ಪಡೆದರು.

    Live Tv
    [brid partner=56869869 player=32851 video=960834 autoplay=true]

  • ಅರ್ಶ್‌ದೀಪ್‌ ಸಿಂಗ್ ಬೆಂಬಲಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

    ಅರ್ಶ್‌ದೀಪ್‌ ಸಿಂಗ್ ಬೆಂಬಲಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

    ದುಬೈ: ಟೀಂ ಇಂಡಿಯಾ ಆಟಗಾರ ಅರ್ಶ್‌ದೀಪ್‌ ಸಿಂಗ್ ಅವರನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಬೆಂಬಲಿಸಿದ್ದಾರೆ.

    ಏಷ್ಯಾಕಪ್‌ನ ಸೂಪರ್ ಫೋರ್ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಭಾನುವಾರ ಹಣಾಹಣಿ ನಡೆಯಿತು. ಈ ಪಂದ್ಯದ 18ನೇ ಓವರ್‌ನಲ್ಲಿ ಎಡಗೈ ವೇಗಿ ಬೌಲರ್ ಅರ್ಶ್‌ದೀಪ್‌ ಸಿಂಗ್ ಒತ್ತಡದ ಸಮಯದಲ್ಲಿ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು.

    ಇದರಿಂದ ಭಾರೀ ಟಿಕೆಗಳು ವ್ಯಕ್ತವಾಯಿತು. ಅಲ್ಲದೇ ಅರ್ಶ್‌ದೀಪ್‌ ಅವರ ಪುಟದಲ್ಲಿ ಖಲಿಸ್ತಾನ ಆಟಗಾರ ಎಂದು ಎಡಿಟ್ ಮಾಡಲಾಗಿತ್ತು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆ ಆಗುತ್ತಿದ್ದಂತೆ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಸಚಿವಾಲಯ ವಿಕಿಪೀಡಿಯಾದ ಭಾರತದ ಪ್ರತಿನಿಧಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನೂ ಓದಿ: ಸುಷ್ಮಿತಾ ಸೇನ್ ಜೊತೆ ಬ್ರೇಕ್ ಅಪ್ ಘೋಷಿಸಿಕೊಂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ

    ಅನೇಕ ಕಡೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಭಾರತೀಯ ಹಿರಿಯ ಹಾಗೂ ಮಾಜಿ ಕ್ರಿಕೆಟಿಗರು ಅರ್ಶ್‌ದೀಪ್‌ ಸಿಂಗ್ ಬೆಂಬಲಕ್ಕೆ ನಿಂತರು. ಈ ಬೆನ್ನಲ್ಲೇ ಇಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಸಹ ಅರ್ಶ್‌ದೀಪ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರನ್ನು ಅವಮಾನಿಸದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್‌ನ ಆ ಆಟ ಅಗತ್ಯವಿರಲಿಲ್ಲ – ಗೌತಮ್ ಗಂಭೀರ್ ಅಸಮಾಧಾನ

    ಈ ಕುರಿತು ಟ್ವೀಟ್ ಮಾಡಿರುವ ಮೊಹಮ್ಮದ್ ಹಫೀಜ್, ಎಲ್ಲಾ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ನನ್ನ ವಿನಂತಿ ಏನೆಂದರೆ ನಾವು ಕ್ರೀಡೆಯಲ್ಲಿ ಮನುಷ್ಯರಾಗಿ ಸಹಜ ತಪ್ಪುಗಳನ್ನು ಮಾಡುತ್ತೇವೆ. ಆದರೆ ದಯವಿಟ್ಟು ಈ ತಪ್ಪುಗಳಿಂದ ಯಾರನ್ನೂ ಅವಮಾನಿಸಬೇಡಿ ಎಂದು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರ್ಶ್‌ದೀಪ್‌ ಟೀಕಿಸುವ ಬದಲು ಧೈರ್ಯ ತುಂಬಿ – ಮುಂದಿನ ಭಾನುವಾರಕ್ಕೆ ಸಜ್ಜಾಗಿ: ಮಾಜಿ ಆಟಗಾರರ ಸಲಹೆ

    ಅರ್ಶ್‌ದೀಪ್‌ ಟೀಕಿಸುವ ಬದಲು ಧೈರ್ಯ ತುಂಬಿ – ಮುಂದಿನ ಭಾನುವಾರಕ್ಕೆ ಸಜ್ಜಾಗಿ: ಮಾಜಿ ಆಟಗಾರರ ಸಲಹೆ

    ದುಬೈ: ಏಷ್ಯಾಕಪ್‍ನ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೆಜ್ ಪಂದ್ಯ ನಿನ್ನೆ ನಡೆಯಿತು. ಈ ಪಂದ್ಯದಲ್ಲಿ ಭಾರತೀಯ ಆಟಗಾರ ಅರ್ಶ್‌ದೀಪ್‌ ಸಿಂಗ್‌ ಒತ್ತಡದ ಸಮಯದಲ್ಲಿ ಬಿಟ್ಟ ಕ್ಯಾಚ್ ಒಂದಕ್ಕೆ ಟೀಕೆಗಳು ಕೇಳಿ ಬರುತ್ತಿದೆ. ಟೀಕೆಗಳ ನಡುವೆ ಮಾಜಿ ಆಟಗಾರರು ಅರ್ಶ್‌ದೀಪ್‌ ಸಿಂಗ್‌ ಬೆಂಬಲಕ್ಕೆ ನಿಂತಿದ್ದಾರೆ.

    ಭಾರತ ನೀಡಿದ 182 ರನ್ ಚೇಸ್ ಮಾಡುತ್ತಿದ್ದಾಗ ಪಾಕಿಸ್ತಾನ 18ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಅವರ ಬೌಲಿಂಗೆ ಸುಲಭವಾಗಿ ನೀಡಿದ ಆಸಿಫ್ ಅಲಿ ಕ್ಯಾಚ್ ಅನ್ನು ಅರ್ಶ್‌ದೀಪ್‌ ಸಿಂಗ್‌ ಕೈಚೆಲ್ಲಿದರು. ಇದು ಪಾಕ್ ಗೆಲುವಿಗೆ ತಿರುವು ನೀಡಿತು. ಕೊನೆಯ ಓವರ್‌ನಲ್ಲಿ ಬೌಲಿಂಗ್‍ಗಿಳಿದ ಅರ್ಶ್‌ದೀಪ್‌ ಸಿಂಗ್‌ ಅವರ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಆದರೆ 2ನೇ ಎಸೆತದಲ್ಲಿ ಫುಲ್‍ಟಾಸ್ ಬೌಲ್ ಮಾಡಿ 4 ರನ್ ಚಚ್ಚಿಸಿಕೊಂಡರು. ಅದರ ಮರು ಎಸೆತದಲ್ಲೇ ಅಸಿಫ್ ಅಲಿ ಅವರ ವಿಕೆಟ್ ಉರುಳಿಸಿದರೂ ಜಯ ಪಾಕಿಸ್ತಾನದ ಪಾಲಾಯಿತು. ಅಂತಿಮವಾಗಿ ಪಾಕಿಸ್ತಾನ 5 ವಿಕೆಟ್‍ಗಳ ಜಯ ಸಾಧಿಸಿತು. ಇದನ್ನೂ ಓದಿ: ತಪ್ಪುಗಳು ಆಗಬಹುದು, ಅದರಿಂದ ಕಲಿಯುವುದು ಬಹಳ ಮುಖ್ಯ – ಅರ್ಶ್‌ದೀಪ್‌ ಬೆಂಬಲಿಸಿದ ಕಿಂಗ್ ಕೊಹ್ಲಿ

    ಆ ಬಳಿಕ ಆಸಿಫ್ ಅಲಿ ಕ್ಯಾಚ್ ಅನ್ನು ಅರ್ಶ್‌ದೀಪ್‌ ಸಿಂಗ್‌ ಕೈಚೆಲ್ಲಿದ ಬಗ್ಗೆ ತೀವ್ರ ಟೀಕೆಗಳು ಕೇಳಿ ಬರುತ್ತಿದೆ. ಆದರೆ ಮಾಜಿ ಆಟಗಾರರಾದ ಯುವರಾಜ್ ಸಿಂಗ್, ಇರ್ಫಾನ್ ಪಠಾಣ್ ಸೇರಿದಂತೆ ಹಲವು ಆಟಗಾರರು ಹರ್ಷದೀಪ್ ಸಿಂಗ್ ಬೆಂಬಲಕ್ಕೆ ನಿಂತಿದ್ದಾರೆ. ಟೀಂ ಇಂಡಿಯಾದ ಸಹಆಟಗಾರರು ಅರ್ಶ್‌ದೀಪ್‌ ಸಿಂಗ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅರ್ಶ್‌ದೀಪ್‌ ಪೇಜ್‌ ಎಡಿಟ್‌ – ವಿಕಿಪೀಡಿಯಾಗೆ ಸಮನ್ಸ್‌ ಜಾರಿ ಮಾಡಿದ ಕೇಂದ್ರ

    ಅರ್ಶ್‌ದೀಪ್‌ ಕುರಿತಾಗಿ ಟ್ವೀಟ್ ಮಾಡಿರುವ ಯುವರಾಜ್ ಸಿಂಗ್, ಭಾರತ ಹಾಗೂ ಪಾಕ್ ಪಂದ್ಯದ ಸಮಯದಲ್ಲಿ ನೀವು ನಿಮ್ಮ ಸೀಟಿನ ತುದಿಯಲ್ಲಿದ್ದರೆ, ಮೈದಾನದಲ್ಲಿ ಆಟಗಾರರ ಮೇಲಿನ ಒತ್ತಡವನ್ನು ಊಹಿಸಿ! ಒಂದು ಕೈಬಿಟ್ಟ ಕ್ಯಾಚ್ ಸಾಮರ್ಥ್ಯವನ್ನು ವ್ಯಾಖ್ಯಾನಿಸುವುದಿಲ್ಲ. ನಾವು ಕ್ರಿಕೆಟ್ ಪ್ರೀತಿಸುವ ರಾಷ್ಟ್ರದವರಾಗಿ ಒಂದಾಗಬೇಕು ಮತ್ತು ಯುವಕರನ್ನು ಟೀಕಿಸುವ ಬದಲು ಬೆಂಬಲಿಸಬೇಕು. ಹರ್ಷದೀಪ್ ಸಿಂಗ್ ನೀವು ಮತ್ತಷ್ಟು ಬಲಿಷ್ಠರಾಗಿ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಇರ್ಫಾನ್ ಪಠಾಣ್ ಟ್ವೀಟ್ ಮಾಡಿ ಅರ್ಶ್‌ದೀಪ್‌ ಸಿಂಗ್‌ ದೃಢ ವ್ಯಕ್ತಿತ್ವದ ಯುವಕ ಅವರಿಗೆ ಬೆಂಬಲ ನೀಡಿ ಮುಂದಿನ ಭಾನುವಾರಕ್ಕೆ ಸಜ್ಜಾಗಿ ಎಂದಿದ್ದಾರೆ.

    ಈಗಾಗಲೇ ಲೀಗ್‍ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೆ, ಸೂಪರ್ ಫೋರ್ ಹಂತದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆದ್ದಿದೆ. ಏಷ್ಯಾಕಪ್‍ನಲ್ಲಿ ಅಂದುಕೊಂಡಂತೆ ನಡೆದರೆ ಎರಡು ತಂಡಗಳು ಫೈನಲ್‍ಗೆ ಲಗ್ಗೆ ಇಟ್ಟರೆ ಸೆಪ್ಟೆಂಬರ್ 11 ಭಾನುವಾರದಂದು ಮತ್ತೆ ಕಾದಾಟ ನಡೆಸಲಿದೆ. ಹೌದು ಸೂಪರ್ ಫೋರ್ ಹಂತದಲ್ಲಿ 4 ತಂಡಗಳು ಪರಸ್ಪರ ಕಾದಾಟ ನಡೆಸುತ್ತಿವೆ. ಇದರಲ್ಲಿ ಹೆಚ್ಚು ಪಂದ್ಯ ಗೆದ್ದ ಎರಡು ತಂಡಗಳು ಫೈನಲ್‍ಗೆ ಲಗ್ಗೆ ಇಡಲಿದೆ. ಭಾರತ ಇನ್ನುಳಿದ ಎರಡು ಪಂದ್ಯ ಗೆದ್ದರೆ ಫೈನಲ್‍ಗೆ ಲಗ್ಗೆ ಇಡಲಿದೆ. ಇತ್ತ ಪಾಕಿಸ್ತಾನ ತಂಡದ ಫೈನಲ್ ಹಾದಿ ನಿನ್ನೆಯ ಗೆಲುವಿನ ಬಳಿಕ ಸುಗಮವಾಗಿದ್ದು, ಫೈನಲ್‍ನಲ್ಲಿ ಮತ್ತೊಮ್ಮೆ ಭಾರತವನ್ನು ಎದುರಿಸುವ ಸಾಧ್ಯತೆ ಹೆಚ್ಚಿದೆ.

    Live Tv
    [brid partner=56869869 player=32851 video=960834 autoplay=true]

  • ತಪ್ಪುಗಳು ಆಗಬಹುದು, ಅದರಿಂದ ಕಲಿಯುವುದು ಬಹಳ ಮುಖ್ಯ – ಅರ್ಶ್‌ದೀಪ್‌ ಬೆಂಬಲಿಸಿದ ಕಿಂಗ್ ಕೊಹ್ಲಿ

    ತಪ್ಪುಗಳು ಆಗಬಹುದು, ಅದರಿಂದ ಕಲಿಯುವುದು ಬಹಳ ಮುಖ್ಯ – ಅರ್ಶ್‌ದೀಪ್‌ ಬೆಂಬಲಿಸಿದ ಕಿಂಗ್ ಕೊಹ್ಲಿ

    ದುಬೈ: ಏಷ್ಯಾಕಪ್ ಟೂರ್ನಿಯ ಸೂಪರ್ ಫೋರ್ ಲೀಗ್‌ನಲ್ಲಿ ನಿನ್ನೆ ಭಾರತ ಮತ್ತು ಪಾಕಿಸ್ತಾನ ಸೆಣಸಾಡಿದವು. ರಣರೋಚಕ ಪಂದ್ಯದಲ್ಲಿ ಕೊನೆಯವರೆಗೂ ತೀವ್ರ ಪೈಪೋಟಿ ನೀಡಿದ ಭಾರತ ಕೊನೆಗೂ ಪಾಕಿಸ್ತಾನದ ವಿರುದ್ಧ ಸೋಲನ್ನು ಒಪ್ಪಿಕೊಂಡಿತು.

    ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅರ್ಶ್‌ದೀಪ್‌ ಬೆಂಬಲಕ್ಕೆ ನಿಂತಿದ್ದಾರೆ. ಒತ್ತಡದಲ್ಲಿದ್ದಾಗ ತಪ್ಪುಗಳು ಸಂಭವಿಸುತ್ತವೆ. ಆದರೆ ಅದರಿಂದ ಕಲಿಯುವುದು ಮತ್ತು ಕಲಿತು ಮುಂದುವರಿಯುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದ ಕೊಹ್ಲಿ – THE KING IS BACK ಎಂದ ಅಭಿಮಾನಿಗಳು

    ಪರಿಸ್ಥಿತಿ ಬಿಗಿಯಾಗಿದ್ದಾಗ, ಹೆಚ್ಚಿನ ಒತ್ತಡಗಳು ಇದ್ದಾಗ ತಪ್ಪು ಯಾರೂಬೇಕಾದರೂ ಮಾಡಬಹುದು. ನಿನ್ನೆಯೂ ಪರಿಸ್ಥಿತಿ ಬಿಗಿಯಾಗಿತ್ತು. ನಾನು ನನ್ನ ಮೊದಲ ಚಾಂಪಿಯನ್ ಟ್ರೋಫಿ ಆಡುತ್ತಿದ್ದಾಗ, ಶಾಹಿದ್ ಅಫ್ರಿದಿ ಅವರ ಬೌಲಿಂಗ್‌ಗೆ ಕೆಟ್ಟಹೊಡೆತ ಎದುರಿಸಿದ್ದೆ. ಈಗಲೂ ಅದು ನನಗೆ ನೆನಪಿದೆ. ಅಂದು ನನಗೆ ನಿದ್ರೆ ಮಾಡಲು ಸಾಧ್ಯವಾಗಲೇ ಇಲ್ಲ, ಬೆಳಿಗ್ಗೆ 5 ಗಂಟೆವರೆಗೂ ಅದೇ ಸೀಲಿಂಗ್ ಅನ್ನು ನೋಡುತ್ತಿದೆ. ನನ್ನ ವೃತ್ತಿ ಜೀವ ಮುಗಿದೇಹೋಯ್ತು ಎಂದು ಭಾವಿಸಿದ್ದೆ ಎಂದು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

    ಟೀಂ ಇಂಡಿಯಾದಲ್ಲಿ ಇದೀಗ ಉತ್ತಮ ವಾತಾವರಣವಿದ್ದು, ಹಿರಿಯ ಆಟಗಾರರು ನಿಮ್ಮ ಸುತ್ತಲೂ ಇದ್ದಾರೆ. ಇದರ ಕ್ರಿಡಿಟ್ ಅನ್ನು ನಾಯಕ ಮತ್ತು ಕೋಚ್‌ಗೆ ನೀಡುತ್ತೇನೆ. ಆಟಗಾರರು ತಮ್ಮ ತಪ್ಪುಗಳಿಂದ ಇನ್ನಷ್ಟು ಕಲಿಯುತ್ತಾರೆ. ಒಬ್ಬರು ತಪ್ಪನ್ನು ಒಪ್ಪಿಕೊಂಡು ಅದನ್ನು ಸರಿಪಸಿಡಿಕೊಳ್ಳಬೇಕು ಎಂದು ಹೇಳಿದ್ದಾರೆ.

    ನಿನ್ನೆ ನಡೆದ ಏಷ್ಯಾಕಪ್ ಟೂರ್ನಿಯ ಸೂಪರ್ ಫೋರ್ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ಭಾರತದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿತು. ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಭಾರತ 181 ರನ್ ಗಳಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 19.5 ಓವರ್‌ಗಳಲ್ಲೇ 182 ರನ್ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ: ಪಾಕ್ ಕೈ ಹಿಡಿದ ರಿಜ್ವಾನ್ – ರೋಚಕ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನಕ್ಕೆ ಜಯ

    ಡೆತ್ ಓವರ್‌ನಲ್ಲಿ ಉತ್ತಮಪ್ರದರ್ಶನ ನೀಡುತ್ತಿದ್ದ ಟೀಂ ಇಂಡಿಯಾ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ 18ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಅವರ ಬೌಲಿಂಗೆ ಸುಲಭವಾಗಿ ನೀಡಿದ ಆಸಿಫ್ ಅಲಿ ಕ್ಯಾಚ್ ಅನ್ನು ಅರ್ಶ್‌ದೀಪ್‌ ಸಿಂಗ್ ಕೈಚೆಲ್ಲಿದರು. ಇದು ಪಾಕ್ ಗೆಲುವಿಗೆ ತಿರುವು ನೀಡಿತು. ಕೊನೆಯ ಓವರ್‌ನಲ್ಲಿ ಬೌಲಿಂಗ್‌ಗಿಳಿದ ಅರ್ಶ್‌ದೀಪ್‌ ಅವರ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಆದರೆ 2ನೇ ಎಸೆತದಲ್ಲಿ ಫುಲ್‌ಟಾಸ್ ಬೌಲ್ ಮಾಡಿ 4 ರನ್ ಚಚ್ಚಿಸಿಕೊಂಡರು. ಅದರ ಮರು ಎಸೆತದಲ್ಲೇ ಅಸಿಫ್ ಅಲಿ ಅವರ ವಿಕೆಟ್ ಉರುಳಿಸಿದರೂ ಜಯ ಪಾಕಿಸ್ತಾನದ ಪಾಲಾಯಿತು. ಅಂತಿಮವಾಗಿ ಪಾಕಿಸ್ತಾನ 5 ವಿಕೆಟ್‌ಗಳ ಜಯ ಸಾಧಿಸಿತು.

    Live Tv
    [brid partner=56869869 player=32851 video=960834 autoplay=true]